ಶೇಕ್ಸಪಿಯರನ ‘ Measure for measure ’ – ಡಂಭ ಚಹರೆ ಮತ್ತು ಕಟು ವಾಸ್ತವಗಳು: ನಾಗರೇಖ ಗಾಂವಕರ
ಡಾರ್ಕ ಕಾಮೆಡಿ ಎಂದೇ ಪ್ರಸಿದ್ಧವಾದ ಶೇಕ್ಸಪಿಯರನ Measure for measure ನಾಟಕ ತಾತ್ವಿಕ ಮತ್ತು ನೈತಿಕ ಸಂಘರ್ಷಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಗಮನ ಸೆಳೆಯುತ್ತದೆ. ನಾಟಕದ ಮುಖ್ಯ ಪಾತ್ರ ಎಂಜೆಲ್ಲೋ ಹಾಗೂ ಮತ್ತೊಬ್ಬಳು ಇಸಾಬೆಲ್ಲಾ ಈ ಸಂಘರ್ಷದ ಅಡಕತ್ತರಿಯಲ್ಲಿ ಸಿಕ್ಕಿ ಬೀಳುತ್ತಾರೆ. ನಾಟಕದ ಕೇಂದ್ರ ವಸ್ತುವೇ ಅದಾಗಿದ್ದು ತನ್ನ ಶೀಲವನ್ನು ರಕ್ಷಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳುವ ಇಲ್ಲವೇ ಅಣ್ಣನ ಪ್ರಾಣ ಉಳಿಸಲು ನೈತಿಕತೆಯನ್ನು ಮಾರಿಕೊಳ್ಳುವ ಸಂದಿಗ್ಧತೆಯಲ್ಲಿ ಇಸಾಬೆಲ್ಲಾ ತೊಳಲಾಡುತ್ತಾಳೆ. ಮುಖವಾಡದ ಧರ್ಮನಿಷ್ಠೆಯನ್ನು, ಸೈದ್ಧಾಂತಿಕ ಪ್ರತಿಪಾದನೆಯನ್ನು ಮಾಡುವ ಎಂಜೆಲ್ಲೋ ವ್ಯಕ್ತಿಗತ … Read more