ಹೊಸ ಕಿರು ಚಿತ್ರ “ಆಡು ಆನೆಯ ನುಂಗಿ”
ಆಡು ಆನೆಯ ನುಂಗಿ ಕಿರುಚಿತ್ರವನ್ನು ನೋಡಿ. ತಳಸಮಾಜಗಳು ವ್ಯವಸ್ಥೆಯು ಹೇರಿರುವ ಬಡತನವ ಮೈತುಂಬಾ ಹೊದ್ದು ಬದುಕುತ್ತಿರುವವರು. ಆದರೆ ಬಿಟ್ಟಿಯಾಗಿ ಬರುವ ಹಣ(ದಾನ) ಕ್ಕೆ ಆಸೆ ಪಡುವ ಮತ್ತು ಅದರ ಹಂಗಿನಲ್ಲಿ ತಮ್ಮ ಸ್ವಾಭಿಮಾನವ ಅಡವಿಟ್ಟು ಬದುಕುವವರಲ್ಲ. ರಟ್ಟೆಲಿ ಶಕ್ತಿ ಇರೋ ತನಕ ದುಡಿದು ಉಣ್ಣೋರು ಅವರು. ಹಸಿದು ಮಲಗಿದರೂ ಆತ್ಮಗೌರವ ಮಾರಿಕೊಳ್ಳರು. ಅದಕ್ಕೆ ಹೇಳೋದು ಬಡವನಿಗೆ ಸ್ವಾಭಿಮಾನ ಜಾಸ್ತಿ ಅಂತ. ಅಂತಹ ಸ್ವಾಭಿಮಾನವ ಬಿಟ್ಟು ಅಂಗಲಾಚುವ ಪರಿಸ್ಥಿತಿಯನ್ನ ಹೇಗಾದರೂ ತಂದು ಮತ್ತೆ ತಾವೇ ಸಹಾಯ ಮಾಡುವ ಔದಾರ್ಯವ … Read more