ಗೋಡಂಬಿಯು ನನ್ನ ಇಷ್ಟದ ಡ್ರೈ ಫ್ರೂಟ್ ಆದ ಕಾರಣಕ್ಕೂ, ಅದರ ಸ್ವೀಟ್ ನೆಸ್ ನ ಕಾರಣಕ್ಕೂ “ಕಾಜು ಬಿಸ್ಕೆಟ್” ಎಂಬ ಒಂದೊಳ್ಳೆ ಟೈಟಲ್ ಇರುವ ಪುಸ್ತಕ ಕಣ್ಣಿಗೆ ಬಿದ್ದಾಗ ಒಂತರಾ ಆಕರ್ಷಣೀಯ ಅನಿಸಿತು. ಲೇಖಕರು ಪುಸ್ತಕ ಕೊಳ್ಳಲು ಲಿಂಕ್ ಗಳನ್ನು ಎಫ್ ಬಿ ಯಲ್ಲಿ ನೀಡಿದ್ದರಾದರೂ ಚೆಕ್ ಔಟ್ ಮಾಡುವ ವೇಳೆ ಪುಸ್ತಕದ ಬೆಲೆಗಿಂತ ಹೆಚ್ಚು ಹಣ ಕೊಡಬೇಕಾದ ಕಾರಣಕ್ಕೆ ಪರಿಚಯವಿರುವ ಪುಸ್ತಕ ಮಾರಾಟಗಾರರಿಂದ ಪುಸ್ತಕ ತರಿಸಿಕೊಂಡೆ. “ಕಾಜೂ ಬಿಸ್ಕೆಟ್’ ಕಿರಣ್ ಕುಮಾರ್ ಕೆ ಆರ್ ರವರ […]
ನಟ್ಟು ಕಾಲಂ
ಮುಗುಳ್ನಗು ಒಂದನ್ನು ಎದೆಯಲ್ಲಿ ಬೆಳೆಯಲಿಕ್ಕೆ ಹಂಬಲಿಸುವವರ ಕಥೆಗಳ ಗುಚ್ಛ “ಮರ ಹತ್ತದ ಮೀನು”: ಡಾ. ನಟರಾಜು ಎಸ್. ಎಂ.
ವಿನಾಯಕ ಅರಳಸುರಳಿಯವರು ಲೇಖಕರಾಗಿ ಕಳೆದ ಏಳೆಂಟು ವರ್ಷಗಳಿಂದ ಪರಿಚಿತರು. ಮೊದಲಿಗೆ ಕವಿತೆಗಳನ್ನು ಬರೆಯುತ್ತಿದ್ದವರು, ತದನಂತರ ಪ್ರಬಂಧ ಬರೆಯಲು ಶುರು ಮಾಡಿದರು. ನಂತರದ ದಿನಗಳಲ್ಲಿ ಕತೆಗಳನ್ನು ಸಹ ಬರೆಯುತ್ತಾ ಈಗ ತಮ್ಮ ಹತ್ತು ಕತೆಗಳಿರುವ “ಮರ ಹತ್ತದ ಮೀನು” ಕಥಾಸಂಕಲನವನ್ನು ಹೊರತಂದಿದ್ದಾರೆ. “ಮರ ಹತ್ತದ ಮೀನು” ಕೃತಿಯು 2023ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿ ಪಡೆದ ಕೃತಿಯಾಗಿದ್ದು ಓದುಗರಿಂದ ಉತ್ತಮ ಪ್ರತಿಕ್ರಿಯೆಯನ್ನು ಸಹ ಪಡೆಯುತ್ತಿದೆ. ಈ ಪುಸ್ತಕಕ್ಕೆ ಲೇಖಕರಾದ ಮಣಿಕಾಂತ್ ಎ. ಆರ್. ಮುನ್ನುಡಿ ಬರೆದಿದ್ದು, ಈ ಹೊತ್ತಿಗೆ […]
“ದೇವರ ಹೊಲ”ದಲ್ಲಿ ಭರ್ಜರಿ ಫಸಲು: ಡಾ. ನಟರಾಜು ಎಸ್ ಎಂ
ಮಂಜಯ್ಯ ದೇವರಮನಿ ಅವರ “ದೇವರ ಹೊಲ” ಪುಸ್ತಕ ನನ್ನ ಕೈ ಸೇರಿ ಒಂದು ತಿಂಗಳ ಮೇಲೆ ಒಂದು ವಾರವಾಗಿತ್ತು. ಸುಮಾರು ದಿನಗಳ ಹಿಂದೆ ನೂರಾ ಐವತ್ತಕ್ಕೂ ಹೆಚ್ಚು ಜನರಿಗೆ ಕೃತಜ್ಙತೆ ಅರ್ಪಿಸಿರುವ ಮಂಜಯ್ಯ ಅವರ ಮೊದಲ ಮಾತುಗಳನ್ನು ಅವರ ಈ ಪುಸ್ತಕದಲ್ಲಿ ಓದಿದ್ದೇನಾದರೂ ಇಡೀ ಪುಸ್ತಕವನ್ನು ಓದಲು ಯಾಕೋ ಸಾಧ್ಯವಾಗಿರಲಿಲ್ಲ. ನಿನ್ನೆ ಭಾನುವಾರ ಬಿಡುವು ಮಾಡಿಕೊಂಡು ಇಡೀ ದಿನ ಒಂದೊಂದೇ ಕತೆಗಳನ್ನು ಓದುತ್ತಾ ಓದುತ್ತಾ ಮಂಜಯ್ಯ ಅವರ ಕಥನ ಕಲೆಗೆ ಬೆರಗಾಗಿ ಹೋದೆ. “ದೇವರ ಹೊಲ” ಪುಸ್ತಕವು […]
ಬೆತ್ತಲೆ ಒಂದು ಸುಂದರವಾದ ಸ್ಥಿತಿ ಎನ್ನುವ “ಅತ್ತರ್”: ಡಾ. ನಟರಾಜು ಎಸ್ ಎಂ
ತಮ್ಮ “ಬೇರು” ಕೃತಿಗಾಗಿ ಕೇಂದ್ರ ಯುವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಗೆಳೆಯ ಶ್ರೀಧರ ಬನವಾಸಿಯವರು ಕಳೆದ ವಾರ ತಮ್ಮ ಪಂಚಮಿ ಪ್ರಕಾಶನದಿಂದ ಹೊರ ತಂದಿರುವ ಕೆ ನಲ್ಲತಂಬಿಯವರ ಹೊಚ್ಚ ಹೊಸ ಕೃತಿ “ಅತ್ತರ್” ಅನ್ನು ಕಳುಹಿಸಿಕೊಟ್ಟಿದ್ದರು. ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಗೆಳೆಯ ಶ್ರೀಧರ್ ತಮ್ಮ ಪ್ರಕಾಶನ ಸಂಸ್ಥೆಯಿಂದ ನಲವತ್ತೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. “ಅತ್ತರ್” ಇವರ ಸಂಸ್ಥೆ ಪ್ರಕಟಿಸಿರುವ ಕೆ ನಲ್ಲತಂಬಿಯವರ ಮೊದಲ ಪುಸ್ತಕ. ಕೆ ನಲ್ಲತಂಬಿಯವರು ಅನುವಾದ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿರುವವರು. […]
ಧರ್ಮದ ಆಚರಣೆ ಆಸ್ತಿಕವೂ ಅಲ್ಲ.. ನಾಸ್ತಿಕವೂ ಅಲ್ಲ.. ಎನ್ನುವ ವಿಭಿನ್ನ ಕೃತಿ “ಯಡ್ಡಿ ಮಾಮ ಬರಲಿಲ್ಲ”: ಡಾ. ನಟರಾಜು ಎಸ್ ಎಂ
ಇಡೀ ವಾರ ನಾಲ್ಕೈದು ಪುಸ್ತಕಗಳ ಮೇಲೆ ಕಣ್ಣಾಡಿಸಿದ್ದೇನಾದರೂ ಪೂರ್ತಿಯಾಗಿ ಯಾವ ಪುಸ್ತಕವನ್ನು ಓದಲಾಗಿರಲಿಲ್ಲ. ಇತ್ತೀಚೆಗೆ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ ಲೇಖಕರಿಗೆ ಪ್ರಾಶಸ್ತ್ಯ ಕೊಡಲಿಲ್ಲ ಎನ್ನುವ ದನಿಗಳು, ಪರ್ಯಾಯ ಸಮ್ಮೇಳನ ಎಂಬಂತೆ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವೊಂದನ್ನು ಹಮ್ಮಿಕೊಂಡಿದ್ದರು. ಎರಡೂ ಸಮ್ಮೇಳನಗಳ ಆಹ್ವಾನ ಪತ್ರಿಕೆಗಳ ಮೇಲೆ ಕುತೂಹಲಕ್ಕೆ ಕಣ್ಣಾಡಿಸಿದಾಗ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಬ್ಬೇ ಒಬ್ಬ ಮುಸ್ಲಿಂ ಕವಿಯ ಹೆಸರಿತ್ತು. ಆ ಕವಿಯೂ ಕೂಡ ಸಮ್ಮೇಳನದಿಂದ ಹಿಂದೆ ಸರಿದಿದ್ದು ಎಲ್ಲರಿಗೂ ತಿಳಿದ ವಿಚಾರವೇ […]
ತಮ್ಮ ಶ್ರೇಷ್ಟತೆಯನ್ನು ಬೇರೆಯವರ ನಿಮ್ನತೆಯಲ್ಲಿ ಕಾಣುವವರ ಮೂಲಗುಣಗಳ ಅನಾವರಣ ಮಾಡುವ “ಸ್ನೇಕ್ ಟ್ಯಾಟೂ”: ಡಾ. ನಟರಾಜು ಎಸ್ ಎಂ
ಬೆಳ್ಕೆ ಮಹಾದೇವ ಗಿರಿರಾಜರವರು ಕಳೆದ ಒಂದು ದಶಕದಿಂದ ಎಫ್ ಬಿ ಗೆಳೆಯರು. ಸಿನಿಮಾ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ಹೆಸರು ಮಾಡಿದವರು. ಈಗ “ಕಥೆಗೆ ಸಾವಿಲ್ಲ” ಪುಸ್ತಕದ ಮೂಲಕ ಕಾದಂಬರಿಕಾರರಾಗಿದ್ದಾರೆ. ಜೊತೆಗೆ “ಸ್ನೇಕ್ ಟ್ಯಾಟೂ” ಎಂಬ ಹೊಸ ಕಥಾಸಂಕಲನದ ಮೂಲಕ ಕಥೆಗಾರರಾಗಿದ್ದಾರೆ. ಬಿ ಎಂ ಗಿರಿರಾಜರವರ “ನವಿಲಾದವರು” ಚಿತ್ರವನ್ನು ಯೂ ಟ್ಯೂಬ್ ನಲ್ಲಿ ನೋಡಿದ್ದೆ. ಆ ಚಿತ್ರದಲ್ಲಿನ ಅವರ ನಟನೆ ನನಗೆ ತುಂಬಾ ಇಷ್ಟವಾಗಿತ್ತು. ಒಬ್ಬ ಆತಂಕವಾದಿಯ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ನಂತರ ಬಂದ ಅವರ ಚಿತ್ರಗಳನ್ನು […]
ಕೆಂಪು ಎಂದರೆ ನಿಲ್ಲುವುದಲ್ಲ: ಡಾ. ನಟರಾಜು ಎಸ್.ಎಂ.
ಕ್ಲಬ್ ಹೌಸ್ ನ ‘ಸಿನಿಮಾ ಓದು’ ಎಂಬ ಗುಂಪಿನಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಕುರಿತು ಕಳೆದ ಗುರುವಾರ ಮಾತುಕತೆ ನಡೆಯುತ್ತಿತ್ತು. ಕೆ ಫಣಿರಾಜ್ ಅವರ ಸಾರಥ್ಯದಲ್ಲಿ ಪ್ರತಿ ಗುರುವಾರ ನಡೆಯುವ ಕಾರ್ಯಕ್ರಮಕ್ಕೆ ನಮ್ಮ ನಡುವಿನ ಕವಿ, ಕತೆಗಾರ, ಅಂಕಣ ಬರಹಗಾರರಾದ ಚಂದ್ರಪ್ರಭ ಕಠಾರಿಯವರ ಆಮಂತ್ರಣದ ಮೇರೆಗೆ ಕಳೆದ ವಾರ ನಾನೂ ಕೂಡ ಕೂಡಿಕೊಂಡಿದ್ದೆ. ಕಾರ್ಯಕ್ರಮದಲ್ಲಿ ಸಿನಿಮಾ ಕುರಿತ ಚರ್ಚೆಯನ್ನು ಕೇಳುತ್ತಾ ಅಲ್ಲಿನ ಮಾತುಗಾರರ ಸಿನಿಮಾ ಕುರಿತ ಪಾಂಡಿತ್ಯಕ್ಕೆ ನಿಜಕ್ಕೂ ಬೆರಗಾಗಿ ಹೋದೆ. ಆ ಗುಂಪಿನಲ್ಲಿದ್ದ ಅರ್ಪಣ ಎಚ್ […]
“ಉಪ್ಪುಚ್ಚಿ ಮುಳ್ಳು” ವಿಲಕ್ಷಣ, ವಿಕ್ಷಿಪ್ತ, ವಿಚಿತ್ರ ಎನಿಸಿದರೂ ವಿಶಿಷ್ಟ ಕೃತಿ: ಡಾ. ನಟರಾಜು ಎಸ್. ಎಂ.
ಕಳೆದ ವರ್ಷ ಅನಿಸುತ್ತೆ ಸಿರಾ ಸೀಮೆಯ ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್ ರವರು ತಾವು ಇಷ್ಟಪಟ್ಟು ಶುರು ಮಾಡಿರುವ Native nest ಎಂಬ ಯೂ ಟ್ಯೂಬ್ ಚಾನೆಲ್ ನಲ್ಲಿ ಕವಿತೆಯೊಂದನ್ನು ವಾಚನ ಮಾಡಿದ್ದರು. ಕವಿತೆಯ ಶೀರ್ಷಿಕೆ “ಮೊಲೆ” ಎಂದಾಗಿತ್ತು. ಕವಿಯ ಹೆಸರು ದಯಾ ಗಂಗನಘಟ್ಟ (ದಾಕ್ಷಾಯಿಣಿ). “ಮೊಲೆ” ಅನ್ನುವ ಕವನವನ್ನು ಅದಕ್ಕೂ ಮೊದಲು ಆಶಾ ಜಗದೀಶ್ ರವರು ಫೇಸ್ ಬುಕ್ ನಲ್ಲಿ ಬರೆದಿದ್ದರು. ಎರಡೂ ಕವಿತೆಗಳನ್ನು ನೋಡಿದ್ದ ನನಗೆ ದಯಾ ಗಂಗನಘಟ್ಟ, ಆಶಾ ಜಗದೀಶ್ ರವರಿಂದ ಸ್ಫೂರ್ತಿ ಪಡೆದರಾ? […]
ಪೆಟ್ರಿಕೋರ್ ಎಂಬ ಪ್ರೇಮಕಾವ್ಯ: ಡಾ. ನಟರಾಜು ಎಸ್. ಎಂ.
ಒಂದು ಕಾಲದಲ್ಲಿ ಪುಸ್ತಕಗಳ ಕೊಳ್ಳಲು ಕೆಲವೇ ಕೆಲವು ಪುಸ್ತಕದ ಅಂಗಡಿಗಳಿಗೆ ಭೇಟಿ ನೀಡಬೇಕಿತ್ತು. ಈಗ ಮನೆಯಲ್ಲೇ ಕುಳಿತು ಇಷ್ಟದ ಪುಸ್ತಕಗಳನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಪುಸ್ತಕಗಳು ಒಂದೆರಡು ದಿನಗಳಲ್ಲಿ ನಮ್ಮ ಮನೆಗಳ ತಲುಪಿಬಿಡುತ್ತವೆ. ಆನ್ ಲೈನ್ ನಲ್ಲಿ ಹೋಗಿ ವೆಬ್ ಸೈಟ್ ಗಳಲ್ಲಿ ವಿವರಗಳನ್ನು ತುಂಬಿ ಪುಸ್ತಕ ಆರ್ಡರ್ ಮಾಡುವ ಪ್ರಕ್ರಿಯೆಗಳ ಬದಲು ಕನ್ನಡದ ಮಟ್ಟಿಗೆ ಅತೀ ಸುಲಭವಾಗುವಂತೆ ವಾಟ್ಸ್ ಅಪ್ ಗಳಲ್ಲಿ ಪುಸ್ತಕದ ಹೆಸರು ಮತ್ತು ವಿಳಾಸಗಳನ್ನು ತಿಳಿಸಿದರೆ ಅತೀ ಕಾಳಜಿಯಿಂದ ಪುಸ್ತಕಗಳನ್ನು […]
ಬಡತನಕ್ಕೂ ಸೊಗಸಿದೆ ಎನ್ನುವ ಮುಕ್ಕಾದ ಭಿಕ್ಷಾಪಾತ್ರೆ ಬೌಲ್: ಡಾ. ನಟರಾಜು ಎಸ್. ಎಂ.
ಎಂ ಎಸ್ ಮೂರ್ತಿಯವರ ಆಟೋಗ್ರಾಫ್ ಇರುವ ಅವರ ಬೌಲ್ ಕಾದಂಬರಿ ನನ್ನ ಕೈ ಸೇರಿ ಹತ್ತು ದಿನವಾಗಿರಬಹುದು. ಮೊದಲ ದಿನ ಊರಿನಲ್ಲಿ ಪುಸ್ತಕ ಓದಲು ಕುಳಿತಾಗ ಎರಡು ನಿಮಿಷಕ್ಕೆ ಒಂದು ಪುಟದಂತೆ ಐವತ್ತು ಪುಟಗಳ ಮೊದಲ ಅಧ್ಯಾಯವನ್ನು ಓದಿ ಮುಗಿಸಿದ್ದೆ. ಉಳಿದ ಅಧ್ಯಾಯಗಳನ್ನು ಬಿಡುವಿದ್ದಾಗ ಓದಿಕೊಂಡು ಇವತ್ತು ಬೆಳಿಗ್ಗೆ ಈ ಪುಸ್ತಕದ ಓದು ಪೂರ್ತಿಯಾಯಿತು. ಒಂದಷ್ಟು ಪುಟಗಳಲ್ಲಿನ ವಿಷಯಗಳು ಅದರಲ್ಲೂ ಗುರುಪರಂಪರೆಯ ಕುರಿತು ಬರೆದ ಅಧ್ಯಾಯಗಳು ಚೂರು confuse ಆದಂತೆ ಅನಿಸಿದ್ದರಿಂದ ಆ ಪುಟಗಳನ್ನು ಮತ್ತೆ ಓದಿಕೊಂಡೆ. […]
ಒಬ್ಬ ಅಡಿಕ್ಟ್ ಮಾತ್ರ ಮತ್ತೊಬ್ಬ ಅಡಿಕ್ಟ್ ನನ್ನು ಅರ್ಥಮಾಡಿಕೊಳ್ಳಬಲ್ಲ: ಡಾ. ಎಸ್ ಎಂ ನಟರಾಜು
ನಮ್ಮ ಲ್ಯಾಬಿಗೆ ನಾನು ಆಗಷ್ಟೇ ಸೇರಿದ್ದ ದಿನಗಳವು. ಆ ದಿನಗಳಲ್ಲಿ ಒಂದು ದಿನ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ನಮ್ಮ ಲ್ಯಾಬಿಗೆ ಬಂದಿದ್ದ. ಅವನು ಯಾರಿರಬಹುದು ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆಗಳು ಮೂಡುತ್ತಿರುವಾಗಲೇ “ಈತ ನಮ್ಮ ಲ್ಯಾಬಿನ ಟೆಕ್ನಿಕಲ್ ಸ್ಟಾಫ್” ಎಂದು ನಮ್ಮ ಗೈಡ್ ನನಗೆ ಅವನನ್ನು ಪರಿಚಯಿಸಿದ್ದರು. “ಹಾಯ್” ಎಂದು ನಾನು ನಗು ಮುಖದಿಂದ ಆ ವ್ಯಕ್ತಿಯ ಕೈಕುಲುಕಿದ್ದೆ. ಆತನು ಸಹ ಮುಗುಳ್ನಗುತ್ತಾ ನನ್ನ ಕೈ ಕುಲುಕಿದ್ದ. ಅವತ್ತು ಲ್ಯಾಬಿನಲ್ಲಿ ಸ್ವಲ್ಪ ಜಾಸ್ತಿ ಕೆಲಸ ಇದ್ದ ಕಾರಣ […]
ಅನಿಲ್ ರೇವೂರ ಅವರ ಪಂಚಾವರಂ: ನಟರಾಜು ಎಸ್. ಎಂ.
ಇಸವಿ 2014 ರಲ್ಲಿ ಮಹದೇವಣ್ಣನ ಆಹ್ವಾನ ಸ್ವೀಕರಿಸಿ ಸಂಸ ಬಯಲು ರಂಗಮಂದಿರದಲ್ಲಿ ಗೆಳೆಯ ಹನುಮಂತ ಹಾಲಗೇರಿ ವಿರಚಿತ "ಊರ ಸುಟ್ಟರೂ ಹನುಮಪ್ಪ ಹೊರಗೆ" ನಾಟಕ ನೋಡಿ ಬೆರಗಾಗಿದ್ದೆ. ಆ ದಿನ ಮಹದೇವಣ್ಣ (ಮಹಾದೇವ ಹಡಪದ) ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಅನಿಲ್ ರೇವೂರ ಅವರ ಪರಿಚಯ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಎಫ್ ಬಿ ಯಲ್ಲಿ ಅನಿಲ್ ಗೆಳೆಯರಾದರು. ಇಸವಿ ಎರಡು ಸಾವಿರದ ಹದಿನಾರರಲ್ಲಿ ಅನಿಲ್ ನಿರ್ದೇಶನದ ನಾಟಕಕ್ಕೆ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಚಿನ್ನದ ಪದಕ ಸಿಕ್ಕಿದೆ ಎಂಬ ಸುದ್ದಿ […]
ಅನ್ನದಾತನೊಬ್ಬನ ಜೊತೆ ಇಡೀ ದಿನ..: ನಟರಾಜು ಎಸ್. ಎಂ.
ಚಳಿಯ ಕಾರಣಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಅನ್ನು ಅಕ್ಷರಶಃ ನಿಲ್ಲಿಸಿಬಿಟ್ಟಿದ್ದ ನಾನು ಇತ್ತೀಚೆಗೆ ಶಿವರಾತ್ರಿಯ ತರುವಾತ ಚಳಿ ಕಡಿಮೆ ಆದ ಕಾರಣ ಬೆಳಿಗ್ಗೆ ಅಥವಾ ಸಂಜೆ ಮತ್ತೆ ವಾಕ್ ಶುರು ಮಾಡಿದ್ದೆ. ಆಫೀಸಿನ ದಿನಗಳಾದರೆ ಸಂಜೆ ಐದೂವರೆ ಆರು ಗಂಟೆ ಆಗುತ್ತಿದ್ದಂತೆ ಆಫೀಸಿನಿಂದಲೇ ಸೀದಾ ತೀಸ್ತಾ ನದಿಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಒಂದೂ ಒಂದೂವರೆ ಗಂಟೆ ತಪ್ಪದೆ ವಾಕ್ ಮಾಡುತ್ತೇನೆ. ಇವತ್ತು ಭಾನುವಾರ ರಜೆ ಇದ್ದುದರಿಂದ ಬೆಳಿಗ್ಗೆ ಬೇಗನೆ ಎದ್ದವನು ರೆಡಿಯಾಗಿ ಮಾರ್ನಿಂಗ್ ವಾಕ್ ಗೆಂದು ತೀಸ್ತಾ ನದಿಯ […]
ಟೀ, ಕಾಫಿ ಮಾರುವ ಹುಡುಗ: ನಟರಾಜು ಎಸ್. ಎಂ.
ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ […]
ಅಪರಿಚಿತರು ಪರಿಚಿತರಾದಾಗ: ನಟರಾಜು ಎಸ್.ಎಂ.
ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು […]
ಇಲಿ ಪಾಶಾಣ ಮಾರುವವನ ಜೀವನ ಪ್ರೀತಿ: ನಟರಾಜು ಎಸ್. ಎಂ.
ಜಲ್ಪಾಯ್ಗುರಿಯ ಮಧ್ಯ ಭಾಗದಲ್ಲಿ ಒಂದು ಪುಟ್ಟ ನದಿ ಹರಿಯುತ್ತೆ. ಆ ನದಿಯ ಹೆಸರು ಕರೋಲ. ಬಹುಶಃ ಬೆಂಗಾಲಿಯಲ್ಲಿ ಕರೋಲ ಅಂದರೆ ಹಾಗಲಕಾಯಿ. ಈ ನದಿಗೆ ಅಲ್ಲಲ್ಲಿ ಪುಟ್ಟ ಪುಟ್ಟ ಸೇತುವೆಗಳಿವೆ. ಅಂತಹ ಒಂದು ಪುಟ್ಟ ಸೇತುವೆ ದಿನ್ ಬಜಾರ್ ಮೋಡ್ ಎನ್ನುವ ಜಾಗದ ಬಳಿ ಇದೆ. ದಿನ್ ಬಜಾರ್, ಜಲ್ಪಾಯ್ಗುರಿಯಲ್ಲಿ ವ್ಯಾಪಾರ ವಹಿವಾಟು ನಡೆಯುವ ಒಂದು ಪ್ರಮುಖ ಜಾಗ. ನಾನು ಮನೆಯಿಂದ ಆಫೀಸಿಗೆ ಹೊರಡಬೇಕಾದರೆ ಈ ದಿನ್ ಬಜಾರ್ ಅನ್ನು ದಾಟಿಯೇ ಹೋಗಬೇಕು. ನನ್ನ ಮನೆಯಿಂದ ಆಫೀಸಿಗೆ […]
ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ: ನಟರಾಜು ಎಸ್. ಎಂ.
ಇತ್ತೀಚೆಗೆ ಒಂದು ದಿನ ಹಾಸಿಗೆಯ ಮೇಲೆ ಮಲಗಿ ವಿರಮಿಸುತ್ತಿದ್ದಾಗ ಒಂದು ಇರುವೆ ಹಾಸಿಗೆಯ ಸುತ್ತ ಮುತ್ತ ಸುಮ್ಮನೆ ಅಡ್ಡಾಡುತ್ತಿದ್ದುದ ನೋಡಿ ಸುಮ್ಮನಾಗಿದ್ದೆ. ಎಲ್ಲೆಲ್ಲೋ ಅಡ್ಡಾಡಿ ಬಂದ ಆ ಇರುವೆ ಕೊನೆಗೆ ಹಾಸಿಗೆಯ ಮೇಲೆ ಚಾಚಿದ್ದ ನನ್ನ ಕೈ ಬೆರಳ ಮೇಲೆ ಹತ್ತಿ ಹರಿದಾಡುತ್ತಿತ್ತು. ಆ ಇರುವೆಯ ಹರಿದಾಡುವಿಕೆಯನ್ನು ಮುಗುಳ್ನಗುತ್ತಾ ನೋಡಿದ ನಾನು ಅದು ನನ್ನ ಬೆರಳನ್ನು ಕಚ್ಚುವಾಗ "ಇರುವೆ ತಾನೆ ಬಿಡು ಕಚ್ಚಲಿ. ಇರುವೆ ಕಚ್ಚಿದರೆ ಹೆಚ್ಚೆಂದರೆ ಕಚ್ಚಿದ ಜಾಗ ಒಂಚೂರು ಉರಿದು ಕೆಂಪಾಗಿ ಒಂದು ಸಣ್ಣ […]
ಆಪರೇಷನ್ ಡೆಂಗ್ಯೂ (ಭಾಗ 2): ನಟರಾಜು ಎಸ್ ಎಂ
ಇಲ್ಲಿಯವರೆಗೆ ಸಿಲಿಗುರಿಯನ್ನು ಎರಡನೇ ಕೋಲ್ಕತ್ತಾ ಎನ್ನುತ್ತಾರೆ. ಸಿಲಿಗುರಿ ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲು ಇದ್ದಂತೆ. ಇಂತಹ ಸಿಲಿಗುರಿಯನ್ನು ತಲುಪುತ್ತಿದ್ದಂತೆ ನಾವು ಮಾಡಿದ ಮೊದಲ ಕೆಲಸವೆಂದರೆ ಸಿಲಿಗುರಿಯ ನಕ್ಷೆಯನ್ನು ಒಂದು A4 ಹಾಳೆಯಲ್ಲಿ ಪ್ರಿಂಟ್ ಮಾಡಿಸಿಕೊಂಡೆವು. ಸಿಲಿಗುರಿಯ ನಕ್ಷೆಯನ್ನು ಪ್ರಿಂಟ್ ಮಾಡಿಸಿಕೊಂಡ ಕಾರಣವೇನೆಂದರೆ ಸಿಲಿಗುರಿಗೆ ಸೇರಿದ ಒಟ್ಟು 47 ವಾರ್ಡ್ ಗಳಲ್ಲಿ ನಮ್ಮ ಜಲ್ಪಾಯ್ಗುರಿಗೆ ಸೇರಿದ 14 ವಾರ್ಡ್ ಗಳಲ್ಲಿ ಯಾವ ವಾರ್ಡ್ ಗಳ ಜನರು ಡೆಂಗ್ಯೂ ಜ್ವರದಿಂದ ಹೆಚ್ಚು ಬಳಲುತ್ತಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕಿತ್ತು. ನಮ್ಮ ಬಳಿಯಿದ್ದ ಡಾಟಾ […]
ಆಪರೇಷನ್ ಡೆಂಗ್ಯೂ ಮೊದಲ ಭಾಗ: ನಟರಾಜು ಎಸ್ ಎಂ
ಆಗಷ್ಟ್ ತಿಂಗಳ ಮೊದಲ ವಾರದಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆಯೊಂದರ ರಿಪೋರ್ಟ್ ನಲ್ಲಿ 3 ಡೆಂಗ್ಯೂ ಜ್ವರದ ಕೇಸ್ ಗಳು ಹಳ್ಳಿಯೊಂದರಲ್ಲಿ ಪತ್ತೆಯಾಗಿವೆ ಎಂಬ ಈ ಮೇಲ್ ನಮ್ಮ ಪಬ್ಲಿಕ್ ಹೆಲ್ತ್ ವಿಭಾಗದ ಈ ಮೇಲ್ ಗೆ ಬಂದಿತ್ತು. ಮೂರ್ನಾಲ್ಕು ಡೆಂಗ್ಯೂ ಜ್ವರದ ಕೇಸ್ ಗಳು ಒಂದೇ ಊರಿನಲ್ಲಿ ಕಾಣಿಸಿಕೊಂಡಿರುವುದು ಡೇಂಜರ್ ಸಿಗ್ನಲ್ ಎಂದರಿತ ನಾವು ತಕ್ಷಣ ಆ ತಾಲ್ಲೂಕಿನ ವೈದ್ಯಾಧಿಕಾರಿಗೆ ಕರೆ ಮಾಡಿ ಕೇಸ್ ಗಳು ಪತ್ತೆಯಾಗಿರುವುದನ್ನು ದೃಢಪಡಿಸಿಕೊಂಡೆವು. ಮಾರನೆಯ ದಿನ ನಮ್ಮ ಟೀಮ್ ಆ ಹಳ್ಳಿಯನ್ನು […]