ಅಷ್ಟು ಪ್ರೀತಿ ಇಷ್ಟು ಪ್ರೀತಿ ಎಣಿಸಿ ಕಷ್ಟಬಡದಿರು: ಮನು ಗುರುಸ್ವಾಮಿ

ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇನೀಡುವೆನು ರಸಿಕ ನಿನಗೆಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ ಬೇಂದ್ರೆ… ಧಾರವಾಡ ಅಜ್ಜ, ಶಬ್ದಗಾರುಡಿಗ, ಬದುಕಿನ ಅನನ್ಯತೆಯನ್ನು ಪದ್ಯಗಳಲ್ಲಿ ಹಿಡಿದಿಟ್ಟ ಮಾಂತ್ರಿಕ. ಬಡತನದ ಬೇಗೆಯಲ್ಲೂ ದಾಂಪತ್ಯವೆಂಬುದು ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟ ಕವಿ. ಕೆ ಎಸ್ ನರಸಿಂಹಸ್ವಾಮಿ ಒಂದುಕಡೆ “ಪ್ರೇಮವೆನಲು ಹಾಸ್ಯವೆ ?” ಎಂದ ಪ್ರಶ್ನಿಸುತ್ತಾರೆ. ಆಗಿದ್ದರೆ ? ಒಲವೆಂಬುದೇನು ? ಅದು ಹುಡುಗಾಟವಲ್ಲ. “ಒಲವೆಂಬುದು ಹೊತ್ತಿಗೆ” ಎನ್ನುವುದೇ ಬೇಂದ್ರೆಯವರ ನಿಲುವು. ಪ್ರೀತಿ ಮತ್ತು ದಾಂಪತ್ಯವನ್ನು ಒಂದುಗೊಳಿಸಿ ಕಾವ್ಯವನ್ನು ಕಟ್ಟಿಕೊಡುವ ಬೇಂದ್ರೆ, ತಮ್ಮ … Read more

ಸತ್ಮೇಲೆ ಏನೈತಣ್ಣ ? ದೊಡ್ ಸೊನ್ನೆನೆ ! : ಮನು ಗುರುಸ್ವಾಮಿ

“ಯೆಂಡ, ಯೆಡ್ತಿ, ಕನ್ನಡ ಪದಗೊಳ್” ಎಂದ ತಕ್ಷಣ ನಮಗೆ ನೆನಪಾಗುವುದೇ ಕನ್ನಡದ ಪ್ರಸಿದ್ಧ ಬರಹಗಾರರಾದ ಜಿ ಪಿ ರಾಜರತ್ನಂರವರು. ಯೆಂಡ, ಹೆಂಡತಿ, ಕನ್ನಡದ ಬಗ್ಗೆ ಅಪಾರ ಒಲವಿದ್ದ ಕವಿ ತಮ್ಮ ಕವಿತೆಗಳಲ್ಲಿ ತಿಳಿಹಾಸ್ಯದ ಮೂಲಕ ಬದುಕನ್ನು, ಬದುಕುವ ರೀತಿಯನ್ನು ಬಹಳ ವಿಸ್ತಾರವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಭಾಷೆಯ ಸೊಗಡಿನಿಂದ ಕೂಡಿದ ಪದಪುಂಜಗಳು, ಪ್ರಾಸಗಳ ಸರಳ ಹೊಂದಿಕೆ, ವಾಸ್ತವಕ್ಕೆ ಹತ್ತಿರವಾದ ವಿಚಾರಗಳು ಈ ಎಲ್ಲವೂ ಒಟ್ಟಿಗೆ ಸೇರಿ ಕವಿತೆಗಳನ್ನು ಒಮ್ಮೆ ಓದಿದ ಸಹೃದಯನನ್ನು ಮತ್ತೆ ಮತ್ತೆ ತಮ್ಮತ್ತ ಆಕರ್ಷಿಸುತ್ತವೆ. ಈಗಾಗಲೇ … Read more

“ಉಪ್ಪುಚ್ಚಿ ಮುಳ್ಳು” ವಿಲಕ್ಷಣ, ವಿಕ್ಷಿಪ್ತ, ವಿಚಿತ್ರ ಎನಿಸಿದರೂ ವಿಶಿಷ್ಟ ಕೃತಿ: ಡಾ. ನಟರಾಜು ಎಸ್.‌ ಎಂ.

ಕಳೆದ ವರ್ಷ ಅನಿಸುತ್ತೆ ಸಿರಾ ಸೀಮೆಯ ರಂಗಕರ್ಮಿ ಗೋಮಾರದಹಳ್ಳಿ ಮಂಜುನಾಥ್‌ ರವರು ತಾವು ಇಷ್ಟಪಟ್ಟು ಶುರು ಮಾಡಿರುವ Native nest ಎಂಬ ಯೂ ಟ್ಯೂಬ್‌ ಚಾನೆಲ್‌ ನಲ್ಲಿ ಕವಿತೆಯೊಂದನ್ನು ವಾಚನ ಮಾಡಿದ್ದರು. ಕವಿತೆಯ ಶೀರ್ಷಿಕೆ “ಮೊಲೆ” ಎಂದಾಗಿತ್ತು. ಕವಿಯ ಹೆಸರು ದಯಾ ಗಂಗನಘಟ್ಟ (ದಾಕ್ಷಾಯಿಣಿ). “ಮೊಲೆ” ಅನ್ನುವ ಕವನವನ್ನು ಅದಕ್ಕೂ ಮೊದಲು ಆಶಾ ಜಗದೀಶ್‌ ರವರು ಫೇಸ್‌ ಬುಕ್‌ ನಲ್ಲಿ ಬರೆದಿದ್ದರು. ಎರಡೂ ಕವಿತೆಗಳನ್ನು ನೋಡಿದ್ದ ನನಗೆ ದಯಾ ಗಂಗನಘಟ್ಟ, ಆಶಾ ಜಗದೀಶ್‌ ರವರಿಂದ ಸ್ಫೂರ್ತಿ ಪಡೆದರಾ? … Read more

ಗ್ರಹಣ: ಡಾ. ವೃಂದಾ ಸಂಗಮ್

ಗ್ರಹಣ ಎಂದರೇನು? ಅಂತ ಐದನೇ ಕ್ಲಾಸಿನೊಳಗ ವಿಜ್ಞಾನದ ವಿಷಯದೊಳಗ ಒಂದು ಪ್ರಶ್ನೆ ಇತ್ತು. ಒಂದು ಆಕಾಶಕಾಯ ಇನ್ನೊಂದು ಆಕಾಶ ಕಾಯದ ನೆರಳಿನಿಂದ ಆಂಶಿಕವಾಗಿ ಇಲ್ಲವೇ ಪೂರ್ಣವಾಗಿ ಅಸ್ಫುಟವಾಗುವಿಕೆಯನ್ನು ಗ್ರಹಣ ಎನ್ನುವರು ಅಂತ ಬಾಯಿಪಾಠಾನೂ ಮಾಡಿಸಿದ್ದಳು, ನಮ್ಮವ್ವ. ಹಿಂದ ನಾವು ಬಾಯಿಪಾಠ ಕಲಿತಿದ್ದು ಈಗಲೂ ನೆನಪಿರತದ, ಮೂರು ವರುಷದ ುದ್ಧಿ ನೂರು ವರುಷದ ತನಕಾಂತ. ಆದರ, ಈಗ ಗ್ರಹಣ ಎಂದರೇನು? ಪ್ರಶ್ನೆ ಮುಂದ ನಿಮ್ಮ ಮಾತಿನಲ್ಲಿ ಬರೆಯಿರಿ ಅಂತ ಇತ್ತು, ನಾನೂ ಹಿಂದ ಮುಂದ ನೋಡಲಿಲ್ಲ, ನಮ್ಮವ್ವ ಬಾಯಿಪಾಠ … Read more

ಕುಗ್ಗಿದಾಗಲೆಲ್ಲಾ ಕಗ್ಗ ಓದಬೇಕು !: ಮನು ಗುರುಸ್ವಾಮಿ

ಹೌದು.. ಮನುಷ್ಯ ಕುಗ್ಗಿದಾಗಲೆಲ್ಲಾ ಮಂಕುತಿಮ್ಮನ ಕಗ್ಗ ಓದಬೇಕು. ಬಹುತೇಕ ಮನುಷ್ಯನ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ, ಇರುವಷ್ಟು ಕಾಲ ಸೂರ್ಯನಂತೆ ಬೆಳಗಿ ಮರೆಯಾಗಬೇಕೆಂಬ ಸಂದೇಶವನ್ನು ಸಾರುವಲ್ಲಿ, ಬದುಕಿನ ಅಪರಿಮಿತ ಹೋರಾಟ, ಅನಿರೀಕ್ಷಿತ ಸವಾಲುಗಳನ್ನು ಹೇಗೆ ಎದುರುಗೊಳ್ಳಬೇಕೆಂಬ ವಿಚಾರವನ್ನು ಮನದಟ್ಟು ಮಾಡುವಲ್ಲಿ ಈ ಕೃತಿ ಮಹತ್ವದ ಪಾತ್ರವಹಿಸಿದೆ. ನಾನು, ನನ್ನದೆಂಬ ಭ್ರಮೆಯಲ್ಲಿ ಜೀವನವಿಡೀ ನಡೆದು, ಕೊನೆಗೆ ಎಲ್ಲವನ್ನು ಬಿಟ್ಟು ಮಣ್ಣು ಸೇರುವ ಮನುಷ್ಯನ ನಶ್ವರ ಬದುಕಿನ ಬಗ್ಗೆ ಇಲ್ಲಿನ ಚೌಪದಿಗಳು ಎಳೆ ಎಳೆಯಾಗಿ ತಿಳಿಸಿಕೊಡುತ್ತವೆ. ನಾಲ್ಕು ಸಾಲಿನ ಸಣ್ಣ ಸಣ್ಣ ಪದ್ಯಗಳಿಂದ … Read more

ಕಲ್ಲು ದೇವರು ದೇವರಲ್ಲ: ಮನು ಗುರುಸ್ವಾಮಿ

ವಿಗ್ರಹಾರಾಧನೆ ಎಂಬುದು ಬಹುತೇಕ ಮೂರ್ತಿ ಪೂಜೆ ಎಂಬ ಅರ್ಥವನ್ನೇ ನೀಡುವಂತದ್ದು. ಜನಪದರಿಂದ ಹಿಡಿದು ಶಿಷ್ಟಪದದವರೆಗೂ ಮೂರ್ತಿ ಪೂಜೆ ಅಸ್ತಿತ್ವದಲ್ಲಿರುವುದನ್ನು ನಾವು ಗಮನಿಸಬಹುದು. ಕೆಲವರು ಕಲ್ಲು, ಮಣ್ಣು, ಮರ, ಲೋಹ ಇತ್ಯಾದಿಗಳನ್ನು ಬಳಸಿ ನಿರ್ಮಿಸಲ್ಪಟ್ಟ ಒಂದು ಆಕೃತಿಗೆ ದೇವರೆಂಬ ಸ್ಥಾನಕೊಟ್ಟು ಆರಾಧಿಸುತ್ತಾ ಬಂದಿದ್ದಾರೆ. ಇನ್ನೂ ಕೆಲವರು ಕಲ್ಲು, ಮಣ್ಣು, ಮರ ಮೊದಲಾದ ಭೌತಿಕ ವಸ್ತುಗಳನ್ನು ದೇವರೆಂದು ಪೂಜಿಸಿತ್ತಾ ಬಂದಿದ್ದಾರೆ. ಭೌತಿಕ ವಸ್ತುಗಳು ಮಾನವನ ನಿತ್ಯ ಜೀವನದಲ್ಲಿ ಅವಶ್ಯಕವಾಗಿರುವುದರಿಂದ ಜನಪದರು ಅದನ್ನೇ ದೇವರೆಂದು ನಂಬಿ ಪೂಜಿಸುತ್ತಾ ಬಂದಿದ್ದಾರೆ ಎಂಬ ಮಾತು … Read more

ಹಿಂದಿ ಚಿತ್ರಕಥಾ ಸಂವಾದದಲ್ಲಿ ಮಾಹಿರರಾಗಿದ್ದ ಕಾದರ್ ಖಾನ್ !: ಎಚ್ಚಾರೆಲ್

ಕಾದರ್ ಖಾನ್ : (೨೨, ಅಕ್ಟೋಬರ್ ೧೯೩೭-೩೧, ಡಿಸೆಂಬರ್, ೨೦೧೮) ನಿಧನರಾದಾಗ ಅವರ ವಯಸ್ಸು : ೮೧ ವರ್ಷವಾಲಿದ್ ಹೆಸರು, : ಅಬ್ದುಲ್ ರೆಹ್ ಮಾನ್ ಖಾನ್,ವಾಲಿದಾರ ಹೆಸರು, ಇಕ್ಬಾಲ್ ಬೇಗಂಹೆಂಡತಿಯ ಹೆಸರು : ಅಜ್ರಾ ಖಾನ್ಪಸ್ಟೂನ್ ಟ್ರೈಬ್, ಸುನ್ನಿ ಜಾತಿಗೆ ಸೇರಿದವರು.ಓದಿದ ಕಾಲೇಜ್ : ಇಸ್ಮೇಲ್ ಯೂಸುಫ್ ಕಾಲೇಜ್, ಬೊಂಬಾಯಿ.ಆಗಿನ ಕಾಲದ ಸಿವಿಲ್ ಇಂಜಿನಿಯರಿಂಗ್ ಶಾಖೆಯಲ್ಲಿ ಸ್ನಾತಕೋತ್ತರ ಪದವೀಧರ ಬೊಂಬಾಯಿನ ಸಾಬು ಸಿದ್ದಿಕಿ, ಇಂಜಿನಿಯರಿಂದ ಕಾಲೇಜ್, ಸಿವಿಲ್ ಇಂಜಿನಿಯರಿಂಗ ಶಾಖೆಯಲ್ಲಿ ಪ್ರೊಫೆಸರ್, (೧೯೭೦-೭೫ ರವರೆಗೆ)ಹಫೀಜ್-ಎ-ಖುರಾನ್ ಎಂದು … Read more

ನವರಾತ್ರಿ: ಡಾ. ವೃಂದಾ ಸಂಗಮ್ 

ನವರಾತ್ರಿ ಬರತದ ಅಂತ ಸೂಚನಾ ಹೆಂಗ ಅನ್ನೋದು ನೋಡಿದರನ ತಿಳೀತದ. ಶ್ರಾವಣ ಮಾಸ ಹಬ್ಬ- ಹುಣ್ಣವೀ ಸುರಿಮಳಿ. ದಿನಾ ಕಡಬು-ಹೋಳಿಗೆ, ಮಾಡಿ ಮತ್ತ ತಿಂದು ಎರಡೂ ಸುಸ್ತಾಗಿರತದ. ಅಷ್ಟ ಅಲ್ಲ, ಖರ್ಚಂತೂ ಕೇಳಬ್ಯಾಡರೀ, ಮುಗೀದಂಥಾದ್ದು, ಮ್ಯಾಲ ಹೊಲ ಮನೀಯವರಿಗಂತೂ ಕಳೇ-ಕಂಬಳೀ ಅಂತ ಹಗಲೂ ರಾತ್ರೀ ಕೆಲಸಾ. ಅಷ್ಟಲ್ಲದನ ಮ್ಯಾಲ ಜಿಟಿ ಜಿಟಿ ಮಳೀ. ಹಿಂತಾದರಾಗ, ಯಾರನರೇ ಕೇಳರೀ, ನಮ್ಮನಿಯೊಳಗ, ಶ್ರಾದ್ಧ, ಶ್ರಾವಣ ಮಾಸದಾಗ ಬರತಾವ ಅಂತಾರ. ಮತ್ತ ಹಿರೇರೂಂದರ ದೇವರ ಸಮಾನ ಅಂತ ಅವರೂ ತಮ್ಮದೊಂದು ನೆನಪು … Read more

ಸೋಲೆಂಬುದೇ ನಿಜ ಗೆಲುವು !: ಡಾ. ಹೆಚ್ ಎನ್ ಮಂಜುರಾಜ್

ಕಲಿಸು ಗುರುವೇ, ಸೋಲುವುದನು ! ಸೋತು ಸುಖಿಸುವುದನು……..!! ಎಂಬ ಪದ್ಯವೊಂದನು ಹಿಂದೆ ಬರೆದಿದ್ದೆ. ಅದನು ಗಮನಿಸಿದವರು ಕೇಳಿದರು: ಜಗತ್ತಿನಲ್ಲಿ ಎಲ್ಲರೂ ಗೆಲ್ಲಬೇಕೆಂದು ಹೊರಟಿದ್ದಾರೆ; ನೀವೇನಿದು: ಹೀಗೆ ಬರೆದಿದ್ದೀರಿ? ಅದಕೆ ನಾನೆಂದೆ: ಎಲ್ಲರೂ ಗೆಲ್ಲುವುದಾದರೆ ಸೋಲುವವರು ಯಾರು? ಒಬ್ಬರು ಗೆಲ್ಲಲು ಹಲವರು ಸೋಲಲೇಬೇಕಲ್ಲವೆ? ಅಂಥವರ ಪೈಕಿ ನಾನು ಎಂದೆ. ಅವರಿಗೆ ಏನನಿಸಿತೋ? ವಿಚಿತ್ರವಾಗಿ ನೋಡಿದರು. ಲೋಕದಲ್ಲಿ ಗೆಲುವಿಗಾಗಿ ಹಂಬಲಿಸುವವರೇ ಎಲ್ಲ; ಸೋಲುವವರು ಇಲ್ಲವೇ ಇಲ್ಲ! ನಮ್ಮ ಮನೆ, ಮನೆತನ, ಸಂಬಂಧಿಕರು, ಸ್ನೇಹಿತರು, ಶಾಲೆ, ಶಿಕ್ಷಣ, ವ್ಯವಸ್ಥೆ ಅಷ್ಟೇ ಅಲ್ಲ; … Read more

ಮಲೆನಾಡಿನ ಪದವೀಧರ ಯುವಕನ ಜೇನುಕೃಷಿ ಯಶೋಗಾಥೆ: ಚರಣಕುಮಾರ್

ಸಹ್ಯಾದ್ರಿಯ ಶೃಂಗದ ದಟ್ಟಡವಿಯ ಮಧ್ಯಭಾಗದಲ್ಲೊಂದು ಪುಟ್ಟ ಗ್ರಾಮ ಹಕ್ಲಮನೆ. ಉತ್ತರ ಕನ್ನಡ ಜಿಲ್ಲೆ, ಸಿದ್ದಾಪುರ ತಾಲ್ಲೂಕಿನಲ್ಲಿ ಬರುವ ಈ ಹಳ್ಳಿಯಲ್ಲೊಬ್ಬ ಪ್ರಗತಿಪರ ಮತ್ತು ಪದವಿಧರ ಜೇನುಕೃಷಿಕ ಸಂತೋಷ ಹೆಗಡೆ. ಹೆಸರಿನಲ್ಲೇ ಸಂತೋಷ ಎಂದು ಇಟ್ಟುಕೊಂಡಿರುವ ಈ ಸಂತೋಷ ಬಿ.ಕಾಂ ಪದವಿ ಪಡೆದಿದ್ದರೂ ಕೂಡ ಪೇಟೆಯ ಕಡೆ ಮುಖ ಮಾಡಲಿಲ್ಲ. ಆದರೂ ಒಮ್ಮೆ ಬಿ.ಕಾಂ ಮುಗಿದ ಮೇಲೆ ಉದ್ಯೋಗಕ್ಕಾಗಿ ಪೇಟೆಯ ಕಡೆ ಹೊರಟ ಈತನಿಗೆ, ತಾಯಿಯ ಆರೋಗ್ಯದಲ್ಲಿ ಕಾಣಿಸಿಕೊಂಡ ಏರು-ಪೇರು ಮನೆಬಿಟ್ಟು ಹೋಗಲು ಅವಕಾಶ ನೀಡಲೇಇಲ್ಲ. ಹೇಳಿ-ಕೇಳಿ ಇವರದು … Read more

ಮರ ಕಡಿಯುವುದಾಗಲಿ ಅಥವಾ ಅದನ್ನು ಘಾಸಿಗೊಳಿಸುವುದಾಗಲಿ ಮಾಡುವುದು ಬಿಷ್ಣೋಯಿ ಧರ್ಮಕ್ಕೆ ವಿರುದ್ಧವಾದುದ್ದು: ಮಿತಾಕ್ಷರ

ಇತಿಹಾಸದಲ್ಲಿ ನಡೆದ ಅತಿ ಘೋರ ಘಟನೆ ಅದು ನಡೆದದ್ದು ರಾಜಸ್ಥಾನದ ಜೋಧಪುರದಲ್ಲಿ ಅಲ್ಲಿನ ರಾಜ ಅಜಿತ ಸಿಂಹ ತನ್ನ ಅರಮನೆಯ ಸೌಂದರ್ಯ ಹೆಚ್ಚಿಸಲು ತನ್ನ ರಾಜ್ಯದ ಬಿಷ್ಣೋಯಿ ಸಮಾಜದವರೆ ಹೆಚ್ಚಾಗಿದ್ದ ಜೆಹ್ನಾದ್‌ನ ಗ್ರಾಮದಲ್ಲಿ ಸಮೃದ್ಧವಾಗಿ ಬೆಳೆದ ಖೇಜ್ರಿ ವೃಕ್ಷಗಳನ್ನು ಕತ್ತರಿಸಿ ತರುವಂತೆ ಮಂತ್ರಿ ಗಿರಿಧರ ಭಂಡಾರಿಗೆ ಆಜ್ಞೆಪಿಸಿದ. ಸೈನಿಕರೊಡನೆ ಹೊರಟ ಮಂತ್ರಿ ಗ್ರಾಮದಲ್ಲಿ ಮರ ಕಡಿಯಲು ಮುಂದಾದ. ಸುದ್ದಿ ತಿಳಿದು ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸುವ ಅಲ್ಲಿನ ಬಿಷ್ಣೋಯಿ ಸಮಾಜದ ಅಮೃತಾದೇವಿ ಬಿಷ್ಣೋಯಿ ತಕ್ಷಣ ಮರಗಳ ರಕ್ಷಣೆಗೆ … Read more

ಬೆರಗು ಹುಟ್ಟಿಸುವ ಬೇತಾಳ: ರಾಜಶ್ರೀ. ಟಿ. ರೈ. ಪೆರ್ಲ

ಊರ ದೇವರ ಜಾತ್ರೆ ಬಂತು ಎಂದರೆ ಒಂಥರಾ ತನು ಮನದಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುತ್ತದೆ. ಹಳೇಯ ನೆನಪುಗಳು, ಊರಿಗೆ ಬರುವ ಅಥಿತಿಗಳ ಸ್ವಾಗತದ ತಯಾರಿ. ಅದರಲ್ಲೂ ಧಕ್ಷಿಣ ಕನ್ನಡ ಕಾಸರಗೋಡು ಈ ಭಾಗದಲ್ಲಿ ದೇವಸ್ಥಾನದ ಜಾತ್ರೆಯೆಂದರೆ ಒಂದು ಬಗೆಯ ಸಾಂಸ್ಕøತಿಕ ಉತ್ಸವವೇ ಸರಿ.ಅಲ್ಲಿ ಎಲ್ಲವೂ ಉಂಟು ಎನ್ನುವ ಹಾಗೆ. ಪ್ರತೀ ದಿನ ನಿಗದಿತ ಹೊತ್ತಿಗೆ ನಡೆಯುವ ಪೂಜೆ ಮತ್ತು ಇತರ ನಿತ್ಯ ನೈಮಿತ್ತಿಕ ಕ್ರಿಯೆ ವಿಧಿಯನ್ನು ಬಿಟ್ಟರೆ ಕೆಲವು ಹಬ್ಬದ ಸಮಯಕ್ಕೆ ಸಣ್ಣ ಸಂಭ್ರಮ. ಆದರೆ ಜಾತ್ರೆ … Read more

ಸೋಲಿಗರ ಜೊತೆ ಒಂದು ದಿನ: ಶೈಲಜೇಷ ಎಸ್.

ಮಳೆಗಾಲದ ಕಾಡು ಹೇಗೆ ಇರುತ್ತದೆ ಎಂದು ನಾನು ಹೇಳ ಬೇಕಿಲ್ಲ ಅಲ್ಲವೇ, ಅಂತ ಒಂದು ಸ್ಥಳ ಚಾಮರಾಜ ಜಿಲ್ಲೆಯ ಬಿಳಿಗಿರಿ ರಂಗನ ಬೆಟ್ಟ. ಸಾಮಾನ್ಯವಾಗಿ ಎಲ್ಲರೂ ಬಾಲ್ಯದಲ್ಲಿ ಪ್ರಯಾಣ ಅಂತ ಹೋಗುತ್ತಿದ್ದದ್ದೆ ವರುಷಕ್ಕೆ ಒಮ್ಮೆಯೋ ಅಥವಾ ಎರಡು ಬಾರಿಯೊ ಅಷ್ಟೆ, ಈಗ ಹಾಗಿಲ್ಲ ಪ್ರತಿವಾರದ ಕೊನೆಯ (weekend) ದಿನಗಳನ್ನು ಪ್ರಯಾಣದ ದಿನಗಳೆಂದೆ ಘೋಷಿಸಬಹುದು ಅಷ್ಟರ ಮಟ್ಟಿಗೆ ಎಲ್ಲರೂ ಪ್ರಯಾಣದಲ್ಲಿ ಇರುವವರೆ. ಕಾಡು, ಮೇಡು, ಚಾರಣ, ತೀರ್ಥಕ್ಷೇತ್ರ, ಪ್ರೇಕ್ಷಣೀಯ ಸ್ಥಳಗಳ, ರೆಸಾರ್ಟ್, ಹೋಮ್ ಸ್ಟೇಗಳು ಹೀಗೆ ಎಲ್ಲೆಲ್ಲೂ ಜನರಿಂದ … Read more

ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳುವಳಿಯ ಕೇಂದ್ರವಾಗಿದ್ದ ಬಸ್ರೂರು: ರಾಘವೇಂದ್ರ ಅಡಿಗ ಎಚ್ಚೆನ್.

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷಗಳು ಸಂದಿದೆ. ಈ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹನೀಯರು ತಮ್ಮ ಜೀವನ, ಜೀವಗಳನ್ನು ತ್ಯಾಗ ಮಾಡಿ ಭಾರತಮಾತೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕರಾವಳಿ ಕರ್ನಾಟಕ ಅದರಲ್ಲಿಯೂ ಬಸ್ರೂರು, ಸುತ್ತಮುತ್ತಲಿನ ಜನರ ಕೊಡುಗೆಗಳ ಬಗ್ಗೆ ಚಿಕ್ಕ ಪರಿಚಯ ನೀಡುವ ಉದ್ದೇಶ ಇಲ್ಲಿಯದು. ಇಂದಿನ ಬಸ್ರೂರು ಹಿಂದೆಲ್ಲಾ ವಸುಪುರ ಎಂದು ಕರೆಯಲ್ಪಡುತ್ತಿತ್ತು ಇದು ಕರಾವಳಿಯ ವಾರಾಹಿ ನದಿ ದಂಡೆಯ ಮೇಲಿರುವ … Read more

ಗೀತ ಸಂತ ಸುಬ್ಬಣ್ಣ: ಡಾ. ಹೆಚ್ ಎನ್ ಮಂಜುರಾಜ್

ಮಾನವನೆದೆಯಲಿ ಆರದೆ ಉರಿಯುತಿದ್ದ ಪ್ರಜ್ವಲಿಪ ಗೀತಜ್ಯೋತಿ ಶಿವಮೊಗ್ಗ ಸುಬ್ಬಣ್ಣ ಎಂಬ ಸುಗಮ ಸಂಗೀತದರಸ ಮೊನ್ನೆ ಶಾಂತವಾದರು. ಕನ್ನಡ ಸುಗಮ ಸಂಗೀತವನು ಜನಪ್ರಿಯಗೊಳಿಸಿದವರು ಅವರು. ಸಿ ಅಶ್ವತ್ಥ್ ಅವರ ಹೆಸರಿನೊಂದಿಗೆ ಬೆಸೆದಿದ್ದ ತಂತು. ತಮ್ಮ ಎಂಬತ್ನಾಲ್ಕರ ವಯೋಮಾನದಲಿ ಅಸ್ತಂಗತರಾದ ಹಾಡು ಪಾಡಿನ ನೇಸರನೀತ. ಇವರ ನಿಜ ನಾಮಧೇಯ ಜಿ ಸುಬ್ರಹ್ಮಣ್ಯಂ. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲಿ 1938 ರಲಿ ಜನಿಸಿದರು. ಪ್ರತಿದಿನವೂ ಪೂಜೆ ಪುರಸ್ಕಾರ ನಡೆಯುತಿದ್ದ ಮನೆತನ. ತಾತನವರಾದ ಶಾಮಣ್ಣನವರು ಸಂಗೀತ ಕೋವಿದರು. … Read more

ನಿನ್ನ ಇಚ್ಛೆಯಂತೆ ನಡೆವೆ: ಮನು ಗುರುಸ್ವಾಮಿ

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕಾಣಸಿಗುವ ವಿಭಿನ್ನ ವ್ಯಕ್ತಿತ್ವದ ಬರಹಗಾರರು. ತಮ್ಮನ್ನು ಜರಿದವರಿಗೆ ತಮ್ಮ ಕವಿತೆಗಳ ಮೂಲಕವೇ ಉತ್ತರ ಕೊಟ್ಟು, ಓದಿದರೆ ಕೆ ಎಸ್ ನರಸಿಂಹಸ್ವಾಮಿ ಅವರ ಕವಿತೆಗಳನ್ನೇ ಓದಬೇಕು ಎನ್ನುವಷ್ಟರ ಮಟ್ಟಿಗೆ ಒಂದು ಕಾಲದಲ್ಲಿ ಜನಪ್ರಿಯರಾಗಿದ್ದ ಕವಿ. ‘ಮೈಸೂರು ಮಲ್ಲಿಗೆ’ ಕವನ ಸಂಕಲನದ ಮೂಲಕ ಕನ್ನಡಿಗರ ಮನಮನೆಯಲ್ಲಿ ಮಾತಾದ ಪ್ರೇಮಕವಿ; ಅಲ್ಲಲ್ಲ ದಾಂಪತ್ಯ ಕವಿ. ನವೋದಯ, ರೋಮ್ಯಾಂಟಿಕ್ ಚಳವಳಿಯ ಕಾಲಘಟ್ಟದಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುವ ಕೆ ಎಸ್ ನ “ನಾನು ಬರೆದ ಕವಿತೆಗಳು ಪ್ರೇಮಕವಿತೆಗಳಲ್ಲ, … Read more

ಜೀವ ವೀಣೆಯ ಭಾವ ಲಹರಿ: ಡಾ. ಹೆಚ್ ಎನ್ ಮಂಜುರಾಜ್

ಹಿಂದೆ ಆಹಾರವೇ ಔಷಧವಾಗಿತ್ತು; ಈಗ ಔಷಧವೇ ಆಹಾರವಾಗಿದೆ ಎಂಬುದನ್ನು ಬಹಳ ಮಂದಿ ಹೇಳುತ್ತಿರುತ್ತಾರೆ. ಇದು ನಿಜವೇ. ಏಕೆಂದರೆ ಅಡುಗೆ ಮನೆಯು ಕೇವಲ ಆಹಾರ ಬೇಯಿಸುವ ಪಾಕಶಾಲೆಯಾಗಿರಲಿಲ್ಲ. ವೈದ್ಯಶಾಲೆಯೂ ಆಗಿತ್ತು. ನಮ್ಮ ಆಯುರ್ವೇದದ ಬಹಳಷ್ಟು ಮನೆಮದ್ದುಗಳು ರುಚಿಕರ ಆಹಾರವಾಗಿಯೇ ನಮ್ಮನ್ನು ಕಾಪಾಡುತ್ತಿದ್ದವು. ನಮಗೇ ಗೊತ್ತಿಲ್ಲದಂತೆ ಆಯಾ ಕಾಲಮಾನಕ್ಕೆ ತಕ್ಕುದಾಗಿ ಶರೀರಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುತಿದ್ದವು. ನಮ್ಮ ಅಡುಗೆಯಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದ ಕರಿಬೇವು, ನಿಂಬೆ, ಕೊತ್ತಂಬರಿ, ಮೆಣಸು, ಜೀರಿಗೆ, ಇಂಗು, ಸಾಸುವೆ, ಮೆಂತ್ಯ ಮೊದಲಾದ ಪದಾರ್ಥಗಳು ಏಕಕಾಲಕ್ಕೆ ಆಹಾರಕ್ಕೆ … Read more

ಗೌರೀ ಹುಣ್ಣಿವೆ: ಡಾ. ವೃಂದಾ ಸಂಗಮ್

ಬಾಲ್ಯದೊಳಗಿನ ಸುಂದರ ನೆನೆಪುಗಳನ್ನು ಹೆಕ್ಕಿ, ನಕ್ಕು ನಲಿಯದ ಜನರೇ ಇಲ್ಲ ಅಥವಾ ಅಂತಹ ಬಾಲ್ಯದ ಅನುಭವದ ಶ್ರೀಮಂತಿಕೆ ಇಲ್ಲದ ವ್ಯಕ್ತಿ ಬದುಕು ಪೂರ್ಣವಾಗಿರುವುದಿಲ್ಲ ಎಂದೇ ಹೇಳಬೇಕು. ಬಾಲ್ಯದಲ್ಲಿನ ಯಾವುದೋ ಒಂದು ಚಿಕ್ಕ ಚಿತ್ರವೂ ನಮಗೆ ರವಿವರ್ಮನ ಚಿತ್ರಕ್ಕಿಂತಲೂ ಹೆಚ್ಚು ಬೆಲೆಯುಳ್ಳದ್ದಾಗಿರುತ್ತಿತ್ತು. ಯಾರೋ ಹಾಡಿದ ಒಂದು ಹಾಡನ್ನು ಮೂರು ನಾಲ್ಕು ಬಾರಿ ಹಾಡಿ, ಕಲಿತು ಬಿಡುತ್ತಿದ್ದ ದಿನಗಳು. ಯಾವುದೊಂದು ನಾಟಕ, ಹಾಡು, ಡ್ಯಾನ್ಸು ಏನೇ ನೋಡಿದರೂ, ಅದನ್ನು ಕಲಿತು ಬಿಡುತ್ತಿದ್ದೆವು. ಅದರ ಅನುಕರಣೆಯಲ್ಲಿಯೂ ನಮ್ಮದೊಂದು ಅನುಭವದ ಸ್ವಂತಿಕೆಯನ್ನು ಸೇರಿಸುತ್ತಿದ್ದ … Read more