ಅಮರ್ ದೀಪ್ ಅಂಕಣ

ಪರದೆ ಮೆ ರೆಹೆನೆ ದೋ: ಅಮರ್ ದೀಪ್ ಪಿ.ಎಸ್.

ಕಣ್ ಕಣ್ಣ ಸಲಿಗೆ….  ಸಲಿಗೆ ಅಲ್ಲ ಸುಲಿಗೆ…..  ನೀನಿನ್ನು ನನಗೆ ನನಗೆ…………….. ನನ್ನನಗೇ……….. ಆರು ತಿಂಗಳಿಂದ  ಹೀಗೇ ಬಿಡದೇ ಕಾಡುತ್ತಿದ್ದಾಳೆ. ಅದ್ಯಾಕೆ ನಾನು ಇವಳ ಹಿಂದೆ ಬಿದ್ದೆನೋ ಏನೋ.  ಇವಳ ಸಲುಗೆ, ಸರಸ ಅತಿಯಾಗಿದೆ.   ಇವಳೇ ಮೊದಲೇನಲ್ಲ.  ಸರಿಸುಮಾರು ಒಂಭತ್ತು ವರ್ಷಗಳಿಂದ  ಇಂಥವಳ ಹಲವರ ಸಹವಾಸಕ್ಕೆ ಬಿದ್ದು ನಾನು ನಾನಾಗಿ ಉಳಿದಿಲ್ಲ.  ಆದರೆ, ನಾನು ಈ ಹಿಂದೆ ಬೆನ್ನು ಬಿದ್ದ ಯಾರೂ ಈ ಮಟ್ಟದಲ್ಲಿ ಕಾಡಿದ್ದಿಲ್ಲ.  ನನ್ನ ದುರಾದೃಷ್ಟ ನೋಡಿ ಇಂಥ ರತಿಯರೊಂದಿಗೆ “ಸರಸ” ಸಲ್ಲಾಪವಾಡತೊಡಗಿದ್ದು […]

ಅಮರ್ ದೀಪ್ ಅಂಕಣ

ದೇಹವೆಂದರೆ………..: ಅಮರ್ ದೀಪ್ ಪಿ.ಎಸ್.

ಸಮಾಧಿ ******  ಮಾಂಸ ಮಣ್ಣಲ್ಲಿ ಕರಗಿ  ಬಳಿಕ ಬಿಕರಿಯಾಗದೇ ಉಳಿವ ಸವೆಯದ ಬಿಡಿ ಮೂಳೆಗಳ ಮುಚ್ಚಿದ ದುಖಾನು …. ಒಂದೆರಡು ವರ್ಷಗಳ ಹಿಂದೆ ಈ ಸಾಲುಗಳನ್ನು ಬರೆದಿದ್ದೆ. ಈ ಸಾವು, ಸಮಾಧಿ ಮತ್ತು ಸುಡುಗಾಡು ಅನ್ನುವಾಗೆಲ್ಲಾ ಒಂದು ಬಗೆಯ ಮನಸ್ಥಿತಿಗೆ ಒಳಗಾಗುತ್ತಲೇ ಇರುತ್ತೇನೆ. ನಾವು ಕೆಲವು ಮಾತಿಗೆ ಕೆಟ್ಟ ಬೇಸರ ಮಾಡಿಕೊಂಡು “ಇದೇನ್ ಸುಡುಗಾಡಲೇ” ಅನ್ನುತ್ತಿರುತ್ತೇವೆ.   ಯಾರಾದರೂ ಸತ್ತರೆ ಮಾತ್ರ ಮಣ್ಣು ಮಾಡಲು ನೆನಪಾಗುವ ಸ್ಥಳ.  ಅದು ಬಿಟ್ಟು ಇಷ್ಟ ಪಟ್ಟು ಖುಷಿಯಲ್ಲಿ ಹೋದಂತೆ ಪಾರ್ಕು, […]

ಅಮರ್ ದೀಪ್ ಅಂಕಣ

ಗುಜರಿ ಬದುಕಿನ ದಾರಿ: ಅಮರ್ ದೀಪ್ ಪಿ.ಎಸ್.

ಅಲ್ಲಿ ನನಗೊಂದು ಹೊಸ ಬಟ್ಟೆಯಿಂದ ಮುಖ ಒರೆಸಿ ಒರೆಸಿ ಇಕ್ಕಟ್ಟಾದ ಜಾಗದಲ್ಲಿ ಮಲಗಿಸಿದ್ದರು.  ಆ ಜಾಗದಲ್ಲಿ ನನ್ನಂತೆ ಇತರರಿಗೂ ಅದೇ ಸ್ಥಿತಿ.   ಅಲ್ಲಿ ಬಂದು ಹೋಗುವ ನೂರಾರು ಮಂದಿ ನಮ್ಮನ್ನೆಲ್ಲಾ ಮುಟ್ಟಿ, ತಟ್ಟಿ, ತಲೆ ಹಿಡುದು, ತಿರುವ್ಯಾಡಿ, ಕಾಲು ಜಗ್ಗಿ, ಮೈ ಬೆಂಡು ಮಾಡಿ, ನೋಡಿ “ಉಹ್ಞೂಂ. ಬ್ಯಾಡ” ಅನ್ನೋ ಮಂದಿ. ಇನ್ನೂ ಕೆಲವರು “ಇಷ್ಟಕ್ಕಾದ್ರ ಕೊಡು, ಇಲ್ಲಾಂದ್ರ ಬ್ಯಾಡ, ದುಬಾರಿಯಾತು”, ಅನ್ನುವವರು. ಅವರೆಲ್ಲಾ ಬರೀ ಹೆಂಗಸರು.  ಹಿಂಡು ಮಂದಿ ಕಲೆಯುವ ಜಾತ್ರಯೊಳಗೆ ಕೆಟ್ಟ ಬಿಸಿಲಲ್ಲಿ ನನ್ನಂಥವರನ್ನು ಮಲಗಿಸಿ, ಕುಕ್ಕರಗಾಲಲ್ಲಿ ಕುಂದ್ರಿಸಿ […]

ಅಮರ್ ದೀಪ್ ಅಂಕಣ

ಎಕ್ಸಟ್ರಾರ್ಡಿ-ನರಿ: ಅಮರ್ ದೀಪ್ ಪಿ.ಎಸ್.

ಅಲ್ಲೊಂದು ಮದುವೆ ನಡೀತಿರುತ್ತೆ. ಮಗಳ ಮದುವೆ ಮಾಡುವಾತ ಕೈಗುಣ ಚೆನ್ನಾಗಿದ್ದ ಅಡುಗೆ ಮಾಡುವವನನ್ನು  ಖುದ್ದಾಗಿ ಕರೆದು ಅಡುಗೆ ಮಾಡಲು ಹೇಳಿರುತ್ತಾನೆ.   ಪಾಪ, ಕುಕ್ಕು, ತನ್ನ ಪಾಡಿಗೆ ತಾನು ಮದುವೆಯ ಹಿಂದಿನ ದಿನವೇ ಬಂದು ಯಜಮಾನನನ್ನು ಕಂಡು ಅಂಗಿ ಕಳಚಿಟ್ಟು ಕೈಚಳಕದ ರುಚಿ ಜೋಡಿಸಲು ಕೆಲಸಕ್ಕೆ ಒಗ್ಗಿರುತ್ತಾನೆ.  ಮದುವೆ ಹಿಂದಿನ ದಿನ ಮತ್ತು ಮದುವೆ ದಿನ ಬಂದ ನೆಂಟರು, ಬಂಧುಗಳು, ಆಪ್ತರು, ಗೊತ್ತಿದ್ದವರು, ಗೊತ್ತಿಲ್ಲದವರೆಲ್ಲರೂ ಬಂದು ಸವಿದ ನಂತರ “ಅಡುಗೆ ಚೆನ್ನಾಗಿದೆ” ಅನ್ನುತ್ತಾರೆ. ಮದುವೆ ಮಾಡಿದ ಯಜಮಾನನಿಗೆ […]

ಅಮರ್ ದೀಪ್ ಅಂಕಣ

“ಕಾರ್ಮೋಡ” ಮಳೆಯಾಗಿ ಸುರಿದ ನಂತರ ತಡರಾತ್ರಿಗೆ ಮುಕ್ತಿ: ಅಮರ್ ದೀಪ್ ಪಿ.ಎಸ್.

ಅಂದು ಸಂಜೆ ಹೊಸಪೇಟೆಯಿಂದ ರೈಲು ಹತ್ತಿದಾಗ ಸಂಜೆ ಏಳು ಗಂಟೆ.  ನನ್ನ ಜನ್ಮ ಜಾತಕದಲ್ಲಿ ಅಮವಾಸ್ಯೆ ದಿನ ಪ್ರಯಾಣದಲ್ಲಿ ಅಪಘಾತದ ಸೂಚನೆ ನೀಡಿದ್ದ ಜ್ಯೋತಿಷಿಯ ನೆನಪಾಯಿತು.  ಪ್ರತಿ ದಿನವೂ ಕತ್ತಲಂತೇ ದೂಡುತ್ತಿದ್ದ ಬದುಕಿನಲ್ಲಿ ಒಂದು ದಿನದ ಅಮವಾಸ್ಯೆಯು ತನಗೇನೂ ಕೇಡು ಬಗೆಯುವುದಿಲ್ಲವೆಂಬದು ನನ್ನ ದಿಟ್ಟ ನಂಬಿಕೆ.  ರೈಲು ಭೋಗಿಯಲ್ಲಿ ಹೆಜ್ಜೆಯಿಡಲೂ ಜಾಗವಿರದಂಥ ಜನರಲ್ ಕಂಪಾರ್ಟ್ ಮೆಂಟ್. ಅದರಲ್ಲೂ ಹೆಂಗಸರು ಮಕ್ಕಳು ಜಾಗ ಅಲ್ಲಲ್ಲಿ ಹುಡುಕಿ ಕೂಡುತ್ತಿದ್ದರು. ಪಾಸ್ ಮಾಡಿಸಿಕೊಂಡು ದಿನವೂ ಓಡಾಡುವ ಸಂಭಾವಿತ ಗಂಡಸರು ವಯಸ್ಸಾದವರಿಗೆ ಜಾಗ […]

ಅಮರ್ ದೀಪ್ ಅಂಕಣ

ಫೋಟೋ ಚೌಕಟ್ಟಿನ ಆಚೀಚೆ: ಅಮರ್ ದೀಪ್ ಪಿ.ಎಸ್.

ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ದಿನಗಳವು.  ವರ್ಷಕ್ಕೊಮ್ಮೆ ಗ್ರೂಪ್ ಫೋಟೋ ತೆಗೆಸಿಕೊಳ್ಳಲು ಮೇಷ್ಟ್ರು “ಎಲ್ರೂ ನಾಳೆ ನೀಟಾಗಿ ನಿಮಗಿಷ್ಟವಾದ ಡ್ರೆಸ್ ಹಾಕ್ಕೊಂಡ್ ಬನ್ನಿ” ಅನ್ನುತ್ತಿದ್ದರೆ, ನಮ್ಮ ಮುಖ ಇಷ್ಟಗಲವಾಗಿ ಅಲ್ಲೇ ಹಲ್ಕಿರಿದು ನಿಂತು ಬಿಡುತ್ತಿದ್ದೆವು.   ಮತ್ತೆ ಫೋಟೋ ತೆಗೆಯೋ ದಿನ ಮಾತ್ರ  ಅದು ನಡೆಯುತ್ತೋ, ಓಡುತ್ತೋ, ನಿಂತಲ್ಲೇ ಎಲ್ಡು ಬಾರಿ ಸರಿಯಾದ ಟೈಮು ತೋರ್ಸುತ್ತೋ, ಬಿಡುತ್ತೋ, ಒಟ್ನಲ್ಲಿ ಎಲ್ಲಿಂದಲೋ ಒಂದ ವಾಚ್ ಕಟ್ಗ್ಯಂಡು ಅದು ಫೋಟೋದಲ್ಲಿ ಕಾಣೋ ಹಂಗೆ ನಿಂತು ಫೋಸ್ ಕೊಡುತ್ತಿದ್ದೆವು.  ಫೋಟೋ ಪ್ರಿಂಟ್ ಕೈ […]

ಅಮರ್ ದೀಪ್ ಅಂಕಣ

ಸುಟ್ಟ ಊರ ಹೊರಗಿನ ಹನುಮಪ್ಪನ ಹಿಂದೆ ಬಿದ್ದು: ಅಮರ್ ದೀಪ್ ಪಿ.ಎಸ್.

ರಾತ್ರಿ ಸುಮಾರು ಒಂಭತ್ತು ಮುಕ್ಕಾಲರ ಸಮಯಕ್ಕೆ ವೇದಿಕೆಯಲ್ಲಿ ಕಲಾವಿದರೆಲ್ಲರಿಗೂ ಸನ್ಮಾನ ಮಾಡಿದರು.   ಆ ಐದು ದಿನದ ನಾಟಕೋತ್ಸವದ  ಕೊನೆಯ ದಿನವಾದ ಅಂದು ಆ ಕಾರ್ಯಕ್ರಮದ ರುವಾರಿಗಳಿಗೆ ಅಭಿನಂದಿಸಲಾಯಿತು.  ಮುಕ್ತಾಯಕ್ಕೂ ಮುನ್ನ ಆ ನಾಟಕದ ಕತೃವನ್ನು ಸನ್ಮಾನಿಸಲಾಗಿತ್ತು.   ಅಂತಿಮವಾಗಿ ಆಯೋಜಕರು ಆ ನಾಟಕದ ರಚನೆ ಮಾಡಿದ ಲೇಖಕನಿಗೆ ಮೈಕನ್ನು ಹಸ್ತಾಂತರಿಸಿದರು.   ಲೇಖಕ ಮೂಲತ: ತಾನು ಬರೆದ ಸಣ್ಣ ಕತೆಯೊಂದನ್ನು ಆಧರಿಸಿ ಅದೇ ಕತೆಗೆ ನಾಟಕದ ರೂಪಕ ಲೇಪಿಸಿ ರಚಿಸಿದ ನಾಟಕದ ಅಂದಿನ ಪ್ರದರ್ಶನದ ನಂತರ […]

ಅಮರ್ ದೀಪ್ ಅಂಕಣ

ದೇವರಿಗೆ ಮುಡಿಸಿ ತೆಗೆದ ಬಾಡಿದ ಹೂಗಳು: ಅಮರ್ ದೀಪ್ ಪಿ.ಎಸ್.

ದೇವರ ಮೇಲೆ ಭಕ್ತಿಗಿಂತ ಭಯ ಜಾಸ್ತಿ ಇರುತ್ತೇ ಮಕ್ಕಳಿಗೆ.  ದೊಡ್ಡವರೂ ಅಷ್ಟೇ. ಮಕ್ಕಳ ಶ್ರದ್ಧೆ, ಶಿಸ್ತು, ಒಳ್ಳೆಯ ನಡತೆ, ಕಲಿಕೆ ಎಲ್ಲದರ ನಿಯಂತ್ರಣಕ್ಕಾಗಿ ಮತ್ತು ಬೆಳವಣಿಗೆಗಾಗಿ ಪ್ರಸ್ತಾವನೆಗಳನ್ನು “ದೇವರು” ಅನ್ನುವ  ಅಗೋಚರನ ಮುಂದಿಟ್ಟೇ ಜೀವನ ನಡೆಸುತ್ತಿರುತ್ತಾರೆ.   ನಾವೂ ಅಷ್ಟೇ, ತಿಳುವಳಿಕೆ ಬರುವವರೆಗೂ ಅಥವಾ ಬಂದ ಮೇಲೂ “ದೇವ”ರೆನ್ನುವ ಫೋಟೋ ಮತ್ತು ಆತನ ಕೋಣೆಗೆ ಒಮ್ಮೆ ಭೇಟಿಯಾಗಿಯೇ ಮುಂದಿನ ಹೆಜ್ಜೆ ಇಡುತ್ತೇವೆ.   ತಪ್ಪು ಮಾಡಿದಾಗ, ಬರೆದ  ಉತ್ತರ ತಪ್ಪಾಗಿ ಒದೆ ಬೀಳುವಾಗ, ರಿಜಲ್ಟು ಶೀಟ್ ನೋಡುವಾಗ, […]

ಅಮರ್ ದೀಪ್ ಅಂಕಣ

ವಿಚ್ಚೇದನಾ ಪ್ರಕರಣ ಕಾರ್ಯಕ್ರಮದ ನಂತರ: ಅಮರ್ ದೀಪ್ ಪಿ.ಎಸ್.

ಚೆಂದನೆಯ ಕಥಾವಸ್ತುವುಳ್ಳ ಸಿನೆಮಾಗಳು ಹಿಂದೆ  ನೂರು ದಿನ ಪ್ರದರ್ಶನ ಕಾಣುವುದು ಮಾಮೂಲಾಗಿತ್ತು. ಸತತ ಇಪ್ಪತ್ತೈದನೇ ವಾರ, ಐವತ್ತನೇ ವಾರ,  ಒಂದು ವರ್ಷ,  ಎರಡು ವರ್ಷದ ದಾಖಲೆ ಪ್ರದರ್ಶನದ ಸಂಭ್ರಮ.  ಮೊನ್ನೆ ಮೊನ್ನೆ ಒಂದು ಹಿಂದಿ ಸಿನೆಮಾ ಬರೋಬ್ಬರಿ ಒಂದು ಸಾವಿರ ವಾರ ಪ್ರದರ್ಶನ ಕಂಡು ಅದೇ ಸಿನಿಮಾದೊಂದಿಗೆ ಆ ಸಿನಿಮಾ ಥಿಯೇಟರ್ ಮುಚ್ಚಲಾಯಿತು. ಇತ್ತೀಚಿನ ಸಿನೆಮಾಗಳು ವಾರಗಳ ಲೆಕ್ಕದ ಬದಲು ದಿನದ ಲೆಕ್ಕದಲ್ಲಿ ಪ್ರದರ್ಶನ ಕಂಡ ಬಗ್ಗೆ   “ಇಪ್ಪತ್ತೈದನೇ ದಿನ”  “ಐವತ್ತನೇ ದಿನ” “ನೂರನೇ ದಿನ” […]

ಅಮರ್ ದೀಪ್ ಅಂಕಣ

ಗೋಪಾಲಾ …. ಗೋಪಾಲಾ…: ಅಮರ್ ದೀಪ್ ಪಿ.ಎಸ್.

ಬಳ್ಳಾರಿಯ ಕಾಳಮ್ಮ ಬೀದಿಯಿಂದ ಪಶ್ಚಿಮಕ್ಕೆ ಬಂದರೆ, ರಾಜರಾಜೇಶ್ವರಿ ಸಿನೆಮಾ ಥೀಯೇಟರ್.   ಮುಂದೆ ಮೋತಿ ವೃತ್ತ. ಥೀಯೇಟರ್ ಎದುರಿಗೆ ಬಹುಮಹಡಿ ಹೋಟಲ್ಲೊಂದರ ಕಾಮಗಾರಿ ನಡೆಯುತ್ತಿದೆ.  ಸಂಜೆ ಸಿನೆಮಾ ನೋಡಿ ಹೊರ ಬಂದವರು, ಸೆಕೆಂಡ್ ಷೋಗೆ ಹೋಗುವವರ ಜಂಗುಳಿ.  ಕತ್ತಲಲ್ಲಿ ಎದ್ದು ಕಾಣುವಂಥ ಮಲ್ಲಿಗೆಯ ಸರ ತಲೆಯಿಂದ ಎಳೆದು ಎದೆ ಮೇಲೆ ಬಿಟ್ಟುಕೊಂಡು ಒಂದೊಂದೇ ಪಕ್ಕಳೆಯನ್ನು ಕಿತ್ತುತ್ತಾ, ಮುಸುತ್ತಾ ಆಕರ್ಷಿಸುವ ಒಂದಿಷ್ಟು ನಿತ್ಯ ಮುತ್ತೈದೆಯರು.   ಅಲ್ಲಲ್ಲಿ ಕಣ್ಣಾಡಿಸುತ್ತಲೇ ತಿರುಗುವ ವಿಟರು. ಗದ್ದಲದಲ್ಲೇ ಕೈ ಚಳಕ ತೋರಿಸಿ ಜೇಬು […]

ಅಮರ್ ದೀಪ್ ಅಂಕಣ

ಮಕ್ಕಳೆದುರಿ​ಗೆ ಮತ್ತು ಮಕ್ಕಳಾಗುವ ಮುನ್ನ: ಅಮರ್ ದೀಪ್ ಪಿ.ಎಸ್.

ಹಳ್ಳಿಗಳಲ್ಲಿ ಹಿಂದೆ ವೈದ್ಯರಿಗಿಂತ ಅನುಭವಸ್ಥರಾಗಿ ಸೂಲಗಿತ್ತಿಯರು ಗರ್ಭಿಣಿ ಹೆಂಗಸರಿಗೆ ಮನೆಯಲ್ಲೇ ನಾರ್ಮಲ್ ಹೆರಿಗೆ ಮಾಡಿಸಿ ಕೂಸು ಬಾಣಂತಿಯನ್ನು ಎರೆದು ನೀರು ಹಾಕಲು ಬರುತ್ತಿದ್ದರು.    ಹೊರಗೆ ಗಂಡ, ಉಳಿದವರು ಕಾತರದಿಂದ ಕಾಯುತ್ತಿದ್ದರೆ, ಒಳಗೆ ಗರ್ಭಿಣಿ ಹೆಂಗಸು ನೋವು ತಿನ್ನುತ್ತಿರುತ್ತಾಳೆ.   ಒಂದು ಕ್ಷಣ ನೋವು ತಿನ್ನುವ ಸದ್ದು ನಿಂತಿತೋ? ಮತ್ತೊಂದು ಕೂಗು ಕೇಳುತ್ತದೆ.  ಈಗ ಹುಟ್ಟಿದ್ದು ಹೆಣ್ಣೋ? ಗಂಡೋ? ಎನ್ನುವ ಕಾತರ.   ಹೊರಗಡೆ ಬಂದ ಮೊದಲ ಹೆಂಗಸು ಮಗು ಯಾವುದೆಂದು ತಿಳಿಸಿ ಮತ್ತೆ ಒಳ ನಡೆಯುತ್ತಾಳೆ. […]

ಅಮರ್ ದೀಪ್ ಅಂಕಣ

“ಭವಿಷ್ಯ”ದ ಜಗುಲಿಕಟ್ಟೆ​ಯಲ್ಲಿ ಅನಿರೀಕ್ಷಿತ​ವಾಗಿ ಕುಳಿತು: ಅಮರ್ ದೀಪ್ ಪಿ.ಎಸ್.

ತಮಾಷೆ ಅನ್ನಿಸಿದರೂ ಕಿವಿಗೆ ಬಿದ್ದ ಒಂದು ಪ್ರಸಂಗ ಹೇಳಿಬಿಡುತ್ತೇನೆ.  ಒಂದಿನ ಸಂಜೆ ಪೂರ್ಣ ಬೆಳಕಿಲ್ಲದ  ದೊಡ್ಡ ಅಂಕಣದ ಕೋಣೆಯಲ್ಲಿ ಅಲ್ಲೊಂದು ಇಲ್ಲೊಂದು ದೀಪ ಹಚ್ಚಿಟ್ಟಂತಿದ್ದ  ಬೆಳಕಲ್ಲಿ  ಕುಳಿತು ಗುಸು ಗುಸು ಮಾತಾಡುವ ಮಂದಿ ಮಧ್ಯೆ ಅತ್ತಿಂದಿತ್ತ ತಿರುಗುವ ಹುಡುಗನೊಬ್ಬ. ಮಾತಾಡುವ ಗುಂಪಿನಲ್ಲಿ ಒಬ್ಬ ಧಡೂತಿ ಮನುಷ್ಯನೊಬ್ಬ   ಹುಡುಗನನ್ನು ಕರೆದು "ಏನ್ ತಮ್ಮಾ ನಿನ್ ಹೆಸ್ರು?" ಕೇಳಿದ.   ಈ ಹುಡುಗ "ಬಿರಾದರ" ಅಂದ.  "ಸರಿ, ಈ  ತುಂಡು ಪೇಪರ್ ಮೇಲೆ ನಿನ್ ಹೆಸ್ರು ಬರ್ದು ಸೈನ್ […]

ಅಮರ್ ದೀಪ್ ಅಂಕಣ

ಅಲ್ಲಿರಲಾಗಲಿ​ಲ್ಲ ಇನ್ನೆಲ್ಲಿಗೂ ಹೋಗಲಿಲ್ಲ: ಅಮರ್ ದೀಪ್ ಪಿ.ಎಸ್.

ಹದಿನೈದಿಪ್ಪತ್ತು  ದಿನದ ಹಿಂದೆ ನನ್ನ ಸ್ನೇಹಿತರೊಬ್ಬರೊಂದಿಗೆ ಬಹಳ ದಿನದ ನಂತರ ಕಲೆತು ಹರಟುತ್ತಿದ್ದೆ.   ಅವನು  ತಾನು  ಕಂಡಂಥ ಕೆಲವರ ಅವಸರದ ನಡುವಳಿಕೆ ಬಗ್ಗೆ ಹೇಳುತ್ತಿದ್ದ;   "ಕೆಲವರನ್ನು ನಾವು ನೋಡಬಹುದು.  ಹುಳ ಹರಿದಾಡಿದಂತೆ ತಿರುಗುತ್ತಿರುತ್ತಾರೆ.  ಯಾವುದೇ ಸಭೆ,  ಸಮಾರಂಭ, ಕಾರ್ಯಕ್ರಮ,  ಉಪನ್ಯಾಸ ತಪ್ಪಿಸಿಕೊಳ್ಳುವುದಿಲ್ಲ.  ಆಯಾಯಾ ಕಾರ್ಯಕ್ರಮಗಳಲ್ಲಿ ತಮ್ಮ ಇರುವಿಕೆಯ ಛಾಪನ್ನು ಬಿಟ್ಟು ಬಂದಿರುತ್ತಾರೆ.  ಆ ಸಮಾರಂಭ ಪೂರ್ಣವಾಗುವವರೆಗೂ ಅಲ್ಲಿರುವುದಿಲ್ಲ. ತಮ್ಮ  ಹಾಜರಿ ಹಾಕಿ ಅವಕಾಶವಿದ್ದರೆ, ನಾಲ್ಕು ಮಾತಾಡಿ, ನೆರೆದಿದ್ದವರೊಂದಿಗೆ  ಆತ್ಮೀಯತೆಯಿಂದ  ಬೆರೆತು ಮತ್ತೊಂದು ಕಾರ್ಯಕ್ರಮದ, ಸಮಾರಂಭದ […]

ಅಮರ್ ದೀಪ್ ಅಂಕಣ

ಗಡುವು ದಾಟಿದ ಪ್ರೀತಿ ಗಡಿ ದಾಟದ ಬದುಕು: ಅಮರ್ ದೀಪ್ ಪಿ.ಎಸ್.

ಇಂದಿಗೆ ಸರಿಯಾಗಿ ಎದೆಯಲ್ಲಿ ಒಂದು ಬಾಗಿಲು ಶಾಶ್ವತವಾಗಿ ಮುಚ್ಚಿ ಬರೋಬ್ಬರಿ ಹತ್ತೊಂಬತ್ತು ವರ್ಷ. ಅದರೊಂದಿಗೆ ಒಂದು ಸುಂದರವಾದ ನೆನಪಿನ ಬಿಳಿ ಗೋಡೆ ಮತ್ತು ಅದೊರೊಳಗಿನ ಖಾಲಿ ಖಾಲಿ ಭಾವನೆ.  ನನಗೊಬ್ಬನಿಗೆ ಕಾಣಿಸುವಂತೆ ಭಾಸ.  ಅದಕ್ಕೆ ಪ್ರತಿ ನಿತ್ಯ ನೀರು, ಗೊಬ್ಬರ ಹಾಕಬೇಕಿಲ್ಲ. ಬರಿಯ ಪ್ರೀತಿಯ ಮೆಚ್ಚುಗೆಯ ಪದವೊಂದನ್ನು ಎದೆಯೊಳಗೆ ಇಳಿ ಬಿಟ್ಟರೆ ಸಾಕು; ಅಲ್ಲೊಂದು ಬುಗ್ಗೆಯಂಥ ಮೊಗ್ಗು ಬೆಳೆಯುತ್ತದೆ. ದಿನವೂ ಬಂದು ಬಾಗಿಲಿಂದ, ಕಿಟಕಿಯೊಳಗಿಂದ ಇಣುಕಿ, ಕರೆದು ತಮ್ಮನ್ನು ಬಿತ್ತರಿಸಿಕೊಳ್ಳುವ ನಕ್ಷತ್ರಗಳಿಗೆ ಇಂದಿನ ರಾತ್ರಿಯ ಸಾಲು ಹಬ್ಬ. […]

ಅಮರ್ ದೀಪ್ ಅಂಕಣ

“ಕುರು” ವರನ ಕರುಳು ಕರಗಿತು: ಅಮರ್ ದೀಪ್ ಅಂಕಣ

ಯಾವುದೋ ಸಿನೆಮಾ ನೋಡುತ್ತಿರುತ್ತೇವೆ, ಇನ್ಯಾವುದೋ ಕಥೆ ನೆನಪಾಗುತ್ತೆ.  ಯಾರದೋ ಜೊತೆ ಮಾತಾಡುತ್ತಿರುತ್ತೇವೆ ಇನ್ಯಾರದೋ ಮಾತಿನ ವರಸೆ ನೆನಪಾಗುತ್ತೆ.   ಯಾವುದೋ ಹಾಡು ಗುನುಗು ತ್ತಿರುತ್ತೇವೆ, ಮತ್ಯಾವುದೋ ದುಃಖ ಎದೆಗಿಳಿಯುತ್ತೆ. ಸುಖದ ಕ್ಷಣಗಳು ಕೆಲವನ್ನೇ ಮಾತ್ರ ಜ್ನಾಪಿಸುತ್ತವೆ.    ನಮ್ಮಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ.   ಅದನ್ನು ಯಾವ ಹಂತದಲ್ಲಿ ಚಿವುಟಿ ದಾಟಬೇಕು ಅನ್ನುವುದರಲ್ಲಿ ನಮ್ಮ ಜಾಣತನ ಇರುತ್ತೆ.  ದುರಂತವೆಂದರೆ,  ಆ ಸಮಯಕ್ಕೆ ಅಂತ ಜಾಣತನಕ್ಕೆ ಕಿವುಡು ಮತ್ತು ಮೂಗತನ  ಆವರಿಸಿರುತ್ತದೆ.   ಆಗಲೇ ನಾವು […]

ಅಮರ್ ದೀಪ್ ಅಂಕಣ

ನಾಲಗೆ ಮೇಲಿನ ಮಚ್ಚೆಯ ರಾಚ: ಅಮರ್ ದೀಪ್ ಪಿ.ಎಸ್.

ಊರಲ್ಲಿ ನೋಡಿದ್ರೆ ಜನ ರಾಚನ ಮನೆ ಮುಂದೆ ಜಮಾಯ್ಸಿದಾರೆ.  ರಾಚ ಮಾತ್ರ ತನಗೇನು ಗೊತ್ತೇ ಇಲ್ಲ ದಂತೆ ಊರ ಉಸಾಬರಿ ಮಾಡದೇ ತಾನಾಯ್ತು ತನ್ನ ಹೊಲ,  ದೊಡ್ಡಿ ದನಗಳ ಮೇವು, ಮುಸುರಿ, ಸಗಣಿ ಕೆಲಸದ ಜೊತೆ ಬಿಜಿನೋ ಬಿಜಿ.  ಜನ, ಅವನ ಹೆಂಡ್ತೀನ ಕೇಳ್ತಾ ಇದ್ರು. ಅವನ ಹೆಂಡ್ತಿ ಕೂಡ "ಇವ್ನ ಹೆಣದ್ ಜೊತೆ ಅವ್ರೀಸು ಮಂದೀದು ಎತ್ಲಿ" ಅಂದು ಬಾಯ್ತುಂಬ ಶಪಿಸಿದಳು.  ಸಧ್ಯಕ್ಕೆ ಒಲೆಗೆ ಇಡೋಕೆ ಸೌದೆ ಇಲ್ದೇ  ಮನೆ ಮುಂದೆ ಬಂದ ಜನಗಳ ಕೈ […]

ಅಮರ್ ದೀಪ್ ಅಂಕಣ

ಟನ್ನು ಭಾರದ ಖುಷಿ ಹೊರುವಂತಿರಬೇ​ಕು ಟ್ರಿಪ್ಪು: ಅಮರ್ ದೀಪ್ ಪಿ.ಎಸ್.

ಒಂದೇ ಕಡೆ ಅದೇ ಕೆಲಸ, ಅದೇ ರಸ್ತೆ, ಓಡಾಟ, ಮನೆ, ಮಂದಿ, ಮಾತು, ಜೀವನ ಕ್ರಮ ಒಮ್ಮೊಮ್ಮೆ ಬೋರಾಗುತ್ತೆ.   ಆಗಾಗ ಒಂದೆರಡು ದಿನಗಳ ಮಟ್ಟಿಗಾದರೂ ಹೊರಗಡೆ ತಿರುಗಾಡಿ ಬರಬೇಕು. ಹೋಗಿ ಬಂದೆವೆಂದರೆ, ಮನಸ್ಸು ದಿಗ್ಗನೇ ಎದ್ದು "ನಾನ್ ಫ್ರೆಶ್ ಆದ್ನೆಪ್ಪಾ" ಅಂತೇನೂ ಹೇಳುವುದಿಲ್ಲ.  ಆದರೆ, ಗೆಳೆಯರು ಸೇರಿ ರುಟೀನು ತಪ್ಪಿಸಿಕೊಂಡ ಖುಷಿಗೋ ಅಥವಾ ಹೊಸ ಜಾಗ,  ಸಧ್ಯಕ್ಕೆ ಹತ್ತಿರವಿಲ್ಲದ ಕೆಲಸ, ದುಡಿಮೆ, ಟೆನ್ಶನ್ ಎಲ್ಲಾನು ಮರೆತು ಖುಷ್ ಖುಷಿಯಾಗಿ  ಪರಿಸರ, ನದಿ ತೀರ, ಐತಿಹಾಸಿಕ ಸ್ಥಳ, […]

ಅಮರ್ ದೀಪ್ ಅಂಕಣ

ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.

ಮಕ್ಕಳನ್ನು ನೋಡುತ್ತಲೇ ಕೆಲವರು ಹೇಳುತ್ತಿರುತ್ತಾರೆ;  "ಹುಡುಗ ಭಾಳ ಚುರುಕದಾನ, ಮುಂದ್ ಚಲೋತ್ನಾಗಿ ಓದಿ ಬುದ್ಧಿವಂತನಾಗ್ತಾನ, ನೀವೇನ್ ಕಾಳಜಿ ಮಾಡಬ್ಯಾಡ್ರಿ"  ಆ ಬುದ್ಧಿವಂತಿಕೆ, ಚುರುಕು, ತಲೆಗೆ ಹತ್ತುವ ಓದು ಎಲ್ಲಾ ಓಕೆ.  ಆದರೆ, ನಾನು ನೋಡಿದ ಸ್ವತಃ ನೋಡಿ  ಅನುಭವಿಸಿದಂತೆ ಕೆಲವು ಸ್ನೇಹಿತರಲ್ಲಿ ಯು- ಟರ್ನ್ ತೆಗೆದುಕೊಂಡಿರುತ್ತಾರೆ.  ಒಂದೋ ದಡ್ಡತನದಿಂದ ಜಾಣತನದೆಡೆಗೆ ಇಲ್ಲವೇ ಬುದ್ಧಿವಂತಿಕೆಯಿಂದ  ದಡ್ಡರ ಸಾಲಿಗೆ.  ಸೋಮಾರಿತನ ಬಿಟ್ಟು ಸಮಯ,ದುಡಿಮೆ, ಜಾಣ್ಮೆ ಎಲ್ಲದರ ಕಡೆ ಪ್ರಜ್ಞಾಪೂರ್ವಕವಾಗಿ ಬಿಹೇವ್ ಮಾಡುವುದು.  ಈ ಮಧ್ಯೆ ಓದಿನ ಹಂತದಲ್ಲೇ  ಚೂರು ಮೈ […]

ಅಮರ್ ದೀಪ್ ಅಂಕಣ

ತುಪ್ಪದ ರುಚಿ ನಂತರವೂ ಸಾಲ ಮಾಡಲೇಬೇಕಾ?: ಅಮರ್ ದೀಪ್ ಪಿ.ಎಸ್.

ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ್ದರೆನ್ನಲಾದ  ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಒಂದು ಘಟನೆ. ದಲಿತ ಸಮುದಾಯದವರು ಸಾಮೂಹಿಕ ಭೋಜನದಲ್ಲಿ ತುಪ್ಪವನ್ನು ಬಡಿಸಿ, ಊಟ ಮಾಡುವ ವೇಳೆ ಮೇಲ್ವರ್ಗದ ಜನರು ಅಡುಗೆ ಪಾದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಊಟ ಮಾಡುತ್ತಾ ಕುಳಿತ ಜನರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಂತೆ. ಕಾರಣ, ಆ ವರ್ಗದ ಜನರು ತುಪ್ಪ ತಿನ್ನಬಾರದು.  ತಿಂದದ್ದು ಮೇಲ್ವರ್ಗದ ಜನಗಳಿಗೆ ಮಾಡಿದ ಅಪಮಾನವಂತೆ. ಇಂಥ ಪಿಡುಗುಗಳನ್ನು ಸಾಕ್ಷರತೆ ಸಾರುವ ಮೂಲಕ ಮಾತ್ರ ತೊಡಗಿಸಲು ಸಾಧ್ಯವೆಂದರಿತು ಡಾ. ಬಿ. ಆರ್. ಅಂಬೇಡ್ಕರ್ […]

ಅಮರ್ ದೀಪ್ ಅಂಕಣ

ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.

ಫೆಬ್ರವರಿ 16, 27, ಏಪ್ರಿಲ್ 24, ಡಿಸೆಂಬರ್ 25, ಆಗಸ್ಟ್ 15, ಜನವರಿ 26, ಹೀಗೆ ಸುಮಾರು ದಿನಗಳು ಒಬ್ಬೊಬ್ಬರಿಗೆ ಒಂದೊಂದು ಮರೆಯಲಾರದ ದಿನವಾಗಿರುತ್ತೆ.  ಮದುವೆಯದೋ.  ಹುಟ್ಟುಹಬ್ಬದ್ದೋ… ರಾಷ್ಟ್ರೀಯ ಹಬ್ಬ ಅದು ಬಿಡಿ ಎಲ್ಲರಿಗೂ ಹಬ್ಬವೇ. ಒಮ್ಮೊಮ್ಮೆ ಆ ದಿನಗಳಿಗೆ ಅಂಟಿಕೊಂಡು ಒಂದೊಂದು ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಘಟನೆಗಳು  ಸೇರಿರುತ್ತವೆ. ಹೆಚ್ಚು ಓದಿರದ ನಮ್ಮವ್ವನ ವಯಸ್ಸಿನವರಿಗೆ  "ನನ್ನ  ಹುಟ್ಟಿದ ದಿನಾಂಕ ಯಾವ್ದವ್ವ?" ಅಂತೇನಾದ್ರೂ ಕೇಳಿದ್ರೆ, ಗೊತ್ತಿಲ್ಲೆಪ್ಪಾ, ಆದ್ರ ನೀ ಹುಟ್ಟಿದ್ ಎಲ್ಡು ದಿನಕ್ಕೆ ಕಾರ ಹುಣ್ಣಿವಿ ಇತ್ನೋಡೆಪ್ಪ. […]