ಸರಣಿ ಬರಹ

ಬದಲಾಗಿದೆ ಭಾರತದ ಬೌಲಿಂಗ್ ಹವಾಮಾನ!: ವಿನಾಯಕ‌ ಅರಳಸುರಳಿ,

ಮೊನ್ನೆ ಮಂಗಳವಾರ ಭಾರತ ಹಾಗೂ ಇಂಗ್ಲೆಂಡ್ ಗಳ ನಡುವೆ ಮ್ಯಾಚ್ ಇರುವುದು ಗೊತ್ತಿರಲಿಲ್ಲ. ಗೊತ್ತಾಗಿ ನೋಡುವಷ್ಟರಲ್ಲಿ ಪ್ರಸಿದ್ ಕೃಷ್ಣ ಎನ್ನುವ ಹೊಸ ಬೌಲರ್ ಪಾದಾರ್ಪಣೆ ಮಾಡಿ, ಅವರಿಗೆ ಆಂಗ್ಲರು ಮೂರು ಓವರ್ ಗೆ ಮೊವ್ವತ್ತೇಳು ರನ್ ಚಚ್ಚಿರುವುದು ಕಾಣಿಸಿತು. ಏನು ನಡೆಯುತ್ತಿದೆ ಇಲ್ಲಿ? ವರ್ಲ್ಡ್ ಕಪ್ ಗೆ ಕೆಲವೇ ತಿಂಗಳು ಇರುವಾಗ ಹೀಗೇಕೆ ಹೊಸ ಹೊಸ ಪ್ರಯೋಗ ಮಾಡ್ತಿದ್ದಾರೆ? ಇರುವವರಿಗೇ ಮತ್ತಷ್ಟು ಆಡುವ ಅವಕಾಶ ಕೊಟ್ಟು ಇಂತಿಂತವನು ಇಂತಿಂತಲ್ಲಿ ಎಂದು ಫಿಕ್ಸ್ ಮಾಡಬಾರದಾ ಎಂದುಕೊಳ್ಳುವಷ್ಟರಲ್ಲಿ ಅದೇ ಪ್ರಸಿದ್ […]

ಸರಣಿ ಬರಹ

ಮಾತೆಂಬ ಜ್ಯೋತಿ ಮನವ ಬೆಳಗಲಿ: ಸುಂದರಿ ಡಿ.

ಜೀವಜಗತ್ತು ಹಲವು ವಿಸ್ಮಯಗಳ ಆಗರ. ಇಲ್ಲಿ ನಾವು ಕಂಡು ಅಚ್ಚರಿಯಿಂದ ಹುಬ್ಬೇರಿಸಿದ ಹಲವು ಸಂಗತಿಗಳು ನಮ್ಮ ಅರಿವಿಗೆ ಬಾರದೆಯೂ ಇರಬಹುದು. ನಮ್ಮ ಅರಿವಿಗೆ ಬಂದರೆ ಕುತ್ತಾಗಬಹುದೆಂಬ ಭಯಕ್ಕೆ ಜೀವಜಗತ್ತು ಹೊಸ ಪಾಠವನ್ನೇ ಈ ವೇಳೆಗೆ ಕಲಿತಿರಲೂಬಹುದು ಅಥವಾ ಅದೆಷ್ಟೋ ವಿಸ್ಮಯಗಳನು ಅರಿವಾಗುವ ಮೊದಲೇ ನಾವು ನಮ್ಮ ಪಾಪಕೂಪಗಳಿಂದ ಇಲ್ಲವಾಗಿಸಿರಲೂಬಹುದು. ಅದೇನೇ ಇರಲಿ ಮನುಷ್ಯ ತನ್ನ ಅರಿವಿಗನುಗುಣವಾಗಿ ಮತ್ತು ವಾಸಪ್ರಪಂಚದ ಕೆಲವು ವಿಸ್ಮಯಗಳನ್ನಷ್ಟೇ ಅರಿತಿರಲು ಸಾಧ್ಯ. ಏಕೆಂದರೆ ಆ ಪ್ರಮಾಣದ ವಿಸ್ಮಯಗಳ ಹೊದ್ದು ನಿಂತಿದೇ ಈ ಜಗತ್ತು. ಕವಿಗಳ […]

ಸರಣಿ ಬರಹ

ಭಾವಪೂರ್ಣ, ಲಾಲಿತ್ಯಮಯ ಕಾವ್ಯಗಳ ಒಡತಿ- ಸರೋಜಿನಿ ನಾಯ್ಡು: ನಾಗರೇಖಾ ಗಾಂವಕರ

“Lightly, O lightly we bear her alongShe sways like a flower in the mind of our songShe skims like a bird in the foam of a streamShe floats like a laugh from the lips of a dream” ಇದು ಭಾರತದ ಕೋಗಿಲೆ ಸರೋಜಿನಿ ನಾಯ್ಡು ಅವರ “Palanquin-bearers” ಕವನದ ಆರಂಭದ ಸಾಲುಗಳು. ಬೋವಿಗಳು [ಪಲ್ಲಕ್ಕಿ ಹೊರುವವರು] ಮದುಮಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ನಿಧಾನವಾಗಿ ಸಾಗುತ್ತಿದ್ದಾರೆ. […]

ಸರಣಿ ಬರಹ

ಸಾಂಪ್ರದಾಯಿಕ ಹಾವಸೆಯನ್ನು ಕಿತ್ತೆಸೆದ -ಸ್ತ್ರೀ ವಾದಿ -ಕಮಲಾದಾಸ: ನಾಗರೇಖಾ ಗಾಂವಕರ

“You turn me into a bird of stoneA granite dove,You build round me a shabby drawing roomAnd stroke my face absentmindedly while you read” ಇದು ಕಮಲಾದಾಸರ ‘The Stone age’ ಕವಿತೆಯಲ್ಲಿನ ಸಾಲುಗಳು. ಈ ಕವಿತೆಗೂ ಪಾಕಿಸ್ತಾನಿ ಕವಯತ್ರಿ Kishwar Naheed’ರ ‘ Iam not that Woman’ ಕವಿತೆಗೂ ಸಾಮ್ಯತೆ ಇದೆ.ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿಯನ್ನು ಬಣ್ಣಿಸುವ ಕಮಲಾದಾಸ ಪುರುಷನ ದೌರ್ಜನ್ಯವನ್ನು […]

ಸರಣಿ ಬರಹ

ಮನಸ್ಸುಗಳು ಅನಾಥವಾಗದಿರಲಿ: ಪೂಜಾ ಗುಜರನ್. ಮಂಗಳೂರು.

ಈ ಭೂಮಿ ಮೇಲೆ ಬದುಕುವುದಕ್ಕೆ ಬೇಕಾಗಿರುವುದು ಏನೂ? ಯಾರೋ ಹೇಳಿದರೂ ಗಾಳಿ, ಬೇಕು ನೀರು, ಬೇಕು ಆಹಾರ, ಬೇಕು.. ಸರಿ ಇದೆಲ್ಲ ಈ ಭೂಮಿ ಮೇಲೆ ಸಿಗುತ್ತದೆ. ಉಸಿರಾಡುವುದಕ್ಕೆ ಗಾಳಿ, ಈ ಪ್ರಕೃತಿಯ ಮಡಿಲಿನಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಅದಕ್ಕಾಗಿ ಯಾರ ಅಪ್ಪಣೆಯು ಬೇಕಾಗಿಲ್ಲ. ಆದರೆ ನೀರು ಆಹಾರ.? ಇದು ಅಪ್ಪಣೆಯಿಲ್ಲದೆ ದೊರೆಯುವುದೇ? ಹರಿದು ಹೋಗುವ ನೀರಿಗೂ ಬೇಲಿ ಹಾಕುವವರು ಇರುವಾಗ ಇದು ಕಷ್ಟವೇ. ಇರಲಿ ಇದು ದೊರೆಯುತ್ತದೆ ಅಂತಿಟ್ಟುಕೊಳ್ಳೋಣ.. ಇನ್ನು ಏನಾದರೂ ಬೇಕಿದೆಯಾ.? ಹೌದು ನೆಮ್ಮದಿ ಬೇಕು […]

ಸರಣಿ ಬರಹ

ಚೈನ್ ಲಿಂಕ್ ಚತುರರು: ವಿನಾಯಕ ಅರಳಸುರಳಿ

ನೀವು ಬೆಂಗಳೂರಿಗೆ ಕೆಲವೇ ದಿನಗಳ ಕೆಳಗೆ ಹೊಸದಾಗಿ ಬಂದು ಸೇರಿಕೊಂಡಿದ್ದೀರ. ಈಗಷ್ಟೇ ಒಂದು ಕೆಲಸ ಸಿಕ್ಕಿದೆ. ಅಲ್ಲಿ ಯಾವುದೋ ರೋಡಿನ ಎಷ್ಟನೆಯದೋ ಕ್ರಾಸಿನಲ್ಲಿರುವ ನಿಮ್ಮ ರೂಮಿನಿಂದ ಆಫೀಸಿಗೆ ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದೀರ‌. ಭಾರತದ ಜ್ವಲಂತ ಸಮಸ್ಯೆಯಾದ ಜನಸಂಖ್ಯಾ ಸ್ಪೋಟದ ನೇರ ಪರಿಣಾಮದಿಂದ ಹಿಗ್ಗಮಗ್ಗಾ ರಶ್ ಆಗಿರುವ ಬಸ್ಸಿನಲ್ಲಿ ಸೊಂಟ ಬಳುಕಿದ ತೆಂಗಿನ ಮರದಂತೆ ನಿಂತು ದಿನವೂ ಪ್ರಯಾಣಿಸುತ್ತಿದ್ದ ನಿಮಗೆ ಈ ದಿನ ಇದ್ದಕ್ಕಿದ್ದಂತೆ ಸೀಟೊಂದು ಸಿಕ್ಕಿದೆ. ಬಸ್ಸಿನಲ್ಲಿ ನಿಂತಿರುವ ಉಳಿದ ಅಸಂಖ್ಯಾತ ಪ್ರಯಾಣಿಕರ ನಡುವೆ ನಿಮಗೆ ಮಾತ್ರ […]

ಸರಣಿ ಬರಹ

ಅಸ್ಪೃಶ್ಯತೆಯ ಅನಾವರಣ- ಮುಲ್ಕ ರಾಜ ಆನಂದರ-Untouchable: ನಾಗರೇಖಾ ಗಾಂವಕರ

ಆತ ಭಾಕಾ. ಹದಿನೆಂಟರ ದಲಿತ ಯುವಕ. ಆತನ ಬಹುದಿನದ ಆಸೆ ಹಾಕಿ ಆಡುವುದು. ಅದಕ್ಕಾಗಿ ಹಾಕಿ ಕೋಲು ಅನಿವಾರ್ಯ. ಬಡವ ಭಾಕಾನಿಗೆ ಅದು ಕಷ್ಟಸಾಧ್ಯ. ಆದರೆ ಅದನ್ನು ಕರುಣಿಸುವ ಹವಾಲ್ದಾರ ಚರತ್‍ಸಿಂಗ್ ಆತನಿಗೆ ದೇವರಂತೆ ಕಾಣುತ್ತಾನೆ. ಸಾವಿರಾರು ವರ್ಷಗಳ ಕೋಟಲೆಗಳು ಕ್ಷಣಮಾತ್ರದಲ್ಲಿ ಕಣ್ಮರೆಯಾಗುತ್ತದೆ. ಬುಲಂದಶಹರನ ಹೊರವಲಯದಲ್ಲಿರುವ ಬಾವಿ. ಸವರ್ಣಿಯರಿಗೆ ಮಾತ್ರ ನೀರು ಸೇದುವ ಹಕ್ಕು. ಕೆಳಜಾತಿ ದಲಿತ ಹೆಣ್ಣುಮಕ್ಕಳು ಅವರು ನೀಡುವ ನೀರಿಗಾಗಿ ದಿನಗಟ್ಟಲೆ ಕಾಯಬೇಕು.ಸೋಹಿನಿ ಆಗಷ್ಟೇ ಪ್ರಾಯಕ್ಕೆ ಬಂದ ತರುಣಿ. ಭಾಕಾನ ಮುದ್ದಿನ ತಂಗಿ. ತನ್ನ […]

ಸರಣಿ ಬರಹ

ಚಿಮಮಾಂದ ಅಧಿಚೀಯ Americanah: ನಾಗರೇಖಾ ಗಾಂವಕರ

“A white boy and a black girl who grow up in the same working class town in England can get together and race is secondary, but in America even if the white boy and black girl grow up in the same neighbourhood , race would be primary” ಇದು ಆಫ್ರಿಕಾದ ಸಮಕಾಲೀನ ಸಾಹಿತ್ಯ ಲೋಕದ ಶ್ರೇಷ್ಠ ಪ್ರತಿಭೆ ಚಿಮಮಾಂದ […]

ಸರಣಿ ಬರಹ

ಡಿಸೆಂಬರ್ ಎಂದರೆ ಪ್ರವಾಸಗಳ ನೆನಪು..: ವಿನಾಯಕ ಅರಳಸುರಳಿ

ಶಾಲಾ ಪ್ರವಾಸವೆನ್ನುವುದು ಬದುಕಿನ ಮತ್ತೆಲ್ಲ ಪ್ರವಾಸಗಳನ್ನೂ ಮೀರಿಸುವಂಥಹಾ ಸವಿನೆನಪು. ಅರ್ಧವಾರ್ಷಿಕ ಪರೀಕ್ಷೆಗಳೆಲ್ಲಾ ಮುಗಿದು ಛಳಿಗಾಲದ ಪ್ರವೇಶವಾಗುವ ಹೊತ್ತಿಗೆ ಶೈಕ್ಷಣಿಕ ಪ್ರವಾಸದ ಘೋಷಣೆಯನ್ನು ಸ್ವತಃ ಹೆಡ್ ಮಾಷ್ಟರೇ ಮಾಡುತ್ತಿದ್ದರು. ಬರುವ ಆಸೆ ಎಲ್ಲರಲ್ಲೂ ಇರುತ್ತಿತ್ತಾದರೂ ನೂರಿನ್ನೂರು ರೂಪಾಯಿಗಳ ಪ್ರವಾಸ ಶುಲ್ಕವನ್ನು ಹೊಂದಿಸುವುದು ಎಲ್ಲರಿಗೂ ಸಾಧ್ಯವಿರುವ ವಿಷಯವಾಗಿರಲಿಲ್ಲ. ಕೆಲವರಿಗೆ ಸುಲಭವಾಗಿ ಸಿಗುತ್ತಿದ್ದ ಈ ಹಣ ಇನ್ನು ಕೆಲವರಿಗೆ ಅಪ್ಪ-ಅಮ್ಮನಿಂದ ಬೆನ್ನಿನ ಮೇಲೆ ನಾಲ್ಕು ಗುದ್ದಿಸಿಕೊಂಡ ಬಳಿಕವೇ ಸಿಗುತ್ತಿತ್ತು. ಇನ್ನೂ ಕೆಲವರು ತಾವು ಅಲ್ಲಿಲ್ಲಿ ಅಡಿಕೆ ಸುಲಿದು, ಗೇರುಬೀಜ ಹೆಕ್ಕಿ ಸಂಪಾದಿಸಿದ್ದ […]

ಸರಣಿ ಬರಹ

Sean O’ Casey ನ “Juno and Paycock”-ಯುದ್ಧ ಜಗತ್ತಿನಲ್ಲಿ ಸಾಮಾಜಿಕ ಏರಿಳಿತ: ನಾಗರೇಖಾ ಗಾಂವಕರ

ಅದು Dublinನ ಎರಡು ಕೋಣೆಗಳ ಬಾಡಿಗೆ ಮನೆ. ಜೂನೋ ಆ ಮನೆಯ ಒಡತಿ. ಮಕ್ಕಳಾದ Jonny Boyle ಮತ್ತು Mary Boyle ಅಲ್ಲಿದ್ದಾರೆ. Jonny ಬೆಂಕಿ ಕಾಯಿಸಿಕೊಳ್ಳುತ್ತಿದ್ಧಾನೆ. ಮೇರಿ ದಿನಪತ್ರಿಕೆಯಲ್ಲಿಯ ಆ ದಿನ ವಿಶೇಷ ಸುದ್ದಿ ಓದುತ್ತಿದ್ದಾಳೆ. ಅವರ ನೆರೆಮನೆಯ ಹುಡುಗನೊಬ್ಬ ದುರಂತವಾಗಿ ಹತ್ಯೆಗೀಡಾಗಿದ್ದಾನೆ. ಅದೂ ಐರಿಶ್ ಸೈನಿಕರ ಕೈಯಲ್ಲಿ. ಈ ವಿಚಾರ ತಿಳಿಯುತ್ತಲೇ ಜಾನಿ ಬೆವರಿ ಹೋಗುತ್ತಾನೆ ಅಷ್ಟೊತ್ತಿಗೆ ಅಲ್ಲಿಗೆ ಬರುವ ತಾಯಿ ಜುನೋ ತಂದೆ Jonny Boyle ಕುರಿತು ವಿಚಾರಿಸುತ್ತಾಳೆ. Jonny ತಂದೆಯ ವರ್ತನೆಯ […]

ಸರಣಿ ಬರಹ

ಕಳೆದು ಹೋಗುವ ಸುಖ (ಕೊನೆಯ ಭಾಗ): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಭಯವೇ ಭಕ್ತಿಯ ಮೂಲ; ಆದರೆ ಅದು ವ್ಯಕ್ತಿಯನ್ನು ಸಂಸ್ಕರಿಸಿ, ತನ್ನ ಜೀವಿತವನ್ನು ಸಾರ್ಥಕವಾಗಿಸಿಕೊಳ್ಳಲು ಪ್ರೇರಿಸಬೇಕು. ಪರಮಾತ್ಮನನ್ನು ಯಾವಾಗಲೂ ಶಿಕ್ಷಿಸುವ ದಂಡಾಧಿಕಾರಿಯೆಂದೇ ನೋಡಬಾರದು; ತನ್ನನ್ನು ಹೆತ್ತು, ಸಾಕಿದ ಪ್ರೇಮಮಯೀ ತಾಯಿಯಂತೆ, ಆತ್ಮೀಯವಾಗಿ ಕಂಡು, ತಪ್ಪುಗಳನ್ನು ತಿದ್ದುವ ಸ್ನೇಹಿತನಂತೆ ಕಾಣಬೇಕು. ಇವೆಲ್ಲವನ್ನೂ ಮಹಾಭಾರತದಲ್ಲಿ ಸರಳವಾಗಿ, ‘ಪರೋಪಕಾರಃ ಪುಣ್ಯಾಯ; ಪಾಪಾಯ ಪರಪೀಡನಂ’ ಎಂದು ತಿಳಿಸಲಾಗಿದೆ. ಜನಸೇವೆಯೇ ಜನಾರ್ಧನ ಸೇವೆ ಎಂಬ ಮಾತೂ ಇದೆ. ದೀನದುರ್ಬಲರ ಮತ್ತು ದರಿದ್ರರ ಸೇವೆಯಲ್ಲಿ ಪರಮಾತ್ಮನನ್ನು ಕಾಣು ಎಂದ ಸ್ವಾಮಿ ವಿವೇಕಾನಂದರ ಈ ಎಲ್ಲ ಮಾತುಗಳ […]

ಸರಣಿ ಬರಹ

ಟೆನಿಸನ್‍ನ ಎರಡು ಕವಿತೆಗಳು: ನಾಗರೇಖಾ ಗಾಂವಕರ

ಗ್ರೀಕ ಮಹಾಕವಿ ಹೋಮರನ ಒಡೆಸ್ಸಿಯಲ್ಲಿ ಬರುವ ದಿ ಗ್ರೇಟ್ ಗ್ರೀಕ್ ಹೀರೋ Ithacaದ ರಾಜ ಒಡಿಸೆಸ್ ಅಥವಾ ಯೂಲಿಸಿಸ್‍ನ ಸಮುದ್ರಯಾನದ ರೋಚಕ ಅನುಭವದ ಕಥೆಯನ್ನೆ ಹಾಡುವ ಟೆನಿಸನ್‍ನ “ದಿ ಲೋಟಸ್ ಇಟರ್” ಕವಿತೆ ಮೊದಲು ಪ್ರಕಟವಾದದ್ದು 1832ರಲ್ಲಿ. ಟ್ರೋಜನ್ ಯುದ್ಧದ ನಂತರ ಯೂಲಿಸಿಸ್ ತನ್ನ ಗ್ರೀಕ್ ಸೈನಿಕರೊಂದಿಗೆ ಮರಳಿ ನಾಡಿಗೆ ವಾಪಸಾಗುತ್ತಿದ್ದ ದಾರಿಯಲ್ಲಿ ಮಾರ್ಗಮಧ್ಯೆ ಭೀಕರ ಬಿರುಗಾಳಿಗೆ ಸಿಕ್ಕು ತತ್ತರಿಸತೊಡಗಿದರು. ಜಲಮಾರ್ಗದ ಉದ್ದಗಲಕ್ಕೂ ಅಲೆದಾಡಿದರು. ಒಂಬತ್ತು ದಿನಗಳು ಹಾಗೂ ಹೀಗೂ ಸುತ್ತಿ ಸುಳಿದು ಹತ್ತನೇಯ ದಿನ ನಡುಗಡ್ಡೆಯೊಂದು […]

ಸರಣಿ ಬರಹ

ಸಮರ್ಥ ಜೀವನ ನಿರ್ವಹಣೆಗೆ ಬೇಕು ಜೀವನ ಕೌಶಲ್ಯಗಳು: ತೇಜಾವತಿ ಹುಳಿಯಾರ್

ಜೀವನವೆನ್ನುವುದು ಮನುಷ್ಯನ ಜನನದಿಂದ ಮರಣದವರೆಗಿನ ನಿರಂತರ ಪಯಣ. ನಮ್ಮ ಜೀವನವನ್ನು ನಾವೇ ಸುಂದರಗೊಳಿಸಿಕೊಳ್ಳದ ಹೊರತು ಮತ್ಯಾರೂ ಸುಂದರಗೊಳಿಸಲು ಸಾಧ್ಯವಿಲ್ಲ. ಸಾಗುವ ಮಾರ್ಗದಲ್ಲಿ ಹಲವು ಏರು -ತಗ್ಗುಗಳನ್ನು, ತಿರುವುಗಳನ್ನು ಕಾಣುತ್ತೇವೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನ ನಿರ್ವಹಣೆಯು ಕೂಡ ಒಂದು ಕಲೆಯೇ ಹೌದು. ಬರುಬರುತ್ತಾ ಮಾನವರ ಭಾವನೆಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಕೃತಕವಾಗಿ ಜನ್ಮ ತಳೆಯುತ್ತಿರುವ ಈ ಸಂದರ್ಭದಲ್ಲಿ ಅವುಗಳ ತೀವ್ರತೆಯೂ ಕಡಿಮೆಯೇ. ಹಿಂದಿನಂತೆ ಗಟ್ಟಿ ಬೇರುಗಳು ಪಳಗುವ ಕೈಗಳು ತೀರಾ ವಿರಳ. ಜನರು ಕ್ಷಣಿಕ ಲಾಲಸೆಗಳಿಗೆ ಒಳಗಾಗಿ […]

ಸರಣಿ ಬರಹ

ಜಾನ್ ಕೀಟ್ಸ್- ಪ್ರೇಮ ಮತ್ತು ಸಾವು: ನಾಗರೇಖಾ ಗಾಂವಕರ

“If I die, said I to myself, I have left no immortal work behind me, nothing to make my friends proud of my memory- but I have loved the principles of beauty in all things, and if I had time I would have made myself remembered” ಇದು ಕೀಟ್ಸ್ ಫ್ಯಾನಿಗೆ ಬರೆದ ಪತ್ರದ ಸಾಲುಗಳು. ಮನುಷ್ಯನ ಬದುಕು ಕ್ಷಣಿಕ. […]

ಸರಣಿ ಬರಹ

ಕಲ್ಲರಳಿ… ಹೂವಾಗಿ…: ಪ್ರಸನ್ನ ಆಡುವಳ್ಳಿ

“ಕಲ್ಲರಳಿ ಹೂವಾಗಿ, ಎಲ್ಲರಿ ಗೂ ಬೇಕಾಗಿ, ಮಲ್ಲಿಕಾರ್ಜುನನ ಶಿಖರಕ್ಕೆ ಬೆಳಕಾಗಿ ಬಲ್ಲವರು ಹೇಳಿ ಸರ್ವಜ್ಞ” ಸರ್ವಜ್ಞನಿಂದ ಹಂಸಲೇಖಾವರೆಗೂ ಕಲ್ಲರಳಿ ಹೂವಾಗುವ ರೂಪಕ ಕನ್ನಡದ ಕವಿಗಳನ್ನು ಸದಾ ಕಾಡಿದಂತಿದೆ. ಸುಣ್ಣದ ಕಲ್ಲುಗಳು ನೀರಿನೊಂದಿಗೆ ಬೆರೆತು ಅರಳುವುದು ಸರ್ವಜ್ಞನಿಗೆ ಕಲ್ಲರಳಿ ಹೂವಾಗುವ ಹಾಗೆ ಕಂಡಿತು. ಕಾಡಿನ ಬಂಡೆಗಳ ಮೇಲೆ ಬೆಳೆಯುವ ಈ ಚಿತ್ರದಲ್ಲಿರುವ ಕಲ್ಲು ಹೂವಿನ ಗಿಡಗಳು ಸರ್ವಜ್ಞನ ಸಾಲುಗಳಿಗೆ ಸರಿಹೊಂದುವಂತಿವೆ. ಹಿಮಾಲಯದ ತಪ್ಪಲಿನಲ್ಲಿ, ಪೂರ್ವಾಂಚಲದ ಕಾಡುಗಳಲ್ಲಿ ಬೆಳೆಯುವ ಈ ಬಗೆಯ ಸಸ್ಯಗಳಿಗೆ ಕೆಲವೆಡೆ “ಪಥ್ಥರ್ ಪೋಡಿ” ಎನ್ನುತ್ತಾರೆ. ಸಂಸ್ಕೃತದಲ್ಲಿ […]

ಸರಣಿ ಬರಹ

ಬೇಯದಿರು ಬೆಂಗಳೂರೇ..: ವಿನಾಯಕ ಅರಳಸುರಳಿ,

ಇದೆಂಥಹಾ ದಿನಗಳು ಬಂದುಬಿಟ್ಟವು? ಎಲ್ಲವೂ ಸರಿಯಾಗಿದ್ದರೆ ಅದೆಷ್ಟೋ ಲಕ್ಷ ಜನರೀಗ ಬೆಂಗಳೂರಿನಲ್ಲಿರುತ್ತಿದ್ದರು. ಬೀದಿ ಬದಿಯ ತಳ್ಳುಗಾಡಿಯಿಂದ ಹಿಡಿದು ಬಹುರಾಷ್ಟ್ರೀಯ ಕಂಪನಿಯ ತನಕ ನೂರಾರು ವಿಧದಲ್ಲಿ ಅಲ್ಲಿ ಜೀವನೋಪಾಯ ಸಾಗುತ್ತಿತ್ತು. ಅಲ್ಲಿ ಗಳಿಸಿದ ಸಂಬಳ ಕೇರಳದ ಆಳದಿಂದ ಹಿಡಿದು ಬಿಹಾರದ ತುದಿಯವರೆಗಿನ ಅದೆಷ್ಟೋ ಜನರ ಬದುಕ ಸಲಹುತ್ತಿತ್ತು. ಚಲನೆಯೇ ಬದುಕೆಂಬ ಮೂಲ ಮಂತ್ರವ ಜಪಿಸುತ್ತಾ ಕೋಟಿ ಜನಸಂಖ್ಯೆಯ ಆ ಪಟ್ಟಣ ಜಗತ್ತಿನ ಖ್ಯಾತ ನಗರಿಗಳ ಪಟ್ಟಿಯಲ್ಲಿ ತಾನೂ ಒಂದಾಗಿ ಮುನ್ನಡೆಯುತ್ತಿತ್ತು. ಬೆಂಗಳೂರೆಂದರೆ ಬರೀ ಕಾಯಕದ ಪಟ್ಟಣವೊಂದೇ ಆಗಿರಲಿಲ್ಲ. ಯಾಂತ್ರಿಕತೆಯ […]

ಸರಣಿ ಬರಹ

ಧನದಾಹಕ್ಕೆ ದಿಕ್ಕೆಟ್ಟ ಬದುಕು ಆರ್ ಕೆ. ನಾರಾಯಣ್ ರ – The Financial Expert ನ ಮಾರ್ಗಯ್ಯ: ನಾಗರೇಖಾ ಗಾಂವಕರ

ಅದೊಂದು ಮುಂಜಾನೆ ಮಾರ್ಗಯ್ಯ ತನ್ನ ಕೆಂಪು ಬಣ್ಣದ ಅಕೌಂಟ್ ಪುಸ್ತಕದಲ್ಲಿ ಪೂರ್ಣ ತಲ್ಲೀನ. ತಂದೆ ತಾನು ಕೇಳಿದ ಆನೆ ಆಟಿಕೆ ಕೊಡಿಸಲಿಲ್ಲವೆಂದು ಕೋಪಗೊಂಡ ಬಾಲು ಕಾಲಿಂದ ಶಾಯಿ ಬಾಟಲಿಯ ಜೋರಾಗಿ ತೂರಿದ ರಭಸಕ್ಕೆ ಪುಸ್ತಕ ಬಣ್ಣಮಯವಾಗುತ್ತದೆ. ಸಿಟ್ಟಿಗೆದ್ದ ಮಾರ್ಗಯ್ಯ ಮಗನನ್ನು ದರದರ ಎಳೆದು ಕೋಣೆಯೊಳಗೆ ಕೂಡಿಹಾಕಲು ಯತ್ನಿಸುತ್ತಲೇ ತಪ್ಪಿಸಿಕೊಂಡ ಬಾಲು ಬಣ್ಣಮೆತ್ತಿದ ಪುಸ್ತಕ ಎತ್ತಿಕೊಂಡು ಹೊರಗೋಡಿ ತಟ್ಟನೆ ಗಟಾರಕ್ಕೆ ಚೆಲ್ಲಿ ಬಿಡುತ್ತಾನೆ. ಮಾರ್ಗಯ್ಯ ಹಣಕಾಸಿನ ಭಂಡಾರವೇ ಕೈತಪ್ಪಿದಂತೆ ಕಂಗಾಲಾಗುತ್ತಾನೆ. ಅದೇ ಬಾಲು ಪ್ರಾಯಕ್ಕೆ ಬರುತ್ತಲೂ ಇನ್ನಷ್ಟು ಅವಿವೇಕಿ […]

ಸರಣಿ ಬರಹ

ಮುಜಂಟಿ ಜೇನು ಸಾಕಿ : ನಿಮ್ಮ ತೋಟದಲ್ಲಿಯೇ ಮಾತ್ರ ಪರಾಗಸ್ಪರ್ಷ ಮಾಡಿಸಿ: ಚರಣಕುಮಾರ್

ಅದು ಅರಣ್ಯಶಾಸ್ತ್ರ ಪದವಿ ಮುಗಿಸಿ ಜೇನುನೊಣಗಳ ಹೆಚ್ಚಿನ ಸಂಶೋಧನೆಗಾಗಿ ಕಾಡುಮೇಡು ಅಲೆಯುವ ಸಮಯ. ಒಮ್ಮೆ ಸ್ಥಳಾಂತರ ಜೇನುಕೃಷಿಕರನ್ನು ಭೇಟಿಮಾಡಿ ಸಂದರ್ಶನ ಮಾಡಬೇಕೆನಿಸಿತು. ಒಮ್ಮೆ ಸ್ಥಳಾಂತರ ಜೇನುಕೃಷಿ ಮಾಡುವ ರೈತನನ್ನು ಭೇಟಿ ಮಾಡಿದೆ. ಇನ್ನೂ ವಿದ್ಯಾರ್ಥಿ ಕಲಿಕೆಯ ಗುಂಗಿನಲ್ಲಿದ್ದ ನನಗೆ ಅಲ್ಲಿ ಒಂದು ಅಚ್ಚರಿಯ ಸಂಗತಿ. ಅದೇನೆಂದರೆ, ಸ್ಥಳಾಂತರ ಜೇನುಕೃಷಿ ಮಾಡುವವರಿಗೆ ಎರಡೆರಡು ಲಾಭ. ಹೇಗೆಂದರೆ, ಜೇನುತುಪ್ಪ, ಜೇನುಕುಟುಂಬಗಳ ಮಾರಾಟ ಮತ್ತು ಇತರೆ ಜೇನು ಉತ್ಪನ್ನಗಳು ಆದಾಯದ ಒಂದು ಮೂಲವಾದರೆ, ಸ್ಥಳಾಂತರ ಜೇನುಕೃಷಿ ಮಾಡುವಾಗ ತೋಟದ ಅಥವಾ ಹೊಲ […]

ಸರಣಿ ಬರಹ

ಪ್ರೀತಿಯಿದ್ದರೆ ಪಾರಿವಾಳ ಹಾರಿಹೋಗುವುದಿಲ್ಲ: ವಿನಾಯಕ ಅರಳಸುರಳಿ

ಪ್ರೀತಿಯ ಗೆಳೆಯಾ, ನೀನು ಹಾಕುವ ಸ್ಟೇಟಸ್ ಗಳನ್ನು ನಾನು ನೋಡುತ್ತಲೇ ಇದ್ದೇನೆ. ಅದೇನೋ ಖಿನ್ನತೆ, ಮುಗಿಯದ ಬೇಸರ ನಿನಗೆ ಅಲ್ವಾ? ಮೊನ್ನೆ ನೀನು ‘ಪ್ರೀತಿಯ ಪಾರಿವಾಳ ಹಾರಿ ಹೋಯ್ತೋ ಗೆಳೆಯಾ’ ಎಂದು ವ್ಯಕ್ತಿಯೊಬ್ಬ ಅಳುತ್ತಾ ಹಾಡುತ್ತಿರುವ ಹಾಡನ್ನು ಹಾಕಿಕೊಂಡಿದ್ದೆಯಲ್ಲಾ? ಅದನ್ನು ನೋಡಿ ನಿನಗೂ ನನಗೂ ಗೆಳೆಯನಾಗಿದ್ದವನೊಬ್ಬ ‘ಅವನದೆಂಥಾ ಕರ್ಮ ಮಾರಾಯಾ? ಲವ್ ಫೇಯ್ಲೂರಿರಬೇಕು’ ಎಂದು ನಿನ್ನ ಆಡಿಕೊಂಡ. ಯಾಕೋ ಪಿಚ್ಚೆನಿಸಿ ಈ ಪತ್ರ ಬರೆಯುತ್ತಿದ್ದೇನೆ. ಪ್ರೀತಿಯ ಮೊಟ್ಟಮೊದಲ ಕನಸು ಬಿದ್ದ ದಿನದಿಂದ ಈ ಕ್ಷಣ ತನಕ ಅದೆಷ್ಟೋ […]

ಸರಣಿ ಬರಹ

ಚಿನುಅ ಅಚಿಬೆಯ Things Fall Apart- ವಸಾಹತು ಸಂಸ್ಕೃತಿಯ ದಬ್ಬಾಳಿಕೆಯ ಅನಾವರಣ: ನಾಗರೇಖಾ ಗಾಂವಕರ

1959ರಲ್ಲಿ ಪ್ರಕಟವಾದ ಚಿನುಅ ಅಚಿಬೆಯ Things Fall Apart ಕಾದಂಬರಿ ವಸಾಹತು ಪೂರ್ವದ ನ್ಶೆಜೀರಿಯಾದ ಜನಜೀವನ ಮತ್ತು ಬ್ರೀಟಿಷ್ ಆಗಮನದ ನಂತರದ ಅಲ್ಲಿಯ ಸಾಂಸ್ಕೃತಿಕ ಕಗ್ಗೊಲೆ, ಕ್ರೈಸ್ತ ಮಿಷನರಿಗಳಿಂದ ಮೂಲ ಇಗ್ಬೋ ಜನಾಂಗ ಮತಾಂತರದ ಮುಷ್ಠಿಯಲ್ಲಿ ನರಳಿದ್ದು, ಎಲ್ಲವನ್ನೂ ಹೊರಜಗತ್ತಿಗೆ ತೆರೆದಿಟ್ಟಿತು. ಇಂಗ್ಲೀಷನಲ್ಲಿ ಮೂಡಿ ಬಂದ ಆಧುನಿಕ ಆಫ್ರಿಕನ್ ಕಾದಂಬರಿ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ತೀವೃ ಚರ್ಚೆಗೆ ಒಳಗಾದ ಕಾದಂಬರಿ. ಕಾದಂಬರಿಯ ತಲೆಬರಹವು W. B. Yeats ಕವಿಯ The Second Coming ಎಂಬ ಕವಿತೆಯಲ್ಲಿಯ ಸಾಲಾಗಿದ್ದು, […]

ಸರಣಿ ಬರಹ

ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ – ಅಮರ ಕವಿ ಜಾನ್ ಕೀಟ್ಸ್: ನಾಗರೇಖಾ ಗಾಂವಕರ

ಅತಿ ಚಿಕ್ಕ ವಯಸ್ಸಿನಲ್ಲಿ, ಅತೀ ಕಡಿಮೆ ಅವಧಿಯಲ್ಲಿ ಅಪಾರ ಅದ್ವಿತೀಯ ಪ್ರಗಾಥ ಸಾಹಿತ್ಯವನ್ನು ರಚಿಸಿ ಜಾಗತಿಕ ಸಾರಸ್ವತ ಲೋಕದ ಧ್ರುವತಾರೆಯಂತೆ ಬೆಳಗಿದವನೆಂದರೆ ಜಾನ್ ಕೀಟ್ಸ್. ಅಕ್ಷರ ಜಗತ್ತಿನಲ್ಲಿ ಚಿಮ್ಮಿದ ಬೆಳಕಿನ ಸೂಡಿ ಕೀಟ್ಸ್. ಆತನ ಜೀವನದುದ್ದಕ್ಕೂ ಸಾವು ಸುಳಿಯುತ್ತಲೇ ಇತ್ತು. ಹೆತ್ತವರ, ಒಡಹುಟ್ಟಿದವರ, ಸಾವು ಆತನ ವಿಚಲಿತಗೊಳಿಸುತ್ತಲೇ ಇದ್ದರೂ ಸಾವಿನಲ್ಲೂ ಸೌಂದರ್ಯ ಕಂಡ ಕವಿ. ತನ್ನ ಗೋರಿ ವಾಕ್ಯವನ್ನು ತಾನೇ ಬರೆದಿಟ್ಟ ಧೀರ. ವಿಲಿಯಂ ವಡ್ರ್ಸವರ್ಥ, ಎಸ್ ಟಿ. ಕೋಲ್ರಿಡ್ಜ್ ಇಂಗ್ಲೆಂಡಿನಲ್ಲಿ ರೋಮ್ಯಾಂಟಿಕ್ ಯುಗದ ಪ್ರವರ್ತಕರಾಗಿ “ಲಿರಿಕಲ್ […]

ಸರಣಿ ಬರಹ

ಜಾನ್ ಡನ್ – ಎರಡು ಅನುಭಾವಿಕ ಕವಿತೆಗಳು: ನಾಗರೇಖಾ ಗಾಂವಕರ

ಹದಿನಾರನೇ ಶತಮಾನ ಜ್ಞಾನ ಪುನರುಜ್ಜೀವನದ ಮೇರು ಕಾಲ. ಅದರ ಉತ್ತರಾರ್ಧದಲ್ಲಿ ಜನಿಸಿದ ಡನ್ ಜಗತ್ತಿನ ಶ್ರೇಷ್ಟ ಸಾಹಿತಿಗಳಾದ ಶೇಕ್ಸಪಿಯರ್, ಸ್ಪೆನ್ಸರ್,ಮಿಲ್ಟನ್ , ಡ್ರೈಡನ್ ಮುಂತಾದ ಪ್ರಮುಖ ಕವಿಗಳ ಸಾಲಿನಲ್ಲಿ ಕಾಣಿಸಿಕೊಂಡರೂ ಆ ರಿನೇಸ್ಸಾನ್ಸ್‍ನ ಪ್ರಭಾವಕ್ಕೆ ಸಿಲುಕಿಯೂ ಸಿಲುಕದಂತೆ ಹೊಸ ಕಾವ್ಯ ಜಗತ್ತನ್ನು ಸೃಷ್ಟಿಸಿದ. ವಿದ್ವತ್ತಿನ ಪ್ರಭಾವಕ್ಕಿಂತಲೂ ಅನುಭವದ ನೈಜ ಸಂವೇದನೆಗಳು ಆತನ ಕಾವ್ಯವನ್ನು ಪ್ರಚಲಿತಗೊಳಿಸಿದವು. ಹೊಸತನಕ್ಕೆ ತೆರೆದುಕೊಂಡಿದ್ದ ಕಾವ್ಯ ಲಹರಿ, ಪದವಿನ್ಯಾಸಗಳು, ಲಯ ಎಲ್ಲವೂ ಡನ್‍ನ ಕಾವ್ಯವನ್ನು ಅಮರಗೊಳಿಸಿದವು. ಡನ್ ಮೆಟಾಫಿಸಿಕಲ್ ಕಾವ್ಯ ಪರಂಪರೆಯ ಪ್ರಮುಖ ಕವಿ. […]

ಸರಣಿ ಬರಹ

ಮೆಟಾಫಿಸಿಕಲ್ ಸ್ಕೂಲ್‍ನ – ಜಾನ್ ಡನ್: ನಾಗರೇಖಾ ಗಾಂವಕರ

ಮೆಟಾಫಿಸಿಕಲ್ ಸ್ಕೂಲ್‍ನ ಪ್ರಮುಖ ಇಂಗ್ಲೀಷ ಕವಿ ಜಾನ್ ಡನ್. 1572ರ ಜನವರಿ 24ರಿಂದ ಜೂನ 19 ರ ಮಧ್ಯಭಾಗದಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಡನ್. ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದ. ಡನ್‍ನ ತಂದೆ ಇಜಾಕ್ ವಾಲ್ಟನ್ ಎಂಬಾತ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಡನ್ ತನ್ನ ತಂದೆಯನ್ನು ತನ್ನ ನಾಲ್ಕನೇ ವಯಸ್ಸಿಗೆ ಕಳೆದುಕೊಂಡ. ತಾಯಿ ಸರ್ ಥಾಮಸ್ ಮೋರ್‍ನ ಸಹೋದರಿ, ನಾಟಕಕಾರ ಜಾನ್ ಹೇವುಡ್‍ನ ಪುತ್ರಿಯಾಗಿದ್ದು ಪತಿ ಇಜಾಕ್‍ನ ಮರಣದ ನಂತರ ಡಾ. ಜಾನ್ ಸೈಮಂಜೆಸ್‍ನನ್ನು ಮರುವಿವಾಹವಾದಳು. ಹೀಗಾಗಿ […]

ಸರಣಿ ಬರಹ

ಜಾನ್ ಡ್ರೈಡನ್‍ನ “All for love”- ಪ್ರೇಮ ವಿಜಯ: ನಾಗರೇಖಾ ಗಾಂವಕರ

ಈಜಿಪ್ತನ ರಾಣಿ ಕ್ಲೀಯೋಪಾತ್ರ. ತನ್ನ ಅಪೂರ್ವ ಸೌಂದರ್ಯದ ಕಾರಣದಿಂದಲೇ ಐತಿಹಾಸಿಕ ಪುಟಗಳಲ್ಲಿ ತನ್ನದೇ ಛಾಪು ಒತ್ತಿದ ಆ ಕಾಲದ ಜಗತ್ತಿನ ವೀರರೆಲ್ಲರ ನಿದ್ದೆಗೆಡಿಸಿದ ಲಾವಣ್ಯವತಿ. ರೋಮನ ಪೂರ್ವಭಾಗದ ದೊರೆ ಮಾರ್ಕ ಆಂಟನಿ. ಆದರೆ ಆಕೆಯ ಪ್ರೇಮದಲ್ಲಿ ಬಿದ್ದ ರೋಮನ ದೊರೆ ಆಂಟನಿ ಸಂಪೂರ್ಣ ಅದರಲ್ಲಿ ಕೊಚ್ಚಿಹೋಗಿದ್ದಾನೆ. ಅವರಿಬ್ಬರ ಪ್ರೇಮ ಯಾರಿಂದಲೂ ಮುರಿಯಲಾಗದ್ದು. ಇದೇ ಸಂದರ್ಭ ಚಕ್ರವರ್ತಿ ಆಂಟನಿ ಒಕ್ಟೇವಿಯಸ್ ಸೀಸರನೊಂದಿಗಿನ ಯುದ್ದದಲ್ಲಿ ಸೋಲಿನಿಂದ ಹತಾಶನಾಗಿ ಬದುಕಿನ ಆಕಾಂಕ್ಷೆಗಳನ್ನು ಕಳೆದುಕೊಂಡು ಇಜಿಪ್ತನ ಅಲೆಕ್ಸಾಂಡ್ರಿಯಾದ ಐಸಿಸ್ ದೇವಾಲಯದಲ್ಲಿ ಏಕಾಂಗಿಯಾಗಿ ತಂಗಿದ್ದಾನೆ. […]

ಸರಣಿ ಬರಹ

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ […]

ಸರಣಿ ಬರಹ

ಕಾಮೆಡಿಗಳಲ್ಲಿ ಅದ್ವಿತೀಯತೆ ಮರೆದ- Ben Jonson: ನಾಗರೇಖಾ ಗಾಂವಕರ

ಇಂಗ್ಲೀಷ ಸಾಹಿತ್ಯದಲ್ಲಿ ಅದ್ವಿತೀಯನೆಂದೇ ಹೆಸರು ಗಳಿಸಿದ ಶೇಕ್ಸಪಿಯರ್ ತನ್ನ ಟ್ರಾಜಡಿಗಳಿಂದ ಖ್ಯಾತನಾಗಿದ್ದರೆ ಆತನ ಸಮಕಾಲೀನನಾದ ಬೆನ್‍ಜಾನ್ಸನ್ [ಆದರೂ ಹತ್ತು ವರ್ಷಗಳಿಗೆ ಕಿರಿಯ] ಕಾಮೆಡಿಗಳಲ್ಲಿ ಅದ್ವಿತೀಯತೆ ಮೆರೆದಿದ್ದ. ಹಾಗೆಂದು ಇಬ್ಬರೂ ಬರಿಯ ಒಂದೇ ಪ್ರಕಾರಕ್ಕೆ ಸೀಮಿತಗೊಂಡಿರಲಿಲ್ಲ. ಟ್ರಾಜಡಿ ಕಾಮೆಡಿಗಳೆರಡೂ ಮನುಷ್ಯನ ಬದುಕಿನ ಎರಡು ದಾರಿಗಳೇ ಆಗಿದ್ದು, ಶೇಕ್ಸಪಿಯರ ಕಾಮೆಡಿಗಳಿಂದಲೂ ಪ್ರಸಿದ್ಧ. ಅದು 1598ರ ಸುಮಾರು. ಬೆನ್ ಜಾನಸನ್ ತನ್ನ ಮೊದಲ ಕಾಮೆಡಿಯ ‘Every Man in His Humour’ಮೂಲಕ ಹಾಗೂ ಶೇಕ್ಸಪಿಯರನ ತನ್ನ ಮೊದಲ ಕಾಮೆಡಿ ‘Love’s Labour”s […]

ಸರಣಿ ಬರಹ

ಸ್ನೇಹ ಮತ್ತು ಪ್ರೇಮವನ್ನು ಅಮರಗೊಳಿಸುವ- Shakespearean Sonnets: ನಾಗರೇಖಾ ಗಾಂವಕರ

ಸ್ನೇಹ ಎನ್ನುವುದು ಮಾನವ ಜಗತ್ತಿನ ಪ್ರಬಲ ಆಕಾಂಕ್ಷೆ ಮತ್ತು ಅದೊಂದು ಬಲ. ಸ್ನೇಹದ ಜೇನಹನಿ ಸ್ವಾದ ಸವಿದ ಮನಸ್ಸುಗಳಿಗೆ ಅದರ ಕಂಪು ಕೂಡಾ ಚಿರಪರಿಚಿತ. ಸ್ನೇಹ ಸ್ವರ್ಗದ ವಿಶಿಷ್ಟ ಕಾಣಿಕೆ. ವೈಯಕ್ತಿಕ ಜೀವನದ ಅದೆಷ್ಟೋ ಭಿನ್ನತೆಗಳು, ನ್ಯೂನ್ಯತೆಗಳು ಸ್ನೇಹದ ಪಯಣಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೊಂದು ಅಪೂರ್ವ ಉದಾಹರಣೆಯಾಗಿ ಶೇಕ್ಸಪಿಯರ್ ತನ್ನ ಜೀವಿತಾವಧಿಯಲ್ಲಿ ರಚಿಸಿದ 154 ಸಾನೆಟ್‍ಗಳಲ್ಲಿ ಮೊದಲ ಭಾಗದ ಸುಮಾರು 126 ಸುನೀತಗಳನ್ನು ತನ್ನ ಆಪ್ತ ಹಾಗೂ ಸುರಸುಂದರಾಂಗ ಶ್ರೀಮಂತ ಗೆಳೆಯನೊಬ್ಬನ ಕುರಿತು ಬರೆದಿದ್ದಾನೆ. ಆತನೊಂದಿಗಿನ ತನ್ನ ಅನುಪಮ […]

ಪಂಜು-ವಿಶೇಷ ಸರಣಿ ಬರಹ

ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ

ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ […]

ಸರಣಿ ಬರಹ

ಸುಂದರ ಬದುಕಿನ ಸುಖಾಂತ ನಾಟಕ-As You Like It: ನಾಗರೇಖಾ ಗಾಂವಕರ

ಶೇಕ್ಸಪಿಯರ ರಿನೈಜಾನ್ಸ್ ಕಾಲದ ಶ್ರೇಷ್ಟ ನಾಟಕಕಾರ. ಇಂಗ್ಲೆಂಡಿನಲ್ಲಿ ಕ್ವೀನ ಎಲಿಜಬೆತ್ ಆಳ್ವಿಕೆಯ ಕಾಲ ಅದು. ಆತ ಬರೆದ As You Like It ರೋಮ್ಯಾಂಟಿಕ ಕಾಮೆಡಿ. ಗೊಲ್ಲ ಅಥವಾ ದನಗಾಯಿ ಸಂಪ್ರದಾಯದ ಕಾಲ್ಪನಿಕ ರಮಣೀಯ ಗ್ರಾಮೀಣ ಸೊಬಗನ್ನು ಕಟ್ಟಿಕೊಡುತ್ತ ಗೊಲ್ಲ ಜನಾಂಗದ ವೈಭವೀಕೃತ ಬದುಕನ್ನು ವಿಫುಲವಾಗಿ ತನ್ನ ಕಾವ್ಯದಲ್ಲಿ ವಿಜೃಂಬಿಸುತ್ತಾನೆ ಶೇಕ್ಸಪಿಯರ್. ರೋಮ್ಯಾಂಟಿಕ ಕಾಮೆಡಿಗಳಲ್ಲಿ ಪ್ರೇಮ ಪ್ರಮುಖವಾದ ಆಶಯ. ಇಟಲಿಯ ಡ್ಯೂಕ್ ಸಿನಿಯರ್ ತನ್ನ ಸ್ವಂತ ಸಹೋದರನ ಕರಾಮತ್ತಿಗೆ ಬಲಿಯಾಗಿ ರಾಜ್ಯಭ್ರಷ್ಟನಾಗಿ ಆರ್ಡನ್ ಕಾಡಿನಲ್ಲಿ ತನ್ನ ಸಂಗಡಿಗರೊಂದಿಗೆ […]

ಸರಣಿ ಬರಹ

ವೈಷಮ್ಯ ಮತ್ತು ಒಪ್ಪಂದದ ಮೇಲಿನ ಕಥಾನಕ –The Merchant Of Venice : ನಾಗರೇಖ ಗಾಂವಕರ

ಆಂಟೋನಿಯೋ ಇಟಲಿಯ ವೆನಿಸ್‍ನ ನಿವಾಸಿ. ಪ್ರಸಿದ್ಧ ವ್ಯಾಪಾರಿ. ಆತ ವ್ಯಾಪಾರಿಯಾಗಿದ್ದರೂ ಸದಾಚಾರ ಸಂಪನ್ನ, ಸ್ನೇಹಜೀವಿ, ದಯಾಳುವಾದ ಆತನ ಸ್ನೇಹ ಬಳಗ ದೊಡ್ಡದಾಗಿತ್ತು. ಬಸ್ಸಾನಿಯೋ, ಗ್ರೇಸಿಯಾನೋ, ಲೊರೆಂಜೋ, ಸಲೆರಿಯೋ, ಸಲಾನಿಯೋ ಇವರೆಲ್ಲರ ಅಚ್ಚುಮೆಚ್ಚಿನ ಗೆಳೆಯನಾತ. ಅವರಿಗಾಗಿ ತನ್ನೆಲ್ಲ ಆಸ್ತಿ ಸಂಪತ್ತು, ಜೀವವನ್ನು ಕೊಡಲು ಸಿದ್ದನಿದ್ದ. ಆತನ ವ್ಯಕ್ತಿತ್ವ, ವೈಚಾರಿಕತೆ,ಕರುಣಾಪೂರಿತ ವ್ಯಕ್ತಿತ್ವ ಇತರರಿಗೆ ಮಾದರಿ. ಆತ ಮಮತೆ ಕರುಣೆಗಳ ಕ್ರೈಸ್ತ ತತ್ವಕ್ಕೆ ಮತ್ತೊಂದು ರೂಪಕವೆಂಬಂತೆ ಕಂಡುಬರುತ್ತಾನೆ. ಆದರೆ ಆತ ಅದೇನೋ ಉದ್ವಿಗ್ನತೆಯಲ್ಲಿ ಮಾನಸಿಕ ಕ್ಲೇಶದಿಂದ ನೋಯುತ್ತಿದ್ದಾನೆ. ಆಂಟೋನಿಯೋ ಅದಕ್ಕೆ ನಿರ್ದಿಷ್ಟ […]