ಯುನೈಟೆಡ್ ಬ್ರೇಕ್ಸ್ ಗಿಟಾರ್: ಅಮರ್ ದೀಪ್ ಪಿ.ಎಸ್.

ನಾವು ಪ್ರತಿ ದಿನ ಬೆಳಿಗ್ಗೆ ಎದ್ದು ಹಲ್ಲುಜ್ಜುವುದರ ಟೂತ್ ಪೇಸ್ಟ್ ನಿಂದ ಹಿಡಿದು  ರಾತ್ರಿ ಸೊಳ್ಳೆ ಬತ್ತೀನೋ ಲಿಕ್ವಿಡ್ದೋ  ಹಚ್ಚಿ  ಮಲಗುವವರೆಗೆ ಎಷ್ಟು ಕಂಪನಿಗಳ ಎಷ್ಟು ಸರಕುಗಳನ್ನು ಬಳಸಿರು ತ್ತೇವೆ, ಎಷ್ಟು ಸೇವೆಯನ್ನು ಪಡೆದಿರುತ್ತೇವೆ.  ಯಾವ ಸರಕು/ವಸ್ತು ನಮ್ಮ ಅವಶ್ಯಕತೆಯನ್ನು ಎಷ್ಟರಮಟ್ಟಿಗೆ ಪೂರೈಸಿದೆ? ಯಾವ ಸರಕಿನ ಸರಬರಾಜುದಾರರು ನಮಗೆ ಉತ್ತಮ ಸೇವೆಯನ್ನು ನೀಡಿದ್ದಾರೆ? ಲೆಕ್ಕ ಇಟ್ಟಿರುತ್ತೆವೆಯೇ? ಕೆಲವರು ಇಟ್ಟಿದ್ದರೆ ಇಟ್ಟಿರಬಹುದು, ಅದೂ ಬಹಳ ಕಡಿಮೆ. ಒಂದು ವೇಳೆ ನಾವು ಕೊಂಡ ಸರಕು/ಸೇವೆ ಸರಿಯಾಗಿದ್ದರೆ ಯಾವುದೇ ಸಮಸ್ಯೆ ಇಲ್ಲ. … Read more

ಕರ್ನಾಟಕ ರಾಜ್ಯ ಲಾಟರಿ “ಅಂದು ಡ್ರಾ ” ಇಂದಿಗೆ ಬಹು “ಮಾನ “: ಅಮರ್ ದೀಪ್ ಪಿ.ಎಸ್.

ಇಪ್ಪತ್ತೊಂದರ ವಯಸ್ಸಿನ ಹುಡುಗ, ಅವನ ತಮ್ಮ ಮತ್ತವರ ತಾಯಿ  ಆಗತಾನೇ ಆ ಹುಡುಗನ ತಂದೆಯ ಶವ ಸಂಸ್ಕಾರ, ಕ್ರಿಯಾ ಕರ್ಮಗಳನ್ನೆಲ್ಲಾ ಮುಗಿಸಿ ಮನೆಗೆ ಬಂದು ಕುಳಿತಿದ್ದರು. ಎದು ರಿಗಿದ್ದವರಿಗೆ ಆಡಲು ಮಾತುಗಳು ಖಾಲಿ ಖಾಲಿ.  ತಾಯಿ ಮಕ್ಕಳ ಮುಖಗಳನ್ನು ನೋಡುತ್ತಲೇ ಹಂಗೆ ಅವರ ನೆನಪು ವರ್ಷದಿಂದ ವರ್ಷ ಹಿಂದಕ್ಕೆ, ಮೂವತ್ತು ವರ್ಷಗಳ ಹಿಂದಕ್ಕೆ ಜಾರಿದವು…..  ಅದೊಂದು ಪುಟ್ಟ ಗ್ರಾಮ. ಬಿಸಿಲಿಗೂ ಬರಕ್ಕೂ ಮತ್ತೊಂದು ಹೆಸರಾಗಿದ್ದ ಊರದು. ಆ ಊರಿಗೆ ಒಂದೇ ಮುಖ್ಯ ರಸ್ತೆ ಮೂರು ಬಸ್ ನಿಲ್ದಾಣ. … Read more

ನಲವತ್ತರ ಆಸು ಪಾಸಿನ ಪ್ರೀತಿ ಫಜೀತಿ: ಅಮರ್ ದೀಪ್ ಪಿ.ಎಸ್.

ಈ ಸೀರೆಯಲ್ಲಿ  ಈ  ಮೇಕಪ್ ನಲ್ಲಿ   ಹೇಗೆ ಕಾಣಿಸ್ತೇನೆ ? ಕೇಳಿದಳು .    ಅಂದು ಆಕೆ ಬಲಗಡೆ ಸೆರಗು ಹೊದ್ದು ಅವಳ ತೂಕಕ್ಕೆ  ಭಾರವೆನಿಸುವ ಸೀರೆಯನ್ನು ತುಂಬಾ ಇಷ್ಟಪಟ್ಟು ಒಂದೂವರೆ ತಾಸಿಗಿಂತ ಹೆಚ್ಚು ಸಮಯ ತೆಗೆದುಕೊಂಡು ರೆಡಿಯಾಗಿ ಬಂದಿದ್ದಳು. ಎಂದಿಗಿಂತ ತುಸು ಹೆಚ್ಚೇ ಎನ್ನುವಷ್ಟು ಮೇಕಪ್ ಮಾಡಿಕೊಂಡಿದ್ದಳು. ತುಟಿಗಳು ರಂಗಾಗಿದ್ದವು. ಅಂದು ಸಂಜೆ ಕಾಕ್ ಟೈಲ್  ಪಾರ್ಟಿ ಗೆ ಆಹ್ವಾನಿಸಿದ ಮೇರೆಗೆ ಬಹಳ ಉಲ್ಲಸಿತಳಾಗಿ ತನ್ನ ಎಲ್ಲ ನಾಲ್ಕು ದಿನದಿಂದೀಚೆಗೆ ಆದ ಗೆಳತಿಯರೊಂದಿಗೆ ಬಂದಿಳಿದಿದ್ದಳು. … Read more

ನಿಮ್ಮ ಹೆಸರು ನಮ್ಮ ಮನದಲ್ಲಿದೆ: ಅಮರ್ ದೀಪ್ ಪಿ.ಎಸ್.

ವರ್ಷದ ಕನಿಷ್ಠ ಆರು ತಿಂಗಳಾದರೂ ಮದುವೆ ಸೀಜನ್ನು ಮುಂದುವರೆದಿರುತ್ತದೆ. ಸೀಜನ್ನು ಬಂತೆಂದರೆ ಲಗ್ನ ಪತ್ರಿಕೆಗಳನ್ನು ಜೋಡಿಸಿಟ್ಟು ಕುಟುಂಬ ಸಮೇತವಾಗಿ ಹೋಗುವಂಥವು, ಒಬ್ಬರೇ ಹೋದರೂ ನಡೆಯುತ್ತದೆನ್ನುವಂಥವುಗಳನ್ನೂ ಲೆಕ್ಕ ಹಾಕಿ ಓಡಾಡಲಿಕ್ಕೆ ಒಂದಷ್ಟು ದುಡ್ಡು ಎತ್ತಿಟ್ಟು ಅನಣಿಯಾಗಲೇಬೇಕು. ಹೋಗದಿದ್ದರೆ ಏನಂದುಕೊಂಡಾರೋ ಎನ್ನುವ ಮುಲಾಜು ಅಥವಾ ಸಂಭಂಧ ಗಳ ನವೀಕರಣಕ್ಕೆ, ಖುಷಿಯ ಸಂಧರ್ಭದಲ್ಲಿ ಎಲ್ಲರನ್ನು ಭೇಟಿಯಾಗುವ ಅವಕಾಶಕ್ಕಾದರೂ ಹೊರಡು ತ್ತೇವೆ. ಮೊನ್ನೆ ನೆಂಟರೊಬ್ಬರು ಬಂದು ತಮ್ಮ ಮನೆಯಲ್ಲಿ ನಡೆಯಲಿರುವ ಮದುವೆ  ಸಮಾರಂಭಕ್ಕೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು.  ಹೆಸರು ಬರೆದರೂ ನಿಮ್ಮ … Read more

ಎದ್ದೇಳು ಮಂಜುನಾಥ”ನೂ “ಹ್ಯಾಪಿ ಡೇಸ್” ನ ಅಮಲಿನವನೂ: ಅಮರ್ ದೀಪ್ ಪಿ. ಎಸ್.

ನನ್ನೊಬ್ಬ  ಹಳೆಯ ಗೆಳೆಯ ನೆನಪಾದ. ಇತ್ತೀಚಿಗೆ ನಾನು ಕಂಡ ಹೊಸ ಹುಡುಗನ ಅತಿಯಾದ ಆತ್ಮವಿಶ್ವಾಸವೋ ಅಹಮಿಕೆಯೋ ಒಟ್ಟಿನಲ್ಲಿ ಬೇಜಾರು ತರಿಸಿತು. ಪ್ರತಿ ದಿನ ಬಂದು ನಗು ನಗುತ್ತಾ, ಹಳೆಯ, ಕಿಶೋರನದೋ, ರಫಿ ಸಾಹೇಬರದೋ ಇಲ್ಲಾ ಮುಖೇಶನದೋ ಹಾಡನ್ನು ಗುನುಗುತ್ತಾ, ತನಗೆ ತಿಳಿದ ತಿಳಿ ಹಾಸ್ಯದ ಮಾತನ್ನೂ ಬಿಂದಾಸ್ ಆಗಿ  ಹೇಳುತ್ತಾ ನಾಲಗೆ ಮೇಲೆ ಬಹಳ ಹೊತ್ತು ರುಚಿ ಆರದಂತಿರುವ ಚಹಾ ಅಥವಾ ಕಾಫಿ ಕೊಟ್ಟು ಹೋಗುವ ವಿಷ್ಣು ಈಗತಾನೇ ಕೊಟ್ಟು ಹೋದ ಕಾಫಿ ಹೀರುತ್ತಿದ್ದೆ.  ಒಂದಕ್ಕೊಂದು ತಾಳೆಯಿಲ್ಲದ … Read more

ಗುರು ಪರಂಪರೆಯ ಸಂಗೀತ ಕಲೆ ಮತ್ತು ಶಿಷ್ಯ ವೃಂದ: ಅಮರ್ ದೀಪ್ ಪಿ. ಎಸ್.

"ಸ ರಿ ಗ ಮ ಪ ದ ನಿ  ಸಾವಿರದ ಶರಣು …… "ಎಂದು ಅಣ್ಣಾವ್ರು ಹಾಡುತ್ತಿದ್ದರೆ ನಾನು ಆ ಹಾಡನ್ನು ಬಹಳ ಇಷ್ಟಪಟ್ಟು ಕೇಳುತ್ತಿದ್ದೆ.  ಬರೀ  ಹಾಡಲ್ಲ, ಆ ಚಿತ್ರವನ್ನೂ ಅಷ್ಟೇ ಇಷ್ಟಪಟ್ಟು ನೋಡಿದ್ದೆ. ಅದು  ಅದ್ಭುತ ಸಂಗೀತ ಶಕ್ತಿ ಗಾಯಯೋಗಿ ಪಂಡಿತ್  ಶ್ರೀ ಪಂಚಾಕ್ಷರಿ ಗವಾಯಿಗಳ ಕುರಿತು ತಯಾರಿಸಿದ ಚಿತ್ರ. ಅವರ ಜೀವನಗಾಥೆಯ  ಒಂದು ಪವಾಡ ಸೃಷ್ಟಿ ಕಣ್ಣ ತುಂಬಿಕೊಳ್ಳುತ್ತದೆ. ಅದು ಚಲನಚಿತ್ರದ ಮಾತಾಯಿತು. ವಾಸ್ತವವಾಗಿ  ಈ ಮಾತು ಗದುಗಿನ ಶ್ರೀ ವೀರೇಶ್ವರ ಆಶ್ರಮದಲ್ಲಿ … Read more

ಬೆಳಗಿನ ಜಾವದ ಪ್ರಾಶಸ್ತ್ಯ ಓದು, ಸಕ್ಕರೆ ನಿದ್ದೆಯ ಸೋಗಲಾಡಿತನ: ಅಮರ್ ದೀಪ್ ಪಿ. ಎಸ್.

"ಬೇಗ ಮಲಗು ಬೇಗ ಏಳು"… ನಾಳೆ ಮಾಡುವುದನ್ನು ಇಂದೇ ಮಾಡು ಇಂದು ಮಾಡುವುದನ್ನು ಈಗಲೇ ಮಾಡು" ವಿದ್ಯೆಗೆ ವಿನಯವೇ ಭೂಷಣ" "ಕೈ ಮುಗಿದು ಒಳಗೆ ಬಾ" ಈ ಎಲ್ಲಾ ಮಾತು ಗಳನ್ನು ನಮ್ಮ ಶಾಲಾ ದಿನಗಳಲ್ಲಿ ದಿನಂಪ್ರತಿ ನಾವು ಬರೆಯುತ್ತಿದ್ದ ಕಾಪಿ ರೈಟಿಂಗ್ ಗಳು, ಮತ್ತು ಎಲ್ಲ ವನ್ನೂ ಹೇಳಿದಂತೆ ಬರೆಯಲು, ಬರೆದಂತೆ ರೂಢಿಸಿಕೊಳ್ಳಲು,  ಜೀವನದಲ್ಲಿ ಅಳವಡಿಸಿಕೊಳ್ಳಲು ಮಾಸ್ತರರು ಬೋಧಿಸುತ್ತಿದ್ದ ಬಗೆ.  ಚಿಕ್ಕಂದಿನಿಂದಲೇ ಕೆಲ ತಂದೆತಾಯಿ ಶಿಸ್ತು ಬದ್ಧವಾಗಿ ಬೆಳೆಸಿ ಮಕ್ಕಳನ್ನು ಅಣಿಗೊಳಿಸಿರುತ್ತಾರೆ. ಅದೇ ರೂಢಿ ಅವರನ್ನು … Read more

ಸಣ್ಣ ಕಾಕಾ, ಕಂಡಕ್ಟರ್ ಲೈಸೆನ್ಸು ಮತ್ತು ಖಯಾಲಿ: ಅಮರ್ ದೀಪ್ ಪಿ. ಎಸ್.

ಶಾಲಾ ದಿನಗಳ ನಗುವಿಗೆ, ಗೇಲಿಗೆ, ಕಾಲೆಳೆಯಲು ಯಾರಾದರೂ ಒಬ್ಬರು  ಇರುತ್ತಾರೆ. ಕಾಲು ಉಳುಕಿ ಬೀಳುವವರು ಸಹ.  ಓದು ಹತ್ತಿದರೆ ಹಿಂದೆ ನೋಡದಂತೆ ಓಡುತ್ತಲೇ, ಓದುತ್ತಲೇ ಒಂದು ಘಟ್ಟ ತಲುಪಿ ಬಿಡುತ್ತಾರೆ. ಅರ್ಧಂಬರ್ಧ ಓದಿದವರು ಅಲ್ಲಲ್ಲೇ ಇರುವ ಅವಕಾಶಗಳನ್ನು ಉಪ ಯೋಗಿಸಿಕೊಂಡು ದುಡಿಯುತ್ತಾರೆ. ಸ್ವಂತ ಅಂಗಡಿ, ದುಡಿಮೆ, ಮುಂಗಟ್ಟು ಇದ್ದವರು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ.  ಆಗ  ನಮ್ಮ ಊರಿನಲ್ಲಿ ಇದ್ದದ್ದೇ ಆರೆಂಟು  ಸರ್ಕಾರಿ ಶಾಲೆಗಳು, ಮತ್ತು ಖಾಸಗಿ ಶಾಲೆಯೆಂದರೆ ಒಂದು ಖಾಸಗಿ  ಶಿಕ್ಷಣ ಸಂಸ್ಥೆ,  ಶಿಸ್ತಿಗೆ ಹೆಸರಾಗಿದ್ದ ಶಾಲೆ. … Read more

“ಕಳೆದು ಹೋಗು”ವ, ಮತ್ತೆ ಮತ್ತೆ “ಹುಡುಕು”ವ ಪರಿ: ಅಮರ್ ದೀಪ್ ಪಿ. ಎಸ್.

  ಹಳೆಯ ಸಿನೆಮಾಗಳಲ್ಲಿ ನಾವು ನೋಡುತ್ತಿದ್ದೆವು. ಬಾಲ್ಯದಲ್ಲಿ ತಂದೆ ತಾಯಿಯೊಂದಿಗಿರುವ ಮಕ್ಕಳು ಜಾತ್ರೆಯಲ್ಲೋ, ಭಯಂಕರ ಗಿಜಿಗುಡುತ್ತಿರುವ ರೈಲಿನ ಭೊಗಿಯಲ್ಲೋ, ಗಲಭೆಯಲ್ಲೋ … ಆಟಿಕೆ ಆಡುತ್ತಾ,  ಐಸ್  ಕ್ರೀಮ್ ತರಲು ಹೋಗಿಯೋ , ಆಗುವ ಅನಾಹುತದಿಂದ ತಪ್ಪಿಸಿಕೊಳ್ಳಲು  ಅವಸರವಸರ ವಾಗಿ ಓಡಿ ಹೋಗುವ ಭರಾಟೆಯಲ್ಲೋ ಮಕ್ಕಳ ಪುಟ್ಟ ಪುಟ್ಟ ಕೈಗಳನ್ನು ಭಧ್ರತೆ ಫೀಲ್  ಕೊಟ್ಟು ಹಿಡಿದಿಟ್ಟುಕೊಂಡ ತಂದೆ ತಾಯಿಯು ಅದಾವ ಮಾಯೆಯಲ್ಲೋ ಕೈ ಬಿಟ್ಟು  ತಂದೆ ತಾಯಿ ಅವರನ್ನು "ಕಳೆದುಕೊಂಡು" ಮಕ್ಕಳನ್ನು ಹುಡುಕುತ್ತಾರೆ, ಮಕ್ಕಳು ಅಳುತ್ತಾ ಅತ್ತಿತ್ತ  ಸಾಗುತ್ತಿರುತ್ತಾರೆ.  … Read more

ಸ್ಪಿರಿಟ್ಟು, ಲಾವಾರಸ ಮತ್ತು ಮದುವೆ: ಅಮರ್ ದೀಪ್ ಪಿ. ಎಸ್.

                ಮೊನ್ನೆ ಶ್ರೀವಲ್ಲಭ ಆರ್ . ಕುಲಕರ್ಣಿ  ಇವರ "ಹೀಗೊಂದು ವಧು ಪರೀಕ್ಷೆ" ಲಲಿತ ಪ್ರಬಂಧ ಓದುತ್ತಿದ್ದೆ… ಹೌದೌದು ಅನ್ನಿಸಿಬಿಟ್ಟಿತ್ತು.  ನನಗೀಗ ಅಪಘಾತವಾಗಿ ಕ್ಷಮಿಸಿ  ಮದುವೆಯಾಗಿ ೧೧ ವರ್ಷ.. ಹನ್ನೊಂದು ವರ್ಷದ ಹಿಂದೆ ನಾನು ವಧು ಪರೀಕ್ಷೆಗೆ ಹೋದದ್ದು… ಒಂದಲ್ಲ ಅಂತ ಒಂಬತ್ತು. ಒಮ್ಮೆ ಗದಗ ಜಿಲ್ಲೆಯ ಯಾವುದೋ ಊರಿಗೆ ಕನ್ಯಾ ನೋಡಲು ಹೋಗಿದ್ದೆವು. ದಾರಿಯಲ್ಲಿ ಹೋಗುತ್ತಾ ಜವಳಿ ಅಂಗಡಿ ಕಿರಾಣಿ ಅಂಗಡಿ ಎಲ್ಲಾ ನೋಡಿದೆ… "ವೈನ … Read more

“ಪುನರ್ಜನ್ಮ” ದ ಕಥೆಯ ಸಿನೆಮಾ ಮತ್ತು ಅಪಘಾತ: ಅಮರ್ ದೀಪ್ ಪಿ. ಎಸ್.

            ಮದುವೆಯನ್ನೂ ಸಹ ಲಘು ದುಃಖ ಬಲು ಹರ್ಷದಿಂದ “ಅಪಘಾತ ” ವೆಂದು ಬಣ್ಣಿಸುವವರೂ ಇದ್ದಾರೆ.. ಆದರೆ, ನಿಜವಾದ ಅಪಘಾತಗಳನ್ನು ಕಣ್ಣಾರೆ ಕಂಡಿದ್ದೇ ಆದಲ್ಲಿ ಅಥವಾ ಅನುಭವಿಸಿದಲ್ಲಿ ಈ ಮಾತನ್ನು ನಾನಾದರೂ ಹಿಂತೆಗೆದುಕೊಳ್ಳುತ್ತೇನೆ.  ನನಗೆ ನೆನಪಿದ್ದಂತೆ ನಾನು ಕನಿಷ್ಠ ಮೂರರಿಂದ ನಾಲ್ಕು ಬಾರಿ ಅಪಘಾತವನ್ನು ಸ್ವತಃ ಅನುಭವಿಸಿದ್ದೇನೆ.. ಮತ್ತು ಕಣ್ಣಾರೆ ನೋಡಿದ್ದಂತೂ ಹಲವು… ಅದಿನ್ನು ಓದು “ಸುತ್ತುತ್ತಿದ್ದ ” ಕಾಲ.. ಮತ್ತು ಸಹಜವಾಗಿ ದುಡುಕು ಹಾಗೂ ಹುಡುಗು ಬುದ್ಧಿ. ಹದಿನಾರರಿಂದ … Read more

ಏ ಜಿಂದಗಿ ಗಲೇ ಲಗಾ ಲೇ: ಅಮರ್ ದೀಪ್ ಪಿ. ಎಸ್.

ಒಮ್ಮೊಮ್ಮೆ ಬದುಕು ಹಾಗೆ ರಿವೈಂಡ್ ಆಗಿ ನಮ್ಮನ್ನು ನಾವೇ ನೋಡಿಕೊಂಡರೆ ನಾವು ನಮ್ಮ ಸಣ್ಣ  ಭಯವನ್ನು, ಸಂಕೋಚವನ್ನು ಇನ್ಫೀರೀಯಾರಿಟಿ ಕಾಂಪ್ಲೆಕ್ಸ್ ಎಲ್ಲವನ್ನೂ ಆಗಿಂದಲೇ ದೂರ ಮಾಡಿಕೊಳ್ಳುವ ಒಂದು ಅವಕಾಶವನ್ನು ಹುಡುಕಿಕೊಳ್ಳಲು ವಿಫಲವಾಗಿದ್ದೆವು ಅನ್ನಿಸುತ್ತದೆ. ಒಂದು ವೇಳೆ ಅದಾಗಿದ್ದರೆ ? ಆ ದಿನದಿಂದಲೇ ನಾವು ಮುನ್ನಡೆಯುವ ದಾರಿಯನ್ನು ಸರಿಯಾದ ಕ್ರಮದಲ್ಲಿ ನಡೆಸಲು ಭರವಸೆ ಮೂಡುತ್ತಿತ್ತು.  ಶಾಲಾ ದಿನದಿಂದಲೇ ನಮ್ಮ ಮನಸ್ಸಿನಲ್ಲಿ ಒಂದೊಂದು ಕಲ್ಪನೆಗಳು ಮನೆ ಮಾಡಿರುತ್ತವೆ, ಮತ್ತವು ಕಲ್ಪನೆಗಳು ಮಾತ್ರವೇ ಎಂಬುದೂ ಸಹ ಗೊತ್ತಿದ್ದರೂ ಅವುಗಳು ನೀಡುವ ಬೆಚ್ಚನೆ … Read more

ಹದಿನೈದು ವರ್ಷದ ಹಳೆಯ ಗೆಳತಿಯೊಂದಿಗೆ ಒಂದು ಸಂಜೆ: ಅಮರ್ ದೀಪ್ ಪಿ. ಎಸ್.

  ಹಿಂದಿನ ದಿನ ಆಕೆ ಒಬ್ಬ ಗೆಳತಿ ಮನೆಗೆ ಹೋಗಿದ್ದಳಂತೆ..  ಮಾತಿನ ನಡುವೆ   "ಮನೆ ಕೆಲಸ, ಮಕ್ಕಳು,  ಟಿ ವಿ. ಸಿರಿಯಲ್ಲು,   ಯಾವುದರಲ್ಲೂ ಮನಸ್ಸು ವಾಲುತ್ತಿಲ್ಲ, ಖುಷಿಯಾಗಿ ತೊಡಗಿಸಿ ಕೊಳ್ಳಲು ಆಗುತ್ತಿಲ್ಲ,  ಯಾಕೋ ಬೇಜಾರೂ, ಲೋನ್ಲಿನೆಸ್ಸ್"  ಅಂದಿದ್ದಾಳೆ.  ಗೆಳತಿ ಒಬ್ಬ ಸಾಹಿತ್ಯಾಸಕ್ತೆ.  ಒಬ್ಬ  ಲೇಖಕನ ಬಗ್ಗೆ ಹೇಳುತ್ತಾ,  ಅವರೂ  ಒಮ್ಮೆ "ಶೂನ್ಯ ಭಾವ"ಕ್ಕೆ ಒಳಗಾಗಿದ್ದ ಸಂಧರ್ಭದಲ್ಲಿ ಒಬ್ಬ ಮನೋ ವೈದ್ಯ ಅವರಿಗೆ ನಾಲ್ಕು ಚೀಟಿಗಳಲ್ಲಿ ಪ್ರಿಸ್ಕ್ರಿಪ್ಷನ್ ಬರೆದು ಬೆಳಿಗ್ಗೆ ೯ಕ್ಕೆ ಮಧ್ಯಾನ್ಹ ೧೨ಕ್ಕೆ, ೩ಕ್ಕೆ ಮತ್ತು … Read more

ಗೃಹ ಪ್ರವೇಶ, ಹುಟ್ಟುಹಬ್ಬ, ಸನ್ಮಾನ ಮತ್ತು ಸಂಗೀತದ ಹೊನಲು: ಅಮರ್ ದೀಪ್ ಪಿ.ಎಸ್.

ನಾನು ಇತ್ತೀಚಿಗೆ ಕಂಡಂಥ ಪ್ರಸಂಗವೊಂದನ್ನು ಹಂಚಿಕೊಳ್ಳಬಯಸುತ್ತೇನೆ . ನಿಜ, ಬೇರೆಲ್ಲೋ ಈ ತರಹ ಭಾವನಾತ್ಮಕ ಕಾರ್ಯಕ್ರಮಗಳು ನಡೆದಿರಬಹುದಾದರೂ ನಾನು ವಯುಕ್ತಿಕವಾಗಿ ಇದನ್ನು ಕಂಡದ್ದು ಮಾತ್ರ ನನಗೆ ಹೊಸ ಅನುಭವ .  ಕೊಪ್ಪಳಕ್ಕೆ ಬಂದ  ನಂತರ ಇತ್ತೀಚಿಗೆ ನಾನು ತಬಲಾ ಕಲಿಯಲು ಸೇರಿಕೊಂಡ ಶ್ರೀ ಗವಿಸಿದ್ದೇಶ್ವರ ಮಠದ ಸಂಗೀತ ಪಾಥಶಾಲೆಯಲ್ಲಿ ಸಂಪರ್ಕಕ್ಕೆ ಬಂದ ಹಿರಿಯ ಸ್ನೇಹಿತರಾದ ಶ್ರೀ ಶ್ರೀನಿವಾಸ ಜೋಷಿ ಇವರು ಶಿಕ್ಷಣ ಇಲಾಖೆಯಲ್ಲಿ ಸೇವೆಯಲ್ಲಿದ್ದು,  ಪ್ರಸ್ತುತ ಕೊಪ್ಪಳ ಜಿಲ್ಲಾ ಸಂಸದರಾದ ಶ್ರೀ ಶಿವರಾಮೇಗೌಡ ಇವರ ಬಳಿ ಆಪ್ತ … Read more