ಸಾರ್ಥಕ್ಯ: ಡಾ. ಅಜಿತ್ ಹರೀಶಿ
ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ … Read more