ಮಲೆನಾಡಿನ ಪದವೀಧರ ಯುವಕನ ಜೇನುಕೃಷಿ ಯಶೋಗಾಥೆ: ಚರಣಕುಮಾರ್

ಸಹ್ಯಾದ್ರಿಯ ಶೃಂಗದ ದಟ್ಟಡವಿಯ ಮಧ್ಯಭಾಗದಲ್ಲೊಂದು ಪುಟ್ಟ ಗ್ರಾಮ ಹಕ್ಲಮನೆ. ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲ್ಲೂಕಿನಲ್ಲಿ ಬರುವ ಈ ಹಳ್ಳಿಯಲ್ಲೊಬ್ಬ ಪ್ರಗತಿಪರ ಮತ್ತು ಪದವಿಧರ ಜೇನುಕೃಷಿಕ ಸಂತೋಷ ಹೆಗಡೆ. ಹೆಸರಿನಲ್ಲೇ ಸಂತೋಷ ಎಂದು ಇಟ್ಟುಕೊಂಡಿರುವ ಈ ಸಂತೋಷ ಬಿ.ಕಾಂ ಪದವಿ ಪಡೆದಿದ್ದರೂ ಕೂಡ ಪೇಟೆಯ ಕಡೆ ಮುಖ ಮಾಡಲಿಲ್ಲ. ಆದರೂ ಒಮ್ಮೆ ಬಿ.ಕಾಂ ಮುಗಿದ ಮೇಲೆ ಉದ್ಯೋಗಕ್ಕಾಗಿ ಪೇಟೆಯ ಕಡೆ ಹೊರಟ ಈತನಿಗೆ, ತಾಯಿಯ ಆರೋಗ್ಯದಲ್ಲಿ ಕಾಣಿಸಿಕೊಂಡ ಏರು-ಪೇರು ಮನೆಬಿಟ್ಟು ಹೋಗಲು ಅವಕಾಶ ನೀಡಲೇಇಲ್ಲ. ಹೇಳಿ-ಕೇಳಿ ಇವರದು … Read more

ಮರ ಕಡಿಯುವುದಾಗಲಿ ಅಥವಾ ಅದನ್ನು ಘಾಸಿಗೊಳಿಸುವುದಾಗಲಿ ಮಾಡುವುದು ಬಿಷ್ಣೋಯಿ ಧರ್ಮಕ್ಕೆ ವಿರುದ್ಧವಾದುದ್ದು: ಮಿತಾಕ್ಷರ

ಇತಿಹಾಸದಲ್ಲಿ ನಡೆದ ಅತಿ ಘೋರ ಘಟನೆ ಅದು ನಡೆದದ್ದು ರಾಜಸ್ಥಾನದ ಜೋಧಪುರದಲ್ಲಿ ಅಲ್ಲಿನ ರಾಜ ಅಜಿತ ಸಿಂಹ ತನ್ನ ಅರಮನೆಯ ಸೌಂದರ್ಯ ಹೆಚ್ಚಿಸಲು ತನ್ನ ರಾಜ್ಯದ ಬಿಷ್ಣೋಯಿ ಸಮಾಜದವರೆ ಹೆಚ್ಚಾಗಿದ್ದ ಜೆಹ್ನಾದ್‌ನ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದ ಖೇಜ್ರಿ ವೃಕ್ಷಗಳನ್ನು ಕತ್ತರಿಸಿ ತರುವಂತೆ ಮಂತ್ರಿ ಗಿರಿಧರ ಭಂಡಾರಿಗೆ ಆಜ್ಞೆಪಿಸಿದ. ಸೈನಿಕರೊಡನೆ ಹೊರಟ ಮಂತ್ರಿ ಗ್ರಾಮದಲ್ಲಿ ಮರ ಕಡಿಯಲು ಮುಂದಾದ. ಸುದ್ದಿ ತಿಳಿದು ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಅಲ್ಲಿನ ಬಿಷ್ಣೋಯಿ ಸಮಾಜದ ಅಮೃತಾದೇವಿ ಬಿಷ್ಣೋಯಿ ತಕ್ಷಣ ಮರಗಳ ರಕ್ಷಣೆಗೆ … Read more

ಬೆರಗು ಹುಟ್ಟಿಸುವ ಬೇತಾಳ: ರಾಜಶ್ರೀ. ಟಿ. ರೈ. ಪೆರ್ಲ

ಊರ ದೇವರ ಜಾತ್ರೆ ಬಂತು ಎಂದರೆ ಒಂಥರಾ ತನು ಮನದಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುತ್ತದೆ. ಹಳೇಯ ನೆನಪುಗಳು, ಊರಿಗೆ ಬರುವ ಅಥಿತಿಗಳ ಸ್ವಾಗತದ ತಯಾರಿ. ಅದರಲ್ಲೂ ಧಕ್ಷಿಣ ಕನ್ನಡ ಕಾಸರಗೋಡು ಈ ಭಾಗದಲ್ಲಿ ದೇವಸ್ಥಾನದ ಜಾತ್ರೆಯೆಂದರೆ ಒಂದು ಬಗೆಯ ಸಾಂಸ್ಕøತಿಕ ಉತ್ಸವವೇ ಸರಿ.ಅಲ್ಲಿ ಎಲ್ಲವೂ ಉಂಟು ಎನ್ನುವ ಹಾಗೆ. ಪ್ರತೀ ದಿನ ನಿಗದಿತ ಹೊತ್ತಿಗೆ ನಡೆಯುವ ಪೂಜೆ ಮತ್ತು ಇತರ ನಿತ್ಯ ನೈಮಿತ್ತಿಕ ಕ್ರಿಯೆ ವಿಧಿಯನ್ನು ಬಿಟ್ಟರೆ ಕೆಲವು ಹಬ್ಬದ ಸಮಯಕ್ಕೆ ಸಣ್ಣ ಸಂಭ್ರಮ. ಆದರೆ ಜಾತ್ರೆ … Read more

ಸೋಲಿಗರ ಜೊತೆ ಒಂದು ದಿನ: ಶೈಲಜೇಷ ಎಸ್.

ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳ ಬೇಕಿಲ್ಲ ಅಲ್ಲವೇ, ಅಂತ ಒಂದು ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ. ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಪ್ರಯಾಣ ಅಂತ ಹೋಗುತ್ತಿದ್ದದ್ದೆ ವರುಷಕ್ಕೆ ಒಮ್ಮೆಯೋ ಅಥವಾ ಎರಡು ಬಾರಿಯೊ ಅಷ್ಟೆ, ಈಗ ಹಾಗಿಲ್ಲ ಪ್ರತಿವಾರದ ಕೊನೆಯ (weekend) ದಿನಗಳನ್ನು ಪ್ರಯಾಣದ ದಿನಗಳೆಂದೆ ಘೋಷಿಸಬಹುದು ಅಷ್ಟರ ಮಟ್ಟಿಗೆ ಎಲ್ಲರೂ ಪ್ರಯಾಣದಲ್ಲಿ ಇರುವವರೆ. ಕಾಡು, ಮೇಡು, ಚಾರಣ, ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳ, ರೆಸಾರ್ಟ್, ಹೋಮ್ ಸ್ಟೇಗಳು ಹೀಗೆ ಎಲ್ಲೆಲ್ಲೂ ಜನರಿಂದ … Read more

ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಯ ಕೇಂದ್ರವಾಗಿದ್ದ ಬಸ್ರೂರು: ರಾಘವೇಂದ್ರ ಅಡಿಗ ಎಚ್ಚೆನ್.

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕರ್ನಾಟಕ ಅದರಲ್ಲಿಯೂ ಬಸ್ರೂರು, ಸುತ್ತಮುತ್ತಲಿನ ಜನರ ಕೊಡುಗೆಗಳ ಬಗ್ಗೆ ಚಿಕ್ಕ ಪರಿಚಯ ನೀಡುವ ಉದ್ದೇಶ ಇಲ್ಲಿಯದು. ಇಂದಿನ ಬಸ್ರೂರು ಹಿಂದೆಲ್ಲಾ ವಸುಪುರ ಎಂದು ಕರೆಯಲ್ಪಡುತ್ತಿತ್ತು ಇದು ಕರಾವಳಿಯ ವಾರಾಹಿ ನದಿ ದಂಡೆಯ ಮೇಲಿರುವ … Read more

ಗೀತ ಸಂತ ಸುಬ್ಬಣ್ಣ: ಡಾ. ಹೆಚ್ ಎನ್ ಮಂಜುರಾಜ್

ಮಾನವನೆದೆಯಲಿ ಆರದೆ ಉರಿಯುತಿದ್ದ ಪ್ರಜ್ವಲಿಪ ಗೀತಜ್ಯೋತಿ ಶಿವಮೊಗ್ಗ ಸುಬ್ಬಣ್ಣ ಎಂಬ ಸುಗಮ ಸಂಗೀತದರಸ ಮೊನ್ನೆ ಶಾಂತವಾದರು. ಕನ್ನಡ ಸುಗಮ ಸಂಗೀತವನು ಜನಪ್ರಿಯಗೊಳಿಸಿದವರು ಅವರು. ಸಿ ಅಶ್ವತ್ಥ್ ಅವರ ಹೆಸರಿನೊಂದಿಗೆ ಬೆಸೆದಿದ್ದ ತಂತು. ತಮ್ಮ ಎಂಬತ್ನಾಲ್ಕರ ವಯೋಮಾನದಲಿ ಅಸ್ತಂಗತರಾದ ಹಾಡು ಪಾಡಿನ ನೇಸರನೀತ. ಇವರ ನಿಜ ನಾಮಧೇಯ ಜಿ ಸುಬ್ರಹ್ಮಣ್ಯಂ. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲಿ 1938 ರಲಿ ಜನಿಸಿದರು. ಪ್ರತಿದಿನವೂ ಪೂಜೆ ಪುರಸ್ಕಾರ ನಡೆಯುತಿದ್ದ ಮನೆತನ. ತಾತನವರಾದ ಶಾಮಣ್ಣನವರು ಸಂಗೀತ ಕೋವಿದರು. … Read more

ನಿನ್ನ ಇಚ್ಛೆಯಂತೆ ನಡೆವೆ: ಮನು ಗುರುಸ್ವಾಮಿ

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಸಿಗುವ ವಿಭಿನ್ನ ವ್ಯಕ್ತಿತ್ವದ ಬರಹಗಾರರು. ತಮ್ಮನ್ನು ಜರಿದವರಿಗೆ ತಮ್ಮ ಕವಿತೆಗಳ ಮೂಲಕವೇ ಉತ್ತರ ಕೊಟ್ಟು, ಓದಿದರೆ ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳನ್ನೇ ಓದಬೇಕು ಎನ್ನುವಷ್ಟರ ಮಟ್ಟಿಗೆ ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ಕವಿ. ‘ಮೈಸೂರು ಮಲ್ಲಿಗೆ’ ಕವನ ಸಂಕಲನದ ಮೂಲಕ ಕನ್ನಡಿಗರ ಮನಮನೆಯಲ್ಲಿ ಮಾತಾದ ಪ್ರೇಮಕವಿ; ಅಲ್ಲಲ್ಲ ದಾಂಪತ್ಯ ಕವಿ. ನವೋದಯ, ರೋಮ್ಯಾಂಟಿಕ್ ಚಳವಳಿಯ ಕಾಲಘಟ್ಟದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುವ ಕೆ ಎಸ್ ನ “ನಾನು ಬರೆದ ಕವಿತೆಗಳು ಪ್ರೇಮಕವಿತೆಗಳಲ್ಲ, … Read more

ಜೀವ ವೀಣೆಯ ಭಾವ ಲಹರಿ: ಡಾ. ಹೆಚ್ ಎನ್ ಮಂಜುರಾಜ್

ಹಿಂದೆ ಆಹಾರವೇ ಔಷಧವಾಗಿತ್ತು; ಈಗ ಔಷಧವೇ ಆಹಾರವಾಗಿದೆ ಎಂಬುದನ್ನು ಬಹಳ ಮಂದಿ ಹೇಳುತ್ತಿರುತ್ತಾರೆ. ಇದು ನಿಜವೇ. ಏಕೆಂದರೆ ಅಡುಗೆ ಮನೆಯು ಕೇವಲ ಆಹಾರ ಬೇಯಿಸುವ ಪಾಕಶಾಲೆಯಾಗಿರಲಿಲ್ಲ. ವೈದ್ಯಶಾಲೆಯೂ ಆಗಿತ್ತು. ನಮ್ಮ ಆಯುರ್ವೇದದ ಬಹಳಷ್ಟು ಮನೆಮದ್ದುಗಳು ರುಚಿಕರ ಆಹಾರವಾಗಿಯೇ ನಮ್ಮನ್ನು ಕಾಪಾಡುತ್ತಿದ್ದವು. ನಮಗೇ ಗೊತ್ತಿಲ್ಲದಂತೆ ಆಯಾ ಕಾಲಮಾನಕ್ಕೆ ತಕ್ಕುದಾಗಿ ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುತಿದ್ದವು. ನಮ್ಮ ಅಡುಗೆಯಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ಕರಿಬೇವು, ನಿಂಬೆ, ಕೊತ್ತಂಬರಿ, ಮೆಣಸು, ಜೀರಿಗೆ, ಇಂಗು, ಸಾಸುವೆ, ಮೆಂತ್ಯ ಮೊದಲಾದ ಪದಾರ್ಥಗಳು ಏಕಕಾಲಕ್ಕೆ ಆಹಾರಕ್ಕೆ … Read more

ಗೌರೀ ಹುಣ್ಣಿವೆ: ಡಾ. ವೃಂದಾ ಸಂಗಮ್

ಬಾಲ್ಯದೊಳಗಿನ ಸುಂದರ ನೆನೆಪುಗಳನ್ನು ಹೆಕ್ಕಿ, ನಕ್ಕು ನಲಿಯದ ಜನರೇ ಇಲ್ಲ ಅಥವಾ ಅಂತಹ ಬಾಲ್ಯದ ಅನುಭವದ ಶ್ರೀಮಂತಿಕೆ ಇಲ್ಲದ ವ್ಯಕ್ತಿ ಬದುಕು ಪೂರ್ಣವಾಗಿರುವುದಿಲ್ಲ ಎಂದೇ ಹೇಳಬೇಕು. ಬಾಲ್ಯದಲ್ಲಿನ ಯಾವುದೋ ಒಂದು ಚಿಕ್ಕ ಚಿತ್ರವೂ ನಮಗೆ ರವಿವರ್ಮನ ಚಿತ್ರಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುತ್ತಿತ್ತು. ಯಾರೋ ಹಾಡಿದ ಒಂದು ಹಾಡನ್ನು ಮೂರು ನಾಲ್ಕು ಬಾರಿ ಹಾಡಿ, ಕಲಿತು ಬಿಡುತ್ತಿದ್ದ ದಿನಗಳು. ಯಾವುದೊಂದು ನಾಟಕ, ಹಾಡು, ಡ್ಯಾನ್ಸು ಏನೇ ನೋಡಿದರೂ, ಅದನ್ನು ಕಲಿತು ಬಿಡುತ್ತಿದ್ದೆವು. ಅದರ ಅನುಕರಣೆಯಲ್ಲಿಯೂ ನಮ್ಮದೊಂದು ಅನುಭವದ ಸ್ವಂತಿಕೆಯನ್ನು ಸೇರಿಸುತ್ತಿದ್ದ … Read more

ಶಿವಣ್ಣ ಐ ಲವ್ ಯೂ: ಜಯರಾಮಾಚಾರಿ

ನಾಗರಾಜು ಶಿವ ಪುಟ್ಟಸ್ವಾಮಿ – ಸಿನಿಮಾಗಾಗಿ ಶಿವರಾಜ್ ಕುಮಾರ್ ಆದದ್ದು ಹಳೆಯದು. ಶಿವರಾಜ್ ಕುಮಾರ್ ಸಿನಿಮಾದ ಮೂಲಕ , ತಮ್ಮ ಬಿಂದಾಜ್ ನಡೆಯಿಂದ, ಬಾ ಮಾ , ಏನಮ್ಮ ಅಂತ ಮಾತಾಡಿಸುತ್ತಲೇ ಸುಮಾರು 36 ವರುಷಗಳಿಂದ ಸಿನಿಮಾ ಮಾಡುತ್ತ ಅರವತ್ತು ವರುಷವಾದರೂ ಯುವಕರಂತೆ ಹೆಜ್ಜೆ ಹಾಕುತ್ತ, ಮಗುವಿನಂತೆ ಸದಾ ಉತ್ಸಾಹ ತುಂಬಿರುವ ಶಿವರಾಜ್ ಕುಮಾರ್ ಈಗ ನಮ್ಮೆಲ್ಲರ ಶಿವಣ್ಣ . ಶಿವಣ್ಣ ಅಲ್ಲೊಂದು ನಗು ಅಲ್ಲೊಂದು ಎನರ್ಜಿ. ಆನಂದ್ ಸಿನಿಮಾದಿಂದ ಇತ್ತೀಚಿನ ಬೈರಾಗಿವರೆಗೂ. ಶಿವಣ್ಣ ನಮ್ಮ ಪ್ರೀತಿಯ … Read more

ಧನಕ್ಕಿಂತ ದೊಡ್ಡದು ಇಂ’ಧನ’ ಸಂಪತ್ತು: ಹೊ.ರಾ.ಪರಮೇಶ್ ಹೊಡೇನೂರು

“ಲೋ ರಾಕೇಶ… ಮಾರ್ಕೆಟ್ ಗೆ ಹೋಗಿ ಒಂದು ಕಟ್ಟು ಕೊತ್ತಂಬರಿ ಸೊಪ್ಪು ತಗೊಂಡು ಬೇಗ ಬಾರೋ….” ಹೀಗಂತ ಅಮ್ಮಾ ಹೇಳಿದ್ದೇ ತಡ, ಮಗ ರಾಕೇಶ್ ಪಕ್ಕದ ರಸ್ತೆಯ ಕೂಗಳತೆ ದೂರದಲ್ಲಿದ್ದ ಮಾರ್ಕೆಟ್ ಗೆ ತನ್ನ ರಾಯಲ್ ಎನ್ ಫೀಲ್ಡ್ ಬೈಕಿನಲ್ಲಿ ಫುಲ್ ಜೋಶ್ ಆಗಿ ಹೋಗಿ ಕೊತ್ತಂಬರಿ ಸೊಪ್ಪು ತಂದ. ಖುಷಿಪಟ್ಟ ಅಮ್ಮ “ತಿಂಡಿ ಮಾಡೋದು ಸ್ವಲ್ಪ ತಡ ಆಗುತ್ತೆ, ಸರ್ಕಲ್ ನಲ್ಲಿ ಇರೋ ಬೇಕರಿಯಲ್ಲಿ ಒಂದು ಪೌಂಡ್ ಬನ್ ತಗೊಂಡು ಬಾರೋ ರಾಕೇಶ” ಎಂದ ತಕ್ಷಣ … Read more

ಮಂಗಳಮುಖಿಯ ಮುಖದಲ್ಲಿ ಕಂಡ ತಾಯಿಯ ಒಲುಮೆ: ಪ್ರಜ್ವಲ್‌ ಎಸ್.ಜಿ., ಸೀಗೆಕೋಟೆ

ಸೃಷ್ಟಿಯಲ್ಲಿ ಕೋಟ್ಯಾಂತರ ಜೀವರಾಶಿಗಳು ಉಂಟು. ಪ್ರತಿಯೊಂದು ಜೀವಿಗೂ ಅದರದೇ ಆದ ದೇಹರಚನೆ, ಆಹಾರಪದ್ದತಿ, ಬಣ್ಣ, ವರ್ತನೆ ಹೀಗೆ ಹಲವಾರು ವಿಭಿನ್ನವಾದ ವ್ಯತ್ಯಾಸಗಳನ್ನು ನೋಡಬಹುದು. ಈ ಸೃಷ್ಟಿಯನ್ನು ಬುದ್ದಿವಂತ ಜೀವಿಯಾದ ಮಾನವನು ವಿವಿಧ ರೀತಿಯಲ್ಲಿ ಅಧ್ಯಯನ ಮಾಡುತ್ತಾನೆ ಮತ್ತು ವ್ಯಾಖ್ಯಾನಿಸುತ್ತಾನೆ. ಕೆಲವರು ವೈಜ್ಞಾನಿಕ ದೃಷ್ಟಿಯಿಂದ, ಕೆಲವರು ಜೋತಿಷ್ಯ ಮತ್ತು ಖಗೋಳ ವೈಜ್ಞಾನಿಕ ದೃಷ್ಟಿಯಿಂದ ಅವರವರ ಮನಸ್ಥಿಗೆ ತಕ್ಕಂತೆ ಸೃಷ್ಟಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಪ್ರತಿಯೊಂದು ಜಾತಿಯ ಪ್ರಾಣಿಗಳು, ಪಕ್ಷಿಗಳು, ಜೀವಜಂತುಗಳು ಪ್ರಕೃತಿಯ ಭಾಗಗಳಾಗಿ ಭೂಮಿಯಲ್ಲಿ ಮತ್ತು ನೀರಿನಲ್ಲಿ ವಾಸಿಸುತ್ತವೆ. … Read more

ನಿಲುಗನ್ನಡಿ ಪುಸ್ತಕ ಕುರಿತು ಕುಂ.ವೀ.ಅವರ ಅನಿಸಿಕೆ

ಸಹಸ್ರಾರು ವರ್ಷಗಳ ಹಿಂದೆಯೇ ‘ಮಸ್ಕಿ’ ಸಾಮ್ರಾಟ್ ಅಶೋಕನನ್ನು ಆಕರ್ಷಿಸಿದ ರಾಜ್ಯದ ಪ್ರಾಚೀನಾತಿ ಪ್ರಾಚೀನ ಸ್ಥಳ. ಆದರೆ ಸ್ವಾತಂತ್ರ್ಯೋತ್ತರವಾಗಿ ಮಸ್ಕಿ, ‘ಕೋಡಗುಂಟಿ’ ಎಂಬ ಹೆಸರಿನಿಂದ ಸಾಹಿತ್ಯಿಕವಾಗಿ ಹೆಸರಾಗಿದೆ. ಇಲ್ಲಿನ ಈ ಫ್ಯಾಮಿಲಿಗೆ ಸಾಂಸ್ಕೃತಿಕ ಹಿನ್ನಲೆ ಇದೆ, ಸದಭಿರುಚಿ ವ್ಯಕ್ತಿತ್ವವಿದೆ. ಬಸವರಾಜ ಮತ್ತು ಅವರ ತಂಗಿ ರೇಣುಕಾ, ಬಂಡಾರ ಹೆಸರಿನ ಪ್ರಕಾಶನ ಸಂಸ್ಥೆ ಆರಂಭಿಸಿದವರು, ತನ್ಮೂಲಕ ಸದಭಿರುಚಿ ಕಿತಾಬುಗಳನ್ನು ಪ್ರಕಟಿಸಿದವರು, ಈ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಿದವರು. ರೇಣುಕಾಳ ಚಟವಟಿಕೆಗಳನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಿರುವೆ. … Read more

ಹಿಜಾಬ್ ಮತ್ತು ವಿದ್ಯಾಭ್ಯಾಸ: ರಾಘವೇಂದ್ರ ಅಡಿಗ ಎಚ್ಚೆನ್

ಕಳೆದ ಕೆಲ ದಿನಗಳಿಂದ ದೇಶದಾದ್ಯಂತ ಹಿಜಾಬ್ ಕುರಿತ ವಿವಾದ ಹೊಗೆಯಾಡುತ್ತಿದೆ. ಉಡುಪಿಯ ಕಾಲೇಜಿನಲ್ಲಿ ಪ್ರಾರಂಭವಾದ ಚಿಕ್ಕ ಘಟನೆಯೊಂದು ದೇಶದ ಗಡಿಗಳನ್ನು ಮೀರಿ ವಿವಾದವಾಗಿ ಮಾರ್ಪಟ್ಟಿದೆ ಎಂದರೆ ಈ ಆಧುನಿಕ ಕಾಲದಲ್ಲಿಯೂ ಮಾನವನು ಧರ್ಮದ ಸಂಬಂಧವಾಗಿ ಹೇಗೆ ಭಾವಿಸಿಕೊಂಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ. ರಾಜ್ಯದ ನಾನಾ ಶಾಲೆ, ಕಾಲೇಜುಗಳಲ್ಲಿನ ಕೆಲ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಸಿಗದಿದ್ದರೆ ಶಿಕ್ಷಣವನ್ನೇ ಮೊಟಕು ಮಾಡುತ್ತೇವೆ ಎನ್ನುವವರೆಗೆ ಮುಂದುವರಿದಿದ್ದಾರೆ. ಇದು ನಿಜಕ್ಕೂ ಆಘಾತಕರ. ”ನಮಗೆ ನಮ್ಮ ಇಸ್ಲಾಂ ಧರ್ಮ, ಹಿಜಾಬ್ ಮುಖ್ಯ, ಶಾಲೆಯ … Read more

ಮಹಾಕಾವ್ಯಗಳ ಮಹಾಯಾನ: ಎನ್.ಎಸ್.ಶ್ರೀಧರ ಮೂರ್ತಿ

ಮಹಾಕಾವ್ಯಗಳು ಜಗತ್ತಿನ ಎಲ್ಲಾ ನಾಗರೀಕತೆಯಲ್ಲಿಯೂ ಮೂಡಿ ಬಂದಿವೆ, ಇನ್ನೂ ಕೆಲವು ಮಹಾ ಕಾವ್ಯಗಳು ಮೂಡಿ ಬರುತ್ತಲೇ ಇವೆ. ಮಹಾಕಾವ್ಯ ಎಂದು ಕರೆಸಿ ಕೊಳ್ಳುವುದು ಕೇವಲ ಗಾತ್ರದ ದೃಷ್ಟಿಯಿಂದಲ್ಲ ಅದರ ಅಂತಸತ್ವದ ದೃಷ್ಟಿಯಿಂದ. ಅದರಲ್ಲಿ ಒಂದು ರೀತಿಯಲ್ಲಿ ಪರಂಪರೆಯ ಮೌಲ್ಯಗಳೇ ಅಂತರ್ಗತವಾಗಿರುತ್ತವೆ. ಕೆಲವು ಜಗತ್ತಿನ ಅಂತಹ ಮಹಾಕಾವ್ಯಗಳ ಪರಿಶೀಲನೆ ಈ ಲೇಖನದ ಉದ್ದೇಶ. ಸಮೇರಿಯನ್ನರ ‘ಗಿಲ್ಗಮೇಶ್’ ಮತ್ತು ಜಪಾನಿನ ಮುರಸಾಕಿಯ ‘ಗೆಂಜಿ ಮನೋಗಟರಿ’ ಪ್ರಾರಂಭಿಕ ಮಹಾಕಾವ್ಯಗಳು ಎಂದು ಕರೆಸಿ ಕೊಂಡರೂ ಹೋಮರ್‍ನ ‘ಇಲಿಯಡ್’ನಿಂದ ಮಹಾಕಾವ್ಯಗಳ ಪರಂಪರೆ ಆರಂಭ. ಹೆಲನ್ … Read more

ನನ್ನ ಮನವ ತಿಳಿಯಾಗಿಸಿದ ಆ ನವಿಲು: ಹರೀಶ್ ಆರ್ ಅಡವಿ

ನಮ್ಮ ಚಳ್ಳಕೆರೆ(ಚಿತ್ರದುರ್ಗ ಜಿಲ್ಲೆ) ಅರಣ್ಯ ಪ್ರದೇಶವು ಅಂದಾಜು ಒಂದು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ, ಬಯಲುಸೀಮೆಯ ವನ್ಯಜೀವಿಗಳಿಗೆ ಆವಾಸ ಸ್ಥಾನವಾಗಿದೆ. ಇಲ್ಲಿನ ಅಪರೂಪದ ಅರಣ್ಯ ಪ್ರದೇಶದಲ್ಲಿ ಓಡಾಡುವುದೆಂದರೆ ನನಗೆ ಒಂದು ಖುಷಿಯ ವಿಷಯವಾಗಿದೆ. ಕೆಲವೊಮ್ಮೆ ಕಾನನದ ಒಳಗೆ ಹೋಗಿ ಹೆದರಿದ್ದೂ ಉಂಟು, ಜೋರು ಗಾಳಿ ಬೀಸುವಾಗ ನೀಲಗಿರಿಮರದ ಎಲೆಯ ಶಭ್ಧಕ್ಕೆ ಹೆದರಿ ಓಡಿದ್ದೂ ಉಂಟು, ಅದೆಷ್ಟೋ ಬಾರಿ ನನ್ನ ಹೆಜ್ಜೆಯ ಸಪ್ಪಳಕ್ಕೆ ನಾನೇ ಭಯದಿಂದ ನಡುಗಿದ್ದೇನೆ, ದೂರದಲ್ಲೆಲ್ಲೋ ಕೇಳುವ ಕೋಗಿಲೆ … Read more

“The Critic -ವಿಮರ್ಶಕ’ನ ವಿಮರ್ಶೆಯ ದಿಕ್ಕುದೆಸೆಗಳಿಗೆ ಎಸೆದ ಸವಾಲು”: ಎಂ.ಜವರಾಜ್

Act -1978, ನಾತಿಚರಾಮಿ, ಹರಿವು ಚಿತ್ರ ನಿರ್ದೇಶಕ ಮಂನ್ಸೋರೆ ಅವರ ‘The Critic’ ಸದ್ಯ ಈಗ ಸದ್ದು ಮಾಡುತ್ತಿರುವ ಒಂದು ಕಿರುಚಿತ್ರ. ಹಾಗೆ ’19 20 21′ ಮತ್ತು ‘ಅಬ್ವಕ್ಕ’ ಬಹು ನಿರೀಕ್ಷೆಯ ಮುಂದಿನ ಚಿತ್ರಗಳು ಎಂಬ ಸುದ್ದಿ ಇದೆ. ಸಿನಿಮಾದಲ್ಲಿ ಎರಡು ಬಗೆ. ಒಂದು length movie ಇನ್ನೊಂದು Short movie. ಸದ್ಯ Short movie ಗಳದೇ ಕಾರುಬಾರು. ಏಕೆಂದರೆ ವೆಚ್ಚದ ದೃಷ್ಟಿಯಿಂದಲೂ ಮತ್ತು ಪ್ರಯಾಣ ರಹಿತವಾಗಿಯೂ ಒಂದು ನಿಗದಿತ ಸ್ಥಳದಲ್ಲಿ ತಮ್ಮ ಕಲ್ಪನೆಯ ಒಂದಿಡೀ … Read more