ಲೇಖನ ಆಹ್ವಾನ

ಆತ್ಮೀಯರೇ, ಆಯುಧ ಪೂಜೆ ಅಥವಾ ದಸರಾ ಹಬ್ಬದ ನಿಮ್ಮ ಅನುಭವಗಳನ್ನು ಬರೆದು ನಮಗೆ ಕಳುಹಿಸಿಕೊಡಿ. ಲೇಖನಗಳಿಗೆ ಪದಗಳ ಮಿತಿ ಇಲ್ಲ. ಲೇಖನದಲ್ಲಿ ಕನಿಷ್ಠವೆಂದರೂ 500 ಪದಗಳಿರಲಿ. ನಿಮ್ಮ ಲೇಖನಗಳು ಅಕ್ಟೋಬರ್ 5, 2019 ರ ಒಳಗೆ ನಮಗೆ ತಲುಪಲಿ. ನಮ್ಮ ಇ ಮೇಲ್ ವಿಳಾಸ: editor.panju@gmail.com, smnattu@gmail.com ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ಪಂಜು ಬಳಗ

ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗದ ನಮನ

ತಮ್ಮ ಕಾವ್ಯದ ಮೂಲಕ ನಮ್ಮ ಪತ್ರಿಕೆಯನ್ನು ಶ್ರೀಮಂತಗೊಳಿಸಿದ ಸಹೃದಯರಾದ ಶ್ರೀಯುತ ರಮೇಶ್ ಹೆಗಡೆಯವರಿಗೆ ಪಂಜು ಬಳಗ ಅಂತಿಮ ನಮನಗಳನ್ನು ಸಲ್ಲಿಸುತ್ತದೆ.  ರಮೇಶ್ ಹೆಗಡೆಯವರು ಕಳುಹಿಸಿಕೊಟ್ಟಿದ್ದ ಮೊದಲ ಗಝಲ್ ಇದು. ಪತ್ರಿಕೆಯೆಡೆಗಿನ ಅವರ ಪ್ರೀತಿಗೆ ಗೌರವಾರ್ಥವಾಗಿ ತಮ್ಮ ಮುಂದಿಡುತ್ತಿದ್ದೇವೆ. ಮಾತುಗಳ ಸೇತು . . . : ಮಾತುಗಳ ಸೇತುವೆಯ ಬೆಸೆದುಬಿಡು ಚೂರು/ ಕುಪಿತ ಭಾವದ ಬಸಿರ ಎಸೆದುಬಿಡು ಚೂರು// ಕವಿದ ಮೋಡದ ಕೆಳಗೆ ಒಣ ಮೊಗವು ಏಕೆ/ ಸಸುನಗೆಯ ಮಳೆಯ ಹನಿ ಬಸಿದುಬಿಡು ಚೂರು// ನದಿಯ ದಡದಲಿ … Read more

ಹೆಗ್ಗಡಹಳ್ಳಿ ಮಕ್ಕಳಿಂದ “ನಿಮ್ಮ ಕಸ ನಿಮಗೆ” ಅಭಿಯಾನ.

‘ನಾಳೆಗಳು ನಮ್ಮದು” ಎಂಬ ಧ್ಯೇಯದೊಂದಿಗೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಳೆದ ವಾರ ನಡೆದ ಬಣ್ಣದಮೇಳದಲ್ಲಿ ಮಕ್ಕಳು ಅಪರೂಪದ ಅಭಿಯಾನವೊಂದನ್ನು ಆರಂಭಿಸಿದರು. ಬೇರೆ ಬೇರೆ ರುಚಿಯ ಅತ್ಯಾಕರ್ಷಕ ಮಕ್ಕಳ ತಿಂಡಿಗಳನ್ನು ದೇಶದಲ್ಲಿ ಹಲವಾರು ಕಂಪೆನಿಗಳು ಉತ್ಪಾದಿಸುತ್ತವೆ. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ಉತ್ಪನ್ನಗಳು ಸಿಗುತ್ತವೆ. ಆ ಉತ್ಪನ್ನಗಳನ್ನು ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಮಕ್ಕಳನ್ನು ಆಕರ್ಷಿಸಲಾಗುತ್ತದೆ. ಹೆಗ್ಗಡಹಳ್ಳಿಯ ಮಕ್ಕಳು ಬಣ್ಣದಮೇಳದಲ್ಲಿ ಸೇರಿ ಈ ಕವರು ನಮ್ಮೂರಿಗೆ ಕಸವಾಗಿ ಹಾಗೆಯೇ ಉಳಿಯುತ್ತದೆ ಎಂಬುವುದನ್ನು … Read more

ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ

ಪ್ರಥಮ್ ಬುಕ್ಸ್ ಸ್ಟೋರಿವೀವರ್ ನ (https://storyweaver.org.in)  ಮತ್ತೆ ಹೇಳಿ, ಮರು ಜೋಡಿಸಿ, ನಲಿದಾಡಿ ಅಭಿಯಾನ ವು (Retell, Remix, Rejoice) ಮಾ.20 ರಿಂದ ಶುರುವಾಗಲಿದೆ. ಈ ಮೂಲಕ ಪ್ರಥಮ್ ಬುಕ್ಸ್ ನ ವಾರ್ಷಿಕ ಕತೆ ಹೇಳುವ ಸ್ಪರ್ಧೆಗೆ ಚಾಲನೆ ಸಿಗಲಿದೆ. ಪ್ರತಿ ವರ್ಷ ಮಾ.20ಕ್ಕೆ ನಮಗಾಗಿ ಕತೆಗಳನ್ನು ಬರೆದ ಲೇಖಕರು, ಓದುಗರಿಂದ ಆಯ್ದ ಕೆಲವು ವಿಷಯಗಳ ಮೂಲ ಎಳೆಯೊಂದಿಗೆ ಕತೆಗಳನ್ನು ಬರೆಯಲು ಆಹ್ವಾನಿಸುತ್ತೇವೆ. ಈ ಎಲ್ಲಾ ವಿಷಯಗಳು ಪ್ರಥಮ್ ಬುಕ್ಸ್ ಸಂಪಾದಕೀಯ ಬಳಗದ ಆಯ್ಕೆಯೇ ಆಗಿರುತ್ತದೆ. 2019ರ ಅಭಿಯಾನದ ಮುಖ್ಯ ಉದ್ದೇಶ … Read more

ಮಾನಸಪುತ್ರ ನಾಟಕ ಪ್ರದರ್ಶನ

ನಾಟಕದ ಹೆಸರು : ಮಾನಸಪುತ್ರ. ಆಧಾರ : ಬೀಚಿಯವರ ‘ ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳು ರಚನೆ – ನಿರ್ದೇಶನ : ಬಸವರಾಜ ಎಮ್ಮಿಯವರ ಅಭಿನಯಿಸುವ ತಂಡ : ಕಲಾವಿಲಾಸಿ ದಿನಾಂಕ ಮತ್ತು ಸಮಯ : 13 ಏಪ್ರಿಲ್ 2019, ಶನಿವಾರ. ಸಂಜೆ 7.00 ಕ್ಕೆ ಸ್ಥಳ :ಸೇವಾಸದನ. 14ನೆ ಅಡ್ಡ ರಸ್ತೆ, ಮಲ್ಲೇಶ್ವರ ಬೆಂಗಳೂರು ನಾಟಕದ ಅವಧಿ : 80 ನಿಮಿಶಗಳು. ಪ್ರವೇಶ ದರ : 100/- ಹೆಚ್ಚಿನ ಮಾಹಿತಿಗೆ : 9663523904 ನಾಟಕದ … Read more

ಅಭ್ಯಾಗತ 2 ಕನ್ನಡ ಕಿರುಚಿತ್ರ

ಡೈರೆಕ್ಷನ್, ಕಥೆ, ಚಿತ್ರಕಥೆ, ಸಂಭಾಷಣೆ: ಮಂಜು ಎಂ ದೊಡ್ಡಮನಿ ಕ್ಯಾಮರಾ : ಶಶಾಂಕ್ ಮೈಸೂರು ಮತ್ತು ಶಶಿ.ಬಿ.ಈಶ್ವರಗೆರೆ ಸಂಕಲನ & ಗ್ರಾಫಿಕ್ಸ್ : ದರ್ಶನ್ ದೊಡ್ಡಮನಿ ಸಂಗೀತ : ಹರೀಶ್ ಮೈಸೂರು ನಿರ್ಮಾಣ & ನಿರ್ವಹಣೆ : ಶ್ರೀಹರ್ಷ ಹುಣಸೂರ್ ಪತ್ರಿಕ ಪ್ರಚಾರ : ವಸಂತ್ ಬಿ ಈಶ್ವರಗೆರೆ ಕಲಾವಿದರು :  ಟಿ.ಜಿ.ನಂದೀಶ್ ಮೇಘನ ಚತುರೆ ಬೇಬಿ.ರಿಷಿತಾ ಮಂಜು ಎಂ ದೊಡ್ಡಮನಿ ನಾಯ್ಕಲದೊಡ್ಡಿ ಚಂದ್ರಶೇಖರ್ ರಾಘವೇಂದ್ರ ಎಚ್ ಇ ಗಿರೀಶ್ (ಜೆಕೆ) ಶ್ರೀಹರ್ಷ ಹುಣಸೂರು ಸುನೀಲ್ ಶಶಿ.ಬಿ.ಈಶ್ವರಗೆರೆ … Read more

‘ಅಂತರ್ವಾಣಿ’ 6ನೆಯ ಆವೃತ್ತಿಗೆ ಸಂಶೋಧನ ಲೇಖನಗಳ ಆಹ್ವಾನ

ಕನ್ನಡ ಸಾಹಿತ್ಯ ಮತ್ತು ಸಮಾಜ ವಿಜ್ಞಾನ (ಇತಿಹಾಸ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ವಿಷಯಗಳ ಸಂಶೋಧನ ಲೇಖನಗಳನ್ನು ಪ್ರಕಟಿಸುವ ಸಲುವಾಗಿ ‘ಅಂತರ್ವಾಣಿ’ ಪುಸ್ತಿಕೆಯ 6ನೆಯ ಆವೃತ್ತಿಗೆ ಸಂಶೋಧಕರ ಲೇಖನಗಳಿಗೆ ಆಹ್ವಾನ ನೀಡಲಾಗಿದೆ. ಲೇಖನಗಳನ್ನು ISಃಓ ಸಂಖ್ಯೆಯ ಪುಸ್ತಿಕೆಯಲ್ಲಿ ಪ್ರಕಟಿಸಲಾಗುವುದು. ಈಗಾಗಲೇ ಯಶಸ್ವಿಯಾಗಿ ಅಂತರ್ವಾಣಿ ಪುಸ್ತಿಕೆಯ ಆರು ಆವೃತ್ತಿಗಳು ಪ್ರಕಟವಾಗಿವೆ. ಈ ನಮ್ಮ ಯಶಸ್ಸಿಗೆ ನಾಡಿನ ಸಮಸ್ತ ಯುವ, ಹಿರಿಯ ಸಂಶೋಧಕರು ಸಾಕಷ್ಟು ಪ್ರೋತ್ಸಾಹ ಹಾಗೂ ಬೆಂಬಲಗಳನ್ನು ನೀಡಿದ್ದಾರೆ. ಅವರ ಉತ್ತಮ ಪ್ರತಿಕ್ರಿಯೆಯನ್ನು ಸ್ಮರಿಸುತ್ತ, ಕೃತಜ್ಞರಾಗಿ 6ನೆಯ ಆವೃತ್ತಿಗೆ ಈ … Read more

ಡಾ. ಮಹೇಂದ್ರ ಎಸ್ ರವರ ಕವನ ಸಂಕಲನ ‘ಬೇವರ್ಸಿಯ ಬಯೋಡೇಟಾ’

ಡಾ.ಮಹೇಂದ್ರ ಎಸ್ ರವರ “ಪ್ರೇಮ-ಪ್ರಣಯ-ಪರಿತಾಪದ” ಪದ್ಯಗಳನ್ನೊಳಗೊಂಡ ಮೊದಲ ಕವನ ಸಂಕಲನ  ‘ಬೇವರ್ಸಿಯ ಬಯೋಡೇಟಾ’ ಕೊಳ್ಳಲು ಲಭ್ಯವಿರುತ್ತದೆ. ಪುಸ್ತಕ ಬೇಕಾಗಿದ್ದಲ್ಲಿ ಕೆಳಗೆ ತಿಳಿಸಿರುವ ಮೊಬೈಲ್ ನಂಬರ್ ಮುಖಾಂತರ ಡಾ. ಮಹೇಂದ್ರ ರವರನ್ನು ಸಂಪರ್ಕಿಸಿ. ಪುಸ್ತಕದ ಬೆಲೆ -80 ರೂ ಅಂಚೆ ವೆಚ್ಚ ಸೇರಿ – 100 ಡಾ.ಮಹೇಂದ್ರ ಎಸ್ 8431110644 7019000940 Mode of payment Phone pe/ google pay (8431110644) Or Mahendra s Acc no: 33592817750 SBI anekal branch IFSC : SBIN0016765

‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ.

ಹಿರಿಯ ಸಾಹಿತಿ ಹಾಗೂ ವಿಚಾರವಾದಿ ಡಾ. ಮೋಗಳ್ಳಿ ಗಣೇಶ ಅವರ ‘ಅಂಬೇಡ್ಕರ್ ಎಂಬ ಮಹಾನದಿ ಮತ್ತು ದಲಿತೀಕರಣಗೊಂಡ ಗಾಂಧೀಜಿ’ ಕೃತಿಯ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಫೆ10 ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ನಾಗಶಾಂತಿ ಉನ್ನತಿ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ರಾಣೇಬೆನ್ನೂರಿನ ಕಾಗದ ಸಾಂಗತ್ಯ ವೇದಿಕೆ ಹಾಗೂ ಲಡಾಯಿ ಪ್ರಕಾಶನ ಜಂಟಿಯಾಗಿ ಕೃತಿಯ ಬಿಡುಗಡೆ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಂಡಿದೆ. ಖ್ಯಾತ ವಿಮರ್ಶಕರು ಹಾಗೂ ಬೆಂಗಳೂರು ವಿವಿಯ ಪ್ರಾಧ್ಯಾಪಕ ಜೀವನಪ್ರೇಮ, ಕೊಂಕು ಯಾವುದನ್ನೂ ಬಚ್ಚಿಡದಂತೆ … Read more

ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ ಕವನಸಂಕಲನ ಬಿಡುಗಡೆ ಸಮಾರಂಭ

ದಿನಾಂಕ: 02-09-2018ರ ಬಾನುವಾರ ಕು.ಸ.ಮಧುಸೂದನ ರಂಗೇನಹಳ್ಳಿ ಅವರ ‘ದುರಿತಕಾಲದ ದನಿ’ಕವನಸಂಕಲನವನ್ನು ಅನ್ವೇಷಣೆ ಪತ್ರಿಕೆಯ ಸಂಪಾದಕರಾದ ಶ್ರೀ ಆರ್.ಜಿ.ಹಳ್ಳಿ ನಾಗರಾಜ್ ಲೋಕಾರ್ಪಣೆಗೊಳಿಸಲಿದ್ದಾರೆ. ಕೃತಿಯನ್ನು ಕುರಿತು ಖ್ಯಾತ ವಿಮರ್ಶಕರಾದ ಶ್ರೀ ಡಾ. ಪ್ರಕಾಶ್ ಹಲಗೇರಿ, ಕನ್ನಡ ಪ್ರಾದ್ಯಾಪಕರು, ಕುವೆಂಪು ವಿ.ವಿ.ಯ ಸ್ನಾತಕೋತ್ತರ ಕೇಂದ್ರ, ದಾವಣಗೆರೆ, ಅವರು ಮಾತಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕವಿಯಿತ್ರಿ ಶ್ರೀಮತಿ ಡಾ.ಹೆಚ್.ಎಲ್.ಪುಷ್ಪಾ ರವರು( ಪ್ರಾಚಾರ್ಯರು, ಸರಕಾರಿ ಪದವಿ ಪೂರ್ವ ಕಾಲೇಜು, ಬೆಂಗಳೂರು) ಉಪಸ್ಥಿತರಿರುತ್ತಾರೆ. ಕಾರ್ಯಕ್ರಮದ ಅದ್ಯಕ್ಷತೆಯನ್ನು ಡಾ. ವೃಷಭೇದ್ರಪ್ಪ, ನಿದೇಶಕರು, ಬಾಪೂಜಿ ಇಂಜಿಯರಿಂಗ ಕಾಲೇಜು, ದಾವಣಗೆರೆ … Read more

ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಈ ಬಾರಿಯ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಮಿನೆಸೊಟಾ ರಾಜ್ಯದ ರಾಚೆಸ್ಟರ್‍ನಲ್ಲಿ ನೆಲೆಸಿರುವ ಗುರುಪ್ರಸಾದ ಕಾಗಿನೆಲೆ ಅವರ ಕೃತಿ: ಹಿಜಾಬ್ ಇದಕ್ಕೆ ದೊರೆತಿದೆ. ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ: ಆಗಸ್ಟ್ 13, 2018 ಸೋಮವಾರ ಅಪರಾಹ್ನ: 2.00 ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿ ಗಳಾಗಿ ಎಸ್. ದಿವಾಕರ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ವಿವರ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಬೆಳಿಗ್ಗೆ 9.30 ರಿಂದ ನಿನಾದ ಕನ್ನಡ ಕಾವ್ಯ … Read more

ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ “ಪಾರ್ಶ್ವ ಸಂಗೀತ” ನಾಟಕ ಪ್ರದರ್ಶನ

ಇದೇ ಜೂನ್ ತಿಂಗಳ 23, 24, 29, 30 ಹಾಗೂ ಜುಲೈ 1 ರಂದು ಸಂಜೆ 7 ಗಂಟೆಗೆ ಕಲಾಮಂದಿರ ಆವರಣದಲ್ಲಿರುವ ನೂತನ ಕಿರುರಂಗಮಂದಿರದಲ್ಲಿ ರಂಗವಲ್ಲಿ ತಂಡದ ನೂತನ ರಂಗಪ್ರಯೋಗ, ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕದ ಪ್ರದರ್ಶನವಿದೆ. ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ಈ ನಾಟಕದ ನಿರ್ದೇಶಕರು. ನಾಟಕ ಕುರಿತು ಪಾಶ್ರ್ವಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ … Read more

2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2018’ ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ ಕಳಿಸಿಕೊಡಬೇಕು. ಬರವಣಿಗೆ ಮಾಡಿದ ಹಸ್ತಪ್ರತಿಯನ್ನೂ … Read more