ವಾರಾಂತ್ಯದಲ್ಲೊಂದು ರಂಗ ರಸದೌತಣ


ಡಿಸೆಂಬರ್ ಕೊನೆವಾರ ಜಗತ್ತು ಪಟಾಕಿ ಹಾಡು ಕುಣಿತದ ಮೂಲಕ ಹೊಸವರ್ಷವನ್ನು ಬರಮಾಡಿಕೊಳ್ಳುಲು ಸಜ್ಜಾಗುತ್ತದೆ. ಆದರೆ ಮೈಸೂರಿನ ರಂಗಾಸಕ್ತರು ಅರ್ಥಪೂರ್ಣವಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಮಾಗಿಯ ಚಳಿಗೆ ನಗರವೆಲ್ಲ ತಣ್ಣಗೆ ಮನೆಸೇರುವಾಗ ಕಲಾಮಂದಿರದ ಆವರಣದಲ್ಲಿ ನಿರಂತರ ರಂಗೋತ್ಸವ ಕಳೆಗಟ್ಟುತ್ತದೆ. ಬಣ್ಣ ಬಣ್ಣದ ಹೊರ ಆವರಣ, ಬೇರೆ ಬೇರೆ ಊರುಗಳಿಂದ ಬಂದ ರಂಗತಂಡಗಳ ನಾಟಕ ಪ್ರದರ್ಶನ, ಜನಪದ ಕಲಾಪ್ರಕಾರಗಳ ಅನಾವರಣ, ಕೊನೆಯಲ್ಲೊಂದು ರಂಗಸಂಗೀತಕ್ಕೆ ಪ್ರೇಕ್ಷಕರೆಲ್ಲರು ಸಾಕ್ಷಿಯಾಗುವ ಮೂಲಕ ರಂಗಭೂಮಿಯ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಹೌದು ಪ್ರತಿವರ್ಷದಂತೆ ಈ ವರ್ಷವೂ ನಿರಂತರ ರಂಗೋತ್ಸವ ಇದೇ ಡಿಸೆಂಬರ್ 27 ರಿಂದ 31 ರವರೆಗೆ ಕಿರುರಂಗಮಂದಿರದಲ್ಲಿ ಆಯೋಜನೆಗೊಂಡಿದೆ. ರಾಜ್ಯದ ಪ್ರತಿಷ್ಠಿತ ರಂಗ ಉತ್ಸವಗಳಲ್ಲಿ ಒಂದಾದ ನಿರಂತರ ರಂಗೋತ್ಸವಕ್ಕೆ ಭರದಿಂದ ಸಿದ್ಧತೆಗಳು ಆರಂಭಗೊಂಡಿವೆ. ರಂಗು ರಂಗಿನ ರಂಗೋಲಿಗಳು ಆವರಣದ ಮುಂದೆ ಬೀಳಲು ಕಾತುರದಿಂದ ಕಾಯುತ್ತಿವೆ.

ದಿನಾಂಕ 27 ರಿಂದ ಉದ್ಘಾಟನೆಗೊಳಲ್ಲಿರುವ ನಿರಂತರ ರಂಗೋತ್ಸವದ ಉದ್ಘಾಟನೆಗೆ ನಾಡಿನ ಹಿರಿಯ ರಂಗಕರ್ಮಿಗಳು, ಕಲಾವಿದರು, ಪತ್ರಕರ್ತರು ಆಗಮಿಸಲಿದ್ದಾರೆ. ಹಿರಿಯ ರಂಗಕರ್ಮಿ ಹೆಚ್.ಎಸ್.ಉಮೇಶ್, ಹಿರಿಯ ರಂಗ ಕಲಾವಿದೆ ಇಂದಿರಾ ನಾಯರ್, ಪತ್ರಕರ್ತೆ ಪ್ರೀತಿ ನಾಗರಾಜ್ ಅವರು ಉಪಸ್ಥಿತರಿರಲಿದ್ದಾರೆ. ಇದೇ ವೇದಿಕೆಯಲ್ಲಿ ಬರಹಗಾರರು, ಚೆನ್ನೈನ ಆದಾಯ ತೆರಿಗೆ ಆಯುಕ್ತರು ಆದ ಜಯರಾಮ್ ರಾಯಪುರ ಅವರ ‘ಎರಡು ನಾಟಕಗಳು’ ಕೃತಿ ಅನಾವರಣಗೊಳ್ಳಲಿದೆ.

ಎಲೆಮರೆಕಾಯಿಯಂತೆ ಅಲ್ಲಲ್ಲಿ ಜೀವಂತವಾಗಿರುವ ಅಪರೂಪದ ಜನಪದ ಕಲೆ ‘ಕೀಲುಕುದುರೆ’ ಪ್ರದರ್ಶನದ ಮೂಲಕ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭವಾಗಲಿವೆ.

(ದಿನಾಂಕ 27) ಆದಿನ ಸಂಜೆ ರಂಗಾಯಣ ಮೈಸುರು ಸಂಚಾರಿ ಘಟಕದವರ ಆರ್ಕೇಡಿಯಾದಲ್ಲಿ ಪಕ್ ನಾಟಕ ಪ್ರದರ್ಶನಗೊಳ್ಳಲಿದೆ. ಮರುದಿನ ಅಂದರೆ 28 ರಂದು ಡಾ. ಪ್ರದೀಪ್ ಸಾಮಗ ಮತ್ತು ಬಳಗ, ಇವರು ತಾಳಮದ್ದಳೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅದೇ ದಿನ ಸಂಜೆ ಏಳಕ್ಕೆ ದೇಶದ ವಿಭಿನ್ನ ರಾಮಾಯಣಗಳ ಕತೆಗಳನ್ನು ಆಧರಿಸಿದ ಬಹುಮುಖಿ ರಾಮಾಯಣ ನಾಟಕವನ್ನು ನಿರಂತರ ಫೌಂಡೇಷನ್ ಮೈಸೂರು ತಂಡದವರು ಪ್ರದರ್ಶಿಸಲಿದ್ದಾರೆ.

ನಮ್ಮೆಲ್ಲರಿಂದ ಕಣ್ಮರೆಯಾಗುತ್ತಿರುವ ಸಾಮುದಾಯಿಕ ಕಲೆ ಹಗಲುವೇಷ ಕಲಾ ಪ್ರದರ್ಶನ ನಡೆಯಲಿದೆ. ಸಂಜೆ ಏಳಕ್ಕೆ ರಂಗರಥ, ಬೆಂಗಳೂರು ತಂಡದವರಿಂದ ಮಾಳವಿಕಾಗ್ನಿಮಿತ್ರ ನಾಟಕದ ಪ್ರದರ್ಶನ ಇರಲಿದ್ದು, ಡಿಸೆಂಬರ್ 30 ರಂದು ರಾಘವ್ ಕಮ್ಮಾರ್ ಮತ್ತು ತಂಡದವರು ಕನ್ನಡ ಗಜಲ್ ಗಳನ್ನು ಹಾಡುತ್ತಾರೆ. ಆದಿನ ಸಂಜೆ 7ಕ್ಕೆ ಸಾಹಿತಿ ಅರವಿಂದ ಮಾಲಗತ್ತಿ ಅವರ ಕೃತಿ ಆಧಾರಿತ, ಹಿರಿಯ ರಂಗನಿರ್ದೇಶಕ ಎಂ.ಗಣೇಶ್ ನಿರ್ದೇಶನದ ಗೌಮೆರ್ಂಟ್ ಬ್ರಾಹ್ಮಣ ನಾಟಕವನ್ನು ಶಿವಮೊಗ್ಗ ರಂಗಾಯಣ ತಂಡದವರು ಪ್ರದರ್ಶಿಸಲಿದ್ದಾರೆ.

ರಂಗೋತ್ಸವದ ಕೊನೇ ದಿನ ಅಂದರೆ ಡಿಸೆಂಬರ್ 31 ರಂದು ಸಮಾರೋಪ ಸಮಾರಂಭ ಜರುಗಲಿದ್ದು.. ಅದಾದ ಮೇಲೆ ನಿರಂತರ ಫೌಂಡೇಷನ್ ಪ್ರಸ್ತುತಪಡಿಸುವ ‘ಮೊದಲೇ ನೆನೆದೇವು’ ರಂಗಗೀತೆಗಳ ಗೀತ ಗಾಯನ ಕಾರ್ಯಕ್ರಮ. ವಾರಾಂತ್ಯಕ್ಕೊಂದು ಅರ್ಥಪೂರ್ಣ ವಿದಾಯ ರಂಗಸಂಗೀತದದ ಸಂದರ್ಭದಲ್ಲಿ, ಹಿರಿಯ ರಂಗ ಸಂಗೀತಗಾರ ಶ್ರೀನಿವಾಸ್ ಭಟ್(ಚೀನಿ), ನಾಡಿನ ಹೆಸರಾಂತ ಗಾಯಕ ನಿರಂತರ ಬಳಗದವರೇ ಆದ ನವೀನ್ ಸಜ್ಜು, ಶಾಲೋಮ್ ಸನ್ನುತ, ದೇವಾನಂದ್ ವರಪ್ರಸಾದ್, ಅರುಣ್, ಶ್ರೀಕಂಠ ಸ್ವಾಮಿ, ಕೃಷ್ಣ ಚೈತನ್ಯ ಕಿರಣ್, ಸುಮುಖ್, ಸುನಿಲ್ ಮುಂತಾದವರು ರಂಗಾಸಕ್ತರ ಮನಸೂರೆಗೊಳ್ಳಲಿದ್ದಾರೆ.

ಐದು ದಿನಗಳ ಅವಿಸ್ಮರಣೀಯ ಕ್ಷಣಗಳನ್ನು ಸವಿಯುವ ಮೂಲಕ ರಂಗಾಸಕ್ತರೆಲ್ಲರು ಸೇರಿ ನಿರಂತರ ರಂಗೋತ್ಸವವನ್ನು ಯಶಸ್ವಿಗೊಳಿಸೋಣ.
ಡಿಸೆಂಬರ್ 27 ರಿಂದ 31 ರವರೆಗೆ ಸಂಜೆ 5:30 ಕ್ಕೆ ಕಾರ್ಯಕ್ರಮಗಳ ಆರಂಭ..
ನಾಟಕಪ್ರದರ್ಶನ: ಸಂಜೆ 7:00 ಗಂಟೆಗೆ


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x