ಲಾಕ್ ಡೌನ್: ಹಾಡ್ಲಹಳ್ಳಿ ನಾಗರಾಜ್
ಚೆಲುವೇಗೌಡನಿಗೆ ಮಾಮೂಲಿನಂತೆ ಬೆಳಗ್ಗೆ ಆರಕ್ಕೆ ಎಚ್ಚರವಾಯಿತು. ಹೊದಿಕೆಯೊಳಗೆ ಸದ್ದಾಗದಂತೆ ಮೆಲ್ಲಗೆ ಇನ್ನೊಂದು ಮಗ್ಗುಲಿಗೆ ಹೊರಳಿಕೊಂಡ. ನಿದ್ದೆ ಹರಿದಿದ್ದರೂ ಏಳುವ ಮನಸ್ಸಾಗಲಿಲ್ಲ. ಕಣ್ಣು ಮುಚ್ಚಿಕೊಂಡವನು ಕಿವಿ ತೆರೆದುಕೊಂಡು ಸದ್ದಿಲ್ಲದೇ ಮಲಗಲು ಯತ್ನಿಸಿದ. ತಾನು ಮಲಗಿರುವ ಪ್ಯಾಸೇಜಿನ ಹಿಂದಿನ ಬಚ್ಚಲು ಕಡೆ ಸೊಸೆಯ ಚಟುವಟಿಕೆ ನಡೆದಿತ್ತು. ಅವಳ ಗಂಡ ಹಾಗು ಮಕ್ಕಳು ಬಂದು ಹೋದ ನಂತರ ಕಕ್ಕಸ್ಸುಕೋಣೆಯನ್ನು ಬರಲಿನಿಂದ ರಪ್ ರಪ್ ಎಂದು ತೊಳೆದಳು. ಅಲ್ಲಿಂದ ಬಚ್ಚಲಿಗೆ ದಾವಿಸಿದವಳು ಬಟ್ಟೆ ಬಿಚ್ಚಿ ನಿಂತಿದ್ದ ಮಕ್ಕಳಿಗೆ ನೀರೆರೆದು ಹೊರಕಳಿಸಿ ತಾನೂ ಮೈತೊಳೆದುಕೊಂಡಳು. … Read more