ಸಖಿ-2050: ಶ್ರೀಪ್ರಸಾದ್

ಬೆಳಗ್ಗೆ3 ಕ್ಕೆ ಎದ್ದೆ. ನಿದ್ದೆ ಬಂದಿಲ್ಲ ಅಂತೇನು ಅಲ್ಲ . ಆದ್ರೆ ನಿದ್ದೆ ಮಾಡೋಕೆ ಆಗ್ತಾ ಇಲ್ಲ. ಕೈಯ್ಯಲ್ಲಿ ಕಟ್ಟಿರೋ ಫಿಟ್ನೆಸ್ ಬ್ಯಾಂಡ್ ಮಾತ್ರ ಒಂದೇ ಸಮನೆ ವೈಬ್ರೇಟ್ ಆಗ್ತಾ ಇದೆ. ಎದ್ದು ನೋಡಿದ್ರೆ ಮೈ ತುಂಬಾನೆ ಬಿಸಿ ಇದೆ. ಮೊಬೈಲ್ ಚೆಕ್ ಮಾಡಿದ್ರೆ ಆಗಲೇ ಅಲರ್ಟ್ ಬಂದಿದೆ …. “ಹೈ ಬಾಡಿ ಟೆಂಪರೇಚರ್” ಅಂತ. ಅದು ಆಗಲೇ ಫ್ಯಾಮಿಲಿ ಡಾಕ್ಟರ್ ರೋಬೋಗೆ ಹೈ ಫೀವರ್ ಅಂತ ಮೆಸೇಜ್ ಕಳಿಸಿದೆ. ಆ ಕಡೆಯಿಂದ ” ಟೇಕ್ ಡೊಲೊ-650” … Read more

ನಮ್ಮೂರಾಗಿನ ನವೆಂಬರ – ಒಂದು: ಡಾ.ವೃಂದಾ ಸಂಗಮ್

ನಮ್ಮೂರಂದರ ಅದು ನಮ್ಮೂರು ಮಾತ್ರ ಅಲ್ಲ, ನಿಮ್ಮೂರೂ ಆಗಿರಬಹುದಾದಂತಹ ಒಂದು ಸಾಮಾನ್ಯ ಹಳ್ಳಿ, ವರದಾ ನದಿಯ ದಡದ ಮ್ಯಾಲಿರೋ ಒಂದು ಚಿಕ್ಕ ಊರು. ನಾವೆಲ್ಲಾ ಚಿಕ್ಕವರಿದ್ದಾಗ, ನಿಮ್ಮೂರಲ್ಲಿನ ವಿಶೇಷತೆ ಹೇಳರೀ ಅಂದರೆ, ನಮ್ಮೂರಿಗೆ ದಿನಕ್ಕೆ ಒಂದು ಬಸ್ಸು ಬರತದ ಅಂತಿದ್ವಿ, ಅದು ಸ್ವರ್ಗ ಲೋಕದಿಂದ ಬಂದ ಪುಷ್ಪಕ ವಿಮಾನಕ್ಕೂ ವಿಶೇಷದ್ದು, ಅದು ಗರ್ಭಿಣಿ ಸ್ತ್ರೀಯಂತೆ ಸದಾ ಹೊಟ್ಟೆ ಊದಿಸಿಕೊಂಡಿರುತ್ತಿತ್ತು, ಅಲ್ಲದೇ, ಇನ್ನು ಯಾರೂ ಹತ್ತಲಿಕ್ಕೆ ಸಾಧ್ಯವಿಲ್ಲ ಅನಿಸುವಷ್ಟು ಜನರನ್ನ ತನ್ನ ಉದರದೊಳಗ ತುಂಬಿಕೊಂಡು ಪರಮಾತ್ಮನಂಗ ನಮಗ ಕಾಣತಿತ್ತು, … Read more

“ಎಲಿಜಿಬಲ್ ಬ್ಯಾಚುಲರ್ “: ರೂಪ ಮಂಜುನಾಥ, ಹೊಳೆನರಸೀಪುರ.

ಕಸದಿಂದ ರಸ ಮಾಡುವ ಕುಶಲತೆಯಿಂದ ತನ್ನ ಬೆವರಿನ ಮಣ್ಣಿನಿಂದ ಸುಂದರ ಬಾಲನನ್ನು ತಿದ್ದಿತೀಡಿದ ಲೋಕದ ಮೊತ್ತಮೊದಲ ಕ್ರಿಯೆಟಿವ್ ಅಂಡ್ ಇನ್ನೋವೇಟಿವ್ ಹೆಣ್ಣು ಜಗನ್ಮಾತೆ ಪಾರ್ವತಿಯಾದರೆ, ಏನೋ ಅಚಾತುರ್ಯದಿಂದ, ತನ್ನಿಂದಲೇ ತರಿದು ಹೋದ ಪುತ್ರನ ಮುಂಡಕ್ಕೆ, ಆನೆಯ ರುಂಡವನ್ನು ಸೇರಿಸಿದ ಮೊತ್ತಮೊದಲ ಟ್ರಾಸ್ಪ್ಲಾಂಟ್ ಸರ್ಜನ್ ನಮ್ಮ ಡಾ॥ಶಿವಪ್ಪನವರು!ಇಂಥ ಅಸಾಧ್ಯರ ಪುತ್ರನಾದ ಮೇಲೆ ನಮ್ಮ ಕರಿವದನ, ವಿನಾಯಕ ಸಾಧಾರಣವಾದ ಹೀರೋ ಆಗಲು ಸಾಧ್ಯವೇ? ಹ್ಯೂಮರಸ್, ಕ್ಲೆವರ್, ಜೋವಿಯಲ್, ಡಿಪ್ಲೊಮೆಟಿಕ್, ಸ್ಮಾರ್ಟ್, ವೈಸ್, ಒಟ್ಟಿನಲ್ಲಿ ಟೋಟಲೀ ಎಲ್ಲ ವಿಚಾರದಲ್ಲಿಯೂ ಜೀನಿಯಸ್ ಗುಣಗಳಿಂದ … Read more

“ರೋಬೊಟ್ ರಗಳೆ”: ಅರವಿಂದ. ಜಿ. ಜೋಷಿ.

ಅಂದು ಮೂವತ್ತೊಂದನೇಯ ತಾರೀಖು, ಎಂದರೆ ಆ ಮಾಹೆಯ ಕೊನೆಯ ದಿನ. ಎಂದಿನಂತೆ ಮನೆಗೆಲಸ ಪೂರೈಸಿ ಹೊರಟು ನಿಂತ ನಿಂಗಿಯನ್ನು ಕಂಡ ಪಮ್ಮೀ “ಏಯ್. . . ನಿಂಗೀ. . . ನಾಳೆಯಿಂದ ನೀ ಕೆಲಸಕ್ಕೆ ಬರೋದು ಬೇಡ”ಎಂದಾಗ ಶಾಕ್ ಹೊಡೆಸಿಕೊಂಡವಳ ತರಹ ನಿಂತ ನಿಂಗಿ-“ಯಾಕ್ರವ್ವಾ. . ಬೇರೆ ಕಡೆ ಎಲ್ಲಾದ್ರೂ ಹೋಗ್ತಿದ್ದೀರಾ?, ನನ್ನ ಕಡೆಯಿಂದ ಏನಾದ್ರೂ ತೆಪ್ಪ ಆಗೈತಾ? ನಾನು ಉಸಾರಾಗೇಅವ್ನೀ. . , ಎರಡೂ ಡೋಸ್ ವ್ಯಾಕ್ಸಿನೇಷನ್ ಕೂಡ ಹಾಕ್ಸೊಂಡಿದ್ದೀನಿ. . ಮತ್ಯಾಕ್ರವ್ವಾ. ?” ಹೀಗೆ … Read more

ಅರೆಹೊಟ್ಟೆಯಲ್ಲಿ ಬಳಲಿದ ಸಮಾರಂಭದ ಅತಿಥಿ: ಮಹಾಬಲ ಕೆ ಎನ್‌

ಸ್ನೇಹದ ದಾಕ್ಷಿಣ್ಯಕ್ಕೆ ಸಿಕ್ಕಿಬಿದ್ದು ಆಗಾಗ್ಗೆ(ವರ್ಷಕ್ಕೊಮ್ಮೆ ಅನ್ನಿ. ಮೈಸೂರಿನಲ್ಲಿ ದಿನಪೂರ್ತಿ ನಡೆಯುವ ಕಾರ್ಯಕ್ರಮವೊಂದಕ್ಕೆ ಬಹುತೇಕ ವೇದಿಕೆಯಲ್ಲಿ ಕುಳಿತ (ಮೂಕ)ಪ್ರೇಕ್ಷಕನಾಗಿ ಭಾಗವಹಿಸುವ ದೌರ್ಭಾಗ್ಯ ನನ್ನ ಪಾಲಿಗೆ ಬಿಟ್ಟೆನೆಂದರೂ ಬಿಡದೀ ಮಾಯೆ ಎನ್ನುವಂತೆ ಮೆಟ್ಟಿಕೊಂಡು ಬಂದಿದೆ. ಹತ್ತು ಗಂಟೆಗೆ ಆರಂಭವಾಗಿ ಒಮ್ಮೊಮ್ಮೆ ಸಾಯಂಕಾಲ ಏಳರವರೆಗೆ ನಡೆಯುವ ಸಾಹಿತ್ಯಕ, ಸಾಮಾಜಿಕ, ಸಾಸ್ಕೃತಿಕ ಮತ್ತು ವೈದ್ಯಕೀಯ(ಏಕೆಂದರೆ ನೇತ್ರ ವಾಗ್ದಾನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿರುತ್ತಾರೆ) ಕಲಾಪ ಹೊಂದಿರುವ ವ್ಯಾಪಕ ಯೋಜನೆಯ ಕಾರ್ಯಕ್ರಮವಿದು. ಬೆಳಿಗ್ಗೆ ಸಭಾಕಲಾಪ ಉದ್ಘಾಟನೆ. ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಗಣ್ಯರ ಕೈಯಿಂದ ಕೈಗೆ ರಿಲೇ ರೇಸಿನ … Read more

ಚಿಂಗ್-ಚಾಂಗ್-ಚೂ: ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಮನುಷ್ಯ ಹುಟ್ಟಿನಿಂದಲೇ ಹಲವಾರು ನಾಮಧೇಯಗಳಿಂದ ಕರೆಯಲ್ಪಡುತ್ತಾನೆ, ಮಗುವಾಗಿದ್ದಾಗ ಒಂದು ತರಹದ ಪ್ರೀತಿಯ ಹೆಸರುಗಳು ಮುಗ್ಧ ನಗುವಿಗೆ ಅಲಂಕಾರದಂತೆ ಕಂಡರೂ ಕೆಲವು ಸಲ ಅದೇ ಹೆಸರುಗಳು ಬೆಳೆದು ದೊಡ್ಡವರಾಗಿ ಮುದುಕರಾಗುವವರೆಗೂ ಅವರ ಬೆನ್ನಿಗೆ ಹಾಗೇ ಅಂಟಿಕೊಂಡೇ ಇರುತ್ತವೆ, ಕೆಲವು ಸಲ ಸತ್ತ ನಂತರವೂ ಆತನ,/ಆಕೆಯ ಮನೆಯವರನ್ನು ಗುರುತಿಸುವುದೂ ಸಹ ಅದೇ ಅಡ್ಡಹೆಸರಿನಿಂದಲೇ, ಈ ಅಡ್ಡ ಹೆಸರಿನ ಪರಿಣಾಮ ಎಷ್ಡು ಪ್ರಭಾವಯುತವಾಗಿರುತ್ತದೆಂದರೆ ಅವರ ಅಸಲಿ ಹೆಸರೇ ಮರೆತು ಹೋಗುವಷ್ಟು, ನಮ್ಮ ಸಂಬಂದಿಕರಲ್ಲೇ ಒಬ್ಬರಿದ್ದರು ಅವರು ಸದಾ ಎಲೆ ಅಡಕೆ ಜಗಿಯುತ್ತಾ … Read more

ರೈತ ಫಾರ್ ಸರಕಾರ: ಸೂರಿ ಹಾರ್ದಳ್ಳಿ

ಒಂದು ಅಶುಭ ದಿನದಂದು, ಕಾಶೀಪತಿ ಕೊರೆಯಲು ಶುರುಮಾಡಿದನು. ‘ನಮ್ಮದು ರೈತರ ಫಾರ್ ಸರಕಾರ,’ ರಾಜಕಾರಣಿಗಳಿಗೆ ಮತ್ತು ಕವಿಗಳಿಗೆ ಇಹಲೋಕದಲ್ಲಿ ಬೇಕಿರುವುದು ‘ಕೇಳುವ ಕಿವಿಗಳು’ ಮತ್ತು ಆಡಿಸಲು ಒಳಗೆ ಟೊಳ್ಳಿರುವ ತಲೆಗಳು. ನಡುನಡುವೆ ಚಪ್ಪಾಳೆಯ ದನಿಗಳು. ಇವು ಮೂರಿರದ್ದರೆ, ದೇವರ ದಯೆ, ಒಡೆಯದ, ಮುರಿಯದ, ಚರ್ಮದ ಬಾಯಿ ದಣಿಯುವುದಿಲ್ಲ. ಕಾಶೀಪತಿ ಹೇಳಿದ್ದನ್ನು ನಾನು ತಿದ್ದಿದೆ, ‘ಅದರು ಫಾರ್ ಅಲ್ಲ, ಪರ.’ ‘ಇಂಗ್ಲಿಷಿನವರಿಗೂ ತಿಳಿಯಲಿ ಎಂದು ಹಾಗೆಂದೆ. ಆ್ಯಂಡು, ನಾನು ಹಳ್ಳಿಯವರ ಮಕ್ಕಳೂ ಗರ್ಭದಲ್ಲಿರುವಾಗಲೇ ಇಂಗ್ಲಿಷ್ ಕಲಿಯಬೇಕು ಎಂದು ವಾದಿಸುವವನು. … Read more

ಮನೆ ಬಾಡಿಗೆಗಿದೆ!: ಎಸ್.ಜಿ.ಶಿವಶಂಕರ್

ಹೌದು, ನನ್ನ ಮನೆಯ ಮೊದಲ ಮಹಡಿ ಮನೆ ಬಾಡಿಗೆಗಿದೆ! ಫ್ಯಾಕ್ಟ್ರಿ ಕೆಲಸ ಮಾಡಿದವರಿಗೆ ನನ್ನ ಕಾಲದಲ್ಲಿ ಪೆನ್ಷನ್ ಇರಲಿಲ್ಲ. ಅದಕ್ಕೇ ಪಿಎಫ್ ಸಾಲ ತೆಗೆದು ಬಾಡಿಗೇಗೇಂತ ಇಪ್ಪತ್ತು ವರ್ಷದ ಹಿಂದೆ ಮಹಡಿ ಮೇಲೊಂದು ಮನೆ ಕಟ್ಟಿಸಿದ್ದೆ. ಕೆಳಗೆ ನಾನು ವಾಸ, ಮೇಲಿನದು ಬಾಡಿಗೆಗೇಂತ ಯೋಜನೆ ಮಾಡಿ ಕಾರ್ಯ ಅರೂಪಕ್ಕಿಳಿಸಿದ್ದೆ. ಕಳೆದ ಇಪ್ಪತ್ತು ವರ್ಷದಲ್ಲಿ ಐದಾರು ಜನ ಬಾಡಿಗೆದಾರರು ನೆಮ್ಮದಿಯಿಂದ ಇದ್ದು ಹೋದರು. ಆದರೆ ಈಗ ಮಾತ್ರ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪ್ರತೀ ರೂಮಿಗೂ ಅಟ್ಯಾಚ್ಡ್ ಬಾತ್ರೂಮು ಕೇಳುತ್ತಿದ್ದರು! … Read more

ಕನ್ನಡ v/s ಇಂಗ್ಲಿಷ್ : ಸೂರಿ ಹಾರ್ದಳ್ಳಿ

ನಮ್ಮ ಕಂಪನಿಯಲ್ಲಿ ಕನ್ನಡೇತರರಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅಕ್ಷರಗಳ ಮಾಲೆ ಕೊಟ್ಟಾಗ ‘ಓಹ್ ಮೈ ಗಾಡ್,’ ಎಂಬೊಂದು ಉದ್ಗಾರ ಹಿಂದಿನಿಂದ ಬಂತು. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳು ಸರಿಯೆಂದ ನಮ್ಮವರು ಕನ್ನಡದಲ್ಲಿ ಇಷ್ಟೊಂದು ಅಕ್ಷರಗಳೇ, ಕಲಿಯಲು ಕಷ್ಟ ಎಂದು ಮೂಗು ಮುರಿಯುತ್ತಾರೆ. ಆದರೆ ಚೀನೀ ಭಾಷೆಯಲ್ಲಿ ಸುಮಾರು 43 ಸಾವಿರ ಅಕ್ಷರಗಳಿವೆ ಎಂದರೆ ನಂಬುವಿರಾ? ನಂಬಲೇಬೇಕು. ಆದರೆ ಒಬ್ಬ ವ್ಯಕ್ತಿಯು ಮಾತನಾಡಲು ಮೂರನೆಯ ಒಂದು ಭಾಗ ಮಾತ್ರ ಕಲಿತರೆ ಸಾಕಂತೆ. ಆದರ ಇನ್ನೊಂದು ದುರಂತ ಎಂದರೆ ಅದು ಧ್ವನಿ … Read more

ಯಮಲೋಕ ಭ್ರಷ್ಟಾಚಾರ ಮುಕ್ತವಾಗಲಿ: ಪಿ.ಕೆ. ಜೈನ್ ಚಪ್ಪರಿಕೆ

ಮರುಜನ್ಮದಲ್ಲಿ ನಾವೇನಾಗ್ತಿವಿ ಅನ್ನೋದು ನಾವು ಮಾಡಿದ ಪಾಪ ಪುಣ್ಯದ ಫಲಕ್ಕೆ ನೇರ ಸಂಬಂಧವಿದೆ ಅಂತಾ ಹೇಳ್ತೀವಿ. ಅದನ್ನೇ ಕರ್ಮಸಿದ್ಧಾಂತ ಅಂತಲೂ ಕರೀತಾರೆ. ಮುಂದಿನ ಜನ್ಮ ಮನುಷ್ಯ ಜನ್ಮವೇ ಆಗಬೇಕು ಅಂತಾದರೆ ಸಿಕ್ಕಾಪಟ್ಟೆ ಪುಣ್ಯ ಸಂಪಾದಿಸಬೇಕು ಅಂತಾ ಹೇಳ್ತಾ ಇರೋದನ್ನು ಕೇಳಿದ್ದೀವಿ. ಹಾಗೆಯೇ ಮುಂದಿನ ಏಳು ಜನ್ಮಗಳು ಮನುಷ್ಯನಲ್ಲದ ಜನ್ಮಗಳಾಗಿರ್ತಾವೆ ಅಂತಾನೂ ಕೇಳಿದ್ದೀವಿ. ಆದ್ರೆ ಇವೆಲ್ಲದರ ನಡುವೆ ಒಂದು ಕನ್ಫ್ಯೂಸನ್ ಮತ್ತು ಉತ್ತರ ಸಿಗದ ಪ್ರಶ್ನೆ ಈ ಕರೊನಾ ವೈರಸ್ ಬಂದಾಗ ಶುರು ಆಯ್ತು…ಎನ್ ಗೊತ್ತಾ…!??? ಪ್ರಸ್ತುತ ಪ್ರಪಂಚದಲ್ಲಿ … Read more

ಮಳೆಗಾಲ ನಮ್ಮದೂ ಒಂದು ಕತೆ: ಭಾರ್ಗವಿ ಜೋಶಿ

ಅಂದೊಂದು ಸುಂದರ ಸಂಜೆ.. ಸೂರ್ಯನು ಭಾರತದ ಸೌಂದರ್ಯವನ್ನು ಮಿಂಚಿಸಿ ಈಗ ಬೇರೆ ದೇಶಗಳಲ್ಲಿ ಕಣ್ಣುತೆರೆಸುವ ಸರದಿ.. ಸೂರ್ಯ ನಿಧಾನವಾಗಿ ಹೆಜ್ಜೆಯಿಟ್ಟು ದಾಟುತ್ತಿದ್ದ.. ಚಂದ್ರನು ನಾನಿಲ್ಲೇ ಇದ್ದೀನಿ ಅಂತಾ ಮೋಡದ ಮರೆಯಿಂದ ಇಣುಕಿ ಇಣುಕಿ ನೋಡುತ್ತಿದ್ದ. ಅವನ ಬರುವಿಕೆಯನ್ನು ತಡೆಯಲು ಸಫಲವಾದ ಮೋಡಗಳು ಈಗ ನಮ್ಮ ಸಮಯ ಎಂದು ಮಳೆಸುರಿಸಲು ಸಿದ್ಧವಾಗಿದ್ದವು.. ಸಂಧ್ಯಾಕಾಲ, ತಂಪಾದಗಾಳಿ, ಮಸಕು ಬೆಳಕು, ತುಂತುರು ಮಳೆ… ಮನೆಯ ಅಟ್ಟದಮೇಲೆ ಈ ಅಂದವನ್ನು ಅನುಭವಿಸುತ್ತ ನಿಂತಿದ್ದಳು ನಮ್ಮ ಅರುಂದತಿ… (ಭಾಳ್ ದಿವಸದ ಮೇಲೆ ಕರ್ಕೊಂಡು ಬಂದೆ … Read more

ಜಸ್ಟ್ ಮಿಸ್ಸೋ…………: ಗುಂಡುರಾವ್ ದೇಸಾಯಿ

ಇಡೀ ಭೂಮಂಡಲದಲ್ಲಿ ಅತಿ ಪ್ರಾಮಾಣಿಕನಾಗಿ, ಅನ್ಯಾಯ, ಹಿಂಸೆ, ಅಸೂಯೆ, ದ್ವೇಷ, ಮುನಿಸು, ಹೊಗಳಿಕೆ, ತೆಗಳಿಕೆ ಮೊದಲಾದ ರಾಗಗಳತ್ತ ಮುಖವೂ ಮಾಡದೆ ಮರಣವನ್ನಪ್ಪಿದ ಪದ್ದು ಯಮನ ಆಸ್ಥಾನಕ್ಕೆ ಬಂದ. ನಕ್ಕೋತ ಹರಿ ಧ್ಯಾನ ಮಾಡುತ್ತ ಬಂದದ್ದನ್ನು ನೋಡಿ ಯಮನಿಗೆ ಗಾಭರಿ ಮತ್ತು ಆಶ್ಚರ್ಯ ಎರಡು ಆತು. ನನ್ನತ್ರ ಬರೊಷ್ಟಿಗೆ ಕಾಲಿಗೆ ಬಿದ್ದು ‘ನನ್ನನ್ನ ದಯವಿಟ್ಟು ಸ್ವರ್ಗ ಕಳಿಸು ಹಾಂಗೆ ಹಿಂಗೆ ನಿನಗ ಅದೂ ಕೊಡುತಿ ಇದು ಕೊಡಸ್ತಿನಿ, ಭೂಲೋಕಕ್ಕೆ ಹೋದ್ರೆ ನನ್ನ ಬಂಗ್ಲೇಲಿ ಇಳಿಯೊಕೆ ವ್ಯವಸ್ಥ ಮಾಡಸ್ತಿನಿ’ ಅನ್ನೊರೆ … Read more

ಅಮಾಯಕನೊಬ್ಬನ ಕತೆ: ಸೂರಿ ಹಾರ್ದಳ್ಳಿ

ನಮ್ಮ ಗುಂಡ ಬರೀ ಅಮಾಯಕನಲ್ಲ, ಅಮಾಯಕರಲ್ಲಿ ಅಮಾಯಕ ಎಂಬುದರಲ್ಲಿ ಖಡಾಖಂಡಿತ ನಂಬಿಕೆಯುಳ್ಳವನು ನಾನು. ಇದಕ್ಕೆ ಕಾರಣಗಳಿಲ್ಲದಿಲ್ಲ. ಭಾರತದ ಹವಾಮಾನ ಇಲಾಖೆಯವರು ‘ಇನ್ನು ಮೂರು ದಿನ ಮಳೆ ಬರುತ್ತದೆ’ ಎಂದು ಹೇಳಿದರೆ ಮೂರೂ ದಿವಸ ತನ್ನ ಜೊತೆಯಲ್ಲಿ ತನ್ನ ಕೊಡೆಯನ್ನು ಹೊತ್ತೊಯ್ಯುವವನೇ ಅವನು. ‘ಇಲ್ಲವೋ ಮಂಕು ಮುಂಡೇದೇ, ನಿನಗೆಲ್ಲೋ ಭ್ರಮೆ. ಬರುತ್ತದೆ ಎಂದರೆ ಬರೋಲ್ಲ. ಮಳೆ ದೇವರಾದ ವರುಣನಿಗೆ ಈ ಇಲಾಖೆಯವರನ್ನು ಕಂಡರೆ ಕೋಪ. ಹಾಗಾಗಿ ಸದಾ ತದ್ವಿರುದ್ಧವಾಗಿರುತ್ತದೆ, ಇದು ಸತ್ಯಸ್ಯ ಸತ್ಯ,’ ಎಂದು ಬಿಡಿಸಿ ಬಿಡಿಸಿ ಹೇಳಿದರೂ … Read more

ಕನ್ನಡದ ಗಗನಸಖಿ: ಸೂರಿ ಹಾರ್ದಳ್ಳಿ

ಸಂದರ್ಶಕರು ಮಾದೇವಿಯನ್ನು ಕೇಳಿದರು: ‘ನೀವು ಎಂದಿಗಾದರೂ ವಿಮಾನದಲ್ಲಿ ಪ್ರಯಾಣಿಸಿದ್ದೀರಾ?’ ‘ಕ್ವಚಿತ್ತಾಗಿ.’ ‘ವಿಮಾನಗಳಲ್ಲಿ ಏರ್ ಹೋಸ್ಟೆಸ್‍ಗಳು ಪ್ರಯಾಣಿಕರಿಗೆ ಕೆಲವು ಸಲಹೆಗಳನ್ನು ಕೊಡುವುದನ್ನು ನೀವು ಕೇಳಿದ್ದೀರಿ. ಅದನ್ನು ಹೇಳಿ.’ ‘ಗೋ ಔಟ್ ವಿಮಾನದಲ್ಲಿ ಪ್ರಯಾಣಿಸುತ್ತಿರುವ ನಿಮಗೆಲ್ಲಾ ಆದರದ ಸ್ವಾಗತ. ಸ್ವಾಗತ ಎಂದರೆಷ್ಟು ಬಿಟ್ಟರೆಷ್ಟು, ಬಂದು ಅಂಡೂರಿ ಕುಳಿತುಬಿಟ್ಟಿದ್ದಿರಲ್ಲ, ಬೇರೇನೂ ಕ್ಯಾಮೆ ಇರದವರ ಹಾಗೆ.’ ‘ಏನೆಂದಿರಿ?’ ‘ಏನೂ ಇಲ್ಲ. ನಮ್ಮ ವಿಮಾನದಲ್ಲಿ ಮುಂದೆ ಎರಡು ಬಾಗಿಲುಗಳಿವೆ, ಹಿಂದೆ, ತಿರುಗಿಯೇನೂ ನೋಡಬೇಕಾಗಿಲ್ಲ. ಅಲ್ಲೇನೂ ಕರಡಿ ಕುಣಿಯುತ್ತಿಲ್ಲ, ಅಲ್ಲಿ ಎರಡು ನಿರ್ಗಮನ ದ್ವಾರಗಳಿವೆ. ನಡುವೆ … Read more

ಅಯ್ಯೋ! ಸಾಲಾ?: ಗುಂಡುರಾವ್ ದೇಸಾಯಿ

    ಪದ್ದು ಮುಂಜಾನೆ ಮಂಜಾನೆ ಹಾಸಿಗೆಲಿ ಇದ್ದಾಗಲೆ ಮನ್ಯಾಗ ಒಕ್ಕರಿಸಿಕೊಂಡ, ‘ಏನಾತೋ ಪದ್ದು ಹಿಂಗ್ಯಾಕ ಗಾಬರಿ ಆಗಿದಿ’ ಅಂದೆ. ‘ಇಲ್ಲ ದೊಸ್ತ್ಯಾ ಸಾಲಗಾರರ ಕಾಟ ಬಾಳ ಆಗ್ಯಾದ. ಮಾರ್ಯದೆಯಿಂದ ಬದುಕೊ ಮನುಷ್ಯ. ಸಾಲ ಸಕಾಲಕ್ಕ ತೀರಿಸುವುದಾಗವಲ್ತು ಮೂರು ತಿಂಗಳ ಟೈಮು ಸಿಕ್ರ ಎಲ್ಲಾನೂ ಅಡ್ಜೆಸ್ಟ ಮಾಡಬಹುದು. ಇವರು ಸಿಕ್ಕ-ಸಿಕ್ಕಲ್ಲಿ ವಾಮಾಗೋಚರವಾಗಿ ಬಯ್ಯತಾರ ಏನು ಮಾಡಲಿ’ ಎಂದು ತನ್ನ ಅಳಲು ತೋಡಿಕೊಂಡ.  ‘ಅದಕ್ಯಾಕ ಚಿಂತಿ ಮಾಡತಿ ಒಂದು ವ್ರತ ಅದ ಮಾಡ್ತಿ ಏನು?’  ‘ವ್ರತಾನ! ವ್ರತದಿಂದ ಸಾಲ … Read more

ನಗೆ ಹನಿ: ರಾಮಪ್ರಸಾದ.ಬಿ.

ಸಂಗೀತ ಮೇಷ್ಟ್ರು:ಏನಮ್ಮ ರಾಗಿಣಿ! ಸ…ರಿ…ಅನ್ನು…. ರಾಗಿಣಿ:ಸಾರಿ ಅನ್ನೋಂತಹ ತಪ್ಪು ನಾನೇನು ಮಾಡಿದ್ದೇನೆ ಗುರುಗಳೇ?! **** ರಮ್ಯ:ಡ್ಯಾಡಿ,ನನಗೆ ಟೀಚರ್ ಶಿಕ್ಷೆ ಕೊಟ್ರು … ತಂದೆ:ಯಾಕೋ ಪುಟ್ಟ ಅಂತಾ ತಪ್ಪು ನೀನೇನು ಮಾಡಿದೆ?! ರಮ್ಯ:ನಮ್ ಟೀಚರ್ ನನ್ಹತ್ರ ಸ್ಕೇಲ್ ತೋರಿಸಿ ಎಲ್ರ ಮುಂದೆ ಹೇಳ್ತಿದ್ರು-"ಈ ಸ್ಕೇಲ್ ತುದಿಗೆ ಒಬ್ಬ ಮೂರ್ಖ ವ್ಯಕ್ತಿ ನಿಂತಿದ್ದಾಳೆ…" ಆಗ ನಾನು ಸ್ಕೇಲ್ ನ ಯಾವ ತುದಿ ಟೀಚರ್ ಅಂತ ಕೇಳಿದೆಯಷ್ಟೇ!" **** ಡಾಕ್ಟರ್:ನೀವೇನು ಭಯಪಡಬೇಡಿ!ಆಪರೇಷನ್ ಆದಕೂಡಲೇ ನೀವು ಹಾಯಾಗಿ ನಿಮ್ಮ ಮನೆಗೆ ನಡೆದುಕೊಂಡೇ ಹೋಗಬಹುದು…. … Read more

ಅಪ್ಪಾ ಬಾಂಬು ……..! (ನಗೆ ಬರಹ): ಗುಂಡುರಾವ್ ದೇಸಾಯಿ

‘ಅಪ್ಪಾ… ಬಾಂಬು ಅಪ್ಪಾ, ಬಾಂಬು’ ಅಂತ ಮಗ ಅಳುತ್ತಾ ಎಬ್ಬಿಸಿದಾಗ ಗರಬಡಿದವನಂತೆ ‘ಹ್ಞಾ! ಎಲ್ಲಿ…ಎಲಿ?್ಲ’ ಅಂತ ತಡಕಾಡಕತಿದೆ. ಹಾಸಿಗೆಯಲ್ಲ ಅಸ್ತವ್ಯಸ್ತವಾಗಿ ಲುಂಗಿ ಇಲ್ಲದೆ ಹಾಗೆ ಓಡಾಡುತ್ತಿದ್ದನ್ನು ನೋಡಿ ಎಲ್ಲರೂ ಏನಾಯ್ತು ಅಂತ ಓಡಿ ಬಂದ್ರು ‘ಬಾಂಬು!ಬಾಂಬೂ…..! ಎಲ್ಲಿ ಬಾಂಬು?’ ಅಂದೆ ‘ಅಯ್ಯೋ ಸವಾರಾತಿವರಗೂ  ಸುಡಗಾಡೂ ಏನೇನೊ ನೋಡತಿರಿ, ಹಿಂಗ ಎದ್ದು ಕಣವರಸ್ತಿರಿ’ ಎಂದ್ಲು ಈಕಿ ಅಷ್ಟರಾಗ ಮಗ ‘ಅಪ್ಪಾ ಬಾಂಬು ಬೇಕು ಅಪ್ಪಾ ಬಾಂಬು ಬೇಕು’ ಎಂದು ಅಳಕೊಂತ ಕುತಿದ್ದ. ನನಗ ಹುಚ್ಚು ಮಬ್ಬು ಕೂಡೆ ಹಿಡಿತು. … Read more

ಕಿಟ್ಟಿ ಪಾರ್ಟಿ: ಮೂರ್ತಿ ಎ ಎನ್ ಕೆ

ರೀ. ಮನೇಲಿ ಸ್ವಲ್ಪವೂ ಹಾಲಿಲ್ಲ. ನನ್ನ ಸ್ನೇಹಿತೆ ಬರ್ತಾ ಇದ್ದಾಳೆ. ಒಂಚೂರು ಕಾಫಿ ಮಾಡಿಕೊಡೋಕಾದ್ರು ಬೇಕಲ್ಲ  ಹೋಗಿ ತನ್ನಿ ಅಂದ್ಲು. ನನ್ನ ಅರ್ಧಾಂಗಿ. ಮಟ ಮಟ ಮಧ್ಯಾನ್ಹ. ಬಿಸಿಲು ಬೇರೆ ಜೋರಿದೆ. ಟಿ. ವಿ. ಯಲ್ಲಿ ಸೊಗಸಾದ ಕಾರ್ಯಕ್ರಮ  ಬರ್ತಿದೆ. ಇವೆಲ್ಲದರ ಜೊತೆ ಸ್ವಲ್ಪವೇನು ಹೆಚ್ಚೇ ಸೊಂಬೇರಿತನ ಆವರಿಸಿದೆ. ಈಗ ಆಗಲ್ಲ. ಆಮೇಲೆ ನೋಡೋಣ. ಅಲ್ಲರೀ. ಅಲ್ಲವೂ ಇಲ್ಲ ಬೆಲ್ಲವೂ ಇಲ್ಲ. ಈಗ ಸುತಾರಾಂ ಆಗಲ್ಲ ಅಷ್ಟೆ ಕಡ್ಡಿ ಮುರಿದಂತೆ ಹೇಳಿ ಬಿಟ್ಟೆ. ಎಡವಿ ಬಿದ್ದರೆ ಶೆಟ್ಟರ … Read more

ಫಟಾಫಟ್ ಅಡಿಗೆ!!: ಎಸ್. ಜಿ. ಶಿವಶಂಕರ್

ಐದು ದಿನಗಳಿಂದ ಫ್ಯಾಕ್ಟ್ರಿಗೆ ಲೇಟಾಗುತ್ತಿತ್ತು. ಇಂದು ಏನಾದರೂ ಸರಿ, ಸರಿಯಾದ ಸಮಯಕ್ಕೆ ಫ್ಯಾಕ್ಟ್ರಿ ತಲುಪಲೇಬೇಕೆಂದು ಹಠದಿಂದ ಹೊರಟಿದ್ದೆ. ಸೈರನ್ನಿಗೆ ಐದು ನಿಮಿಷ ಮುಂಚೆಯೇ ಹಾಜರಿ ಬೆರಳಚ್ಚು ಒತ್ತಿ ಡಿಪಾರ್ಟುಮೆಂಟು ಸೇರಿದೆ. ಇನ್ನೂ ಚುಮುಚುಮು ಕತ್ತಲು! ಮಹಡಿಯಲ್ಲಿದ್ದ ನನ್ನ ಚೇಂಬರಿನಲ್ಲಿ ವಿಸಿಟರ್ಸ್ ಕುರ್ಚಿಯಲ್ಲಿ ಯಾರೋ ಕೂತಿದ್ದರು!! ಇನ್ನೂ ಆಗಷ್ಟೇ ಷಾಪಿಗೆ ಜನ ಬರುತ್ತಿದ್ದರು. ಅಷ್ಟು ಬೆಳಿಗ್ಗೆ ನನ್ನ ಚೇಂಬರಿಗೆ ಯಾವ ವಿಸಿಟರ್ಸೂ ಬರಲು ಸಾಧ್ಯವಿರಲಿಲ್ಲ! ಅಂದರೆ ಅಲ್ಲಿ ವಕ್ಕರಿಸಿರುವವರು ಯಾರು ಎಂದು ಅಚ್ಚರಿಯಾಯಿತು. ಹಾರರ್ ಸಿನಿಮಾಗಳು ನೆನಪಾದವು! ಕಳೆದ … Read more