ಕೋತಿಗಳು ಸಾರ್ ಕೋತಿಗಳು: ಎಂ. ಎಸ್. ನಾರಾಯಣ.
ಕೆಲವು ನಿಜಕ್ಕೂ ಅದ್ಭುತವಾದ ದೃಷ್ಟಾಂತಗಳಿವೆ. ಬಹುಶಃ ಇವು ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹಸ್ತಾಂತರಗೊಂಡಿರಬಹುದೆಂದು ಭಾವಿಸುತ್ತೇನೆ. ಮನುಕುಲದ ಒಟ್ಟಾರೆ ವಿವೇಕವನ್ನು ಒಳಗೊಂಡಿರುವ ಈ ದೃಷ್ಟಾಂತಗಳಿಗೆ ಜನರನ್ನು ಸ್ಫೂರ್ತಿಸಿಂಚನದಲ್ಲಿ ತೋಯಿಸಿ ಧನಾತ್ಮಕವಾಗಿ ಪ್ರಚೋದಿಸುವ ಅಗಾಧವಾದ ಶಕ್ತಿಯಿರುವುದು ಸುಳ್ಳಲ್ಲ. ಈ ಅಂಕಣದ ಮೂಲಕ ಅಂತಹ ಒಂದೆರಡು ದೃಷ್ಟಾಂತಗಳನ್ನು ಕನ್ನಡದ ಓದುಗರೊಂದಿಗೆ ಹಂಚಿಕೊಳ್ಳಲು ಸಂತಸವಾಗಿದೆ. ಇಲ್ಲಿ ಚರ್ಚಿಸಲಾಗಿರುವ ಪರಿಕಲ್ಪನೆಗಳು ವಿಶೇಷವಾಗಿ ನಮ್ಮ ಯುವ ಜನತೆಗೆ, ತಮ್ಮ ವೃತ್ತಿಜೀವನದ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲು ಮಾರ್ಗದರ್ಶನ ಮಾಡುವ ದಾರಿದೀಪವಾಗಬಹುದು. ಭಾರತದಲ್ಲಿ ಕೋತಿಗಳನ್ನು ಹಿಡಿಯುವ ಸ್ವಾರಸ್ಯಕರವಾದ ಪ್ರಾಚೀನ … Read more