“ನಾರಾಯಣ” ಕೇವಲ “ಲಕ್ಷ್ಮಿ” ಜಪ ಮಾಡುತ್ತಾ ಕುಳಿತರೆ!!!!: ಪಿ. ಎಸ್. ಅಮರದೀಪ್

ಏಳು ವರ್ಷವಾಯ್ತು. ಅದೊಂದು ದಿನ ಕಛೇರಿ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ. ಅದರ ಹಿಂದಿನ ದಿನ ಸಮಸ್ಯೆಯಾಗಿ ಕೊಪ್ಪಳದ ವೈದ್ಯರ ಬಳಿ ಹೋಗಿದ್ದೆ. “ಯಾವುದಕ್ಕೂ ಕಾರ್ಡಿಯೋ ಎಕೊ ಟೆಸ್ಟ್ ಮಾಡಿಸಿ” ಅಂದಿದ್ದರು. ಅದಕ್ಕೆಂದೇ ವೈದ್ಯರೊಬ್ಬರಲ್ಲಿ ಹೋಗಿದ್ದೆ. ಕಾರಣ ಹೇಳಿದೆ. ಅಲ್ಲಿಗೆ ತಜ್ಞ ವೈದ್ಯರೊಬ್ಬರು ಬಂದು ಬಿಪಿ ಚೆಕ್ ಮಾಡಿದರು. “ಏನ್ರಿ ನೀವು, ಇಷ್ಟು ನೆಗ್ಲೆಕ್ಟ್ ಮಾಡಿದಿರಿ, ನೋಡಿ ಬಿಪಿ ಹೈ ಆಗಿ ನಿಮಗೆ ಮೇಜರ್ ಹಾರ್ಟ್ ಆಟ್ಯಾಕ್ ಆಗಿದೆ “ ಅಂದುಬಿಟ್ಟ… ರೀ ಸ್ವಾಮಿ ಬಿಪಿ ತೀರ … Read more

ಬೇಸಗೆ ದಿನಗಳ ಮುಂಜಾವಿನ ನಡಿಗೆಯಲ್ಲಿ ಕಂಡಂತೆ: ಪಿ.ಎಸ್. ಅಮರ ದೀಪ್

ಬೆಳಿಗ್ಗೆ ಐದೂವರೆಗೆಲ್ಲ ಅಲಾರ್ಮ್ ಹೊಡೆದುಕೊಳ್ಳುತ್ತದೆ. ಇನ್ನೊಂದೈದು ನಿಮಿಷ ಎಂಬಂತೆ ಮಗ್ಗುಲು ಬದಲಿಸಿ ನೋಡುವುದರಲ್ಲೇ ಹತ್ತು ನಿಮಿಷ ದಾಟಿರುತ್ತದೆ. ಎದ್ದು ದೇಹ ವಿಸರ್ಜನೆಗಳನ್ನು ಮುಗಿಸಿ, ಹಲ್ಲುಜ್ಜಿ ಬರ್ಮುಡಾ, ಮೇಲೊಂದು ತೆಳು ಟೀಶರ್ಟ್ ಒಳಗೆ ತೂರಿಕೊಂಡು ಬೈಕ್ ಸ್ಟಾರ್ಟ್ ಮಾಡುವುದರೊಳಗೆ ಒಮ್ಮೆ ಕೃಷ್ಣನಿಗೆ ಕರೆ ಮಾಡುತ್ತೇನೆ. ” ಈಗ ಮನೆ ಬಿಡ್ತಿದೀನಿ ಸರ್” ಅನ್ನುತ್ತಾನೆ. ಅವನು ಸೈಕಲ್ ಏರಿ ಬಂದು, ನಾನು ಬೈಕ್ ನಿಲ್ಲಿಸುವುದಕ್ಕೂ ಹೊಸದಾಗಿ ಲೇ ಔಟ್ ಆದ ಜಾಗದ ಎಂಟ್ರೆನ್ಸ್ ನಲ್ಲಿರುತ್ತೇವೆ. ರಾತ್ರಿ ಪೂರ್ತಿ ಕಾದು, ಬೆವರಿ, … Read more

ಬೀಳ್ಕೊಡುಗೆ ಎಂಬ ಕೊನೆ ಘಳಿಗೆಯಲ್ಲಿ…..: ಪಿ.ಎಸ್.ಅಮರದೀಪ್

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರತರೇನೂ ಅರಿತೆವೇನು ನಾವು ನಮ್ಮ  ಅಂತರಾಳವಾ? ಅನ್ನುವ ಹಾಡನ್ನು ಅದೆಷ್ಟು ಬಾರಿ ಕೇಳಿದ್ದೇನೋ ಕೇಳುತ್ತೇನೋ ಗೊತ್ತಿಲ್ಲ.   ಆದರೆ ಇಡೀ ಹಾಡಿನ ಸಾಲುಗಳು ಮಾತ್ರ ನನ್ನನ್ನು ತುಂಬಾ ಕಾಡಿವೆ, ಕಾಡುತ್ತವೆ.  ಸುಮಾರು ಒಂಭತ್ತು ತಿಂಗಳ ಕಾಲ  ನಾನಿದ್ದ ಪರಿಸ್ಥಿತಿ ಆರ್ಥಿಕವಾಗೇನೂ ಕಷ್ಟಕರವಾಗಿದ್ದಿಲ್ಲ.  ಆದರೆ, ನನ್ನತನವನ್ನು ನಾನು ಎಷ್ಟೇ ಪ್ರಯತ್ನಪಟ್ಟರೂ ಕಾಪಿಟ್ಟುಕೊಳ್ಳುವಲ್ಲಿ ಸೋಲುತ್ತಲೇ ತಾತ್ಕಾಲಿಕವಾಗಿ ಗೆದ್ದ ದಿನದ ಸಂಜೆಗೆ ನನ್ನಲ್ಲಿದ್ದ ಒಟ್ಟು ಅಭಿಪ್ರಾಯ ಕಕ್ಕಿಬಿಟ್ಟೆ.   ನನ್ನದಲ್ಲದ ತಪ್ಪಿಗೆ ಬೇರೆಯವರ ಮಸಲತ್ತಿಗೆ ನನ್ನ ಸ್ಥಾನಪಲ್ಲಟವಾಗಿದ್ದ ದಿನ … Read more

ಒಂದು ಪರ್ಸಿನ ಕತೆ…: ಅಮರದೀಪ್

ಆಗಾಗ ನಾವು ಗಂಡಸರು  ಎದೆ ಮೇಲಿನ ಜೇಬು ಮುಟ್ಟಿ ನೋಡಿಕೊಳ್ಳುತ್ತೇವೆ. ಖಾತರಿಯಾದರೆ ಸಮಾಧಾನ; ಮೊಬೈಲ್ ಇದೆ ಅಂತ. ಪ್ಯಾಂಟಿನ ಹಿಂಬದಿಯ ಜೇಬು ಮುಟ್ಟುತ್ತೇವೆ.ಪರ್ಸ್ ಇದೆಯಾ?! ಇಲ್ಲವಾ?!! ಅಂತ.  ಎದೆ  ಜೇಬಿನಲ್ಲಿ ಮೊಬೈಲ್ ಬಿಟ್ಟು ಚೀಟಿ ಚಪಾಟಿ,  ವಿಸಿಟಿಂಗ್ ಕಾರ್ಡ್, ಪೆಟ್ರೋಲ್ ಹಾಕಿಸಿದ ಬಿಲ್ಲು, ಎಟಿಎಂ ನಲ್ಲಿ ದುಡ್ಡು ಡ್ರಾ ಮಾಡಿದ ಪ್ರಿಂಟೆಡ್ ರಸೀತಿ, ಮೆಡಿಕಲ್ ಶಾಪಿಗೆ ಹೋಗಲೆಂದು ಇಟ್ಟುಕೊಂಡ ಡಾಕ್ಟರ್ ಬರೆದುಕೊಟ್ಟ ಗುಳಿಗೆ ಚೀಟಿ.. ಹಾಳು ಮೂಳು ಎಲ್ಲವನ್ನು ತುರಿಕೊಂಡಿರುತ್ತೇವೆ…  ದುಡ್ಡೊಂದನ್ನು ಬಿಟ್ಟು. ಪರ್ಸಿನ ಕತೆಯೂ ಹಾಗೇ… … Read more

“ಕುಮಾರ” ಹೆಸರಿನ ದೊಡ್ಡ ಮನಸಿನವರು…..”: ಅಮರದೀಪ್

ಬಹುಶ: ನಾನಿದ್ದ ಗೊಂದಲದ ದಿನಗಳಲ್ಲಿ ಇವರಿಬ್ಬರ ಪರಿಚಯ ಸ್ನೇಹವಾಗದಿದ್ದರೆ ಇನ್ನಷ್ಟು ಗೊಂದಲಕ್ಕೆ ಬೀಳುತ್ತಿದ್ದೆನೇನೋ. 1998ರಲ್ಲಿ ವರ್ಗಾವಣೆಗೊಂಡು ನಾನಿದ್ದ ಕಛೇರಿಗೆ ಬಂದವರೊಬ್ಬರು ವಿಹಾರ್ ಕುಮಾರ್. ಎ. ಅಂತ. ಇನಿಷಿಯಲ್ “ಎ” ಅಂದರೆ ಏನೆಂದು ನನಗೂ ಗೊತ್ತಿರಲಿಲ್ಲ. ನಂತರ ತಿಳಿದದ್ದು, ಎ ಅಂದರೆ ಆವುಲ ಅಂತ. ತೆಲುಗಿನಲ್ಲಿ ಆವುಲ ಅಂದರೆ ಆಕಳಂತೆ. ಥೇಟ್ ಆಕಳಂತೆಯೇ ಸ್ವಭಾವದ ವ್ಯಕ್ತಿ ಅವರು. ಬಂದ ಕೆಲವೇ ದಿನಗಳಲ್ಲಿ ನನಗೆ ತುಂಬಾ ಹಳೆಯ ಸ್ನೇಹಿತರಂತಾದರು. ನೋಡಿದರೆ ನನಗೂ ಅವರಿಗೂ ಇಪ್ಪತ್ತೆರಡು ವರ್ಷಗಳ ಅಂತರದ ವಯಸ್ಸು. ಆದರೆ, … Read more

“ಮರಳಿ ಮನಸಾಗಿದೆ…”: ಪಿ.ಎಸ್. ಅಮರದೀಪ್

ಅಂತೂ ಎರಡು ಸಾವಿರದ ಇಪ್ಪತ್ತೊಂದೂ ಪರೀಕ್ಷೆ ಇಲ್ಲದೇ ಮುಗಿದು ಹೋಯಿತು; 2020ರಂತೆ. ಕಳೆದ ವರ್ಷ ಮಗ ಒಂಭತ್ತನೇ ಕ್ಲಾಸಿನಲ್ಲಿದ್ದ. ಅರ್ಧ ಪರೀಕ್ಷೆಗಳೂ ಮುಗಿದಿದ್ದವು, ಇನ್ನೊಂದೆರಡು ಪರೀಕ್ಷೆ ಮುಗಿದಿದ್ದರೆ ಬರೆದ ಖುಷಿಯಾದರೂ ಇರುತ್ತಿತ್ತು. ಅದಾಗಲಿಲ್ಲ. ಪೀಡೆ ಕರೋನಾ ತಗುಲಿಕೊಂಡಿತು. 2019ರ ಡಿಸೆಂಬರ್ ನಲ್ಲಿ ಶಾಲಾ ವಾರ್ಷಿಕೋತ್ಸವದ ದಿನ ನನ್ನ ಮಗ ಮತ್ತವನ ತಂಡ ಡಾನ್ಸ್ ಮಾಡ್ಕೊಂಡು ಖುಷಿಯಾಗಿ ಕಳೆದಿದ್ದರು. ಪರೀಕ್ಷೆಯೂ ಇಲ್ಲ. ಸರಾಸರಿ ಮೇಲೆ ಪಾಸೂ ಆಗಿಬಿಟ್ಟ. ಆದರೆ, ಅವನಿಗೆ ಒಂದಾಸೆ ಇತ್ತು. ಮುಂದಿನ ವರ್ಷ ಹತ್ತನೇ ತರಗತಿ … Read more

ಪ್ರೊಫೆಷನಲ್ ಅಲ್ಲದ ಫೋಟೋಗ್ರಾಫರ್ ನ ಒಂದು ಪ್ರಸಂಗ…: ಪಿ.ಎಸ್. ಅಮರದೀಪ್.

ಸಮಾರಂಭದ ಊಟಕ್ಕೆ ಮುಂಚೆ ಬಾಳೆ ಎಲೆಯಲ್ಲಿ ಉಪ್ಪು, ಕೋಸಂಬರಿ, ಉಪ್ಪಿನಕಾಯಿ ಮುಂಚೆಯೇ ನೀಡುವ ಅಭ್ಯಾಸ ಎಷ್ಟರಮಟ್ಟಿಗೆ ಇದೆಯೋ ಹಾಗೆಯೇ ಒಂದು ಕಾರ್ಯಕ್ರಮ, ಅದರಲ್ಲೂ ಕೌಟುಂಬಿಕ ಕಾರ್ಯಕ್ರಮ ಅಂದರೆ ನಿಶ್ಚಿತಾರ್ಥ, ಹರಿಶಿಣ ಶಾಸ್ತ್ರ, ಮದುವೆ, ರೆಸೆಪ್ಷನ್ನು, ಸೀಮಂತ‌ ಕಾರ್ಯ, ನಾಮಕರಣ ಶಾಸ್ತ್ರ, ಹೀಗೆ ಯಾವುದೇ ಇರಲಿ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಅವರಂತೂ ಊರ ಮುಂಚಿತವಾಗಿ ರೆಡಿಯಾಗಿರಬೇಕು.. ಈಗೀಗಂತೂ ಎಲ್ಲದಕ್ಕೂ ಪ್ರೀ ಮತ್ತು ಪೋಸ್ಟ್ ಫೋಟೋ ಶೂಟ್ ಟ್ರೆಂಡ್ ಶುರುವಾಗಿದೆ. ಮೊದಲು‌ ಹೇಳಿದ್ನಲ್ಲ? ಆ ಎಲ್ಲಾ ಕಾರ್ಯಕ್ರಮಗಳದ್ದೂ ಪ್ರೀ ಮತ್ತು ಪೋಸ್ಟ್ … Read more

ಜೇನು ಮುಟ್ಟಿ ತುಟಿ ಕಚ್ಚಿಸಿಕೊಂಡಂತೆ: ಪಿ.ಎಸ್. ಅಮರದೀಪ್.

ಗಡಿನಾಡ ಊರುಗಳಲ್ಲಿರುವ ಒಂದು ಉಪಯೋಗವೆಂದರೆ, ಅದು ಒಂದಕ್ಕಿಂತ ಹೆಚ್ಚು ಭಾಷಾ ಕಲಿಕೆ ಮತ್ತು ಸರಾಗವಾಗಿ ಮಾತಾಡುವ ರೂಢಿಯಾಗುವುದು. ಕನ್ನಡ – ತೆಲುಗು, ಕನ್ನಡ-ತಮಿಳು, ಕನ್ನಡ-ತುಳು, ಕನ್ನಡ- ಮರಾಠಿ, ಹೀಗೆ. ಅದಲ್ಲದೇ ಹಿಂದಿ ಉರ್ದು ಕೂಡ. ಚೂರು ಇಂಗ್ಲೀಷು ಬೆರೆತರಂತೂ ಬಹುಭಾಷಾ ವಿದ್ಯೆ. ಅಂಥದೊಂದು ಸೌಕರ್ಯ ನಮ್ಮ ಭಾಗದಲ್ಲೂ ಇದೆ. ಬಳ್ಳಾರಿ ರಾಯಚೂರು ಆಂಧ್ರ ಸೀಮೆಯ ಅಂಚಿನಲ್ಲಿರುವುದರಿಂದಲೂ ಜೊತೆಗೆ ತಮಿಳುನಾಡು ಆಂಧ್ರದಿಂದ ತುಂಗಭದ್ರ ಆಣೆಕಟ್ಟು ನಿರ್ಮಾಣ ಹಂತದಲ್ಲಿಂದ ಬಂದು ಸೆಟ್ಲ್ ಆದಂಥ ತಮಿಳಿಗರು, ತೆಲುಗರು ಇಲ್ಲೇ ನೆಲೆ ಊರಿರುವುದರಿಂದ … Read more

ಎ.ಟಿ.ಎಂ. ನಲ್ಲೊಂದು ದಿನ……: ಪಿ.ಎಸ್. ಅಮರದೀಪ್

“ಥೋ…….. ನಮ್ದೇನ್ ಕರ್ಮನಪ್ಪ… ಎಸೆಲ್ಸಿ ಕಂಡೋರ್ ಕೈಲಿ ಪರೀಕ್ಷೆ ಬರೆಸಿ ಪಾಸಾಗಿ ಅವರಪ್ಪನ ನೌಕ್ರೀನ ಅಯ್ಯೋ ಪಾಪ ಅಂತ ಅನುಕಂಪದ ಆಧಾರದ ಮೇಲೆ ತಗಂಡಿದ್ದೇ ಬಂತು… ಒಂದ್ ಸೆಂಟೆನ್ಸ್ ಇಂಗ್ಲೀಷು, ಒಂದ್ ಸೆಂಟೆನ್ಸ್ ಕನ್ನಡಾನ ಒಂದು ಸ್ಪೆಲಿಂಗ್ ಮಿಸ್ಟೇಕ್ ಇಲ್ದೇ ಒಂದಕ್ಷರ ತಪ್ಪಿಲ್ದೇ ಬರೆಯೋಕ್ ಯೋಗ್ತೆ ಇಲ್ದಂತವರಿಗೆ ಎಲ್ಡೆಲ್ಡ್ ಪ್ರಮೋಷನ್ನೂ, ದೊಡ್ಡ ಹುದ್ದೆ ಬೇರೆ ಕೇಡು.. ಅಂತ ಹೆಬ್ಬೆಟ್ಟು “ಎಲ್ಲಪ್ಪ”ನಿಗೆ ನಾವು ಕೊಳ್ಳಿಗೊಂದ್ ಹಾರ ಹಾಕಬೇಕು… ಸ್ವೀಟು, ಖಾರ ತಂದು ಪುಗಸಟ್ಟೆ ಬಹುಪರಾಕ್ ಹೇಳಿ, ಚಪ್ಪಾಳೆ ತಟ್ಟಿ … Read more

ಬದುಕು ಮಾಯದ ಆಟ…: ಪಿ.ಎಸ್.ಅಮರದೀಪ್.

ಇದೇನ್  ಕಾಕಾ, ಯಾಕೆ ಹೀಗೆ ಮಾಡಿದ್ರಿ?  ಏನಿತ್ತು ಅಂಥ ಅವಸರ.  ಇನ್ನೂ ಒಂದಿಷ್ಟು ಹುಡುಗರಿಗೆ ದುಡಿಯುವ ದಾರಿ ತೋರಿಸಿ ಅವರಿಗೆ ಜೀವನ‌ದ ಪಾಠ ಹೇಳಿಕೊಡವುದು ಬಾಕಿ ಇತ್ತು.  ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಅದೇಗೆ‌ ದುಡಿಸಿಕೊಳ್ಳುವುದು‌ ಎನ್ನುವುದರ ಬಗ್ಗೆ ನಿಮ್ಮಿಂದ ನೋಡಿ ನಮ್ಮಂಥವರಿಗೆ ಕಲಿಯುವುದೂ ಇತ್ತು.  ಬಹಳ ಆತುರ ಪಟ್ಟು ಹೊರಟಿರಿ… ಮೊದಲೆಲ್ಲಾ ನೀವು ಪಕ್ಕಾ ಪ್ಲಾನ್ ಮಾಡುತ್ತಿದ್ದಿರಿ.. ಯಾವ ವಯಸ್ಸಿನಲ್ಲಿ ಎಷ್ಟು ಕಷ್ಟ‌ಪಡಬೇಕು, ಎಷ್ಟು ದುಡಿಯಬಹುದು, ಏನೆನೆಲ್ಲಾ ಕೆಲಸ ಮಾಡಲು ನಮಗೆ ಅವಕಾಶ ಇವೆ.. ಯಾರೆಲ್ಲಾ ಏನೇನು‌ ಕೆಲಸ ಮಾಡಬಲ್ಲರು? ಯಾರಿಂದ ಯಾವ ಮತ್ತು  ಎಷ್ಟು ಕೆಲಸ ಪಡೆಯಬಹುದು ಹೀಗೆ…  ಅದ್ಯಾಕೆ … Read more

ಕತ್ತಲು ಬೆಳಕಿನ ಹೊಯ್ದಾಟದಲ್ಲಿ ತೆರೆದ ಪತ್ರ ಪುಟಗಳು: ಪಿ.ಎಸ್. ಅಮರದೀಪ್.

ಮೂರು ದಿನದ ಹಿಂದೆ ಮನೆಯಲ್ಲಿ ಬೀಳುವ ಎಳೆ ಬಿಸಿಲಿಗೆ ಕುಳಿತ ಮಗನ ಮುಖದ ಮೇಲೆ ಕಿರಣಗಳು ಫಳಫಳಿಸುತ್ತಿದ್ದವು. ಅವನ ಮುಂದೆ ಫೈಬರ್ ಛೇರ್ ನೊಳಗೆ ಇಣುಕುವ ತುಂಡು ತುಂಡು ಚೌಕಾಕಾರದ ಕತ್ತಲು ಅವನ ಮುಖದ ಮೇಲಿತ್ತು. ತಕ್ಷಣವೇ ಕ್ಯಾಮೆರಾ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿದೆ. ಬ್ಯಾಕ್ ಟು ಬ್ಯಾಕ್ ನನಗೆ ಕತ್ತಲು ಬೆಳಕಿನ ಚಿತ್ರ ತೆಗೆವ ನನ್ನ ಕುತೂಹಲದ ಕಡೆ ಗಮನ ತೇಲಿತು. ಯಾಕೆ ನಾನು ಈ ಕತ್ತಲು ಬೆಳಕಿನ ಚಿತ್ರಗಳ ಸೆಳೆತಕ್ಕೆ ಬಿದ್ದೆ? ಯಾವಾಗಿನಿಂದ ಈ ಫೋಟೋ … Read more

ನೀನು ನೀನೇ ಎಂದವರ ನಡುವೆ: ಅಮರ್ ದೀಪ್

ಸಂಗೀತಕ್ಕೆ ವಯಸ್ಸಿನ ಹಂಗಿಲ್ಲ ಕಲಿಯಲಾಗಲಿ, ಕೇಳಿ ಖುಷಿಪಡಲಾಗಲಿ…. ನಾನಂತೂ ಸಮಯ ಸಿಕ್ಕಾಗಲೆಲ್ಲಾ ಸಂಗೀತವನ್ನು ಆಸ್ವಾದಿಸದೇ ಇರಲಾರೆ.  In fact ನನ್ನ ದು:ಖವನ್ನು ನೀಗಿಸುವುದೂ ಸಂಗೀತವೇ ಮತ್ತು ನನ್ನ ದಟ್ಟ ದರಿದ್ರ, ಸೋಮಾರಿತನದಿಂದ “ಎದ್ದೇಳಾ, ನಿನ್ನ ಸೋಮಾರಿತನಕ್ಕಿಷ್ಟು ಬೆಂಕಿ ಹಾಕ” ಎಂದು ಮತ್ತೆ ಮತ್ತೆ ಪುನಶ್ಚೇತನಗೊಳಿಸುವುದೂ ಸಂಗೀತವೇ…  ಇವತ್ತು, ಬಿಡಿ ಇವತ್ತಲ್ಲ ಸುಮಾರು ಮೂರು ತಿಂಗಳಾಯ್ತೇನೋ ಮಧ್ಯಾಹ್ನ ಊಟಕ್ಕೆ ಹೊರಡಬೇಕೆಂದರೆ ಸಾಕು, ಯಾಕಾದ್ರೂ ಊಟದ ಸಮಯವಾಗುತ್ತೋ? ಯಾವ ಖಾನಾವಳಿಯ ಸೋಡಾ ಹಾಕಿದ ಅನ್ನ ತಿನ್ನಬೇಕೋ… ಹೊಟ್ಟೆ ಕೆಡಿಸಿಕೊಳ್ಳಲು? ಎಂದು … Read more

ಯೋಗ್ಯತೆ ಇಲ್ಲದವರದೂ ಒಂದು ಯೋಗ: ಅಮರದೀಪ್ ಪಿ.ಎಸ್.

ರೈಲ್ವೆ ಸ್ಟೇಷನ್ ನಿಂದ ಹೊರಗೆ ಬಂದರೆ ಗೌಜೋ ಗೌಜು. ಚಾಯ್ ವಾಲಾಗಳ ಸ್ಟಾಲುಗಳು, ಗಿಜಿಗಿಜಿ ರಸ್ತೆ, ಬದಿಯಲ್ಲಿ ತಳ್ಳುಗಾಡಿಗಳನ್ನು ಬೆಳಿಗ್ಗೆಯಿಂದ ಸಂಜೆವರೆಗೂ ತಳ್ಳಿಯೇ ಜೀವ ಮೆತ್ತಗಾದವರ ಬದುಕನ್ನು ಢಾಳಾಗಿ ಬಿಂಬಿಸುತ್ತದೆ… ಎರಡುವರೆ ಅಡಿ ಜಾಗ ಸಿಕ್ಕುಬಿಟ್ಟರೆ ಸಾಕು, ಬೀಡಿ ಸಿಗರೇಟು ಮಾರಿಯಾದರೂ ಹೆಂಗೋ ಬದುಕು ಸಾಗುತ್ತದೆನ್ನುವ ನಿರೀಕ್ಷೆಯ ಮುಖಗಳು… ದಾರಿಗುಂಟ ರೈಲಲ್ಲಿ ಬ್ಯಾಗನ್ನೇ ಕಳೆದುಕೊಂಡ ಜೋತುಬಿದ್ದ ಕಣ್ಣುಗಳು.. ಪರ್ಸು, ದುಡ್ಡು ಇರಲಿ ಜೊತೆಗಿದ್ದವರೇ ಕಾಣದ ಊರಲ್ಲಿ ಇಳಿಸಿ ಮರೆಯಾದವರನ್ನು , ಅವರ ಅಡ್ರೆಸ್ಸನ್ನೂ ಹೇಳಲು ತಡಬಡಾಯಿಸುವ ಅತ್ತ … Read more

ಒಮ್ಮೆ ನನ್ನನ್ನೂ  ಕಣ್ತುಂಬಾ ಕಾಡುವಾಸೆ ನಿನ್ನಲ್ಲಿ: ಅಮರದೀಪ್ ಪಿ.ಎಸ್.

ರಾತ್ರಿ ಮಲಗುವ ಮುನ್ನ ಬೆಳಿಗ್ಗೆ ಕರೆಕ್ಟಾಗಿ ಐದುವರೆಗೆಲ್ಲಾ ಎದ್ದುಬಿಡಬೇಕು.. ಅಲಾರ್ಮ್ ಇಡಬೇಕು ಅಂದುಕೊಂಡವನು ಮರೆತೆ. ಆದರೆ ನಿದ್ದೆಗೆ ಜಾರುವ ಮುಂಚೆ ತಲೆಯಲ್ಲಿತ್ತಲ್ಲ, ಅಂದುಕೊಂಡದ್ದು ನಿಖರವಾಗಿತ್ತು.  ಸರಿಸುಮಾರು ಒಂಭತ್ತು ತಿಂಗಳ ನಂತರ ವಾಕಿಂಗ್ ಹೋಗಬೇಕು,   ಅವಳು ಹೇಳಿದ್ದಳಲ್ಲ? ಒಂದಷ್ಟು ಯೋಗಾಭ್ಯಾಸ ಮಾಡಬೇಕು… ಹೂಂ… ಅಂದದಷ್ಟೇ ನಿಜ.  ಎದ್ದೇಳಲು ಮತ್ತದೇ ಸೋಮಾರಿತನ. ಎದ್ದ ನಂತರದ ಹಳಹಳಿ. ಅದಕ್ಕೆ ಪ್ರಾಯಶ್ಚಿತ್ತವಿಲ್ಲ….  ಹಾಗೇ ನಿದ್ದೆಗೆ ಜಾರಿಯೂ ಬಿಟ್ಟೆ…   ಥಟ್ಟನೇ ಎಚ್ಚರಾಗಿ  ಮೊಬೈಲ್ ನೋಡಿದರೆ ಆಗಲೇ ಐದು ಗಂಟೆ ಮೂವತ್ತು ನಿಮಿಷ. ಎದ್ದವನೇ  ಕ್ರಿಯಾಕರ್ಮಗಳನ್ನು … Read more

ಕಡು ಪ್ರೀತಿಯ ಎದೆಯಲ್ಲಿ ಮತಾಪು ಸಿಡಿದ ಸದ್ದು: ಅಮರದೀಪ್

ಅದೊಂದು ಸಂಜೆ ಮುಳುಗಿ ಕತ್ತಲಾವರಿಸುತ್ತಿದ್ದಂತೆ ಅವನು ಮನೆಯಲ್ಲಿ ಯಾಕೋ ಇರುಸುಮುರುಸುಂಟಾಗಿ ತೇರು ಬಯಲಲ್ಲಿ ಬಂದು ಕುಳಿತ. ನೋಡಿದರೆ ಮನೆಯಲ್ಲಿ ಲಕ್ಷ್ಮಿ ಪೂಜೆ… ಉಳಿದವರಿಗೆ ದೀಪಾವಳಿ ಹಬ್ಬ. ಈ ಹಬ್ಬಗಳೆಂದರೆ ಇವನಲ್ಲಿ ಖುಷಿಗಿಂತ ಒಂಟಿತನವೇ ಆವರಿಸುತ್ತದೆ. ಮೊದಲಿಂದಲೂ ಅಷ್ಟೇ. ಕಾರಣ ಏನಂತ ಅವನಿಗೂ ಗೊತ್ತಿಲ್ಲ. ಬಹುಶಃ ಚಿಕ್ಕವನಿದ್ದಾಗಿನ ಮನೆಯ ಬಡತನ, ಅವರಿವರಲ್ಲಿ ಕೇಳಿ ಪಡೆದು ಮತಾಪು ಸುಡುವಾಗಿನ ಹಿಂಜರಿಕೆ ಏನೋ ಇರಬಹುದಾ? ಅವನಿಗೂ ಸ್ಪಷ್ಟವಿಲ್ಲ. ಆದರೆ ಬೆಳೆಯುತ್ತಾ ದೇವರು, ದೇವರ ಮನೆ, ಕೈ ಮುಗಿಯುವುದು, ಬೇಡಿಕೊಂಡು ಗಲ್ಲ ಬಡಿದುಕೊಳ್ಳುವುದೆಲ್ಲಾ … Read more

ಹಸಿರು ಸೀರೆ ಉಟ್ಟು ನೆರಿಗೆ ಒದೆಯುತ್ತಾ ನಡೆದ ಹುಡುಗಿಯರು: ಅಮರದೀಪ್

ಇದು ಮಳೆಗಾಲವಾ? ಅನುಮಾನವಾಯಿತು. ಕಡು ಬೇಸಿಗೆಗಿಂತ ಧಗೆಯಾದ ವಾತಾವರಣ. ಮಳೆಗಾಲವೇ ಹೀಗೇ… ಇನ್ನು ಬೇಸಿಗೆ ಹೇಗೆ? ಎನ್ನುವ ಆತಂಕ ಬೇರೆ. ಆಗಾಗ ಆಯಾಸ, ಸುಸ್ತು, ಚೂರು ರೆಸ್ಟ್ ಬೇಕು ಎನ್ನುವ ವಯಸ್ಸು ನಾವು ಹರೆಯದಿಂದ ಇಪ್ಪತ್ತು ಇಪ್ಪತ್ತೈದು ವರ್ಷಗಳನ್ನು ದಾಟಿ ಮುಂದೆ ಬಂದಿದ್ದೇವೆನ್ನುವುದಕ್ಕೆ ಮತ್ತು ಗಂಭೀರತೆ, ತಿಳುವಳಿಕೆಯಿಂದ, ಘನತೆಯಿಂದ ಇರಲೇಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತದೆ. ಯಾವಾಗ ಮಳೆ ಬರುತ್ತದೋ, ಮತ್ತೆ ಬಿಸಿಲು ಸುರಿಯುತ್ತದೋ ತಿಳಿಯುವುದಿಲ್ಲ. ಪ್ರತಿ ದಿನ ಆಫೀಸ್, ಮನೆ, ಮಾರ್ಕೆಟ್ಟು, ಕೊನೆಗೆ ತಲೆಕೆಟ್ಟು ಹೋದರೆ ಒಂದು ಸಿನಿಮಾ, … Read more

ಚೆಂದನೆ ಗಡಿಯಾರ ಮತ್ತು 4.20 ಸಮಯ: ಅಮರದೀಪ್.ಪಿ.ಎಸ್.

ಮನುಷ್ಯನಿಗೆ ಸಮಯ ಅನ್ನೋದು ಅಮೂಲ್ಯ. ಈ ಕ್ಷಣ ಕಳೆದುಕೊಂಡರೆ ಅದನ್ನು ಮತ್ತಿನ್ನೆಂದೂ ಪಡೆಯಲು ಸಾಧ್ಯವಿಲ್ಲ. ಬಹಳಷ್ಟು ಸಾಧಕರು ಸಮಯವನ್ನು ತಮ್ಮ ತಮ್ಮ ಕೌಶಲ್ಯ, ಕ್ರಿಯೇಟಿವಿಟಿಗೆ, ನೈಪುಣ್ಯತೆಗೆ ಓರೆ ಹಚ್ಚುವ ಗೀಳಿಗೆ ಹಠಕ್ಕೆ ಬಿದ್ದು ಬಳಸಿಕೊಳ್ಳುತ್ತಾರೆ. ಇರುವ ಇಪ್ಪತ್ನಾಲ್ಕು ಗಂಟೆಯಲ್ಲಿ ಹದಿನೆಂಟು ತಾಸು ಕೆಲಸ ಮಾಡುತ್ತಲೇ, ಓದು, ಬರಹ, ಸಂಗೀತ, ಸುತ್ತಾಟ, ಗೆಳೆಯರು, ಹರಟೆ ಎಲ್ಲವನ್ನೂ ಹದವಾಗಿ ಅನುಭವಿಸಿ ಖುಷಿಯಿಂದಿರುವ ಎಷ್ಟು ಜನರಿಲ್ಲ ಹೇಳಿ? ಬಾಲ್ಯದಲ್ಲಿ ನನ್ನದೊಂದು ಅಂದಾಜೇ ಇರದ ದಿನಗಳಿದ್ದವು. ಆ ಸಮಯದಲ್ಲಿ ನನ್ನ ಮನಸ್ಸಿಗೆ ನೋವಾಗುವಂಥ … Read more

ಅಚ್ಚೊತ್ತಿದಂಥ ಪ್ರೀತಿಗಾಗಿ ಕಂದುಬಣ್ಣದ ಕಣ್ಣಿನ ಟ್ಯಾಟೋ…..: ಪಿ.ಎಸ್. ಅಮರದೀಪ್.

ತುಂಬಾ ನಿಸ್ತೇಜವಾದವು ಕಣ್ಣುಗಳು. ರಣ ಬಿಸಿಲಿಗೋ, ಮನಸ್ಸು ಉಲ್ಲಾಸ ಕಳೆದುಕೊಂಡಿದ್ದಕ್ಕೋ ಗೊತ್ತಿಲ್ಲ. ಅಂತೂ ಕಣ್ಣುಗಳಲ್ಲಿ ಸೋತ ಭಾವ. ನೋಡುತ್ತಿದ್ದರೆ ಏನೋ ಚಿಂತೆಯಲ್ಲಿ ಮುಳುಗಿದನೇನೋ ಅನ್ನಬೇಕು. ಕಣ್ಣ ಕೆಳಗೆ ಕಪ್ಪು ಕಲೆ, ಚರ್ಮ ಸುಕ್ಕು, ತುಟ್ಟಿಯೂ ಕಪ್ಪಿಟ್ಟಂತೆ. ಸಿಗರೇಟು ಅತಿಯಾಗಿ ಸೇದುತ್ತಿದ್ದನಾ? ಅಥವಾ ಲೇಟ್ ನೈಟ್ ಪಾರ್ಟಿನಾ? ಅಳತೆ ಮೀರಿದ ಕುಡಿತವಾ? ನೇರವಾಗಿ ಕೇಳಿಬಿಡಲಾ? ಊಹೂಂ, ಕೇಳಿದರೆ ಅದಕ್ಕಿಂತ ದೊಡ್ಡ ಬೇಸರ ಮತ್ಯಾವುದು ಅವನಿಗಾಗದು. ಹೀಗೆ ಕಂಡಾಗಲೆಲ್ಲಾ “ಏನ್ಸಾರ್, ಯಾಕೋ ತುಂಬಾ ಸೊರಗಿದಿರಾ! ಹುಷಾರಿಲ್ವಾ?” ಅಂತ ಬೇರೆಯವರು ಕೇಳೋದು, … Read more

ಸನ್ಮಾನಗಳು ಸಣ್ಮಾನಗಳಾಗಬಾರದಷ್ಟೇ..: ಪಿ.ಎಸ್. ಅಮರದೀಪ್

ಸಾಧನೆಗೆ ಹಲವು ಮುಖಗಳಿರುತ್ತವೆ. ಸಾಧಕರಿಗೆ ನೂರು ಯೋಚನೆಗಳಿರುತ್ತವೆ. ಒಂದು ಯೋಚನೆ ನೂರು ಸಾಧಕರನ್ನು ಸೃಷ್ಟಿಸಬಲ್ಲದು. ಅಂತಹ ಸಾಧನೆಗಳನ್ನು ಯಾರಾದರೂ ಕೇವಲ ಪ್ರಚಾರಕ್ಕಾಗಿ ಮಾಡಿರುವುದಿಲ್ಲ. ಒಂದೊಳ್ಳೆ ಉದ್ದೇಶವಿಟ್ಟುಕೊಂಡೇ ಪರಿಶ್ರಮದ ಹಾದಿ ತುಳಿದಿರುತ್ತಾರೆ. ನಾವು ಇಲ್ಲಿಯವರೆಗೂ ಕಣ್ಣೆದುರಿಗೆ, ಸುದ್ದಿ ಮೂಲಕ, ದೃಶ್ಯ ಮಾಧ್ಯಮದ ಮೂಲಕ ಸಾಧಕರನ್ನು ಗುರುತಿಸುವುದನ್ನು ನೋಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹರಸಿದ್ದೇವೆ. ಕಿರಿಯರಿಗೆ ಮಾದರಿಯಾಗಿ ತೋರಿಸಿದ್ದೇವೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರ ಸಾಧಕರ ಪಟ್ಟಿಗೇನೂ ಕಮ್ಮಿಯಿಲ್ಲ. ಅಂತೆಯೇ ಅಂಥ ಸಾಧಕರ ಕುರಿತು ಬೆಳಕು ಚೆಲ್ಲುವ, ಸಾಧನೆಯ ಹಿಂದಿನ ಶ್ರಮದ … Read more

ಅತೀ ವಿನಯಂ ಧೂರ್ತ ಲಕ್ಷಣಂ: ಪಿ.ಎಸ್. ಅಮರದೀಪ್

ವಾಟ್ಸಪ್ ನಲ್ಲಿ ಎಂಥೆಂಥ ಮೆಸೇಜ್ ಗಳು ಬರುತ್ತವೆಂದರೆ, ಅವುಗಳನ್ನು ನಂಬದೇ ಇರಲಾಗುವುದಿಲ್ಲ.   ಕೆಲ ತಿಂಗಳುಗಳ ಹಿಂದೆ ಅಮಿತಾಬ್ ಬಚ್ಚನ್, ವಿನೋದ್ ಖನ್ನಾ, ಹೀಗೆ ಅನೇಕರಿಗೆ ಹಾರ ಹಾಕಿ ಸಂತಾಪ ಸೂಚಿಸುತ್ತಿರುವ ಫೋಟೋ, ಅವರಷ್ಟರದೇ ಅಲ್ಲ,ಸೆಲೆಬ್ರಿಟಿಗಳ, ಕ್ರೀಡಾಪಟುಗಳ, ಸಿನಿಮಾ ನಟರ, ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಬರುತ್ತಿರುವ ಟ್ರಾಲ್ಸ್, ಕಿಂಡ್ಲಿಂಗ್ ಮೆಸೇಜ್ ಗಳನ್ನು ನೋಡಿದ್ರೆ ಅವುಗಳಿಗೆ ರೆಸ್ಪಾಂಡ್ ಮಾಡುವುದೂ ಕೆಲವೊಮ್ಮೆ  ಸೈಬರ್ ಕ್ರೈಂ  ಆಗುವ ಸಂಭವವಿರುತ್ತದೆ.    “ಕರಗ್ರೇ ವಸತೇ…….. ಎಂದು ಶುರುವಾಗುವ ಬೆಳಿಗ್ಗೆ ಕಣ್ಣು ಬಿಟ್ಟರೇ … Read more

ಡಿಯರ್ ಹಸ್ಬೆಂಡ್: ಅಮರ್ ದೀಪ್ ಪಿ.ಎಸ್.

ಮೈ ಡಿಯರ್, ಯಾಕಿಷ್ಟು ತೊಂದರೆ ಅನುಭವಿಸ್ತಾ ಇದೀಯಾ?  ಕೂಲ್……  ನೀನು ಒಂದು ಸಂಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿದಿಯಾ. ನಿನ್ನ ಕೆಳಗೆ ಸಾಕಷ್ಟು ಜನ ಕೆಲಸ ಮಾಡ್ತಿದಾರೆ. ಐದು ಬೆರಳೂ ಸಮಾ ಇರಲ್ಲ.  ಹಾಗಂತ ಐದೂ ಬೆರಳಿಗೂ ನಿಯತ್ತಿರುವುದಿಲ್ಲ.  ಒಂದೊಂದು ಬೆರಳಿಗೂ ಒಂದೊಂದು ಇಶಾರೆ. ಹಾಗೇನೇ ಎಲ್ರನ್ನೂ ಪ್ಲೀಸ್ ಮಾಡೋಕಾಗಲ್ಲ. ಎಲ್ರತ್ರಾನೂ ಪ್ರೀತಿ, ವಿಶ್ವಾಸದಿಂದ ಕೆಲಸ ತೆಗೀತೀನಿ ಅಂತಂದ್ರೆ ಸಾಧ್ಯಾನೂ ಆಗಲ್ಲ. ನಿನ್ನ ಮುಂದೆ ನಗ್ತಾ “ನೀವೇ ಗುರುಗಳೂ” ಅಂದವರು ನಿನ್ನಿಂದೆ “ಇವ್ನಂಥ ದರಿದ್ರದವನು ಎಲ್ಲೂ ಇಲ್ಲ” ಅಂತೆಲ್ಲಾ ಹೇಳೋದಿಲ್ಲಾಂತ … Read more

ಹಾಳು ಕೃಷಿಕನೊಬ್ಬನ ಸ್ವಗತ: ಅಮರ್ ದೀಪ್ ಪಿ.ಎಸ್.

ಅದೊಂದು ಎಂಟು ದೊಡ್ಡ ಅಂಕಣದ ಮನೆ. ನಮ್ಮಪ್ಪ ಆ ಊರಿನ ಆದರ್ಶ ಶಿಕ್ಷಕ. ಆತನ ಶಿಷ್ಯಂದಿರು ರಾಜ್ಯವಲ್ಲದೇ ದೇಶ, ವಿದೇಶಗಳಲ್ಲೂ ಹೆಸರು ಗಳಿಸಿದ ಸುಶಿಕ್ಷಿತರು.  ಅಷ್ಟೇಕೇ, ನಮ್ಮ ಮನೆಯಲ್ಲೇ ನಾಲ್ಕೂ ಜನ ಮಕ್ಕಳಲ್ಲಿ ಮಾಸ್ಟರ್ ಡಿಗ್ರಿ  ಮಾಡಿ ಉಪನ್ಯಾಸಕ, ಎಂಜನೀಯರ್, ಮತ್ತಿತರ ವೃತ್ತಿಗಳಲ್ಲಿದ್ದುಕೊಂಡು ಅಪ್ಪನ ಹೆಸರಿಗೆ ಗರಿ ಮೂಡಿಸಿದವರು.  ನಾನು ಸಿವಿಲ್ ಎಂಜನೀಯರ್ ಪದವೀಧರ. ಈಗ್ಗೆ ಇಪ್ಪತ್ತೈದು ವರ್ಷಗಳ ಹಿಂದೆ ಹಳ್ಳಿಯ ಕನ್ನಡ ಮಾಧ್ಯಮದ ನಾನು ಸಿವಿಲ್ ಎಂಜನೀಯರಿಂಗ್ ಮಾಡಿ ರಾಜ್ಯದ ಪ್ರಮುಖ ನಗರಗಳಲ್ಲಿ ದುಡಿದು, ನನ್ನ … Read more

ಒಂದು ಸಂಜೆ ತಂಪಿಗೆ “ಹುರಿಗಾಳು”: ಅಮರ್ ದೀಪ್ ಪಿ.ಎಸ್.

ಮಳೆಗಾಲ ಸಂಜೆಗೆ ಹೊರಗೆ ಕಾಲಿಡೋಣವೆಂದರೆ, ಅಚಾನಕ್ಕಾಗಿ ಮೋಡಗಳು ಕವಿದು ಸುರಿವ ಮಳೆ, ನಿಲ್ಲುವವರೆಗೆ ಮನೆಯಲ್ಲಿ ಮುದುರಿ ಕುಳಿತು ನಮ್ಮ ಭಾಗದ ಫೇವರಿಟ್ ಬೆಚ್ಚಗಿನ ಮಂಡಾಳು, ಮೇಲೊಂದಿಷ್ಟು ಚುರುಕ್ಕೆನಿಸುವ ಖಾರ, ಈರುಳ್ಳಿ ಓಳು ಮೆಲ್ಲುತ್ತಾ ಕೂಡುವುದು ಜಾಯಮಾನ.   ಅದು ಟೈಂಪಾಸ್ ಗಾಗಿ.  ಹಾಗೇನೇ ಅದು ಬಿಟ್ಟು ಹುರಿಗಡಲೆ, ಕಾಳು, ಇತ್ಯಾದಿ ಖಯಾಲಿಯವರು  ಖಾಲಿ ಮಾಡುವವರಿದ್ದಾರೆ.  ಖಾಲಿಯಾಗುತ್ತಲೇ ಕೈ ಕೊಡವಿ ಮೇಲೆದ್ದು ಮಳೆ ನಿಂತಿತಾ? ಇಲ್ಲವಾ? ಅನ್ನುವುದರ ಕಡೆ ಲಕ್ಷ್ಯ ಹೊರಳುತ್ತದೆ.   ಆದರೆ, ಕೊಪ್ಪಳದಲ್ಲೊಬ್ಬ ನನ್ನ ಸ್ನೇಹಿತರು, … Read more

ಸ್ವಾನುಕಂಪ ಇರದಿದ್ದರಷ್ಟೇ ಸಾಕು: ಅಮರ್ ದೀಪ್ ಪಿ.ಎಸ್.

ಮನೆಯಲ್ಲಿ ಕೇಬಲ್ ಕನೆಕ್ಷನ್ ಇಲ್ಲ. ಪುಟ್ಟಿ ಇದೆ. ಅದಕ್ಕೆ ತಿಂಗಳಿಗೊಮ್ಮೆ ಹಸಿವು. ಎರಡು ತಿಂಗಳಿಂದ ಉಪವಾಸ ಹಾಕಿದ್ದೇನೆ.  ಮನೆ ಮಾಳಿಗೆಯಿಂದ ಹೊರ ಕಳಿಸಲು ಯೋಚಿಸುತ್ತಿದ್ದೇನೆ.  ದಿನ ಬೆಳಗಾದರೆ ಒಂದಲ್ಲಾ ಒಂದು ಚಾನಲ್ ತಿರುವುತ್ತಾ ಸುದ್ದಿಗಳಿಂದ ಸುದ್ದಿಗೆ ಹಾರುತ್ತಾ ಮಕ್ಕಳ ಶಾಲೆಗೆ, ನನ್ನ ಕಛೇರಿಗೆ ಸಮಯವಾಗುವ ಹತ್ತಿರಕ್ಕೆ ದಿಗಿದಿಗಿ ಟೀವಿ ಬಿಟ್ಟು ಏಳುವುದು, ಸ್ನಾನ, ತಿಂಡಿಯಾಗಿ, ಬೈಕ್ ಕೀ, ಚಾಳೀಸು ಎತ್ತಿಕೊಂಡು ಹೊರಟರೆ ಅವತ್ತಿನ ಮನೆಯ ಬೆಳಗಿನ ದಿನಚರಿ ಸಮಾಪ್ತಿ.  ಅದಕ್ಕೂ ಮುಂಚೆ ಐದುವರೆ ಆರಕ್ಕೆಲ್ಲಾ ಎದ್ದು, ಡಿ.ಸಿ. … Read more

ಪರದೆ ಮೆ ರೆಹೆನೆ ದೋ: ಅಮರ್ ದೀಪ್ ಪಿ.ಎಸ್.

ಕಣ್ ಕಣ್ಣ ಸಲಿಗೆ….  ಸಲಿಗೆ ಅಲ್ಲ ಸುಲಿಗೆ…..  ನೀನಿನ್ನು ನನಗೆ ನನಗೆ…………….. ನನ್ನನಗೇ……….. ಆರು ತಿಂಗಳಿಂದ  ಹೀಗೇ ಬಿಡದೇ ಕಾಡುತ್ತಿದ್ದಾಳೆ. ಅದ್ಯಾಕೆ ನಾನು ಇವಳ ಹಿಂದೆ ಬಿದ್ದೆನೋ ಏನೋ.  ಇವಳ ಸಲುಗೆ, ಸರಸ ಅತಿಯಾಗಿದೆ.   ಇವಳೇ ಮೊದಲೇನಲ್ಲ.  ಸರಿಸುಮಾರು ಒಂಭತ್ತು ವರ್ಷಗಳಿಂದ  ಇಂಥವಳ ಹಲವರ ಸಹವಾಸಕ್ಕೆ ಬಿದ್ದು ನಾನು ನಾನಾಗಿ ಉಳಿದಿಲ್ಲ.  ಆದರೆ, ನಾನು ಈ ಹಿಂದೆ ಬೆನ್ನು ಬಿದ್ದ ಯಾರೂ ಈ ಮಟ್ಟದಲ್ಲಿ ಕಾಡಿದ್ದಿಲ್ಲ.  ನನ್ನ ದುರಾದೃಷ್ಟ ನೋಡಿ ಇಂಥ ರತಿಯರೊಂದಿಗೆ “ಸರಸ” ಸಲ್ಲಾಪವಾಡತೊಡಗಿದ್ದು … Read more

ದೇಹವೆಂದರೆ………..: ಅಮರ್ ದೀಪ್ ಪಿ.ಎಸ್.

ಸಮಾಧಿ ******  ಮಾಂಸ ಮಣ್ಣಲ್ಲಿ ಕರಗಿ  ಬಳಿಕ ಬಿಕರಿಯಾಗದೇ ಉಳಿವ ಸವೆಯದ ಬಿಡಿ ಮೂಳೆಗಳ ಮುಚ್ಚಿದ ದುಖಾನು …. ಒಂದೆರಡು ವರ್ಷಗಳ ಹಿಂದೆ ಈ ಸಾಲುಗಳನ್ನು ಬರೆದಿದ್ದೆ. ಈ ಸಾವು, ಸಮಾಧಿ ಮತ್ತು ಸುಡುಗಾಡು ಅನ್ನುವಾಗೆಲ್ಲಾ ಒಂದು ಬಗೆಯ ಮನಸ್ಥಿತಿಗೆ ಒಳಗಾಗುತ್ತಲೇ ಇರುತ್ತೇನೆ. ನಾವು ಕೆಲವು ಮಾತಿಗೆ ಕೆಟ್ಟ ಬೇಸರ ಮಾಡಿಕೊಂಡು “ಇದೇನ್ ಸುಡುಗಾಡಲೇ” ಅನ್ನುತ್ತಿರುತ್ತೇವೆ.   ಯಾರಾದರೂ ಸತ್ತರೆ ಮಾತ್ರ ಮಣ್ಣು ಮಾಡಲು ನೆನಪಾಗುವ ಸ್ಥಳ.  ಅದು ಬಿಟ್ಟು ಇಷ್ಟ ಪಟ್ಟು ಖುಷಿಯಲ್ಲಿ ಹೋದಂತೆ ಪಾರ್ಕು, … Read more

ಗುಜರಿ ಬದುಕಿನ ದಾರಿ: ಅಮರ್ ದೀಪ್ ಪಿ.ಎಸ್.

ಅಲ್ಲಿ ನನಗೊಂದು ಹೊಸ ಬಟ್ಟೆಯಿಂದ ಮುಖ ಒರೆಸಿ ಒರೆಸಿ ಇಕ್ಕಟ್ಟಾದ ಜಾಗದಲ್ಲಿ ಮಲಗಿಸಿದ್ದರು.  ಆ ಜಾಗದಲ್ಲಿ ನನ್ನಂತೆ ಇತರರಿಗೂ ಅದೇ ಸ್ಥಿತಿ.   ಅಲ್ಲಿ ಬಂದು ಹೋಗುವ ನೂರಾರು ಮಂದಿ ನಮ್ಮನ್ನೆಲ್ಲಾ ಮುಟ್ಟಿ, ತಟ್ಟಿ, ತಲೆ ಹಿಡುದು, ತಿರುವ್ಯಾಡಿ, ಕಾಲು ಜಗ್ಗಿ, ಮೈ ಬೆಂಡು ಮಾಡಿ, ನೋಡಿ “ಉಹ್ಞೂಂ. ಬ್ಯಾಡ” ಅನ್ನೋ ಮಂದಿ. ಇನ್ನೂ ಕೆಲವರು “ಇಷ್ಟಕ್ಕಾದ್ರ ಕೊಡು, ಇಲ್ಲಾಂದ್ರ ಬ್ಯಾಡ, ದುಬಾರಿಯಾತು”, ಅನ್ನುವವರು. ಅವರೆಲ್ಲಾ ಬರೀ ಹೆಂಗಸರು.  ಹಿಂಡು ಮಂದಿ ಕಲೆಯುವ ಜಾತ್ರಯೊಳಗೆ ಕೆಟ್ಟ ಬಿಸಿಲಲ್ಲಿ ನನ್ನಂಥವರನ್ನು ಮಲಗಿಸಿ, ಕುಕ್ಕರಗಾಲಲ್ಲಿ ಕುಂದ್ರಿಸಿ … Read more

ಎಕ್ಸಟ್ರಾರ್ಡಿ-ನರಿ: ಅಮರ್ ದೀಪ್ ಪಿ.ಎಸ್.

ಅಲ್ಲೊಂದು ಮದುವೆ ನಡೀತಿರುತ್ತೆ. ಮಗಳ ಮದುವೆ ಮಾಡುವಾತ ಕೈಗುಣ ಚೆನ್ನಾಗಿದ್ದ ಅಡುಗೆ ಮಾಡುವವನನ್ನು  ಖುದ್ದಾಗಿ ಕರೆದು ಅಡುಗೆ ಮಾಡಲು ಹೇಳಿರುತ್ತಾನೆ.   ಪಾಪ, ಕುಕ್ಕು, ತನ್ನ ಪಾಡಿಗೆ ತಾನು ಮದುವೆಯ ಹಿಂದಿನ ದಿನವೇ ಬಂದು ಯಜಮಾನನನ್ನು ಕಂಡು ಅಂಗಿ ಕಳಚಿಟ್ಟು ಕೈಚಳಕದ ರುಚಿ ಜೋಡಿಸಲು ಕೆಲಸಕ್ಕೆ ಒಗ್ಗಿರುತ್ತಾನೆ.  ಮದುವೆ ಹಿಂದಿನ ದಿನ ಮತ್ತು ಮದುವೆ ದಿನ ಬಂದ ನೆಂಟರು, ಬಂಧುಗಳು, ಆಪ್ತರು, ಗೊತ್ತಿದ್ದವರು, ಗೊತ್ತಿಲ್ಲದವರೆಲ್ಲರೂ ಬಂದು ಸವಿದ ನಂತರ “ಅಡುಗೆ ಚೆನ್ನಾಗಿದೆ” ಅನ್ನುತ್ತಾರೆ. ಮದುವೆ ಮಾಡಿದ ಯಜಮಾನನಿಗೆ … Read more

“ಕಾರ್ಮೋಡ” ಮಳೆಯಾಗಿ ಸುರಿದ ನಂತರ ತಡರಾತ್ರಿಗೆ ಮುಕ್ತಿ: ಅಮರ್ ದೀಪ್ ಪಿ.ಎಸ್.

ಅಂದು ಸಂಜೆ ಹೊಸಪೇಟೆಯಿಂದ ರೈಲು ಹತ್ತಿದಾಗ ಸಂಜೆ ಏಳು ಗಂಟೆ.  ನನ್ನ ಜನ್ಮ ಜಾತಕದಲ್ಲಿ ಅಮವಾಸ್ಯೆ ದಿನ ಪ್ರಯಾಣದಲ್ಲಿ ಅಪಘಾತದ ಸೂಚನೆ ನೀಡಿದ್ದ ಜ್ಯೋತಿಷಿಯ ನೆನಪಾಯಿತು.  ಪ್ರತಿ ದಿನವೂ ಕತ್ತಲಂತೇ ದೂಡುತ್ತಿದ್ದ ಬದುಕಿನಲ್ಲಿ ಒಂದು ದಿನದ ಅಮವಾಸ್ಯೆಯು ತನಗೇನೂ ಕೇಡು ಬಗೆಯುವುದಿಲ್ಲವೆಂಬದು ನನ್ನ ದಿಟ್ಟ ನಂಬಿಕೆ.  ರೈಲು ಭೋಗಿಯಲ್ಲಿ ಹೆಜ್ಜೆಯಿಡಲೂ ಜಾಗವಿರದಂಥ ಜನರಲ್ ಕಂಪಾರ್ಟ್ ಮೆಂಟ್. ಅದರಲ್ಲೂ ಹೆಂಗಸರು ಮಕ್ಕಳು ಜಾಗ ಅಲ್ಲಲ್ಲಿ ಹುಡುಕಿ ಕೂಡುತ್ತಿದ್ದರು. ಪಾಸ್ ಮಾಡಿಸಿಕೊಂಡು ದಿನವೂ ಓಡಾಡುವ ಸಂಭಾವಿತ ಗಂಡಸರು ವಯಸ್ಸಾದವರಿಗೆ ಜಾಗ … Read more

ಫೋಟೋ ಚೌಕಟ್ಟಿನ ಆಚೀಚೆ: ಅಮರ್ ದೀಪ್ ಪಿ.ಎಸ್.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳವು.  ವರ್ಷಕ್ಕೊಮ್ಮೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮೇಷ್ಟ್ರು “ಎಲ್ರೂ ನಾಳೆ ನೀಟಾಗಿ ನಿಮಗಿಷ್ಟವಾದ ಡ್ರೆಸ್ ಹಾಕ್ಕೊಂಡ್ ಬನ್ನಿ” ಅನ್ನುತ್ತಿದ್ದರೆ, ನಮ್ಮ ಮುಖ ಇಷ್ಟಗಲವಾಗಿ ಅಲ್ಲೇ ಹಲ್ಕಿರಿದು ನಿಂತು ಬಿಡುತ್ತಿದ್ದೆವು.   ಮತ್ತೆ ಫೋಟೋ ತೆಗೆಯೋ ದಿನ ಮಾತ್ರ  ಅದು ನಡೆಯುತ್ತೋ, ಓಡುತ್ತೋ, ನಿಂತಲ್ಲೇ ಎಲ್ಡು ಬಾರಿ ಸರಿಯಾದ ಟೈಮು ತೋರ್ಸುತ್ತೋ, ಬಿಡುತ್ತೋ, ಒಟ್ನಲ್ಲಿ ಎಲ್ಲಿಂದಲೋ ಒಂದ ವಾಚ್ ಕಟ್ಗ್ಯಂಡು ಅದು ಫೋಟೋದಲ್ಲಿ ಕಾಣೋ ಹಂಗೆ ನಿಂತು ಫೋಸ್ ಕೊಡುತ್ತಿದ್ದೆವು.  ಫೋಟೋ ಪ್ರಿಂಟ್ ಕೈ … Read more