ʼ ರೂಪಾಂತರ ʼ- ಹೊಸತರ ಹಂಬಲ: ಎಂ ನಾಗರಾಜ ಶೆಟ್ಟಿ
ಸಿನಿಮಾ ಮುಗಿದು ತೆರೆಯ ಮೇಲೆ ಕ್ರೆಡಿಟ್ಸ್ ಬರತೊಡಗುತ್ತದೆ. ಆದರೆ ಪ್ರೇಕ್ಷಕರು ಸೀಟು ಬಿಟ್ಟು ಕದಲುವುದಿಲ್ಲ. ಮಾತಿಲ್ಲದೆ, ಯಾವುದೋ ಗುಂಗಿಗೊಳಗಾದವರಂತೆ ಕೂತಿದ್ದು, ನಿಧಾನವಾಗಿ ಏಳುತ್ತಾರೆ. ಇದು ʼ ರೂಪಾಂತರ ʼ ಸಿನಿಮಾದ ಕುರಿತು ಬಹಳಷ್ಟನ್ನು ಹೇಳುತ್ತದೆ. ಒಂದು ರೀತಿಯಲ್ಲಿ ಪ್ರೇಕ್ಷಕನ್ನು ಆವರಿಸಿಕೊಂಡರೆ, ಇನ್ನೊಂದು ತರದಲ್ಲಿ ಗೊಂದಲʼ. ರೂಪಾಂತರ ʼ ಚಿತ್ರದ ವಿಶೇಷವಿರುವುದೇ ಇಲ್ಲಿ! ಮೊದಲ- ವಿಚಿತ್ರ, ಕರಾಳ, ವಿಕೃತ- ದೃಶ್ಯದಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ತನ್ನನ್ನು ತಾನು ಬಚಾವು ಮಾಡಿಕೊಳ್ಳಲು ಕತೆ ಹೇಳಲು ಶುರುವಿಟ್ಟುಕೊಳ್ಳುತ್ತಾನೆ. ಕತೆ ಚೆನ್ನಾಗಿಲ್ಲದ್ದರೆ ಸಾಯಿಸುತ್ತೇವೆ ಎನ್ನುವ … Read more