ಮದ್ಲ ಮನಿ ಗೆದ್ದು, ಆಮ್ಯಾಲೆ ಮಾರ ಗೆದೀಬೇಕು!:ಸುಮನ್ ದೇಸಾಯಿ ಅಂಕಣ

          ಮೊನ್ನೆ ಟಿವ್ಹಿ ಒಳಗ ಒಂದ ಕ್ವಿಜ್ ಶೋ ನೋಡ್ಲಿಕತ್ತಿದ್ದೆ. ಭಾಗವಹಿಸಿದವರು ಸುಮಾರು ೧೬ ರಿಂದ್ ೧೮ ವಯಸ್ಸಿನ ಒಟ್ಟು ಎಂಟ ಮಂದಿ ಇದ್ರು. ನಾಲ್ಕ ಗುಂಪ ಮಾಡಿದ್ರು. ಒಂದ ಗುಂಪಿನ್ಯಾಗ ಇಬ್ಬರು, ಭಾಗವಹಿಸಿದ ಹುಡುಗರ ಪರಿಚಯ ಮಾಡಿಕೊಟ್ಟು, ಪ್ರಶ್ನೆಗಳನ್ನ ಕೇಳಲಿಕ್ಕೆ ಶುರು ಮಾಡಿದ್ರು. ಎಷ್ಟ ಸರಳ ಪ್ರಶ್ನೆ ಅದು," ಕೌರವರ ತಂದೆ ಯಾರು?" ಅದಕ್ಕ ಅವರು ಕೊಟ್ಟ ಉತ್ತರಾ "ಅರ್ಜುನ" ಅಂತ. ಅದನ್ನ ಕೇಳಿ ನಾ ದಂಗ ಬಡಧಂಗ ಕುತಿದ್ದೆ. ನಮ್ಮ … Read more

ಅಂತರಂಗದ ಗೆಳೆಯ: ಸುಮನ್ ದೇಸಾಯಿ ಅಂಕಣ

ಸಂಜಿಮುಂದ ದೇವರಿಗೆ ದೀಪಾ ಹಚ್ಚಿ. ಅಂಗಳದಾಗಿನ ತುಳಸಿ ಕಟ್ಟಿ ಮ್ಯಾಲೆ ಕೂತು ಮಕ್ಕಳಿಗೆ ಸಾಯಂಕಾಲದ ಪೂರೋಚಿ(ಸಾಯಂಕಾಲದ ಸ್ತೊತ್ರಗಳು) ಹೇಳಿಕೊಡಲಿಕತ್ತಿದ್ದೆ. ಮೊಬೈಲ್ ರಿಂಗಾಗಿದ್ದು ಕೇಳಿ ಎದ್ದು ಒಳಗ ಹೋದೆ. ಯಾವದೊ ಅಪರಿಚಿತ ನಂಬರ್ ಇತ್ತು. ಅಂಥಾಪರಿ ಏನು ಕೂತುಹಲ ಇಲ್ಲದ ಫೋನ್ ತಗೊಂಡು ಹಲೊ ಅಂದೆ. ಅತ್ಲಾಕಡೆಯಿಂದ ಬಂದ ಧ್ವನಿ ನನ್ನ ಉಸಿರಿಗೆ ಪರಿಚಿತ ಅದ ಅನ್ನೊ ಭಾವನೆ ಬರಲಿಕತ್ತು. ಕ್ಷಣ ಮಾತ್ರ ಆಧ್ವನಿಯ ಒಡತಿ ನನ್ನ ಬಾಲ್ಯದ ಗೆಳತಿ ಜಾನು ದು ಅಂತ ಗೊತ್ತಾತು. ಎಷ್ಟು ವರ್ಷದ … Read more

ಕಿಟ್ಟುಮಾಮಾನ ದೀಪಾವಳಿ: ಸುಮನ್ ದೇಸಾಯಿ ಅಂಕಣ

  ಚುಮುಚುಮು ಛಳಿಗಾಲದಾಗ  ಬರೊ ದೀಪದ ಹಬ್ಬ ದೀಪಾವಳಿ ನೆನಿಸಿಕೊಂಡ್ರನ ಎನೊ ಒಂಥರಾ ಖುಷಿ ಆಗತದ. ನರಕಚತುರ್ದಶಿ ಹಿಂದಿನ ದಿನದಿಂದನ ದೀಪಾವಳಿ ಹಬ್ಬದ ಸಂಭ್ರಮ ಸುರು ಆಗತದ. ಅಂದ್ರ ನಮ್ಮ ಉತ್ತರ ಕರ್ನಾಟಕದ ಕಡೆ ನರಕಚತುರ್ದಶಿ ಹಿಂದಿನ ದಿನಾ ನೀರು ತುಂಬೊ ಹಬ್ಬ ಅಂತ ಮಾಡತೇವಿ. ಅವತ್ತ ಸಂಜಿಮುಂದ ಎಲ್ಲಾರು ಅಂಗಳಾ  ಸಾರಿಸಿ ಥಳಿ ಹೋಡದು ಛಂದನ ದೊಡ್ಡ ದೊಡ್ಡ ರಂಗೋಲಿ ಹಾಕಿ,ಮನಿಮುಂದ ಬಣ್ಣ ಬಣ್ಣದ ಆಕಾಶಬುಟ್ಟಿ ಕಟ್ಟಿರತಾರ. ಮನ್ಯಾಗಿನ ಹಿತ್ತಾಳಿ ತಾಮ್ರದ ಹಂಡೆ ಮತ್ತ ಕೊಡಗೊಳನ … Read more

ಪುನರ್ ಮಿಲನ: ಸುಮನ್ ದೇಸಾಯಿ ಅಂಕಣ

ಮದವಿಮನಿ ಅಂದ್ರ ಅದರ ಕಳೆನ ಬ್ಯಾರೆ ಇರತದ. ಹೆಣ್ಣು ಮಕ್ಕಳ ಹರಟಿ, ಸಣ್ಣ ಮಕ್ಕಳ ನಗುವಿನ ಕಲರವ. ಹಸಿರು ತೋರಣ, ಮಂಗಳಕರ ಚಪ್ಪರ. ನಗು, ಹಾಸ್ಯ, ಗಡಿಬಿಡಿಯಿಂದ ತುಂಬಿರತದ. ಅದರೊಳಗಂತು ಹಳ್ಳಿಯೊಳಗಿನ ಮದುವಿ ಸಂಭ್ರಮ ಅಂತು ಒಂಥರಾ ಬ್ಯಾರೆನ ಇರತದ.ಅದೊಂದ ಹಳೆಕಾಲದ್ದ ದೊಡ್ಡಂಕಣದ್ದ ಮನಿ. ಯಾವ ಆಡಂಬರ ಇಲ್ಲದ ಬಿಳಿಸುಣ್ಣದಿಂದ ಸಾರಿಸಿ ಅಲ್ಲಲ್ಲೆ ಇಳಿಬಿಟ್ಟ ಕೆಂಪು ಕ್ಯಾಂವಿ ಮಣ್ಣಿನ ಜೋರು. ಬಾಗಲಿಗೆ ಕಟ್ಟಿದ ಮಾವಿನ ತೊಳಲಿನ ತೊರಣ, ಮನಿಮುಂದ ಓಣಿಯ ತುಂಬ ಹಾಕಿದ ಹಂದರ ಹಂದರದೊಳಗ ಬಳೆಗಾರರು … Read more

ಕಾಕ ಸ್ಪರ್ಷ: ಸುಮನ್ ದೇಸಾಯಿ ಅಂಕಣ

ಮುಂಝಾನಿಂದ ಯಾಕೊ ಮನಸ್ಸು ಭಾಳ ತಳಮಳಸ್ಲಿಕತ್ತಿತ್ತು. ಇವತ್ತ ಆಂವಾ ಬರಾಂವ ಇದ್ದಾ. ಯಥಾಪ್ರಕಾರ ಕೈ ತಮ್ಮ ಕೆಲಸಾ ಮಾಡಲಿಕತ್ತಿದ್ವು. ಆದ್ರ ಮನಸ್ಸು ಮಾತ್ರಾ ಆಂವನ್ನ ನೆನಿಕೊಳ್ಳಿಕತ್ತಿತ್ತು. ಆಂವಗ ಇಷ್ಟ ಆಗೊ ಅಡಿಗಿ ಎಲ್ಲಾ ಮಾಡಿದ್ದೆ. ಆಂವಗ ನನ್ನ ಕೈ ಅಡಿಗಿ ಅಂದ್ರ ಭಾಳ ಸೇರತದ. ಊರಾಗ ಇದ್ದಾಗ ಎಷ್ಟ ಹೊತ್ತಾದ್ರು , ಹಸಿವ್ಯಾದ್ರು ಹೊರಗ ಏನು ತಿನ್ನಲಾರದ ಉಪವಾಸ ಮನಿಗೆನ ಊಟಕ್ಕ ಬರತಿದ್ದಾ. ನನ್ನ ಮುಂದ ಕೂಡಿಸಿಕೊಂಡು ನನ್ನ ಜೋಡಿ ಸರಸವಾಡಕೊತ ಊಟಾ ಮಾಡೊದಂದ್ರ ಆಂವಗ ಭಾಳ … Read more

ಶೀಗೀ ಹುಣ್ಣಿಮಿ ಮುಂದಾ | ಸೋಗಿನಾ ಚಂದ್ರಮ: ಸುಮನ್ ದೇಸಾಯಿ ಅಂಕಣ

             ನಮ್ಮ ಪಾರಂಪರಿಕ ಪಧ್ಧತಿಗೊಳು ಮರಿಯಾಗಿ ಹೋಗಲಿಕತ್ತ ಈ ದಿನಮಾನಗಳೊಳಗ ಎಲ್ಲೋ ಒಂದ ಕಡೆ ಮಿಣುಕ ಮಿಣುಕಾಗಿ ಕಾಣಸಿಗತಾವ ಅಂದ್ರ ಅದು ಹಳ್ಳಿಗಳೊಳಗ ಮಾತ್ರ. ನಮ್ಮ ಉತ್ತರ ಕರ್ನಾಟಕದ ಹಳ್ಳಿಗೊಳೊಳಗ ಇಂಥಾ ಭಾಳಷ್ಟು ಆಚರಣೆಗಳವ. ನೆರೆಹೊರೆಯವರು ಕೂಡಿ ಭಾಳ ಸಂತೋಷದಿಂದ ಆಚರಿಸ್ತಾರ. ವಿಶೇಷತಃ ಹೆಣ್ಣು ಮಕ್ಕಳು ಆಚರಿಸೊ ಪಧ್ಧತಿಗಳೆ ಭಾಳ ಇರತಾವ. ಶಹರದೊಳಗಾದ್ರ ಹೆಣ್ಣು ಮಕ್ಕಳಿಗೆ, ಓದು, ಕಲೆ, ನೌಕರಿ, ಮಹಿಳಾ ಮಂಡಳ, ಸಮಾಜಸೇವೆ, ರಾಜಕೀಯ ಅಂತೆಲ್ಲಾ ತಮ್ಮನ್ನ ತಾವು ತೊಡಗಿಸಿಕೊಂಡಿರತಾರ. ಇನ್ನ ಮನೊರಂಜನೆಗೆ ಅಂತ ಸಿನೇಮಾ, … Read more

ನೆನಪಿನ ಜೋಕಾಲಿ: ಸುಮನ್ ದೇಸಾಯಿ ಅಂಕಣ

ಎಲ್ಲಾರ ಜೀವನದೊಳಗು ಈ ಬಾಲ್ಯ ಅನ್ನೊದು ಅಮೂಲ್ಯವಾಗಿದ್ದಿರತದ. ಯಾವ ಕಲ್ಮಷ ಇಲ್ಲದ, ನಾಳಿನ ಚಿಂತೆ, ನೋವು ಇಲ್ಲದ ಆಡಿ ಬೆಳದ ಸಮಯ ಅದಾಗಿರತದ. ಈ ಬಾಲ್ಯದೊಳಗ ಏನೆ ಮಾಡಿದ್ರು ಛಂದನ ಇರತದ.” ಬಾರಾ ಖೂನಿ ಮಾಫ” ಅಂತಾರಲ್ಲಾ ಹಂಗ ಎಂಥಾ ಮಂಗ್ಯಾನಾಟಾ ಮಾಡಿದ್ರು ನಡಿತಿರತದ. ಅದರೊಳಗ ಈ ಹತ್ತರಿಂದ ಹದಿನಾರನೇ ವಯಸ್ಸಿನೊಳಗಿನ ಮನಸ್ಸಂತು ಯಾರ ಕೈಗು ಸಿಗದ ಬೀಸೊಗಾಳಿ ಹಂಗಿರತದ ಬಿಂದಾಸಾಗಿ ಆಡಿಕೊಂಡ ಎದುರಿಗೆ ಸಿಕ್ಕಿದ್ದನ ತನ್ನ ತುಂಟಾಟದ ರಭಸಕ್ಕ ನಡುಗಿಸೊ ಹಂಗ. ಬಾಲ್ಯ ಎಷ್ಟು ದಟ್ಟವಾಗಿರತದೊ … Read more

ಕಾಗಿ ಕಾಗಿ ಕವ್ವಾ…:ಸುಮನ್ ದೇಸಾಯಿ ನಗೆ ಅಂಕಣ

ಮುಂಝಾನೆ ಹತ್ತು ಗಂಟೆ ಸುಮಾರ ನಾ ಆಫೀಸನ್ಯಾಗ ಇದ್ದೆ. ನಮ್ಮ ತಮ್ಮನ ಫೋನ್ ಬಂತು. ಇಗ ಇನ್ನ ಹೊಸದಾಗಿ ಮದುವಿ ಮಾಡಕೊಂಡಾನ. ಮದ್ವಿಕಿಂತಾ ಮದಲ ಯಾವಾಗರೆ ಒಮ್ಮೆ ಫೋನ್ ಮಾಡಾಂವಾ ಈಗೀಗ ಎರಡ ದಿನಕ್ಕ ಒಮ್ಮೆ ಮಾಡತಿದ್ದಾ. ತನ್ನ ಗೋಳ ತೋಡ್ಕೊತಿದ್ದಾ.  ಪಾಪ ಇತ್ಲಾಕಡೆ ಅಮ್ಮ ಮತ್ತ ಅತ್ಲಾಕಡೆ ಹೆಂಡ್ತಿ ಕೈಯ್ಯಾಗ ಸಿಕ್ಕು ’ಧೋಬಿ ಕಾ ಕುತ್ತಾ ನಾ ಘರ್ ಕಾ ನ ಘಾಟ್ ಕ’ ಅನ್ನೊಹಂಗ ಆಗಿತ್ತು ನನ್ನ ತಮ್ಮನ ಬಾಳು. ಆವತ್ತು ಫೋನ್ ಮಾಡಿದಾಗನೂ … Read more

ಅಂತಿಮ ನಮನ: ಸುಮನ್ ದೇಸಾಯಿ ಅಂಕಣ

        ಮುಂಜಾನೆ  ನಸಿಕಲೇ 5 ಗಂಟೆ ಆಗಿತ್ತು. ಅದ ಇನ್ನು ಜಂಪ ಹತ್ತಲಿಕತ್ತಿತ್ತು. ಅತ್ತಿಯವರ ನರಳಾಟ ಕೇಳಿ ಸುಧಾಗ ಎಚ್ಚರಾತು. ರಾತ್ರಿಯೆಲ್ಲಾ ಮಲಗಿದ್ದೆಯಿಲ್ಲ. ಅದೇನ ಸಂಕಟಾ ಆಗಲಿಕತ್ತಿತ್ತೊ ಅವರಿಗೆ ಗೊತ್ತು. ಸಾಯೋ ಮುಂದಿನ ಸಂಕಟಾ ಭಾಳ ಕೆಟ್ಟ ಇರತದಂತಾರ ಇದ ಏನೊ ಅನಿಸ್ತು. ಆದ್ರ ಸುಧಾಗ ಅದ ಕ್ಷಣಾ ಅಂಥಾ ಪರಿಸ್ಥಿತಿಯೊಳಗ ನಗುನು ಬಂತು. ಅಲ್ಲಾ ತಮ್ಮಷ್ಟಕ್ಕ ತಾವು ಅತೀ ಶಾಣ್ಯಾರ ಅನಕೊಂಡ ದೀಡ ಪಂಡಿತರು “ ಸಾಯೊ ಸಂಕಟಾ ಭಾಳ ಕೆಟ್ಟ ಇರತದ “ ಅಂತ … Read more

ಚುನಾವಣೆ:ಸುಮನ್ ದೇಸಾಯಿ

ಲೊಕಲ ಎಲೆಕ್ಷನ್ ದಿನಗೊಳ ಹತ್ರ ಬರಲಿಕತ್ತಿದ್ವು.ಜಬರದಸ್ತ ಪ್ರಚಾರ ಶೂರು ಆಗಿದ್ವು. ಸಣ್ಣ ಮಕ್ಕಳಿಂದ ಹಿಡದು ಹರೆದ ಹುಡುಗುರು ಸುಧ್ಧಾ ಓಣ್ಯಾಗೆಲ್ಲಾ " ಅಕ್ಕಾ ಅಕ್ಕಾ ಶಾಣ್ಯಾಕಿ… ಪಕ್ಷಕ್ಕ ಓಟ ಹಾಕಾಕಿ, ಮಾಮಾ ಭಾಳ ಶಾಣ್ಯಾಂವಾ… ಪಕ್ಷಕ್ಕ ಓಟ ಹಾಕಾಂವಾ, ಅಂಥೇಳಿ ಒದರಿಕೊತ ಪ್ರಚಾರ ಮಾಡಕೊತ ಅಡ್ಯಾಡಲಿಕತ್ತಿದ್ರು. ಎಲೆಕ್ಷನ್ ಅಂದ್ರ ಎಲ್ಲಾಕಡೆ ಅದೊಂದ ಥರಾ ಲಹರಿನ ಬ್ಯಾರೆ ಇರತದ. ಮನಿ ಮನಿಗೆ ಹೋಗಿ ಪ್ರಚಾರ ಮಾಡೊದು ನಡದಿತ್ತು. ಒಳಗಿಂದೊಳಗ ನಮಗ ಓಟ ಹಾಕ್ರಿ ಅಂಥೇಳಿ ಆಣಿ ಪ್ರಮಾಣಾ ಮಾಡಿಸ್ಕೊಳ್ಳೊದು … Read more

ಸುಮನ್ ದೇಸಾಯಿ ಅಂಕಣದಲ್ಲಿ ನೆನಪಿನ ಲಹರಿ…

ಒಂದ ವಾರ ಹಚ್ಚಿ ಹೊಡದ ಮಳಿ ಅವತ್ತ ಒಂದ ಸ್ವಲ್ಪ ಹೊರಪಾಗಿತ್ತು. ಇಡಿ ದಿನಾ ಬಿದ್ದ ಬಿಸಲಿಂದ ಹಸಿಯಾಗಿದ್ದ ನೆಲ ಎಲ್ಲ ಒಣಗಿ ಬೆಚ್ಚಗಿನ ವಾತಾವರಣ ಇತ್ತು. ಒಂದ ವಾರದಿಂದ ಮನ್ಯಾಗ ಕೂತು ಕೂತು ಬ್ಯಾಸರಾಗಿತ್ತು. ಸಂಜಿಮುಂದ ವಾಕಿಂಗ್ ಹೋಗಬೇಕನಿಸಿ ನಮ್ಮ ಕಾಲೋನಿಯೊಳಗಿದ್ದ ಪಾರ್ಕಿಗೆ ಮಕ್ಕಳನ್ನ ಕರಕೊಂಡು ಹೋದೆ. ಅದೊಂದು ಸಣ್ಣ ಪಾರ್ಕು. ಅಷ್ಟರೊಳಗನ ಮಕ್ಕಳಿಗೆ ಆಡಲಿಕ್ಕೆ ಜಾರಬಂಡಿ, ಜೋಕಾಲಿ, ಒಂದ ಸಣ್ಣ ಪರ್ಣಕುಟಿರ, ಹೆಣ್ಣಮಕ್ಕಳಿಗೆ ಒಂದ ಕಡೆ ಗುಂಪಾಗಿ ಕೂತು ಹರಟಿಹೊಡಿಲಿಕ್ಕೆ ಹೇಳಿ ಮಾಡಿಸಿದಂಗ ಸುತ್ತಲೂ … Read more

ಕಣ್ಣಂಚಿನ ಪ್ರೀತಿ:ಸುಮನ್ ದೇಸಾಯಿ ಅಂಕಣದಲ್ಲಿ ಕತೆ

 ನನ್ನ ಮಕ್ಕಳ ಕ್ರಿಸ್ ಮಸ್ ಸೂಟಿ ಶೂರು ಆಗಿದ್ವು. ಹದಿನೈದ ದಿನಾ ರಜಾ ಇದ್ವು. ನನ್ನ ಮಕ್ಕಳಿಬ್ಬರು ಎಲ್ಲೆರೆ ಪ್ರವಾಸಕ್ಕ ಹೋಗೊಣ ಅಂತ ಗಂಟಬಿದ್ದಿದ್ರು. ನನ್ನ ಮಗಳು "ಅಮ್ಮಾ ಗೋವಾಕ್ಕ ಹೋಗೊಣು ಅಲ್ಲೆ ಕ್ರಿಸ್ ಮಸ್ ಹಬ್ಬಾನ ಭಾಳ ಮಸ್ತ ಸೆಲೆಬ್ರೇಟ್ ಮಾಡತಾರಂತ, ಮತ್ತ ಗೋವಾದಾಗ ಬೀಚನ್ಯಾಗ ಮಸ್ತ ಆಟಾನು ಆಡಬಹುದು" ಅಂದ್ಲು. ಪ್ರೀತಿ ಮಗಳು ಕೇಳಿದ್ದನ್ನ ಇಲ್ಲಾ ಅನ್ಲಿಕಾಗ್ಲಿಲ್ಲಾ ನಾ ಯೆಸ್ ಅಂದೆ. ಇನ್ನ ಹೆಂಡತಿ ಡಿಸೈಡ ಮಾಡಿದ್ದನ್ನ ಬ್ಯಾಡ ಅನ್ಲಿಕ್ಕೆ ಸಾಧ್ಯನ ಇಲ್ಲಂತ ನಮ್ಮನಿಯವರನು … Read more

ಮೂಲಂಗಿ ಪಚಡಿ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಭಾಳ ದಿವಸದ್ದ ಮ್ಯಾಲೆ ನಾವು ಗೆಳತ್ಯಾರೆಲ್ಲಾ ಒಂದ ಕಡೆ ಸೇರಿದ್ವಿ. ದಿನಾ ಒಂದಕ್ಕು ಮನ್ಯಾಗ ಗಂಡಾ ಮಕ್ಕಳಿಗೆ ನಾಷ್ಟಾ,ಊಟಾ ಅಂಥೇಳಿ  ದಿನಾ ಮುಂಝಾನೆದ್ದ ಕೂಡಲೆ ಚಪಾತಿ ಹಿಟ್ಟಿನ್ ಮುದ್ದಿ ನೋಡಿ ನೋಡಿ ನಮಗೂ  ಸಾಕಾಗಿತ್ತು. ಇವರಿಗೆಲ್ಲಾ ಹೊಟ್ಟಿತುಂಬ ಮಾಡಿ ಹಾಕಿ ಮತ್ತ ಮ್ಯಾಲೆ ಇವರ ಕಡೆ ದಿನಾ ಮಾಡಿದ್ದ ಮಾಡತಿ ಅಂತ ಬೈಸ್ಕೊಳ್ಳೊದ ಬ್ಯಾರೆ . ಅದಕ್ಕ ಬ್ಯಾಸರಾಗಿ ನಾವೆಲ್ಲಾ ಫ್ರೇಂಡ್ಸ್ ಮಾತಾಡಕೊಂಡ ಎಲ್ಲೆರೆ ಹೊರಗ ಸೇರಿ ” ಗೇಟ್ ಟುಗೆದರ್ ” ಮಾಡೊದಂತ ಡಿಸೈಡ್ ಮಾಡಿದ್ವಿ. … Read more

ಬೀಗರನ ಕಳಸೊ ಸಂಭ್ರಮ: ಸುಮನ್ ದೇಸಾಯಿ ಬರೆವ ನಗೆ ಅಂಕಣ

ನನ್ನ ಜೊಡಿ ಕೆಲಸ ಮಾಡೊ ಗೆಳತಿ ಸುಧಾ ಅವರ ಊರಿಗೆ ಜಾತ್ರಿಗೆ ಅಂತ ಅವರ ಹಳ್ಳಿಗೆ ಹೋಗಿದ್ದೆ. ಸಣ್ಣದಿದ್ರು ಸಮೄಧ್ಧಿಯಿಂದ ಕೂಡಿದ ಊರು. ನನ್ನ ಗೆಳತಿಯವರದು ಅವಿಭಕ್ತ ಕುಟುಂಬ. ದೊಡ್ಡ ಮನಿ, ಮನಿ ತುಂಬ ಮಂದಿ. ಹೇಳಿಕೇಳಿ ಹಳ್ಳಿ ಮಂದಿ. ಎಲ್ಲಾರು ಹೆಜ್ಜಿ ಹೆಜ್ಜಿಗು ಉಪಚಾರ ಮಾಡೊವರನ. ಅವತ್ತ ಎಲ್ಲಾರು ಮಾತಾಡಕೊತ ಕೂತಾಗ ಹಿಂಗಾ ಆತು. ಸಂಜಿಮುಂದ ಐದ ಗಂಟೆ ಆಗಿತ್ತು. ಚಹಾದ ಟೈಮ್ ಆಗಿತ್ತು. ಅಷ್ಟರಾಗ ಒಳಗಿಂದ ಒಂದ ಐದು ವರ್ಷದ ಸುಧಾನ ತಮ್ಮನ ಮಗಳು … Read more

ಚಂಪಕಮಾಲಾ…!: ಸುಮನ್ ದೇಸಾಯಿ ಬರೆವ ನಗೆ ಅಂಕಣ

ಆವತ್ತ ಆಫೀಸಿಗೆ ಸೂಟಿ ಇತ್ತು. ಎಲ್ಲಾ ಕೆಲಸಾ ಮುಗಿಸಿ ಆರಾಮಾಗಿ ಟಿವ್ಹಿಯೊಳಗ ‘ಅಡಿಗೆ ಅರಮನಿ’ ನೊಡ್ಕೋತ ಕೂತಿದ್ದೆ. ಗಂಗಾವತಿ ಪ್ರಾಣೇಶ ಅವರು ತಮ್ಮ ಹಾಸ್ಯ ಪ್ರಹಸನದೊಳಗ ಹೇಳೋಹಂಗ ಇವರು ಮಾಡಿ ತೋರೆಸೋ ಅಡಗಿಗಿಂತಾ ಅವರ ರೇಷ್ಮಿ ಸೀರಿ, ಹಾಕ್ಕೊಂಡಿದ ದಾಗಿನಾ, ಮಾಡ್ಕೊಂಡ ಮೇಕಪ್, ಹೇರ್ ಸ್ಟೈಲ್ ನ ಮಸಾಲಿಕಿಂತಾ ಖಡಕ ಇದ್ವು. ಯಾವದೋ ಒಂದು ಸೊಪ್ಪಿನ ಸೂಪ್ ಮಾಡೋದ ಹೆಂಗಂತ ಹೇಳಿಕೊಡ್ಲಿಕತ್ತಿದ್ಲು. ಆಕಿ ಖುಲ್ಲಾ ಬಿಟಗೊಂಡ ಕೂದಲಾ ಎಲ್ಲೆ ಆಕಿ ಮಾಡೊ ಸೂಪಿನ ರುಚಿ ನೋಡತಾವೊ ಅನಿಸ್ತಿತ್ತು. … Read more

ನಾನ್-ವೆಜ್ ಬರ್ಥಡೇ ಪಾರ್ಟಿ:ಸುಮನ್ ದೇಸಾಯಿ ಅಂಕಣ

ನನ್ನ ನಾದಿನಿ ರುಕ್ಕುನ ಮಗನ್ನ ಹುಟ್ಟಿದ ಹಬ್ಬದ ಪಾರ್ಟಿಗೆ ಹೋಗಿದ್ದೆ. ಮನಿ ಟೆರೇಸ್ ಮ್ಯಾಲೆನ ಎಲ್ಲಾ ಅರೇಂಜ್ಮೆಂಟ್ ಮಾಡಿದ್ಲು. ಎಲ್ಲಾ ಕಡೆ ಲೈಟಿನ ಸರಾ ಹಾಕಿದ್ರು. ಅದ್ರ ಟೆರೇಸ್ ತುಂಬ ಅಲ್ಲಲ್ಲೇ ಅಲಂಕಾರಕ್ಕಂತ ಪ್ರಾಣಿಗೋಳ ಗೊಂಬಿ ನಿಲ್ಲಿಸಿದ್ರು. ನೋಡಿದ್ರ ಯಾವದೋ ಝೂ ಒಳಗ ಬಂಧಂಗ ಅನಿಸ್ತಿತ್ತು. ಯಾಕೊ ವಿಚಿತ್ರ ಅನಿಸಿದ್ರು, ಸಣ್ಣ ಹುಡುಗರಿಗೆ ಪ್ರಾಣಿ ಅಂದ್ರ ಭಾಳ ಸೇರತಾವ ಅದಕ್ಕ ಇರಬಹುದು ಅಂತ ಅನ್ಕೊಂಡೆ. ಯಾಕಂದ್ರ ನನ್ನ ಮಗಾನೂ ಪ್ರಾಣಿ ಪ್ರಿಯನ ಇದ್ದಾನ. ಸಣ್ಣಾಂವ ಇದ್ದಾಗ ನಮ್ಮತ್ತಿಯವರು … Read more

ಸರಕ್ಕ ಸರಿತಲ್ಲ – ಪರಕ್ಕಂತ್ ಹರಿತಲ್ಲ……: ಸುಮನ್ ದೇಸಾಯಿ ಅಂಕಣ

                        ಮೊನ್ನೆ ಸಂಜಿಮುಂದ ನನ್ನ ಗೆಳತಿ ಕವ್ವಿ(ಕವಿತಾ) ಬಂದಿದ್ಲು. ಹಿಂಗ ಅದು ಇದು ಮಾತಾಡಕೋತ ತಮ್ಮ ತಮ್ಮಂದು ಮದವಿ ಘಟ್ಟಿ ಆದ ಸುದ್ದಿ ಹೇಳಿದ್ಲು.ಆಕಿ ತಮ್ಮಂದು ಕನ್ಯಾ ಆರಿಸೊದ್ರಾಗ ಭಾಳ ತಕರಾರ ಅವ ಅಂತ ಕೇಳಿದ್ದೆ. ಅಂತು ಇಂತು ನಿಶ್ಚೆ ಆತಲ್ಲಾ ಅಂತ " ಅಯ್ಯ ಛೋಲೊ ಆತಲ್ಲಾ ಪಾರ್ಟಿ ಯಾವಾಗಲೇ" ಅಂದೆ. ಅದಕ್ಕ ಆಕಿ "ಹೋಗ ನಮ್ಮವ್ವ ಎಲ್ಲಿ ಪಾರ್ಟಿ … Read more

ಚೆಲುವೆಯ ನೋಟ ಚೆನ್ನಾ, ಒಲವಿನ ಮಾತು ಚೆನ್ನಾ..: ಸುಮನ್ ದೇಸಾಯಿ ಅಂಕಣ

ಮೊನ್ನೆ ರವಿವಾರ ಮುಂಝಾನೆ ನಮ್ಮ ತಮ್ಮ  ಹಾಡ ಹಾಡಕೊತ ಗಿಡಕ್ಕ ನೀರ ಹಾಕಲಿಕತ್ತಿದ್ದಾ. ಆ ಹಾಡು ಏನಂದ್ರ " ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋತಿಯ ಕಾಟಾ, ಹೆಂಡತಿಯೊಬ್ಬಳು ಜೊತೆಯಲಿ ಇದ್ದರೆ ಹಳಸಿದ ಅನ್ನದ ಊಟಾ…" ಅಂತ ಹಾಡಕೊತ ತನ್ನಷ್ಟಕ್ಕ ತಾನ ನಗಲಿಕತ್ತಾಗ ಹಿಂದ ಯಾರೊ ನಿಂಥಂಗ ಅನಿಸಿ ಹೊಳ್ಳಿ ನೋಡಿದ್ರ ಟೊಂಕದ ಮ್ಯಾಲೆ ಕೈ ಇಟಗೊಂಡ ಉರಿ ಉರಿ ಮಾರಿಮಾಡಕೊಂಡ ತನ್ನ ನೋಡಲಿಕತ್ತ ಹೆಂಡತಿನ್ನ ನೋಡಿ ಒಂದ ಘಳಿಗಿ ಎದಿ ಝಲ್ಲಂದು ಹಂಗ ಸುಮ್ನ ನಿಂತಾ. ಆಕಿ … Read more

ಪಿನ್ನಿ-ಪಲ್ಲು ಪ್ರಳಯ ಪ್ರಸಂಗ: ಸುಮನ್ ದೇಸಾಯಿ

      ತಿಂಗಳದ ಎರಡನೆ ಶನಿವಾರ್ ಆಫೀಸಿಗೆ ಸೂಟಿ ಇರತದ. ದಿನಾ ಒಂದಕ್ಕು ಗಂಡಾ ಮಕ್ಕಳಿಗೆ ಮಾಡಿ ಹಾಕಿ,ಆಫೀಸು ಮನಿ ಅಂತ ಬ್ಯಾಸತ್ತ ಶುಕ್ರವಾರ ದಿನಾ ಮುಂಝಾನೆ " ನಾಳೆ, ನಾಡದ ಸೂಟಿ ಅದ, ನಾ ಇವತ್ತ ನಮ್ಮ ಅಮ್ಮನ ಮನಿಗೆ ಹೋಗಿಬರತೇನಿ. ಒಮ್ಮೆಲೆ ಸೋಮವಾರ ಸಂಜೀಕೆ ಆಫೀಸ್ ಮುಗಿಸಿಕೊಂಡ ಬರತೇನಿ" ಅಂತ ಒದರಿದೆ. ಅದಕ್ಕ ಗಂಡಾ ಮಕ್ಕಳು ಕೂಡೆ ಒಂದ ಧ್ವನಿಲೆ "ನಾವು ಬರತೇವಿ  ಅಂತ ಅಂದ್ರು. ಅದಕ್ಕ ನಾ ಒಂದ ನಮ್ಮಮ್ಮನ ಮನಿಗೆ ಕಾಲರ ಇಡ್ರಿ … Read more

ಮದಲ ನಾ ಸೆವೆನ್ ಮಂಥ ಬಾರ್ನ ಇದ್ದೇನಿ: ಸುಮನ್ ದೇಸಾಯಿ

ಮಧ್ಯಾಹ್ನ ಮೂರುವರಿ ಆಗಿತ್ತು.  ನಾನು ಮತ್ತ ನಮ್ಮ ತಮ್ಮಾ ಟಿಪಾಯಿ ಮ್ಯಾಲೆ ರಾಶಿಗಟ್ಟಲೆ ಕನ್ಯಾಗೊಳ ಫೋಟೊ ಮುಂದ ಹರವಿಕೊಂಡ ಕುತಿದ್ವಿ. ಮದಲ ಬ್ರಾಹ್ಮಣರಾಗ ಕನ್ಯಾದ ಅಭಾವ ಅದ ಹಂತಾದ್ರೊಳಗ ಇಂವಾ ನಮ್ಮ ತಮ್ಮಂದು ಆರ್ಸೊಣಿಕಿ ಬ್ಯಾರೆ ನೋಡಿ " ಲೇ ಲಗೂನ ಯಾವದ ಒಂದ ಸೆಲೆಕ್ಟ ಮಾಡಿ ಲಗ್ನಾ ಮಾಡಕೊಂಡ ಕಡಿಕ್ಯಾಗ, ಇಲ್ಲಾಂದ್ರ ಎಲ್ಲಿದರ ಒಂದ ಹಿಡಕೊಂಡ ಬಂದ ಮುದ್ರಾ ಹಾಕಿಸಿ ಮನ್ಯಾಗ ಹೋಗಿಸ್ಕೊಬೇಕಾಗ್ತದ ನೋಡ " ಅಂದೆ. ಖರೆನು ಈಗ ಕನ್ಯಾ ಅವ ಅವ ಅನ್ನೊದ್ರಾಗ … Read more