ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಕೊನೆಯ ಭಾಗ): ಎಂ. ಜವರಾಜ್

-೮೦- ‘ಏಯ್,ಗೊತ್ತಾಯ್ತ..ಈಗ್ಲಾದ್ರು ಗೊತ್ತಾಯ್ತಇಲ್ಲಿಗಂಟ ಹೇಳುದ್ದು ನಿನ್ನೆದ್ಗ ಇಳಿತಾ..’ ಗದುರ್ತು ನನ್ಗ ನಿದ್ರ ಮಂಪ್ರುತೂಕುಡ್ಕ ಆ ತೂಕುಡ್ಕಲೆಈ ಅಯ್ನೋರ್ ಕತ ಕೇಳ್ತ ಕೇಳ್ತಗುಡುಗುಡು ಗುಡಗಾ ಸದ್ದುಕಿವಿಗ ಅಪ್ಪುಳುಸ್ತು ‘ಏಯ್,ನಾ ಮಾತಾಡ್ತನೆ ಅವ್ನಿನಿ ತಲ ಬಗ್ಗುಸ್ಕಂಡುತೂಕುಡುಸ್ತನೆ ಇದ್ದಯಲ್ಲ..’ ಆಗ ಸುಂಯ್ಯಂತ ಸುಂಯ್ಗುಟ್ತಪಣ್ಕ ಪಣ್ಕಂತ ಪಣ್ಗುಡಮಿಂಚು ಮಿಂಚ್ತಾ..ಆ ಪಣ್ಗುಡ ಮಿಂಚು ಕಣ್ಗ ರಾಚ್ತನಿಧಾನುಕ್ಕ ಕಣ್ಬುಟ್ಟುಬೀದಿದಿಕ್ಕ ನೋಡ್ದಿ, ಆಗ ಆ ಮೆಟ್ಟು..ಆ ಮಿಂಚುನ್ ಸಂದಿಲೂದಗ ದಗ ದಗಾಂತಉರಿತಾ “ತೂ..ನಾ ಅಂಗ್ಳ ಹರ್ಕಂಡೂ..ಆಗ್ಗಿಂದ ಈಗ್ಗಂಟೂ..ನಿದ್ದನು ಮಾಡ್ದೇ..ಒನ್ನಂಕ್ರೂ ಬುಡ್ದೇ..ಈ ಅಯ್ನೋರ್ ಕತ ಒಪ್ಸುದ್ನಲ್ಲಾ..ನಂಗೇನ್ ತೀಟಿಡ್ದಿತ್ತೂ.. “ನೋಡು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 78 & 79): ಎಂ. ಜವರಾಜ್

-೭೮- ಆಗ..ಆಗ..ಆಗ ಏನಾಯ್ತು ಅಂದ್ರಾ..‘ಏ…ಯ್…’ಅಂತ ಅಬ್ರುಸ್ತಮರದ ಮ್ಯಾಲಿಂದ ಕೆಳಕಆಗ್ಲೆ ಕಂಡಆ ನೆಳ್ ರೂಪುದುತ್ತಂತ ಬಿದ್ದು ಎಗುರಿಮುಂದ ನಿಂತ್ಗಂಡೂ“ಏ..ಯ್..ಆಗ್ಲೆ ಬಿದ್ದೇಟ್ಗಹೆದ್ರಿ ಹೋಯ್ತಿದ್ದರಿ ಅನ್ಕಂಡಿಆದ್ರ..ಆದ್ರ..ಇಲ್ಲಿಗಂಟು ಬಂದಿದರಿ ಅಂದ್ರನಿಮ್ಮ ಬುಡಗಿದ್ದಾ..ಈ ನೀರಂಜಿ ಬುಡ್ಕೇಹಾರ ಮಾಡ್ದೆ ಬುಡಲ್ಲ” ಈ ಅಯ್ನೋರ್ ಕಾಲುಗಡಗಡ ನಡುಗ್ತಅವ್ರು ನಡ್ಗ ರೀತಿಗನಂಗೂ ಮೈಬಾರ ಆಯ್ತಿರಗಾಯ್ತು ಅಂವಅದೆ, ಎಳುರುಂಡಿ ಮಾದೇವಗರ ಬಡ್ದಿರತರ ನಿಂತನ.. ಅಂವ ನಿಂತಿರ ತರುಕ್ಕಇವ್ನ್ ಮ್ಯಾಗಆಗಿಂದ ಅನ್ಕಂಡದೆಲ್ಲಸರುಕ್ನ ಇಳ್ಕಂಡಗಾಯ್ತು ಈ ಅಯ್ನೋರು ಆಗ್ಗಿಂದ ಈಗ್ಗಂಟುಇಂತೆವ್ನ ಮುಂದಿಟ್ಗಂಡುಯವರ ಮಾಡ್ತಿದ್ರಲ್ಲಾ..ಇಂವ,ಇಂತಾ ಅಡ್ಕಸ್ಬಿ ಪುಕ್ಕುಲ್ನಾ..ತೂ..ಸೂಳಮಗನಾ.. ಅನ್ನುಸ್ತು ಎಳುರುಂಡಿ ಮಾದೇವ ಅಂದ್ರ,ಸುತ್ಮತ್ತು ಏಳೂರೂ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 76 & 77): ಎಂ. ಜವರಾಜ್

-೭೬- ಕಂತಕಟ್ಟ ಗದ್ದಮಾಳಗಕುಂ ಅಂತಿತ್ತು ಕೆರ ಪಾಚಿಕಟ್ಟಿಜೊಂಡು ಬೆಳ್ದುಮಧ್ಯದಲಿ ಒಂದೇಡ್ ತಾವರ ಹೂ ಆ ಹೂವ್ಗಳುಅತ್ತ ಅಳ್ದಾಗು ಅಲ್ಲಇತ್ತ ಮೊಗ್ನಾಗು ಅಲ್ಲಜೋತ್ಗಂಡು ಮ್ಯಾಕ್ಕ ನೋಡ್ತಮ್ಯಾಲ ತಿಂಗ್ಳು ಬೆಳ್ಕು ಬೆಳುಗ್ತಾ.. ಇತ್ತಗಈ ಅಯ್ನೋರು ನನ್ನ ಮೆಟ್ಟಿಈ ಮೆಟ್ಟಿರ ಪಾದ್ವಈ ಭೂಮ್ತಾಯ್ಗ ಕುಟ್ಟಿ ಕುಟ್ಟಿಸುಮ್ನ ಅತ್ತಗು ಇತ್ತಗು ನೋಡ್ತಾ.. ಹಂಗ ನೋಡ್ತಾ ನೋಡ್ತಾಆ ತಿಂಗ್ಳು ಬೆಳುಕ್ಲಿಕೆರ ಮಗ್ಗುಲ್ಲಿ ಅದೇನ ಸದ್ದಾಯ್ತುಆ ಸದ್ದು,ಹೆಜ್ಜ ಸದ್ದೇ ಆದಂಗಿತ್ತು ಈ ಅಯ್ನೋರು ಬೆಚ್ತ ಮ್ಯಾಕೆದ್ರು ಮರದ ಕೊಂಬ ಮ್ಯಾಲಿಂದಬೇರು ಕಂಡಾಗಿ ಜೋತಾಡ್ತಭೂಮ್ತಾಯಿಗ ಅಂಟ್ಗಂಡಿದ್ದಆಲದ ಮರ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 74 & 75): ಎಂ. ಜವರಾಜ್

-೭೪- ಸೂರ್ಯ ಮುಳುಗ ಹೊತ್ತು ಆ ಆಳು ತ್ವಾಟ್ದಲ್ಲಿ ಓಡಾಡ್ತಿದ್ನಆ ಆಳ್ನೆಡ್ತಿ ತಿಗುನ್ ಗರಿ ಕಟ್ಗಂಟುತಲಮ್ಯಾಲ ಹೊತ್ಗಂಡು ನಡ್ದಂಗಾಯ್ತು ಈ ಅಯ್ನೋರುಆ ಮುಳುಗ ಸೂರ್ಯನ್ ಕಡಕಣ್ಣಾಡುಸ್ತಆ ಆಳ್ಗ ಸನ್ನ ಮಾಡುದ್ರು ಆ ಆಳುಆ ಸನ್ನುಕ್ಕಒಂದೇ ದಾಪ್ಗ ಓಡ್ದ* ಆ ಮಾರ ನನ್ನ ಹದ ಮಾಡಿಈ ಅಯ್ನೋರ್ ಪಾದ್ಗ ಮೆಟ್ಸಿ‘ಹೆಂಗಿದ್ದು ಅಳಿ ಜೋಕಗಿದ್ದವ’ ಅಂತಂದುಒಂದೇಡ್ ತಿಂಗ್ಳೇ ಆಗಿಅವತ್ತಿಂದ ಇವತ್ಗೂಅವುನ್ ಸುಳುವೆ ಕಾಣಿ* ಸೂರ್ಯ ಮುಳುಗಿಕತ್ಲು ಕವಿಕಂಡುಆ ಹೊತ್ಲಿಅದ್ಯಾರ ಹತ್ತಾರ್ ಜನ ಮಾತಾಡ್ತಬೇಲಿ ನೆಕ್ಕಂಡು ಬಂದಂಗಾಯ್ತು ಈ ಅಯ್ನೋರು ನಗ್ತ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 73): ಎಂ. ಜವರಾಜ್

-೭೩- ಸರೊತ್ತು ಸರೀತಿತ್ತು ಆ ಸರೊತ್ತಲ್ಲಿವಯ್ನುಗ್ಗ ಮರದ ಕೊಂಬ ಮ್ಯಾಲಗೂಕ್ಕ್.. ಗೂಕ್ಕ್.. ಗೂಕ್ಕ್..ಗೂಗ ಗೂಕಾಕದು ಕೇಳ್ತಿತ್ತು ಕತ್ಲು ಕವಿಕಂಡು ಏನೇನೂ ಕಾಣ್ದು ನಾನು ತಡಿ ಮೂಲಲಿಬೆಚ್ಗ ಬಿದ್ದಿರತರ ಅನ್ನುಸ್ತಿತ್ತು ಆ ಮಾರ ಅದ್ಯಾವ್ ಮಾಯ್ದಲ್ಲಿನಂಗೂ ಅರುವಾಗ್ದೆ ಇರತರಕಿತ್ತೊಗಿದ್ದ ನನ್ ಮೂಲ ಮುಡ್ಕಕೂದು ಕ್ವರುದುಗುದ್ದಿ ಹೊಲ್ದುಹದ ಮಾಡಿಎದ್ದೋಗಿ ದಿಬ್ಗ ತಲ ಕೊಟ್ನ ಕಾಣಿ ಆ ಮರದ ಕೊಂಬಲಿಆ ಗೂಗ ಬುಟ್ಟೂ ಬುಡ್ದೆಒಂದೆ ಸಮ್ಕ ಗೂಕಾಕ್ತಆ ಗೂಕಾಕ ಗೂಗ ಸದ್ಗಈ ಜೀವೂ ಅಳುಕ್ತ ಬೆಚ್ತಎಚ್ರ ಆದಂಗಾಯ್ತು ಎಚ್ರ ಆದ ಗಳುಗ್ಗಇತ್ತಗ,‘ಮೀಂಯ್ಞ್ಯಾಂವ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 72): ಎಂ. ಜವರಾಜ್

-೭೨- ಕತ್ಲು ಕವಿಕಂಡಿತ್ತು ಕಾರಮುಳ್ಳು ಚುಚ್ಚುಸ್ಕಂಡುಕುಂದ್ರಕಾಗ್ದೆ ನಿಂದ್ರಕಾಗ್ದೆನಳ್ತ ಮುಕ್ಕರಿತನಿಂತು ಕಾಲೂರಿ ಕುಂಟ್ತಿದ್ದಆ ಅಯ್ನೋರ ಕೈಹಿಡ್ಕಂಡುಮನ್ಗಂಟ ಬುಟ್ಟುಎಡಗೈಲಿ ನನ್ನಿಡ್ಕಂಡುದಾಪುಗಾಲಾಕಿ ಬಂದ ಮಾರಅದೇ ರಬುಸ್ದಲ್ಲಿನನ್ನ ತೂದಿತಡ್ಕ ಮೂಲ್ಗ ಎಸ್ದುಜಗುಲಿಗ ತಿಕ ಊರ್ದ ಲಾಟಿನ್ಲಿ ಬತ್ತಿ ಮ್ಯಾಕ್ಕೆದ್ದುಬತ್ತಿ ಮ್ಯಾಲಿನ್ ಬೆಳುಕ್ಕುನ್ ನಾಲ್ಗಕೆಂಪಾಗಿ ಮೇಲ್ಚಾಚಿ ವಾಲಾಡ್ತಹೊಗ ಸಯಿತ್ವಾಗಿಬೆಳ್ಕು ಬೆಳುಗ್ತಾ ಇತ್ತು ಆ ಮಾರನೆಡ್ತಿಆ ಬೆಳ್ಕ ನೋಡ್ತಲಾಟಿನ್ ಕೀಲಿ ಹಿಡ್ದುಬತ್ತಿ ಇಳಿಸಿಈಚ್ಗ ಬಂದುಲೊಚಲೊಚ ಲೊಚಗುಡ್ತಬಂದವ್ನ್ ಮುಂದ ಕುಂತುಕಿರಿಕಿರಿ ಎಟ್ಟಿಎರುಡು ಬಾಟ್ಲಿ ಹೆಂಡನ ಕುಕ್ಕಿ‘ಆ ಕಿತ್ತೊದ್ ಎಕ್ಡುವೇಕಾಲ್ ಕಾಲ್ದಿಂದೂಯಾವ್ ಕಾಲ ಆಯ್ತು ಅವ ಮಾಡ್ಸಿತೂ..ಒಂದ್ಜೊತ ಮಾಡುಸ್ಕಳಕ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 71): ಎಂ. ಜವರಾಜ್

-೭೧-ಅವತ್ತು ಸಂದವತ್ಲಿತ್ವಾಟ್ಗೇರಿ ಮಾರಿಗುಡಿಲಿಮರಿಗಿರಿ ಹೊಡ್ದು ಪರ ಮಾಡ್ತಿದ್ರು.. ಅದ ನಾ ಉಣ್ಣಗಿದ್ದಾ.. ಉಣ್ದೆದ್ ಮ್ಯಾಲಇನ್ಯಾಕ ಅನ್ಕಂಡುಹಂಗೆ ಬೀಸ್ಕಾಲ ಹಾಕಂಡುಬತ್ತಿರವತ್ಲಿಬಸ್ಟ್ಯಾಂಡು ಬಣ್ಗುಡ್ತಿತ್ತು.. ಮ್ಯಾಲ ತಿಂಗ್ಳು ಬೆಳುಗ್ತಿತ್ತು ಆ ಬೆಳ್ಗ ಬೆಳುಕ್ಲಿಆ ತಿಂಗ್ಳು ತರನೇ ಇರ ಮೊಖ ಕಾಣ್ತುಆ ಮೊಖ ನೋಡುದ್ಮೇಲನಂಗ ಎತ್ತಗು ದಿಗ್ಲಾಗ್ದೆಅತ್ತಗ ಇತ್ತಗ ಎಡ್ತಾಕಿಸುಮ್ನ ದಂಡುಕ್ಕ ಹೋಗಿ‘ಎಲ್ಲಿಗ್ಯಾ’ ಅಂದಿಅವ್ಳು ಸುಮ್ನ ನೋಡಿ ತಿರಿಕಂಡ ಆಮ್ಯಾಲ ಅವ್ಳೆ‘ಕಲ್ಲೂರ್ ಮುಳ್ಳೂರ್ ಕಡ ಬಸ್ಸಿಲ್ವ’ಅಂದ್ಲು ‘ಇಲ್ಲ ಕೇತಳ್ಳಿ ಕೆರ ಹೊಡ್ದುಸಂತಮಾಳ್ದಲಿ ನೀರು ತುಂಬ್ಕಂಡುರೋಡು ಕೊಚ್ಗ ಹೋಗದ’ಅಂದಿ ‘ಅಯ್ಯೋ ನಾನೇನ್ಮಾಡ್ಲಿನಾ ಹೆಂಗ್ಯಾ ಊರ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 69 & 70): ಎಂ. ಜವರಾಜ್

-೬೯-ಮೊಕ್ಕತ್ಲು ಕವಿಕಂಡು ಕಣ್ಣು ಕತಿ ಕಾಣ್ದುಏನ್ಮಾಡಗಿದ್ದದುನಾ ತೇಲ್ತನೇ ಇದ್ದಿ.. ಮೋಟ್ರು ಸದ್ದಾಯ್ತನೆ ಇತ್ತುಅದ ಆಪ್ಮಾಡ್ದೆನೀರು ತುಂಬಿ ತುಳುಕ್ತತೆವ್ರಿ ಮ್ಯಾಲ ಏರಿ ಹರಿತಿತ್ತುನಾನು ಆ ಹರಿಯ ನೀರ್ಲಿ ತೆವ್ರಿ ಸುತ್ತದೋಣಿತರ ತೇಲ್ತ ಸುತ್ತ ಬರದೇ ಆಯ್ತು.. ಆಗ ತೆವ್ರಿ ಮ್ಯಾಲಅದೇನ ಬುಸುಗುಟ್ಟ ಸದ್ದಾಯ್ತುನಂಗ ಗಾಬ್ರಿಯಾಗಿ ತಿರುಗ್ದಿಆ ಬುಸಗುಟ್ಟ ಜಾಗದ ಮ್ಯಾಲಪಣುಕ್ನುಳ್ಗಳ ಹಿಂಡೆ ಹಾರಾಡ್ತಆ ಪಣುಕ್ನುಳ್ಗಳ ಬೆಳುಕ್ಲಿದಪ್ದು ಕರಿ ನಾಗ್ರಾವು ಕಾಣ್ತು..ಅದು ಬುಸುಗುಡ್ತ ತೆವ್ರಿ ಮ್ಯಾಲನೀರ ಸರಿಸ್ತಾ ಹರಿತಾ ಹೋಯ್ತಿತ್ತು ಅದೆ ಗಳುಗ್ಗ ಅತ್ತಿಂದ ಯಾರೊಓಡ್ಬತ್ತಿರ ಸದ್ದಾಯ್ತುನಂಗ ಅತ್ತಗ ದಿಗಿಲಾಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 68): ಎಂ. ಜವರಾಜ್

-೬೮-ತ್ವಾಟ ಒಣ್ಗಿ ದಳ್ಳಿಡ್ದಿತ್ತುಬಿದ್ದಿರದು ಬಿದ್ದಿರತವೇ ಇತ್ತುಇದ ನಂಬದ ಬುಡದ ಅನ್ನಗಾಯ್ತುಕಪಲ ಬಾವಿಲಿ ಜೊಂಡು ಬೆಳ್ದುಬಾವಿ ಇದ್ದದ ಇಲ್ವ ಅನ್ನಗಿತ್ತುಮೋಟ್ರು ಸದ್ದಾಯ್ತ ಇರದು ಕೇಳ್ತನೀರು ಚೊಳಚೊಳ ಚೊಳ್ಗುಟ್ತದಿಕ್ಕಾಪಾಲು ಹರಿತಿತ್ತುತಿಗುನ್ ಮರಗಳು ಬೆಳ್ದುಚೊಕ್ವಿಲ್ದೆ ಗರಿಗಳು ಒಣಿಕಂಡುಅಲ್ಲಲ್ಲೆ ನ್ಯಾತಾಡ್ತ ಗಾಳಿಗ ಅಳ್ಳಾಡ್ತಮ್ಯಾಲ ತಾರ್ಗಟ್ಲ ಕಾಯಿ ಒಣ್ಗಿ ಉದ್ರತರ ಕಾಣ್ತಿದ್ದು ಈ ಅಯ್ನೋರು ನನ್ನ ಮೆಟ್ದೆಈ ತ್ವಾಟ ನೋಡ್ದೆಬಲು ಜಿನ್ವಾಗಿತ್ತುಆ ಆಳುವ ಆ ಆಳ್ನೆಡ್ತುವಮಣುಮಾತ ಆಡ್ಕಂಡುಅಯ್ನೋರ್ ತಿಕುದ್ ಸಂದಿಲೆ ಒಸುಗ್ತತ್ವಾಟನ ಬರುದು ಮಾಡಿರದು ನಂಗೇನು ಗೊತ್ತು..ಈ ಅಯ್ನೋರು ಕೇಳ್ದೆ ಸುಮ್ನ ಯಾಕಿದ್ದರು.. ಅಲಲಲಾ.. … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 67): ಎಂ. ಜವರಾಜ್

-೬೭-ಆ ಮಾರ ಕಡ್ಡಿಗೀರಿಮೋಟು ಬೀಡಿ ಹಸ್ಸಿ ಬಾಯ್ಗಿಟ್ಗಂಡುಅದೆ ಕಡ್ಡಿಲಿ ಲಾಟೀನ್ ಕೀಲೆತ್ತಿಲಾಟೀನ್ ಗಳಸೊಳ್ಗಿರ ಬತ್ತಿಗ ಇಟ್ಮೇಲಮೊದುಲ್ಗ ಲಾಟೀನ್ ಬತ್ತಿ ದಗ್ಗಂತ ಹತ್ಕಂಡುಆಮೇಲಮೇಲ ಆ ಲಾಟೀನಲಿಸೀಮೆಣ್ಣ ಇಲ್ದೆ ಇರವತ್ಗೇನೋಅದು ಕವುರ್ತ ಕವುರ್ತಬೆಳ್ಕು ಸಣ್ಣುಕ್ಕ ಪಿಣುಗುಡ್ತಿತ್ತು ಆ ಪಿಣ್ಗುಡ ಬೆಳುಕ್ಲಿಆ ಮಾರುನ್ ಹೆಡ್ತಿಹೊಸೂರ್ ಬೀದಿಯಿಂದಹೆಡ್ಗಲಿ ಹೊತ್ಗ ಬಂದಿರಬಾಡು ಬಳ್ಳ ತಿಂದು ತೇಗಿಅಂಗುಳ್ಗಂಟ ಕುಡ್ದುಬಿದ್ದು ಪೇಚಾಡ್ತ ಇರದು ಕಾಣ್ತು ಆ ಮಾರನೂ ಅಂಗುಳ್ಗಂಟ ತಿಂದು ಕುಡ್ದುಆ ಅಂಗುಳ್ಳೇ ತೇಗ್ತಹಳ ಬಕೀಟೊಳಗ ಇರಕೊಳ ನೀರ್ಲಿ ಮುಳುಗ್ಸಿಉನಿಯಾಕಿದ್ದ ನನ್ನ ಎತ್ತಿ ಕೆಳಗಿಟ್ಟುಬಾಯ್ಗಿಟ್ಟಿದ್ದ ಬೀಡಿನ ಎಡಗೈಲಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 65 & 66): ಎಂ. ಜವರಾಜ್

-೬೫-ಆ ಆಳು ಬೀದಿಗುಂಟದಾಪಗಾಲಾಕಿ ಓಡ್ಬತ್ತಿರಗಆ ಆಳ್ನೆಡ್ತಿ ತನ್ಸೀರನ ತೊಡ್ಗಂಟ ಗೋರ್ಕಂಡುಆ ಗೋರ್ಕಂಡಿರ ತೊಡಮ್ಯಾಲ ಮಲ್ಗಿರೋಈ ಅಯ್ನೋರ್ ತಲನ ಹಿಡ್ಕಂಡುಬತ್ತ ಇರ ಈ ಅಯ್ನೋರಾಳನ್ನೊ ಗಂಡನ್ನವಾರ್ಗಣ್ಲಿ ನೋಡ್ತಾಈ ಅಯ್ನೋರ್ ತಲನಆ ತೊಡಮ್ಯಾಲಿಂದಮೆಲ್ಮೆಲ್ಗ ಉಸಾರಾಗಿ ಕೆಳಕ ಸರ್ಸಿಆ ಮೋರಿ ಸಂಗ್ಡಿರೊಆ ಭೂಮ್ತಾಯಿ ಮ್ಯಾಲ ಮಲುಗ್ಸಿಈ ಅಯ್ನೋರಾಳನ್ನೊತನ್ನ ಗಂಡುನ್ಗ ತೋರುಸ್ತ ಕಣ್ಣೀರಾಕ್ತ..ಆಗ ಆ ಆಳು ಮಂಡಿ ಊರಿ‘ಅಯ್ನೋರಾ.. ಅಯ್ನೋರಾ..ಇದ್ಯಾಕ.. ಏನಾಯ್ತು..’ ಅನ್ತಗೊಳಗೊಳನೆ ಅಳ್ತ ನಿಂತಿರದಆ ಭೂಮ್ತಾಯಿ ಸಂಗ್ಡ ಇರ ಮೋರಿ ಸಯಿತಕಿಲಕಿಲ ನಗ್ತ ನೋಡ್ತಾ ಗಬ್ಬುನಾತ ಬೀರ್ತಿತ್ತಲ್ಲಾ.. ಆಗ ಈ ಅಯ್ನೋರುಆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 63 & 64): ಎಂ. ಜವರಾಜ್

-೬೩-ದಿನ ಕಳಿತಾ ಊರು ಬಣ್ಗೆಡ್ತಿತ್ತುಚೇರ್ಮನ್ ಗಿರಿನು ಮುಗಿತಾ ಇತ್ತುಬರವ್ರು ನಿಂತ್ರು ಹೋಗವ್ರು ಹೋದ್ರುಮೈನೆರಿದೆ ಇರ ಆ ದೊಡ್ಡವ್ವುನ್ ಮೊಮ್ಮೆಣ್ಣುಮದ್ವ ಆಗಿ ಗಂಡುನ್ ಮನ ಸೇರ್ತುಆದ್ರ ಆ ಆಳ್ ಮಾತ್ರ ಹಂಗೆ ನಗ್ತಾ ನಗ್ತಾಈ ಅಯ್ನೋರ್ ತಿಕುದ್ ಸಂದಿ ಬುಟ್ಟದು ಕಾಣಿಈಗಿರ ಅರ್ಧ ತ್ವಾಟ ಅವ್ನೆಸ್ರುಗ ಖಾತನು ಆಗಿತ್ತುಅನ್ನದು ಗುಟ್ಟಾಗಿ ಉಳಿಯದೇನ್ ಬಂತು… ರಾತ್ರ ಸ್ಯಾನೆ ಹೊತ್ತಾಗಿತ್ತುಆ ಆಳು ಅದ್ಯಾತಿಕ್ಯಾ ಏನಾಈ ಅಯ್ನೋರ್ ಜಗುಲಿ ಮ್ಯಾಲಹೆಡ್ತಿನ ಕುಂಡ್ಸಿ ತ್ವಾಟ್ಕ ಹೋದಂಗಿತ್ತುಆ ಆಳ್ನ ಹೆಡ್ತಿ ಅಯ್ನೊರ್ ಮಾತ್ಗ ನಗ್ತಸೆರುಗು ಜಾರಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 61 & 62): ಎಂ. ಜವರಾಜ್

-೬೧-ಈ ಅಯ್ನೋರ್ ಪಾದಬೀದ್ಬೀದಿಲಿ ತಿರ್ಗಾಡ್ತಿತ್ತುಆ ಪಾದ ತಿರ್ಗಾಡ ಬಿರುಸ್ಗಬೀದ್ಬೀದಿಲಿ ಲಾರಿಗಳು ತಿರುಗ್ತಿದ್ದುಆ ತಿರುಗ್ತಿದ್ದ ಲಾರಿಗಳು ಮಣ್ಸುರ್ಸ್ದುಬರ್ಗುಟ್ಗ ಮೊರ್ಗುಟ್ಗ ಹೋಯ್ತಿದ್ದು ಚೇರ್ಮನ್ನಾಗಿ ವರ್ಸಾಗಿತ್ತುಊರೊಳ್ಗ ಮೋರಿಗಳು ದಿಕ್ಕಾಪಾಲು ಹರಿತಾಬೀದಿ ಯಾವ್ದ ಮೋರಿ ಯಾವ್ದ ಅನ್ನದೇ ತಿಳಿದೆಪುಂಡೆಲ್ಲ ಸೇರಿ ಪಂಚಾಯ್ತಿಲಿ ಗುಲ್ಲೆಬ್ಬಿತ್ತು ಆ ಆಳು ಇದ ಮೊದುಲ್ಗೆ ಹೇಳಿದ್ದಆದ್ರ ಈ ಅಯ್ನೋರುಆ ಆಳ್ ಮಾತ್ನ ಬೀದಿ ಪಾಲ್ ಮಾಡಿನಗಾಡ್ತ ಇದ್ದದ ನಾ ಕಂಡಿದ್ದಿ ಈಗ ಈ ಅಯ್ನೋರ್ ಪಾದ್ಗಳುಬೀದಿ ಬುಟ್ಟು ದೂರಸ್ಟ ನಡ್ದುಜೊತ್ಗ ಆ ಆಳೂಹಿಂದಿಂದ ನಡಿತಾ ಬತ್ತಿದ್ನಸಂದ ಆಯ್ತ ಬಂತುಆಗಆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 59 & 60): ಎಂ. ಜವರಾಜ್

-೫೯-ರಾತ್ರ ಹತ್ತಾಗಿತ್ತೇನೋಊರಲ್ಲಿ ಎದ್ದಿರ ಗಲಾಟಿಈ ಅಯ್ನೋರ್ ಗಮನುಕ್ಕ ಬಂತು ಈ ಗಲಾಟಿ ಯಾಕ ಅನ್ತಅಯ್ನೋರ್ ತಲ ಕೊರಿತಿತ್ತೇನಾಅಸ್ಟೊತ್ಗ ಕುಲೊಸ್ತರು ಬಂದ್ರುಈ ಅಯ್ನೋರು ಜಗುಲಿ ಅಂಚ್ಗ ಕುಂತಿದ್ರು ‘ಅಯ್ನೋಅ ನೀವು ಚೇರ್ಮನ್ ಆದ್ರಿಆದ್ರ ಊರ್ಲಿ ಪುಂಡೈಕ ಹೆಚ್ಚವಊರ್ಲಿ ಚನೈನಬ್ಬ ಮಾಡ್ದಾಗಇದ್ದ ಒಗ್ಗಟ್ಟು ಹೊಂದಾವಣಿಈಗ ಕಾಣ್ದುಒಂದಲ್ಲ ಒಂದು ಗಲಾಟಿಕುಲ ಸೇರ್ಸಿಏನಾರ ಬಿಗಿ ಭದ್ರ ಮಾಡ್ಬೇಕಲ್ಲಾ..’ಅನ್ತ ಕುಲೊಸ್ತರು ವರದಿ ಒಪ್ಸುದ್ರು ಈ ಅಯ್ನೋರು‘ಸುಮ್ ಸುಮ್ನೆ ಈ ಗಲಾಟಿ ಯಾಕ..ಏನನ್ತ ಕುಲ ಮಾಡ್ದರಿಯಾರ್ ಮ್ಯಾಲ ಅನ್ತ ಹೇಳ್ದರಿ’ ಅನ್ತ ಕೇಳುದ್ರು ‘ಅಯ್ನೋರಾ ಕಾಲುನ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 57 & 58): ಎಂ. ಜವರಾಜ್

-೫೭-ತಿಥಿ ಆಗಿ ತಿಂಗ್ಳಾಯ್ತುಈ ಅಯ್ನೋರು ಅಂದ್ಕೊಂಡಂತೆಪಂಚಾಯ್ತಿ ಚೇರ್ಮನ್ರು ಆದ್ರುಈ ನೆಪ ಮುಂದಿಟ್ಕಂಡುಸುತ್ಮುತ್ಲ ಮುಂದಾಳ್ನೆಲ್ಲತ್ವಾಟ್ಗ ಬರೇಳ್ಕಂಡಿದ್ರು ರಾತ್ರ ಆಗಿತ್ತುಆ ಆಳು ಎಲ್ಲಯವಸ್ತಿ ಮಾಡಿದ್ನಎತ್ತಗ ತಿರಿಕಂಡ್ರು ಬಾಡೆಬಾಡುನ್ ಗಮಲೆಯಾರ್ ಕೈಲ್ನೋಡು ಹೆಂಡುದ್ ಬಾಟ್ಲೆಹೆಂಡುದ್ ವಾಸ್ನೆನೆ ಈಗ ಪಂಚಾಯ್ತಿ ಆಳ್ತನ ಎಲ್ಲಈ ಅಯ್ನೋರ್ ಕೈಲೆ ಆಗ ಆ ಚೆಂಗುಲಿಸೋದುರ್ ಮಾವ ಬಂದ ಅನ್ಸುತ್ತಈ ಅಯ್ನೋರು‘ಹ್ಞು ಏನಾ ಇಲ್ಲಿಗಂಟ ಬಂದಿದೈ’ ಅಂದ್ರು‘ಅಯ್ನೋರಾ ಕೇಸು ಏನಾಯ್ತು’‘ನೀನು ಮೈಸೂರ್ ಸಿಟಿಲಿರಂವಕೋರ್ಟು ಲಾಯಿರಿಕಾನೂನ್ ಗೊತ್ತಿರಂವದುಡ್ಡುಕಾಸು ತುಂಬಿರಂವನೀನ್ತಾನೆ ಕಂಪ್ಲೆಂಟ ಕೊಡ್ಸಿಆ ಪರ್ಶುನ ಎಳಿಸ್ದಂವಕಾಲ್ನು ಕಾಲ್ನೆಡ್ತಿನು ಗಲಾಟಿ ಮಾಡಕರಂಪ ರಾದ್ದಾಂತುಕ್ಕ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 55 & 56): ಎಂ. ಜವರಾಜ್

-೫೫-ಓಟಾಗಿ ಎಂಟೊಂಬತ್ದಿನ ಆಗಿತ್ತುಇವತ್ತು ಎಣ್ಕ ಅದನಾಳಿದ್ದು ಕಳ್ದು ಆಚ ನಾಳನೀಲವ್ವೋರ್ ತಿಥಿ ಅದ ಈ ಅಯ್ನೋರು ಆಳ್ಗಳ್ ಬುಟ್ಕಂಡುಸುಣ್ಣನುವ ಗೋಪಿ ಬಣ್ಣನುವಮನಗ್ವಾಡ್ಗ ತುಂಬುಸ್ತಿದ್ರು ಈಗ ಈ ದೊಡ್ಡವ್ವ ಬುಟ್ರ ಯಾರಿದ್ದರು..ಈ ಅಯ್ನೋರ್ಗ ಈ ದೊಡ್ಡವ್ವನೇ ಗತ್ಯಾದ್ಲುಈ ದೊಡ್ಡವ್ವ ಹೇಳ್ದಾಗೇ ಕೇಳ್ಬೇಕುಈ ದೊಡ್ಡವ್ವನ ಮಾತ್ನಂತೆಸತ್ತೋದ ನೀಲವ್ವೋರ ಅವ್ವ ಅಪ್ಪಬಂದುಮಗಳ ನೆನ್ಕಂಡು ಮನ ಕೆಲ್ಸ ಮಾಡ್ತಿದ್ರು ಈಗ ಈ ಅಯ್ನೋರು ದೊಡ್ಡವ್ವನ್ಗ ಹೇಳಿತಾಲ್ಲೊಕ್ಕಚೇರಿ ಕಡ ನಡುದ್ರುಹಿಂಗ ತಾಲ್ಲೊಕ್ಕಚೇರಿ ಕಡ ನಡ್ದಾಗಆ ಆಳು ದಾರಿಲಿ ಸಿಕ್ಕಿಗುಸುಗುಸು ಮಾತಾಡ್ತ ನಡ್ದಹಂಗೆ ಇನ್ನಿಬ್ರು ಬಂದ್ರುತಾಲ್ಲೊಕ್ಕಚೇರಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 53 & 54): ಎಂ. ಜವರಾಜ್

-೫೩-ಮದ್ಯಾನ ಕಳಿತಾ ಕಳಿತಾ ಬಿಸ್ಲು ಇಳಿತಿತ್ತು ತಾಲ್ಲೊಕ್ಕಚೇರಿ ಕಾಂಪೋಡೊತ್ಲಿಚೆಲ್ಲಿಚಪ್ರ ಮರ್ದಲ್ಲಿಹೂವು ಕೆಂಪ್ ಕೆಂಪ್ಗ ತ್ವನ್ಯಾಡ್ತಿತ್ತುಮರುದ್ ಸುತ್ತ ನೆಳ್ಳು ಚೆಲ್ಕಂಡಿತ್ತು.ಮದ್ವ ಮನಲಿ ಚಪ್ರ ಹಾಕ್ಬುಟ್ಟುಚೆಲ್ಲಿಚಪ್ರ ಹೂವ್ನ ಕಟ್ಬುಟ್ಟುನಾಕ್ಮೂಲ್ಗು ಬಾಳಕಂಬ ಕಟ್ಬುಟ್ರಐಕ ಕುಣಿತ ಇರದ ನೋಡಕೆ ಚೆಂದ. ಈ ಅಯ್ನೋರುಆ ಆಳುಇಬ್ರೂ ಬಂದುಒಂದ್ ಒಂದೂವರ ಗಂಟ್ಯಾಗಿತ್ತುಚೆಲ್ಲಿಚಪ್ರ ಮರುದ್ ನೆಳ್ಳಿಇಬ್ರೂ ಕುಂತಿದ್ರು ಆಗ ಸುತ್ಮುತ್ನಹುಣ್ಸೂರು ಕಿರುಗ್ಸೂರು ಆಲ್ಗೂಡ್ನಊರ್ ಮುಂದಾಳ್ಗಳು ಬಂದ್ರುಪೋಲಿಸ್ ವ್ಯಾನ್ಗಳು ಜೀಪ್ಗಳುಎಲಕ್ಷನ್ನು ಅನ್ತ ಊರೂರ್ ಕಡಬರ್ಗುಟ್ಕಂಡು ಹೋಗವು ಹೋಯ್ತಿದ್ದು ಈ ಅಯ್ನೋರು ಎಲ್ರುನು ಬನ್ನಿ ಬನ್ನಿ ಅನ್ತನಗ್ತ ಕರುದು ಕುಂಡ್ರುಂಸ್ಕಂಡುಆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 51 & 52): ಎಂ. ಜವರಾಜ್

-೫೧-ಕಣ್ಬುಟ್ಟಾಗ ತ್ವಾಟುದ್ತುಂಬಜನ ಜಗನ್ಜಾತ್ರ್ಯಾಗಿ ಕಾಣ್ತುಬರೋರು ಬತ್ತನೇ ಅವ್ರಇಡಿ ಊರೇ ಇತ್ತುಈ ಊರೇನುಅಕ್ಕಪಕ್ದ ಊರೋರ್ ಜನಾನು ಕಂಡ್ರು ಆ ಆಳುಆ ಜನ್ಗಳ ಸಂದಿಲಿಅತ್ತಗು ಇತ್ತಗು ಓಡಾಡ್ತ ಇದ್ನ‘ಮಗ ಮಾಡ್ದ ತಪ್ಗ ಅಪ್ಪುನ್ಗ ಶಿಕ್ಷ..’‘ಅಯ್ನೋರೇನ ಅನ್ತ ಈಗ್ಲಾರುಗೊತ್ತಿರ್ಬೇಕು ಪೋಲೀಸ್ರುಗ’‘ಆದ್ರ ಊರಾಳ್ದಂವ್ರು ಅವ್ಮಾನ ಅಲ್ವ’‘ಎಲ್ಯ ನಾ ವಸಿ ನೋಡ್ತಿನಿ ಅಯ್ನೋರಾರಾತ್ರ್ಯಲ್ಲ ಟೇಸನಲ್ಲೆ ಇರುಸ್ಕಂಡಿದ್ರಂತಅಂವ ಶಂಕ್ರ ಇನ್ನು ಸಿಕ್ಕಿಲ್ವಂತನೋಡಕ ಮಂಗ್ಯಾಗಿದ್ನನೋಡು ಎನ್ತ ಕೆಲ್ಸ ಮಾಡನಹೋಗಿ ಹೋಗಿ ಕುಲ್ಗೆಟ್ಟವ್ಳ ಮದ್ವ ಆದ್ನಆಗ್ಲು ಅಯ್ನೋರು ಸಯಿಸ್ಕಂಡ್ರುಕೇರಿನೇ ತಲ ತಗ್ಸ ತರ ಮಾಡುದ್ನಆಗ ಅಯ್ನೋರುಹೆಂಗ್ ನ್ಯಡ್ಕಂಡ್ರು ಅನ್ತ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 49 & 50): ಎಂ. ಜವರಾಜ್

-೪೯-ಬೆಚ್ಚಿದೆಬೆಚ್ಚಿ ಅಂಗಾತ ಕೆಳಕ್ಕೆ ಬಿದ್ದೆದಡದಡದಡಗುಟ್ಟೊ ಗುಡುಗಿಗೆ.‘ಹ್ಹಹ್ಹಹ್ಹಹ್ಹ…ಅನ್ನೊ ಗಹಗಹಿಸೊ ನಗುವೊಂದು.ಅದುರಿದೆ ನಡುಗಿದೆಸೊಂಯ್ಯನೆ ಎರಗಿದ ಮಿಂಚಿಗೆಕಣ್ಣು ಕುಕ್ಕಿತುತಲೆ ಎತ್ತಿದೆಎದುರಿಗೆ ಬೀದೀಲಿಬೆಂಕಿಯ ಜ್ವಾಲೆ ಆಳೆತ್ತರಕೆ‘ಹ್ಹಹ್ಹಹ್ಹ..’ ಮೆಟ್ಟಿನ ನಗು ನನಗೆ ದಿಕ್ಕು ತೋಚದಾಯ್ತುಈ ಮೆಟ್ಟಿನ ಕತೆಎಲ್ಲೊ ಆಗಿ ಎಲ್ಲೊ ಹೋಯ್ತಿದೆ ಈ ಮೆಟ್ಟು‘ಅಲ್ಲಈ ಮಿಂಚ್ಗಈ ಗುಡುಗ್ಗಬೆಚ್ಚಿ ನಡ್ಗದೇನ’ಅಂತ ಹಂಗಿಸೋ ಹಾಗೆ ಅಂತು ನಾನು,‘ನಿನ್ ಕತೆನೆ ಅರ್ಥ ಆಗ್ತಿಲ್ಲಎಲ್ಲೊ ಹೋಗಿ ಎಲ್ಲೊ ಬಂದನಾ ಬೆಚ್ಲುಬಾರ್ದು ಬೆದುರ್ಲುಬಾರ್ದು’ಅಂತಂದೆ.ಅದ್ಕ ಅದು‘ನೀನು ಬೆಚ್ಚಿ ಬೆದ್ರದ ಆಡ್ನಿಲ್ಲಇನ್ನು ಏನಿಲ್ಲ ಯತ್ತಿಲ್ಲಈಗ್ಲೆ ಬೆಚ್ಚದ ಬೆದ್ರದಾ ಅಂದ್ರೇನಾ’ಅಂತ ಮುಲಾಜಿಲ್ದೆ ಕಿಚಾಯ್ಸದಾ..ಥೂ ಅನ್ಸಿ ನಾನೂ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 47 & 48): ಎಂ. ಜವರಾಜ್

-೪೭-ಈ ಅಯ್ನೋರುಈ ಆಳುನ್ ಗುಟ್ಟ ಕಂಡಿರ್ನಿಲ್ಲಸಂದಲಿಈ ಆಳಾಡ್ದ ಮಾತ್ಗಅಯ್ನೋರ್ ತಿಕುದ್ ಸಂದಿಲೆಇರಂಗಾಯ್ತು ‘ಏ ಬಲ ಇಲ್ಲಿ’ತಲ ಕೆರಿತಾ‘ಅಯ್ನೋರಾ’ ಅನ್ತ ಬಂದರಾತ್ರ ಎಂಟೆಂಟುವರೆ ಗಂಟ್ಯಾಗಿತ್ತು.‘ಅದೇನ್ಲ ನಾ ಅನ್ಕಂಡಂಗೆಕಡ್ಡಿ ಮುರ್ದಾಗಿ ಅನ್ಕಡಾ’‘ಆ ಕಾಲುನ್ ಮಗಂವ್ನಲ್ಲಪರ್ಶುರಾಗಿ ಮಿಲ್ತವ್ಶಿವ್ಲಿಂಗಪ್ಪೋರ್ ಜೊತ್ಗ ನಿಂತಿದ್ನಆ ಶಿವ್ಲಿಂಗಪ್ಪೋರು,‘ಏ ಕಾಲುನ್ ಮಗ್ನೆನಿಮ್ಮಯ್ನೋರು ಗೆದ್ದರಾ’ ಅಂದ್ರುಅದ್ಕ ಪರ್ಶು‘ನಾ ಮಾತಾಡಗಿದ್ದ ಬುದ್ದಿಸೋಲ್ಲಿ ಅಂತಾನೆ ನಾನುಅದ್ರ ಗೆಲ್ಲದೆ ಆವಯ್ಯಬುದ್ದಿ ನೀವೆಲ್ಲ ಕೈಕಟ್ಟುದ್ರಏನಾರ ಮಾಡ್ಬೇದು’ಅಂದ ಅಯ್ನೋರಾಅದ್ಕ ಆ ಶಿವ್ಲಿಂಗಪ್ಪೋರು‘ಎಲಕ್ಷನು ಕಸ್ಟ ಕಣಆದ್ರ ಒಂದ್ ಕೆಲ್ಸ ಮಾಡು’ಅಂದ್ರು ಅದ್ಕ ಈ ಪರ್ಶು‘ಹೇಳ್ಬದ್ದಿ ನೀವು ಕಾಲ್ಲಿತೋರುದ್ದ ಕಣ್ಗೊತ್ತಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 45 & 46): ಎಂ. ಜವರಾಜ್

-೪೫-ಈ ಅಯ್ನೋರುತೂರಾಡ್ತ ಬಂದುಮನ ಬಾಗುಲ್ಗ ಕಾಲೂರವತ್ಗಮೂರ್ಗಂಟ ರಾತ್ರಒಳಗ ನೀಲವ್ವೋರು‘ಅಯ್ಯೊ ಉಸ್ಸೊ’ ಅನ್ತನಳ್ಳಾಡದು ಕೇಳ್ತಿತ್ತು ಈ ಅಯ್ನೋರುಬಾಗ್ಲ ತಟ್ಟಿಕಾಲ್ನ ಒದರ ರಬುಸುಕ್ಕನಾ ದಿಕ್ಕಾಪಾಲಾದಿಒಳಕೋದ ಆಸಾಮಿಕೆಮ್ನು ಇಲ್ಲಕ್ಯಾಕುರ್ಸ್ನು ಇಲ್ಲ‘ಇದೇನಯಾಕಿಂಗ ನಳ್ಳಾಡಿಯೆ’ಅನ್ತಕೇಳ್ದ ಮಾತುನಂಗಂತೂ ಕೇಳ್ನಿಲ್ಲ.ಆದ್ರಈ ನೀಲವ್ವೋರು‘ಅಯ್ಯೊ ಉಸ್ಸೊಅಯ್ಯಯ್ಯಪ್ಪಾ’ ಅನ್ತನರಳಾಡದನಂಗ ತಡಿಯಕಾಗ್ದೆ‘ದೊಡ್ಡವ್ವಾ…’ ಅನ್ತನಾನ್ಯಂಗ್ ಕೂಗ್ಲಿ..ಸಂಕ್ಟ ಕಿತ್ತು ಕಿತ್ತು ಬತ್ತಿತು. ಮೊಬ್ಗೆಬಂದೊರ್ಯಾರ ಕಾಣಿಒಬ್ಬೆಂಗ್ಸು ಒಬ್ಬ ಗಂಡ್ಸುನಡ್ಬಾಗುಲ್ಲಿ ಕುಂತ್ರು ಈ ದೊಡ್ಡವ್ವಬಾಗುಲ್ ತಗ್ದುಸದ್ದ ಮಾಡ್ಕಂಡುಈಚ್ಗ ಬಂದುಇತ್ತಗ ನೋಡ್ಬುಟ್ಟುಸಂದಿದಿಕ ಹೋಗಿಮೂತ್ರುಸ್ಬುಟ್ಟು ಬಂದಗಾಯ್ತು. ‘ಕುಸೈ ಇದೇನವ್ವ ಇಸ್ಟೊತ್ಗೆಬಾಣಳ್ಳಿಯಿಂದ ಇಬ್ರೆಎಲ್ಲ ಚಂದಗಿದ್ದರ ಇದೇನ್ ಬಂದ್ರಿ’‘ಅಮೈ ಚಂದಗರಇದೇನಾಗಿದ್ದು ಇವುಳ್ಗಇದ ಇವ್ಳನೋಡಂವ್ ಅನ್ತ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 43 & 44): ಎಂ. ಜವರಾಜ್

-೪೩-ಮದ್ಯಾನ ಮೂರಾಗಿಬಿಸುಲ್ಲಿದ್ರ ಚುರ್ ಅನ್ತನೆಳ್ಗೋದ್ರ ಸಳಿಡ್ಯತರ ಆಗದುಈ ದನುರ್ಮಾಸ್ವೆ ಹಿಂಗೆಲ್ವ ಈ ಅಯ್ನೋರುತ್ವಾಟುದ್ ಮನಲಿಬಿಸುಲ್ಗೊಸಿ ನೆಳ್ಗೊಸಿಎದ್ದು ಬಂದು ಕುಂತ್ಗಳದುಹಿಂಗೆ ಎಡ್ತಾಕರು ಸುಗ್ಗಿ ಈಗಅರ್ಧ ಒಕ್ಣ ಆಗಿಇನ್ನರ್ಧ ಇತ್ತುಕಾಯಮ್ಮಾಗಿ ಚೆಲ್ವಿ ಬರವ ಹಿಂಗಬಿಸುಲ್ಗು ನೆಳ್ಗು ಎಡ್ತಾಕಅಯ್ನೋರ್ ಕಾಲ್ದೆಸಲಿಚೆಲ್ವಿ ಕುಂತ್ಕಂಡು,‘ಅಯ್ನೋರಾ ಸವ್ವಿ ಹೆಂಗಿದಳುಅಂವ ಚೆಂಗುಲಿ ನೋಡಿನಾ..’‘ನೋಡು ಸುಮ್ಗ ಇದ್ಬುಡುಮಾತಾಡಿ ಮಾತಾಡಿಊರ್ಗ ಆರ ಯಾಕಾದೈ’‘ಆರ್ತಿಂಗ ಆಗದ ಮಗಿಗನಂಗ ಜೀವ ಬಡ್ಕತ್ತ ಅಯ್ನೋರಾ’‘ಜೀವ ಬಡ್ಕಂಡುದಾ..ಹೆತ್ಕರ್ಳು ಬಡ್ಕಳ್ದೆ ಇದ್ದಾ..’‘ಅಯ್ನೋರಾ ಒಗ್ಟಾಗಿ ಆಡ್ಬೇಡಿಕರ್ಳು ಕರ್ಳೇ..’‘ಆ ಕರ್ಳ ನಿ ಹೆಂಗ್ ನೋಡ್ಕಬೇಕು,ಕರ್ಳನ್ತ ಕರ್ಳು..ಅವ್ಳ್ ಬಗ್ಗ ಸೊಲ್ಲತ್ಬೇಡಅಂವ ಇಲ್ವ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 41 & 42): ಎಂ. ಜವರಾಜ್

-೪೧- ಮೊಕ್ಕತ್ತಲ ಬೆನ್ನು ನಾ ಇಂಜದಿಂದ ಹಿಂಗೆ ಬೇವರ್ಸಿ ತರ ಆಗಿ ಜಾಗ ಬುಟ್ಟು ಕದ್ಲಿಲ್ಲ ಈ ಅಯ್ನೋರು ಯಾವ್ದೇಶುಕ್ಕೋದ್ರು ಅನ್ನದೆ ಗೊತ್ತಾಯ್ತಿಲ್ಲ ಈ ಕತ್ಲೊಳ್ಗ ಈ ದೊಡ್ಡವ್ವ ಮೆಲ್ ಮೆಲ್ಗ ತಡಕಾಡ್ತ ಬಾಗ್ಲ ತಳ್ಳಿ ‘ಕುಸೈ..’ ಅನ್ತ ಕೂಗ್ದ ನೀಲವ್ವೋರು ಬಂದ್ರು ಅನ್ಸುತ್ತ ಲಾಟೀನ್ ಬೆಳ್ಕು ಈಚ್ಗಂಟ ಕಾಣ್ತು. ‘ಕುಸೈ.. ನಿನ್ಗಂಡ ಬದ್ನಾ’ ‘ಇಲ್ಲ ಕಮ್ಮಾ..’ ‘ನಿಂಗೊತ್ತಾ… ಆ ಕಾಲ್ನೆಣ್ಣು ಸವ್ವಿ ಓಡಗಿದ್ದಂತ’ ಲಾಟೀನ್ ಬೆಳ್ಕು ಒಳಕ್ಕೇ ಹೋದಂಗಾಯ್ತು. ಸರೊತ್ತು. ಊರು ಗಕುಂ ಅನ್ತಿತ್ತು ನಾಯ್ಗಳು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 39 & 40): ಎಂ. ಜವರಾಜ್

-೩೯- ಕುಲ ಸೇರಿತ್ತು ಈ ಅಯ್ನೋರು ಕೆಂಡವಾಗಿದ್ರು ಶಂಕ್ರಪ್ಪೋರು ಕೈಕಟ್ಟಿದ್ರು. ‘ಅಯ್ನೋರಾ, ನೀವಿಲ್ಗ ಬರಂಗೇ ಇರ್ನಿಲ್ಲ ನಾವು ಕುಲ ಸೇರ್ಬೇಕೇ ಇರ್ನಿಲ್ಲ ಆದ್ರ ಕುಲ ಕುಲನೆ ಈ ಕುಲ್ಕ ಬ್ಯಲ ಕೊಟ್ಟು ಬಂದಿದರಿ… ಇಸ್ಟು ಜಿನ್ವು ನೀವೆ ನ್ಯಯ ಮಾಡ್ತಿದ್ರಿ ಆದ್ರ ದೂರು ನಿಮ್ಮನ ಕಡಿಂದ ಅದ ಕುಲ್ದ ನಿಯ್ಮ ಎಲ್ರುಗು ಒಂದೆ ಅನ್ತ ಗೊತ್ತಿರದೆ ಅಲ್ವ. ನಾವು ನಿಮ್ಬುಟ್ಟು ಕುಲ ಮಾಡ್ಬೇಕಾಗಿ ಬಂದುದಾ. ಈ ಕಾರ್ಣ ನಿಮ್ಮ ಕರೆಸ್ಬೇಕಾಯ್ತು, ಕರಸ್ದು.. ನೀವು ಬಂದಿದರಿ ಅದ್ಕ ಈ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 37 & 38): ಎಂ. ಜವರಾಜ್

-೩೭- ಬಾಗ್ಲು ‘ಕಿರ್..’ ಅನ್ತು ನನ್ಗ ಮಂಪ್ರು ನೋಡ್ಬೇಕು ಅಂದ್ರು ಆಯ್ತಿಲ್ಲ ಹಂಗೆ ಕಣ್ಮುಚ್ದಿ ‘ಕಿರ್..’ ಅದೆ ಬಾಗ್ಲು ಸದ್ದು ಇನ್ನೊಂದ್ಸಲ. ಈ ಅಯ್ನೋರು ನಾಟ್ಕ ನೋಡ್ತ ಎದ್ಬಂದಾಗ ಬೆಳುಗ್ಗ ನಾಕತ್ರ ಆಗಿತ್ತು ಈಗ್ತಾನೆ ನಿದ್ದ ಹತ್ತಿತ್ತು ಅರಗಣ್ಣು ಬುಟ್ಟಿ ನೀಲವ್ವೋರು ಕಂಡ್ರು ಅದ್ಯಾಕಾ ಏನಾ ಇವತ್ತು ಸೀಗಕಡ್ಡಿ ಹಿಡಿದೆ ಇಟ್ಗ ಗುಡ್ಡಲಿ ತಿಕ ಊರಿ ಮಂಡಿ ತಬ್ಕಂಡು ಬಿಸುಲ್ಗ ಮುಖ ಕೊಟ್ಗಂಡು ಕುಂತ್ರು. ದೊಡ್ಡವ್ವ ಬಂದು ‘ಕುಸೈ ನೀಲ ಹೆಂಗಿದ್ದಯ್ ನೀ ಯೋಚ್ನ ಮಾಡ್ಬೇಡ ಮೈಯಿಳಿಸ್ಕಂಡದು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 33 & 34): ಎಂ. ಜವರಾಜ್

-೩೩- ಕರಿ ನಾಯಿ ಕಿಂವ್ಞ್ ಕಿಂವ್ಞ್ ಅನ್ತ ಬಾಲ ಅಳ್ಳಾಡುಸ್ತ ಬಂದು ಶಂಕ್ರಪ್ಪೋರ ಕಾಲ್ನೆಕ್ಕಕ ಶುರು ಮಾಡ್ತು ಈ ಶಂಕ್ರಪ್ಪೋರು ಬಂದು ಕುಂತು ಎಸ್ಟೊತ್ತಾಯ್ತು ಈ ಅಯ್ನೋರ್ ನಿದ್ದ ಮುಗಿನೇ ಇಲ್ಲ.. ತ್ವಾಟದ ಬೇಲಿ ಇಣುಕುದ್ರ ಊರೊಳಗ ತಮ್ಟ ಸದ್ದು ಜೋರಾಯ್ತು ಜೊತ್ಗ ಬೆಳಕೂ ಹರಿತು. ಈ ಅಯ್ನೋರು ಈಗ ಈಚ ಬಂದು ಮೈ ಮುರಿತಾ… ಆಕುಳುಸ್ತಾ ಕಣ್ಣಾಡುಸ್ತ ಕಣ್ಣಾಡುಸ್ತ ಕಲ್ಲಾಸಿನ ಮ್ಯಾಲ ಶಂಕ್ರಪ್ಪೋರು ಕುಂತಿರದ ನೋಡುದ್ರು ಈ ಅಯ್ನೋರು, ‘ಹ್ಞು ಈಗ ಗ್ಯಾನ ಬತ್ತಾ’ ‘ನಾನೇನು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 31 & 32): ಎಂ. ಜವರಾಜ್

-೩೧- ಬೀದಿ ದೀಪ್ಗಳು ಇಲ್ದೆ ಊರು ಗವ್ವನ್ನದು ಈ ಅಯ್ನೋರು ಗ್ಯಾನ ಇಲ್ದೆ ಬಿದ್ದಾಗ ಅವ್ರ್ ಕಾಲು ದಿಕ್ಕಾ ಪಾಲಾಗಿ ನಾನು ಮೋರಿ ಪಾಲಾದಿ ಮೋರಿ ಬದಿ ನನ್ ಮೈಮಾರ ಮೆತ್ತಿ ನಿಗುರಿ ನಿಗುರಿ ನೋಡ್ತಿದ್ದಾಗ ನೀಲವ್ವೋರು ಬಾಗುಲು ಸಂದಿಲಿ ಇಣ್ಕುದ್ರು. ಚೆಂಗುಲಿ ಅಯ್ನೋರ ಮೇಲುಕ್ಕೆತ್ತಿ ನಿಲ್ಸಿ ಹೆಗುಲ್ಗ ಕೊಟ್ಗಂಡು ಯಳ್ಕಂಡು ಒಳಕ ತಳ್ಳಾಗ ಒಂದ್ಕಾಲು ಸಿಗಕತ್ತು ಒಳಗಿಂದ ನೀಲವ್ವೋರು ಎಳಿತಿದ್ರ ಈಚ್ಲಿಂದ ಚೆಂಗುಲಿ ತಳ್ತಿದ್ದ ನೀಲವ್ವೋರು ಎಳುದ್ರು ಚೆಂಗುಲಿನು ತಳ್ದ ಆ ದೆಸ್ಗ, ಅಯ್ನೋರು ಒಳಕ್ಕೋದಂಗಾಯ್ತು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 29 & 30): ಎಂ. ಜವರಾಜ್

-೨೯- ಅವತ್ತೊಂದಿನ ಈ ಅಯ್ನೋರು ಹೊಳಕರಲಿ ಕೈಯಿ ಕಾಲು ತೊಳಕಂಡು ನನ್ನೂ- ಮರುಳ್ಗಾಕಂಡು ಉಜ್ಜಿ ತೊಳ್ದು ನೀರಂಜಿ ಮರದ ಬುಡದಲ್ಲಿ ನೀರ ಸೋರಕ ಬುಟ್ಟು ಗರಕ ಮ್ಯಾಲ ತಿಕ ಊರಿ ಕುಂತ್ಮೇಲ ಅಕ್ಕ ಪಕ್ಕ ಊರೋರು ಅನ್ತ ಕಾಣುತ್ತ ನೆಪ್ಪಿರ ಮುಂದಾಳು ಬಂದ್ರು. ನಾನು ನೋಡ್ತನೆ ಇದ್ದಿ ಗಗ್ಗೇಶ್ವರಿ ಆಣ್ಗುಂಟ ಹೊಳ ದಾಟ್ಗಂಡು ಚೆಂಗುಲಿ ಬತ್ತಿರದು ಕಾಣ್ತು ಅವನ ಕಂಕುಳಲ್ಲಿ ಏನಾ ಇತ್ತು. ಬಂದವ ಸುತ್ತ ಕುಂತಿದವ್ರ ಮುಂದ ಟವಲ್ಲ ಹಾಸಿ ಪುರಿ ಸುರುದು ಕಾರಸ್ಯಾವ್ಗ ಕಳ್ಳ … Read more