ಹೋಳಿ ಹುಣ್ಣಿಮೆಯ ಬಣ್ಣ,ಬಣ್ಣ ನೆನಪುಗಳು…!: ನಾರಾಯಣ ಬಾಬಾನಗರ

ಇಲ್ಲಿಯವರೆಗೆ ‘’ಹೋಗಿ ಹೋಗಿ ಈಗ್ಯಾಕ ಹೋಳಿ ಹುಣ್ಣಿವಿ ನೆಪ್ಪ ತಗದಾನ ಈ ಆಸಾಮಿ..’’ಅಂತ ಮನಸಿನ್ಯಾಗ ಗೊಣಗಬ್ಯಾಡ್ರಿ…ನನಗೂ ಗೊತ್ತೈತಿ ಹೋಳಿ ಹುಣ್ಣಿವಿ ಬರೂದು ಇನ್ನಾ ಭಾಳ ಮುಂದ ಐತೆನ್ನೂದು.ಹುಸೇನಿ ನೆನಪಾದ ಕೂಡಲೆ ಅಂವಾ ಭಾಗವಹಿಸಿದ ಹೋಳಿ ಹುಣ್ಣಿವಿ ನೆನಪಾಗತೈತಿ…ಅದರ ಹಿಂದ್ಹಿಂದ್ಹ ಹೋಳಿ ಹುಣ್ಣಿವಿಯ ನೆನಪುಗಳು ಕುಣಕೋತ ಮನದಾಗ ತೇಲಿ ಹೋಗತಾವ… ಹೋಳಿ ಹುಣ್ಣಿವಿ ಹಿಂದಿನ ಅಮಾಸಿ(ಆ ಅಮಾಸಿಗಿ ಏನಂತ ಹೆಸರೈತೋ…ನೆನಪಾಗೊಲ್ಲತು…ಅದನ್ನ ಕಾಮಣ್ಣನಿಗೆ ಬಿಟ್ಟು ಬಿಡೂಣಂತ)ಕಳದು ಚಂದ್ರಾಮನೆಂಬೋ ಚಂದ್ರಾಮ ಯಾವಾಗ ಮುಗಿಲಿನಾಗ ಹಣಿಕಿ ಹಾಕಿದನೋ,ಹಲಿಗಿಗಳು ಹೊರ ಬಂದು ಸಪ್ಪಳಾ ಮಾಡಾಕ … Read more

ಹುಸೇನಿ ಕಥೆಯಾಗಿ ಹೋದ ಕಥೆ.. (ಭಾಗ 3): ನಾರಾಯಣ ಬಾಬಾನಗರ

ಇಲ್ಲಿಯವರೆಗೆ ಅವನಿಗೆ ‘’ಹುಸೇನಿ’’ ಹಂಗಂತ ಕರೀತಿದ್ದದ್ದು ಮಾತ್ರ ನೆನಪು…ಅವನ ಪೂರ್ತಿ ಹೆಸರು ಈಗ ಗೊತ್ತಿಲ್ಲಂತಲ್ಲ ನಾವು ಸಣ್ಣವರಾಗಿದ್ದಾಗಲೂ ಖರೇ ಅಂದ್ರೂ ಗೊತ್ತಿರಲಿಲ್ಲ ಬಿಡ್ರಿ..ಅವನ ವಯಸ್ಸೆಷ್ಟಿದ್ದಿತ್ತು ಅಂತ ಲೆಕ್ಕಾ ಹಾಕಲಾಕ ಹೋಗಿ ನಾವು ಸೋತು ಸುಣ್ಣರಾಗಿದ್ದಕ್ಕಾಗಿ ಮುಂದ ಅವನ ವಯಸ್ಸಿನ ಬಗ್ಗೆ ತಿಳಕೊಳ್ಳಲಾಕ ಹೋಗು ಗೋಜಿಗೇ ಹೋಗಲಿಲ್ಲ.ಅಂವಾ ನಮಗ ವಿಚಿತ್ರವಾಗಿ ಕಾಣಲಾಕ ತರಹಾವರಿಯ ಕಾರಣಗಳಿದ್ದವು…ಅಂವಾ ಹುಡುಗರ ಕೂಡ ಇದ್ದಾಗ ಹುಡುಗರಂಗಿರತಿದ್ದ…ಹಿರಿಯರಗೂಡಾ ಥೇಟ್ ಹಿರಿಯರ ಹಂಗ ಇರತಿದ್ದ..ಹಿಂಗಾಗಿ ನಮಗ ಒಮ್ಮೊಮ್ಮೆ ಮಳ್ಳ ಹಿಡಿತಿತ್ತು…ಅವನ ಗೂಡಾ ಹೆಂಗಿರಬೇಕು ಅಂತ…ಅಂಥಾದರಾಗ ಅಂವಾ ತೊದಲಿಸಿ … Read more

ಜಾತ್ರಿ ಜೊತಿಗಿನ ನೆನಪಿನ ಬುತ್ತಿ (ಭಾಗ 2): ನಾರಾಯಣ ಬಾಬಾನಗರ

ಇಲ್ಲಿಯವರೆಗೆ ರೊಕ್ಕಾ ಕಳಕೊಂಡ ಸುದ್ದಿ ಓದಾಕ ರೆಡಿಯಾಗಿ ಬಂದು ನೀವು ಕುಂತದ್ದ ರೀತಿ ನೋಡಿದರ…ನನ್ನ ಮ್ಯಾಲೆ ಎಷ್ಟು ಕನಿಕರ ನಿಮಗೈತಿ ಅನ್ನೂದು ತೋರಿಸಿಕೊಡತೈತಿ…ಹೋಗಲಿ ಬಿಡ್ರಿ…ಈ ಸಲ ‘’ಖರೇ ಖರೋ’’(ಈ ಶಬ್ದದ ಅರ್ಥ ದಯವಿಟ್ಟು ಡಿಕ್ಸನರಿಯೊಳಗ ಹುಡುಕಬ್ಯಾಡ್ರಿ,ನಿಮಗ ತಿಳದರ ಸಾಕು-ಅರ್ಥ ಹುಡುಕಿ ಅನರ್ಥ ಆಗುದು ಬ್ಯಾಡಂತ ನನ್ನ ಆಶೆ)ನನ್ನ ರೊಕ್ಕ ಹೆಂಗ ಹೋತು ಅನ್ನೂದು ಹೇಳೇ ಹೇಳತೀನಿ ನನ್ನನ್ನ ದಯವಿಟ್ಟು ನಂಬ್ರಲ್ಯಾ…. ಹಂಗ ನಮ್ಮ ಪಟಾಲಮ್ ಆ ಇಬ್ಬರೊಳಗಿನ ಹುಡುಗರೊಳಗ ಒಬ್ಬನ ಮುಂದ ಹೋಗಿ ನಿಂತಿವಿ.ಆ ಹುಡುಗ ಶುರು … Read more

ಒಂದು ಹಲ್ಲಿಯ ಕತೆ: ಪ್ರಸನ್ನ ಆಡುವಳ್ಳಿ

ಇತಿಹಾಸದ ಈ ದಂತಕತೆ ನಿಮಗೆ ಗೊತ್ತಿರಲಿಕ್ಕೂ ಸಾಕು: ಮರಾಠರ ಇತಿಹಾಸದಲ್ಲಿ ಶಿವಾಜಿಯಷ್ಟೇ ಹಿರಿಮೆ ಆತನ ಸೇನಾಪತಿ ತಾನಾಜಿಗೂ ಇದೆ. ಈತ ಶಿವಾಜಿಯ ಬಲಗೈ ಬಂಟ, ಅಪ್ರತಿಮ ಸಾಹಸಿ. ಪುರಂದರಗಢ, ಪ್ರತಾಪಗಢ, ಕೊಂಡಾಣಾ ಕೋಟೆಗಳನ್ನು ಶಿವಾಜಿಯ ವಶಕ್ಕೊಪ್ಪಿಸುವಲ್ಲಿ ಈತನ ಪಾತ್ರ ಮಹತ್ವದ್ದು. ಇದು ತಾನಾಜಿಯ ಕೊನೆಯ ಹೋರಾಟದ ಕತೆ. ಅದು ಕ್ರಿ.ಶ. ೧೬೭೦ರ ಚಳಿಗಾಲದ ಒಂದು ದಿನ. ಪುಣೆಯಿಂದ ಸುಮಾರು ಮೂವತ್ತು ಕಿಲೋಮೀಟರು ದೂರದಲ್ಲಿರುವ ಕೊಂಡಾಣಾ ಕೋಟೆ ಆಗ ಮೊಘಲರ ಒಡೆತನದಲ್ಲಿತ್ತು. ಸಹ್ಯಾದ್ರಿ ಬೆಟ್ಟಗಳ ತುದಿಯಲ್ಲಿದ್ದ ದುರ್ಗಮ ಕೋಟೆಗೆ … Read more

ಗುಲಾಬಿ ಟಾಕಿಸ್ – ಅರಕಳಿಯಾದ ಅಂತರಂಗ: ಮಹದೇವ ಹಡಪದ್

ಹೆಣ್ಣಿನ ಸುತ್ತ ಹಾಕಿರುವ ಬೇಲಿಯನ್ನು ಮೀರುವ ಹಂಬಲದ ಕತೆ ಸಿನಿಮಾ ಆಗುವಾಗ ಸಂಕುಚಿತವಾಗಿದೆ. ವ್ಯವಸ್ಥೆಯೇ ಬೇಲಿಯಾಗಿರುವಾಗ ಗುಲಾಬಿ ತನ್ನಿಚ್ಛೆಯಂತೆ ತಾನು ಬದುಕುತ್ತಿದ್ದಳು… ಆಕೆಯೂ ತಲಾಖ್ ಕೊಡಲಾರದ ಗಂಡನಿಗಾಗಿ ಬದುಕಿದ್ದಾಳೆ. ಮಲಮಗನ ಮೇಲಿನ ಹಂಬಲದಲ್ಲಿ ಜೀವಿಸುತ್ತಿದ್ದಾಳೆ. ಹೊಸ ಸಿನಿಮಾಗಳು ಹೇಳುವ ಬಗೆಬಗೆಯ ಕತೆಗಳನ್ನು ನೋಡುವ ಆತುರದಲ್ಲಿದ್ದಾಳೆ. ತೀರ ಸಾಮಾನ್ಯನ ಬದುಕಿನಲ್ಲಿ ಒಂದು ಕಲಾತ್ಮಕ ಆವರಣ ಇದ್ದೆ ಇರುತ್ತದೆ. ಆ ಆವರಣವನ್ನು ಲಿಲ್ಲಿಬಾಯಿಯ ಜೀವನದಲ್ಲಿ ಕಾಣುತ್ತೇವೆ. ಆದರೆ ಗುಲಾಬಿ ಟಾಕೀಸ್ ಸಿನೆಮಾದ ಕೆಲವು (ಶಾಟ್)ಚಿತ್ರಿಕೆಗಳಲ್ಲಿ ಕಾಣಿಸಿದರೂ ಇನ್ನುಳಿದಂತೆ ಅದೊಂದು ಉದ್ಧೇಶಪೂರ್ವಕ … Read more

ಕನಸೆಂಬೋ ಕುದುರೆಯನೇರಿ:ಮಹಾದೇವ ಹಡಪದ

ಜಗತ್ತಿನ ಶ್ರೇಷ್ಠ ಚಿತ್ರನಿರ್ದೇಶಕರಾದ ಜಪಾನಿನ ಕುರೊಸವಾ ಅವರ ರಶೊಮನ್ ಗೇಟ್ ಚಿತ್ರದ ಮಾದರಿಯಲ್ಲಿ ಕನಸೆಂಬೋ ಕುದುರೆಯನೇರಿ ಸಿನಿಮಾವನ್ನು ಕಾಸರವಳ್ಳಿಯವರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಒಂದು ಘಟನೆಯನ್ನು ಏಳೆಂಟು ಜನ ತಮಗೆ ಕಂಡ ಸತ್ಯದ ಎಳೆಯಲ್ಲಿ, ಗ್ರಹಿಸಿದ ರೀತಿಯಲ್ಲಿ ಹೇಳುವ ರಶೋಮನ್ ಗೇಟ್ ಸಿನಿಮಾದ ನಿರೂಪಣಾ ತಂತ್ರವನ್ನು ಕನಸೆಂಬೋ ಕುದುರೆಯನೇರಿ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಆದರೆ ರಶೋಮನ್ ಚಿತ್ರದ ಸಾಧ್ಯತೆಗಳಿಗಿಂತ ಹೆಚ್ಚು ಸಾತ್ವಿಕವಾದ ವಿಭಿನ್ನ ಹಾದಿ ತುಳಿದಿದೆ. ಈ ಚಿತ್ರದಲ್ಲಿ ವಾಸ್ತವದ ಮತ್ತೊಂದು ಮಜಲು ಕಾಣಿಸುತ್ತದೆ.  ಕನಸು, ನಂಬಿಕೆಗಳು ಸುಳ್ಳಾಗುತ್ತ ಹೋದಂತೆ … Read more

ಘಟಶ್ರಾದ್ಧ:ಮಹಾದೇವ ಹಡಪದ

ಗಿರೀಶ ಕಾಸರವಳ್ಳಿಯ “ಘಟಶ್ರಾದ್ಧ” ನನ್ನ ಕತೆಯ ಜೊತೆ ಅತ್ಯಂತ ನಿಕಟವಾದ ಸಂಬಂಧ ಇಟ್ಟುಕೊಂಡಿದೆ. ನಾನು ಬೆಳೆದ ಪರಿಸರ ಗಿರೀಶ ಕಾಸರವಳ್ಳಿ ಬೆಳೆದ ಪರಿಸರಗಳ ನಡುವೆ ಅನೇಕ ಸಾಮ್ಯಗಳಿವೆ. ಒಬ್ಬ ಹುಡುಗ ಬೆಳೆದು ದೊಡ್ಡವನಾಗುವ ಕಷ್ಟ, ಮುಗ್ಧತೆ ಕಳೆದುಕೊಳ್ಳಬೇಕಾದ ಅನಿವಾರ್ಯ, ಅದರ ಸಂಕಟ, ನೈತಿಕ ಪ್ರಜ್ಞೆ ಬೆಳೆಸುವ ಮಾನವೀಯ ಸಂಬಂಧಗಳಲ್ಲಿ ಹುಟ್ಟುವ ತೊಡಕುಗಳು – ಇಂಥ ವಿಷಯಗಳಲ್ಲಿ ನನ್ನ ಅನುಭವಗಳೆಲ್ಲ ತನ್ನ ಸ್ವಂತ ಅನುಭವಗಳು ಎನ್ನುವಂತೆ ಗಿರೀಶ ಕಾಸರವಳ್ಳಿ “ಘಟಶ್ರಾದ್ಧ ” ಮಾಡಿದ್ದಾರೆ. – ಯು.ಆರ್.ಅನಂತಮೂರ್ತಿ ಸಾರ್ವಕಾಲಿಕವಾದದ್ದು ಯಾವಾಗ ಕಂಡರೂ, ಕಾಣಿಸಿದರೂ … Read more

ಗಾಂಧಿ @ ಕೂರ್ಮಾವತಾರ:ಮಹಾದೇವ ಹಡಪದ

ಸಾಹಿತ್ಯದ ಜೊತೆಗಿನ ಸಿನೆಮಾ ನಂಟು ಬಹಳ ಹಳೆಯದು. ಸಿನೆಮಾ ಅಂದ್ರೆ ಪ್ರಾಯೋಗಿಕವಾಗಿ ನಿರ್ದೇಶಕನೇ ಕುಂತು ಕತೆಗಾರನೊಂದಿಗೆ ಕತೆ ಕಟ್ಟುತ್ತ ಹೋಗುತ್ತಾನೆ. ಆದರೆ ಸಾಹಿತ್ಯಿಕ  ಕಥಾವಸ್ತುವೊಂದನ್ನು ಆಯ್ದುಕೊಂಡು ಅದನ್ನು ಚಿತ್ರದ ವಿನ್ಯಾಸದಲ್ಲಿ ಅಳವಡಿಸುವುದು ಗಿರೀಶ ಕಾಸರವಳ್ಳಿಯವರ ವಿಶೇಷ ವ್ಯಾಕರಣವಾಗಿದೆ. ಘಟಶ್ರಾದ್ಧದಿಂದ ಕೂರ್ಮಾವತಾರದ ವರೆಗಿನ ಪಯಣದಲ್ಲಿ ಅವರು ಕತೆಯ ಆಯ್ಕೆಯಲ್ಲಿ ವಿಶೇಷವಾದ ಆಸಕ್ತಿ ತೋರಿಸಿದ್ದಾರೆ. ಕನ್ನಡದ ಪ್ರಸಿದ್ಧ ಕತೆಗಾರರಾದ ಕುಂವೀ ಅವರ ಸಣ್ಣ ಕತೆಯಾಧಾರಿತ ಕೂರ್ಮಾವತಾರ ಸಿನೆಮಾವನ್ನು ಕನ್ನಡದ ಪ್ರಸಿದ್ಧ ಚಿತ್ರನಿರ್ದೇಶಕರಾದ ಕಾಸರವಳ್ಳಿಯವರು ನಿರ್ದೇಶಿಸಿದ್ದಾರೆ. ಮೊದಲ ದೃಶ್ಯದಲ್ಲಿಯೇ ಗಾಂಧಿ ಸಾವು … Read more

ಗಿರೀಶ ಕಾಸರವಳ್ಳಿ ಮತ್ತು ಚಲನಚಿತ್ರಗಳು: ಮಹದೇವ ಹಡಪದ್

  ಮನುಷ್ಯ ಪ್ರೀತಿ, ಮಾನವೀಯ ಅನುಕಂಪ, ಪರಿಸರ ಕಾಳಜಿ, ದೇಶ-ಭಾಷೆ, ಸಂಬಂಧಗಳು, ಸಮಾಜದ ಓರೆ-ಕೋರೆ, ತೊಡುಕು-ಕೆಡುಕಗಳನ್ನು ತನ್ನ ಹೊಟ್ಟೆಯಲ್ಲಿಟ್ಟುಕೊಂಡಿರುವ ಕಲುಷಿತ ಸಾಮಾಜಿಕ ಆವರಣ, ಆ ಆವರಣದ ನಡುವೆ ಬದುಕಿಗಾಗಿ ಹಂಬಲಿಸುವ, ಮನಮಿಡಿಯುವ ಮುಗ್ಧತೆ, ನ್ಯಾಯಕ್ಕಾಗಿ ಹೋರಾಡುವ, ಇರುವಿಕೆಯನ್ನು ಮುಟ್ಟಿನೋಡಿಕೊಳ್ಳುವ ಪಾತ್ರಗಳು… ಇಂಥ ಅನುಭವವನ್ನು ಗಾಢವಾಗಿ ಕಟ್ಟಿಕೊಡುವ ಶಕ್ತಿ ಕಾಸರವಳ್ಳಿಯವರ ಎಲ್ಲಾ ಸಿನೆಮಾಗಳ ಆವರಣದಲ್ಲಿದೆ. ಕತೆ, ಘಟನೆಯ ಓಘದಲ್ಲಿ ಪಾತ್ರಗಳು  ಅನಾವರಣಗೊಳ್ಳುವ ಬಗೆಯನ್ನು ಸಮರ್ಥವಾಗಿ ಚಿತ್ರದ ಚೌಕಟ್ಟಿನಲ್ಲಿಟ್ಟಿರುವ ಹಲವು ಚಿತ್ರಗಳ ಗೊಂಚಲು  ಕನ್ನಡದಲ್ಲಿ ಬಂದಿವೆ. ಅವೆಲ್ಲವವೂ ಮೂಲ ಆಕರವಾಗಿ … Read more

ಪ್ರೇಕ್ಷಕ-ಪರಿಣಾಮ : ಮಹದೇವ ಹಡಪದ್

ಉಪದೇಶ, ಸಂದೇಶ, ನೀತಿಯನ್ನು ಹೆಳಬೇಕಾದ್ದು ಕಲೆಯ ಉದ್ಧೇಶವೆಂದೂ ಅದೇ ವಿಧಾನದಲ್ಲಿಯೇ ಪ್ರದರ್ಶನಗಳು ಆಸ್ವಾದನೆಗೆ ಸಿಕ್ಕಬೇಕೆಂದು ಬಯಸುವುದು ಸಾಮಾನ್ಯವಾಗಿ ಎಲ್ಲ ವಯೋಮಾನದ ಪ್ರೇಕ್ಷಕರಲ್ಲೂ ಇದ್ದೆ ಇರುತ್ತದೆ. ಈ ಜನಪ್ರಿಯ ಬೇಡಿಕೆಯೂ ಆಯಾ ವಯಸ್ಸಿಗನುಗುಣವಾದ ರೀತಿಯಲ್ಲಿ ವ್ಯಕ್ತಗೊಳ್ಳುತ್ತದೆ. ಹುಸಿ ಮೌಲ್ಯಗಳನ್ನ ಬಿತ್ತರಿಸುವುದನ್ನು ಪ್ರೇಕ್ಷಕ ಬಯಸುತ್ತಾನೆಂದು ರುಚಿ ಬದಲಿಸುವ ಪ್ರಯತ್ನ ಮಾಡದಿರುವುದು ತಪ್ಪು. ಕನ್ನಡದ ಚಿತ್ರರಂಗ ಚರಿತ್ರೆಯಲ್ಲಿ ಹೊಸ ಅಲೆಯ ಸಿನೆಮಾಗಳಲ್ಲಿ ಮೊತ್ತಮೊದಲಿನದು ಎಂದು ಗುರುತಿಸಲಾಗುವ “ಸಂಸ್ಕಾರ”ದ ಯಶಸ್ಸಿಗೆ ಕಾರಣರಾದ ಅದೆ ಜನ ಈಗ ಆ ಶೈಲಿಯ ಸಿನೆಮಾಗಳನ್ನು ನೋಡಲಾರರೆಂದು ಹೇಳುವುದಾದರು … Read more

ಕಲಾಮಾರ್ಗೀಯ ಸಿನೆಮಾ ಎಂಬ ಕೌಶಲದ ಸಂವೇದನೆ…: ಮಹದೇವ ಹಡಪದ್

ನಮ್ಮ ಹಳ್ಳಿಗಳಲ್ಲಿ ಇನ್ನೂ ಕತೆ ಕೇಳುವ ಮತ್ತು ಹೇಳುವ ಹಂಬಲ ಕಮ್ಮಿಯಾಗಿಲ್ಲ. ಎಷ್ಟೋ ಕಥನಗಳು ಕಟ್ಟೆಯ ಮುಶೈರಾಗಳಲ್ಲಿ ಹಾಗೆ ಉಳಿದಿದ್ದಾವೆ ಎಂದರೆ ಉತ್ತರಕ್ಕಾಗಿ ಮಾಯಾಪೆಟ್ಟಿಗೆಯ ಕಡೆ ನೋಡಬೇಕಾಗುತ್ತದೆ. ಅಲ್ಲಿನ ಆರಂಭದ ಅಪಲಾಪದಿಂದ ಹಿಡಿದು ಜಾಹಿರಾತಿನ ತುಣುಕು ಸುರುವಾಗುವತನಕ ನೆಟ್ಟನೋಟದಿಂದ ಆಚೀಚೆ ಸರಿದಾಡದೇ ಕುಳಿತುಬಿಡುವವರ ವಯಸ್ಸಿಗೆ ನಿರ್ಬಂಧವೇ ಇಲ್ಲ. ಹಾಗೆ ನೋಡುವವರ ಮತ್ತು ನೋಡಿಸಿಕೊಳ್ಳಲ್ಪಡುವವರ ಕುರಿತು ವ್ಯವಹಾರಿಕ ಅಧ್ಯಯನ ಏನೇ ಹೇಳಿರಲಿ ಅಲ್ಲಿ ಸಹಜ ಅನುಕಂಪಗಳೇ ಬಂಡವಾಳವಾಗುತ್ತ ಹೋಗುವ ರೀತಿ ಮಾತ್ರ ಸಮಾಜದ ಆಂತರಿಕ ಸ್ಥಿರತೆಗೆ ಪೆಟ್ಟುಕೊಡುವುದಂತೂ ಖಚಿತ. … Read more