Facebook

Archive for the ‘ಕಾದಂಬರಿ’ Category

ಸ್ನೇಹ ಭಾಂದವ್ಯ (ಭಾಗ 5): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಇತ್ತ ಸಂಜೆ ಆಫೀಸಿನಿಂದ ಮನೆಗೆ ಎಂದ ರಾಜೇಶ ತುಂಬಾ ಖುಷಿಯಾಗಿರುವದನ್ನು ಗಮನಿಸಿದ ಪದ್ಮಮ್ಮ ಏನೋ ರಾಜೇಶ ಇವತ್ತು ತುಂಬಾ ಖುಷಿಯಾಗಿದೆಯಲ್ಲೋ ಏನಾದರೂ ಲಾಟರಿ ಹೊಡೆಯಿತೇನೋ ಎಂದಳು. ಆಗ ರಾಜೇಶನಿಗೆ ಬೇಸರವಾಗಿ ಹೋಗಮ್ಮ ನಿನಗ್ಯಾವಾಗಲು ದುಡ್ಡಿನದೇ ಚಿಂತೆ ಎನ್ನುತ್ತಾ ತನ್ನ ರೂಮಿಗೆ ಹೋದ. ಅವನಿಗೆ ಬೇಗ ನಿದ್ದೆ ಬರದೆ ತನ್ನ ಕಾಲೇಜಿನ ದಿನಗಳು ನೆನಪಾದವು. ತನ್ನ ಸಹಪಾಠಿಯಾದ ಸುನಿತಾಳನ್ನು ತುಂಬಾ ಪ್ರೀತಿಸುತ್ತಿದ್ದ. ದಿನಾ ಅವಳನ್ನು ನೋಡುತ್ತಾ ತನ್ನ ಮನದಲ್ಲಿರೋದನ್ನ ಅವಳಿಗೆ ಹೇಳಬೇಕು ಅಂತ ಎಷ್ಟೊಂದು ಬಾರಿ ಪ್ರಯತ್ನಿಸಿದರೂ […]

ಕೆಂಗುಲಾಬಿ (ಭಾಗ 18): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಆಕೆಯ ಬದುಕಿನಲ್ಲಿ ಎದುರಾಗುತ್ತಿರುವ ತಿರುವು ಮುರುವುಗಳನ್ನು ನನ್ನನ್ನು ಕೂಡ ಆತಂಕಗೊಳಿಸಿದ್ದವು. ನಮ್ಮ ಆಫೀಸ್‍ನಲ್ಲಿ ಹಿರಿಯ ಲೈಂಗಿಕ ಕಾರ್ಮಿಕರನ್ನು ಕಾಂಡೋಮ್ ಹಂಚುವ 'ಸಂರಕ್ಷಾ ಸಖಿ'ಯರನ್ನಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಚರ್ಚೆ ಮಾಡಿದ್ದು ನೆನಪಾಗಿ ನಾನು ಆಕೆಗೆ ವಿಷಯವನ್ನೆಲ್ಲ ತಿಳಿಸಿದೆ. ನಮ್ಮ ಕಚೇರಿಯ ವಿಳಾಸ ಕೊಟ್ಟು ಹೊರ ಬಂದೆ. ಮನೆಯ ಬಾಗಿಲಿನಲ್ಲಿ ಕುಳಿತಿದ್ದ ರಾಜಿಯ ಅರಳುತ್ತಿರುವ ಚೆಲುವನ್ನು ನೋಡಿ ನನಗೆ ಸಂತೋಷ, ಗಾಬರಿಗಳೆರಡು ಒಟ್ಟೊಟ್ಟಿಗೆ ಆದವು. ಮತ್ತೆ ಮನೆಯೊಳಗೆ ಹೋಗಿ ರಾಜಿ ಬಗ್ಗೆ ವಿಶೇಷ ಎಚ್ಚರಿಕೆವಹಿಸಬೇಕು ಎಂದು ಕಿವಿಮಾತು […]

ಸ್ನೇಹ ಭಾಂದವ್ಯ (ಭಾಗ 4): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ) ಆ ದಿನ ರಾತ್ರಿ ಸುಧಾಳಿಗೆ ನಿದ್ದೆ ಹತ್ತಿರ ಸುಳಿಯದಾಯಿತು ಈ ವಿಷಯವನ್ನು ಹೇಗಾದರೂ ಮಾಡಿ ರೇಖಾಳಿಗೆ ತಿಳಿಸಬೇಕು. ಊರಿಗೆ ಬಂದು ಐದಾರು ದಿನಗಳು ಕಳೆದಿವೆ ಆದರೂ ರೇಖಾಳನ್ನು ಭೇಟಿಯಾಗಿಲ್ಲ. ಈ ಬಿಕ್ಕಟ್ಟಿನಿಂದ ಹೇಗಾದರೂ ಪಾರಾಗಬೇಕೆಂದು ಚಿಂತಿಸುತ್ತ ಮಲಗಿದವಳಿಗೆ ಬೆಳಕು ಹರಿದಿದ್ದೆ ತಿಳಿಯಲಿಲ್ಲ. ಏಳೇ ಸುಧಾ ಇನ್ನು ಮಲಗೆ ಇದ್ದೀಯಲ್ಲೆ. ಗಂಡಿನ ಕಡೆಯವರು ಬರುವುದರೊಳಗಾಗಿ ಮನೆಯ ಕೆಲಸವೆಲ್ಲ ಮುಗಿಯಬೇಕು ಎಂದು ಕಾವೇರಮ್ಮ ಎಬ್ಬಿಸಿದಾಗಲೇ ಸುಧಾಳಿಗೆ ಎಚ್ಚರ. ಸುಧಾ ಎದ್ದು ಬೇಗ ಬೇಗನೆ ಮನೆಗೆಲಸದಲ್ಲಿ ತಾಯಿಗೆ ಸಹಾಯ ಮಾಡಿ […]

ಸ್ನೇಹ ಭಾಂದವ್ಯ (ಭಾಗ 3): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…)  ಇತ್ತ ಗೆಳತಿಯರಿಬ್ಬರು ಮುಂದೇನು ಎಂದು ಚಿಂತಿಸತೊಡಗಿದರು. ಆಗ ರೇಖಾನೆ ಮೊದಲಿಗಳಾಗಿ ಸುಧಾ ನಾಳೆ ಬೆಳಿಗ್ಗೆ ನಾವಿಬ್ಬರು ಮೊದಲು ಎಲ್ಲಾದರೂ ರೂಮು ಬಾಡಿಗೆಗೆ ಸಿಗುತ್ತದಾ ಅಂತ ನೋಡೋಣಾ ಎಂದಳು. ಗೆಳತಿಯ ಮಾತಿಗೆ ಸುಧಾ ಸಮ್ಮತಿಸಿದಳು. ಅನಂತರ ಪಕ್ಕದ ರೂಮಿನ ಹುಡುಗಿಯೊಬ್ಬಳು ಬಂದು ಊಟಕ್ಕೆ ಬರ್ರಿ ಎಂದು ಹೇಳಿ ಹೋದಳು. ಅದರಂತೆ ರೇಖಾ ಮತ್ತು ಸುಧಾ ಇಬ್ಬರು ಊಟದ ಹಾಲಿಗೆ ಬಂದಾಗ ಕನಿಷ್ಟ ನಲವತ್ತು ಹುಡುಗಿಯರು ಊಟಕ್ಕೆ ಕುಳಿತ್ತಿದ್ದರು. ಇವರು ಹೋಗಿ ಕುಳಿತರು. ಆಗ ಹುಡುಗಿಯರೆಲ್ಲ ಒಬ್ಬೊಬ್ಬರಂತೆ ಇವರ […]

ಕೆಂಗುಲಾಬಿ (ಭಾಗ 17): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಇಲ್ಲಿಗೆ ಬಂದ ಮೇಲೆ ಇಲ್ಲಿನ ಕೆಲಸ ಎಲ್ಲರಿಗೂ ಸಿಗುವ ಪರಿಧಿಯಲ್ಲ ಅಂತ ಗೊತ್ತಾಯಿತು. ಈ ಕ್ಷೇತ್ರದಲ್ಲಿ ಹತ್ತಾರು ವರ್ಷ ದಕ್ಷತೆಯಿಂದ ದುಡಿಮೆ ಹೆಸರು, ಅನುಭವ ಗಳಿಸಿದರಷ್ಟೇ ಇಂಥ ಕಾಂಟ್ರಾಕ್ಟ್ ಗಳನ್ನು ನಿಭಾಯಿಸಲು ಸಾಧ್ಯ. ಇಲ್ಲಿ ನಂಬಿಕೆ, ವಿಶ್ವಾಸ ಎಲ್ಲಕ್ಕಿಂತ ಮುಖ್ಯವಾಗಿ ಸೌಂದರ್ಯ ಮತ್ತು ನಾಜೂಕತೆ ಮುಖ್ಯವಾಗುತ್ತದೆ. ತುಂಬಾ ಜವಾಬ್ದಾರಿಯ ಕೆಲಸ ಇದು. ಆಕಸ್ಮಾತ್ತಾಗಿ ಸ್ವಲ್ಪ ಲೀಕಾದ್ರೂ ನಮ್ಮನ್ನು ಇಟ್ಟುಕೊಂಡ ಘರ್‍ವಾಲಿಗಳ ಪ್ರಾಣಕ್ಕೆ ಕುತ್ತು ಬರುವುದರಲ್ಲಿ ತಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಕಾರ್ಯವನ್ನು ಅತೀವ ಎಚ್ಚರದಿಂದ ನಿರ್ವಹಿಸುತ್ತಾರೆ.   […]

ಸ್ನೇಹ ಭಾಂದವ್ಯ (ಭಾಗ 2): ನಾಗರತ್ನಾ ಗೋವಿಂದನ್ನವರ

(ಇಲ್ಲಿಯವರೆಗೆ…) ಮರುದಿನ ಎಂದಿನಂತೆಯೆ ಗೆಳತಿಯರಿಬ್ಬರು ಅಂದುಕೊಂಡಂತೆಯೇ ಅದೇ ಮಾವಿನ ಮರದ ಕೆಳಗೆ ಭೇಟಿಯಾದರು. ಆಗ ರೇಖಾಳೆ ಮಾತಿಗಾರಂಭಿಸಿದಳು. ಏ ಸುಧಾ ಈಗಾಗಲೇ ಕಾಲೇಜ್ ಅಡ್ಮೀಷನ್ ಶುರು ಆಗಿ ನಾಲ್ಕೈದು ದಿನಗಳಾಗಿವೆ. ಇನ್ನು ಹತ್ತು ದಿನದೊಳಗಾಗಿ ನಾವು ಪಟ್ಟಣಕ್ಕೆ ಹೋಗಿ ಅಡ್ಮೀಷನ್ ಮಾಡಿಸಿ ಬರಬೇಕು. ಇಲ್ಲದಿದ್ದರೆ ದಂಡ ಕಟ್ಟಬೇಕಾಗುತ್ತದೆ. ಹೌದು ಕಣೆ ರೇಖಾ ಆದಷ್ಟು ಬೇಗ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ನಾವು ಕಾಲೇಜನ್ನ ಮರೆತು ಮನೆಯಲ್ಲಿದ್ದ ಬಿಡಬೇಕಾಗುತ್ತದೆ ಎಂದಳು. ಈಗೇನು ಮಾಡೋದು ಅಂತ ಮೊದಲು ಹೇಳು ಸುಧಾ […]

ಕೆಂಗುಲಾಬಿ (ಭಾಗ 16): ಹನುಮಂತ ಹಾಲಿಗೇರಿ

    (ಇಲ್ಲಿಯವರೆಗೆ) ಜನನಿಬಿಡ ಮಾರುಕಟ್ಟೆಯಲ್ಲಿ ರಸ್ತೆಯ ಎರಡು ಬದಿಗೆ ಶಾರದೆಗಾಗಿ ಕಣ್ಣು ಹಾಯಿಸುತ್ತಾ ನಡೆದಿದ್ದಾಗ ದೀಪಾಳ ಹಿಂದಿನಿಂದ ದೊಡ್ಡ ಹೊಟ್ಟೆಯ ಮುದಿ ಹೆಂಗಸೊಂದು ಧಾವಿಸಿ ಮುಂದೆ ಬಂದಿತು. ನಾವಿಬ್ಬರು ಒಂದು ಕ್ಷಣ ದಂಗುಗೀಡಾದೆವು. ಸ್ವಲ್ಪ ಹೊತ್ತಿನಲ್ಲಿ ದೀಪಾ ಸಾವರಿಸಿಕೊಂಡು ಆ ಮುದಿ ಮಹಿಳೆಯನ್ನು ಸಮಾಧಾನಿಸಿಕೊಂಡು ಬಾಗಿಲು ಮುಚ್ಚಿದ ಅಂಗಡಿ ಮುಂಗಟ್ಟೆಯ ಹತ್ತಿರಕ್ಕೆ ಕರೆದುಕೊಂಡು ಬಂದಳು. ಮುಂಗಟ್ಟೆ ಮೇಲೆ ಕುಳಿತು ನಿಮಿಷಗಳೇ ಉರುಳಿದ್ದರೂ ಆ ಮುದಿ ಹೆಂಗಸು ಜೋರಾಗಿ ಉಸಿರಾಡುತ್ತಲೆ ಇತ್ತು. ಆಕೆ ತಡಬಡಾಯಿಸುತ್ತಲೇ ಬಯ್ಯಲು ಬಾಯ್ತೆರೆದಳು. […]

ಸ್ನೇಹ ಭಾಂದವ್ಯ (ಭಾಗ 1): ನಾಗರತ್ನಾ ಗೋವಿಂದನ್ನವರ

           ಶಿವಮೊಗ್ಗ ಜಿಲ್ಲೆಯಲ್ಲಿರುವ ಅಗಸವಳ್ಳಿ ಇದೊಂದು ಪ್ರಕೃತಿಯ ಮಧ್ಯ ಇರುವ ಸುಂದರವಾದ ಹಳ್ಳಿ. ಈ ಹಳ್ಳಿಯಲ್ಲಿ ಮಧ್ಯಮ ಕುಟುಂಬದಲ್ಲಿ ಜನಿಸಿರುವ ಇಬ್ಬರು ಹುಡುಗಿಯರ ಕತೆ ಇದು. ಮೊಬೈಲ್ ಬಳಕೆ ಇನ್ನು ಆರಂಭವಾಗಿರದ ಸಮಯವದು.      ಹಾಳಾದ ಕರೆಂಟು ಯಾವಾಗಂದ್ರೆ ಆವಾಗ ಕೈಕೊಟ್ಟು ಬಿಡುತ್ತದೆ ಎಂದು ಅಡುಗೆ ಮನೆಯಲ್ಲಿದ್ದ ರಾಧಮ್ಮ ಗೊಣಗುತ್ತಿದ್ದಳು. ಹಾಲಿನಲ್ಲಿ ಕುಳಿತಿದ್ದ ಶಿವಾನಂದನಿಗೆ ಇದು ಕಿರಿಕಿರಿ ಎನಿಸಿತು. ಏನೇ ನಿನ್ನದು ಬೇಗ ದೀಪಾ ಹಚ್ಚಬಾರದೇನೆ ಎಂದು ಹೆಂಡತಿಗೆ ಹೇಳಿದ. […]

ಕೆಂಗುಲಾಬಿ (ಭಾಗ 15): ಹನುಮಂತ ಹಾಲಿಗೇರಿ

  (ಇಲ್ಲಿಯವರೆಗೆ)   ಇಳಿಸಂಜೆಯ ಹೊತ್ತು ನಾನು ಮತ್ತು ದೀಪಾ ಮೆಜೆಸ್ಟಿಕ್ ಹತ್ತಿರಕ್ಕೆ ಬಂದಿದ್ದೆವು. ಶಾರಿ ಇಲ್ಲಾದರೂ ಸಿಗಬಹುದೆ ಎಂಬ ದೂರದ ನಿರೀಕ್ಷೆಯೊಂದಿಗೆ. ಅಲ್ಲೆಲ್ಲ ಅಸಂಖ್ಯಾತ ದಂಧೆಯ ಮಹಿಳೆಯರು. ಯಾರೋ ದೀಪಾಳ ಹೆಸರು ಹಿಡಿದು ಕೂಗಿದಂತಾಯಿತು. ಹಿಂದೆ ತಿರುಗಿ ನೋಡಿದರೆ ಬಾಯ್ತುಂಬ ನಗುತ್ತಾ ಒಬ್ಬಾಕೆ ಹತ್ತಿರ ಬಂದು ದೀಪಾಳ ಮುಂದೆ ಬಂದು ನಿಂತಳು. ದೀಪಾ ಕೂಡ ಅವಳನ್ನು ಮೀರಿಸುವಂತೆ ನಕ್ಕು ಆತ್ಮೀಯತೆಯಿಂದ ಅವಳ ಕೈ ಹಿಡಿದುಕೊಂಡಳು. ‘ಇವಳು ಮಂಜುಳಾ ಅಂತ. ನಮ್ಮ ಸಂಸ್ಥೆಯಿಂದ ಆರೋಗ್ಯ ಕುರಿತು ತರಬೇತಿ […]

ಕೆಂಗುಲಾಬಿ (ಭಾಗ 14): ಹನುಮಂತ ಹಾಲಿಗೇರಿ

  (ಇಲ್ಲಿಯವರೆಗೆ) ಕಾಲ ಹೀಗೆ ಬರುತ್ತೆ ಅಂತ ಹೇಳಲಿಕ್ಕಾಗುವುದಿಲ್ಲ. ಮದುವೆಯಾಗಿ ವರ್ಷ ತುಂಬಿ ಎರಡನೇ ವರ್ಷಕ್ಕೆ ಕಾಲಿಟ್ಟರಲಿಲ್ಲ. ಇನ್ನೂ ನಾನು ನನ್ನ ಹೆಂಡತಿ ಲಲಿತಾ ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿದ್ದೆವು. ಮದುವೆಯಾದ ತಕ್ಷಣವೇ ನಾನು ನನ್ನ ಹೆಂಡತಿಗೆ ನನ್ನ ಕೆಲಸದ ವಿಷಯ, ಶಾರಿಯ ವಿಷಯಗಳನ್ನು ಮುಕ್ತವಾಗಿ ಹೇಳಿದ್ದೆ. ಅಷ್ಟೇ ಅಲ್ಲದೆ ಅವಳನ್ನು ಶಾರಿಯ ಮನೆಗೆ ಕರೆದುಕೊಂಡು ಹೋಗಿದ್ದೆ ಕೂಡ. ಅಲ್ಲಿ ನಮ್ಮಿಬ್ಬರ ಪ್ರೀತಿ ವಿಶ್ವಾಸವನ್ನು ಗಮನಿಸಿದ ಲಲ್ಲಿ ಅಂದಿನಿಂದ ತಾನು ನನ್ನೊಂದಿಗೆ ನಡೆದುಕೊಳ್ಳುವ ಪದ್ದತಿಯನ್ನೇ ಬದಲಿಸಿದಳು. ಅವಳಲ್ಲಿ ಅನುಮಾನದ […]