ಪ್ರಕಟಣೆ
ಪಂಜು ಪ್ರೇಮ ಪತ್ರ ಸ್ಪರ್ಧೆ 2021
ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ […]
“ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆ ಸಮಾರಂಭ
ಪ್ರಪಂಚದ ಯಾವುದೇ ಮೂಲೆಯಿಂದ ಕನ್ನಡ ಪುಸ್ತಕಗಳನ್ನು ತಮ್ಮ ಮೊಬೈಲಿನಲ್ಲಿ ಓದುವ, ಕೇಳುವ ಆಯ್ಕೆ ಕಲ್ಪಿಸಿರುವ ಮೈಲ್ಯಾಂಗ್ ಬುಕ್ಸ್ ತನ್ನ ಪ್ರಕಾಶನ ಸಂಸ್ಥೆಯ ಅಡಿಯಲ್ಲಿ ಹೊರ ತರುತ್ತಿರುವ ನಾಲ್ಕನೆಯ ಪುಸ್ತಕ “ಮೂಚಿಮ್ಮ ಕಥಾ ಸಂಕಲನ”ದ ಬಿಡುಗಡೆಯನ್ನು ಇದೇ ಜನವರಿ 22, ಶುಕ್ರವಾರ ಬೆಳಿಗ್ಗೆ ಹನ್ನೊಂದು ಗಂಟೆಗೆ ಮೈಲ್ಯಾಂಗ್ ಫೇಸ್ ಬುಕ್ ಪುಟದಲ್ಲಿ ನಡೆಯುವ ಲೈವ್ ಮೂಲಕ ಹಮ್ಮಿಕೊಂಡಿದೆ. ವೃತ್ತಿಯಿಂದ ವೈದ್ಯರಾಗಿರುವ ಡಾ.ಅಜಿತ್ ಹರೀಶಿ ಅವರು ಬರೆದಿರುವ ಮೂಚಿಮ್ಮ ಕಥಾ ಸಂಕಲನ ಇಬುಕ್, ಆಡಿಯೋಬುಕ್ ಹಾಗೂ ಪ್ರಿಂಟ್ ಮೂರೂ ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. […]
ಮೈತ್ರಿ ಪ್ರಕಾಶನವು ಏರ್ಪಡಿಸಿರುವ ಮೈತ್ರಿಪುಸ್ತಕ-2021 ಸ್ಫರ್ಧೆ
ಎಲ್ಲರಿಗೂ ಹೊಸವರ್ಷದ ಶುಭಾಷಯಗಳು.ಮೈತ್ರಿಪುಸ್ತಕ -2021 ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದ್ದೇವೆ.ಆಸಕ್ತರು ತಮ್ಮ 10 ಕತೆಗಳನ್ನು ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಬೇಕು.ಆಯ್ಕೆಯಾದ ಹಸ್ತಪ್ರತಿಗೆ 7000 ಬಹುಮಾನ, ಫಲಕ ಹಾಗೂ ಪುಸ್ತಕ ಪ್ರಕಟಿಸಲಾಗುತ್ತದೆ. ಈ ಕೆಳಗಿನ ಆಂಶಗಳನ್ನು ಗಮನಿಸಿ.1) ಇದುವರೆಗೂ ಒಂದೂ ಕತಾಸಂಕಲನ ಪ್ರಕಟಿಸದ ಕತೆಗಾರರಿಗೆ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ. ಸಾಹಿತ್ಯದ ಇತರೇ ಪ್ರಕಾರಗಳಲ್ಲಿಒಂದೆರಡು ಪುಸ್ತಕ ಪ್ರಕಟವಾಗಿದವರೂ ಸ್ಫರ್ಧೆಯಲ್ಲಿ ಭಾಗವಹಿಸಬಹುದು.2) ಕತೆಗಳನ್ನು ಕಡ್ಡಾಯವಾಗಿ ನುಡಿ./ಯುನಿಕೋಡ ಮೂಲಕ ಟಂಕಿಸಿ ಪ್ರಿಂಟರೂಪದಲ್ಲಿ ಕಳಿಸಬೇಕು. ಇಮೇಲ ಮೂಲಕ ಕಳಿಸಿದ ಕತೆಗಳನ್ನು ಸ್ವೀಕರಿಸುವುದಿಲ್ಲ.3) ಹಸ್ತಪ್ರತಿಯಲ್ಲಿ ಎಲ್ಲಿಯೂ ಲೇಖಕರ […]
“ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ
ಸಾಹಿತ್ಯಾಸಕ್ತರೇ,ಸಹೃದಯೀ ಕವಿಮನಸ್ಸುಗಳೇ,ಫೆಬ್ರವರಿಯಲ್ಲಿ ನಮ್ಮ ಸಂಸ್ಥೆಯ ಕಡೆಯಿಂದ “ಮಕ್ಕಳ ಸಾಹಿತ್ಯ ಸಂಪಾದಕತ್ವ ಕೃತಿ”ಯ ಲೋಕಾರ್ಪಣಾ ಕಾರ್ಯಕ್ರಮ ನಡೆಯಲಿದೆ. 🎉 ಆಸಕ್ತರು ನಿಮ್ಮ ಸ್ವರಚಿತ ಕುತೂಹಲ ಭರಿತ ನೀತಿಕಥೆ ಮತ್ತು ಮಕ್ಕಳಿಗೆ ಸುಲಲಿತವಾಗಿ ಹಾಡಲು ಬರುವಂತಹ ಮಕ್ಕಳ ಪದ್ಯವನ್ನು ಕಳುಹಿಸಿಕೊಡಬೇಕಾಗಿ ಕೋರಿಕೆ. ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದು. ನಿಮ್ಮ ಗುರುತಿನ ಚೀಟಿ ಅಗತ್ಯವಾಗಿ ಲಗತ್ತಿಸಿದರೆ ದತ್ತ ಮೊತ್ತದಲ್ಲಿ ಕಡಿತಗೊಳಿಸಲಾಗುವುದು. ÷ ಮಕ್ಕಳ ಪದ್ಯ (೧ ಪುಟ)÷ ಕಥನ-ಕವನವಾದರೆ ( ೧-೨ ಪುಟಗಳು)÷ ಮಕ್ಕಳ ನೀತಿಕಥೆ ( ೨-೩ ಪುಟಗಳು ) ಅಲ್ಲದೇ […]
ಪ್ರಸಾದ್ ನಾಯ್ಕ್ ಅವರ ಸಫಾ ಪುಸ್ತಕದಿಂದ
ಪುಸ್ತಕವಾಗಿ ಹೊರಬಂದಿದ್ದ ನನ್ನ ಆತ್ಮಕಥನವನ್ನು ಚಲನಚಿತ್ರವಾಗಿ ತೆರೆಯ ಮೇಲೆ ಮೂಡಿಸಲು ಆಫರ್ ಗಳು ಬರುತ್ತಲೇ ಇದ್ದರೂ ನಾನು ಹಲವು ವರ್ಷಗಳ ಕಾಲ ನಿರಾಕರಿಸುತ್ತಲೇ ಬಂದಿದ್ದೆ. 1998 ರಲ್ಲಿ ಪುಸ್ತಕವು ಬಿಡುಗಡೆಯಾದಾಗಿನಿಂದ ಹಾಲಿವುಡ್ ನ ಹಲವು ಖ್ಯಾತ ನಿರ್ದೇಶಕರುಗಳು ನನ್ನ ಬಳಿ ಬಂದು ಈ ಕಥೆಯನ್ನು ಚಲನಚಿತ್ರವಾಗಿ ಪ್ರೇಕ್ಷಕರ ಮುಂದಿಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧವಾಗಿ ಹಲವು ಕಾನ್ಸೆಪ್ಟುಗಳನ್ನೂ ನನ್ನ ಮುಂದಿಡಲಾಯಿತು. ಆದರೆ ಈ ಎಲ್ಲಾ ಕಾನ್ಸೆಪ್ಟುಗಳಲ್ಲಿ ಇದ್ದಿದ್ದು ಒಂದೇ ಥೀಮ್: ಆಫ್ರಿಕಾದ ಸಿಂಡ್ರೆಲ್ಲಾ; ಮರುಭೂಮಿಯಿಂದ ಫ್ಯಾಷನ್ ರ್ಯಾಂಪ್ […]
ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿಗೆ ಕೃತಿ ಆಹ್ವಾನ
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೆಸರಿನಲ್ಲಿ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಕಾದಂಬರಿಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ. 2018 ಜನವರಿಯಿಂದ 2019 ಡಿಸೆಂಬರ್ ಒಳಗೆ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಜೂನ್ 5,2020ರ ಒಳಗೆ ( 5/6/2020) ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ಉಡುಪಿ ಜಿಲ್ಲೆ 576201.ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. […]
ವರ್ತಮಾನದಲ್ಲಿ ಬುದ್ಧ-ಬಸವ-ಬಾಬಾಸಾಹೇಬರು ಕುರಿತು ಸ್ವರಚಿತ ಬರಹಗಳ ಆಹ್ವಾನ
ಸಾಮಾಜಿಕ ಪರಿವರ್ತನ ಚಳುವಳಿಗಾರರ ಸ್ಮರಣೆಯಲ್ಲಿ ಗಣಕರಂಗ, ಧಾರವಾಡ ಆಯೋಜಿಸುವ ಸಾಮಾಜಿಕ ಶಾಂತಿ-ಮೈತ್ರಿಗಾಗಿ, ಬುದ್ಧ-ಬಸವ-ಬಾಬಾಸಾಹೇಬ(ತ್ರಿಬಿ) ನೆನಪಿನ ಕವಿಗೋಷ್ಠಿ-22ರಲ್ಲಿ, 2564ನೇ ಬುದ್ಧ ಪೂರ್ಣಿಮೆಯ ಪ್ರಯುಕ್ತ, “ವರ್ತಮಾನದಲ್ಲಿ ಬುದ್ಧ-ಬಸವ-ಬಾಬಾಸಾಹೇಬರು” ಕುರಿತು ಸ್ವರಚಿತ ಕವನ/ಪ್ರಬಂಧಗಳನ್ನು ಆಹ್ವಾನಿಸಲಾಗಿದೆ. ಕವನ/ಪ್ರಬಂಧ ಕಳಿಸಲು ಕೊನೆಯ ದಿನಾಂಕ: 24-05-2020 ಕಳಿಸಬೇಕಾದ ಇ-ಮೇಲ್ : ganakaranga@gmail.com ಆಸಕ್ತರ ಗಮನಕ್ಕೆ : 1.ಹೊಸತನದ ಪರಿಕಲ್ಪನೆಯ ಎಲ್ಲಿಯೂ ಪ್ರಕಟವಾಗಿರದ ಕನಿಷ್ಟ 30-35 ಸಾಲುಗಳ ಮಿತಿಯುಳ್ಳ ಸ್ವರಚಿತ ಕವನ ಅಥವಾ ಕನಿಷ್ಟ ಐದು ಪುಟಗಳಿಗೆ ಮೀರದಂತಿರುವ 1500 ಪದಗಳ ಮಿತಿಯಲ್ಲಿರುವ ಟೈಪಿಸಿದ ಪ್ರಬಂಧವನ್ನು ಕಳಿಸಬೇಕು. […]
ಪ್ರಥಮ್ ಬುಕ್ಸ್ ನ ಸ್ಟೋರಿವೀವರ್ ಸ್ಪರ್ಧೆ
ಪ್ರಥಮ್ ಬುಕ್ಸ್ ನ ಸ್ಟೋರಿವೀವರ್ ಈ ಸಲದ Retell, Remix, Rejoice ನಲ್ಲಿ ಆಸಕ್ತ ಮಕ್ಕಳ ಅನುವಾದಕರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಸ್ಪರ್ಧೆಗೆ ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ. ವಿಜೇತರ ಅನುವಾದವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ, ನೀಡಲಾಗುವುದು. ಅಲ್ಲದೇ, ಸ್ಟೋರಿವೀವರ್ ಡಿಜಿಟಲ್ ತಾಣದಲ್ಲಿ ನಿಮ್ಮ ಕತೆ ಪ್ರಕಟಗೊಂಡು, ನೂರಾರು ಮಕ್ಕಳ ಮುಕ್ತ ಓದಿಗೆ ಸಿಗಲಿದೆ. ಹಾಗಾದರೆ, ಪಾಲ್ಗೊಳ್ಳಲು ಏನು ಮಾಡಬೇಕು? ನಿಯಮಗಳೇನು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆ: ವೀರಣ್ಣ ಮಂಠಾಳಕರ್
ನಟ, ನಿರ್ಮಾಪಕ ನಮ್ ಜಗದೀಶ ಅಭಿನಯದ ಹಣೆ ಬರಹಕ್ಕೆ ಹೊಣೆ ಯಾರು? ಅಡಿ ಬರಹದ 3rd ಕ್ಲಾಸ್ ಕನ್ನಡ ಸಿನಿಮಾ ಫೆ. 7ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾ ಎಂದರೆ ಇಂದಿನ ಯುವಪೀಳಿಗೆಗೆ ತುಂಬಾ ಅಚ್ಚುಮೆಚ್ಚು. ಅಂಥದರಲ್ಲಿ ಇತ್ತೀಚಿಗೆ ಹಲವು ಪ್ರತಿಭಾವಂತರು ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡುತ್ತಲೇ ತಮ್ಮ ಭವಿಷಕ್ಕೆ ತಾವೇ ಮುನ್ನುಡಿಯನ್ನು ಬರೆದುಕೊಳ್ಳುತಿದ್ದಾರೆ. ಆ ಒಂದು ದಾರಿಯಲ್ಲಿ ಸಾಗುತ್ತಿರುವ ನಮ್ ಜಗದೀಶ ಅವರು 3rd ಕ್ಲಾಸ್ (ಹಣೆ ಬರಹಕ್ಕೆ ಹೊಣೆ ಯಾರು?) ಎಂಬ ಅಡಿ ಬರಹದ ಹೊಚ್ಚ ಹೊಸ […]
ಮೈತ್ರಿ ಪ್ರಕಾಶನ ಕಥಾ ಸ್ಫರ್ಧೆ
ಹೊಸ ವರ್ಷದ ಹೊಸಿಲಲ್ಲಿ ಮೈತ್ರಿ ಪ್ರಕಾಶನ ಹೊಸ ಯೋಜನೆಯೊಂದಿಗೆ ನಿಮ್ಮ ಮುಂದೆ ಬಂದಿದೆ…. ಒಂದು ಕಥಾ ಸ್ಫರ್ಧೆಯನ್ನು ಆಯೋಜಿಸಲಾಗುತ್ತಿದೆ. ಮೈತ್ರಿ ಪುಸ್ತಕ ಪ್ರಶಸ್ತಿ ಆರಂಭಿಸುತ್ತಿದ್ದೇವೆ..! ಆಸಕ್ತ ಲೇಖಕರು ೮-೧೦ ಕತೆಗಳ ಡಿಟಿಪಿ ಮಾಡಿಸಿ ಕತೆಗಳನ್ನು ಕಳಿಸಬಹುದು…. ಈ ಕೆಳಗಿನ ನಿಯಮಾವಳಿಗಳನ್ನು ಗಮನಿಸಿ… ೧) ಕತೆಗಳು ಸ್ವಂತದ್ದಾಗಿರಬೇಕು. ಅನುವಾದ, ಆಧಾರ ಸ್ಫೂರ್ತಿ ಪಡೆದ ಕತೆಗಳಿಗೆ ಅವಕಾಶವಿಲ್ಲ. ೨) ಇದುವರೆಗೂ ಒಂದೂ ಕಥಾಸಂಕಲನ ತರದ ಹೊಸಬರಿಗೆ ಮಾತ್ರ ಈ ಸ್ಫರ್ಧೆಯಲ್ಲಿ ಅವಕಾಶವಿದೆ. ೩) ಸುಮಾರು ೮-೧೦ ಕತೆಗಳನ್ನು ಡಿಟಿಪಿ ಮಾಡಿಸಿ […]
ವಾರಾಂತ್ಯದಲ್ಲೊಂದು ರಂಗ ರಸದೌತಣ
ಡಿಸೆಂಬರ್ ಕೊನೆವಾರ ಜಗತ್ತು ಪಟಾಕಿ ಹಾಡು ಕುಣಿತದ ಮೂಲಕ ಹೊಸವರ್ಷವನ್ನು ಬರಮಾಡಿಕೊಳ್ಳುಲು ಸಜ್ಜಾಗುತ್ತದೆ. ಆದರೆ ಮೈಸೂರಿನ ರಂಗಾಸಕ್ತರು ಅರ್ಥಪೂರ್ಣವಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಮಾಗಿಯ ಚಳಿಗೆ ನಗರವೆಲ್ಲ ತಣ್ಣಗೆ ಮನೆಸೇರುವಾಗ ಕಲಾಮಂದಿರದ ಆವರಣದಲ್ಲಿ ನಿರಂತರ ರಂಗೋತ್ಸವ ಕಳೆಗಟ್ಟುತ್ತದೆ. ಬಣ್ಣ ಬಣ್ಣದ ಹೊರ ಆವರಣ, ಬೇರೆ ಬೇರೆ ಊರುಗಳಿಂದ ಬಂದ ರಂಗತಂಡಗಳ ನಾಟಕ ಪ್ರದರ್ಶನ, ಜನಪದ ಕಲಾಪ್ರಕಾರಗಳ ಅನಾವರಣ, ಕೊನೆಯಲ್ಲೊಂದು ರಂಗಸಂಗೀತಕ್ಕೆ ಪ್ರೇಕ್ಷಕರೆಲ್ಲರು ಸಾಕ್ಷಿಯಾಗುವ ಮೂಲಕ ರಂಗಭೂಮಿಯ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಹೌದು ಪ್ರತಿವರ್ಷದಂತೆ ಈ ವರ್ಷವೂ ನಿರಂತರ ರಂಗೋತ್ಸವ ಇದೇ […]
ಲೇಖನ ಕಳುಹಿಸಿ
ಸಹೃದಯಿಗಳೇ, “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ಜೊತೆಗೆ ನಾಟಕ ಪ್ರದರ್ಶನ, ಪುಸ್ತಕ ಬಿಡುಗಡೆ ಇತ್ಯಾದಿ ಸಾಹಿತ್ಯ ಮತ್ತು ಕಲೆ ಸಂಬಂಧಿತ ಪ್ರಕಟಣೆಗಳನ್ನು ನೀಡಲು ಸಹ ನಮ್ಮನ್ನು ಸಂಪರ್ಕಿಸಿ. ಹಾಗೆಯೇ ಪಂಜು ಪುಟಗಳಲ್ಲಿನ ಕತೆ, ಕವನ, ಲೇಖನಗಳಿಗೆ ನಿಮ್ಮ ಕುಂಚದ ಕೈಚಳಕದಿಂದ ಚಿತ್ರಗಳನ್ನು ರಚಿಸಿ ಪಂಜಿಗೆ ಮತ್ತಷ್ಟು ಮೆರಗು […]
“ಕುವೆಂಪು ರಾಷ್ಟ್ರೀಯ ಪುರಸ್ಕಾರ-2019” ಘೋಷಣೆ
2019 ನೇ ಸಾಲಿನ “ಕುವೆಂಪು ರಾಷ್ಟ್ರೀಯ ಪುರಸ್ಕಾರ”ಕ್ಕೆ ಪಂಜಾಬಿ ಭಾಷೆಯ ಇಬ್ಬರು ಸುಪ್ರಸಿದ್ಧ ಸಾಹಿತಿಗಳು ಆಯ್ಕೆ ಆಗಿರುತ್ತಾರೆ. ಇದೇ ನವೆಂಬರ್ 16ನೆ ತಾರೀಕು (16-11-2019) ಶನಿವಾರ ಬೆಂಗಳೂರಿನಲ್ಲಿ, ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾದ ನಾಡೋಜ ಪ್ರೊ. ಹಂಪ. ನಾಗರಾಜಯ್ಯನವರ ಅಧ್ಯಕ್ಷತೆಯಲ್ಲಿ ಕುವೆಂಪು ರಾಷ್ಟ್ರೀಯ ಪುರಸ್ಕಾರ ಆಯ್ಕೆ ಸಮಿತಿಯ ಸಭೆ ನಡೆದಿತ್ತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಹಾಗೂ ಸಾಹಿತಿಗಳಾದ ಶ್ರೀ ಚಿರಂಜೀವಿ ಸಿಂಗ್, ಜೆ.ಎನ್.ಯು. (ನವದೆಹಲಿ) ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕರೂ ಪಂಜಾಬಿ ಲೇಖಕರೂ ಆದ ಪಟಿಯಾಲದ ಪ್ರೊ. […]
ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ
ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ ನಮ್ಮ ಮೈತ್ರಿ ಪ್ರಕಾಶನದ ವತಿಯಿಂದ ಈಗಾಗಲೇ ಅಪ್ಪನ ಕುರಿತಾಗಿ ಎರಡು ಪುಸ್ತಕಗಳು ಬಂದು ಜನಜನಿತವಾಗಿವೆ ಈಗ ನಿಮ್ಮ ತಾಯಿಯ ಕುರಿತಾಗಿ ಭಾವನೆಗಳ ಅನಾವರಣಗೊಳಿಸಲು ಸದಾವಕಾಶ. ಅವ್ವ, ಆಯಿ, ಮಾಯಿ, ಅಬ್ಬೆ ಹೀಗೆ ಅವಳ ನಾಮ ಹಲವು ದೈವಿರೂಪ ಒಂದೇ..! ನಿಮ್ಮ ತಾಯಿಯ ಬಗ್ಗೆ ನಿಮಗಿರುವ ಆದರ,ಪ್ರೀತಿ, ಅಂತಃಕರಣ ಲೇಖನದ ರೂಪದಲ್ಲಿ ಪ್ರಕಟಿಸುವ ವಿಚಾರವಿದೆ..ಲೇಖನ ಬರೆದು ಕೊಡಲು ನಿಮಗೆ ಖುಶಿ ಅನಿಸಿದರೆ ಪ್ರಕಟಿಸಲು ಮೈತ್ರಿಗೆ ಡಬಲ್ ಖುಷಿ….!! […]
ಮಕ್ಕಳ ಕಥೆಗಳ ಆಹ್ವಾನ
ಮಕ್ಕಳ ಕಥೆಗಳ ಆಹ್ವಾನ ರಾಯಚೂರು ತಾಲೂಕು ಘಟಕ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ “ಮಕ್ಕಳ ಕಥೆಗಳ” ಪುಸ್ತಕ ಹೊರತರಬೇಕೆಂದು ನಿರ್ಧರಿಸಿದ್ದು, ಇದೆ ನವೆಂಬರ್ ೧೪ ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಮಕ್ಕಳ ಪ್ರಪಂಚಕ್ಕೆ ಒಂದು ಉತ್ತಮ ಪುಸ್ತಕವನ್ನು ನವೆಂಬರ್ ೧೪ ರಂದೆ ಒಂದು ಪುಸ್ತಕ ಮಕ್ಕಳ ಕೈ ಸೇರಬೇಕಿದೆ ಕಾರಣ ಆಸಕ್ತ ಕಥಾ ಬರಹಗಾರರು ನೀವು ಬರೆಯುವ ಮಕ್ಕಳ ಕಥೆಯನ್ನು ನವೆಂಬರ್ 4 ರ ಮಧ್ಯೆ ರಾತ್ರಿ ಒಳಗೆ ತಲುಪಿಸಬೇಕು. ▪ಸೂಚನೆಗಳು:- =>ಮಕ್ಕಳ ಕಥೆಯೆ ಆಗಿರಬೇಕು ೫೦೦-600 ಪದಗಳು […]
ವಿಶೇಷಾಂಕಕ್ಕಾಗಿ ಲೇಖನ ಆಹ್ವಾನ
ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ಕನ್ನಡದ ಅನೇಕ ವೆಬ್ ತಾಣಗಳ ನಡುವೆಯೂ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವ ಪಂಜು ಇಂಡಿಬ್ಲಾಗರ್ ವೆಬ್ ತಾಣದ ಕನ್ನಡ ತಾಣಗಳ ರ್ಯಾಂಕಿಗ್ ನಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಕಳೆದ ಏಳು ವರ್ಷಗಳ ಪಂಜುವಿನ ಪಯಣದಲ್ಲಿ ಪಂಜು ಆಗಾಗ ವಿಶೇಷ ಸಂಚಿಕೆಗಳನ್ನು ಹೊರ ತರುವುದು ವಾಡಿಕೆ. ಈ ವರ್ಷದ ವಿಶೇಷ ಸಂಚಿಕೆಯಾಗಿ ದೀಪಾವಳಿ ಹಾಗು ಕನ್ನಡ ರಾಜ್ಯೋತ್ಸವದ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ […]
ಕಾಲು ಬಾಯಿ ರೋಗ ಕುರಿತು ಒಂದು ಕಿರು ಚಿತ್ರ
ಕಾಲು ಬಾಯಿ ರೋಗ ಕುರಿತು ಒಂದು ಕಿರು ಚಿತ್ರ ತಪ್ಪದೇ ವೀಕ್ಷಿಸಿ…
ಲೇಖನ ಆಹ್ವಾನ
ಆತ್ಮೀಯರೇ, ಆಯುಧ ಪೂಜೆ ಅಥವಾ ದಸರಾ ಹಬ್ಬದ ನಿಮ್ಮ ಅನುಭವಗಳನ್ನು ಬರೆದು ನಮಗೆ ಕಳುಹಿಸಿಕೊಡಿ. ಲೇಖನಗಳಿಗೆ ಪದಗಳ ಮಿತಿ ಇಲ್ಲ. ಲೇಖನದಲ್ಲಿ ಕನಿಷ್ಠವೆಂದರೂ 500 ಪದಗಳಿರಲಿ. ನಿಮ್ಮ ಲೇಖನಗಳು ಅಕ್ಟೋಬರ್ 5, 2019 ರ ಒಳಗೆ ನಮಗೆ ತಲುಪಲಿ. ನಮ್ಮ ಇ ಮೇಲ್ ವಿಳಾಸ: editor.panju@gmail.com, smnattu@gmail.com ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ಪಂಜು ಬಳಗ
ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗದ ನಮನ
ತಮ್ಮ ಕಾವ್ಯದ ಮೂಲಕ ನಮ್ಮ ಪತ್ರಿಕೆಯನ್ನು ಶ್ರೀಮಂತಗೊಳಿಸಿದ ಸಹೃದಯರಾದ ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗ ಅಂತಿಮ ನಮನಗಳನ್ನು ಸಲ್ಲಿಸುತ್ತದೆ. ರಮೇಶ್ ಹೆಗಡೆಯವರು ಕಳುಹಿಸಿಕೊಟ್ಟಿದ್ದ ಮೊದಲ ಗಝಲ್ ಇದು. ಪತ್ರಿಕೆಯೆಡೆಗಿನ ಅವರ ಪ್ರೀತಿಗೆ ಗೌರವಾರ್ಥವಾಗಿ ತಮ್ಮ ಮುಂದಿಡುತ್ತಿದ್ದೇವೆ. ಮಾತುಗಳ ಸೇತು . . . : ಮಾತುಗಳ ಸೇತುವೆಯ ಬೆಸೆದುಬಿಡು ಚೂರು/ ಕುಪಿತ ಭಾವದ ಬಸಿರ ಎಸೆದುಬಿಡು ಚೂರು// ಕವಿದ ಮೋಡದ ಕೆಳಗೆ ಒಣ ಮೊಗವು ಏಕೆ/ ಸಸುನಗೆಯ ಮಳೆಯ ಹನಿ ಬಸಿದುಬಿಡು ಚೂರು// ನದಿಯ ದಡದಲಿ […]
ಹೆಗ್ಗಡಹಳ್ಳಿ ಮಕ್ಕಳಿಂದ “ನಿಮ್ಮ ಕಸ ನಿಮಗೆ” ಅಭಿಯಾನ.
‘ನಾಳೆಗಳು ನಮ್ಮದು” ಎಂಬ ಧ್ಯೇಯದೊಂದಿಗೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಳೆದ ವಾರ ನಡೆದ ಬಣ್ಣದಮೇಳದಲ್ಲಿ ಮಕ್ಕಳು ಅಪರೂಪದ ಅಭಿಯಾನವೊಂದನ್ನು ಆರಂಭಿಸಿದರು. ಬೇರೆ ಬೇರೆ ರುಚಿಯ ಅತ್ಯಾಕರ್ಷಕ ಮಕ್ಕಳ ತಿಂಡಿಗಳನ್ನು ದೇಶದಲ್ಲಿ ಹಲವಾರು ಕಂಪೆನಿಗಳು ಉತ್ಪಾದಿಸುತ್ತವೆ. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ಉತ್ಪನ್ನಗಳು ಸಿಗುತ್ತವೆ. ಆ ಉತ್ಪನ್ನಗಳನ್ನು ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಮಕ್ಕಳನ್ನು ಆಕರ್ಷಿಸಲಾಗುತ್ತದೆ. ಹೆಗ್ಗಡಹಳ್ಳಿಯ ಮಕ್ಕಳು ಬಣ್ಣದಮೇಳದಲ್ಲಿ ಸೇರಿ ಈ ಕವರು ನಮ್ಮೂರಿಗೆ ಕಸವಾಗಿ ಹಾಗೆಯೇ ಉಳಿಯುತ್ತದೆ ಎಂಬುವುದನ್ನು […]
ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ
ಪ್ರಥಮ್ ಬುಕ್ಸ್ ಸ್ಟೋರಿವೀವರ್ ನ (https://storyweaver.org.in) ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ ವು (Retell, Remix, Rejoice) ಮಾ.20 ರಿಂದ ಶುರುವಾಗಲಿದೆ. ಈ ಮೂಲಕ ಪ್ರಥಮ್ ಬುಕ್ಸ್ ನ ವಾರ್ಷಿಕ ಕತೆ ಹೇಳುವ ಸ್ಪರ್ಧೆಗೆ ಚಾಲನೆ ಸಿಗಲಿದೆ. ಪ್ರತಿ ವರ್ಷ ಮಾ.20ಕ್ಕೆ ನಮಗಾಗಿ ಕತೆಗಳನ್ನು ಬರೆದ ಲೇಖಕರು, ಓದುಗರಿಂದ ಆಯ್ದ ಕೆಲವು ವಿಷಯಗಳ ಮೂಲ ಎಳೆಯೊಂದಿಗೆ ಕತೆಗಳನ್ನು ಬರೆಯಲು ಆಹ್ವಾನಿಸುತ್ತೇವೆ. ಈ ಎಲ್ಲಾ ವಿಷಯಗಳು ಪ್ರಥಮ್ ಬುಕ್ಸ್ ಸಂಪಾದಕೀಯ ಬಳಗದ ಆಯ್ಕೆಯೇ ಆಗಿರುತ್ತದೆ. 2019ರ ಅಭಿಯಾನದ ಮುಖ್ಯ ಉದ್ದೇಶ […]
ಮಾನಸಪುತ್ರ ನಾಟಕ ಪ್ರದರ್ಶನ
ನಾಟಕದ ಹೆಸರು : ಮಾನಸಪುತ್ರ. ಆಧಾರ : ಬೀಚಿಯವರ ‘ ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳು ರಚನೆ – ನಿರ್ದೇಶನ : ಬಸವರಾಜ ಎಮ್ಮಿಯವರ ಅಭಿನಯಿಸುವ ತಂಡ : ಕಲಾವಿಲಾಸಿ ದಿನಾಂಕ ಮತ್ತು ಸಮಯ : 13 ಏಪ್ರಿಲ್ 2019, ಶನಿವಾರ. ಸಂಜೆ 7.00 ಕ್ಕೆ ಸ್ಥಳ :ಸೇವಾಸದನ. 14ನೆ ಅಡ್ಡ ರಸ್ತೆ, ಮಲ್ಲೇಶ್ವರ ಬೆಂಗಳೂರು ನಾಟಕದ ಅವಧಿ : 80 ನಿಮಿಶಗಳು. ಪ್ರವೇಶ ದರ : 100/- ಹೆಚ್ಚಿನ ಮಾಹಿತಿಗೆ : 9663523904 ನಾಟಕದ […]
ಅಭ್ಯಾಗತ 2 ಕನ್ನಡ ಕಿರುಚಿತ್ರ
ಡೈರೆಕ್ಷನ್, ಕಥೆ, ಚಿತ್ರಕಥೆ, ಸಂಭಾಷಣೆ: ಮಂಜು ಎಂ ದೊಡ್ಡಮನಿ ಕ್ಯಾಮರಾ : ಶಶಾಂಕ್ ಮೈಸೂರು ಮತ್ತು ಶಶಿ.ಬಿ.ಈಶ್ವರಗೆರೆ ಸಂಕಲನ & ಗ್ರಾಫಿಕ್ಸ್ : ದರ್ಶನ್ ದೊಡ್ಡಮನಿ ಸಂಗೀತ : ಹರೀಶ್ ಮೈಸೂರು ನಿರ್ಮಾಣ & ನಿರ್ವಹಣೆ : ಶ್ರೀಹರ್ಷ ಹುಣಸೂರ್ ಪತ್ರಿಕ ಪ್ರಚಾರ : ವಸಂತ್ ಬಿ ಈಶ್ವರಗೆರೆ ಕಲಾವಿದರು : ಟಿ.ಜಿ.ನಂದೀಶ್ ಮೇಘನ ಚತುರೆ ಬೇಬಿ.ರಿಷಿತಾ ಮಂಜು ಎಂ ದೊಡ್ಡಮನಿ ನಾಯ್ಕಲದೊಡ್ಡಿ ಚಂದ್ರಶೇಖರ್ ರಾಘವೇಂದ್ರ ಎಚ್ ಇ ಗಿರೀಶ್ (ಜೆಕೆ) ಶ್ರೀಹರ್ಷ ಹುಣಸೂರು ಸುನೀಲ್ ಶಶಿ.ಬಿ.ಈಶ್ವರಗೆರೆ […]
‘ಅಂತರ್ವಾಣಿ’ 6ನೆಯ ಆವೃತ್ತಿಗೆ ಸಂಶೋಧನ ಲೇಖನಗಳ ಆಹ್ವಾನ
ಕನ್ನಡ ಸಾಹಿತ್ಯ ಮತ್ತು ಸಮಾಜ ವಿಜ್ಞಾನ (ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವಿಷಯಗಳ ಸಂಶೋಧನ ಲೇಖನಗಳನ್ನು ಪ್ರಕಟಿಸುವ ಸಲುವಾಗಿ ‘ಅಂತರ್ವಾಣಿ’ ಪುಸ್ತಿಕೆಯ 6ನೆಯ ಆವೃತ್ತಿಗೆ ಸಂಶೋಧಕರ ಲೇಖನಗಳಿಗೆ ಆಹ್ವಾನ ನೀಡಲಾಗಿದೆ. ಲೇಖನಗಳನ್ನು ISಃಓ ಸಂಖ್ಯೆಯ ಪುಸ್ತಿಕೆಯಲ್ಲಿ ಪ್ರಕಟಿಸಲಾಗುವುದು. ಈಗಾಗಲೇ ಯಶಸ್ವಿಯಾಗಿ ಅಂತರ್ವಾಣಿ ಪುಸ್ತಿಕೆಯ ಆರು ಆವೃತ್ತಿಗಳು ಪ್ರಕಟವಾಗಿವೆ. ಈ ನಮ್ಮ ಯಶಸ್ಸಿಗೆ ನಾಡಿನ ಸಮಸ್ತ ಯುವ, ಹಿರಿಯ ಸಂಶೋಧಕರು ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲಗಳನ್ನು ನೀಡಿದ್ದಾರೆ. ಅವರ ಉತ್ತಮ ಪ್ರತಿಕ್ರಿಯೆಯನ್ನು ಸ್ಮರಿಸುತ್ತ, ಕೃತಜ್ಞರಾಗಿ 6ನೆಯ ಆವೃತ್ತಿಗೆ ಈ […]
ಡಾ. ಮಹೇಂದ್ರ ಎಸ್ ರವರ ಕವನ ಸಂಕಲನ ‘ಬೇವರ್ಸಿಯ ಬಯೋಡೇಟಾ’
ಡಾ.ಮಹೇಂದ್ರ ಎಸ್ ರವರ “ಪ್ರೇಮ-ಪ್ರಣಯ-ಪರಿತಾಪದ” ಪದ್ಯಗಳನ್ನೊಳಗೊಂಡ ಮೊದಲ ಕವನ ಸಂಕಲನ ‘ಬೇವರ್ಸಿಯ ಬಯೋಡೇಟಾ’ ಕೊಳ್ಳಲು ಲಭ್ಯವಿರುತ್ತದೆ. ಪುಸ್ತಕ ಬೇಕಾಗಿದ್ದಲ್ಲಿ ಕೆಳಗೆ ತಿಳಿಸಿರುವ ಮೊಬೈಲ್ ನಂಬರ್ ಮುಖಾಂತರ ಡಾ. ಮಹೇಂದ್ರ ರವರನ್ನು ಸಂಪರ್ಕಿಸಿ. ಪುಸ್ತಕದ ಬೆಲೆ -80 ರೂ ಅಂಚೆ ವೆಚ್ಚ ಸೇರಿ – 100 ಡಾ.ಮಹೇಂದ್ರ ಎಸ್ 8431110644 7019000940 Mode of payment Phone pe/ google pay (8431110644) Or Mahendra s Acc no: 33592817750 SBI anekal branch IFSC : SBIN0016765
‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ.
ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಡಾ. ಮೋಗಳ್ಳಿ ಗಣೇಶ ಅವರ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಫೆ10 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ನಾಗಶಾಂತಿ ಉನ್ನತಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ರಾಣೇಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಹಾಗೂ ಲಡಾಯಿ ಪ್ರಕಾಶನ ಜಂಟಿಯಾಗಿ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಂಡಿದೆ. ಖ್ಯಾತ ವಿಮರ್ಶಕರು ಹಾಗೂ ಬೆಂಗಳೂರು ವಿವಿಯ ಪ್ರಾಧ್ಯಾಪಕ ಜೀವನಪ್ರೇಮ, ಕೊಂಕು ಯಾವುದನ್ನೂ ಬಚ್ಚಿಡದಂತೆ […]