ಸಾಕಷ್ಟು ಸಿನೆಮಾ ಶುರುವಿನಲ್ಲಿ ಶೀರ್ಷಿಕೆ ತೋರಿಸುವಾಗ ಯಾವುದಾದರೊಂದು ಹಾಡನ್ನು ಹಾಕುತ್ತಾರೆ. ಬಹಳಷ್ಟು ಸಲ ಸಿನಿಮಾದ ಪಾಪ್ಯುಲರ್ ಹಾಡಿರುತ್ತೆ, ಅಥವಾ ಸಿನಿಮಾದಲ್ಲಿ ಎಲ್ಲೂ ಬಳಸಲು ಸಾಧ್ಯವಾಗಿಲ್ಲದ ಹಾಡಿರುತ್ತೆ. ಇದಕ್ಕೆ ಅಪವಾದ ಗಿರೀಶ್ ಕಾರ್ನಾಡ್ ನಿರ್ದೇಶನದ “ಒಂದಾನೊಂದು ಕಾಲದಲ್ಲಿ”. ಚಿತ್ರದ ಆರಂಭದಲ್ಲಿ ಕವಿತಾ ಕೃಷ್ಣಮೂರ್ತಿ ಹಾಡಿರುವ “ಬಿಚ್ಚುಗತ್ತಿಯ ಬಂಟನ ಕಥೆಯ” ಅನ್ನೋ ಹಾಡು ಬರುತ್ತೆ. ಕೇಳಿದ ತಕ್ಷಣ ಹಿಡಿಸಿದ ಹಾಡು ಇದು, ಯಾಕೆ ಇಷ್ಟ ಆಯ್ತು ಗೊತ್ತಾಗಿದ್ದು ಸಿನಿಮಾ ಮುಗಿದ ಮೇಲೆ. ಆ ಹಾಡು ಈ ಚಿತ್ರ ನೋಡಲು ಬೇಕಾದ […]
ವಾಸುಕಿ ಕಾಲಂ
ಬದುಕೆಂಬ ಬಂದೀಖಾನೆಯಲ್ಲಿ…: ವಾಸುಕಿ ರಾಘವನ್
ಆಗಿನ್ನೂ ನನಗೆ ಈ ಪರಿ ಸಿನಿಮಾ ಹುಚ್ಚು ಹತ್ತಿರಲಿಲ್ಲ. ಆಫೀಸ್ ಗೆ ಕ್ಯಾಬ್ ಅಲ್ಲಿ ಹೋಗೋವಾಗ “ಡಂಬ್ ಶರಾಡ್ಸ್” ಆಡ್ತಾ ಇದ್ವಿ. ಸ್ವಲ್ಪ ದಿನದಲ್ಲೇ ಎಕ್ಸ್‌ಪರ್ಟ್ಸ್ ಆಗೋದ್ವಿ ತುಂಬಾ ಜನ, ಸಿನಿಮಾ ಹೆಸರನ್ನ ಸುಲಭವಾಗಿ ಊಹಿಸಿಬಿಡ್ತಿದ್ವಿ. ಆಗ ಕಷ್ಟಕಷ್ಟದ ಹೆಸರುಗಳನ್ನು ಹುಡುಕಿ ಕೊಡೋ ಪರಿಪಾಠ ಶುರು ಆಗಿತ್ತು. ಒಂದು ದಿನ ಗೆಳೆಯ ಪ್ರದೀಪ್ “ಶಾಶ್ಯಾಂಕ್ ರಿಡೆಂಪ್ಶನ್” ಅಂತ ನನ್ನ ಕಿವಿಯಲ್ಲಿ ಉಸುರಿದರು. “ಏನು? ಶಶಾಂಕ್ ರಿಡೆಂಪ್ಶನ್ ಅಂತಾನಾ? ಆ ಥರ ಯಾವ ಫಿಲ್ಮ್ ಇದೆ? ತಮಾಷೆ ಮಾಡ್ತಿಲ್ಲ […]
ಯಾರೂ ನೋಡಿರದ ಎವರ್-ಗ್ರೀನ್ ಕ್ಲಾಸಿಕ್:ವಾಸುಕಿ ರಾಘವನ್
ನಿಮಗೆ ಈ ಚಿತ್ರದ ಎಲ್ಲಾ ಹಾಡುಗಳು ಗೊತ್ತಿರಬಹುದು. ಕೇಳಿದ್ದರೆ ಮರೆತಿರಲಿಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಆದರೂ ನೀವು ಈ ಸಿನಿಮಾ ನೋಡಿರೋ ಸಾಧ್ಯತೆಗಳು ಕಡಿಮೆ. ನಿಮಗೆ ಪರಿಚಯ ಇರೋರಲ್ಲಿ ಕೂಡ ಈ ಚಿತ್ರವನ್ನ ಯಾರೂ ನೋಡಿರಲಾರರು. ಚಾನ್ಸ್ ಸಿಕ್ಕರೆ ಈ ಚಿತ್ರವನ್ನ ನೋಡ್ತೀರಾ ಅಂದ್ರೆ ಇಲ್ಲಪ್ಪಾ ಅಂತೀರ! ಇದ್ಯಾವ ಚಿತ್ರನಪ್ಪಾ ಅಂತ ತಲೆ ಕೆರ್ಕೊತಾ ಇದೀರಾ? ತಡೀರಿ ಆ ಚಿತ್ರದ ಒಂದು ಹಾಡು ಇಲ್ಲಿದೆ: ಕಣ್ಣು ಕಡಲ ಹೊನ್ನು ನಸು ನಾಚಿದಾಗ ನೀನು ಸೌಂದರ್ಯ ನಿನ್ನ ನೋಡಿ […]
ಈ ತು ಮಾಮ ತಂಬ್ಯೆನ್:ವಾಸುಕಿ ರಾಘವನ್
ನೀವು ತುಂಬಾ ಮಡಿವಂತರಾ? ನಿಮ್ಮ ಭಾವನೆಗಳು ಸುಲಭವಾಗಿ ಹರ್ಟ್ ಆಗ್ತವಾ? ನಿಮಗೆ "ನೈತಿಕತೆ" ಕನ್ನಡಕ ಬಿಚ್ಚಿಟ್ಟು ಪ್ರಪಂಚವನ್ನ ನೋಡೋ ಅಭ್ಯಾಸಾನೇ ಇಲ್ವಾ? ಹಂಗಿದ್ರೆ ಈ ಚಿತ್ರ ನಿಮಗಲ್ಲ ಬಿಡಿ. ಈ ಆರ್ಟಿಕಲ್ ಕೂಡ ನಿಮಗೆ ಸರಿಹೋಗಲ್ಲ! ನೀವು ಈ ಗುಂಪಿಗೆ ಸೇರಿಲ್ವಾ? ಹಾಗಾದ್ರೆ ಇನ್ನೇನ್ ಯೋಚ್ನೆ ಇಲ್ಲ, ಬನ್ನಿ ಈ ಫಿಲ್ಮ್ ಬಗ್ಗೆ ಮಾತಾಡೋಣ! ಆಲ್ಫೊನ್ಸೋ ಕ್ವಾರೋನ್ ನಿರ್ದೇಶನದ "ಈ ತು ಮಾಮ ತಂಬ್ಯೆನ್" ("ನಿನ್ನ ಅಮ್ಮ ಕೂಡ") 2001ರಲ್ಲಿ ಬಿಡುಗಡೆಯಾದ ಮೆಕ್ಸಿಕನ್ ಚಿತ್ರ. "ಕಮಿಂಗ್ ಆಫ್ […]
ಮುಂಬೈಗೆ ಕಿರಣ್ ಳ ಪ್ರೇಮಪತ್ರ: ವಾಸುಕಿ ರಾಘವನ್
ಜಾಗಗಳೂ ಕೂಡ ಪಾತ್ರಗಳಾದಾಗ ಚಿತ್ರಗಳಿಗೆ ಇನ್ನೊಂದು ಆಯಾಮ ಸೇರಿಕೊಳ್ಳುತ್ತದೆ. “ನಾಗರಹಾವು” ಚಿತ್ರದ ಚಿತ್ರದುರ್ಗ, “ಕಹಾನಿ” ಚಿತ್ರದ ಕೋಲ್ಕೊತ, “ಸತ್ಯ”ದ ಮುಂಬೈ, “ಗಾಡ್ ಫಾದರ” ನ ಸಿಸಿಲಿ – ಈ ಎಲ್ಲಾ ಚಿತ್ರಗಳಲ್ಲೂ ಆ ಜಾಗಗಳೇ ಒಂದು ಪಾತ್ರವಾಗಿವೆ. ಇದಕ್ಕೆ ಹೋಲಿಸಿದರೆ, ಜಾಗವನ್ನೇ ಪ್ರಮುಖ ಪಾತ್ರವಾಗಿ ಇಟ್ಟುಕೊಂಡು ತೆಗೆದಿರುವ ಚಿತ್ರಗಳು ಕಡಿಮೆ. ಕಿರಣ್ ರಾವ್ ನಿರ್ದೇಶನದ “ಧೋಬಿ ಘಾಟ್” ಅಂತಹ ಒಂದು ಅಪರೂಪದ ಚಿತ್ರ. ಇದು ಮುಂಬೈಗೆ ಆಕೆ ಬರೆದಿರುವ ಪ್ರೇಮಪತ್ರ! ಚಿತ್ರದಲ್ಲಿ ನಾಲ್ಕು ಎಳೆಗಳಿವೆ. ಅರುಣ್ […]
ಮರೆಯಲಾಗದ ಚಿಕ್ಕಾತಿಚಿಕ್ಕ ಪಾತ್ರಗಳು:ವಾಸುಕಿ ರಾಘವನ್
“ಪೂರೇ ಪಚಾಸ್ ಹಜಾರ್” ಮೂರೇ ಪದಗಳು! ಹೇಳಿದವನು ಮಕಿಜಾನಿ ಮೋಹನ್ ಅಲಿಯಾಸ್ ಮ್ಯಾಕ್ ಮೋಹನ್. ಸಾಮಾನ್ಯವಾಗಿ ಖಳನಾಯಕನ ಚೇಲಾ ಪಾತ್ರಗಳಿಂದ ನಮಗೆ ಪರಿಚಿತನಾಗಿರುವ ಆತ ನಟಿಸಿರುವ ಇನ್ನೂರಕ್ಕೂ ಹೆಚ್ಚು ಚಿತ್ರಗಳ ತೂಕ ಒಂದಾದರೆ, ಈ ಪಾತ್ರದ್ದೇ ಒಂದು. ಇದು ಪೋಷಕ ಪಾತ್ರ ಅಂತಲೂ ಹೇಳಲಾಗದಷ್ಟು ಚಿಕ್ಕಾತಿಚಿಕ್ಕ ಪಾತ್ರ. ಆದರೆ ಇವತ್ತಿಗೂ ಗಬ್ಬರ್ ಸಿಂಗ್ ಎಷ್ಟು ಫೇಮಸ್ ಆಗಿದ್ದಾನೋ ಮೂರೇ ಪದ ಹೇಳಿರುವ ಸಾಂಭಾ ಕೂಡ ಅಷ್ಟೇ ಫೇಮಸ್! “ಮೇರೆ ಸಪ್ಪನೋ ಕೀ ರಾಣಿ ಕಬು ಆಯೇಗಿ […]
ಕತ್ತರಿ ಕೈಗಳ ಕಲಾವಿದ:ವಾಸುಕಿ ರಾಘವನ್
ಈ ವಾರ ಬೇರೇನೋ ಬರೆಯೋಣ ಅಂತ ಯೋಚನೆ ಮಾಡ್ತಾ ಇದ್ದೆ. ಆದರೆ ಈ ಸಿನಿಮಾ ನೋಡಿದೆ ನೋಡಿ, ಇದರ ಬಗ್ಗೆ ಬರೀದೇ ಇರಕ್ಕೆ ಆಗೋದೇ ಇಲ್ಲ ಅನ್ನಿಸಿಬಿಡ್ತು. ಆ ಚಿತ್ರ ಟಿಮ್ ಬರ್ಟನ್ ನಿರ್ದೇಶನದ ಜಾನಿ ಡೆಪ್ ಅಭಿನಯದ “ಎಡ್ವರ್ಡ್ ಸಿಜರ್ ಹ್ಯಾಂಡ್ಸ್”. “ಏವಾನ್” ಸೌಂದರ್ಯವರ್ಧಕ ಕಂಪನಿಯ ಸೇಲ್ಸ್ ವುಮನ್ ಪೆಗ್, ಗ್ರಾಹಕರನ್ನು ಹುಡುಕುತ್ತಾ ಹೊರಟಿರುವಾಗ ಪಾಳು ಬಿದ್ದ ಒಂದು ಮಹಲಿಗೆ ಬರುತ್ತಾಳೆ. ಅಲ್ಲಿ ಅವಳಿಗೆ ಎಡ್ವರ್ಡ್ ಭೇಟಿ ಆಗುತ್ತೆ. ಮನುಷ್ಯರ ಒಡನಾಟವೇ ಇಲ್ಲದ ಎಡ್ವರ್ಡ್ […]
ಕ್ರೂರ ಪ್ರಪಂಚದಲ್ಲಿ ನಾವೂ, ಮಕ್ಕಳೂ:ವಾಸುಕಿ ರಾಘವನ್
ಕಳೆದ ಡಿಸೆಂಬರ್ ಅಲ್ಲಿ ನಡೆದ “ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ”ಕ್ಕೆ ಹೋಗಿದ್ದು ಒಂದು ಅದ್ಭುತ ಅನುಭವ. ಒಂದು ಚಿತ್ರ ನೋಡಿ ಬಂದು, ಇನ್ನೊಂದು ಚಿತ್ರಕ್ಕೆ ಕ್ಯೂನಲ್ಲಿ ನಿಂತುಕೊಳ್ಳೋದು, ನಿಂತಲ್ಲೇ ಒಂದು ಸ್ಯಾಂಡ್ವಿಚ್ಚೋ ವ್ರಾಪೋ ಗಬಗಬ ತಿನ್ನೋದು. ಬೇರೆಯವರಿಗೆ ಹುಚ್ಚಾಟ ಅನ್ನಿಸಬಹುದಾದ ಈ ವರ್ತನೆ ಚಿತ್ರಪ್ರೇಮಿಗಳಿಗೆ ಸರ್ವೇಸಾಮಾನ್ಯ ಆಗಿತ್ತು. ಗೆಳೆಯ ಪವನ್ ಕುಂಚ್ ಜೊತೆ ಎರಡು ದಿನದಲ್ಲಿ ಎಂಟು ಚಿತ್ರ ನೋಡಿದ್ದು ಮರೆಯಲಾಗದ ನೆನಪು! ಶನಿವಾರ ಸಂಜೆ ಸಿನಿಮಾ ಹಾಲಲ್ಲಿ ಕೂರುವ ಹೊತ್ತಿಗೆ ಏನೋ ಒಂಥರಾ ಸುಸ್ತು. “ಫಿಲಂ […]
ಆಸ್ಥಾ: ನನ್ನ ಮೆಚ್ಚಿನ ರೇಖಾಳ ‘ಗೃಹಿಣಿ’ ಪಾತ್ರ:ವಾಸುಕಿ ರಾಘವನ್
ನಿಮ್ಮ ಡ್ರೀಮ್ ಪಾತ್ರ ಯಾವುದು ಅಂತ ನಟಿಯರನ್ನ ಕೇಳಿ ನೋಡಿ. ಶರಪಂಜರದಲ್ಲಿ ಕಲ್ಪನಾ ಮಾಡಿದ ಪಾತ್ರ ಅಂತಾರೆ. ಇಲ್ಲ ಅಂದ್ರೆ ಜೀವನದಲ್ಲಿ ತುಂಬಾ ಕಷ್ಟ, ನೋವುಗಳನ್ನು ಅನುಭವಿಸೋ ದುರಂತ ಪಾತ್ರ ಅಥವಾ ಯಾವುದಾದರೂ ಪೌರಾಣಿಕ, ಐತಿಹಾಸಿಕ ಪಾತ್ರ ಅಂತಾರೆ. “ಥಿಯೇಟ್ರಿಕ್ಯಾಲಿಟಿ” ಗೆ ತುಂಬಾ ಅವಕಾಶ ಇರೋ ಪಾತ್ರಗಳೇ ಉತ್ತಮ ಪಾತ್ರಗಳು ಮತ್ತು ಆ ಪಾತ್ರಗಳಲ್ಲಿ ಅಭಿನಯಿಸಿದರೆ ಅದು ಆಟೋಮ್ಯಾಟಿಕ್ ಆಗಿ ಒಳ್ಳೆಯ ನಟನೆ ಅನ್ನೋ ತಪ್ಪು ಅಭಿಪ್ರಾಯ ಇದೆ. ನಿಜವಾಗಿ ತುಂಬಾ ಸವಾಲೊಡ್ಡುವ ಪಾತ್ರ ಅಂದರೆ […]
ಬೆಳ್ಳಿಮೋಡ: ವಾಸುಕಿ ರಾಘವನ್
ನಾನು ಪುಟ್ಟಣ್ಣ ಕಣಗಾಲ್ ಅವರ ಸಾಕಷ್ಟು ಚಿತ್ರಗಳನ್ನ ನೋಡಿಲ್ಲ. ನೋಡಿರುವ ಬಹಳಷ್ಟು ಚಿತ್ರಗಳು ಚಿಕ್ಕವನಾಗಿದ್ದಾಗ, ದೂರದರ್ಶನದಲ್ಲಿ ಪ್ರಸಾರ ಆಗ್ತಿದ್ದ ಕಾಲದಲ್ಲಿ, ಜಾಹೀರಾತುಗಳ ನಡುವೆ. ಚಲನಚಿತ್ರ ಒಂದು ಕಲೆ ಎಂಬ ಗ್ರಹಿಕೆ ಶುರು ಆದಮೇಲೆ ನೋಡಿರೋ ಚಿತ್ರಗಳಲ್ಲಿ ಕಾರಣಾಂತರಗಳಿಂದ ಕನ್ನಡ ಚಿತ್ರಗಳ ಸಂಖ್ಯೆ ಕಮ್ಮಿ ಅಂತಾನೆ ಹೇಳ್ಬೇಕು. ಈ ವಿಷಯದ ಬಗ್ಗೆ ನನಗೆ ಬೇಸರ ಇದೆ ಕೂಡ. ಇದನ್ನು ಬದಲಿಸೋ ಪ್ರಯತ್ನ ಮಾಡ್ತಿದೀನಿ ಇತ್ತೀಚಿಗೆ. ಈ ಪಯಣದಲ್ಲಿ ನನಗೆ ಸಿಕ್ಕ ಪುಟ್ಟಣ್ಣರ ಚಿತ್ರ “ಬೆಳ್ಳಿಮೋಡ”. 1966ರಲ್ಲಿ ಬಿಡುಗಡೆಯಾದ […]
ಅಮೊರೆಸ್ ಪೆರ್ರೋಸ್:ವಾಸುಕಿ ರಾಘವನ್
"ಅಮೊರೆಸ್ ಪೆರ್ರೋಸ್". ನಾನು ನೋಡಿದ ಮೊದಲ ಆಂಗ್ಲೇತರ ವಿಶ್ವಚಿತ್ರಗಳಲ್ಲಿ ಒಂದು. ಚಿತ್ರದ ಮೊದಲ ದೃಶ್ಯವೇ ಒಂದು ಟೆನ್ಸ್ ಕಾರ್ ಚೇಸ್. ಐದು ನಿಮಿಷದೊಳಗೆ ಒಂದು ಭೀಕರ ಕಾರ್ ಅಪಘಾತ ಆಗುತ್ತೆ. ಇದರಿಂದ ಮೂರು ಜನರ ಬದುಕಿನಲ್ಲಿ ಊಹಿಸಲಾಗದ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಈ ಮೂರು ಜನರ ಬದುಕು ಅಪಘಾತದ ಮುನ್ನ ಹೇಗಿರುತ್ತೆ, ಹೇಗೆ ಮೂರೂ ಜನರು ಅದೇ ಜಾಗದಲ್ಲಿ, ಅದೇ ಸಮಯದಲ್ಲಿ ಬರುವಂತೆ ಆಗುತ್ತೆ ಹಾಗೂ ಅಪಘಾತದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಈ […]
ಕಥಾಸಂಗಮ:ವಾಸುಕಿ ರಾಘವನ್
ಪುಟ್ಟಣ್ಣ ಕಣಗಾಲ್ ಒಬ್ಬ ದೈತ್ಯ ಪ್ರತಿಭೆ. ನಿರ್ದೇಶಕನ ಸ್ಥಾನಕ್ಕೆ ಸಿಗಬೇಕಾದ ಮಾನ್ಯತೆ ತಂದುಕೊಟ್ಟವರು. ಸಾಮಾನ್ಯವಾಗಿ ಹೀರೋಗಳಿಂದ ಚಿತ್ರಗಳನ್ನು ಗುರುತಿಸುವ ವಾಡಿಕೆ ನಮ್ಮಲ್ಲಿ. ಆದರೆ “ಎಡಕಲ್ಲು ಗುಡ್ಡದ ಮೇಲೆ” ಚಂದ್ರಶೇಖರ್ ಪಿಚ್ಚರ್ ಅಂತ ಆಗಲೀ, “ಮಾನಸ ಸರೋವರ” ಶ್ರೀನಾಥ್ ಪಿಚ್ಚರ್ ಅಂತಾಗ್ಲೀ ಯಾರೂ ಹೇಳಲ್ಲ. ಅವೆಲ್ಲ ಗುರುತಿಸಿಕೊಳ್ಳೋದು ಪುಟ್ಟಣ್ಣ ಅವರ ಫಿಲಂಗಳು ಅಂತಲೇ! ಪುಟ್ಟಣ್ಣ ಅವರ ಅತ್ಯುತ್ತಮ ಚಿತ್ರಗಳು ಅನ್ನೋ ವಿಷಯ ಬಂದಾಗ ಸಾಕ್ಷಾತ್ಕಾರ, ಗೆಜ್ಜೆ ಪೂಜೆ, ಶರಪಂಜರ, ರಂಗನಾಯಕಿ, ನಾಗರಹಾವು, ಶುಭಮಂಗಳ, ಮಾನಸಸರೋವರ – ಇವು ಸಾಮಾನ್ಯವಾಗಿ […]
ನನ್ನ ಜೀವನವನ್ನು ಬದಲಿಸಿದ ಆ ಚಿತ್ರ:ವಾಸುಕಿ ರಾಘವನ್
ಬಹುಶಃ 1998ರ ಆಗಸ್ಟ್ ಇರಬೇಕು. ಸೆಮಿಸ್ಟರ್ ಕೊನೆಯ ದಿನ ಕಾಲೇಜಿನಿಂದ ಹಾಲ್ ಟಿಕೆಟ್ ಇಸ್ಕೊಂಡು ಬರಕ್ಕೆ ಹೋಗಿದ್ದೆ. ವಾಪಸ್ಸು ಮನೆಗೆ ಬಾರೋವಾಗ ನನಗೇ ಗೊತ್ತಿಲ್ಲದಂತೆ ವುಡ್-ಲ್ಯಾಂಡ್ಸ್ ಥೀಯೇಟರ್ ಕಡೆಗೆ ನನ್ನ ಗಾಡಿ ತಿರುಗಿಸಿದ್ದೆ. ಆ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಓದಿದ್ದೆನಾ ಅಥವಾ ಪರೀಕ್ಷೆ ಶುರು ಆಗೋದರ ಒಳಗೆ ಒಂದು ಸಿನಿಮಾ ನೋಡಿಬಿಡಬೇಕು ಅನ್ನೋ ಚಡಪಡಿಕೆ ಇತ್ತಾ ನೆನಪಿಗೆ ಬರ್ತಾ ಇಲ್ಲ. ನನಗೆ ಆಗ ಆ ಚಿತ್ರದ ನಿರ್ದೇಶಕನಾಗಲೀ, ನಟರಾಗಲೀ ಯಾರೂ ಗೊತ್ತಿರಲಿಲ್ಲ. ಆದರೆ ಚಿತ್ರಮಂದಿರದಲ್ಲಿ […]
ಯುದ್ಧವೆಂದರೆ ಬರೀ ಸೋಲು ಗೆಲುವಲ್ಲ: ವಾಸುಕಿ ರಾಘವನ್
ನಮ್ಮಲ್ಲಿ ಯುದ್ಧದ ಸಿನಿಮಾಗಳೇ ಬಹಳ ಅಪರೂಪ. ಐತಿಹಾಸಿಕ ಚಿತ್ರವಾದರೆ ಯುದ್ಧ ಅಂದರೆ ರಾಜರ ಕಾಲದ ಕಾಸ್ಟ್ಯೂಮ್ ಧರಿಸಿ ಮಾಡುವ ಫೈಟಿಂಗ್ ಅಷ್ಟೇ. ಈಗಿನ ಕಾಲದ ಕಥೆ ಆಗಿದ್ದರೆ ಅದು ಯಾವುದಾದರೊಂದು ಯುದ್ಧದ ಡಾಕ್ಯುಮೆಂಟರಿ ಥರ ಇರುತ್ತೆ. ಜೊತೆಗೆ ಅದೇ ಕ್ಲೀಷೆಗಳು – ಮಗನ ಬರುವಿಕೆಗಾಗಿ ಕಾಯುತ್ತಿರುವ ವಿಧವೆ ಅಮ್ಮ, ಪರ್ಸಿನಲ್ಲಿ ಇರೋ ಹೆಂಡತಿ ಫೋಟೋ ನೋಡ್ತಾ ಸಾಯೊ ಸೈನಿಕ, ಯೋಧರು ಅಂದರೆ ಬರೀ ಒಳ್ಳೆಯವರು ಅನ್ನೋ ಭಾಷಣ. ನಮ್ಮಲ್ಲಿ anti-war ಸಿನಿಮಾಗಳು ಇಲ್ಲವೇ ಇಲ್ಲ. ಸ್ವಲ್ಪ ಮಟ್ಟಿಗೆ […]
ಕನ್ನಡದಲ್ಲಿನ ‘ತುಂಟ’ ಚಿತ್ರಗೀತೆಗಳು: ವಾಸುಕಿ ರಾಘವನ್
ಒಂದು ಹಾಡನ್ನ ಹೀಗೇ ಅಂತ ವಿಂಗಡಿಸೋದು ತುಂಬಾ ಕಷ್ಟ. ಒಬ್ಬರಿಗೆ ಮಜಾ ಕೊಡುವ ಹಾಡು ಇನ್ನೊಬ್ಬರಿಗೆ ಅತಿರೇಕ ಅನ್ನಿಸಬಹುದು. ಒಬ್ಬರ ‘ತುಂಟ’ ಹಾಡು ಇನ್ನೊಬ್ಬರಿಗೆ ಅಶ್ಲೀಲ ಅಥವಾ ‘ಪೋಲಿ ಹಾಡು’ ಅನ್ನಿಸಬಹುದು. ನನಗೆ ಈ ‘ತುಂಟ’ ಹಾಡುಗಳು ಬೇರೆ ಬೇರೆ ಕಾರಣಗಳಿಗೆ ಇಷ್ಟವಾಗಿವೆ – ಆಯ್ದುಕೊಂಡಿರುವ ವಿಷಯಗಳು, ವಿಷಯವನ್ನು ಹೇಳಿರುವ ರೀತಿ, ಪದಗಳಲ್ಲಿ ಪನ್ ಮಾಡಿರುವುದು, ಒಂದಕ್ಕಿಂತ ಹೆಚ್ಚು ಅರ್ಥ ಕೊಡುವ ಸಾಲುಗಳು ಅಥವಾ “ಹೀಗೂ ಉಂಟೇ” ಅನ್ನುವಂಥ ಅಸಂಬದ್ಧತೆ! ಇಲ್ಲಿದೆ ನೋಡಿ ನನ್ನ ಅಚ್ಚುಮೆಚ್ಚಿನ […]
ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ: ವಾಸುಕಿ ರಾಘವನ್
“ದಿ ಡೈವಿಂಗ್ ಬೆಲ್ ಅಂಡ್ ದಿ ಬಟರ್-ಫ್ಲೈ” 2007ರಲ್ಲಿ ತೆರೆಕಂಡ ಫ್ರೆಂಚ್ ಚಿತ್ರ ನನಗೆ ತುಂಬಾ ಪ್ರಿಯವಾದ ಚಿತ್ರಗಳಲ್ಲಿ ಒಂದು. ಪರಾಲಿಸಿಸ್ ಇಂದ ಇಡೀ ದೇಹದ ಸ್ವಾಧೀನ ಕಳೆದುಕೊಳ್ಳುತ್ತಾನೆ ಜೀನ್ ಡೊಮಿನಿಕ್ ಬಾಬಿ; ತನ್ನ ಎಡಗಣ್ಣನ್ನು ಹೊರತುಪಡಿಸಿ. ಕೇವಲ ಕಣ್ಣು ಮಿಟುಕಿಸಿ ಒಂದು ಪುಸ್ತಕವನ್ನು ಬರೆಯುತ್ತಾನೆ. ಇದೇನಪ್ಪಾ ನಂಬಲಸಾಧ್ಯವಾದ ಕಥೆ ಅಂದ್ರಾ? ನಿಮಗೆ ಆಶ್ಚರ್ಯ ಆಗಬಹುದು, ಇದು ಎಲ್ ಮ್ಯಾಗಜಿನ್ ಎಡಿಟರ್ ಒಬ್ಬನ ನೈಜ ಕಥೆಯನ್ನು ಆಧರಿಸಿದ ಚಿತ್ರ! ಚಿತ್ರ ಶುರು ಆಗುವುದು, ಮೂರು ವಾರದ ಕೋಮಾ […]
ಎಡ್ ವುಡ್ – ಹೀಗೂ ಒಬ್ಬ ನಿರ್ದೇಶಕ: ವಾಸುಕಿ ರಾಘವನ್
ನಿಮ್ಮ ಪ್ರಕಾರ ಅತ್ಯುತ್ತಮ ನಿರ್ದೇಶಕರು ಯಾರು ಅಂತ ಯಾರನ್ನಾದ್ರೂ ಕೇಳಿ. ಥಟ್ ಅಂತ ಉತ್ತರ ಸಿಗುತ್ತೆ ನಿಮ್ಗೆ – ಪುಟ್ಟಣ್ಣ ಕಣಗಾಲ್ ಅಂತಲೋ, ಸತ್ಯಜಿತ್ ರೇ ಅಂತಲೋ, ಸ್ಪೀಲ್ಬರ್ಗ್, ಕ್ಯೂಬ್ರಿಕ್, ಬರ್ಗ್ಮನ್, ನೋಲನ್ ಅಂತಲೋ – ಅವರವರ ಆಸಕ್ತಿ, ಅಭಿರುಚಿ, ವಯೋಮಾನ, ಚಿತ್ರವೈವಿಧ್ಯಗಳ ಪರಿಚಯಕ್ಕೆ ತಕ್ಕಂತೆ ಉತ್ತರಿಸುತ್ತಾರೆ. ಅದೇ ನಿಮ್ಮ ಪ್ರಕಾರ ಅತ್ಯಂತ ಕಳಪೆ ನಿರ್ದೇಶಕ ಯಾರು ಅಂತ ಕೇಳಿ ನೋಡಿ, ತಕ್ಷಣ ಉತ್ತರ ಕೊಡೋದು ಕಷ್ಟ ಆಗುತ್ತೆ. ಆದರೆ ಬಹಳಷ್ಟು ಚಿತ್ರಪ್ರೇಮಿಗಳು ಹಾಗು ವಿಮರ್ಶಕರ ಪ್ರಕಾರ […]
ಗರಂ ಹವಾ : ವಾಸುಕಿ ರಾಘವನ್
ನಮ್ಮ ದೇಶಕ್ಕೆ ತುಂಬಾ ದೊಡ್ಡ ಇತಿಹಾಸ ಇದೆ. ಆದರೆ ಅದಕ್ಕೆ ನ್ಯಾಯ ಒದಗಿಸುವಷ್ಟು ಸಂಖ್ಯೆಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಚಿತ್ರಗಳು ಬಂದಿಲ್ಲ. ನಮ್ಮವೇ ಚಾರಿತ್ರಿಕ ಘಟನೆಗಳು, ರಾಜಕೀಯ ಸನ್ನಿವೇಶಗಳು, ಪ್ರಸಿದ್ಧ ವ್ಯಕ್ತಿಗಳು ನಮ್ಮ ನಿರ್ದೇಶಕರನ್ನು ಪ್ರೇರೇಪಿಸಿದ್ದು ಕಡಿಮೆ. ನಮ್ಮ ಗಾಂಧಿಯ ಬಗ್ಗೆ ಚಿತ್ರ ಮಾಡಲು ರಿಚರ್ಡ್ ಅಟ್ಟೆನ್ಬರೋ ಬರಬೇಕಾಯ್ತು. ಮಂಗಲ್ ಪಾಂಡೆ, ಭಗತ್ ಸಿಂಗ್, ವಲ್ಲಭಭಾಯ್ ಪಟೇಲ್, ಸುಭಾಷ್ ಚಂದ್ರ ಬೋಸ್ ಎಲ್ಲರ ಬಗ್ಗೆ ಒಂದೋ ಎರಡೋ ಚಿತ್ರಗಳು. ನಮ್ಮಲ್ಲಾಗಿರೋ ಯುದ್ಧಗಳ ಬಗ್ಗೆ ಡಾಕ್ಯುಮೆಂಟರಿ ಥರದಲ್ಲಿ ಒಂದೊಂದು ಚಿತ್ರ ಅಷ್ಟೇ. […]
ಎದ್ದೇಳು ಮಂಜುನಾಥ – ಒಂದು ಅಪರೂಪದ ಚಿತ್ರ
“ಕನ್ನಡದ ಮಟ್ಟಿಗೆ ಒಂದು ಉತ್ತಮ ಪ್ರಯತ್ನ/ಚಿತ್ರ” – ಈ ವಾಕ್ಯವನ್ನು ನೀವು ತುಂಬಾ ಸಲ ಕೇಳಿರುತ್ತೀರ. ನೀವು ಬಳಸಿರುವ ಸಾಧ್ಯತೆಗಳೂ ಇವೆ. ಒಂದು ಕ್ಷಣ ಯೋಚಿಸಿ, ಹಿಂಗಂದ್ರೆ ನಿಜವಾದ ಅರ್ಥ ಏನು ಅಂತ. ‘ಫ್ರೆಂಚ್ ಮಟ್ಟಿಗೆ ಒಳ್ಳೆ ಚಿತ್ರ’ ಅಥವಾ ‘ಇಟಾಲಿಯನ್ ಮಟ್ಟಿಗೆ ಉತ್ತಮ ಪ್ರಯೋಗ’ ಅಂತೆಲ್ಲಾದ್ರೂ ಕೇಳಿದ್ದೀರಾ? ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಪೇಂಟಿಂಗ್ ಇದು’ ಅಥವಾ ‘ಕನ್ನಡದ ಮಟ್ಟಿಗೆ ಉತ್ತಮ ಸಂಗೀತ ಇದು’ ಅಂತೇನಾದ್ರೂ? ಇಲ್ಲ ಅಲ್ವಾ? ಮತ್ತೆ ಕನ್ನಡ ಚಲನಚಿತ್ರಗಳಿಗೇಕೆ ಈ ವಾಕ್ಯಪ್ರಯೋಗ? […]
ಕಾಂಟೆಕ್ಸ್ಟ್
ಮನುಷ್ಯನ ಭಾವನೆಗಳು ಸಾರ್ವತ್ರಿಕ. ಆದರೆ ಅವುಗಳ ಅಭಿವ್ಯಕ್ತಿ ಬದಲಾಗುತ್ತದೆ – ಬೇರೆ ಬೇರೆ ದೇಶಗಳಲ್ಲಿ, ಭಾಷೆಗಳಲ್ಲಿ, ಕಾಲಘಟ್ಟಗಳಲ್ಲಿ ಕಾಣಬರುವ ರೀತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ‘ಕಾಂಟೆಕ್ಸ್ಟ್’ ಅಂತೀನಿ ನಾನು. ಈ ಕಾಂಟೆಕ್ಸ್ಟ್ ಗೊತ್ತಿದ್ದಾಗ ಮಾತ್ರ ಕೆಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಗಳನ್ನು ಅಪ್ಪ್ರಿಶಿಯೇಟ್ ಮಾಡಲಿಕ್ಕೆ ಸಾಧ್ಯ! ಇದಕ್ಕೆ ಉದಾಹರಣೆಯಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಎರಡು ಮಹಾನ್ ಚಿತ್ರಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ – “೧೨ ಆಂಗ್ರಿ ಮೆನ್” ಹಾಗು “ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ”. ಪ್ರತಿಯೊಬ್ಬ […]
ವುಡೀ ಆಲೆನ್ ಮತ್ತು ವಾಸುಕಿ ರಾಘವನ್
ಕೆಲವು ಚಿತ್ರಗಳೇ ಹಾಗೆ. ಮೊದಲ ಬಾರಿ ನೋಡಿದಾಗ ಅಷ್ಟೊಂದು ಅದ್ಭುತ ಅಂತ ಅನ್ನಿಸಿರೋಲ್ಲ. ಅದಕ್ಕೆ ನಾವು ನೋಡಿದಾಗಿನ ಮನಸ್ಥಿತಿ ಕಾರಣ ಇರಬಹುದು, ಅಥವಾ ಅಷ್ಟೊಂದು ವೈವಿಧ್ಯಮಯ ಚಿತ್ರಪ್ರಕಾರಗಳ ಪರಿಚಯ ಇಲ್ಲದಿರುವುದು ಕೂಡ. ನಂತರದ ಮರುವೀಕ್ಷಣೆಗಳಲ್ಲಿ ಆ ಚಿತ್ರಗಳು ಹೊಸ ಹೊಸ ಡೈಮೆನ್ಶನ್ ಗಳನ್ನು ತೋರುತ್ತವೆ. “ಅಯ್ಯೋ, ಇದನ್ನ ನಾನು ಗಮನಿಸಿಯೇ ಇರಲಿಲ್ಲ ಅಲ್ವಾ” ಅಂತ ನಮ್ಮನ್ನು ಚಕಿತಗೊಳಿಸುತ್ತವೆ. ಅಂತಹ ಒಂದು ಅದ್ಭುತ ಚಲನಚಿತ್ರ "ಆನೀ ಹಾಲ್". ಇದು ನನಗೆ ವೈಯಕ್ತಿಕವಾಗಿ ತುಂಬಾ ಪ್ರಿಯವಾದ ಚಿತ್ರವೂ ಹೌದು! […]