ಪ್ರೇಮಗಂಗೆ: ಪದ್ಮಜಾ. ಜ. ಉಮರ್ಜಿ
“ಯಾವುದೇ ಫಲಾಪೇಕ್ಷೆಯಿಲ್ಲದೆ ಎಲ್ಲರಿಗೂ ಒಳ್ಳೆಯದನ್ನ ಬಯಸಿ, ಸಾಧ್ಯವಾದಷ್ಟು ಒಳ್ಳೆಯದನ್ನ ಮಾಡಿ, ಯಾಕೆಂದರೆ ಹೂವ ಮಾರುವವರ ಕೈಯಲ್ಲಿ ಯಾವಾಗಲೂ ಸುವಾಸನೆಯಿರುತ್ತದೆ.” ಈ ವಾಕ್ಯ ಓದುತ್ತಿರುವ ವೈಷ್ಣವಿಯ ಮನಸ್ಸು ಪಕ್ವತೆಯಿಂದ ತಲೆದೂಗಿತ್ತು. ತನ್ನ ಮತ್ತು ಪತಿ ವಿಭವರ ಬದುಕಿನ ಗುರಿಯೂ ಕೂಡಾ ಎಲ್ಲರಿಗೂ ಒಳ್ಳೆಯದನ್ನು ಬಯಸುವುದು. ಮತ್ತು ಒಳ್ಳೆಯದನ್ನು ಮಾಡುವುದು. ಆದರೂ ಬದುಕೆಂಬುದು ಒಂದು ವೈಚಿತ್ರದ ತಿರುವು. ಹಾಗೆ ನೋಡಿದರೆ ಬದುಕೇ ಬದಲಾವಣೆಗಳ ಸಂಕೋಲೆ. ಮನಸ್ಸು ಸವೆಸಿದ ಹಾದಿಯ ಕುರುಹುಗಳನ್ನು ಪರಿಶೀಲಿಸತೊಡಗಿತ್ತು. ತಾಯಿ ಸಂಧ್ಯಾ ಮತ್ತು ತಂದೆ ಸುಂದರರಾಯರ ಸುಮಧುರ … Read more