ವಿಜ್ಞಾನ-ಪರಿಸರ

ಆನೆ ಕೊಂದಿತು – ಸಿಂಹ ತಿಂದಿತು!!: ಅಖಿಲೇಶ್ ಚಿಪ್ಪಳಿ

ಭೌದ್ಧ ಧರ್ಮದಲ್ಲೊಂದು ಕಥೆಯಿದೆ. ನೀರಿನಲ್ಲಿ ಬಿದ್ದ ಚೇಳನ್ನು ಸನ್ಯಾಸಿಯೊಬ್ಬ ಬರಿಗೈಯಿಂದ ಎತ್ತಿ ಬದುಕಿಸುವ ಪ್ರಯತ್ನದಲ್ಲಿರುತ್ತಾನೆ. ಚೇಳು ಕುಟುಕುತ್ತದೆ. ಇವನ ಕೈಜಾರಿ ಮತ್ತೆ ನೀರಿಗೆ ಬೀಳುತ್ತದೆ. ಪ್ರತಿಬಾರಿ ಸನ್ಯಾಸಿಯು ಅದನ್ನು ಬದುಕಿಸಲು ಪ್ರಯತ್ನ ಮಾಡುವುದು ಹಾಗೂ ಅದು ಕುಟುಕುವುದು ನಡದೇ ಇರುತ್ತದೆ. ದಾರಿಹೋಕನೊಬ್ಬ ಕೇಳುತ್ತಾನೆ, ಅದು ನಿನಗೆ ಕುಟುಕುತ್ತಿದ್ದರೂ, ಅದನ್ನು ಬದುಕಿಸುವ ಪ್ರಯತ್ನ ಮಾಡುತ್ತಿದ್ದೀಯಲ್ಲ. ಅದಕ್ಕೆ ಆ ಬಿಕ್ಷು ಹೇಳುತ್ತಾನೆ, ಕುಟುಕುವುದು ಅದರ ಧರ್ಮ, ಬದುಕಿಸುವುದು ನನ್ನ ಧರ್ಮ. ಮೇಲ್ನೋಟಕ್ಕೆ ಇದೊಂದು ತರಹದ ನೀತಿ ಕಥೆಯಂತೆ ತೋರಬಹುದು. ಆದರೆ, […]

ವಿಜ್ಞಾನ-ಪರಿಸರ

ಕೆರೆಗೆ ಹಾರ ಭಾಗ 2: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಹಿಂದಿನ ವಾರ: ಉದ್ಘಾಟನೆಯ ಮಾರನೇ ದಿನವೇ ವಾಟ್ಸಪ್ ಗುಂಪು ಚುರುಕಿನಿಂದ ಕೆಲಸ ಮಾಡಿತು. ಸಲಹೆಗಳು ಹರಿದು ಬಂದವು. ಮತ್ತೂ ಮತ್ತೂ ಮರೆಯಬಾರದ ಸೂತ್ರವೊಂದಿದೆ. ಅದೇ ಸೂತ್ರವನ್ನು ಗಮನಿಸುತ್ತಲೇ ಇರಬೇಕು. ಅದೇ ಉತ್ಸಾಹ-ಸಲಹೆ-ಸೂಚನೆಗಳು ಕೆರೆಯ ಹೂಳನ್ನು ಎತ್ತಲಾರವು ಎಂಬುದೇ ಈ ಸೂತ್ರ. ಬಂಗಾರಮ್ಮನ ಕೆರೆಯ 600 ವರ್ಷಗಳ ಹೂಳನ್ನು ತೆಗೆಯಲು ಹಿಟಾಚಿ-ಟಿಪ್ಪರ್‍ಗಳು ಬೇಕು. ಇವಕ್ಕೆ ಮತ್ತೆ ಹಣಕಾಸು ಬೇಕು. ಅಗಾಧ ಪ್ರಮಾಣದ ಹೂಳನ್ನು ಹೊರಸಾಗಿಸಲು ಅಷ್ಟೇ ಪ್ರಮಾಣದ ಹಣಕಾಸು ಬೇಕು. ಕೆಲಸ ಶುರು ಮಾಡಿದ ವಾರದಲ್ಲೇ ಇಂಜಿನಿಯರ್ […]

ವಿಜ್ಞಾನ-ಪರಿಸರ

ಕೆರೆಗೆ ಹಾರ (ಭಾಗ 1): ಅಖಿಲೇಶ್ ಚಿಪ್ಪಳಿ

ಎಲ್ಲಾ ನಾಗರೀಕತೆಗಳು ಹುಟ್ಟಿ ವಿಕಾಸವಾಗಿದ್ದು ನದಿದಂಡೆಗುಂಟ ಎಂದು ಇತಿಹಾಸ ಹೇಳುತ್ತದೆ. ಗಾಳಿಯಲ್ಲಿರುವ ಆಮ್ಲಜನಕ ಪುಕ್ಕಟೆಯಾಗಿಯೇ ಸಿಗುತ್ತದೆ. ಅಂತೆಯೇ ನೀರು. ಗಾಳಿಯ ಲಭ್ಯತೆ ಇರುವಂತೆ ನೀರಿನ ಲಭ್ಯತೆ ಎಲ್ಲಾ ಸ್ಥಳಗಳಲ್ಲೂ ಇರುವುದಿಲ್ಲ. ಇಳಿಜಾರಿನತ್ತ ಸಾಗುವ ನೀರಿನ ಗುಣವೇ ಮನುಷ್ಯನನ್ನು ಸೆಳೆದು ತನ್ನ ದಂಡೆಗುಂಟ ಸಾಕಿಕೊಂಡಿತು. ಜೀವಜಲದ ಮಹತ್ವದ ಅರಿವು ಎಲ್ಲರಿಗೂ ಇರಬೇಕಿತ್ತು. ಅರಿವಿನ ಕೊರತೆ ನೀರಿನ ಅಗಾಧತೆಗಿಂತಲೂ ಹೆಚ್ಚಿದೆ. ತಗ್ಗಿನಲ್ಲಿ ನೀರು ಸಿಗುತ್ತದೆ ಎಂಬ ಅರಿವು ಮಾನವನಿಗೆ ಆದ ಕ್ಷಣ ಬಾವಿ-ಕೆರೆಗಳ ಹುಟ್ಟೂ ಆಯಿತು. ಒಂದು ಊರು ಆರೋಗ್ಯವಾಗಿ […]

ವಿಜ್ಞಾನ-ಪರಿಸರ

ಭೂಜ್ವರ – 2017ರ ಹಿನ್ನೋಟ: ಅಖಿಲೇಶ್ ಚಿಪ್ಪಳಿ

ಹಳೆಯ ಕ್ಯಾಲೆಂಡರ್ ಹಾಗೂ ಡೈರಿಯನ್ನು ಬದಿಗಿಟ್ಟು ಹೊಸದನ್ನು ಪಡೆಯುವ ದಿನ ದಾಪುಗಾಲಿಕ್ಕುತ್ತಾ ಬರುತ್ತಿದೆ. ಮತ್ತೊಂದು ವರುಷ ಕಳೆಯಿತು. ಹಾಗಂತ ಹಳೆಯ ಡೈರಿ ಹಾಗೂ ಕ್ಯಾಲೆಂಡರ್‍ಗಳನ್ನು ಮರತೇ ಬಿಡುವುದು ಐತಿಹಾಸಿಕ ದಾಖಲೆಯನ್ನು ಮರೆತ ಹಾಗೆ ಆಗುತ್ತದೆ. ಅತಿಮುಖ್ಯವಾದ ಘಟನೆಗಳನ್ನು ನೆನಪಿಟ್ಟುಕೊಳ್ಳಲು ಇವು ಅಗತ್ಯ. ಹೊಸದನ್ನು ಸ್ವಾಗತಿಸುವು ಪೂರ್ವದಲ್ಲಿ ಒಮ್ಮೆ ಹಿಂತಿರುಗಿ ಅವಲೋಕನಗೈಯುವುದು ಕೂಡ ಮುಖ್ಯ. ಇಡೀ ಪ್ರಪಂಚ ಇವತ್ತು ನಮ್ಮ ಅಂಗೈ ತುದಿಯಲ್ಲಿದೆ. ಮಾಹಿತಿಗಳು ಭರಪೂರ ಲಭ್ಯ. ಹಾಗಂತ ಅಂಗೈತುದಿಗೆ ನಿಲುಕುವ ಪ್ರಪಂಚ ಎಷ್ಟು ಸುರಕ್ಷಿತ ಎಂದು ಕೇಳಿದರೆ, […]

ವಿಜ್ಞಾನ-ಪರಿಸರ

2016ರ ಪಾರಿಸಾರಿಕ ಯಶೋಗಾಥೆಗಳು: ಅಖಿಲೇಶ್ ಚಿಪ್ಪಳಿ

ವರುಷಗಳು ಉರುಳಿ ಹೊಸ ವರ್ಷಗಳು ಬರುತ್ತಲೇ ಇರುತ್ತವೆ. ಕಾಲ ಯಾರಿಗೂ ಕಾಯುವುದಿಲ್ಲ ಹಾಗೂ ಉಚಿತವಾಗಿ ದೊರಕುವ ಸಮಯಕ್ಕೆ ಬೆಲೆ ಕಟ್ಟಲೂ ಸಾಧ್ಯವಿಲ್ಲ. ಇಪ್ಪತೊಂದನೇ ಶತಮಾನದಲ್ಲಿ 16 ವರುಷಗಳು ಕಳೆದುಹೋದವು. ವಿವಿಧ ಕಾರಣಗಳಿಂದಾಗಿ ಕೆಲವು ದೇಶಗಳ ಜಿಡಿಪಿಯಲ್ಲಿ ಹೆಚ್ಚಳವಾದರೆ, ಹಲವು ದೇಶಗಳ ಜಿಡಿಪಿ ರೇಖೆ ಕೆಳಮುಖವಾಗಿ ಹರಿಯಿತು. ಮಹತ್ವದ ರಾಜಕೀಯ ಸ್ಥಿತ್ಯಂತರಗಳು ಸಂಭವಿಸಿದವು. ಪರಿಸರವಾದಿಗಳನ್ನು ಅಭಿವೃದ್ಧಿ ವಿರೋಧಿಗಳು ಎಂದು ಬಿಂಬಿಸುವ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪತ್ತು ಈ ಭೂಮಿಯ ಎಲ್ಲಾ ಚರಾಚರಗಳಿಗೂ ಸಂಬಂಧಿಸಿದ್ದು. […]

ವಿಜ್ಞಾನ-ಪರಿಸರ

ವ್ಯಕ್ತಿ – ದೇಶಭಕ್ತಿ- ಭೂಶಕ್ತಿ: ಅಖಿಲೇಶ್ ಚಿಪ್ಪಳಿ

ಪಶ್ಚಿಮಘಟ್ಟಗಳ ತಪ್ಪಲಿನಲ್ಲಿಂದ ಹಿಡಿದು ಪ್ರಪಂಚದ ಬಹುತೇಕ ಎಲ್ಲಾ ಭಾಗಗಳಲ್ಲೂ ಅದೆಷ್ಟೋ ಪ್ರಭೇದಗಳು ನಾಶವಾಗಿವೆ. ಋತುಮಾನಗಳ ಬದಲಾವಣೆಯಿಂದಾಗಿ ಹೊಸ-ಹೊಸ ಪ್ರಭೇದಗಳು ಸೃಷ್ಟಿಯೂ ಆಗುತ್ತಿವೆ. ಸ್ಟೀಫನ್ ಹಾಕಿಂಗ್ಸ್‍ನಂತಹ ಮೇಧಾವಿಗಳು ಮಾನವನ ಕಾರಣಕ್ಕಾಗಿ ಬದಲಾವಣೆಯಾಗುತ್ತಿರುವ ಹವಾಗುಣದಿಂದ ಮನುಷ್ಯಕುಲಕ್ಕೇ ಆಪತ್ತು ಬಂದಿದೆ. ಇನ್ನೊಂದು ಸಾವಿರ ವರ್ಷದ ಒಳಗೆ ನಮ್ಮಗಳ ವಾಸಕ್ಕೆ ಬೇರೆ ಗ್ರಹವನ್ನು ಹುಡುಕಿಕೊಳ್ಳದಿದ್ದರೆ ನಮ್ಮ ಅವಸಾನ ಖಂಡಿತ ಎನ್ನುವ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಬದುಕುವ ವಿಜ್ಞಾನವನ್ನು ಕಂಡುಕೊಳ್ಳುವ ಹಂತದಲ್ಲಿ ನಮ್ಮ ವೈಜ್ಞಾನಿಕ ಕಾರ್ಯಕ್ಷೇತ್ರ ತ್ವರಿತವಾಗಿ ಬದಲಾಗಬೇಕಿದೆ.  ವ್ಯಕ್ತಿಗಳನೇಕರು ಸೇರಿ […]

ವಿಜ್ಞಾನ-ಪರಿಸರ

ನೀರಿಗಾಗಿ ಜನಾಂದೋಲನಗಳ ಮಹಾಮೈತ್ರಿ: ಅಖಿಲೇಶ್ ಚಿಪ್ಪಳಿ

ದಕ್ಷಿಣ ಕನ್ನಡದಂತಹ ಸಮೃದ್ಧ ಜಿಲ್ಲೆಯೀಗ ನೀರಿನ ಕೊರತೆಯಿಂದಾಗಿ ಬಳಲುತ್ತಿದೆ. ನೀರಿನ ಕೊರತೆಗೆ ಕಾರಣಗಳೇನು? ಹಾಗೂ ಇದನ್ನು ಶಾಶ್ವತವಾಗಿ ಪರಿಹರಿಸುವ ಬಗೆ ಹೇಗೆ? ಇತ್ಯಾದಿ ಗಂಭೀರ ಸಮಸ್ಯೆಗಳ ಕುರಿತಾಗಿ ವ್ಯಾಪಕ ಚರ್ಚೆ ಪ್ರಾರಂಭವಾಗಿದೆ. ಜನಾಂದೋಲನಗಳ ಮಹಾಮೈತ್ರಿ ಹೆಸರಿನಡಿಯಲ್ಲಿ ನೀರಿನ ಲಭ್ಯತೆ, ಬಳಕೆ, ನಿರ್ವಹಣೆ ಇತ್ಯಾದಿಗಳ ಕುರಿತಾಗಿ ಆಂದೋಲನ ಶುರುವಾಗಿದೆ. ಸಮುದ್ರದ ತಟದಲ್ಲೇ ಇರುವ ಈ ಜಿಲ್ಲೆಯೀಗ ಭೀಕರ ಬರಗಾಲಕ್ಕೆ ತುತ್ತಾಗಿದೆ. ನೀರಿನ ಸಮರ್ಪಕ ನಿರ್ವಹಣೆಗಾಗಿ ಸರ್ಕಾರಗಳು ಏನು ಮಾಡಬೇಕು, ಸಾರ್ವಜನಿಕರ ಕರ್ತವ್ಯವೇನು? ಮುಂತಾದ ವಿಚಾರಗಳು ಚರ್ಚೆಯಲ್ಲಿ ಒಳಗೊಳ್ಳುತ್ತವೆ. ನೀರಿಲ್ಲದ […]

ವಿಜ್ಞಾನ-ಪರಿಸರ

ಅಂತಾರಾಷ್ಟ್ರೀಯ ಪರಿಸರ ಚಲನಚಿತ್ರೋತ್ಸವ ಮತ್ತು ಜಿಗಳಿ ಗೂಡು!: ಅಖಿಲೇಶ್ ಚಿಪ್ಪಳಿ

ಈಗೊಂದು 25 ವರ್ಷಗಳ ಹಿಂದೆ ಧಾರವಾಡಕ್ಕೆ ಹೋಗಿದ್ದೆ. ಆವಾಗಿನ ನಮ್ಮ ಮನಸ್ಥಿತಿಗೂ ಇವತ್ತಿನ ಸ್ಥಿತಿಗೂ ವ್ಯತ್ಯಾಸವಿದೆ. ಫೆಬ್ರುವರಿ 18 ಮತ್ತು 19ರಂದು ಧಾರವಾಡದಲ್ಲಿ “ಅಂತಾರಾಷ್ಟ್ರೀಯ ಪರಿಸರ ಚಲನಚಿತ್ರೋತ್ಸವ” ಕಾರ್ಯಕ್ರಮ ಇತ್ತು. ಮೂಲತ: ಹೊನ್ನಾವರದ ಸಮೀಪದವರಾದ ಡಾ:ಪ್ರಕಾಶ್ ಭಟ್ ಈ ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು. ಪರಿಸರ ಎಂದ ಕೂಡಲೇ ಕಿವಿ ನಿಮಿರುವ ನಮಗೆ (ನಾನು, ಚಾರ್ವಾಕ ರಾಘು ಹಾಗೂ ಏಸು ಪ್ರಕಾಶ್) ಇದೊಂದು ಅಪ್ಯಾಯಮಾನವಾದ ಹಾಗೂ ಜರೂರತ್ತಾದ ಕಾರ್ಯಕ್ರಮವೇ ಆಗಿತ್ತು. ಸುಸ್ಥಿರ ಅಭಿವೃದ್ಧಿ ವೇದಿಕೆಯ ಮುಖ್ಯಸ್ಥರಾದ ಸಜ್ಜನ […]

ವಿಜ್ಞಾನ-ಪರಿಸರ

ತ್ಯಾಜ್ಯ-ಮಾಲಿನ್ಯ-ತ್ಯಾಜ್ಯ: ಅಖಿಲೇಶ್ ಚಿಪ್ಪಳಿ

ಪ್ರೇಮಿಗಳ ದಿನದಂದೇ ಸಾಗರದಲ್ಲಿ ಮಾರಿಜಾತ್ರೆಯೂ ಶುರುವಾಗಿದೆ. ಮಾರಿಗೆ ಉಡಿ ತುಂಬಲು ಜನ ಬೆಳಗಿನ ಜಾವದಲ್ಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಯುವಪ್ರೇಮಿಗಳೆಲ್ಲಾ ಬಹುಷ: ಫೇಸ್‍ಬುಕ್ ಅಥವಾ ವ್ಯಾಟ್ಸಪ್‍ಗಳಲ್ಲೇ ಸಂದೇಶ ರವಾನಿಸುತ್ತಲೇ ದಿನವನ್ನು ಕಳೆದರೇನೋ? ಪ್ರೇಮಿಗಳ ದಿನಾಚರಣೆ ವಿರುದ್ಧ ಮಾರಲ್ ಪೋಲೀಸ್‍ಗಿರಿ ಮಾಡಿದ್ದು ವರದಿಯಾಗಲಿಲ್ಲ. ಜನದಟ್ಟಣೆ ಹೆಚ್ಚು ಇರುವಲ್ಲಿ ಕೊಳಕೂ ಹೆಚ್ಚಿರುತ್ತದೆ. ಮಾರಿಜಾತ್ರೆಯಲ್ಲಿ ಜನಸಂದಣಿ ಹೆಚ್ಚು ಇರುವುದರಿಂದ ತ್ಯಾಜ್ಯಗಳ ಬಳಕೆಯೂ ಹೆಚ್ಚಿರುತ್ತದೆ ಹಾಗೂ ಅದರ ವಿಲೇವಾರಿ ಸಮರ್ಪಕವಾಗಿ ಆಗುವುದಿಲ್ಲ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ತ್ಯಾಜ್ಯ ವಿಲೇವಾರಿ ಮಾಡುವುದು ಸ್ಥಳೀಯ […]

ವಿಜ್ಞಾನ-ಪರಿಸರ

ನಂಬಿ! ನಾನು ಅದೃಷ್ಟ ಅಲ್ಲ!!: ಅಖಿಲೇಶ್ ಚಿಪ್ಪಳಿ

ಲೋ ಗೂಬೆಯಂತವನೇ ಎಂದು ಬಯ್ಯುವುದುಂಟು. ಅದೇಕೆ ಹಾಗೆ ಕೇಳಿದರೆ ಗೊತ್ತಿಲ್ಲ. ಲೇ ಕತ್ತೆ ಎನ್ನುವುದಿಲ್ಲವೇ ಹಾಗೆಯೇ ಇದು. ಗೂಬೆಗಳು ಮನುಷ್ಯರಿಗೆ ಅದರಲ್ಲೂ ರೈತರಿಗೆ ಮಾಡುವ ಉಪಕಾರ ಅಷ್ಟಿಷ್ಟಲ್ಲ. ರಾತ್ರಿ ಹೊತ್ತು ಬೆಳೆಗಳಿಗೆ  ಕನ್ನ ಇಕ್ಕುವ ಇಲಿಗಳನ್ನು ತಿನ್ನುತ್ತದೆ. ಹಗಲುಹೊತ್ತಿನಲ್ಲಿ ವಿಶ್ರಮಿಸುವ ಇದಕ್ಕೆ ನೈಸರ್ಗಿಕ ಶತ್ರುಗಳು ಕಡಿಮೆ. ಆದರೂ ಅಳಿವಿನಂಚಿನಲ್ಲಿರುವ ಪಕ್ಷಿ. ಇದೇಕೆ ಹೀಗೆ ಕೇಳಿದರೆ ಅದಕ್ಕೆ ಕಾರಣ ಮತ್ತೆ ನಾವೇ ಮನುಷ್ಯತ್ವ ಕಳೆದುಕೊಂಡಿರುವವರು. 2016ರ ಕೊನೆಯ ವಾರದಲ್ಲಿ ಒಂದು ಸುದ್ಧಿಯಿತ್ತು. ಗೂಬೆ ಮಾರಾಟಗಾರರ ಬಂಧನ. ಅದೂ ಸಾಗರದ […]

ವಿಜ್ಞಾನ-ಪರಿಸರ

ಗ್ರೇಟ್ ಬ್ಯಾರಿಯರ್ ಎಂಬ ಹವಳ ಸಮೂಹದ ಅವಸಾನ: ಅಖಿಲೇಶ್ ಚಿಪ್ಪಳಿ

ಬೆಂಗಳೂರಿನ ಹೊರವಲಯದಲ್ಲಿ ಮಾನವನ ದೌರ್ಜನ್ಯಕ್ಕೆ ತುತ್ತಾಗಿ ಕಾಲುಮುರಿದುಕೊಂಡು ಜೀವನ್ಮರಣಗಳ ನಡುವೆ ಒದ್ದಾಡುತ್ತಿರುವ ಸಿದ್ಧ ಎಂಬ ಹೆಸರಿನ ನಡುಹರಯದ ಆನೆಯನ್ನು ಕಡೆಗೂ ಜನರ ಒತ್ತಾಯಕ್ಕೆ ಮಣಿದು ಇಲಾಖೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ ಹೊತ್ತಿನಲ್ಲೆ, ಏನೇ ಆದರೂ 800 ಚಿಲ್ಲರೆ ಮರಗಳನ್ನು ಕಡಿದು ಉಕ್ಕಿನ ಸೇತುವೆ ನಿರ್ಮಾಣ ಮಾಡಿಯೇ ಸಿದ್ಧ ಎಂದು ಹಠ ಹಿಡಿದು ಸರ್ಕಾರ ಗಟ್ಟಿ ನಿಲುವು ತಳೆದ ಹೊತ್ತಿನಲ್ಲೇ, ಜನರ ಅಭಿಪ್ರಾಯವನ್ನು ಕಡೆಗಣಿಸಿ ಯಾವುದೇ ಯೋಜನೆಯನ್ನು ಅದರಲ್ಲೂ ಉಕ್ಕಿನ ಸೇತುವೆಯನ್ನು ನಿರ್ಮಾಣ ಮಾಡಲು ಬಿಡುವುದಿಲ್ಲವೆಂದು ಪಟ್ಟು ಹಿಡಿದ […]

ವಿಜ್ಞಾನ-ಪರಿಸರ

ಅಲ್ಲಿ ಟ್ರಂಪಾಯಣ – ಇಲ್ಲಿ ನೋಟುಗಳ ಮರಣ!!!: ಅಖಿಲೇಶ್ ಚಿಪ್ಪಳಿ

ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಸದಾ ವಿವಾದದಲ್ಲೇ ಮುಳುಗೇಳುತ್ತಾ ಅಮೇರಿಕಾದ ಅಧ್ಯಕ್ಷ ಪದವಿಯನ್ನು ಏರಿದ ರಿಪಬ್ಲಿಕ್ ಬಣದ ಮಹಾನುಭಾವ ಟ್ರಂಪ್ ಮೂಲತ: ಉದ್ದಿಮೆದಾರ, ಬಂಡವಾಳಶಾಹಿ. ಇವನ ಎದುರಾಳಿ ಇವನಿಗಿಂತ ಹೆಚ್ಚು ಮತ ಪಡೆದರೂ ತಾಂತ್ರಿಕ ರಾಜಕಾರಣದ ಕಾರಣಗಳಿಂದಾಗಿ ಸೋಲಬೇಕಾಯಿತು. ಬಿಡಿ ಈ ಅಂಕಣದಲ್ಲೇಕೆ ರಾಜಕೀಯವೆಂದು ಮೂಗು ಮುರಿದೀರಿ. ಅಪಾಯವಿರುವುದು ಈ ಮನುಷ್ಯನ ಚಿಂತನೆಗಳಲ್ಲಿ ಹಾಗೂ ಧೋರಣೆಗಳಲ್ಲಿ ಎಂದು ಹೇಳಲೇಬೇಕಾಗಿದೆ. ಹವಾಗುಣ ಬದಲಾವಣೆ ಅಥವಾ ವಾತಾವರಣ ವೈಪರೀತ್ಯವೆನ್ನುವುದು ಬರೀ ಸುಳ್ಳು ಎಂದು ಹೇಳುವವರ ಗುಂಪಿನ ನಾಯಕನೀತ. ಇಂಗಾಲಾಮ್ಲ ಹೆಚ್ಚುವುದರಿಂದ […]

ವಿಜ್ಞಾನ-ಪರಿಸರ

ಬೆವರಿಳಿಸಿದ ಸುಂಗ!!!: ಅಖಿಲೇಶ್ ಚಿಪ್ಪಳಿ

ಅಪ್ಪ ದೇಹದಾನ ಮಾಡಿದ ಬಗ್ಗೆ ಒಂದಿಷ್ಟು ಜನ ಅಸಮಧಾನ ವ್ಯಕ್ತಪಡಿಸಿದರು. ಇರಲಿ ಅವರವರ ಭಾವಕ್ಕೆ ತಕ್ಕಂತೆ ಎಂದು ಸುಮ್ಮನಾದೆ. ಧಾರ್ಮಿಕ ವಿಧಿ-ವಿಧಾನಗಳನ್ನು ಮಾಡಬೇಕಲ್ಲ. ಕಾಶಿಗಿಂತ ಪವಿತ್ರವಾದ ಸ್ಥಳ ಗೋಕರ್ಣ ಎಂದು ಬಲ್ಲವರು ಹೇಳಿದರು. ಸರಿ ಎಂದು ಸಕುಟುಂಬ ಸಮೇತನಾಗಿ ಗೋಕರ್ಣಕ್ಕೆ ಹೊರಟಾಯಿತು. ಹೋದ ಕೂಡಲೇ ಮೊಟ್ಟ ಮೊದಲ ಕೆಲಸವೆಂದರೆ, ತಲೆ ಬೋಳಿಸಿಕೊಂಡಿದ್ದು. ಕನ್ನಡಿಯಲ್ಲಿ ಒಂದು ಕ್ಷಣ ಗುರುತೇ ಸಿಗದಂತೆ ಆಗಿತ್ತು. ಸ್ನಾನ ಮಾಡಿಬಂದವನು ಮೊದಲು ಹುಡುಕಿದ್ದು ಬಾಚಣಿಕೆಯನ್ನು. ಅಭ್ಯಾಸ ಬಲದಂತೆ ತಲೆ ಬಾಚಲು ಹೋದರೆ ಅಲ್ಲಿ ಕೂದಲೇ […]

ವಿಜ್ಞಾನ-ಪರಿಸರ

ಮೊನಾರ್ಕ್ ಚಿಟ್ಟೆ ಹಾಗೂ ಮಿಂಚುಳ: ಅಖಿಲೇಶ್ ಚಿಪ್ಪಳಿ

ಮಲೆನಾಡಿನಲ್ಲಿ ಸತತ ಮೂರನೇ ವರ್ಷದ ಬರಗಾಲ ಧಾಂಗುಡಿಯಿಡುತ್ತಿದೆ. ನಿಜಕ್ಕೂ ಇದಕ್ಕೆ ಮರಗಾಲವೆಂದೇ ಕರೆಯಬೇಕು. ಪಶ್ಚಿಮಘಟ್ಟದ ಕಾಲಬುಡದಲ್ಲಿರುವ ನಮಗೆ ವಾಸ್ತವಿಕವಾಗಿ ಬರವೆಂಬ ಶಬ್ಧದ ಅರಿವೇ ಇರಬಾರದು. ಆದರೂ ಅದರ ಅರಿವಾಗುತ್ತಿದೆ, ನಿಧಾನಕ್ಕೆ ಇಲ್ಲಿಯ ಜನರ ಬದುಕನ್ನು ನುಂಗಲು ಹೊರಟಿರುವ ಈ ಮರದ ಅಭಾವದಿಂದಾಗುತ್ತಿರುವ ಈ ಪರಿಸ್ಥಿತಿಗೆ ಮರಗಾಲವೆಂದೇ ಹೇಳಬಹುದು. ಪಕ್ಕದ ಹೊಸನಗರದಲ್ಲಿ, ತೀರ್ಥಹಳ್ಳಿಯಲ್ಲಿ ಮಳೆಯಾದರೆ, ರಾಜ್ಯಕ್ಕೆ ವಿದ್ಯುತ್ ನೀಡುವ ಲಿಂಗನಮಕ್ಕಿ ಜಲಾಶಯ ತುಂಬುತ್ತದೆ. ಜೋಗದ ಸಿರಿ ಹೆಚ್ಚುತ್ತದೆ. ಆ ಎರಡೂ ತಾಲ್ಲೂಕುಗಳಲ್ಲೂ ಮಳೆಯಿಲ್ಲ. ಜೋಗದಲ್ಲಿ ನೀರಿಲ್ಲದ ಹೊತ್ತಿನಲ್ಲೇ ಜೋಗದ […]

ವಿಜ್ಞಾನ-ಪರಿಸರ

ವೀರ್ಯವಂತನಾದ ಆಮೆಯೊಂದು ತನ್ನ ಸಂತತಿ ಉಳಿಸಿದ ಕಥೆ: ಅಖಿಲೇಶ್ ಚಿಪ್ಪಳಿ

ಸ್ಥಳೀಯವಾದ ಒಂದು ಘಟನೆ ಹಾಗೂ ಅಂತಾರಾಷ್ಟ್ರೀಯ ಎರಡು ಘಟನೆಗಳು ಈ ವಾರ ದಾಖಲೆ ಮಾಡಬೇಕಾದ ವಿಷಯಗಳೇ ಸೈ. ಸಾಗರದ ಅಗ್ರಹಾರದಲ್ಲಿ ಬೆಂಗಳೂರು ಮೂಲದ ಶ್ರೀಮಂತ ಉದ್ಯಮಿಯೊಬ್ಬರು ಮನೆ ಕಟ್ಟಲು ಪರವಾನಿಗೆ ತೆಗೆದುಕೊಂಡು, ಮನೆ ಕಟ್ಟಲು ಪ್ರಾರಂಭಿಸಿದರು. ಅವರಿಗೆ ಅಡ್ಡಿಯಾಗಿದ್ದು, ರಸ್ತೆ ಬದಿಯ ಎರಡು ಮರಗಳು. ತುಪ್ಪ ತಿಂದ ತಲೆಯನ್ನು ಓಡಿಸಿದರು. ಅದು ಹೇಗೋ ಒಂದಿಷ್ಟು ಜನ ಮರ ಕಡಿತಲೆಯನ್ನು ವಿರೋಧಿಸುವ ಮನೋಭಾವ ಹೊಂದಿದವರು ಅಡ್ಡಿ ಮಾಡಿದರೆ ಕಷ್ಟ ಎಂದುಕೊಂಡು ಎಲ್ಲವನ್ನೂ ಕಾನೂನಾತ್ಮಕವಾಗಿ ಮಾಡಿ ಮುಗಿಸುವ ಪ್ಲಾನ್ ರಚನೆಯಾಯಿತು. […]

ವಿಜ್ಞಾನ-ಪರಿಸರ

“ದ ಹಿಡನ್ ಸೀಕ್ರೇಟ್ಸ್ ಆಫ್ ಟ್ರೀಸ್”: ಅಖಿಲೇಶ್ ಚಿಪ್ಪಳಿ

ಪೀಟರ್ ಹೋಲ್‍ಮನ್ ರೋಲ್ಡ್ ದಾಲ್ ಬರೆದ “ದ ಸೌಂಡ್ ಮಶಿನ್” ಎಂಬ ಸಣ್ಣ ಕತೆಯಲ್ಲಿ ಒಬ್ಬ ಮನುಷ್ಯ ಒಂದು ಯಂತ್ರವನ್ನು ಕಂಡು ಹಿಡಿಯುತ್ತಾನೆ. ಕಿವಿಗೆ ಹಾಕಿಕೊಳ್ಳುವ ಈ ಯಂತ್ರದ ವಿಶೇಷವೆಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಸ್ವಾಭಾವಿಕವಾಗಿ ಕೇಳಲಾರದ ಶಬ್ಧಗಳು ಕೇಳಿ ಬರುತ್ತವೆ. ಆ ಯಂತ್ರವನ್ನು ಕಿವಿಗೆ ಹಾಕಿಕೊಂಡು ಲಾನ್‍ನಲ್ಲಿ ಅಡ್ಡಾಡುತ್ತಾನೆ. ಅಲ್ಲಿ ಬೆಳೆದ ಸೇವಂತಿಗೆ ಹೂವನ್ನು ಕೀಳುತ್ತಾನೆ. ಆಶ್ಚರ್ಯವೆಂಬಂತೆ ಗಿಡದಿಂದ ವಿಚಿತ್ರವಾದ ಸದ್ದು ಬರುತ್ತದೆ. ಅದೇನು ಅಳುವೇ, ನೋವಿನ ಆಕ್ರಂದನವೇ? ಅಥವಾ ಪ್ರತಿಭಟಿಸುವ ಚರ್ಯೆಯೇ ಅವನಿಗದು ಅರ್ಥವಾಗುವುದಿಲ್ಲ. ಸಸ್ಯಗಳಿಗೆ […]

ವಿಜ್ಞಾನ-ಪರಿಸರ

ರಾಜಕಾರಣಿಗಳು ಪಾರಿಸಾರಿಕ ದಿವಾಳಿತನವೂ!!!: ಅಖಿಲೇಶ್ ಚಿಪ್ಪಳಿ

70ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ದೇಶ ಮುಳುಗಿದ್ದ ಹೊತ್ತಿನಲ್ಲೆ ಅತ್ತ ಕೆಂಪುಕೋಟೆಯಿಂದ ಪ್ರಧಾನಿಯವರು ಭಾಷಣ ಮಾಡುತ್ತಿದ್ದರು. ದೇಶಕ್ಕೆ ಅನ್ನ ಕೊಡುವ ರೈತರನ್ನು ಇನ್ನಿಲ್ಲದಂತೆ ಹೊಗಳುತ್ತಿದ್ದರು. ಅತ್ತ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಟುವಾಗಿ ಟೀಕಿಸುತ್ತಾ, ದೇಶದ ತಲಾವಾರು ಆರ್ಥಿಕ ಸೂಚ್ಯಂಕವನ್ನು ಹೆಚ್ಚು ಮಾಡುವ ಉತ್ತರದಾಯಿತ್ವದ ಮಾತುಗಳು ಬರುತ್ತಿದ್ದವು. ಇದೇ ಹೊತ್ತಿನಲ್ಲಿ ಅನ್ನಭಾಗ್ಯದ ಅಕ್ಕಿಯ ಪ್ರಮಾಣವನ್ನು ಹೆಚ್ಚಿಸುವುದಾಗಿ ನಮ್ಮ ಮುಖ್ಯಮಂತ್ರಿಗಳ ಭರವಸೆಯ ಭಾಷಣವನ್ನೂ ಟಿ.ವಿ.ಚಾನಲ್‍ಗಳು ಬಿತ್ತರಿಸುತ್ತಿದ್ದವು. ಇನ್ನು ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಅತೀವ ಬಳಲಿಕೆಯಿಂದ ಓದಬೇಕಾದ ಭಾಷಣವನ್ನು […]

ವಿಜ್ಞಾನ-ಪರಿಸರ

ಹಸುರು ಪಾಚಿ ಮತ್ತು ಕೊಳಕು ನೀರು: ಅಖಿಲೇಶ್ ಚಿಪ್ಪಳಿ

ಸಮುದ್ರದ ನೀರು ಆವಿಯಾಗಿ ಮೋಡಗಟ್ಟಿ, ಗಾಳಿಯ ಸಹಾಯದಿಂದ ಭೂಪ್ರದೇಶದ ಮೇಲೆ ಹಾರುತ್ತಾ, ಕಾಲ-ಕಾಲಕ್ಕೆ ಮಳೆ ಸುರಿಸುತ್ತಾ, ಜೀವಜಲವಾಗಿ ಸಕಲವನ್ನು ಪೊರೆಯುತ್ತಾ ಸಾಗುತ್ತದೆ. ಮತ್ತದೇ ನೀರು ಹಳ್ಳ-ಕೊಳ್ಳಗಳ, ನದಿ-ತೊರೆಗಳ ಮೂಲಕ ಹರಿಯುತ್ತಾ ತನ್ನೊಂದಿಗೆ ನೆಲದ ಸಾವಯವ ತ್ಯಾಜ್ಯಗಳನ್ನು ಸೇರಿಸಿಕೊಂಡು ಸಮುದ್ರದ ಜೀವಿಗಳಿಗೆ ಆಹಾರವನ್ನು ಒಯ್ಯುತ್ತದೆ. ಉಪ್ಪುನೀರಿನ ಜೀವಿಗಳಿಗೂ ನೆಲದ ಸಾವಯವ ಸುರಿಗಳೇ ಆಹಾರವಾಗುತ್ತವೆ. ಈ ಜಲಚಕ್ರ ಏರುಪೇರಾದರೆ, ಎಲ್ಲೋ ಯಾವುದೋ ಜೀವಿ ಸಂಕಷ್ಟಕ್ಕೆ ಸಿಲುಕುತ್ತದೆ. ನಮ್ಮಲ್ಲಂತೂ ಮೋಡಗಳನ್ನು ಸೆಳೆಯುವ ಕಾಡುಗಳೇ ಮಾಯವಾಗುತ್ತಿವೆ. ದಕ್ಷಿಣದ ಚಿರಾಪುಂಜಿಯೆಂಬ ಖ್ಯಾತಿ ಹೊಂದಿದ ಆಗುಂಬೆಯಲ್ಲೂ […]

ವಿಜ್ಞಾನ-ಪರಿಸರ

(ಅ)ನ್ಯಾಯದಾನಕ್ಕೂ ಹದಿನೆಂಟು ವರ್ಷವೇ???: ಅಖಿಲೇಶ್ ಚಿಪ್ಪಳಿ

ಈ ದಿನ ಬೆಳಗ್ಗೆ (26/07/2016) ದಿನಪತ್ರಿಕೆಯ ಮುಖಪುಟದಲ್ಲೊಂದು ಸುದ್ಧಿಯಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ನಿರಾಳ. ರಾಜಸ್ಥಾನದಲ್ಲಿ 1998ರಲ್ಲಿ ಕೊಂದ ಕೃಷ್ಣಮೃಗಗಳ ಮೊಕದ್ದಮೆಯಿಂದ ಬಿಡುಗಡೆ. ಪುಟ ತಿರುವಿದಾಗೆ ಇನ್ನೊಂದು ಸುದ್ದಿಯೂ ಇತ್ತು. ಮೂಡಿಗೆರೆಯಲ್ಲಿ ಅರಣ್ಯ ಪ್ರದೇಶವನ್ನು ಒತ್ತುವರಿ  ಮಾಡಿದವರಿಂದಲೇ 430 ಮರಗಳ ಮಾರಣ ಹೋಮ. ಇನ್ನೊಂದು ಪುಟ ಮಗುಚಿದರೆ ಬೀಜಿಂಗ್‍ನಲ್ಲಿ ಕಾರಿನಿಂದಿಳಿದ ಮಹಿಳೆಯನ್ನು ಹೊತ್ತೊಯ್ದ ಸಿಂಹ. ಇವು ಬೇರೆ ಬೇರೆ ಸುದ್ದಿಯೆಂದು ಮೇಲ್ನೋಟಕ್ಕೆ ಅನಿಸಿದರು, ಇವು ಒಂದಕ್ಕೊಂದು ಬೆಸೆದು ಕೊಂಡಿರುವುದನ್ನು ಕಾಣಬಹುದು. ಇರಲಿ ಇದು ಹೇಗೆ ಎಂಬುದನ್ನು […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-8: ಅಖಿಲೇಶ್ ಚಿಪ್ಪಳಿ

ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ಮಾತೊಂದು ಪ್ರಚಲಿತದಲ್ಲಿದೆ. ವರ್ಷದ ಎಲ್ಲಾ ಋತುಮಾನಗಳು ನಿಸರ್ಗದತ್ತವಾಗಿ ಸಸೂತ್ರವಾಗಿ ನಡೆದರೆ ಭೂಮಿಯ ಮೇಲೆ ವಾಸಿಸುವ ಜೀವಿಗಳು ಸುರಕ್ಷಿತವಾಗಿ ಇರಬಲ್ಲವು. ಭೂತಾಯಿಯ ಬುದ್ಧಿವಂತ ಮಕ್ಕಳಾದ ನಾವು ಮಾಡಿದ್ದೇ ಸರಿ ಎಂಬ ಅಹಂಕಾರವನ್ನು ಹೊಂದಿದ್ದೇವೆ. ಇಡೀ ಭೂಮಿ ಇರುವುದೇ ನಮ್ಮ ಲಾಭಕ್ಕಾಗಿ, ನಮ್ಮ ಸುಖಕ್ಕಾಗಿ ಎಂದು ಭಾವಿಸಿಕೊಂಡಿದ್ದೇವೆ. ಪ್ರಕೃತಿಯ ನೈಸರ್ಗಿಕ ಪ್ರಯೋಗಾಲವನ್ನು ಛಿಧ್ರ ಮಾಡಿ, ಇಡೀ ನಿಸರ್ಗವನ್ನು ನಮ್ಮ ಸುಖದ ಹುಡುಕುವಿಕೆಯ ಪ್ರಯೋಗಾಲಯವನ್ನಾಗಿ ಪರಿವರ್ತಿಸಿದ್ದೇವೆ. ಹವಾಗುಣ ಬದಲಾವಣೆಯಿಂದಾಗಿ ಇಡೀ ಪ್ರಪಂಚದ ಎಲ್ಲಾ ಪ್ರದೇಶಗಳು […]

ವಿಜ್ಞಾನ-ಪರಿಸರ

ಲಕ್ಷ್ಮೀ ಹಿಂಡು – ಪಂಚು ತಂಡ!: ಅಖಿಲೇಶ್ ಚಿಪ್ಪಳಿ

ರಹ! ರಹ!! ರಹ!!! ಎನ್ನುವ ಪಿಸುಧ್ವನಿಗಿಂತ ಕೊಂಚ ದೊಡ್ಡದಾದ ಧ್ವನಿ ಕೇಳಿ ನಿಂತದ್ದು ಬರೋಬ್ಬರಿ 8 ಅಡಿ ಎತ್ತರದ ಕಾಡಾನೆ ಲಕ್ಷ್ಮಿ ಮತ್ತು ಅದರ ಜೊತೆಗಿರುವ 25ಕ್ಕೂ ಹೆಚ್ಚು ಆನೆಗಳಿರುವ ಹಿಂಡು. ಧ್ವನಿಸಿದ್ದು, 5 ಅಡಿ ಎತ್ತರದ, ಶಾಶ್ವತವಾದ ನೌಕರಿಯಿಲ್ಲದ ಬರೀ 200 ರೂಪಾಯಿಗಳಿಗೆ ದಿನಗೂಲಿಗೆ ದುಡಿಯುವ ಪಂಚಾನನ್ ನಾಯಕ್ ಎಂಬ ಅರಣ್ಯ ಇಲಾಖೆಯ ವಾಚರ್!! 25ರ ಸಂಖ್ಯೆಯಲ್ಲಿರುವ ಆನೆಯ ಹಿಂಡಿಗೆ ಲಕ್ಷ್ಮೀಯೇ ನಾಯಕಿ. ಪಂಚಾನನ್ ಧ್ವನಿ ಕೇಳುತ್ತಿದ್ದಂತೆ, ಇಡೀ ಹಿಂಡು ಸ್ತಬ್ಧವಾಯಿತು. ಇಡೀ ಗುಂಪಿನ ವಯಸ್ಕ […]

ವಿಜ್ಞಾನ-ಪರಿಸರ

ಶತ್ರುಗಳು ಯಾರೆಂಬುದು ತಿಳಿಯಿತು! ಅದು ನಾವೇ!!!: ಅಖಿಲೇಶ್ ಚಿಪ್ಪಳಿ

ವಿಶ್ವ ಭೂದಿನದಂದು ಇಡೀ ಭೂಮಿಯನ್ನು ಕಾಪಾಡಲು ಕಾಡು ಬೇಕು. ಆದ್ದರಿಂದ ಮಾರ್ಚ್ 22ರಂದು ವಿಶ್ವದ ಎಲ್ಲಾ ದೇಶಗಳಲ್ಲೂ ಆದಷ್ಟು “ಗಿಡ ನೆಡಿ” ಎಂಬ ಘೋಷವಾಕ್ಯಕ್ಕೆ ಒತ್ತು ಕೊಟ್ಟಿದ್ದರು. ದೇಶದ ಪ್ರಧಾನಿಯಿಂದ ಹಿಡಿದು ಹೆಚ್ಚೂ-ಕಡಿಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭೂದಿನದ ಅಂಗವಾಗಿ ಆಕರ್ಷಕವಾದ ಹೇಳಿಕೆಗಳನ್ನು ನೀಡಿದರು. ನಮ್ಮಲ್ಲಿಯ ಮಾಧ್ಯಮಗಳು ಭೂದಿನವನ್ನು ವಿಶೇಷವಾಗಿ ಪರಿಗಣಿಸಲಿಲ್ಲವೆಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ ಭೂಮಿ ಗುಂಡಗಿದೆ ಎನ್ನುತ್ತೇವೆ. ನಿಜವಾಗಲೂ ಭೂಮಿ ಗುಂಡಗಿದೆಯೇ? ದಿನದ 24 ತಾಸುಗಳಲ್ಲಿ ರಾತ್ರಿಯೆಷ್ಟು? ಹಗಲೆಷ್ಟು? ಖಂಡಗಳು ಚಲಿಸುತ್ತವೆಯೇ? ಹೀಗೊಂದಿಷ್ಟು ನಮ್ಮ […]

ವಿಜ್ಞಾನ-ಪರಿಸರ

ಮರಳುಗಾಡನ್ನೇ ತಡೆದ ಮಹಾಗೋಡೆ ಯಾಕುಬಾ: ಅಖಿಲೇಶ್ ಚಿಪ್ಪಳಿ

ಈ ಪ್ರಪಂಚದ ಬಹುತೇಕ ಜನಸಂಖ್ಯೆ ಕಾಡು ಇರುವುದು ಕಡಿಯಲಿಕ್ಕೆ, ಪ್ರಾಣಿಗಳು ಇರುವುದು ತಿನ್ನಲಿಕ್ಕೆ ಎಂಬು ಭಾವಿಸಿಕೊಂಡಂತಿದೆ. ಈ ಮನೋಭಾವದಿಂದಾಗಿಯೇ ಜಗತ್ತಿನ ಬಹಳಷ್ಟು ಕಾಡು ಹಾಗೂ ವನ್ಯಸಂಪತ್ತು ನಶಿಸಿಹೋಗುತ್ತಿದೆ. ಕಾಡು ಇಲ್ಲದೆ ಮಳೆಯಿಲ್ಲ, ಮಳೆಯಿಲ್ಲದೆ ನೀರಿಲ್ಲ, ನೀರಿಲ್ಲದೆ ಮನುಷ್ಯನ ಜೀವನವಿಲ್ಲ ಎಂಬ ಸತ್ಯ ಇದೀಗ ನಿಧಾನವಾಗಿ ಅರಿವಿನ ಹಂತಕ್ಕೆ ಬರುತ್ತಿದೆ. ಅದರಲ್ಲೂ ನೀರಿಗಾಗಿ, ಕಾಡಿಗಾಗಿ ಜೀವಮಾನವನ್ನೇ ತೇಯ್ದ ಹಲವರು ನಮ್ಮ ಮುಂದಿದ್ದಾರೆ. ಇವರ ನಿಸ್ವಾರ್ಥ ಸೇವೆ ಜಗತ್ತಿನ ಧುರೀಣರಿಗೆ ಮಾದರಿಯಾಗಬೇಕು ಅಂತದೊಂದು ಸಾಹಸಗಾಥೆಯನ್ನು  ಅನಾವರಣಗೊಳಿಸುವ ಮೊದಲು ನಮ್ಮ ಕಾಲಬುಡದಲ್ಲಿ […]

ವಿಜ್ಞಾನ-ಪರಿಸರ

ಜಲ ಸಂಕಷ್ಟ: ಅಖಿಲೇಶ್ ಚಿಪ್ಪಳಿ

ಮನುಷ್ಯನನ್ನು ಸುಸ್ತು ಮಾಡಲು ಯಾವುದಾದರೂ ಒಂದು ಕಾಯಿಲೆ ಸಾಕು. ಅದೇ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್-ಏಡ್ಸ್ ಎಲ್ಲಾ ಒಟ್ಟೊಟ್ಟಿಗೆ ಅಮರಿಕೊಂಡರೆ ಏನಾಗಬಹುದು. ಯಾವ ಡಾಕ್ಟರ್ ಕೂಡಾ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯವಿಲ್ಲದಂತೆ ಆಗುತ್ತದೆ. ಈ ಭೂಮಿಯ ಮೇಲೆ ನೀರಿನ ವಿಚಾರದಲ್ಲೂ ಇದೇ ಆಗಿದೆ. ಅತ್ತ ಎಲ್‍ನಿನೋ ಪೀಡನೆಯಾದರೆ, ಇತ್ತ ಮನುಷ್ಯರೇ ಸ್ವತ: ಹವಾಮಾನ ವೈಪರೀತ್ಯವೆಂಬ ಭೂತವನ್ನು ಮೈಮೇಲೆ ಎಳೆದುಕೊಂಡದ್ದು. ಎಲ್‍ನಿನೋ ಪ್ರಭಾವ ಪ್ರಪಂಚದ ಎಲ್ಲಾ ಭಾಗದಲ್ಲೂ ತನ್ನ ಪರಿಣಾಮವನ್ನು ಬೀರದೇ ಇದ್ದರೂ, ಹವಾಮಾನ ವೈಪರೀತ್ಯ ನಿಶ್ಚಿತವಾಗಿ ಇಡೀ ಜಗತ್ತನ್ನು […]

ವಿಜ್ಞಾನ-ಪರಿಸರ

ಮರಳೆಂಬ ಚಿನ್ನದ ಪುಡಿ: ಅಖಿಲೇಶ್ ಚಿಪ್ಪಳಿ

ಈ ಅಂಕಣವನ್ನು ನಿಯಮಿತವಾಗಿ ಓದುತ್ತಿರುವವರಿಗೆ ಈ ಹಿಂದೆ ಬರೆದ “ಕರಿಯನ ಕತೆ” ನೆನಪಿರಬಹುದು. ಅದೊಂದು ನಾಯಿಮರಿಯನ್ನು ತಂದು ಸಾಕಿದ್ದೆ. ಮನೆಯೆದುರಿನ ನುಣ್ಣನೆಯ ರಸ್ತೆಯಲ್ಲಿ ನಸುಕಿನ ಹೊತ್ತು ಅಕ್ರಮ ಮರಳು ಲಾರಿಗಳು ಅತ್ಯಂತ ವೇಗವಾಗಿ ಸಾಗುತ್ತವೆ. ಒಂದು ದಿನ ಮರಳಿನ ಲಾರಿಗೆ ಸಿಕ್ಕುವುದರಿಂದ ಸ್ವಲ್ಪದಲ್ಲಿ ಕರಿಯ ಪಾರಾದ. ಅವತ್ತೇ ಲೆಕ್ಕ ಹಾಕಿ, ಅನಂತಪುರದ ಒಬ್ಬರಿಗೆ ಕರಿಯನನ್ನು ದಾಟಿಸಿ ಬಂದೆ. ಲಾರಿ ಮಾಫಿಯಾ ಯಾವ ಪರಿ ಬೆಳೆದಿದೆಯೆಂದರೆ, ಅದರ ಲೆಕ್ಕಾಚಾರ, ಅನೈತಿಕ ಸಾಮಾನ್ಯರಿಗೆ ನಿಲುಕುವುದೇ ಇಲ್ಲ. ಬೆಂಗಳೂರಿನಲ್ಲಿ ಉಳುಮೆ ಮಾಡುವ […]

ವಿಜ್ಞಾನ-ಪರಿಸರ

ಕಾವ್ಯಧಾರೆ ಬಿದಲೋಟಿ ರಂಗನಾಥ್, ಯಲ್ಲಪ್ಪ ಎಮ್ ಮರ್ಚೇಡ್, ಸಿಪಿಲೆನಂದಿನಿ

ಕಲ್ಲೆದೆಯ ಮೇಲೆ ಪ್ರೀತಿ ಕೊನರಿಸಿ ಕಲ್ಲೆದೆಯ ಮೇಲೆ  ಪ್ರೀತಿ ಕೊನರಿಸಿ ಹೋದ ಅವಳು ತಿರುಗಿ ನೋಡಿದ್ದು ಕಂಕುಳಲ್ಲಿ ಮಗು ಎತ್ತುಕೊಂಡು. ನೆನಪ ಮರೆಯಲು ಕುಡಿತದ ಬೆನ್ನೇರಲು ನಯಾ ಪೈಸಾ ಕಾಸಿರಲಿಲ್ಲ ದಿನಂಪ್ರತಿ ಸುಡುತ್ತಾ ಹೋದ ಅವಳ ನೆನಪಿಗೆ ಮುಲಾಮು ಹಚ್ಚಲು ಆಗಲಿಲ್ಲ ನೈಜತೆಯ ಹುಡುಕುತ್ತಾ ಹೋದೆ ಅವಳ ಪ್ರೀತಿಯ ಮೇಲೆ ಜಾತಿ ಎಂಬ ಬೆಂಕಿ ಉರಿದ ಹೊಗೆಯ ನಿಶಾನೆ ಇತ್ತು !! ಅವಾಗ್ಗಾಗಲೇ ನೆತ್ತಿಗೇರಿದ್ದ ಪ್ರೀತಿಗೆ ಬೆಂಕಿ ಆರಿಸುವ ನೀರಾಗಲು ಧೈರ್ಯಕ್ಕೆ ಕಣ್ಣು ಕಾಣುತ್ತಿರಲಿಲ್ಲ ಸೋಲಲೇ ಬೇಕಾಗಿತ್ತು […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-7: ಅಖಿಲೇಶ್ ಚಿಪ್ಪಳಿ

ತುಡುಗು ದನಗಳ ಕಾಟವನ್ನು ತಡೆಯಲು ಬೇರಾವುದೇ ಉಪಾಯ ಕಾಣಲಿಲ್ಲ. ಇಡೀ ದಿನ ಕಾಯುವುದಂತೂ ಸಾಧ್ಯವಿಲ್ಲ. ನೀರಿನ ಅಭಾವದಿಂದ ಸಾಯುತ್ತಿರುವ ಗಿಡಗಳನ್ನು ಉಳಿಸುವುದು ಹೇಗೆ ಎಂಬುದೇ ಪ್ರಶ್ನೆ. ಬಾವಿಯನ್ನೋ, ಕೊಳವೆ ಬಾವಿಯನ್ನೋ ತೆಗೆಸಲು ತಕ್ಷಣದಲ್ಲಿ ಸಾಧ್ಯವಿಲ್ಲ. ನೀರಿನ ಅಭಾವಕ್ಕೆ ಮೊಟ್ಟಮೊದಲಿಗೆ ಬಲಿಯಾಗುತ್ತಿರುವುದು ಊರಹೊನ್ನೆಯೆಂಬ ಗಿಡಗಳು. ಇವುಗಳನ್ನು ಹೊನ್ನಾವರ-ಕುಮುಟದ ಕಡೆಯಿಂದ ತರಿಸಿದ್ದೆ. ಮೊದಲ ವರ್ಷ ನೀರು ಬೇಡುವ ಸಸ್ಯಗಳವು. ನೀರನ್ನು ಕೊಡದಿದ್ದರೆ ಊರಹೊನ್ನೆ ಗಿಡಗಳು ಬದುಕಲಾರವು. ಈಗ ನೆರೆಯವರಿಗೆ ಕೊಂಚ ಹೊರೆಯಾದರೆ ಹೇಗೆ ಎಂಬ ಯೋಚನೆಯೊಂದು ಬಂತು. ಪಕ್ಕದ ಆಶ್ರಮದವರ […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-6: ಅಖಿಲೇಶ್ ಚಿಪ್ಪಳಿ

ಬಿದಿರಿಗೆ ಬಂದ ಆಪತ್ತು ಮನುಷ್ಯನ ಜೀವನಕ್ಕೆ ಹೋಲಿಸಿದರೆ ಭೂಮಿಯ ವಯಸ್ಸು ಅಗಾಧವಾದದು. ವಿಜ್ಞಾನಿಗಳು ಹೇಳುವಂತೆ 460 ಕೋಟಿ ವರ್ಷಗಳು. ಅಗ್ನಿಯ ಗೋಲವಾಗಿದ್ದ ಭೂಮಿಯ ಚೂರು, ಕೋಟಿ ವರ್ಷಗಳಿಂದ ವಾತಾವರಣಕ್ಕೆ ಸಿಲುಕಿ, ತರ-ತರಹದ ರಾಸಾಯನಿಕ ಕ್ರಿಯೆಗೊಳಪಟ್ಟು 420 ಕೋಟಿ ವರ್ಷಗಳು ಬೆಂಗಾಡಾಗಿಯೇ ಇತ್ತು. ಭೂಮಿಯ ಈ ವಯಸ್ಸಿನಲ್ಲಿ ಹೂ ಅರಳಿ, ಜೀವೋತ್ಪನ್ನಕ್ಕೆ ನಾಂದಿಯಾಯಿತು. ಅಂತೂ ಮಾನವನೆಂಬ ಪ್ರಾಣಿ ಜನಿಸಿ, ಕಾಡಿನಲ್ಲಿ ಜೀವ ನಡೆಸಿ, ಬೆಂಕಿಯನ್ನು ಕಂಡು ಹಿಡಿದು, ಕೃಷಿಯನ್ನು ಕಲಿತು ನಾಗರೀಕನೆಂಬ, ವಿಜ್ಞಾನಿಯೆಂಬ, ವಿವೇಕನಂತನೆಂಬ, ವಿಚಾರವಂತನೆಂಬ ನಾನಾ ತರಹದ […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-5: ಅಖಿಲೇಶ್ ಚಿಪ್ಪಳಿ

ಮೊಲಕ್ಕೆ ಕತ್ತಿ ಬೀಸಿದವ ಮಳೆಯನ್ನೇ ನಂಬಿಕೊಂಡು ಕಾಡು ಕಟ್ಟಲು ಹೊರಟ ನಮ್ಮ ಬವಣೆಗೀಗ ಒಂದು ಪರಿಹಾರ ಬೇಕಾಗಿತ್ತು. ನಮ್ಮ ಹತ್ತಿರ ಮಳೆಗಾಲದಲ್ಲಿ ಮಳೆ ನೀರಿಂಗಿಸಲು ತೋಡಿದ 20 * 20 * 20ರ ನೀರಿಲ್ಲದ ಹೊಂಡವೊಂದು ಬಿಟ್ಟರೆ ಬೇರೆ ಏನೂ ಇಲ್ಲ. ಮನೆಯಿಂದ ಪ್ರತಿದಿನ ನೀರು ತೆಗೆದುಕೊಂಡು ಹೋಗಿ ಸಾಯುತ್ತಿರುವ ಗಿಡಗಳಿಗೆ ನೀರುಣಿಸುವ ಕೆಲಸ ಕಷ್ಟ. ಅಂತೆಯೇ ಏರಿಯ ಮೇಲೆ ನೆಟ್ಟ 400 ಬಿದಿರು ಹಾಗೂ 100 ಕ್ಯಾಲಿಯಾಂಡ್ರಗಳಲ್ಲಿ ಬಿದಿರು ಮಾತ್ರ ಜೀವ ಹಿಡಿದುಕೊಂಡಿತ್ತು. ಕ್ಯಾಲಿಯಾಂಡ್ರಗಳು ಹೆಚ್ಚಿನವು […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-4: ಅಖಿಲೇಶ್ ಚಿಪ್ಪಳಿ

ಶುಭಸೂಚನೆ ನೀಡಿ ಬಂದ ಮಳೆ ಅದೇಕೋ ಮತ್ತೆ ಮುನಿಸಿಕೊಳ್ಳುವ ಹವಣಿಕೆಯಲ್ಲಿದ್ದಂತೆ  ತೋರಿತು. ಇನ್ನಷ್ಟು ಜನರನ್ನು ಕರೆದುಕೊಂಡು ಬಂದು ಆದಷ್ಟು ಬೇಗ ಗಿಡ ನೆಡಲು ತರಾತುರಿ ಮಾಡಿದೆ. ಆಳುಗಳ ನಿರ್ವಹಣೆ ಮಾಡುವ ನಿರ್ವಾಹಕನಿಗೆ ಕೆಲವು ಷರತ್ತುಗಳನ್ನು ಮೊದಲೇ ಹಾಕಿದ್ದೆ. ಗಿಡಗಳನ್ನು ನೆಟ್ಟ ನಂತರ ಖಾಲಿ ಪ್ಲಾಸ್ಟಿಕ್ ಕೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಯಾವುದೇ ಪ್ರಾಣಿ-ಪಕ್ಷಿ-ಕೀಟ-ಹಾವು-ಕಪ್ಪೆಗಳನ್ನು ಅಪ್ಪಿ-ತಪ್ಪಿಯೂ ಕೊಲ್ಲಬಾರದು. ಅಕೇಶಿಯಾ-ನೀಲಗಿರಿ ಹಾಗೂ ಯುಪಟೋರಿಯಂ ಬಿಟ್ಟು ಮತ್ಯಾವುದೇ ನೈಸರ್ಗಿಕ ಗಿಡ-ಬಳ್ಳಿ-ಮುಳ್ಳುಕಂಟಿಗಳನ್ನು ಕಡಿಯಬಾರದು. ಈ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದರೂ ಮತ್ತೆ ಕೆಲಸಕ್ಕೆ ಬರುವುದು […]