ಓಡಿ ಹೋಗುವ ಮುನ್ನ ಓದಿ ಹೋಗಿ: ಪ್ರವೀಣ್ ಕುಲಕರ್ಣಿ

ಹಲೋ ಹಲೋ ಥೂ ಈ ಹುಡುಗರು ಸರಿಯಾದ ಟೈಮ್ ಗೆ ಬರೋದು ಇಲ್ಲ ಫೋನ್ ಎತ್ತೋದು ಇಲ್ಲ ಹಲೋ …. ಹಾಂ ಹ..ಲೊ ..ಇನ್ನೂ ಎದ್ದಿಲ್ವ ದಂಡ ಪಿಂಡ ನೀನು..? ಇಲ್ಲಿ ನನಗೆ ಒಂದೊಂದು ನಿಮಿಷ ಉಸಿರು ಕಟ್ತಾ ಇದೆ ಏಳೋ ಬೇಗ .. ಅಯ್ಯೋ ಎದ್ದೆ ತಡಿಯೇ… ಮಾತಾಡಿದ ನಿಮ್ಮ ಅಮ್ಮ ಅಪ್ಪನ ಹತ್ತಿರ ಏನಂತೆ ? ಮರ್ಯಾದೆಯಾಗಿ ಮದುವೆ ಮಾಡಿಕೊಟ್ಟು ದೊಡ್ಡವರು ಅನ್ನಿಸಿಕೊಳ್ತಾರೋ  ಇಲ್ವಾ ಫಿಲ್ಮಲ್ಲಿ ತೋರಿಸೋ ಹಾಗೆ ಇಲ್ಲ ಆಗಲ್ಲ ಅಂದ್ಕೊಂಡು ತಲೆ ತಿಂತಾರಾ ? ನಾನು ಗೊತ್ತಲ್ವಾ ತಲೆ ಕೆಟ್ಟರೆ ….. ಅಯ್ಯೋ ಅವರಿಗೆ  ಅದೆಲ್ಲಾ ಅರ್ಥ ಆಗಲ್ಲಾ  ಹೋಗಲ್ಲ ನೋಡು ಇವತ್ತು ರಾತ್ರಿ ನೀನು ಏನು ಮಾಡ್ತಿಯೋ  ಗೊತ್ತಿಲ್ಲ ನಾವಿಬ್ರು ಎಲ್ಲಿಗಾದ್ರೂ ಓಡಿಹೊಗ್ಬಿಡೋಣ…. ನೀನು ಆಗಲ್ಲಾ ಅದು ಹಾಗೆ ಹೀಗೆ ಅಂತ ಏನಾದ್ರೂ ಹೇಳೋದಿದ್ರೆ ಈಗಲೇ ಹೇಳು ನಾನು ಕೆರೆನೋ ಭಾವಿನೋ ನೋಡ್ಕೋತೀನಿ.. ಅಮ್ಮ ಬಂದ್ರು …. ನಾ ಫೋನ್ ಇಡ್ತಾ ಇದ್ದೀನಿ ಬಾಯ್ ಲವ ಯೂ ಉಮ್ಮಾ….

ಇಂದು ರಾತ್ರಿ ಅವರ ಅಮ್ಮ ಅಪ್ಪನ ಮನೆ ಬಿಟ್ಟು ತನ್ನ ಸೊ ಕಾಲ್ಡ್ ಇನಿಯನ ಜೊತೆಗೆ ಮುಂದಿನ ದಿನಗಳನ್ನು ಕಳೆಯಲು ತಯಾರಾಗುತ್ತಿರುವ ಮಗಳೊಬ್ಬಳು ತನ್ನವನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪರಿ ಇದು.ಇನ್ನೂ ಆ ಇನಿಯನ ಮಾತುಗಳನ್ನು ಕೇಳಿದಿರಲ್ಲ ಅವನಿಗೆ ತಲೆ ಕೆಟ್ಟರೆ ಅಷ್ಟೇ ಇವತ್ತು ಇವಳ ಅಪ್ಪ ಅಮ್ಮನ್ನ ಒಂದು ಕೈ

ನೋಡ್ಕೋತಾನೆ ನಾಳೆ ಇವಳನ್ನು ಒಂದು ಕೈ ನೋಡ್ಕೋತಾನೆ.. ಆದರೆ ಹದಿನಾರನೇ ವಯಸ್ಸಿನಲ್ಲೇ ಪ್ರೀತಿಯಲ್ಲಿ ತೇಲಾಡುತ್ತಿರುವ ಹುಡುಗಿಗೆ ಇದ್ಯಾವುದು ಗೊತ್ತಿಲ್ಲ. ಇವರ ಪ್ರೀತಿಯ ಬಗ್ಗೆ ಇವಳ  ಅಪ್ಪ ಅಮ್ಮನಿಗೆ ಆಗಲೇ ಗೊತ್ತಾಗಿರುತ್ತದೆ.ಮಗಳಿಗೆ ತಿಳಿಹೇಳಲು ಸಾಕಷ್ಟು ಪ್ರಯತ್ನವನ್ನೂ ಮಾಡಿರುತ್ತಾರೆ.ಆದರೆ ಅದ್ಯಾವುದು ಇವರ ಪ್ರೀತಿಯ ಮುಂದೆ ನಡೆಯುವುದಿಲ್ಲ ಎಂದು ತಿಳಿದು ಇನ್ನೂ ತನ್ನ ಮಗಳು ಅವನ ಜೊತೆ ಹೋಗೆ ಹೋಗುತ್ತಾಳೆ ಎಂದು ಗೊತ್ತಾಗಿ ಅವಳ ಅಪ್ಪ ಪತ್ರವೊಂದನ್ನು ಬರಿತಾರೆ.. ಅದೇನು ನೀವೇ ಓದಿ…

ಪ್ರೀತಿಯ ಮಗಳೇ,

ಅಂದು ನೀನು ಹುಟ್ಟಿ ೨ ನಿಮಿಷಗಳಾಗಿತ್ತು ಆಗಲೇ ನೀನು ಕಣ್ಣು ತೆರೆದು ಎಲ್ಲರನ್ನು ನೋಡುತಿದ್ದೆ. ನರ್ಸಮ್ಮ ಹೇಳಿದ್ರು ತುಂಬಾ ಚೂಟಿರೀ ನಿಮ್ಮ ಮಗಳು ಹುಟ್ತಾನೇ ಸುತ್ತಮುತ್ತ ಎಲ್ಲರನ್ನು ನೋಡ್ತಾಳೆ ನೋಡಿ ಅಂತಿದ್ರು.ನಾನು ನಿನ್ನಮ್ಮನ ಕಡೆ ನೋಡ್ತಾ ಇದ್ದೆ…ನಿನಗಾಗ ೫ ತಿಂಗಳು.. ನೀನು ಅಮ್ಮ ಸೆರೆಲಾಕ್ ತಿನ್ಸೋವಾಗ ಅಳ್ತಾ ಇದ್ದೆ ನಾನು ನೋಡೋಣ ಅಂತ ಕಂಪ್ಯೂಟರ್  ಮುಂದೆ ನಿನ್ನ ಕರೆದುಕೊಂಡು ಹೋಗಿ ಇಂಗ್ಲಿಷ್ ಪದ್ಯಗಳನ್ನು ತೋರಿಸ್ತಾ ಇದ್ದೆ ನೀನು ಖುಷಿಯಿಂದ ಉಳಿದ ಸೆರೆಲಾಕ್ ಸದ್ದುಮಾಡದೆ ತಿಂದು ಬಿಟ್ಟೆ ಓರಗೆಯವರು ನೋಡಿ ಹೇಳಿದರು ಅಯ್ಯೋ ಏನ್ರಿ ಇಷ್ಟು ಫಾಸ್ಟಾಗಿದ್ದಾಳೆ ನಿಮ್ಮ ಮಗಳು ತುಂಬಾ ಲಕ್ಕಿ ನೀವು ಅಂತ..ನಾನು ನಿನ್ನಮ್ಮನ ಕಡೆನೆ ನೋಡ್ತಾ ಇದ್ದೆ.ನರ್ಸರಿ ಸೇರಿಸೋ ಹೊತ್ತು ನಿನಗಾವಾಗ.. ಆ ಶಾಲೆಯವರು ಅದೇನು ಟೆಸ್ಟ್ ಮಾಡ್ತೀನಿ ಅಂತ ನಿನಗೆ ಇಂಗ್ಲಿಷ್ ಅಲ್ಲಿ ಮಾತಾಡಿದರು ನೀನು ಎಲ್ಲದಕ್ಕೂ ಸರಿಯಾಗಿ ಮಾತಾಡಿದ್ದು ನೋಡಿ ಇವಳು ತುಂಬಾ ಜಾಣೆ ಈ ವಯಸ್ಸಲ್ಲೇ ಎಷ್ಟು ಚೆನ್ನಾಗಿ ಇಂಗ್ಲಿಷ್  ಮಾತಾಡ್ತಾಳೆ ಅಂತ ನಮ್ಮ ಬೆನ್ನು ತಟ್ಟಿದರು.ನಾನು ಆಗಲು ನಿನ್ನಮ್ಮನ ಕಡೆನೆ ನೋಡ್ತಾ ಇದ್ದೆ.ನೀನು ಹುಟ್ಟಿದಾಗಿನಿಂದ ಇದೆ ರೀತಿ ಎಲ್ಲರೂ ನಿನ್ನ ತುಂಬಾ ಚೂಟಿ ಅಂತಾನೋ ಅಥವಾ ತುಂಬಾ ಫಾಸ್ಟ್ ಅಂತಾನೋ ಹೊಗಳ್ತಾನೆ ಇದ್ದರು.ನಿನ್ನ ಪ್ರತಿ ಹೊಗಳಿಕೆಯ ರೂವಾರಿ ನಾನೇ ಎಂದು ನಾನು ನಿನ್ನಮ್ಮನನ್ನೇ ನೋಡುತಿದ್ದೆ ಅವಳು ಕಣ್ಣಲ್ಲೇ ಇಲ್ಲಾ ನಾನು ಅಂತಿದ್ಳು.ಕೊನೆಗೆ ನಾನು ನಿನ್ನಮ್ಮ ಒಬರನ್ನೊಬ್ಬರು ನೋಡ್ಕೊಂಡು ಖುಷಿ ಪಡ್ಕೊಂಡು ಕಣ್ಣಿರು ಸುರಿಸ್ತಿದ್ವಿ.ನಿನಗೆ ಏನು ಇಷ್ಟ ,ಏನು ಕೊಟ್ಟರೆ ನೀನು ಖುಷಿ ಆಗ್ತಿಯ,ಯಾವಾಗ ನೀನು ನಗ್ತಿಯಾ,ಯಾವಾಗ ಅಳ್ತಿಯಾ ಅನ್ನೋದು ನಮಗೆ ತುಂಬಾ ಚೆನ್ನಾಗಿ ಅರ್ಥ ಆಗಿತ್ತು.ಆದ್ದರಿಂದ ನೀನು ಬೇಡುವ ಮೊದಲೇ ಅಥವಾ ಬಯಸುವ ಮೊದಲೇ ನಿನ್ನ  ಮನದ ಎಲ್ಲಾ ಆಸೆಗಳನ್ನ ಪೂರೈಸ್ತಾ ಇದ್ವಿ.ಇದು ಬರಬರುತ್ತ ನಿನಗೂ ಗೊತ್ತಾಯ್ತು.ನೀನು ನಮ್ಮಂತೆಯೇ ನಡೀತಾ ಇದ್ದೆ.

ನಾನಿಂದು ಇದರ ಬಗ್ಗೆ ಏಕೆ ಹೇಳ್ತಾ ಇದ್ದೀನಿ ಗೊತ್ತಾ ಪುಟ್ಟ ಕಳೆದ ಹಲವು ದಿನಗಳಿಂದ ನೀನು ಒಳಗೊಳಗೇ ಅನುಭವಿಸುತ್ತಿರುವ ನೋವು ನಿನ್ನ ಹಡೆದ ನಮಗಿಬ್ಬರಿಗೆ ಗೊತ್ತಾಗದೆ ಇಲ್ಲಾ.ನೀನಿಂದು ನಮಗೆ ಬಿಟ್ಟು ನಿನ್ನವನ ಜೊತೆ ಹೋಗ್ತಾ ಇದಿಯಾ ಎನ್ನುವುದು ಬೆಳಿಗ್ಗೆ ಇಂದ ಸುರಿಸುತ್ತಿರುವ ನಿನ್ನ ತಾಯಿಯ ಕಣ್ಣಿರು ಹಾಗು ಅವಳು ಒಂಬತ್ತು ತಿಂಗಳ ನೋವು ಇವತ್ತು ಮತ್ತೆ ಮರುಕಳಿಸಿತೇನೋ ಎನ್ನುವಷ್ಟು ಪಡುತ್ತಿರುವ ಸಂಕಟ,ನೋವು ಅರಚಿ ಅರಚಿ ಹೇಳ್ತಾ ಇದೆ.

ಏನಾಯ್ತೋ ಗೊತ್ತಿಲ್ಲಾ ಯಾಕೋ ಇಂದು ಎಲ್ಲಾ ಬದಲಾಗಿದೆ.ನಮ್ಮ ಯಾವ ಮಾತು ನಿನಗೆ ಬೇಕಾಗಿಲ್ಲ.ಮನೆಯೇ ನಿನಗೆ ಸೆರೆಮನೆಯಾಗಿದೆ ಎನ್ನುವೆ.೧೬ ವರುಷಗಳಿಂದ ನಿನ್ನ ಗೆಳತಿಯಾಗಿದ್ದ ನಿನ್ನ ತಾಯಿ ನಿನಗೆ ಇಂದು ಶತ್ರುವಾಗಿ ನಿನ್ನ ಸರ್ವಸ್ವವೇ ಆಗಿದ್ದ ನಾನು ನಿನಗೆ ಹಿಟ್ಲರ್ ತರಹ ಕಾಣ್ತಾ ಇದ್ದಿವಿ.ಮಾತು ಕೂಡ ಬಾರದ ವಯಸಲ್ಲಿ ನಿನ್ನ ಅಳುವಿನ ಮೂಲಕವೇ ನಿನಗೆ ಏನಾಗಿದೆ ಎಂದು ಹೇಳುತಿದ್ದ ಅಮ್ಮನಿಗೆ ನೀನು ದಾರಿ ತಪ್ಪಿದ್ದು ಗೊತ್ತಾಗಲ್ವಾ ಮಗಳೇ. ಅಪ್ಪನಾಗಿ ನಿನಗೆ ಬುದ್ಧಿ ಹೇಳಿದೆ ಜೋರು ಮಾಡಿದೆ,ಆದರೂ ಮೊಂಡು ಬಿಡದ ನಿನಗೆ ಬಾರಿಸಿಯು ನೋಡಿದೆ.ಆದರೆ ನೀನು ನಮ್ಮವಳಾಗುವುದಿಲ್ಲ ಎಂಬುವುದು ಅವತ್ತೇ ಗೊತ್ತಾಗಿ ಹೋಗಿತ್ತು.ನೋಡು ಮಗಳೇ ನಿನಗೆ ಇವಾಗ ೧೬ ನಿನ್ನ ಹುಡುಗನಿಗೆ ಇನ್ನೂ ೧೭.ನಿಮಗೆ ಇದು ಇನ್ನೂ ಜಗತ್ತು ನೋಡುವ ಸಮಯ. ಮಗಳೇ  ನೀವಿಬ್ಬರು ಅಂದುಕೊಂಡಿರುವ ಈ ಸಂಭಂದ ಪ್ರೀತಿಯಲ್ಲ ನಿಮಗಿನ್ನೂ ಅದರ ಆಳ ತಿಳಿಯುವಷ್ಟು ವಯಸ್ಸಾಗಿಲ್ಲ.ಆಕರ್ಷಣೆಯ ತಳಹದಿಯ ಮೇಲೆ ನೀವು ಕಟ್ಟಿಕೊಳ್ಳಬೇಕು ಎನ್ನುತ್ತಿರುವ ಈ ಪ್ರೀತಿಯ ಸೌಧದ ಆಯಸ್ಸು ಜಾಸ್ತಿ ಇರುವುದಿಲ್ಲ. ಆದ್ದರಿಂದಲೇ ನಾವು ಇದನ್ನ ಬೇಡ ಎನ್ನುತಿದ್ದೇವೆ ಹೊರತು ನಿನ್ನ ಖುಷಿಗೆ ನಾವು ಪ್ರಾಣವನ್ನೇ ಕೊಡಬಲ್ಲೆವು.

ನೀನು ಹೋಗಲೇಬೇಕು ಎಂದು ನಿರ್ಧಾರ ಮಾಡಿದ್ದರಿಂದ ಇಲ್ಲಿಯವರೆಗೂ ನಿನಗೆ ಹೇಳದ ಹಲವು ಮುಖ್ಯ ವಿಷಯಗಳನ್ನು ಈ ಪತ್ರದ ಮೂಲಕ ಹೇಳುತ್ತಿರುವೆನು.ಮುಂದೆ ನಿನಗೆ ಈ ನಿನ್ನ ಪ್ರೀತಿ ಯಾವುದೇ ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದಲ್ಲಿ ಎದೆಗುಂದಬೇಡ,ಇನ್ನು ನನಗ್ಯಾರು ಎಂದು ಯೋಚಿಸಬೇಡ.ನಿನ್ನ ಹೆಸರಿನಲ್ಲಿ ನಾವುಗಳು ಒಂದಿಷ್ಟು ಹಣ,ಒಡವೇಗಳನ್ನು ನಮ್ಮ ಫ್ಯಾಮಿಲಿ ಬ್ಯಾಂಕಲ್ಲಿ ಇಟ್ಟಿರುತ್ತೇವೆ.ಅದು ನಿನಗೆ ಸಕಾಲದಲ್ಲಿ ನೆರವಾಗುವುದೆಂದು ನಂಬಿರುತ್ತೇನೆ.ನಿನ್ನ ಭವಿಷ್ಯದಲ್ಲಿ ಏನಾದರೂ ಗೊಂದಲವುಂಟಾಗಿ ನಿಲ್ಲಲು ನೆಲೆಯಿಲ್ಲದಿದ್ದಲ್ಲಿ ದಿಗಿಲುಗೊಳ್ಳಬೇಡ ನೀನು ಬಿಟ್ಟು ಹೋದ ಮನೆಯನ್ನ ನಿನ್ನ ಹೆಸರಿಗೆ ಇಂದೇ ಬರೆದಿದ್ದೇನೆ.ಮನೆ ಪತ್ರಗಳಿಗಾಗಿ ನಮ್ಮ ವಕಿಲರೊಂದಿಗೆ ಮಾತನಾಡು. ಅಂದ ಹಾಗೆ ಮಗಳೇ ನಿಮ್ಮ ತಾಯಿಯ ಡಯಾಬಿಟಿಸ್ ಮಾತ್ರೆಗಳು ಎಲ್ಲಿವೆ ಅವುಗಳನ್ನು ಯಾವಾಗ ಕೊಡಬೇಕು ಎನ್ನುವುದನ್ನು ತಿಳಿಸಲು ಮರೆಯಬೇಡ.ಏಕೆಂದರೆ ಇಲ್ಲಿಯವರೆಗೋ ಅವೆಲ್ಲವನ್ನು ನೀನೆ ಕೊಡ್ತಾ ಇದ್ದೆ ನೀನು ಹೋದ ಮೇಲೆ ಅವಳಿಗೆ ಈ ಜಗತ್ತಿನಲ್ಲಿ ನನ್ನ ಬಿಟ್ಟರೆ ಯಾರು ಇಲ್ಲಾ.ಮಾತ್ರೆಗಳ ಏರುಪೆರಿಕೆ ಇಂದಾಗಿ ಅವಳನ್ನೂ ಕಳೆದುಕೊಳ್ಳುವಂತೆ ನೀನು ಮಾಡಲಾರೆ ಎಂದುಕೊಂಡಿರುವೆ.ನಮ್ಮ ಕಾಳಜಿ ಮಾಡಬೇಡ.ಮಕ್ಕಳು ಬಿಟ್ಟು ಹೋದಂತಹ ನಮ್ಮಂಥ ಅಪ್ಪ ಅಮ್ಮಂದಿರಿಗೆ ಅಲ್ಲಲ್ಲಿ ದೇವರು ಅನಾಥ ಮಕ್ಕಳನ್ನು ಸೃಷ್ಟಿ ಮಾಡಿರುತ್ತಾನೆ ಅವರು ಕಟ್ಟಿರುವಂಥ ಯಾವುದೋ ಒಂದು ವೃದ್ಧಾಶ್ರಮದಲ್ಲಿ ನಾವಿರುತ್ತೆವೆ. ನೀನು ಹುಟ್ಟಿ ಆಡಿ ಬೆಳೆದಂತಹ ಮನೆಯಲ್ಲಿ ನೀನಿಲ್ಲದೆ ನಮ್ಮ ಕಾಲುಗಳು ನಿಲ್ಲುವುದಿಲ್ಲ.

ನಿನಗೆ ಇವೆಲ್ಲವನ್ನೂ ಸಮಕ್ಷಮವಾಗಿ ಕೂಡಿಸಿಕೊಂಡು ಹೇಳಲು ಆ ದೇವರು ನಮಗೆ ಮಾತನಾಡುವ ಹಾಗು ಕೇಳಿಸಿಕೊಳ್ಳುವ ಶಕ್ತಿ ಕೊಟ್ಟಿಲ್ಲವಾದ್ದರಿಂದ (ಇಬ್ಬರೂ ಮೂಕ ಹಾಗು ಕಿವುಡರಾಗಿರುತ್ತಾರೆ) ಪತ್ರದ ಮೂಲಕ ನಮ್ಮ ಮನದ ಭಾವನೆಗಳನ್ನು ಬರೆದಿಟ್ಟಿದ್ದೇವೆ.ಭಾರವಾದ ಮನದಿಂದ ಕಟುವಾಗಿ ಕೊನೆಗೆ ಹೇಳುವುದೊಂದೇ ಮಗಳೇ… ಈ ಪತ್ರವನ್ನಾದರೂ ನಮ್ಮ ಮನಸನ್ನು ಮಡಚಿ ಬುಟ್ಟಿಗೆ ಎಸೆದಂತೆ ಎಸೆಯದೆ ” ಓಡಿ ಹೋಗುವ ಮುನ್ನ ಓದಿ ಹೋಗು”…. ಮನಸು ಬದಲಾದರೆ ಮತ್ತೆ ನಮ್ಮ ಗೂಡಿಗೆ ಸೇರು.

ಇಂತಿ ನಿನ್ನ ನತದೃಷ್ಟ

ಅಪ್ಪ,ಅಮ್ಮ .

ಅಂದುಕೊಂಡಂತೆ ಅವರಿಬ್ಬರೂ ಆ ರಾತ್ರಿನೇ ಓಡಿ ಹೋಗ್ತಾರೆ. ಅಲ್ಲಿ ಇಲ್ಲಿ ಸ್ವಲ್ಪ ದಿನಗಳು ಕಳೆದು ಹದಿ ಹರೆಯದ ವಯಸಿನಲ್ಲಿ ಓಡಿ ಹೋದವರಿಗೆ ಸಮಾಜ ಎಂದೂ ಬೆಲೆ ಕೊಡುವುದಿಲ್ಲಾ ಎಂದು ಗೊತ್ತಾಗಿ ನೊಂದು ಕೆಲವೇ ದಿನಗಳಲ್ಲಿ ಇವತ್ತು ಜನಪ್ರಿಯವಾದ  ಪದವಾಗಿರುವ “ಬ್ರೇಕ್ ಅಪ್” ಮಾಡಿಕೊಂಡು ಬಿಡುತ್ತಾರೆ.ಅವಳಿಗೆ ಮುಗಿಲು ಮೈಮೇಲೆ ಬಿದ್ದಂತಾಗುತ್ತದೆ .ತನ್ನವನ ಜೊತೆ ಓಡಿಹೋದರೆ ಸಾಕು ಜಗತ್ತನ್ನೇ ಜಯಿಸಿ ಬಿಡುವೆ ಎಂದುಕೊಂಡವಳಿಗೆ ಹೀಗೆ ನಡುರಸ್ತೆಯಲಿ ಅವನು ಬಿಟ್ಟುಹೋದಾಗ ಎಂದು ಮಾಡುವುದು ಯಾರ ಬಳಿ ಹೋಗುವುದೋ ತಿಳಿಯುವುದಿಲ್ಲ . ಕಣ್ಮುಂದೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಕಾಡುತ್ತವೆ.ಕೊನೆಗೆ ತಾವು ಜೊತೆಗಿದ್ದ ಕೊಣೆಗೆ ಹೋಗಿ ಜೀವ ಕಳೆದು ಕೊಳ್ಳುವ ಪ್ರಯತ್ನದಲ್ಲಿದ್ದಾಗ ಅಪ್ಪನ ಪತ್ರ ಸಿಗುತ್ತೆ . ಮುಂದೆ ಆಗಬಹುದಾದಂಥ ಎಲ್ಲಾ ಅನಾಹುತಗಳನ್ನ ಮೊದಲೇ  ಅರಿತಿದ್ದ ಅಪ್ಪ ಅಮ್ಮನ ನೆನೆದು ಕಣ್ಣಿರಿಡುತ್ತಾಳೆ.. ಮುಂದೆ ಏನು ಮಾಡುವುದು ಎಲ್ಲಿರುವುದು ಬಾಳು ಸಾಗಿಸಲು ಹಣ ಹೇಗೆ ಹೊಂದಿಸುವುದು ಮುಂತಾದ ಎಲ್ಲಾ ಪ್ರಶ್ನೆಗಳಿಗೆ ಆ ಪತ್ರ ಉತ್ತರ ಕೊಟ್ಟಿರುತ್ತದೆ.ಓಡಿ ಹೋಗುವ ಮುನ್ನ ಓದಬೇಕಿದ್ದ ಅಪ್ಪನ ಪತ್ರವನ್ನ ಅವಳು ಈಗ ಓದಿ ಒಂದು ಕ್ಷಣವೂ ತಡ ಮಾಡದೆ ತನ್ನ ಊರಿಗೆ ಹೋಗುತ್ತಾಳೆ.. ಆದರೆ ಅವಳಿಗಾಗಿ ಎಲ್ಲವನ್ನು ವ್ಯವಸ್ಥೆ ಮಾಡಿ ಅವರು ಅದಾಗಲೇ ಅನಾಥಾಶ್ರಮ ಸೇರಿ ಸಮಾಜ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹಾಗು ಮಗಳು ಬಿಟ್ಟು ಹೋದ ನೋವಿನಲ್ಲಿ ಕೆಲ ದಿನ ಅಲ್ಲೇ ಇದ್ದು ಒಬ್ಬರ ನಂತರ ಇನ್ನೊಬ್ಬರಾಗಿ ಪ್ರಾಣ ಬಿಟ್ಟಿರುತ್ತಾರೆ.

ಹೀಗೆ ಇವತ್ತಿನ ಯುವಕ ಯುವತಿಯರ ಪಾಲಿಗೆ ಈ ಲವ್ವಿನ್ ಫಸ್ಟ್ ಸೈಟ್ ಹಾಗು ಬ್ರೇಕ್ ಅಪ್ ಗಳು ಫ್ಯಾಶನ್ ಆಗಿಬಿಟ್ಟಿವೆ ಆದ್ದರಿಂದಲೇ ಬಹುಕಾಲ ಬಾಳಬೇಕಿದ್ದ ಇಂಥವರ ತಂದೆ ತಾಯಿಗಳ ಆಯಸ್ಸು ಕೂಡಾ ಐವತ್ತು ಅರವತ್ತರಲ್ಲೇ ಮುಗಿಯುವುದು ಫ್ಯಾಶನ್ ಆಗಿಬಿಟ್ಟಿದೆ. ಗೆಳೆಯರೇ ಈ ಪ್ರೀತಿ,ಆಕರ್ಷಣೆಗಳು ಜೀವನದ ಒಂದು ಪಾಲು ಆಗಬೇಕೆ ಹೊರತು ಇವೆ ಜೀವನವಾಗಬಾರದು.ಈ ಬಾಳು ಎನ್ನುವುದು ಏನಾದರು ಸಾಧಿಸಲು ಸಿಗುವ ಒಂದು ಅವಕಾಶ ಗೆಳೆಯರೇ.ಸಾಧನೆಯೇಡೆಗೆ ಒಂದೊಂದೇ ಹೆಜ್ಜೆ ಹಾಕಿ.ನೀವು ಪ್ರಭುದ್ಧರಾದ ಮೇಲೆ ಪ್ರೀತಿಯ ಬಗ್ಗೆ ಯೋಚಿಸಿ ಆಗ ಖಂಡಿತವಾಗಿ ಉತ್ತಮ ಸಂಗಾತೀ ಸಿಕ್ಕೆ ಸಿಗುತ್ತಾರೆ.ಹದಿಹರೆಯದ ವಯಸಿನಲ್ಲಿ ನಿಮ್ಮವರನ್ನು ಬಿಟ್ಟು ಹೋಗಲು ತಯಾರಿ ಮಾಡುತ್ತಿರುವ ಜೋಡಿಗಳೇ ದಯವಿಟ್ಟು ಇದನ್ನ “ಓಡಿ ಹೋಗುವ ಮುನ್ನ ಓದಿ ಹೋಗಿ”

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

12 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
10 years ago

ಪ್ರವೀಣ ಅವರೇ, ನಿಮ್ಮ ಲೇಖನದ ಕೊನೆಯ ಸಾಲು….ಹದಿಹರೆಯದ ವಯಸಿನಲ್ಲಿ ನಿಮ್ಮವರನ್ನು ಬಿಟ್ಟು ಹೋಗಲು ತಯಾರಿ ಮಾಡುತ್ತಿರುವ ಜೋಡಿಗಳೇ ದಯವಿಟ್ಟು ಇದನ್ನ “ಓಡಿ ಹೋಗುವ ಮುನ್ನ ಓದಿ ಹೋಗಿ” ಮನಮುಟ್ಟಿತು ಹಾಗೂ ಎಚ್ಚರಿಕೆಯ ಘಂಟಾನಾದ ಮೊಳಗಿಸಿದಂತಾಯಿತು….ಉತ್ತಮ ಬರಹ !

ಕೆ.ಎಂ.ವಿಶ್ವನಾಥ

ಎದೆ ಝಲ್ ಎನಿಸುವ ಬರಹ

mamatha keelar
mamatha keelar
10 years ago

ಯುವ ಜನಾಂಗಕ್ಕೆ ಒಳ್ಳೇ ಸಂದೇಶ ಸಾರುವ ಲೇಖನ..ತುಂಬಾ ಚನ್ನಾಗಿ ಬರೆದಿದ್ದೀರಿ  

NAVEEN
NAVEEN
10 years ago

ತುಂಬಾ ಚೆನ್ನಾಗಿ ಬರೆದಿದ್ದೀರಿ ಪ್ರವೀಣ್ ಅಣ್ಣಾ, ನಿಜಕ್ಕೂ ತಂದೆ ತಾಯಿಗಳ ನೋವು ಊಹಿಸಲು ಹೋಗಲಿ ಕಲ್ಪಿಸಲು ಸಾದ್ಯವಿಲ್ಲ. ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಉತ್ತಮ ಸಂದೇಶ ನೀಡಿದ್ದೀರಿ

Gaviswamy
10 years ago

different perspective …thought provoking article..thank u

Santhoshkumar LM
10 years ago

Good article with good message sir…..keep writing!!

sham prasad
sham prasad
10 years ago

good Article keep it up

Ganesh
10 years ago

ಅದ್ಭುತ ಬರಹ, ಯುವ ಜನಾಂಗ ಓದಲೇಬೇಕಾದಂತಹ ಬರಹವಿದು.

praveenkumar surapur
praveenkumar surapur
10 years ago

really impressible article.

Venkatesh
Venkatesh
10 years ago

ಗೆಳೆಯರೇ ಈ ಪ್ರೀತಿ,ಆಕರ್ಷಣೆಗಳು ಜೀವನದ ಒಂದು ಪಾಲು ಆಗಬೇಕೆ ಹೊರತು ಇವೆ ಜೀವನವಾಗಬಾರದು.ಈ ಬಾಳು ಎನ್ನುವುದು ಏನಾದರು ಸಾಧಿಸಲು ಸಿಗುವ ಒಂದು ಅವಕಾಶ ಗೆಳೆಯರೇ.ಸಾಧನೆಯೇಡೆಗೆ ಒಂದೊಂದೇ ಹೆಜ್ಜೆ ಹಾಕಿ.ನೀವು ಪ್ರಭುದ್ಧರಾದ ಮೇಲೆ ಪ್ರೀತಿಯ ಬಗ್ಗೆ ಯೋಚಿಸಿ ಆಗ ಖಂಡಿತವಾಗಿ ಉತ್ತಮ ಸಂಗಾತೀ ಸಿಕ್ಕೆ ಸಿಗುತ್ತಾರೆ.
Nice lines 

praveen kulkarni
praveen kulkarni
10 years ago

ನನ್ನ ಮೊದಲ ಲೇಖನಕ್ಕೆ ಎಲ್ಲಾ ಸಹೃದಯಿ ಬಂದುಗಳು ಪ್ರತಿಕ್ರಿಯಿಸಿದ್ದು ನನಗೆ ತುಂಬಾ ಸಂತೋಷವಾಗಿದೆ..ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ಎಂದು ಕೇಳಿಕೊಳ್ಳುವೆ.. ತಮ್ಮ ನಲ್ಮೆಯ ನುಡಿಗಳಿಗೆ ತುಂಬಾ ಧನ್ಯವಾದಗಳು….

ಶರಣು ಶಟ್ಟರ್

ಯುವ ಪ್ರೇಮಿಗಳಿಗೆ ಒಳ್ಳೆಯ ಸಂದೇಶ. ಉಪೇಂದ್ರ ಸಿನಿಮಾದಲ್ಲಿ ನಾಯಕಿ – ನಾಯಕನಿಗೆ ಕೇಳತಾಳೆ ನಿನಗೇ ತಂದೆ-ತಾಯಿ ಮುಖ್ಯಾನಾ ಇಲ್ಲಾ ನಾನ್ ಮುಖ್ಯಾ ನಾ ಅಂತ ಕೇಳಿದಾಗ ನನಗೆ ತಂದೆ-ತಾಯಿ ಮತ್ತು ನನ್ನ ಜೀವನಾನೇ ಮುಖ್ಯ ಅಂತಾನೆ ನಾಯಕ. ಉತ್ತಮ ಲೇಖನ ಸದಾ ಹೀಗೆ ಬರಿತಾ ಇರಿ………..

12
0
Would love your thoughts, please comment.x
()
x