ಪಂಜು ವಾಟ್ಸ್ ಅಪ್ ಚಾನೆಲ್
ಪಂಜು ವಾಟ್ಸ್ ಅಪ್ ಚಾನೆಲ್ ಫಾಲೋ ಮಾಡಲು ಕೆಳಗಿನ ಲಿಂಕ್ ಮೇಲೆ ಒತ್ತಿ ನಂತರ ಫಾಲೋ ಬಟನ್ ಒತ್ತಿ…. https://whatsapp.com/channel/0029Va9PS6c1CYoQUgzYRr0u
ಪಂಜು ವಾಟ್ಸ್ ಅಪ್ ಚಾನೆಲ್ ಫಾಲೋ ಮಾಡಲು ಕೆಳಗಿನ ಲಿಂಕ್ ಮೇಲೆ ಒತ್ತಿ ನಂತರ ಫಾಲೋ ಬಟನ್ ಒತ್ತಿ…. https://whatsapp.com/channel/0029Va9PS6c1CYoQUgzYRr0u
ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಪ್ರಬಂಧ ಸ್ಪರ್ಧೆ’ ಏರ್ಪಡಿಸಿದೆ. ಆಯ್ಕೆಯಾದ ಐದು ಪ್ರಬಂಧಗಳಿಗೆ ತಲಾ ರೂ.5,000 ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. 10 ಉತ್ತಮ ಪ್ರಬಂಧಗಳು ಸಮಾಜಮುಖಿ ಪತ್ರಿಕೆಯ ನವೆಂಬರ್ 2023ರ ಸಂಚಿಕೆಯಲ್ಲಿ ಪ್ರಕಟವಾಗಲಿವೆ. ಕರ್ನಾಟಕದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭಾಷಿಕ, ರಾಜಕೀಯ ಕ್ಷೇತ್ರದಲ್ಲಿನ ಬದಲಾವಣೆ ಗುರುತಿಸುವ ಅಥವಾ ಬದಲಾವಣೆ ಬಯಸುವ ಪ್ರಬಂಧವಾಗಿರಬೇಕು. ಪ್ರಬಂಧ 1,600 … Read more
. ವಿಚಾರ ಮಂಟಪ ಬಳಗದ ವತಿಯಿಂದ ವರುಣ್‌ರಾಜ್ ಜಿ ಮತ್ತು ಧನುಷ್ ಎಚ್ ಶೇಖರ್ ಇವರು ಸಂಪಾದಿಸಿರುವ ʼಕಾವ್ಯದೀವಿಗೆʼ ಕವನ ಸಂಕಲನವು ಲೋಕಾರ್ಪಣೆಗೆ ಸಿದ್ಧವಾಗಿದೆ. ಕೃತಿಯನ್ನು ಹಾಸನದ ʼಸ್ಪಂದನ ಸಿರಿʼ ಪ್ರಕಾಶನವು ಪ್ರಕಟಿಸುತ್ತಿದ್ದು, ಇದೇ ಭಾನುವಾರ ದಿನಾಂಕ: ೨೫.೦೬.೨೦೨೩ ರಂದು ಹಾಸನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ೧೨ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ʼಕಾವ್ಯದೀವಿಗೆʼ ಕವನ ಸಂಕಲನವು ನಾಡಿನ ವಿವಿಧ ಪ್ರದೇಶಗಳ ಒಟ್ಟು ೬೨ ಯುವ ಬರಹಗಾರರ ಬರಹಗಳನ್ನೊಳಗೊಂಡ ಕೃತಿಯಾಗಿದ್ದು, ಯುವ ಬರಹಗಾರರ … Read more
‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ರಲ್ಲಿ ಬಹುಮಾನಿತರಾದ ಐವರು ಹಾಗೂ ಮೆಚ್ಚುಗೆ ಪಡೆದ ಹದಿನೈದು ಕಥೆಗಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 10.06.2023, ಶನಿವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ಸಾಹಿತ್ಯ ಪರಿಷತ್ತು ಆವರಣದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ “ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು” ಕೃತಿಯ ಜನಾರ್ಪಣೆ ಜರುಗಲಿದೆ. ಸಾಹಿತಿ, ತಂತ್ರಜ್ಞಾನಿ ವೈ.ಎನ್.ಮಧು, ಸಾಮಾಜಿಕ ಮಾಧ್ಯಮ ತಜ್ಞೆ ಚೈತ್ರಿಕಾ ನಾಯ್ಕ್ ಹರ್ಗಿ ಹಾಗೂ ಖ್ಯಾತ ನಾಟಕಕಾರರಾದ ಜಯರಾಮ್ ರಾಯಪುರ ಅವರು ಅತಿಥಿಗಳಾಗಿ … Read more
ನೀವು ಸಿನಿಮಾ ಪ್ರಿಯರೇ? ಒಳ್ಳೆಯ ಚಲನಚಿತ್ರಗಳನ್ನು ಆನಂದಿಸಲು, ಬೆಂಬಲಿಸಲು ಬಯಸುತ್ತೀರಾ? ಹಾಗಿದ್ದರೆ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಪಾರ ಪ್ರಶಂಸೆ ಗಳಿಸಿದ ಮತ್ತು ಮೂರನೇ ಪ್ರಶಸ್ತಿ ವಿಜೇತ ಚಲನಚಿತ್ರ “ಫೋಟೋ”ದ ವಿಶೇಷ ಪ್ರದರ್ಶನದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ! ಈ ಪ್ರದರ್ಶನದ ವಿಶೇಷತೆಯೆಂದರೆ, ಚಿತ್ರ ಪ್ರದರ್ಶನದ ನಂತರ ನಿರ್ದೇಶಕರು ಮತ್ತು ಚಿತ್ರತಂಡದೊಂದಿಗೆ ಸಂವಾದ ನಡೆಸಲು ನಿಮಗೆ ಅವಕಾಶ ಸಿಗಲಿದೆ. ನೀವು ಬರಹಗಾರರಾಗಿದ್ದರೆ, ಚಲನಚಿತ್ರ ನಿರ್ಮಾಣದ ಬಗ್ಗೆ ಆಸಕ್ತಿ ಉಳ್ಳವರಾಗಿದ್ದರೆ, ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು “ಫೋಟೋ” ಚಿತ್ರತಂಡದಿಂದ ಹೊಸ … Read more
ಬೆಂಗಳೂರಿನ ಸಮಾಜಮುಖಿ ಪ್ರಕಾಶನ ಏರ್ಪಡಿಸಿದ್ದ 2023ನೇ ಸಾಲಿನ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಒಟ್ಟು 398 ಕಥೆಗಾರರು ಭಾಗವಹಿಸಿದ್ದರು. ಆರಂಭಿಕ ಸುತ್ತಿನ ಆಯ್ಕೆಯ ನಂತರ ಎರಡನೇ ಹಂತದ 50 ಕಥೆಗಳನ್ನು ಹೊಸ ಪೀಳಿಗೆಯ ಲೇಖಕ ಡಾ.ಕೆ.ಎಚ್.ಮುಸ್ತಾಫ ಹಾಗೂ ಅಂತಿಮ ಹಂತದ ಆಯ್ಕೆಯನ್ನು ಯುವ ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ ಮಾಡಿದ್ದಾರೆ. ತಲಾ ರೂ.5000 ನಗದು ಮತ್ತು ಪ್ರಶಸ್ತಿಪತ್ರ ಒಳಗೊಂಡ ‘ಸಮಾಜಮುಖಿ ಕಥಾ ಪುರಸ್ಕಾರ-2023’ಕ್ಕೆ ಆಯ್ಕೆಯಾಗಿರುವ ಐದು ಕಥೆ ಮತ್ತು ಕಥೆಗಾರರು: ಬಯಕೆ (ದೀಪಾ ಹಿರೇಗುತ್ತಿ), ಮುಝಫರ್ (ಎಂ.ನಾಗರಾಜ ಶೆಟ್ಟಿ), ಹಲ್ಲೀರ … Read more
ಭಾರತದ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಬುಕ್ ಬ್ರಹ್ಮ “ಸ್ವಾತಂತ್ರ್ಯೋತ್ಸವ ಕಥಾ ಸ್ಫರ್ಧೆ”ಯ ಜೊತೆಗೆ 2022ನೇ ಸಾಲಿನಲ್ಲಿ ಪ್ರಕಟವಾದ ಕಾದಂಬರಿಗೆ ಪುರಸ್ಕಾರ ನೀಡಲು ನಿರ್ಧರಿಸಿದೆ. 2022ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು. ಈ ಒಂದು ಲಕ್ಷದಲ್ಲಿ 75 ಸಾವಿರ ರೂಪಾಯಿ ಲೇಖಕರಿಗೆ ಹಾಗೂ 25 ಸಾವಿರ ಪ್ರಕಾಶಕರಿಗೆ ವಿತರಿಸಲಾಗುತ್ತದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂಪಾಯಿ ಬಹುಮಾನ ನೀಡಲಾಗುವುದು. ಈ ಪೈಕಿ … Read more
ಸಹೃದಯಿಗಳೇ, ಇದೇ ಜನವರಿ ೨೧ನೇ ತಾರೀಖಿಗೆ ಪಂಜುವಿಗೆ ಹತ್ತು ವರ್ಷ ತುಂಬುತ್ತಿದೆ. ಪಂಜುವಿನ ದಶಕದ ಸಂಭ್ರಮದ ಆಚರಣೆಗಾಗಿ ವಿಶೇಷ ಸಂಚಿಕೆಯೊಂದನು ತರಲು ಬಯಸುತ್ತಿದ್ದೇವೆ. ಈ ವಿಶೇಷ ಸಂಚಿಕೆಗೆ ನಿಮ್ಮ ಅಪ್ರಕಟಿತ ಕತೆ, ಕವನ, ಲೇಖನ, ಪುಸ್ತಕ ವಿಮರ್ಶೆ, ಹಾಸ್ಯ ಬರಹ, ಚುಟುಕ, ಪ್ರವಾಸ ಕಥನ, ವ್ಯಂಗ್ಯಚಿತ್ರ, ಛಾಯಾಚಿತ್ರ, ಸಿನಿಮಾ ಸುದ್ದಿ, ಇತ್ಯಾದಿ ಸಾಹಿತ್ಯ ಸಂಬಂಧಿತ ಬರಹಗಳನ್ನು ಕಳುಹಿಸಿಕೊಡಿ. ನಮ್ಮ ಇ ಮೇಲ್ ವಿಳಾಸ editor.panju@gmail.com ಒಮ್ಮೊಮ್ಮೆ ತಾಂತ್ರಿಕ ತೊಂದರೆಗಳಿಂದ ನೀವು ಕಳುಹಿಸಿದ ಲೇಖನ ನಮಗೆ ತಲುಪದೇ ಇರಬಹುದು. … Read more
ಬಡಮಕ್ಕಳ ಜ್ಞಾನಾರ್ಜನೆಯ ಉದ್ದೇಶಕ್ಕಾಗಿ ಗ್ರಾಮೀಣ ಭಾಗದಲ್ಲಿ ಸ್ಥಾಪನೆಗೊಂಡಿರುವ ‘ಕುವೆಂಪು ಪುಸ್ತಕ ಮನೆ’ ಗೆ ನಿಮ್ಮಲ್ಲಿರುವ ಯಾವುದೇ ಬಗೆಯ ಪುಸ್ತಕಗಳನ್ನು ದೇಣಿಗೆಯಾಗಿ, ದಾನವಾಗಿ ನೀಡಬಹುದಾಗಿದೆ.ನೀವು ನೀಡುವ ಒಂದು ಪುಸ್ತಕ ಒಂದು ಕೋಟಿಗೂ ಮಿಗಿಲು.ಮಕ್ಕಳಿಗೆ ಪುಸ್ತಕಗಳನ್ನು ಓದಲು ನೀಡಿ; ಸಹಕರಿಸಿ.ಪ್ರಕಟಣೆ : ಕುವೆಂಪು ಪುಸ್ತಕ ಮನೆಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿದೂ ಸಂ : 8549957444 ಅಂಚೆ ಮೂಲಕ ಪುಸ್ತಕ ತಲುಪಿಸಲುಕುವೆಂಪು ಪುಸ್ತಕ ಮನೆನಂ ೯೬/ಎ, ಪರಿಣಾಮಿಪುರ, ಕಾವೇರಿಪುರ ಅಂಚೆತಲಕಾಡು ಹೋಬಳಿ, ತಿ ನರಸೀಪುರ ತಾಲ್ಲೂಕು,ಮೈಸೂರು – ೫೭೧೧೨೩
ವಿಚಾರ ಮಂಟಪ ಸಾಹಿತ್ಯ ಬಳಗವು ಯುವ ಕವಿಗಳ ಕವಿತೆಗಳನ್ನು ಸಂಕಲಿಸಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಆಸಕ್ತರು ಸಮಕಾಲೀನ ಸಮಸ್ಯೆಗಳ, ಸಾಮಾಜಿಕ ಪಿಡುಗುಗಳ ಕುರಿತಾಗಿ ಜಾಗೃತಿ ಮೂಡಿಸುವ ಆಶಯವುಳ್ಳ, 20-25 ಸಾಲುಗಳಿಗೆ ಮೀರದ ಎರಡು ಸ್ವರಚಿತ ಕವನಗಳನ್ನು ದಿನಾಂಕ: 30.01.2023 ರ ಒಳಗಾಗಿ 8217744886 ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಲು ಕೋರಿದೆ. ಆಯ್ಕೆಯಾದ ಮೂರು ಅತ್ಯುತ್ತಮ ಕವನಗಳಿಗೆ ಮತ್ತು ಒಂದು ಉತ್ತಮ ಶೀರ್ಷಿಕೆಗೆ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನವಿರುತ್ತದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:ಧನುಷ್ ಎಚ್ ಶೇಖರ್ – … Read more
ಸಮಾಜಮುಖಿ ಪ್ರಕಾಶನ ಕನ್ನಡದ ಕಥಾಪರಂಪರೆಗೆ ಅರ್ಥಪೂರ್ಣ ಪ್ರಚೋದನೆ ನೀಡುವ ಉದ್ದೇಶದಿಂದ ‘ಸಮಾಜಮುಖಿ ವಾರ್ಷಿಕ ಕಥಾಸ್ಪರ್ಧೆ-2023’ ಏರ್ಪಡಿಸಿದೆ. ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾಗುವ ಐದು ಕಥೆಗಾರರಿಗೆ ತಲಾ ರೂ.5000 ನಗದು ನೀಡಿ ಗೌರವಿಸಲಾಗುವುದು. ಜೊತೆಗೆ ಆಯ್ದ ಹದಿನೈದು ಕಥೆಗಳಿಗೆ ಸಮಾಜಮುಖಿ ವಾರ್ಷಿಕ ಕಥಾ ಸಂಕಲನದಲ್ಲಿ ಅವಕಾಶ ಸಿಗಲಿದೆ. ಕಥೆಗಾರರು 2000 ಪದಮಿತಿಯ, ಯಾವ ಮಾಧ್ಯಮದಲ್ಲೂ ಪ್ರಕಟವಾಗದ, ನುಡಿ/ಯುನಿಕೋಡ್ ಲಿಪಿಯಲ್ಲಿರುವ ಕಥೆಯನ್ನು ವರ್ಡ್ ಕಡತದಲ್ಲಿ 15 ಜನೆವರಿ 2023ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ: samajamukhi2017@gmail.com
ತುಮಕೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಪೀಠ ಹಾಗೂ ಬುಕ್ ಬ್ರಹ್ಮ ಸಂಸ್ಥೆ ಜಂಟಿಯಾಗಿ “ಕುವೆಂಪು: ಯುವ ಮಂಥನ” ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ. ಕುವೆಂಪು ಅವರ ನಾಡು ನುಡಿ ಚಿಂತನೆ, ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ದೃಷ್ಟಿ, ಅಧ್ಯಾತ್ಮಿಕ ಮನೋಧರ್ಮಗಳನ್ನು ಅರಿಯುವ ಬಗೆಗಳನ್ನು ಈ ಲೇಖನಗಳು ಒಳಗೊಂಡಿರಲಿ. ನಿಯಮಗಳು: ಲೇಖನಗಳು ವಿಮರ್ಶಾತ್ಮಕ ಒಳನೋಟಗಳನ್ನು ಹೊಂದಿರಬೇಕು. 2000 ಪದಗಳನ್ನು ಮೀರದಂತಿರಲಿ. ಲೇಖಕರ ವಯಸ್ಸು 35 ವರ್ಷಗಳನ್ನು ಮೀರದಂತಿರಬೇಕು. ಲೇಖನಗಳು ಎಲ್ಲಿಯೂ ಪ್ರಕಟವಾಗಿರಬಾರದು. ಮೊದಲ ಬಹುಮಾನ 5 ಸಾವಿರ + 3 ಸಾವಿರ … Read more
ಪಂಜು ದಶಕದ ಸಂಭ್ರಮದ ಪ್ರಯುಕ್ತ ಏರ್ಪಡಿಸಿದ್ದ 2021 ನೇ ಸಾಲಿನ ಪಂಜು ಕಥಾ ಸಂಕಲನ ಪ್ರಶಸ್ತಿಯ ವಿವರ ಈ ಕೆಳಗಿನಂತಿದೆ ಪಂಜು ಕಥಾ ಸಂಕಲನ ಪ್ರಶಸ್ತಿ ಪಡೆದ ಕೃತಿಬಯಲಲಿ ತೇಲುತ ತಾನು: ಅಕ್ಷಯ ಪಂಡಿತ್ ತೀರ್ಪುಗಾರರ ಮೆಚ್ಚುಗೆ ಪಡೆದ ಕೃತಿಗಳು೧. ಅಗ್ಗಷ್ಟಿಕೆ: ರಾಜಶ್ರೀ ಟಿ. ರೈ, ಪೆರ್ಲ೨. ಪೂವಿ: ಮಲ್ಲೇಶ್ ಮಾಲಿಂಕಟ್ಟೆ೩. ದಶಕದ ಕತೆಗಳು: ಟಿ ಎಂ ರಮೇಶ೪. ನೀಲಕುರಿಂಜಿ: ದಾದಾಪೀರ್ ಜೈಮನ್೫. ಮಾರ್ಗಿ: ಲಿಂಗರಾಜ ಸೊಟ್ಟಪ್ಪನವರ ಒಟ್ಟು 25 ಕಥೆಗಾರರು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. … Read more
ಸಹೃದಯಿಗಳೇ, ನಿಮಗೆ ತಿಳಿದಂತೆ ಕಳೆದ ಒಂಬತ್ತು ವರ್ಷಗಳಿಂದ ಪಂಜು ಪತ್ರಿಕೆ ಕನ್ನಡದ ಸೇವೆಯಲ್ಲಿ ನಿರತವಾಗಿದೆ. ಪ್ರತಿ ವರ್ಷದ ಹೋಸ್ಟಿಂಗ್ ವೆಚ್ಚ, ವೆಬ್ ಡೊಮೈನ್ ನವೀಕರಣ ವೆಚ್ಚ ಮತ್ತು ಇತರ ವೆಚ್ಚಗಳು ಹೆಚ್ಚತ್ತಲೇ ಹೋಗುತ್ತಿವೆ. ಈ ಎಲ್ಲಾ ವೆಚ್ಚಗಳನ್ನು ಪಂಜು ಇಷ್ಟು ವರ್ಷ ನಿಭಾಯಿಸುತ್ತಲೇ ಬಂದಿದೆ. ಹೆಚ್ಚುತ್ತಿರುವ ತಂತ್ರಜ್ಞಾನಗಳ ಜೊತೆಗೆ ಅವುಗಳಿಗೆ ಹಣ ನೀಡಬೇಕಾದ ಅವಶ್ಯಕತೆ ಕೂಡ ಇರುವುದರಿಂದ ನಿಮಗೆ ಪಂಜುವಿಗೆ ನೆರವಾಗುವ ಮನಸಿದ್ದರೆ ನಿಮಗೆ ಅನಿಸಿದ್ದಷ್ಟು ಹಣವನ್ನು ಪಂಜುವಿಗೆ ಡೊನೇಟ್ ಮಾಡಿ. Google pay/ Phone Pay: … Read more
ಪಂಜು ಕಥಾಸಂಕಲನ ಪ್ರಶಸ್ತಿ ಪಂಜು 2023 ರ ಜನವರಿಯಲ್ಲಿ ಹತ್ತು ವರ್ಷ ಪೂರೈಸುತ್ತದೆ. ದಶಕದ ಮೈಲಿಗಲ್ಲು ತುಳಿದ ಬೆರಳೆಣಿಕೆಯ ಕನ್ನಡದ ಅಂತರ್ಜಾಲ ಪತ್ರಿಕೆಗಳಲ್ಲಿ ಪಂಜು ಕೂಡ ಒಂದು. ದಶಕದ ಈ ಸಂಭ್ರಮವನ್ನು ಆಚರಿಸಲು ಪಂಜು ಮೊದಲ ಹೆಜ್ಜೆಯಾಗಿ ಕಥಾಸಂಕಲನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸುತ್ತಿದೆ. 2021 ರ ಸಾಲಿನಲ್ಲಿ ಅಂದರೆ ಜನವರಿ 2021 ರಿಂದ ಡಿಸೆಂಬರ್ 2021 ರವರೆಗೆ ಪ್ರಕಟವಾಗಿರುವ ಮೊದಲ ಮುದ್ರಣದ ಕಥಾಸಂಕಲನಗಳನ್ನು ಪಂಜುವಿಗಾಗಿ ಕಳುಹಿಸಿಕೊಡಿ. ನಮಗೆ ಬಂದ ಕೃತಿಗಳಲ್ಲಿನ ಅತ್ಯುತ್ತಮವಾದ ಕಥಾಸಂಕಲನವೊಂದಕ್ಕೆ ರೂ. 10,000/- ನಗದು … Read more
2022 ರ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ ಪ್ರಕಟಿತ ಕೃತಿಗಳ ಆಹ್ವಾನ ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ವತಿಯಿಂದ “ಶ್ರೀಮಾನ್ ಲೇ. ನರಸಯ್ಯ” ಅವರ ಸ್ಮರಣಾರ್ಥ ಕೊಡಮಾಡುವ “ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ” ಗಾಗಿ 2020 ರ ಜುಲೈ ತಿಂಗಳಿಂದ 2022 ರ ಜೂನ್ ತಿಂಗಳವರೆ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ. 2022 ರ ಆಗಸ್ಟ್ 31 ರೊಳಗೆ ತಮ್ಮ ಕೃತಿಯ … Read more
ಅಂಕುರ ಪ್ರಕಾಶನ ಪ್ರಕಟಿಸಿರುವ ಡಾ.ಅರವಿಂದ ಪಟೇಲ್ ಅವರ “ಹಾಲು ಚೆಲ್ಲಿದ ಹೊಲ” ಕವನ ಸಂಕಲನವನ್ನು ಮಾರ್ಚ್ 20, ಭಾನುವಾರ, ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯ ಐಎಂಎ ಸಭಾಂಗಣದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಜನಾರ್ಪಣೆ ಮಾಡಲಿದ್ದಾರೆ. ಉಪಸ್ಥಿತಿ: ವಿಪ್ರೋ ಸಂಸ್ಥೆಯ ತರಬೇತಿ ವಿಭಾಗದ ಜಾಗತಿಕ ಮುಖ್ಯಸ್ಥರಾದ ಪಿ.ಬಿ.ಕೋಟೂರ, ವೈದ್ಯ ಲೇಖಕ ಡಾ.ಸಲೀಮ ನದಾಫ, ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ದಕ್ಷಿಣ ವಲಯ) ಉಪಾಧ್ಯಕ್ಷರಾದ ಸಿರಿಗೇರಿ ಪನ್ನರಾಜ, ಕನ್ನಡ ಸಹಾಯಕ ಪ್ರಾಧ್ಯಾಪಕಿ ಸೌಮ್ಯಾ ಕೋಡೂರು, ಕವಿ ಡಾ.ಅರವಿಂದ ಪಟೇಲ್, ಪ್ರಕಾಶಕ ಚಂದ್ರಕಾಂತ … Read more
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ (ರಿ)ಮಕ್ಕಳ ಮಂದಾರ ಬಳಗ ಸಹಯೋಗದಲ್ಲಿ2021 ನೇ ಸಾಲಿನ ವಿವಿಧ ಐದು ವಿಭಾಗಗಳ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 1. ಡಾ.ಕೊಡಕ್ಕಲ್ ಶಿವಪ್ರಸಾದ್ ದತ್ತಿ ಪುರಸ್ಕಾರ ರಾಜ್ಯದ ಅಂಗವಿಕಲ ಮಕ್ಕಳ ಶಿಕ್ಷಣ , ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲಾಗಿದೆ. ಸಂಬಂಧಿಸಿದ ತಮ್ಮ ಸೇವಾ ವಿವರಗಳನ್ನು ಪಿಡಿ ಎಪ್ ಕಳುಹಿಸಲು ಕೋರಿದೆ. Makkalamandara@gmail.com 2 .”ಮಕ್ಕಳ ಮಂದಾರ ರಾಜ್ಯ ಪ್ರಶಸ್ತಿ” ಪುರಸ್ಕಾರಕ್ಕೆ ಅರ್ಜಿ ಆಹ್ವಾನ 21 … Read more
ಆತ್ಮೀಯರೇ, ನೋಡ ನೋಡುತ್ತಿದ್ದಂತೆ ಇದೇ ಜನವರಿ ಇಪ್ಪತ್ತೊಂದರಂದು ಪಂಜು ಹತ್ತನೇ ವರ್ಷಕ್ಕೆ ಕಾಲಿಡುತ್ತಿದೆ. ಪಂಜು ದಶಕ ತಲುಪುತ್ತಿರುವ ಸಂಭ್ರಮಕ್ಕೆ ಒಂದು ವಿಶೇಷ ಸಂಚಿಕೆ ಮಾಡದಿದ್ದರೆ ಹೇಗೆ. ಹೀಗೆ ಬಂದು ಹಾಗೆ ಮರೆಯಾಗುವ ನೂರಾರು ವೆಬ್ ತಾಣಗಳ ನಡುವೆಯೂ ಪಂಜುವಿಗೆ ತನ್ನದೇ ಐಡೆಂಟಿಟಿ ಕೊಟ್ಟವರು ನೀವು. ಇವತ್ತಿಗೂ ಯಾರಿಗೂ ಪರ್ಸನಲ್ ಆಗಿ ಕರೆ ಮಾಡಿಯೋ ಮೆಸೇಜ್ ಹಾಕಿಯೋ ಪಂಜುವಿಗಾಗಿ ಬರೆಯಿರಿ ಅಂತ ಕೇಳಿದ್ದು ತುಂಬಾನೆ ಕಡಿಮೆ. ಪಂಜುವಿಗೆ ಬರೆಯಲೇಬೇಕೆಂಬುವವರು ತುಂಬು ಹೃದಯದಿಂದ ಇಲ್ಲಿಯವರೆಗೂ ಬರೆದಿದ್ದಾರೆ. ಇನ್ನು ಮುಂದೆಯೂ ಬರೆಯುತ್ತಾರೆ … Read more