ವಾಸುಕಿ ಕಾಲಂ

ಕಾಣೆಯಾದ ಕೈನಿ: ವಾಸುಕಿ ರಾಘವನ್

ಮಂತ್ರಿ ಮಾಲ್ ಇಂದ ಹೊರಗೆ ಬಂದಾಗ ರಾತ್ರಿ ಎಂಟೂ ಇಪ್ಪತ್ತು ಆಗಿತ್ತು. ಹಿಂದಿನ ದಿನ ಆಲ್ಟರೇಶನ್ನಿಗೆ ಕೊಟ್ಟಿದ್ದ ಪ್ಯಾಂಟ್ ಇಸ್ಕೊಂಡು ಬರೋಕೆ ಕೇವಲ ಹದಿಮೂರು ನಿಮಿಷ ತೆಗೆದುಕೊಂಡಿತ್ತು. ಕೈಯಲ್ಲಿದ್ದ ಹೆಲ್ಮೆಟ್ಟನ್ನು ಗುರಾಣಿಯಂತೆ ಬಳಸಿ, ಸಂಪಿಗೆ ರೋಡಿನ ನಾನ್ ಸ್ಟಾಪ್ ವಾಹನಗಳೆಂಬ ಚಕ್ರವ್ಯೂಹವನ್ನು ಭೇದಿಸಿಕೊಂಡು ಗೋಕುಲ್ ಹೋಟೆಲ್ ಮುಂದೆ ಬಂದೆ. ಹಿತವಾದ ಬೆಂಗಳೂರಿನ ತಂಗಾಳಿ ಮುಖಕ್ಕೆ ಬಡಿದು ಆ ದಿನದ ಸುಸ್ತೆಲ್ಲಾ ಒಂದು ಕ್ಷಣ ಮಾಯವಾದಂತೆ ಅನಿಸಿತು. ನಾನು ಗಾಡಿ ನಿಲ್ಲಿಸಿದ್ದ ಜಾಗಕ್ಕೆ ಬಂದು ನಿಂತಾಗ ಅಲ್ಲಿನ ದೃಶ್ಯ […]

ವಾಸುಕಿ ಕಾಲಂ

ಐದು ಫೇವರಿಟ್ ದೃಶ್ಯಗಳು: ವಾಸುಕಿ ರಾಘವನ್ ಅಂಕಣ

ರಿಕ್ವೀಮ್ ಫಾರ್ ಅ ಡ್ರೀಮ್  ಈ ಚಿತ್ರ ಮಾದಕ ವ್ಯಸನಕ್ಕೆ ಸಿಲುಕಿ ಛಿದ್ರಗೊಳ್ಳುವ ನಾಲ್ಕು ಜನರ ಜೀವನದ ಕಥಾನಕ. ಈ ಚಿತ್ರದ ಕೊನೆಯಲ್ಲಿ ಬರುವ ದೃಶ್ಯ ಬಹಳ ಶಕ್ತಿಶಾಲಿಯಾಗಿದೆ. ಆ ನಾಲ್ಕೂ ಜನರ ಬದುಕು ಹೇಗೆ ನರಕಸದೃಶವಾಯಿತು ಅಂತ ಒಬ್ಬೊಬ್ಬರ ಶಾಟ್ ಗಳನ್ನು ಒಂದಾದಮೇಲೊಂದು ಜೋಡಿಸಿ ತೋರಿಸಿದ್ದಾರೆ ನಿರ್ದೇಶಕ ಆರೋನಾಫ್ಸ್ಕಿ. ನಿಧಾನಗತಿಯಲ್ಲಿ ಸಾಗುವ ದೃಶ್ಯಗಳ ಜೊತೆಯಲ್ಲೇ ವಿಷಾದಭಾವದ ಸಂಗೀತ. ಬರಬರುತ್ತಾ ಸಂಕಲನ ವೇಗ ಪಡೆದುಕೊಳ್ಳುತ್ತದೆ, ಸಂಗೀತ ತಾರಕಕ್ಕೇರುತ್ತದೆ. ಅಷ್ಟೇ ಪರಿಣಾಮಕಾರಿಯಾಗಿ ಮೂಡಿರುವುದು ಇದರ ನಂತರದ ದೃಶ್ಯ. ಒಬ್ಬ […]

ವಾಸುಕಿ ಕಾಲಂ

ಬಾಲ್ಯದ ಮೆಚ್ಚಿನ ಚಿತ್ರಗಳು: ವಾಸುಕಿ ರಾಘವನ್ ಅಂಕಣ

ನಿಮಗೆ ಬಾಲ್ಯದಲ್ಲಿ ತುಂಬಾ ಇಷ್ಟವಾಗಿದ್ದ ಸಿನಿಮಾಗಳನ್ನ ಜ್ಞಾಪಿಸಿಕೊಳ್ಳಿ. ಈಗ ನಿಮಗೆ ಅವು ಅಂಥ ವಿಶೇಷವೇನಲ್ಲ ಅನ್ನಿಸಬಹುದು, ಆದರೂ ಅವು ಮನಸ್ಸಿಗೆ ಬಹಳ ಹತ್ತಿರವಾಗಿರುತ್ತವೆ. ಅವು ಶ್ರೇಷ್ಠ ಕಲಾಕೃತಿಗಳೇ ಆಗಬೇಕೆಂದಿಲ್ಲ. ನೋಡಿದಾಗಿನ ನಮ್ಮ ಮನಸ್ಥಿತಿಯೋ, ಜೊತೆಗಿದ್ದ ಗೆಳೆಯರೋ, ಇನ್ಯಾವುದೋ ಕಾರಣಗಳಿಂದಲೋ ಅವು ಸ್ಮರಣೀಯವಾಗಿರುತ್ತವೆ. ನನ್ನ ಬಾಲ್ಯದ ಮೆಚ್ಚಿನ ಹತ್ತು ಚಿತ್ರಗಳನ್ನು ಪಟ್ಟಿಮಾಡಲು ಪ್ರಯತ್ನಿಸಿದ್ದೇನೆ. ಇವೇ ಹತ್ತು ಅತ್ಯಂತ ಪ್ರಮುಖ ಚಿತ್ರಗಳಾ ಗೊತ್ತಿಲ್ಲ, ಈ ಕ್ಷಣದಲ್ಲಿ ಜ್ಞಾಪಕ ಬಂದ ಹತ್ತು ಚಿತ್ರಗಳು ಇವು.  ಧ್ರುವತಾರೆ ನನಗೆ ನೆನಪಿರುವಂತೆ ನಾನು ನೋಡಿದ […]

ವಾಸುಕಿ ಕಾಲಂ

ಇಟ್ಸ್ ಅ ವಂಡರ್ಫುಲ್ ಲೈಫ್: ವಾಸುಕಿ ರಾಘವನ್ ಅಂಕಣ

ನನ್ನ ಕಲ್ಪನಾಲೋಕದಲ್ಲಿ ಹಬ್ಬಗಳಿಗೂ ಚಲನಚಿತ್ರಗಳಿಗೂ ಬಿಡಿಸಲಾಗದ ನಂಟಿದೆ. ಯುಗಾದಿ ಹಬ್ಬದ ದಿನ ಚಿತ್ರಮಂಜರಿಯಲ್ಲಿ ತಪ್ಪದೇ ಪ್ರತಿ ವರ್ಷ ಬರುತ್ತಿದ್ದ ಲೀಲಾವತಿ ಅಭಿನಯದ “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಹಾಡು ನೆನಪಿಗೆ ಬರುತ್ತದೆ. ಗಣಪತಿ ಹಬ್ಬ ಅಂದಾಕ್ಷಣ ಚಿತ್ರಹಾರ್ ನ “ದೇವಾದಿ ದೇವಾ ಗಣಪತಿ ದೇವ” ಹಾಡು ಜ್ಞಾಪಕಕ್ಕೆ ಬರುತ್ತದೆ. ಕ್ರಿಸ್ಮಸ್ ಬಂತೆಂದರೆ ಬಿಟ್ಟೂಬಿಡದೆ ಕಾಡುವ ಚಿತ್ರ “ಇಟ್ಸ್ ಅ ವಂಡರ್ಫುಲ್ ಲೈಫ್”! ಇದು 1946ರಲ್ಲಿ ಫ್ರಾಂಕ್ ಕ್ಯಾಪ್ರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ. ದೇವರಿಗೆ ನೂರಾರು ಜನರಿಂದ […]

ವಾಸುಕಿ ಕಾಲಂ

ಅಪ್: ವಾಸುಕಿ ರಾಘವನ್ ಅಂಕಣ

“ಪಿಕ್ಸಾರ್ ಅನಿಮೇಷನ್ ಸ್ಟುಡಿಯೊಸ್” ನಿರ್ಮಾಣದಲ್ಲಿ 2009ರಲ್ಲಿ ಬಿಡುಗಡೆಯಾದ ಚಿತ್ರ “ಅಪ್”. ಮತ್ತೆ ಮತ್ತೆ ನೋಡಿದಾಗಲೂ ಅಷ್ಟೇ ರಂಜನೀಯವೆನಿಸುವ ಚಿತ್ರ ಇದು. ಕಾರ್ಲ್ ಮತ್ತು ಎಲ್ಲೀ ಇಬ್ಬರೂ ಬಾಲ್ಯದಿಂದಲೇ ಸಾಹಸಪ್ರಿಯರು, ಪ್ರಕೃತಿಯನ್ನು ಇಷ್ಟಪಡುವವರು. ಎಲ್ಲೀಗೆ ದಕ್ಷಿಣ ಅಮೆರಿಕಾದ ದಟ್ಟ ಕಾಡುಗಳ ನಡುವೆ ಇರುವ “ಪ್ಯಾರಡೈಸ್ ಫಾಲ್ಸ್” ಅನ್ನುವ ಸುಂದರ ಜಲಪಾತದ ಬಳಿ ತನ್ನ ಮನೆ ಇರಬೇಕೆಂಬ ಕನಸು. ಮುಂದೆ ಇವರಿಬ್ಬರೂ ಮದುವೆಯಾಗುತ್ತಾರೆ. ಆದರೆ ಜೀವನ ಪೂರ್ತಿ ಏನೇನೋ ತಾಪತ್ರಯಗಳ ಕಾರಣದಿಂದ ಅಲ್ಲಿಗೆ ಪ್ರವಾಸ ಹೋಗಲು ಆಗುವುದೇ ಇಲ್ಲ. ವಯಸ್ಸಾಗುವ […]

ವಾಸುಕಿ ಕಾಲಂ

ಸೆವೆನ್: ವಾಸುಕಿ ರಾಘವನ್ ಅಂಕಣ

ಪೋಲಿಸ್ ಡಿಟೆಕ್ಟಿವ್ ಸೊಮರ್ಸೆಟ್ ಇನ್ನೊಂದು ವಾರದಲ್ಲಿ ನಿವೃತ್ತನಾಗಲಿದ್ದಾನೆ. ಅವನಿಗೆ ಆ ಊರು, ಆ ಕೆಲಸ ಸಾಕುಸಾಕಾಗಿಹೋಗಿದೆ. ಅವನ ಜಾಗಕ್ಕೆ ವರ್ಗಾವಣೆಯಾಗಿ ಬರುವ ಮಿಲ್ಸ್ ಅನ್ನುವ ಬಿಸಿರಕ್ತದ ಯುವಕನ ಜೊತೆ ಒಂದು ವಾರದ ಮಟ್ಟಿಗೆ ಕೆಲಸ ಮಾಡಬೇಕಾಗಿದೆ. ತದ್ವಿರುದ್ಧ ವ್ಯಕ್ತಿತ್ವದ ಇವರಿಬ್ಬರಿಗೂ ತಿಕ್ಕಾಟ ಶುರುವಾಗುತ್ತದೆ. ಅದೇ ವೇಳೆಯಲ್ಲಿ ಆ ಊರಿನಲ್ಲಿ ಒಂದು ಭೀಕರ ಕೊಲೆಯಾಗುತ್ತದೆ. ಅನುಭವೀ ಸೊಮರ್ಸೆಟ್ ಈ ಕೊಲೆ ಯಾರೋ ಆತುರದಲ್ಲಿ ಮಾಡಿದ್ದಲ್ಲ ಅಂತ ವಾದಿಸುತ್ತಾನೆ, ಆದರೆ ಮಿಲ್ಸ್ ಅವನ ಮಾತನ್ನು ಒಪ್ಪುವುದಿಲ್ಲ. ಅಷ್ಟರಲ್ಲೇ ಇನ್ನೊಂದು ಭಯಾನಕ […]

ವಾಸುಕಿ ಕಾಲಂ

ಚೈನಾಟೌನ್: ವಾಸುಕಿ ರಾಘವನ್ ಅಂಕಣ

ನಿಜವಾಗಿಯೂ ಒಂದು “ಸಸ್ಪೆನ್ಸ್” ಚಿತ್ರ ಗ್ರೇಟ್ ಅನ್ನಿಸಿಕೊಳ್ಳುವುದು ಯಾವುದರಿಂದ? ಅಂತ್ಯವನ್ನು ನಾವು ಊಹಿಸಲು ಆಗದಿರುವುದೇ ಅತೀ ದೊಡ್ಡ ಮಾನದಂಡವಾ? ಅಥವಾ ಚಿತ್ರದುದ್ದಕ್ಕೂ ಹೆಚ್ಚು ಹೆಚ್ಚು ತಿರುವುಗಳಿದ್ದು ನಮ್ಮನ್ನು ಥ್ರಿಲ್ ಮಾಡಿತ್ತು ಅನ್ನುವುದರ ಮೇಲೆ ನಿರ್ಧಾರವಾಗಿದೆಯಾ? ಹೀಗೇ ಅಂತ ನಿಖರವಾಗಿ ಹೇಳಲು ಆಗುವುದಿಲ್ಲ. ಸುಳಿವುಗಳು ಹೆಚ್ಚಿದ್ದರೆ ನಾವು  ಪರಿಹಾರವನ್ನು ಕಂಡುಹಿಡಿದ ಸಂತೃಪ್ತಿ ಸಿಗುವುದಿಲ್ಲ, ಕಮ್ಮಿ ಇದ್ದರೆ ಚಿತ್ರದೊಂದಿಗೆ ಬಂಧ ಬೆಸೆಯುವುದಿಲ್ಲ. ಈ ಸಂತುಲನವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ. ನನ್ನ ಪ್ರಕಾರ ಒಂದು ಅತ್ಯುತ್ತಮ “ಸಸ್ಪೆನ್ಸ್” ಚಿತ್ರ ಎರಡನೆಯ […]

ವಾಸುಕಿ ಕಾಲಂ

ಸಿಂಗಿನ್ ಇನ್ ದ ರೈನ್:ವಾಸುಕಿ ರಾಘವನ್ ಅಂಕಣ

ಜಾಗತಿಕ ಸಿನಿಮಾಗಳಲ್ಲಿ “ಮ್ಯೂಸಿಕಲ್” ಅನ್ನುವ ಪ್ರತ್ಯೇಕ ಪ್ರಕಾರವುಂಟು. ಅದರ ವಿಶೇಷವೆಂದರೆ ಚಿತ್ರಗಳಲ್ಲಿ ಹೆಚ್ಚಾಗಿ ಹಾಡು-ಕುಣಿತದ ಬಳಕೆ. ಹಲವು ಬಾರಿ ಈ ಹಾಡುಗಳು ಪಾತ್ರಗಳನ್ನು ಪರಿಚಯಿಸಲೋ ಅಥವಾ ಕಥೆಯನ್ನು ಮುಂದುವರಿಸಲೋ ಸಹಾಯ ಮಾಡಿದರೆ, ಕೆಲವು ಸಲ ಕಥೆಗೆ ಸಂಬಂಧವಿರದಿದ್ದರೂ ಬರೀ ರಂಜನೆಯ ದೃಷ್ಟಿಯಿಂದ ಇರುತ್ತದೆ. ಭಾರತೀಯ ಚಿತ್ರಗಳನ್ನು ನೋಡಿ ಬೆಳೆದಿರುವವರಿಗೆ ಇದೂ ಒಂದು ಚಿತ್ರಪ್ರಕಾರವೇ ಅಂತ ತಮಾಷೆಯಾಗಿ ಕಾಣಬಹುದು. ನಮ್ಮ ಸಿನಿಮಾಗಳಲ್ಲಿ ಹಾಡು-ಕುಣಿತ ಅಷ್ಟೊಂದು ಅವಿಭಾಜ್ಯ ಅಂಗಗಳಾಗಿವೆ. ಅವಿಲ್ಲದೆಯೂ ಚಿತ್ರಗಳನ್ನು ಮಾಡಬಹುದು ಅನ್ನುವ ಆಲೋಚನೆಗಳೂ ಕೂಡ ಇತ್ತೀಚಿನವರೆಗೆ ಅಪರೂಪವಾಗಿದ್ದವು. […]

ವಾಸುಕಿ ಕಾಲಂ

ಮುಂಗಾರು ಮಳೆ ಮತ್ತು ಗಾಳಿಪಟ:ವಾಸುಕಿ ರಾಘವನ್ ಅಂಕಣ

                ಯೋಗರಾಜ್ ಭಟ್ಟರ ಚಿತ್ರಗಳ ಬಗೆಗಿನ ಚರ್ಚೆಗಳು ಯಾವಾಗಲೂ ಸ್ವಾರಸ್ಯಕರವಾಗಿರುತ್ತವೆ. “ಭಟ್ರು ಏನ್ ಸೂಪರ್ ಆಗಿ ಹಾಡುಗಳನ್ನ ಡೈಲಾಗುಗಳನ್ನ ಬರೀತಾರೆ ಗುರೂ, ಸಕ್ಕತ್ತು ತಮಾಷೆಯಾಗಿ ಇರುತ್ತಪ್ಪಾ” ಅನ್ನುವುದರಿಂದ ಹಿಡಿದು “ಭಟ್ರು ಪಿಚ್ಚರಲ್ಲಿ ಅದೇ ಬೇಜವಾಬ್ದಾರಿ ಉಡಾಫೆ ಹೀರೋ, ಸುಮ್ನೆ ಉದ್ದುದ್ದ ಡೈಲಾಗ್ ಹೊಡ್ಕೊಂಡು ಅಲೀತಾ ಇರ್ತಾರಪ್ಪ ಅಷ್ಟೇ, ಛೇ ಅವ್ರು ಬೇರೆ ಥರ ಯಾವುದಾದರೂ ಫಿಲಂ ಮಾಡ್ಬೇಕಪ್ಪಾ” ಅನ್ನುವವರೆಗೂ ಅಭಿಪ್ರಾಯಗಳು ಕೇಳಿಬರುತ್ತವೆ! “ಭಟ್ಟರ ಬೆಸ್ಟ್ ಫಿಲಂ ಯಾವುದು?” […]

ವಾಸುಕಿ ಕಾಲಂ

ದಿ ಬರ್ಡ್ಸ್:ವಾಸುಕಿ ರಾಘವನ್ ಅಂಕಣ

ಹಾರರ್ / ಸಸ್ಪೆನ್ಸ್ ಚಿತ್ರಗಳು ಅಂದಾಕ್ಷಣ ಮೊದಲು ನೆನಪಿಗೆ ಬರುವ ಹೆಸರೇ ಅಲ್ಫ್ರೆಡ್ ಹಿಚ್ಕಾಕ್. ಸುಮಾರು ಐವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಇವರು. ಒಂದು ಚಿತ್ರಪ್ರಕಾರದೊಂದಿಗೆ ಒಬ್ಬ ನಿರ್ದೇಶಕ ಈ ಮಟ್ಟಿಗೆ ಗುರುತಿಸಿಕೊಳ್ಳುವುದು ತುಂಬಾನೇ ವಿರಳ. ಇಂಗ್ಲೆಂಡಿನಲ್ಲಿ ಇಪ್ಪತ್ತರ ದಶಕದಲ್ಲೇ ತಮ್ಮ ವೃತ್ತಿಜೀವನ ಆರಂಭಿಸಿದ ಹಿಚ್ಕಾಕ್, ಖ್ಯಾತಿಯ ಉತ್ತುಂಗಕ್ಕೆ ಏರಿದ್ದು ಮಾತ್ರ ಹಾಲಿವುಡ್ಡಿಗೆ ಬಂದ ಮೇಲೆ. ಅವರ ಅತ್ಯುತ್ತಮ ಚಿತ್ರಗಳು 1954ರಿಂದ 1960ರಲ್ಲಿ ಬಂದವು. ಡಯಲ್ ಎಂ ಫಾರ್ ಮರ್ಡರ್, ರೇರ್ ವಿಂಡೋ, ವರ್ಟಿಗೋ, ನಾರ್ತ್ ಬೈ ನಾರ್ತ್ […]

ವಾಸುಕಿ ಕಾಲಂ

ಭೂತಯ್ಯನ ಮಗ ಅಯ್ಯು: ವಾಸುಕಿ ರಾಘವನ್ ಅಂಕಣ

“ಗ್ರಾಮೀಣ ಚಿತ್ರ”ಗಳಲ್ಲಿ ಬರುವ ಕ್ಲೀಷೆಗಳಿಗೆ ಲೆಕ್ಕವಿಲ್ಲ. ಹಸಿರು ಹಸಿರಾಗಿ ಉದ್ದಗಲಕ್ಕೂ ಹರಡಿಕೊಂಡಿರುವ ಗದ್ದೆಗಳು, ಲಂಗ ದಾವಣಿ ಹಾಕಿರೋ ನಾಯಕಿ, ಹೆಗಲ ಮೇಲೆ ಬಿಳೀ ಮೇಕೆಮರಿಯನ್ನು ಎತ್ತಿಕೊಂಡು “ಅಯ್” ಅನ್ನುವ ಮುಖಭಾವ, ಸದಾ ಎಲೆಯಡಿಕೆ ಜಗಿಯುವ ಹುಳುಕಲು ಹಲ್ಲಿನ ಅಜ್ಜಿ, ಆ ಅಜ್ಜಿ ಒಮ್ಮೆಯಾದರೂ “ಬೋ ಪಿರುತಿ” ಅನ್ನುವ ಕೃತಕ ವಾಕ್ಯಪ್ರಯೋಗ, ಹಳ್ಳಿಯವರೆಲ್ಲಾ ಒಳ್ಳೆಯವರು, ಹೊರಗಿಂದ ಬಂದ ಪಟ್ಟಣದವರು ಮಾತ್ರ ಕೆಟ್ಟವರು ಅನ್ನುವ ಧೋರಣೆ ಇತ್ಯಾದಿ ಇತ್ಯಾದಿ. ಈ ಪ್ರಕಾರದಲ್ಲಿ ಬಂದಿರುವ ಲೆಕ್ಕವಿಲ್ಲದಷ್ಟು ಕೆಟ್ಟ ಚಿತ್ರಗಳನ್ನು ನೋಡಿದ್ದ ನನಗೆ, […]

ವಾಸುಕಿ ಕಾಲಂ

“ಬಿಫೋರ್” ಟ್ರೈಲಾಜಿ: ವಾಸುಕಿ ರಾಘವನ್ ಅಂಕಣ

“ಫ್ರಾನ್ಚೈಸೀ” ಚಿತ್ರಗಳಲ್ಲಿ, ಮೊದಲ ಚಿತ್ರದಷ್ಟೇ ಉತ್ತಮವಾಗಿ ನಂತರದ ಚಿತ್ರಗಳು ಬರುವುದು ಬಹಳ ಅಪರೂಪ. ಅದಕ್ಕೆ ಕಾರಣ ಸೀಕ್ವೆಲ್ಲುಗಳನ್ನು ಮಾಡುವ ಹಿಂದಿರುವ ಸಾಮಾನ್ಯ ಮನಸ್ಥಿತಿ – ಮೊದಲ ಚಿತ್ರ ಗೆದ್ದಿತ್ತು, ಆ ಗೆಲುವಿನ ಬೆನ್ನೇರಿ ಇನ್ನೊಂದಷ್ಟು ದುಡ್ಡು ಮಾಡಿಕೊಳ್ಳೋಣ ಅನ್ನುವುದು. ಅದಕ್ಕೆ ಅಪವಾದ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ “ಬಿಫೋರ್” ಟ್ರೈಲಾಜಿ. 1995ರಲ್ಲಿ ಬಂದ “ಬಿಫೋರ್ ಸನ್ರೈಸ್” ಸಾರ್ವಕಾಲಿಕ ಅತ್ಯುತ್ತಮ ರೋಮ್ಯಾನ್ಸ್ ಚಿತ್ರಗಳಲ್ಲಿ ಒಂದು. ಯೂರೋಪಿನ ಟ್ರೈನಿನಲ್ಲಿ  ಪ್ರಯಾಣ ಮಾಡುವಾಗ ಅಮೆರಿಕಾದ ಯಾತ್ರಿಕ ಜೆಸ್ಸಿ ಮತ್ತು ಫ್ರೆಂಚ್ ಯುವತಿ ಸೆಲೀನ್ […]

ವಾಸುಕಿ ಕಾಲಂ

ಥ್ಯಾಂಕ್ಯೂ ಫಾರ್ ಸ್ಮೋಕಿಂಗ್: ವಾಸುಕಿ ರಾಘವನ್ ಅಂಕಣ

ಜನರನ್ನ ನಗಿಸೋದು ಕಷ್ಟ. ಯಾವುದೋ ಒಂದಷ್ಟು ಜೋಕುಗಳನ್ನ ಹೇಳಿ ಒಂದೈದು ನಿಮಿಷ ನಗಿಸಿಬಿಡಬಹುದು. ಆದರೆ ಎರಡು ಮೂರು ಗಂಟೆಗಳ ಚಿತ್ರದುದ್ದಕ್ಕೂ ನಗಿಸುವುದು ಸುಲಭವಲ್ಲ. ಕಾಮಿಡಿ ಚಿತ್ರಗಳ ಒಂದು ವಿಭಾಗ ಸಟೈರ್ ಅಥವಾ ವಿಡಂಬನೆ. ಒಂದು ಗಂಭೀರವಾದ ವಿಷಯ ತೆಗೆದುಕೊಂಡು, ಎಲ್ಲೂ ಸಿಲ್ಲಿ ಅನ್ನಿಸದಂತೆ, ವ್ಯಂಗ್ಯವನ್ನು ಹದವಾಗಿ ಬೆರೆಸಿ, ಹುಳುಕುಗಳನ್ನು ಎತ್ತಿತೋರಿಸುವ ಕೆಲಸ ಇನ್ನೂ ಕಷ್ಟದ್ದು. ವಿಡಂಬನೆ ಅಂದಾಗ ಹೆಚ್ಚು ಕಂಡುಬರುವುದು ರಾಜಕೀಯ, ಮೂಢನಂಬಿಕೆ, ಸಾಮಾಜಿಕ ಸಮಸ್ಯೆಯ ವಿಷಯಗಳ ಬಗ್ಗೆ. “ಡಾರ್ಕ್ ಕಾಮಿಡಿ” (ಕನ್ನಡದಲ್ಲಿ ಇದಕ್ಕೆ ಸಮಾನವಾದ ಪದ […]

ವಾಸುಕಿ ಕಾಲಂ

ಕಿಂಗ್ ಆಫ್ ಕಾಮಿಡಿ: ವಾಸುಕಿ ರಾಘವನ್ ಅಂಕಣ

ಅದ್ಭುತ ನಟರೇ ಹಂಗೆ. ತುಂಬಾ ಸಾಮಾನ್ಯವಾದ ಸಿನಿಮಾದಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸುತ್ತಾರೆ. ಸಾಧಾರಣತೆಯ ಮಧ್ಯೆಯೂ ತಮ್ಮ ಉತ್ಕೃಷ್ಟತೆಯಿಂದ ಎದ್ದು ಕಾಣುತ್ತಾರೆ. ರಾಬರ್ಟ್ ಡಿನಿರೋ ಅಂತಹ ಒಬ್ಬ ಅಪ್ರತಿಮ ಕಲಾವಿದ. “ಕಿಂಗ್ ಆಫ್ ಕಾಮಿಡಿ” ನನ್ನ ಪ್ರಕಾರ ಹೇಳಿಕೊಳ್ಳುವಂತಹ ಚಿತ್ರ ಅಲ್ಲದಿದ್ದರೂ, ಕೇವಲ ಡಿನಿರೋ ನಟನೆಯನ್ನು ಸವಿಯಲು ನಾನು ಎಷ್ಟೋ ಬಾರಿ ಈ ಚಿತ್ರವನ್ನು ನೋಡಿದ್ದೀನಿ. 1983ರಲ್ಲಿ ಬಿಡುಗಡೆಯಾದ ಮಾರ್ಟಿನ್ ಸ್ಕಾರ್ಸೆಸೆ ನಿರ್ದೇಶನದ ಚಿತ್ರ “ಕಿಂಗ್ ಆಫ್ ಕಾಮಿಡಿ”. ಅಭಿಮಾನಿಗಳ ಮನಸ್ಥಿತಿ, ಅವರ ಹುಚ್ಚು, ಅವರ ಅತಿರೇಕಗಳ […]

ವಾಸುಕಿ ಕಾಲಂ

ಪ್ರತಿಭೆಗಿಂತ ಹುಚ್ಚು ದೊಡ್ಡದು: ವಾಸುಕಿ ರಾಘವನ್ ಅಂಕಣ

ಪ್ರತಿಭೆಗೆ ನಮ್ಮ ದೇಶದಲ್ಲಿ ಸಿಗುವಷ್ಟು ಮಾನ್ಯತೆ ಬಹುಷಃ ಪ್ರಪಂಚದ ಯಾವ ದೇಶದಲ್ಲೂ ಸಿಗಲಿಕ್ಕಿಲ್ಲ. ನನ್ನ ಹೇಳಿಕೆ ನೀವು ದೇಶಾಭಿಮಾನದ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದರೆ ಕ್ಷಮಿಸಿ, ನಾನು ಅದನ್ನು ವ್ಯಂಗ್ಯವಾಗಿ ಹೇಳಿದೆ. ನೀವು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾದವರ ಬಗ್ಗೆ ಮಾತಾಡುವಾಗ ಗಮನಿಸಿ, ನಿಮಗೆ ಕೇಳಸಿಗುವುದು ಅವರ “ಟ್ಯಾಲೆಂಟ್” ಅಥವಾ “ಬುದ್ಧಿವಂತಿಕೆ”ಯ ಬಗ್ಗೆ.   “ನೀನು ನಿನಗಿಂತ ಬುದ್ಧಿವಂತರ ಜೊತೆ ಸ್ನೇಹ ಮಾಡಬೇಕು” ಅಂತ ಸದುದ್ದೇಶದಿಂದಲೇ ಹೇಳುವ ಟಿಪಿಕಲ್ ಮಿಡ್ಲ್ ಕ್ಲಾಸ್ ಪೇರೆಂಟ್ಸ್ ಇರಬಹುದು, “ಆಶಾ ಭೋಸ್ಲೆ ಎಂತಹ ಗಿಫ್ಟೆಡ್ […]

ವಾಸುಕಿ ಕಾಲಂ

ಅಂದಾಜ್ ಅಪ್ನಾ ಅಪ್ನಾ:ವಾಸುಕಿ ರಾಘವನ್ ಅಂಕಣ

ಸಿನಿಮಾ ವಿಮರ್ಶಕ ರಾಜಾ ಸೇನ್ ಅವರು ಒಂದು ಆರ್ಟಿಕಲ್ ಅಲ್ಲಿ ಹೀಗೆ ಬರೆದಿದ್ದ ನೆನಪು. ಆಮೀರ್ ಖಾನ್ ಅವರ ಈ ಚಿತ್ರ ನೆನಪಿದೆಯಾ ನಿಮಗೆ? ಇದರಲ್ಲಿ ನಾಯಕಿಯನ್ನು ಅತಿಯಾಗಿ ಇಷ್ಟಪಡುವ ನಾಯಕ, ತಲೆಗೆ ಬಲವಾದ ರಾಡ್ ಇಂದ ಪೆಟ್ಟು ತಿಂದು, ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇದರಿಂದಾಗಿ ಮುಂದೆ ಚಿತ್ರವಿಚಿತ್ರವಾದ ಘಟನೆಗಳು ಜರುಗಿ, ಅವನನ್ನು ಫಜೀತಿಗೆ ಒಡ್ಡುತ್ತವೆ. ಗೊತ್ತಾಯ್ತಾ? ನೀವೂ “ಘಜಿನಿ” ಅಂದು ಬಿಟ್ರಾ? ಛೆ! ಇದೇ ನೋಡಿ, ಈಗಿನ ನೂರು ಕೋಟಿ ಗಳಿಕೆಯ ಸಾಧಾರಣ ಚಿತ್ರಗಳ […]

ವಾಸುಕಿ ಕಾಲಂ

ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್: ವಾಸುಕಿ ರಾಘವನ್ ಅಂಕಣ

  ಆಗಿನ್ನೂ ಅಮೇರಿಕಾದಲ್ಲಿ ವರ್ಣಬೇಧ ಹೆಚ್ಚು ಇದ್ದ ಕಾಲ. ಬಿಳಿಯರು ಮತ್ತು ಕರಿಯರು ಬಸ್ಸುಗಳಲ್ಲಿ ಒಟ್ಟಿಗೆ ಕೂರುವಂತಿರಲಿಲ್ಲ. ಇಬ್ಬರ ನಡುವೆ ಮದುವೆಯಂತೂ ದೂರದ ಮಾತು, ಸುಮಾರು ರಾಜ್ಯಗಳಲ್ಲಿ ಅದು ಶಿಕ್ಷಾರ್ಹ ಅಪರಾಧ ಕೂಡ ಆಗಿತ್ತು. ಅದೇ ಸಮಯದಲ್ಲಿ ಬಿಡುಗಡೆಯಾದ ಸ್ಟಾನ್ಲಿ ಕ್ರೇಮರ್ ನಿರ್ದೇಶನದ “ಗೆಸ್ ಹೂ ಇಸ್ ಕಮಿಂಗ್ ಟು ಡಿನ್ನರ್” ಈ ವರ್ಣಬೇಧ ಮತ್ತು ಜನರಲ್ಲಿರುವ ತಾರತಮ್ಯದ ಬಗೆಗಿನ ಚಿತ್ರಣ ಹೊಂದಿದೆ. ಜೋಯೀ ಮುಕ್ತ ಮನಸ್ಸಿನ ಹದಿಹರೆಯದ ಹುಡುಗಿ. ಪತ್ರಿಕೋದ್ಯಮಿ ತಂದೆ ಮ್ಯಾಟ್ ಮತ್ತು ಅಮ್ಮ […]

ವಾಸುಕಿ ಕಾಲಂ

ಆ ದಿನಗಳು: ವಾಸುಕಿ ರಾಘವನ್ ಅಂಕಣ

  “ಆ ದಿನಗಳು” ಚಿತ್ರದ ಬಜೆಟ್ಟಿನ ಮೂರನೇ ಒಂದು ಭಾಗ ಖರ್ಚಾಗಿದ್ದು ಯಾವುದಕ್ಕೆ ಗೊತ್ತಾ? ಹೀರೋ ಸಂಭಾವನೆಗೆ ಅಲ್ಲ, ಅದ್ಧೂರಿಯಾದ ಸೆಟ್ಟಿಗೆ ಅಲ್ಲ, ವಿದೇಶದಲ್ಲಿ ಚಿತ್ರೀಕರಣ ಮಾಡಲು ಅಲ್ಲ. ಅದು ಖರ್ಚಾಗಿದ್ದು ಚಿತ್ರದಲ್ಲಿ ಇಳಯರಾಜಾ ಅವರ ಹಿನ್ನೆಲೆ ಸಂಗೀತಕ್ಕೆ. “ಆ ದಿನಗಳು” ಅಂದಾಕ್ಷಣ ಕಣ್ಣು ಮುಚ್ಚಿಕೊಂಡರೆ ನನಗೆ ಆ ಚಿತ್ರದ ಟೈಟಲ್ ಸಾಂಗ್ ತಲೆಯಲ್ಲಿ ಬರುತ್ತೆ, ಅದರಲ್ಲೂ ಆರಂಭದಲ್ಲಿ ಬರುವ ಆ ಬಿಟ್. ಇಡೀ ಚಿತ್ರದಲ್ಲಿ ಅಲ್ಲಲ್ಲಿ ಕೇಳಿಬರುವ ಈ ಥೀಮ್ ಮ್ಯೂಸಿಕ್ಕಿನಲ್ಲಿ ಚಿತ್ರದ ಭಾವ ಅಡಗಿದೆ! […]

ವಾಸುಕಿ ಕಾಲಂ

ಗೆಜ್ಜೆಪೂಜೆ: ವಾಸುಕಿ ರಾಘವನ್ ಅಂಕಣ

  ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿರುವ ಬಸುರಿ ಪಿಟೀಲಿನಲ್ಲಿ ವಿಷಾದಗೀತೆ ನುಡಿಸುತ್ತಿರುತ್ತಾಳೆ. ಕೆಳಮಹಡಿಯಲ್ಲಿ ಅವಳ  ಅಮ್ಮ ತಲೆಯ ಮೇಲೆ ಕೈ ಹೊತ್ತುಕೊಂಡು “ಅಯ್ಯೋ ಗಂಡು ಮಗು ಹುಟ್ಟಿಬಿಟ್ಟರೆ ಹೆಂಗಪ್ಪಾ?” ಅಂತ ಚಿಂತಾಕ್ರಾಂತಳಾಗಿ ಕುಳಿತಿರುತ್ತಾಳೆ. ಆಗಿನ ಕಾಲದ ಚಿತ್ರಗಳಲ್ಲಿ ಹೆಣ್ಣುಮಗು ಹುಟ್ಟಿದಾಕ್ಷಣ ಕುಟುಂಬದ ಕೆಲವರಾದರೂ ನಿರಾಶರಾಗುವ, ತಾಯಿ ಸಂತಸಗೊಂಡಿದ್ದರೂ ಸಂಭ್ರಮ ಪಡಲಾಗದೆ ಒದ್ದಾಡುವ ಸನ್ನಿವೇಶಗಳು ಅಪರೂಪವೇನಲ್ಲ. ಆದರೆ ಆಶ್ಚರ್ಯ ಅನ್ನುವಂತೆ ಇಲ್ಲಿನ ಸನ್ನಿವೇಶ ಅದಕ್ಕೆ ತದ್ವಿರುದ್ಧ. ನಂತರ ಹೆಣ್ಣುಮಗು ಚಂದ್ರಾ ಹುಟ್ಟಿದಾಗ ಅದರ ಅಜ್ಜಿ ಸಂಭ್ರಮಿಸುತ್ತಾಳೆ, ತಾಯಿ ಬೇಸರದ […]

ವಾಸುಕಿ ಕಾಲಂ

ಮುಗ್ಧತೆ, ಭೀಕರತೆಯ ನಡುವಿನ ಬೇಲಿ:ವಾಸುಕಿ ರಾಘವನ್ ಅಂಕಣ

ಆರು ಮಿಲಿಯನ್. ಅಂದರೆ ಅರವತ್ತು ಲಕ್ಷ! ಅರವತ್ತು ಲಕ್ಷದಲ್ಲಿ ಎಷ್ಟು ಸೊನ್ನೆ ಎಂದು ಥಟ್ ಅಂತ ಕೇಳಿದರೆ ಒಂದು ಕ್ಷಣ ನೀವೂ ತಡವರಿಸುತ್ತೀರ. ಈ ಸಂಖ್ಯೆಯ ಅಗಾಧತೆ ಗೊತ್ತಾಗಬೇಕಾದರೆ ಅರವತ್ತು ಲಕ್ಷ ಜನರನ್ನು ಊಹಿಸಿಕೊಳ್ಳಿ. ಅದು ಎರಡನೇ ವಿಶ್ವಮಹಾಯುದ್ಧದಲ್ಲಿ ಬರ್ಬರವಾಗಿ ಕೊಲ್ಲಲ್ಪಟ್ಟ ಯಹೂದಿಗಳ ಸಂಖ್ಯೆ! ಒಂದು ಅಣುಬಾಂಬು ಹಾಕಿ ಅಷ್ಟೂ ಜನರನ್ನು ಕೊಂದಿದ್ದರೆ ಅದನ್ನು ಯುದ್ಧಕಾಲದ ವಿವೇಚನಾರಹಿತ ನಿರ್ಧಾರ ಅನ್ಕೊಬೋದಿತ್ತು. ಆದರೆ ವ್ಯವಸ್ಥಿತವಾಗಿ ಯಹೂದಿಗಳ ಮನೆ, ಆಸ್ತಿ ಎಲ್ಲವನ್ನೂ ವಶಪಡಿಸಿಕೊಂಡು, ಅವರನ್ನು ಸ್ಥಳಾಂತರಿಸಿ, ಸರಿಯಾಗಿ ಊಟ ಕೊಡದೇ […]

ವಾಸುಕಿ ಕಾಲಂ

ಮ್ಯಾಗ್ನೋಲಿಯಾ: ವಾಸುಕಿ ರಾಘವನ್ ಅಂಕಣ

“ಮ್ಯಾಗ್ನೋಲಿಯಾ” ನನ್ನ ಅಚ್ಚುಮೆಚ್ಚಿನ ಚಿತ್ರ. ಇದು ಕೇವಲ ಒಂದು ಚಿತ್ರವಲ್ಲ, ಇದೊಂದು ವಿಶೇಷ ಕಲಾಕೃತಿ. ತುಂಬಾ ದಿನದಿಂದ ಇದರ ಬಗ್ಗೆ ಬರೆಯಬೇಕು ಅನ್ನೋ ಆಸೆಯೇನೋ ಇತ್ತು, ಆದರೆ ಈ ಅದ್ಭುತ ಚಿತ್ರದ ಅನುಭವವನ್ನು ಪದಗಳಲ್ಲಿ ಹಿಡಿದಿಡಲು ಧೈರ್ಯ ಬಂದಿರಲಿಲ್ಲ. ಆದರೆ ಯಾಕೋ ಕೆಲವು ದಿನಗಳಿಂದ ಈ ಚಿತ್ರ ಬಹಳ ಕೈ ಹಿಡಿದು ಜಗ್ಗುತ್ತಿದೆ, ಕಾಡುವಿಕೆಯ ಮುಂದೆ ಹಿಂಜರಿಕೆ ಸೋಲ್ತಾ ಇದೆ. ಹೀಗಾಗಿ ಅದರ ಬಗ್ಗೆ ಬರೆಯುವ ಹುಚ್ಚುಸಾಹಸಕ್ಕೆ ಕೈ ಹಾಕಿದೀನಿ. ಇದನ್ನು ಓದುವುದರಿಂದ ನೀವು ಆ ಚಿತ್ರವನ್ನು […]

ವಾಸುಕಿ ಕಾಲಂ

ವ್ಯಕ್ತಿತ್ವಗಳ ಸಂಘರ್ಷದ “ಕ್ರಿಮ್ಸನ್ ಟೈಡ್”:ವಾಸುಕಿ ರಾಘವನ್ ಅಂಕಣ

ಆಕ್ಷನ್ ಚಿತ್ರ ಅಂದ ಮಾತ್ರಕ್ಕೆ ‘ಪಾತ್ರ’ಗಳ ಕಡೆ ನಿರ್ಲಕ್ಷ್ಯ ಹರಿಸುವಂತಿಲ್ಲ. ಹೊಡೆದಾಟದ ಥ್ರಿಲ್ ಕೊಡುತ್ತಲೇ ಕಥೆಯಲ್ಲಿನ ಹಲವು ಪದರಗಳನ್ನು ತೋರಿಸುತ್ತಾ, ಪಾತ್ರಗಳಿಗೆ ತಮ್ಮದೇ ಆದ ಮೆರಗುಗಳನ್ನು ಕೊಡುತ್ತಾ ಹೋದರೆ ಚಿತ್ರಕ್ಕೆ ಹಲವು ಆಯಾಮಗಳು ಸಿಗುತ್ತವೆ. ಆಗ ಮಾತ್ರ ಒಂದು ಆಕ್ಷನ್ ಚಿತ್ರ ‘ಡಿಶೂಂ ಡಿಶೂಂ’ ಚಿತ್ರವನ್ನು ಮೀರಿ ಬೆಳೆಯುತ್ತದೆ. 1995ರ ಟೋನಿ ಸ್ಕಾಟ್ ನಿರ್ದೇಶನದ “ಕ್ರಿಮ್ಸನ್ ಟೈಡ್” ನಮ್ಮನ್ನು ಚಿಂತನೆಗೆ ಹಚ್ಚುವ ಅಂತಹ ಒಂದು ಆಕ್ಷನ್ ಚಿತ್ರ. ಇಡೀ ಚಿತ್ರ ನಡೆಯುವುದು ಒಂದು ಸಬ್ ಮರೀನ್ ಒಳಗೆ. […]

ವಾಸುಕಿ ಕಾಲಂ

ಉಯ್ಯಾಲೆ:ವಾಸುಕಿ ರಾಘವನ್ ಅಂಕಣ

ತುಂಬಾ ದಿನಗಳಿಂದ ಈ ಚಿತ್ರ ನೋಡಬೇಕು ಅನ್ಕೊಂಡಿದ್ದೆ. ಆದರೆ ಅದಕ್ಕೆ ಸಮಯ ಸಿಕ್ಕಿದ್ದು ಹೋದ ವಾರ. ಸಿನಿಮಾದ ಹೆಸರು “ಉಯ್ಯಾಲೆ”. 1964ರಲ್ಲಿ ಬಿಡುಗಡೆಯಾದ ರಾಜಕುಮಾರ್, ಕಲ್ಪನಾ, ಅಶ್ವಥ್ ಅಭಿನಯದ ಈ ಚಿತ್ರದ ನಿರ್ದೇಶಕರು ಎನ್.ಲಕ್ಷ್ಮೀನಾರಾಯಣ. ಆಗಿನ ಕಾಲಕ್ಕಂತೂ ಬಹಳ ವಿಭಿನ್ನವಾದ, ಬೋಲ್ಡ್ ಆದ ಕಥೆಯನ್ನು ಹೊಂದಿದ್ದರಿಂದ ಇದು ಕುತೂಹಲ ಹೆಚ್ಚಿಸಿತ್ತು.   ಅಶ್ವಥ್, ಕಲ್ಪನಾ ತಮ್ಮ ಮುದ್ದು ಮಗಳಿನೊಂದಿಗೆ ವಾಸಿಸುತ್ತಿರುವ ದಂಪತಿಗಳು. ಅಶ್ವಥ್ ಕಾಲೇಜ್ ಪ್ರೊಫೆಸರ್, ಸದಾ ಓದುವುದರಲ್ಲೇ ಮುಳುಗಿಹೋಗಿರುವ ಪುಸ್ತಕದ ಹುಳು. ಅವನಿಗೆ ಬೇರೆ ಇನ್ಯಾವ […]

ವಾಸುಕಿ ಕಾಲಂ

ಆಕ್ಸಿಡೆಂಟ್:ವಾಸುಕಿ ರಾಘವನ್ ಅಂಕಣ

ಶಂಕರ್ ನಾಗ್ ನಿಜಕ್ಕೂ ಸಿನಿಮಾ ವ್ಯಾಕರಣ ಕಲಿತಿದ್ದು ಎಲ್ಲಿ? ಅದು ರಂಗಭೂಮಿಯ ಅನುಭವದಿಂದ ಬಂದ ಸೆನ್ಸಿಬಿಲಿಟಿಯಾ? ಅಥವಾ ಬೇರೆ ದೇಶದ ಚಿತ್ರಗಳನ್ನ ಹೆಚ್ಚಾಗಿ ನೋಡಿ ಆ ಶೈಲಿಯಿಂದ ಪ್ರಭಾವಿತರಾಗಿದ್ರಾ? ನನಗೆ ಗೊತ್ತಿಲ್ಲ! ಆದರೆ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದು ವಿಭಿನ್ನವಾದ ಛಾಪು ಇರುತ್ತದೆ. ಅವರ ನಿರ್ದೇಶನದ “ಆಕ್ಸಿಡೆಂಟ್” ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ಚಿತ್ರದ ಕಥೆ ಬಹಳ ಸರಳ, ಆದರೆ ಅದನ್ನು ಹ್ಯಾಂಡಲ್ ಮಾಡಿರುವ ಶೈಲಿ ಅದ್ಭುತ. ಮಂತ್ರಿ ಧರ್ಮಾಧಿಕಾರಿಯ ಮಗ ದೀಪಕ್ ತನ್ನ ಗೆಳೆಯ ರಾಹುಲ್ ಜೊತೆ […]

ವಾಸುಕಿ ಕಾಲಂ

ಕುಲೆಶೋವ್ ಪ್ರಯೋಗ:ವಾಸುಕಿ ರಾಘವನ್ ಅಂಕಣ

ನನ್ನ ಪ್ರಕಾರ “ಛಾಯಾಗ್ರಹಣ” ಮತ್ತು “ಸಂಕಲನ” ಸಿನಿಮಾವನ್ನು ಬೇರೆಲ್ಲ ಕಲಾಪ್ರಕಾರಗಳಿಗಿಂತ ವಿಭಿನ್ನವಾಗಿಸುತ್ತವೆ. ತೆರೆಯ ಮೇಲೆ ಇಡೀ ಮರುಭೂಮಿಯನ್ನು ಒಮ್ಮೆಲೇ ಸೆರೆಹಿಡಿಯಬಹುದು, ಅಥವಾ ಕಣ್ಣಂಚಿನ ಒಂದೇ ಒಂದು ಹನಿಯನ್ನು ತೋರಿಸಬಹುದು. ಇದು ಸಿನಿಮಾ ಛಾಯಾಗ್ರಹಣದ ಶಕ್ತಿ! ಸಿನಿಮಾ ಸಂಕಲನ ಕೂಡ ಅಷ್ಟೇ, ಹಲವಾರು ಶಾಟ್ ಗಳನ್ನು ಒಟ್ಟುಗೂಡಿಸಿದಾಗ, ಸೀನಿಗೆ ಒಂದು ಅರ್ಥ, ಸಿನಿಮಾಗೆ ಒಂದು ದಿಕ್ಕು ಸಿಗುತ್ತದೆ. ನನಗೆ ಸಿನಿಮಾ ಸಂಕಲನದ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ನಿಜಕ್ಕೂ ಸಂಕಲನ ಹೇಗೆ ಮಾಡುತ್ತಾರೆ ಅಂತ ಒಂದು ಸಲವೂ ನೋಡಿಲ್ಲ. ಗೊತ್ತಿಲ್ಲದಿರುವಾಗ […]

ವಾಸುಕಿ ಕಾಲಂ

ಗೌರಿ ಗಣೇಶ:ವಾಸುಕಿ ರಾಘವನ್

ನಿಜಕ್ಕೂ ಒಳ್ಳೆಯ ಸಿನಿಮಾ ಅಂದರೆ ಯಾವುದು? ಅದನ್ನು ಅಳೆಯಲು ಬೇಕಿರುವ ಮಾನದಂಡಗಳು ಯಾವುವು? ಈ ಪ್ರಶ್ನೆಗೆ ನಿಖರವಾದ ಉತ್ತರ ನನ್ನಲ್ಲಿಲ್ಲ.  ಆದರೆ ಒಂದು ಮಾತ್ರ ಹೇಳಬಲ್ಲೆ. ನೀವು ನೋಡಿದ ಒಂದು ಚಿತ್ರ ಎಷ್ಟೋ ವರ್ಷಗಳಾದ ಮೇಲೂ ನಿಮ್ಮ ನೆನಪಿನಲ್ಲಿ ಉಳಿದಿದದ್ದರೆ, ಅದು ಒಳ್ಳೆಯ ಚಿತ್ರ! ನಾನು ಗೆಳೆಯ ಬೆಳ್ಳೂರ್ ಮನೆಗೆ ಮೊದಲ ಸಲ ಹೋಗ್ತಿದ್ದೆ. ಮನೆಯ ವಿಳಾಸ, ಡೈರೆಕ್ಷನ್ ಎಲ್ಲಾ ಕೇಳಿಕೊಂಡು ಸರಿಯಾಗಿ ಬಂದು ತಲುಪಿದೆ. ಅಪಾರ್ಟ್ ಮೆಂಟ್ ನಂಬರ್ ಏನು ಅಂತ ಕೇಳಿದಾಗ “ನೂರಾ ಎರಡು” […]

ವಾಸುಕಿ ಕಾಲಂ

ಮೋಟಾರ್ ಸೈಕಲ್ ಡೈರೀಸ್: ವಾಸುಕಿ ರಾಘವನ್

ಚೆ ಗೆವಾರ ನಿಮಗೆಲ್ಲರಿಗೂ ಗೊತ್ತಿರಬಹುದು. ಚರಿತ್ರೆಯನ್ನು ಅಷ್ಟಾಗಿ ಓದಿಲ್ಲದವರಿಗೂ ಟಿ-ಶರ್ಟ್ ಮೇಲಿನ “ಆ ಮುಖ” ಅಂತಾದ್ರೂ  ಪರಿಚಯ ಇದ್ದೇ ಇರುತ್ತೆ. ನನಗೆ ಅವನ ಸಿದ್ಧಾಂತಗಳು, ನಿಲುವುಗಳು, ಆದರ್ಶಗಳ ಬಗ್ಗೆ ಆಳವಾದ ಅರಿವು ಇಲ್ಲ, ಆದರೂ ಅವನ ಜೀವನವನ್ನು ಬದಲಿಸಿದ ಕಥೆ ಇರುವ ಈ ಚಿತ್ರ ಬಹಳ ಇಷ್ಟವಾಯಿತು. ಆ ಚಿತ್ರವೇ 2004ರಲ್ಲಿ ಬಂದ ಅದೇ ಹೆಸರಿನ ಆತ್ಮಕಥನದ ಪುಸ್ತಕವನ್ನು ಆಧರಿಸಿದ “ಮೋಟಾರ್ ಸೈಕಲ್ ಡೈರೀಸ್”.   ಎರ್ನೆಸ್ಟೋ ‘ಚೆ’ ಗೆವಾರ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ನಮ್ಮಂಥ ಒಬ್ಬ […]

ವಾಸುಕಿ ಕಾಲಂ

ಪ್ರೇಮ ವೈಫಲ್ಯ: ವಾಸುಕಿ ರಾಘವನ್

ಎರಡು ಕನಸು, ಬಂಧನ, ಪಲ್ಲವಿ ಅನುಪಲ್ಲವಿ, ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ, ಮಾನಸ ಸರೋವರ…ಹಾಗೂ “ಏ” ಚಿತ್ರಗಳಲ್ಲಿ ಮುಖ್ಯವಾಗಿ ಏನು ಕಾಮನ್ ಆಗಿದೆ? ಹೌದು, “ಪ್ರೇಮ ವೈಫಲ್ಯ”, ಅದರಲ್ಲೂ ಹೀರೋ ವೈಫಲ್ಯವನ್ನು ಅನುಭವಿಸೋದು! ಆದರೆ “ಏ” ಚಿತ್ರಕ್ಕೂ ಬೇರೆ ಚಿತ್ರಗಳಿಗೂ ಒಂದು ಪ್ರಮುಖ ವ್ಯತ್ಯಾಸ ಏನು ಗೊತ್ತಾ? ಈ ಸನ್ನಿವೇಶವನ್ನು ಹೀರೋ ಹ್ಯಾಂಡಲ್ ಮಾಡಿದ ರೀತಿ. “ಎರಡು ಕನಸು” ಚಿತ್ರದಲ್ಲಿ ತನ್ನ ಹಳೆಯ ಪ್ರೇಯಸಿಯನ್ನು ಮರೆಯಲಾಗದ ನಾಯಕ, ಹೆಂಡತಿಯನ್ನು ಕಡೆಗಣಿಸುತ್ತಾನೆ. “ಬಂಧನ” ಚಿತ್ರದಲ್ಲಿ ತಾನು […]

ವಾಸುಕಿ ಕಾಲಂ

ಆಸೆಗಳು ನನ್ನವು ಸಾವಿರಾರು: ವಾಸುಕಿ ರಾಘವನ್

ಜವಹರಲಾಲ್ ನೆಹರು ಅವರ “ಟ್ರಿಸ್ಟ್ ವಿತ್ ಡೆಸ್ಟಿನಿ” ನಮ್ಮ ದೇಶದ ಅತ್ಯಂತ ಪ್ರಸಿದ್ಧ ಭಾಷಣ ಅನ್ಸುತ್ತೆ. ಸುಧೀರ್ ಮಿಶ್ರಾ ಅವರ “ಹಜಾರೋ ಖ್ವಾಹಿಷೇ ಏಸೀ” ಚಿತ್ರ ಶುರುವಾಗುವುದೇ ಈ ಭಾಷಣದ ಧ್ವನಿ ಮುದ್ರಿಕೆಯೊಂದಿಗೆ. “ವಿಧಿಯೊಂದಿಗೆ ನಮ್ಮ ಒಪ್ಪಂದ ಯಾವಾಗಲೋ ಆಗಿದೆ, ಅದರೆಡೆಗೆ ಮುನ್ನುಗ್ಗುವ ಪಣವನ್ನು ಇಂದು ತೊಡೋಣ. ಮಧ್ಯರಾತ್ರಿಯ ಈ ಹೊತ್ತಿನಲ್ಲಿ, ಇಡೀ ಪ್ರಪಂಚವೇ ಮಲಗಿರುವಾಗ, ಭಾರತ ಸ್ವಾತ್ರಂತ್ರ್ಯದೆಡೆಗೆ, ಬೆಳಕಿನೆಡೆಗೆ ಸಾಗುತ್ತದೆ”. ದಾಸ್ಯದಲ್ಲಿ ಸಿಕ್ಕಿ ನರಳುತ್ತಿದ್ದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಇಂಥ ಒಂದು ಭಾಷಣ ಕೇಳಿ […]

ವಾಸುಕಿ ಕಾಲಂ

ಸಿನಿಮಾ ಪ್ಯಾರಡಿಸೋ: ವಾಸುಕಿ ರಾಘವನ್

ಬಾಲ್ಯದಲ್ಲಿ ಸಿನಿಮಾ ನೋಡುವಾಗಿನ ಅನುಭವವೇ ಬೇರೆ ಇತ್ತು. ನನ್ನ ಬೆರಗುಗಣ್ಣಿಗೆ ಸಾಧಾರಣ ಚಿತ್ರಗಳೂ ಅದೆಷ್ಟು ಅಚ್ಚರಿ ಮಾಡಿಸುತ್ತಿದ್ದವು. ಈಗ ಬಹಳ ಸಿನಿಮಾ ನೋಡಿರುವುದರಿಂದಲೋ ಏನೋ, ಸಿನಿಮಾಪ್ರೇಮಿಯೊಡನೆ ಒಬ್ಬ ಸಿನಿಕನೂ ನನ್ನಲ್ಲಿ ಹುಟ್ಟಿದ್ದಾನೆ. ಈಗ ಬೇಕೆಂದರೂ ಆ ಮುಗ್ಧ ಮನಸ್ಥಿತಿ ಸಿಗುವುದಿಲ್ಲ. ಹಾಗಾಗಿ ಹತ್ತರಲ್ಲಿ ಒಂಭತ್ತು ಚಿತ್ರಗಳು ನಿರಾಶೆ ಮೂಡಿಸುತ್ತವೆ. ಆದರೆ ಆ ಒಂದು ಚಿತ್ರ ಇಷ್ಟ ಆಗುತ್ತೆ ನೋಡಿ, ಆ ಖುಷಿಯ ತೀವ್ರತೆ ಬೇರೆಯವರಿಗಿಂತ ಹೆಚ್ಚಾಗಿ ಅನುಭವಿಸುತ್ತೇನೆ! ಈಗಿನ ವಿಮರ್ಶಾತ್ಮಕ ಮನಸ್ಥಿಯಲ್ಲೂ ಮೆಚ್ಚಿಸುವ ಚಿತ್ರಗಳು ಸಾಕಷ್ಟಿವೆ, ಆದರೇ […]