ಸಮಾಜಮುಖಿ ಚಿಂತನೆಯ ಹುಡುಕಾಟದಲ್ಲಿ ಮೊದಲ ಜೋಡು ಕಥಾ ಸಂಕಲನ: ಶಿವಕುಮಾರ ಸರಗೂರು

ಇತ್ತೀಚಿಗೆ ಸಣ್ಣ ಕತೆಗಳು ಕನ್ನಡ ಸಾಹಿತ್ಯದಲ್ಲಿ ವೈಶಾಲ್ಯತೆಯಿಂದ ಬೆಳೆಯುತ್ತಿರುವ ಪ್ರಕಾರವಾಗಿದೆ. ಸುತ್ತಲಿನ ಅನುಭವಗಳಿಗೆ ಸ್ಪಂದಿಸುವ ಮೂಲಕ ಸರಳವಾಗಿ ಲೇಖಕನಿಗೆ ದಕ್ಕುವ ವಸ್ತು ಸಣ್ಣ ಕತೆಯ ವೈಶಿಷ್ಟವಾಗಿದೆ. ಸೂಕ್ಷ್ಮ ಸಂವೇದನೆಯುಳ್ಳ ಕಥೆಗಾರ ಆಯ್ದುಕೊಳ್ಳುವ ಏಕೈಕ ಪ್ರಕಾರವೂ ಇದೆ ಆಗಿದೆ. ಕತೆಗಾರ ಮುಧುಕರ ಮಳವಳ್ಳಿ ಅವರ ಮೊದಲ ಜೋಡು ಕಥಾಸಂಕಲನವು ದಲಿತರ ಬದುಕಿನ ಅನಂತ ಸಾಧ್ಯತೆಗಳನ್ನು ಚಿಂತನೆಗೆ ಹಚ್ಚುವಂತೆ ಮಾಡುತ್ತವೆ. ಸಾಮಾಜಿಕ ಕಟ್ಟುಪಾಡುಗಳು ಎಂದು ತಿಳಿದ ಅದೆಷ್ಟೋ ಅಂಶಗಳನ್ನು ಬಹುತ್ವದ ನೆಲೆಯಲ್ಲಿ ಮರುಶೋಧಿಸಬೇಕು ಎಂಬ ಸಂದೇಶವನ್ನು ಕತೆಗಾರರು ನೀಡ ಬಯಸುತ್ತಾರೆ. … Read more

ಬಂಡಾಯ ಚಿಂತನೆಯ ಒಂದು ಕೃತಿ – “ಹಕೀಮನೊಬ್ಬನ ತಕರಾರು”: ನಾರಾಯಣಸ್ವಾಮಿ ವಿ (ನಾನಿ)

ಹಿಂದಿನ ಕಾಲದ ಕನ್ನಡ ಸಾಹಿತ್ಯದಲ್ಲಿ ಅಂದರೆ ದಾಸ ಸಾಹಿತ್ಯ, ವಚನ ಸಾಹಿತ್ಯ ಪ್ರಾರಂಭವಾದಾಗ ಬಂಡಾಯದ ಸಾಲುಗಳು ಪ್ರಾರಂಭವಾದರೂ ಕೂಡ ಎಂಭತ್ತರ ದಶಕದಲ್ಲಿ ಬಂಡಾಯ ಸಾಹಿತ್ಯ ಉಚ್ಛ್ರಾಯ ಸ್ಥಿತಿಗೆ ಬಂತು ಅಂತಲೇ ಹೇಳಬಹುದು. ಅಂದಿನ ಕಾಲದಲ್ಲಿ ನೆಲೆಯೂರಿನಿಂತಿದ್ದ ಅಸ್ಪೃಶ್ಯತೆ, ಸಮಾನತೆ, ಶೋಷಣೆ ಮುಂತಾದ ವಿಷಯಗಳ ಬಗ್ಗೆ ವಿರೋಧಿಸುತ್ತಾ, ಅನ್ಯಾಯದ ವಿರುದ್ಧ ಲೇಖಕರು ತಮ್ಮ ಬರವಣಿಗೆಯ ಮೂಲಕ ಸಮಾಜದ ಮತ್ತು ಸರ್ಕಾರದ ವಿರುದ್ದ ಹೋರಾಡುವ ಬರಹದ ಮೂಲಕ ಜನರ ಮನೋಭಾವವನ್ನು ತಿದ್ದಲು ಪ್ರಯತ್ನ ಪಡುತ್ತಿದ್ದರು. ಅದರೆ ಇವತ್ತಿನ ದಿನಗಳಲ್ಲಿ ಕನ್ನಡ … Read more

ನಿರ್ಲಿಪ್ತತೆಯಲ್ಲಿ ಹರಿದುಬಂದ ಜೀವಭಾವ “ಬೊಗಸೆ ನೀರು”: ಬಿ.ಕೆ.ಮೀನಾಕ್ಷಿ, ಮೈಸೂರು.

ಪತ್ರಕರ್ತನ ಸತ್ಯಕಥೆ: ಬೊಗಸೆ ನೀರುಲೇಖಕರು: ಅರುಣಕುಮಾರ ಹಬ್ಬುಪ್ರಕಾಶನ: ಸುದರ್ಶನ ಪ್ರಕಾಶನ, ಬೆಂಗಳೂರು. ಬೊಗಸೆ ನೀರನ್ನು ಹೀರಿ ಮುಗಿಸುವಷ್ಟರಲ್ಲಿ ಗಂಗೆಯಲ್ಲಿ ಮಿಂದು ಮಡಿಯಾದಂತಾಯಿತು. ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ಎಂದು ಡಿವಿಜಿಯವರು ಹೇಳಿದಂತೆ ಪ್ರತಿಸಾರಿ ಮನುಷ್ಯ, ತನ್ನ ಚೈತನ್ಯವನ್ನು ಆತ್ಮಸ್ಥೈರ್ಯವನ್ನು ಕಳೆದುಕೊಂಡಾಗೆಲ್ಲ ಯಾವುದೋ ಒಂದು ದಿವ್ಯಶಕ್ತಿ ಆಸರೆಯಾಗಿ ಒದಗಿಬರುತ್ತದೆ ಎಂಬುದು ಸತ್ಯವಾದ ಮಾತು. ಬದುಕೆಂಬ ಕತ್ತಿಯಲಗಿನ ಮೇಲೆ ನಡೆಯುತ್ತಾ, ಜೀವನವನ್ನು ಸರಿದೂಗಿಸಲು ಸಮತೋಲನಗೊಳಿಸುತ್ತಾ, ಇಡೀ ಜೀವನವನ್ನೇ ಸವೆಸುವುದಿದೆಯಲ್ಲ ಅದಕ್ಕಿಂತ ದೌರ್ಭಾಗ್ಯ ಇನ್ನೊಂದಿಲ್ಲ. ಆದರೆ ಆ ದುರದೃಷ್ಟವನ್ನೇ ತನ್ನ ಪಾಲಿನ … Read more

ಸುನೀಲರ ತನಗಗಳು: ಬೊಗಸೆಯಲಿ ತುಂ ತುಂಬಿಕೊಂಡ ನದಿ ನೀರ ನೀರವತೆ !: ಡಾ. ಹೆಚ್ ಎನ್ ಮಂಜುರಾಜ್

ಶ್ರೀಯುತ ಸುನೀಲ್ ಹಳೆಯೂರು ಮೂಲತಃ ಸಾಹಿತ್ಯ ಸಹೃದಯಿ. ಬರೀ ಸಹೃದಯಿ ಮಾತ್ರವಲ್ಲ; ಸ್ವತಃ ಕವಿ, ವಿಮರ್ಶಕರು, ವ್ಯಾಖ್ಯಾನಕಾರರು, ಕನ್ನಡ ಪುಸ್ತಕಗಳನ್ನು ಓದಿಸುವ ಸದ್ದಿಲ್ಲದ ಸುದ್ದಿ ಬೇಡದ ಪ್ರಸಾರಕರು, ಬೆಂಗಳೂರಿನ ಕಾರ್ಪೊರೇಟ್ ಮತ್ತು ಕಾರ್ಪೊರೇಟ್ ಅಲ್ಲದ ಎರಡೂ ಕ್ಷೇತ್ರಗಳಲ್ಲೂ ತಮ್ಮದೇ ಆದ ಬರೆಹಗಾರತನದ ಛಾಪನ್ನೊತ್ತಿದವರು. ಆಕಾಶವಾಣಿ, ದೂರದರ್ಶನ, ಪತ್ರಿಕೆಗಳ ಆನ್‌ಲೈನ್ ವಾಹಿನಿಗಳಲ್ಲಿ ತಮ್ಮ ಕಗ್ಗದ ವ್ಯಾಖ್ಯಾನಗಳ ಮೂಲಕ ಮನೆ ಮಾತಾದವರು. ಗೀತ ರಚನಾಕಾರರು. ಮುಖ್ಯವಾಗಿ ತಮ್ಮ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡತನದ ಕೆಲಸಗಳಿಗೆ ಸಾಮಾಜಿಕ ಮತ್ತು ಸಾಮುದಾಯಿಕ ಆಯಾಮ … Read more

ವೀರೇಶ ಬ. ಕುರಿ ಸೋಂಪೂರ ಅವರ “ದುಡ್ಡಿನ ಮರ”: ಎನ್. ಶೈಲಜಾ ಹಾಸನ

ಕವಿ ವೀರೇಶ ಬ. ಕುರಿ ಸೋಂಪೂರ ಅವರು ಈಗಾಗಲೆ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸ್ವತಹ ಶಿಕ್ಷಕರಾಗಿರುವ ವೀರೇಶ್ ಅವರು ಸದಾ ಮಕ್ಕಳೊಂದಿಗೆ ಇದ್ದು, ಮಕ್ಕಳಿಗೆ ಬೇಕಾಗಿರುವಂತಹ, ಆಸಕ್ತಿದಾಯಕವಾಗಿರುವಂತಹ ಸಾಹಿತ್ಯವನ್ನು ನೀಡುತ್ತಾ, ಇದೀಗ ದುಡ್ಡಿನ ಮರ ಎಂಬ ಮಕ್ಕಳ ಕವನ ಸಂಕಲವನ್ನು ಹೊರತಂದಿದ್ದಾರೆ. ಇಲ್ಲಿನ ಹಲವಾರು ಕವಿತೆಗಳು ಹಲವಾರು ವಿಚಾರಗಳಿಂದ ಕೂಡಿದ್ದು, ಮಕ್ಕಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಮಕ್ಕಳ ಮನಸ್ಸು ಹೇಗೆ ಓಡುತ್ತದೆ, ಆ ಮಕ್ಕಳ ಮನಸ್ಸಿಗೆ ಏನು ಬೇಕು ಎಂಬುದನ್ನು ಬಹಳ ಚೆನ್ನಾಗಿ … Read more

“ಎಸ್ತರ್ ಅವರ ‘ನೆನಪು ಅನಂತ”: ಡಾ. ಎಚ್. ಎಸ್. ಸತ್ಯನಾರಾಯಣ

ಅಕ್ಷರ ಪ್ರಕಾಶನದವರು ಶ್ರೀಮತಿ ಎಸ್ತರ್ ಅವರು ತಮ್ಮ ಪತಿ ಅನಂತಮೂರ್ತಿಯವರ ಬಗ್ಗೆ ಹಂಚಿಕೊಂಡ ನೆನಪಿನ ಮಾಲೆಯನ್ನು ‘ನೆನಪು ಅನಂತ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಎಸ್ತರ್ ಅವರ ನೆನಪುಗಳನ್ನು ಬರಹ ರೂಪಕ್ಕಿಳಿಸಿದವರು ಪತ್ರಕರ್ತರೂ ಲೇಖಕರೂ ಆದ ಶ್ರೀ ಪೃಥ್ವೀರಾಜ ಕವತ್ತಾರು ಅವರು. ನಿರೂಪಣೆಯೇ ಈ ಪುಸ್ತಕದ ಶಕ್ತಿ. ಎಸ್ತರ್ ಅವರು ಹೇಳುತ್ತಾ ಹೋದುದ್ದನ್ನು ಬರಹದ ಸೂತ್ರಕ್ಕೆ ಒಗ್ಗಿಸುವುದು ಸುಲಭದ ಕೆಲಸವಲ್ಲ. ಎಸ್ತರ್ ಅವರ ವ್ಯಕ್ತಿತ್ವದ ಅನಾವರಣಕ್ಕೆ ಸ್ವಲ್ಪವೂ ಧಕ್ಕೆಬಾರದಂತೆ ಸೊಗಸಾಗಿ ನಿರೂಪಿಸಿರುವ ಪೃಥ್ವೀರಾಜ ಕವತ್ತೂರು ಅವರನ್ನು ಮೊದಲಿಗೆ ಅಭಿನಂದಿಸಿ … Read more

‘ಸಾಹಿತ್ಯದ ‘ರೂಪದರ್ಶಿ’: ಡಾ. ಭರತ್ ಭೂಷಣ್. ಎಮ್

ಕನ್ನಡದ ಪ್ರಖ್ಯಾತ ಪುಸ್ತಕಗಳಲ್ಲೊಂದಾದ ಕೆ.ವಿ.ಐಯ್ಯರ್ ವರ ಅವರ “ರೂಪದರ್ಶಿ” ನಾನು ಅಕಸ್ಮಾತಾಗಿ ಓದಿದ ಪುಸ್ತಕ. ಅದು ನನ್ನನ್ನು ಎಷ್ಟು ಪ್ರಭಾವಿಸಿತ್ತೆಂದರೆ, ಅಲ್ಲಿಂದ ಇಲ್ಲಿಯವರೆಗಿನ ಸುಮಾರು 350 ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಓದಿಗೆ ಮುನ್ನುಡಿ ಇಟ್ಟು, ಚಾರಣ, ನಾಟಕ ಹಾಗೂ ಪುಸ್ತಕಗಳ ಒಡನಾಟದಿಂದ ನನ್ನ ಜೀವನದ ಏಳು-ಬೀಳುಗಳಿಗೆ ಸಮಾಧಾನ ನೀಡಿ ಈಗಲೂ ಸಾಹಿತ್ಯದ ಚಟುವಟಿಗಳಿಗೆ ಭಾಗಿಯಾಗಲು ಪ್ರೇರೇಪಿಸುತ್ತಿರುವ ಪುಸ್ತಕ. ಕನ್ನಡ ಏಕೆ ಜಗತ್ತಿನ ಶ್ರೇಷ್ಠ ಭಾಷೆಗಳಲ್ಲಿ ಒಂದು? ಎನ್ನುವುದನ್ನು ಅರಿಯಲು ಈ ರೀತಿಯ ಬರವಣಿಗೆಯನ್ನು ಎಲ್ಲರೂ ಓದಲೇ … Read more

“ಒಳಿತು ಕೆಡುಕಿನ ದಾರಿಯಲ್ಲಿ ಹೆಣ್ಣಿನ ಗೌಪ್ಯತೆ, ಸೂಕ್ಷ್ಮ ಚಿತ್ರಿಕೆಗಳ ಕಲಾತ್ಮಕ ಕೆತ್ತನೆ”: ಎಂ.ಜವರಾಜ್

ಯುವ ಕಥೆಗಾರ್ತಿ ಎಡಿಯೂರು ಪಲ್ಲವಿ ಅವರ “ಕುಂಡದ ಬೇರು” ಕಥಾ ಸಂಕಲನದ ಕಥೆಗಳ ಕಡೆ ಕಣ್ಣಾಡಿಸಿದಾಗ ಇದು ಇವರ ಮೊದಲ ಕಥಾ ಸಂಕಲನವೇ..? ಅನಿಸಿದ್ದು ಸುಳ್ಳಲ್ಲ! ಚ.ಸರ್ವಮಂಗಳ ಅವರು “ಅಮ್ಮನ ಗುಡ್ಡ” ಸಂಕಲನದಲ್ಲಿ ಬ್ರೆಕ್ಟ್ ನ The mask of the demon ನ ಪುಟ್ಟ ಅನುವಾದವೊಂದಿದೆ. ಅದು,“ನನ್ನ ಒಳಮನೆಯ ಗೋಡೆ ಮೇಲೊಂದು ಜಪಾನಿ ಕೆತ್ತನೆ:ಒಬ್ಬ ದುಷ್ಟ ರಾಕ್ಷಸನ ಮುಖವಾಡ.ಹೊಂಬಣ್ಣದ ಅರಗಿನಿಂದ ಮೆರಗಿಸಿರುವ ಮುಖ.ಹಣೆ ಮೇಲೆ ಉಬ್ಬಿರುವ ನರ.ನೋಡ್ತಾ ನೋಡ್ತಾ ಅಯ್ಯೋ ಪಾಪ ಅನ್ನಿಸುತ್ತೆ.ದುಷ್ಟನಾಗಿರೋದಕ್ಕೆ ಎಷ್ಟು ಸುಸ್ತು … Read more

ಹೊಸ ಪುಸ್ತಕ “ಮುರಿದ ಕಡಲು” ಕಾದಂಬರಿಯ ಆಯ್ದ ಭಾಗ: ಚಂದ್ರಶೇಖರ ಮದಭಾವಿ

ಅಕ್ಕಕಾಡಿನಲ್ಲಿ ಅಲೆದಾಡಿ ಎರಡು ದಿನಗಳಾದ ಮೇಲೆ ನಾನು ಹಳ್ಳಿಯನ್ನು ತಲುಪಿದಾಗ, ನನ್ನ ಇಡೀ ಕುಟುಂಬ ಬೆರಗಾಗಿತ್ತು. ಏಕೆಂದರೆ ಒಂದು ದಿನದ ಹಿಂದೆಯೇ ಯಾರೋ ಒಬ್ಬ ರೇಂಜರ್ ನನ್ನ ಶಾಲೆಯ ಚೀಲವನ್ನು ಅವರಿಗೆ ತಂದುಕೊಟ್ಟಿದ್ದ. ಅಂದಿನಿಂದ ನನ್ನ ಕುಟುಂಬದವರು ನನಗಾಗಿ ಕಾಯುತ್ತಿರಲಿಲ್ಲ, ನನ್ನ ಅಳಿದುಳಿದ ಶವಕ್ಕಾಗಿ ಕಾಯುತ್ತಿದ್ದರು. ಮೊದಲು ನನ್ನ ಅಪ್ಪ ಮುಂದೆ ಬಂದು ನನ್ನ ಕೆನ್ನೆಗೆ ಬಿರುಸಾಗಿ ಹೊಡೆದ. ನಾನು ಸ್ವಲ್ಪ ದೂರ ಹೋಗಿ ಬಿದ್ದೆನಾದರೂ ಮರುಕ್ಷಣವೇ ಮತ್ತೆ ಎದ್ದುನಿಂತೆ. ಸ್ವಲ್ಪವೂ ವಿಚಲಿತನಾಗದೆ, ಒಮ್ಮೆಯೂ ಕೆನ್ನೆಯನ್ನು ಸವರಿಕೊಳ್ಳದೆ … Read more

ಜಾತ್ಯಾತೀತ ಮನಸ್ಸಿನ ಹಂಬಲಿಕೆ ಮತ್ತು ಮಾನವೀಯ ತುಡಿತದ ಮೌಲಿಕ ಕಥೆಗಳು: ಎಂ. ಜವರಾಜ್

ಪ್ರಕಾಶ್ ಪುಟ್ಟಪ್ಪ “ಅವ್ವ ದುಡಿದು ಬಂದು ರಾತ್ರಿ ರಾಗಿ ಬೀಸುವಾಗ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಹೇಳುತ್ತಿದ್ದ ಕಾಲ್ಪನಿಕ ಕಥೆಗಳು, ಗೌರಜ್ಜಿ ರಾತ್ರಿ ಹೊತ್ತು ಬೀದಿಯಲ್ಲಿ ವಠಾರದ ಮಕ್ಕಳನ್ನೆಲ್ಲ ಮಲಗಿಸಿಕೊಂಡು ಹೇಳುತ್ತಿದ್ದ ಕಥೆಗಳು ನಮ್ಮ ಬಾಲ್ಯವನ್ನು ಸಮೃದ್ಧವಾಗಿಸಿದ್ದವು” ಎಂದು ಹೇಳುವುದರಲ್ಲಿ ಅವರ ಕಥೆಗಳ ರಚನೆಯ ಹಿನ್ನೆಲೆ ಇದೆ. ಹಾಗೆ “ಬರಹ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತದೊ ಇಲ್ಲವೊ ಗೊತ್ತಿಲ್ಲ ಆದರೆ ನನ್ನನ್ನು ಸೆಳೆದುಕೊಂಡದ್ದು ಮಾತ್ರ ಒಂದು ಸೋಜಿಗ” ಎಂದು ಬರಹಗಾರನಾಗಿ ತೊಡಗಿಸಿಕೊಂಡ ‘ಆಕಸ್ಮಿಕ’ ಅಂಶದ ಬಗ್ಗೆ ತಮ್ಮ ಬರಹಗಳ ಓದುಗನಿಗೆ … Read more

ಕಥಾ ಜಗತ್ತಿನ ಸುಂದರ ಲೋಕ ‘ತಿತ್ತಿಬ್ವಾಸನ ಟೈಟಾನ್ ವಾಚು’: ಶಿವಕುಮಾರ ಸರಗೂರು

ಕಥಾ ಪ್ರಪಂಚದಲ್ಲಿ ಪಂಜೆ ಮಂಗೇಶರಾಯರು ಕನ್ನಡಕ್ಕೆ ನೀಡಿದ ಕಾಣ್ಕೆ ಅತ್ಯಮೂಲ್ಯವಾದದು. ತದನಂತರದ ಕಾಲದಲ್ಲಿ ಸಣ್ಣಕಥೆಗಳ ಜನಕರೆಂದೇ ಹೆಸರಾದ ಮಾಸ್ತಿ ಅವರು ಸಣ್ಣಕಥೆಯನ್ನು ತಮ್ಮ ಬರವಣಿಗೆಯ ಮುಖ್ಯ ಮಾಧ್ಯಮವನ್ನಾಗಿ ಬಳಸಿದರು ಮಾತ್ರವಲ್ಲ ಬೆಳೆಸಿದರು. ಚಾಮರಾಜನಗರ ಪರಿಸರವು ಕಥಾ ಜಗತ್ತಿಗೆ ತೆರೆದುಕೊಳ್ಳಲು ಹವಣಿಸುತ್ತಿರುವ ಈ ಕಾಲದಲ್ಲಿ ಕೊಳ್ಳೇಗಾಲದ ಸೂಕ್ಷ್ಮ ಸಂವೇದನಾಶೀಲ ಬರಹಗಾರರಾದ ದಿಲೀಪ್ ಎನ್ಕೆ ಅವರ ನಾಲ್ಕನೇ ಪುಸ್ತಕ ತಿತ್ತಿಬ್ವಾಸನ ಟೈಟಾನ್ ವಾಚು ಹೊರ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಒಂಬತ್ತು ಕಥೆಗಳಲ್ಲಿ ಹರಡಿಕೊಂಡಿರುವ ಈ ಸಂಕಲನವು ಭಾಷೆ, ವಸ್ತು, ತಂತ್ರ … Read more

ಯೋಗಸ್ಥದ ಅಂತಸ್ಥ ಮತ್ತು ಪರಸ್ಥ: ಡಾ. ಹೆಚ್ ಎನ್ ಮಂಜುರಾಜ್

ರಾಗಂ ಅವರ ‘ಸಂತೆಯಿಂದ ಸಂತನೆಡೆಗೆ’ ಕೃತಿಯ ಓದು ನಮ್ಮೆಲ್ಲರ ಪ್ರೀತಿಯ ಗೆಳೆಯ ವಿಜಯ್ ಹನೂರು ಇದೀಗ ಯಳಂದೂರಿನ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ನನ್ನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಮತ್ತು ಗೌರವಾದರಗಳನ್ನು ಹೊಂದಿರುವ ಸಾಹಿತ್ಯ ಸಹೃದಯಿ; ಜೊತೆಗೆ ಗಂಭೀರ ಸಾಹಿತ್ಯ ವಿದ್ಯಾರ್ಥಿ. ಕಳೆದೊಂದು ವಾರದ ಹಿಂದೆ ಫೋನು ಮಾಡಿ, ‘ಗುರುಗಳೇ, ಸಿದ್ಧೇಶ್ವರ ಸ್ವಾಮಿಗಳನ್ನು ಕುರಿತ ಹೊಸದೊಂದು ಪುಸ್ತಕವನ್ನು ನಿಮಗೆ ಅಂಚೆಯಲ್ಲಿ ಕಳಿಸುತ್ತಿರುವೆ. ರಾಗಂ ಅವರ ‘ಯೋಗಸ್ಥಃ’ ಅಂತ ಹೆಸರು. ನೀವು ಓದಿ, ಬರೆದು ಕೊಡಬೇಕು’ ಎಂದರು. … Read more

ಕತ್ತಲ ಲೋಕದಲ್ಲಿ ಜರುಗುವ ನಿಕೃಷ್ಠ ಕಣ್ಕಟ್ಟುಗಳನ್ನು ತೆರೆದಿಡುವ ಸೃಜನಶೀಲ ಕಥೆಗಳು: ಎಂ.ಜವರಾಜ್

ಕನ್ನಡದ ಹಿರಿಯ ಕಥೆಗಾರ್ತಿ ಬಿ.ಟಿ. ಜಾಹ್ನವಿ ಅವರಿಗೆ, ಈಚೆಗೆ ಕೌದಿ ಪ್ರಕಾಶನ ಹೊರ ತಂದಿರುವ ನಿಮ್ಮ ಸಮಗ್ರ ಕಥೆಗಳ ಸಂಕಲನ “ಒಬ್ರು ಸುದ್ಯಾಕೆ… ಒಬ್ರು ಗದ್ಲ್ಯಾಕೆ…” ಕೃತಿ ಓದಿದೆ. ಈ ಸಂಕಲನದಲ್ಲಿ ಒಟ್ಟು ಇಪ್ಪತ್ತೊಂಭತ್ತು ಕಥೆಗಳಿವೆ. ಇಲ್ಲಿನ ಅರ್ಧದಷ್ಟು ಕಥೆಗಳನ್ನು ಈಗಾಗಲೇ ಪುಸ್ತಕ ರೂಪ ಹೊರತು ಪಡಿಸಿ ಕೆಲ ಪತ್ರಿಕೆಗಳಲ್ಲಿ ಬಹು ಹಿಂದೆಯೇ ಬಿಡಿಬಿಡಿಯಾಗಿ ಓದಿದ್ದೇನೆ. ಈಗ ಎಲ್ಲ ಕಥೆಗಳನ್ನು ಒಟ್ಟಿಗೆ ಇಟ್ಟುಕೊಂಡು ಇಲ್ಲಿನ ಒಂದೊಂದೇ ಕಥೆ ಓದುತ್ತಾ ಹೋದಂತೆ ಓದಿದ ಕಥೆಗಳ ವಿವರಗಳು ಭಾಗಶಃ ನೆನಪಿಗೆ … Read more

ನಂದಾದೀಪ ಅವರ “ಕಾವ್ಯದರ್ಶಿನಿ”ಯ ಭಾವನಾತ್ಮಕ ದರ್ಶನ: ದೇವೇಂದ್ರ ಕಟ್ಟಿಮನಿ

ಆಕಾಶಕ್ಕೆ ಅಣಕಿಸುವಷ್ಟು ಅನುಭವ ನನಗಿಲ್ಲ.ನಕ್ಷತ್ರಗಳ ತಪ್ಪು ಎಣಿಕೆಯ ತೊದಲು ಪ್ರಯತ್ನ ನಿಂತಿಲ್ಲ.ಇಂದಲ್ಲ ನಾಳೆ, ನಿನ್ನದೆಲ್ಲ ನನ್ನದು ನನ್ನದೆಲ್ಲ ನಿನ್ನದು,ಆಳವಿಲ್ಲದ ಬಾವಿಯಂತೆ ಬರಿ ಮಾತು ನನ್ನದು.ಓದುಗರ ಮಡಿಲಲ್ಲಿ ಓದಿಗಾಗಿ ಮಿಡಿಯುತ್ತಿರುವ ಕವಿಯಿತ್ರಿ ನಂದಾದೀಪ ಅವರ “ಕಾವ್ಯದರ್ಶಿನಿ” ಇದೊಂದು ಬದುಕಿನ ಪ್ರತಿಕ್ಷಣವೂ ಕಾವ್ಯದ ಕಣ್ಣಿನಿಂದ ದಿಟ್ಟಿಸಿ ಸೆರೆಹಿಡಿದ ಭಾವಗಳ ಸಂಗಮವಾಗಿದೆ. ಶ್ರೀ ಯಲ್ಲಪ್ಪ. ಎಂ. ಮರ್ಚೇಡ್ ಇವರ ಸಾರಥ್ಯದ ಶ್ರೀ ಗೌರಿ ಪ್ರಕಾಶನ ರಾಯಚೂರು ಇವರು ಪ್ರಕಟಿಸಿದ ಈ ಕೃತಿ ಸಾಹಿತ್ಯದ ಹಸಿವಿದ್ದವರಿಗೆ ಕಾವ್ಯಗಳ ರಸದೂಟ, ಮೈ ಮನಗಳಿಗೆ ಹೊಸ … Read more

ಕೃಷಿ ಅನುಭವಗಳ ಹೂರಣ “ಗ್ರಾಮ ಡ್ರಾಮಾಯಣ”: ಡಾ. ನಟರಾಜು ಎಸ್ ಎಂ

ಗುರುಪ್ರಸಾದ್ ಕುರ್ತಕೋಟಿಯವರು ನನಗೆ ಅನೇಕ ವರ್ಷಗಳಿಂದ ಎಫ್ ಬಿ ಯಲ್ಲಿ ಪರಿಚಿತರು. ನಮ್ಮ ಇಷ್ಟು ವರ್ಷಗಳ ಪರಿಚಯದಲ್ಲಿ ಅವರ ಅನೇಕ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಹೊಸದರಲ್ಲಿ ಗುರು ಅವರು ಹಾಸ್ಯ ಬರಹಗಾರರಾಗಿ ಪರಿಚಿತರಾದರು. ಪರಿಚಯದ ನಂತರ ನಮ್ಮ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ “ಪಂಚ್ ಕಜ್ಜಾಯ” ಎಂಬ ಹಾಸ್ಯ ಲೇಖನಗಳ ಅಂಕಣ ಶುರು ಮಾಡಿದರು. ಅದಾದ ನಂತರ ಬರಹದ ಜೊತೆ ಬೇರೆ ಏನನ್ನಾದರು ಮಾಡಬೇಕೆನ್ನುವ ಅವರ ತುಡಿತ ಅವರನ್ನು ರಂಗಭೂಮಿ ಕಡೆಗೆ ಕರೆದೊಯ್ದಿತು. ಬೆಂಗಳೂರಿನಲ್ಲಿ ಕೆಲ ಕಾಲ ರಂಗಕರ್ಮಿಯಾಗಿದ್ದರು, … Read more

ಹಗೆಯ ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರೇಮಕಥೆ ಟ್ರಾಯ್: ವರದೇಂದ್ರ ಕೆ ಮಸ್ಕಿ

ಕೃತಿ: ಟ್ರಾಯ್ಪ್ರಕಾರ: ಕಾದಂಬರಿಲೇಖಕರು: ಗಾಯತ್ರಿ ರಾಜ್ ಗ್ರೀಕರು ಟ್ರಾಯ್ ನಗರವನ್ನು ವಶಪಡಿಸಿಕೊಳ್ಳುವ ಸಂಚಿನಲ್ಲಿ ಕಾದಂಬರಿಯ ನಾಯಕಿ, ಓದುಗನ ಮನಸಿನಲ್ಲಿ ಅಪ್ಸರೆಯಾಗಿ, ಪ್ರೇಮದ ವ್ಯಾಖ್ಯಾನವಾಗಿ, ಓದುಗ ತನ್ನ ಪ್ರೇಮಿಯಲ್ಲೂ ಕಾಣಬಹುದಾದಂತಹ ಸ್ಫುರದ್ರೂಪ ಗೊಂಬೆಯಾಗಿ, ಮನದಣಿಯ ನೋಡಿದರೂ ಕಣ್ಣು, ಅರೆಕ್ಷಣವೂ ಬಿಟ್ಟಗಲದಂತೆ ಮನಸೂರೆಗೊಂಡ ದಂತದ ಬೊಂಬೆ “ಹೆಲೆನ್” ಭಾಗಿಯಾಗಿದ್ದಳು ಎಂಬುದು ಸಹಿಸಲಸಾಧ್ಯವಾದುದು. ಕೃತಿ ಓದಿದ ನಂತರ ಇದನ್ನು ಓದುಗನು ಊಹಿಸಿಕೊಳ್ಳಲೂ ಇಷ್ಟಪಡುವುದಿಲ್ಲ ಎಂದಾದ ಮೇಲೆ ಈ ತರಹದ ವಾದವೂ ಕೂಡ ಒಂದಿದೆ, ಒಂದಿತ್ತು ಎಂಬುದನ್ನು ನೇರಾನೇರ ಮೊದಲೇ ನಾನು ತಳ್ಳಿಹಾಕಿಬಿಡುತ್ತೇನೆ. … Read more

ಕತೆ ಮತ್ತು ಆತ್ಮಕತೆಗಳ ನಡುವಿನ ನಯವಾದ ನೇಯ್ಗೆ: ಡಾ. ಹೆಚ್ ಎನ್ ಮಂಜುರಾಜ್

ಕೃತಿ: ಕಿಟಕಿಗಳಾಚೆ (ಪ್ರಬಂಧ ಸಂಕಲನ)ಲೇಖಕರು: ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟುಪ್ರಕಾಶಕರು: ಸಮನ್ವಿತ, ಬನ್ನೇರುಘಟ್ಟ, ಬೆಂಗಳೂರುಮೊದಲ ಮುದ್ರಣ: ೨೦೨೩, ಕೃತಿ ಬಿಡುಗಡೆ: ೧೩-೦೭-೨೦೨೪ಪುಟಗಳು: ೧೩೨+೪, ಬೆಲೆ: ₹ ೧೫೦ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಲೋಕಾರ್ಪಣೆಗೊಂಡ ‘ಕಿಟಕಿಗಳಾಚೆ’ ಕೃತಿಯಲ್ಲಿ ಒಟ್ಟು ಇಪ್ಪತ್ತೆಂಟು ಪ್ರಬಂಧಗಳಿವೆ. ಈಗಾಗಲೇ ಮೂರು ಕವನ ಸಂಕಲನಗಳನ್ನು ಪ್ರಕಟಿಸಿರುವ ಕವೀಂದ್ರ ರವೀಂದ್ರರು ತಮ್ಮ ಕವನಗೀತಗಳಿಂದಾಗಿ ತಮ್ಮದೇ ಯುಟ್ಯೂಬ್ ಚಾನೆಲ್ ಮೂಲಕ ನಾಡಿನ ಅಸಂಖ್ಯಾತ ಸಹೃದಯರನ್ನು ಮುಟ್ಟಿದ್ದಾರೆ. ಹೆಸರಾಂತ ಗಾಯಕರಾದ ಶ್ರೀ ರಾಘವೇಂದ್ರ ಬೀಜಾಡಿ, ಶ್ರೀ ಗಣೇಶ ದೇಸಾಯಿಯವರ ಸಂಗೀತ ತಂಡವು … Read more

ಪ್ರಾರ್ಥನೆಯು ಧ್ಯಾನಸ್ಥಗೊಂಡ ಪರಿಮಳದ ಪರಿ: ಡಾ. ಹೆಚ್ ಎನ್ ಮಂಜುರಾಜ್

ವಿವಶತೆ ಮತ್ತು ಆರ್ತತೆಗಳ ನಡುವೆ ತೂಗುಯ್ಯಾಲೆಯಾಡುವ ಘನಮೌನ ಪ್ರಭುವೇ,ಇನ್ನಾದರೂ ಹೊರಗೆ ಕತ್ತಲಾಗಿಸುಈ ಬೆಳಕು ದಾರಿ ತೋರಿಸಿದ್ದು ಸಾಕುನಡೆದೂ ನಡೆದೂ ಸುಸ್ತಾಗಿದ್ದೇನೆ,ದಾರಿ ಗುರಿಗಳ ನಡುವೆ ಸಾಗುವಲ್ಲಿಸಾಧನೆಗಳ ಮಿಂಚುಳದ ಬೆಳಕಿನಲ್ಲಿದಾಹ ತೀರದ ಚಪ್ಪಾಳೆಯಲ್ಲಿನಾನಿಲ್ಲದಂತೆ ಬಂಧಿಯಾಗಿದ್ದೇನೆ ನಿದ್ದೆ ಮತ್ತು ಎಚ್ಚರದ ನಡುವಿನಸ್ಥಿತಿಯೊಂದು ಮೂರ್ತವಾದ ಹಾಗೆಬದುಕು ಎರಡು ಕೊನೆಗಳ ನಡುವೆಸಿಲುಕಿ ಇಲ್ಲವಾದ ಹಾಗೆ,ಇರುವ ಸ್ಥಿತಿಯಲ್ಲಿ ಕಣ್ಣು ಮುಚ್ಚಲಾಗದಷ್ಟುಬದುಕು ಬಟ್ಟ ಬಯಲಾಗಿದೆ ನಗುವ ಧರಿಸಿ ಸುಮ್ಮನೆ ಒಟ್ಟಿಗಿದ್ದದ್ದು ಸಾಕುಕೆಳಗಿಳಿಸಿ ಬಿಡು ಈ ಹೆಗಲ ಭಾರದೂರ ಮಾಡಿಸು; ಕಳಚಿಕೊಳ್ಳುತ್ತೇನೆಸಾಕಿನ್ನು ಒಣಮಾತಿನ ಉಪಚಾರ;ನನಗೆ ನಾನೊಂದಿಷ್ಟು ಹತ್ತಿರವಾಗುತ್ತೇನೆ ದೂರುತ್ತಿರಲಿ … Read more

ಜೀವನ ಪ್ರೀತಿ ಎಂಬ ಎದೆಯ ಹಸಿವನು ಮೆದುಳಿನಲಿ ತುಂಬಿಕೊಂಡಿರುವವರ ಕಥನಗಳು…: ಡಾ. ನಟರಾಜು ಎಸ್ ಎಂ

ಒಮ್ಮೆ ವಿಧವಿಧದ ಮಸಾಲ ಪುಡಿಯ ಚಿತ್ರಗಳನ್ನು ಇವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು. ಅವು ತಮ್ಮ‌ ಮನೆಯಲ್ಲಿ ತಯಾರು ಮಾಡಿದ ಮಸಾಲೆಗಳೆಂದು, ಮಾರಾಟಕ್ಕೆ ಲಭ್ಯವಿವೆ ಎಂದು ಪೋಸ್ಟ್ ಹಾಕಿದ್ದರು. ಇವರ ಅನೇಕ ಎಫ್ ಬಿ ಬಳಗದಿಂದ ಇವರಿಗೆ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು. ನಂತರ ಇವರ ತಂದೆಯವರ ಸಮಾಧಿ ಸ್ಥಳವನ್ನು ಲೋಕಲ್ ವ್ಯಕ್ತಿಯೊಬ್ಬ ದ್ವಂಸಗೊಳಿಸಿದನೆಂಬ ಕಾರಣಕ್ಕೆ ದಾವಣಗೆರೆಯಲ್ಲಿ ಪುಟ್ಟ ಹೋರಾಟವನ್ನು ಮಾಡುತ್ತಿರುವ ಇವರ ಭಾವಚಿತ್ರಗಳು ಕಣ್ಣಿಗೆ ಬಿದ್ದಿದ್ದವು. ಇವೆರಡು ವಿಷಯಗಳಿಗೆ ಬಿಟ್ಟು ಅನೇಕ ವರ್ಷದಿಂದ ಇವರ ಫೇಸ್ … Read more

ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ‘ನಾಲ್ಕು ಋತುಗಳ ಹುಡುಗಿ’: ಡಾ. ಸದಾಶಿವ ದೊಡಮನಿ

‘ನಾಲ್ಕು ಋತುಗಳಹುಡುಗಿ’ ಎಸ್. ನಾಗಶ್ರೀ ಅಜಯ್ ಅವರ ಮೊದಲ ಕವನ ಸಂಕಲನವಾಗಿದ್ದು, ಕರ್ನಾಟಕ ಸರ್ಕಾರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು, ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಹೆಸರೇ ಸೂಚಿಸುವ ಹಾಗೆ ಪ್ರಸ್ತುತ ಕೃತಿಯಲ್ಲಿ ನಾಲ್ಕು ಋತುಗಳಿದ್ದು, ಒಟ್ಟು ನಲವತ್ತೆರಡು ಕವಿತೆಗಳಿವೆ. ಅನುದಿನವೂ ಕಾಡುವ, ನಮ್ಮ ಆಲೋಚನಾ ಕ್ರಮದ ಕ್ಷಿತಿಜವನ್ನು ವಿಸ್ತರಿಸುವ ಇಲ್ಲಿಯ ಕವಿತೆಗಳು ಮೊದಲ ಓದಿಗೇ ಅತ್ಯಂತ ಆಪ್ತವಾಗಿ ದಕ್ಕುತ್ತವೆ. ಹೀಗೆ ದಕ್ಕುವುದು ಯಶಸ್ವಿ ಸಂಕಲನದ ಪ್ರತೀಕವೇ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕವಿಯ ಸಾವಯವ ಸಹಜ … Read more