ವಿಜ್ಞಾನ-ಪರಿಸರ

ಲಕ್ಷ್ಮೀ ಹಿಂಡು – ಪಂಚು ತಂಡ!: ಅಖಿಲೇಶ್ ಚಿಪ್ಪಳಿ

ರಹ! ರಹ!! ರಹ!!! ಎನ್ನುವ ಪಿಸುಧ್ವನಿಗಿಂತ ಕೊಂಚ ದೊಡ್ಡದಾದ ಧ್ವನಿ ಕೇಳಿ ನಿಂತದ್ದು ಬರೋಬ್ಬರಿ 8 ಅಡಿ ಎತ್ತರದ ಕಾಡಾನೆ ಲಕ್ಷ್ಮಿ ಮತ್ತು ಅದರ ಜೊತೆಗಿರುವ 25ಕ್ಕೂ ಹೆಚ್ಚು ಆನೆಗಳಿರುವ ಹಿಂಡು. ಧ್ವನಿಸಿದ್ದು, 5 ಅಡಿ ಎತ್ತರದ, ಶಾಶ್ವತವಾದ ನೌಕರಿಯಿಲ್ಲದ ಬರೀ 200 ರೂಪಾಯಿಗಳಿಗೆ ದಿನಗೂಲಿಗೆ ದುಡಿಯುವ ಪಂಚಾನನ್ ನಾಯಕ್ ಎಂಬ ಅರಣ್ಯ ಇಲಾಖೆಯ ವಾಚರ್!! 25ರ ಸಂಖ್ಯೆಯಲ್ಲಿರುವ ಆನೆಯ ಹಿಂಡಿಗೆ ಲಕ್ಷ್ಮೀಯೇ ನಾಯಕಿ. ಪಂಚಾನನ್ ಧ್ವನಿ ಕೇಳುತ್ತಿದ್ದಂತೆ, ಇಡೀ ಹಿಂಡು ಸ್ತಬ್ಧವಾಯಿತು. ಇಡೀ ಗುಂಪಿನ ವಯಸ್ಕ […]

ವಿಜ್ಞಾನ-ಪರಿಸರ

ಶತ್ರುಗಳು ಯಾರೆಂಬುದು ತಿಳಿಯಿತು! ಅದು ನಾವೇ!!!: ಅಖಿಲೇಶ್ ಚಿಪ್ಪಳಿ

ವಿಶ್ವ ಭೂದಿನದಂದು ಇಡೀ ಭೂಮಿಯನ್ನು ಕಾಪಾಡಲು ಕಾಡು ಬೇಕು. ಆದ್ದರಿಂದ ಮಾರ್ಚ್ 22ರಂದು ವಿಶ್ವದ ಎಲ್ಲಾ ದೇಶಗಳಲ್ಲೂ ಆದಷ್ಟು “ಗಿಡ ನೆಡಿ” ಎಂಬ ಘೋಷವಾಕ್ಯಕ್ಕೆ ಒತ್ತು ಕೊಟ್ಟಿದ್ದರು. ದೇಶದ ಪ್ರಧಾನಿಯಿಂದ ಹಿಡಿದು ಹೆಚ್ಚೂ-ಕಡಿಮೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭೂದಿನದ ಅಂಗವಾಗಿ ಆಕರ್ಷಕವಾದ ಹೇಳಿಕೆಗಳನ್ನು ನೀಡಿದರು. ನಮ್ಮಲ್ಲಿಯ ಮಾಧ್ಯಮಗಳು ಭೂದಿನವನ್ನು ವಿಶೇಷವಾಗಿ ಪರಿಗಣಿಸಲಿಲ್ಲವೆಂಬುದು ಇಲ್ಲಿ ಗಮನಾರ್ಹ. ಸಾಮಾನ್ಯವಾಗಿ ಭೂಮಿ ಗುಂಡಗಿದೆ ಎನ್ನುತ್ತೇವೆ. ನಿಜವಾಗಲೂ ಭೂಮಿ ಗುಂಡಗಿದೆಯೇ? ದಿನದ 24 ತಾಸುಗಳಲ್ಲಿ ರಾತ್ರಿಯೆಷ್ಟು? ಹಗಲೆಷ್ಟು? ಖಂಡಗಳು ಚಲಿಸುತ್ತವೆಯೇ? ಹೀಗೊಂದಿಷ್ಟು ನಮ್ಮ […]

ವಿಜ್ಞಾನ-ಪರಿಸರ

ಮರಳುಗಾಡನ್ನೇ ತಡೆದ ಮಹಾಗೋಡೆ ಯಾಕುಬಾ: ಅಖಿಲೇಶ್ ಚಿಪ್ಪಳಿ

ಈ ಪ್ರಪಂಚದ ಬಹುತೇಕ ಜನಸಂಖ್ಯೆ ಕಾಡು ಇರುವುದು ಕಡಿಯಲಿಕ್ಕೆ, ಪ್ರಾಣಿಗಳು ಇರುವುದು ತಿನ್ನಲಿಕ್ಕೆ ಎಂಬು ಭಾವಿಸಿಕೊಂಡಂತಿದೆ. ಈ ಮನೋಭಾವದಿಂದಾಗಿಯೇ ಜಗತ್ತಿನ ಬಹಳಷ್ಟು ಕಾಡು ಹಾಗೂ ವನ್ಯಸಂಪತ್ತು ನಶಿಸಿಹೋಗುತ್ತಿದೆ. ಕಾಡು ಇಲ್ಲದೆ ಮಳೆಯಿಲ್ಲ, ಮಳೆಯಿಲ್ಲದೆ ನೀರಿಲ್ಲ, ನೀರಿಲ್ಲದೆ ಮನುಷ್ಯನ ಜೀವನವಿಲ್ಲ ಎಂಬ ಸತ್ಯ ಇದೀಗ ನಿಧಾನವಾಗಿ ಅರಿವಿನ ಹಂತಕ್ಕೆ ಬರುತ್ತಿದೆ. ಅದರಲ್ಲೂ ನೀರಿಗಾಗಿ, ಕಾಡಿಗಾಗಿ ಜೀವಮಾನವನ್ನೇ ತೇಯ್ದ ಹಲವರು ನಮ್ಮ ಮುಂದಿದ್ದಾರೆ. ಇವರ ನಿಸ್ವಾರ್ಥ ಸೇವೆ ಜಗತ್ತಿನ ಧುರೀಣರಿಗೆ ಮಾದರಿಯಾಗಬೇಕು ಅಂತದೊಂದು ಸಾಹಸಗಾಥೆಯನ್ನು  ಅನಾವರಣಗೊಳಿಸುವ ಮೊದಲು ನಮ್ಮ ಕಾಲಬುಡದಲ್ಲಿ […]

ವಿಜ್ಞಾನ-ಪರಿಸರ

ಜಲ ಸಂಕಷ್ಟ: ಅಖಿಲೇಶ್ ಚಿಪ್ಪಳಿ

ಮನುಷ್ಯನನ್ನು ಸುಸ್ತು ಮಾಡಲು ಯಾವುದಾದರೂ ಒಂದು ಕಾಯಿಲೆ ಸಾಕು. ಅದೇ ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್-ಏಡ್ಸ್ ಎಲ್ಲಾ ಒಟ್ಟೊಟ್ಟಿಗೆ ಅಮರಿಕೊಂಡರೆ ಏನಾಗಬಹುದು. ಯಾವ ಡಾಕ್ಟರ್ ಕೂಡಾ ಚಿಕಿತ್ಸೆ ನೀಡಿ ಬದುಕಿಸಲು ಸಾಧ್ಯವಿಲ್ಲದಂತೆ ಆಗುತ್ತದೆ. ಈ ಭೂಮಿಯ ಮೇಲೆ ನೀರಿನ ವಿಚಾರದಲ್ಲೂ ಇದೇ ಆಗಿದೆ. ಅತ್ತ ಎಲ್‍ನಿನೋ ಪೀಡನೆಯಾದರೆ, ಇತ್ತ ಮನುಷ್ಯರೇ ಸ್ವತ: ಹವಾಮಾನ ವೈಪರೀತ್ಯವೆಂಬ ಭೂತವನ್ನು ಮೈಮೇಲೆ ಎಳೆದುಕೊಂಡದ್ದು. ಎಲ್‍ನಿನೋ ಪ್ರಭಾವ ಪ್ರಪಂಚದ ಎಲ್ಲಾ ಭಾಗದಲ್ಲೂ ತನ್ನ ಪರಿಣಾಮವನ್ನು ಬೀರದೇ ಇದ್ದರೂ, ಹವಾಮಾನ ವೈಪರೀತ್ಯ ನಿಶ್ಚಿತವಾಗಿ ಇಡೀ ಜಗತ್ತನ್ನು […]

ವಿಜ್ಞಾನ-ಪರಿಸರ

ಮರಳೆಂಬ ಚಿನ್ನದ ಪುಡಿ: ಅಖಿಲೇಶ್ ಚಿಪ್ಪಳಿ

ಈ ಅಂಕಣವನ್ನು ನಿಯಮಿತವಾಗಿ ಓದುತ್ತಿರುವವರಿಗೆ ಈ ಹಿಂದೆ ಬರೆದ “ಕರಿಯನ ಕತೆ” ನೆನಪಿರಬಹುದು. ಅದೊಂದು ನಾಯಿಮರಿಯನ್ನು ತಂದು ಸಾಕಿದ್ದೆ. ಮನೆಯೆದುರಿನ ನುಣ್ಣನೆಯ ರಸ್ತೆಯಲ್ಲಿ ನಸುಕಿನ ಹೊತ್ತು ಅಕ್ರಮ ಮರಳು ಲಾರಿಗಳು ಅತ್ಯಂತ ವೇಗವಾಗಿ ಸಾಗುತ್ತವೆ. ಒಂದು ದಿನ ಮರಳಿನ ಲಾರಿಗೆ ಸಿಕ್ಕುವುದರಿಂದ ಸ್ವಲ್ಪದಲ್ಲಿ ಕರಿಯ ಪಾರಾದ. ಅವತ್ತೇ ಲೆಕ್ಕ ಹಾಕಿ, ಅನಂತಪುರದ ಒಬ್ಬರಿಗೆ ಕರಿಯನನ್ನು ದಾಟಿಸಿ ಬಂದೆ. ಲಾರಿ ಮಾಫಿಯಾ ಯಾವ ಪರಿ ಬೆಳೆದಿದೆಯೆಂದರೆ, ಅದರ ಲೆಕ್ಕಾಚಾರ, ಅನೈತಿಕ ಸಾಮಾನ್ಯರಿಗೆ ನಿಲುಕುವುದೇ ಇಲ್ಲ. ಬೆಂಗಳೂರಿನಲ್ಲಿ ಉಳುಮೆ ಮಾಡುವ […]

ವಿಜ್ಞಾನ-ಪರಿಸರ

ಕಾವ್ಯಧಾರೆ ಬಿದಲೋಟಿ ರಂಗನಾಥ್, ಯಲ್ಲಪ್ಪ ಎಮ್ ಮರ್ಚೇಡ್, ಸಿಪಿಲೆನಂದಿನಿ

ಕಲ್ಲೆದೆಯ ಮೇಲೆ ಪ್ರೀತಿ ಕೊನರಿಸಿ ಕಲ್ಲೆದೆಯ ಮೇಲೆ  ಪ್ರೀತಿ ಕೊನರಿಸಿ ಹೋದ ಅವಳು ತಿರುಗಿ ನೋಡಿದ್ದು ಕಂಕುಳಲ್ಲಿ ಮಗು ಎತ್ತುಕೊಂಡು. ನೆನಪ ಮರೆಯಲು ಕುಡಿತದ ಬೆನ್ನೇರಲು ನಯಾ ಪೈಸಾ ಕಾಸಿರಲಿಲ್ಲ ದಿನಂಪ್ರತಿ ಸುಡುತ್ತಾ ಹೋದ ಅವಳ ನೆನಪಿಗೆ ಮುಲಾಮು ಹಚ್ಚಲು ಆಗಲಿಲ್ಲ ನೈಜತೆಯ ಹುಡುಕುತ್ತಾ ಹೋದೆ ಅವಳ ಪ್ರೀತಿಯ ಮೇಲೆ ಜಾತಿ ಎಂಬ ಬೆಂಕಿ ಉರಿದ ಹೊಗೆಯ ನಿಶಾನೆ ಇತ್ತು !! ಅವಾಗ್ಗಾಗಲೇ ನೆತ್ತಿಗೇರಿದ್ದ ಪ್ರೀತಿಗೆ ಬೆಂಕಿ ಆರಿಸುವ ನೀರಾಗಲು ಧೈರ್ಯಕ್ಕೆ ಕಣ್ಣು ಕಾಣುತ್ತಿರಲಿಲ್ಲ ಸೋಲಲೇ ಬೇಕಾಗಿತ್ತು […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-7: ಅಖಿಲೇಶ್ ಚಿಪ್ಪಳಿ

ತುಡುಗು ದನಗಳ ಕಾಟವನ್ನು ತಡೆಯಲು ಬೇರಾವುದೇ ಉಪಾಯ ಕಾಣಲಿಲ್ಲ. ಇಡೀ ದಿನ ಕಾಯುವುದಂತೂ ಸಾಧ್ಯವಿಲ್ಲ. ನೀರಿನ ಅಭಾವದಿಂದ ಸಾಯುತ್ತಿರುವ ಗಿಡಗಳನ್ನು ಉಳಿಸುವುದು ಹೇಗೆ ಎಂಬುದೇ ಪ್ರಶ್ನೆ. ಬಾವಿಯನ್ನೋ, ಕೊಳವೆ ಬಾವಿಯನ್ನೋ ತೆಗೆಸಲು ತಕ್ಷಣದಲ್ಲಿ ಸಾಧ್ಯವಿಲ್ಲ. ನೀರಿನ ಅಭಾವಕ್ಕೆ ಮೊಟ್ಟಮೊದಲಿಗೆ ಬಲಿಯಾಗುತ್ತಿರುವುದು ಊರಹೊನ್ನೆಯೆಂಬ ಗಿಡಗಳು. ಇವುಗಳನ್ನು ಹೊನ್ನಾವರ-ಕುಮುಟದ ಕಡೆಯಿಂದ ತರಿಸಿದ್ದೆ. ಮೊದಲ ವರ್ಷ ನೀರು ಬೇಡುವ ಸಸ್ಯಗಳವು. ನೀರನ್ನು ಕೊಡದಿದ್ದರೆ ಊರಹೊನ್ನೆ ಗಿಡಗಳು ಬದುಕಲಾರವು. ಈಗ ನೆರೆಯವರಿಗೆ ಕೊಂಚ ಹೊರೆಯಾದರೆ ಹೇಗೆ ಎಂಬ ಯೋಚನೆಯೊಂದು ಬಂತು. ಪಕ್ಕದ ಆಶ್ರಮದವರ […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-6: ಅಖಿಲೇಶ್ ಚಿಪ್ಪಳಿ

ಬಿದಿರಿಗೆ ಬಂದ ಆಪತ್ತು ಮನುಷ್ಯನ ಜೀವನಕ್ಕೆ ಹೋಲಿಸಿದರೆ ಭೂಮಿಯ ವಯಸ್ಸು ಅಗಾಧವಾದದು. ವಿಜ್ಞಾನಿಗಳು ಹೇಳುವಂತೆ 460 ಕೋಟಿ ವರ್ಷಗಳು. ಅಗ್ನಿಯ ಗೋಲವಾಗಿದ್ದ ಭೂಮಿಯ ಚೂರು, ಕೋಟಿ ವರ್ಷಗಳಿಂದ ವಾತಾವರಣಕ್ಕೆ ಸಿಲುಕಿ, ತರ-ತರಹದ ರಾಸಾಯನಿಕ ಕ್ರಿಯೆಗೊಳಪಟ್ಟು 420 ಕೋಟಿ ವರ್ಷಗಳು ಬೆಂಗಾಡಾಗಿಯೇ ಇತ್ತು. ಭೂಮಿಯ ಈ ವಯಸ್ಸಿನಲ್ಲಿ ಹೂ ಅರಳಿ, ಜೀವೋತ್ಪನ್ನಕ್ಕೆ ನಾಂದಿಯಾಯಿತು. ಅಂತೂ ಮಾನವನೆಂಬ ಪ್ರಾಣಿ ಜನಿಸಿ, ಕಾಡಿನಲ್ಲಿ ಜೀವ ನಡೆಸಿ, ಬೆಂಕಿಯನ್ನು ಕಂಡು ಹಿಡಿದು, ಕೃಷಿಯನ್ನು ಕಲಿತು ನಾಗರೀಕನೆಂಬ, ವಿಜ್ಞಾನಿಯೆಂಬ, ವಿವೇಕನಂತನೆಂಬ, ವಿಚಾರವಂತನೆಂಬ ನಾನಾ ತರಹದ […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-5: ಅಖಿಲೇಶ್ ಚಿಪ್ಪಳಿ

ಮೊಲಕ್ಕೆ ಕತ್ತಿ ಬೀಸಿದವ ಮಳೆಯನ್ನೇ ನಂಬಿಕೊಂಡು ಕಾಡು ಕಟ್ಟಲು ಹೊರಟ ನಮ್ಮ ಬವಣೆಗೀಗ ಒಂದು ಪರಿಹಾರ ಬೇಕಾಗಿತ್ತು. ನಮ್ಮ ಹತ್ತಿರ ಮಳೆಗಾಲದಲ್ಲಿ ಮಳೆ ನೀರಿಂಗಿಸಲು ತೋಡಿದ 20 * 20 * 20ರ ನೀರಿಲ್ಲದ ಹೊಂಡವೊಂದು ಬಿಟ್ಟರೆ ಬೇರೆ ಏನೂ ಇಲ್ಲ. ಮನೆಯಿಂದ ಪ್ರತಿದಿನ ನೀರು ತೆಗೆದುಕೊಂಡು ಹೋಗಿ ಸಾಯುತ್ತಿರುವ ಗಿಡಗಳಿಗೆ ನೀರುಣಿಸುವ ಕೆಲಸ ಕಷ್ಟ. ಅಂತೆಯೇ ಏರಿಯ ಮೇಲೆ ನೆಟ್ಟ 400 ಬಿದಿರು ಹಾಗೂ 100 ಕ್ಯಾಲಿಯಾಂಡ್ರಗಳಲ್ಲಿ ಬಿದಿರು ಮಾತ್ರ ಜೀವ ಹಿಡಿದುಕೊಂಡಿತ್ತು. ಕ್ಯಾಲಿಯಾಂಡ್ರಗಳು ಹೆಚ್ಚಿನವು […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-4: ಅಖಿಲೇಶ್ ಚಿಪ್ಪಳಿ

ಶುಭಸೂಚನೆ ನೀಡಿ ಬಂದ ಮಳೆ ಅದೇಕೋ ಮತ್ತೆ ಮುನಿಸಿಕೊಳ್ಳುವ ಹವಣಿಕೆಯಲ್ಲಿದ್ದಂತೆ  ತೋರಿತು. ಇನ್ನಷ್ಟು ಜನರನ್ನು ಕರೆದುಕೊಂಡು ಬಂದು ಆದಷ್ಟು ಬೇಗ ಗಿಡ ನೆಡಲು ತರಾತುರಿ ಮಾಡಿದೆ. ಆಳುಗಳ ನಿರ್ವಹಣೆ ಮಾಡುವ ನಿರ್ವಾಹಕನಿಗೆ ಕೆಲವು ಷರತ್ತುಗಳನ್ನು ಮೊದಲೇ ಹಾಕಿದ್ದೆ. ಗಿಡಗಳನ್ನು ನೆಟ್ಟ ನಂತರ ಖಾಲಿ ಪ್ಲಾಸ್ಟಿಕ್ ಕೊಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಯಾವುದೇ ಪ್ರಾಣಿ-ಪಕ್ಷಿ-ಕೀಟ-ಹಾವು-ಕಪ್ಪೆಗಳನ್ನು ಅಪ್ಪಿ-ತಪ್ಪಿಯೂ ಕೊಲ್ಲಬಾರದು. ಅಕೇಶಿಯಾ-ನೀಲಗಿರಿ ಹಾಗೂ ಯುಪಟೋರಿಯಂ ಬಿಟ್ಟು ಮತ್ಯಾವುದೇ ನೈಸರ್ಗಿಕ ಗಿಡ-ಬಳ್ಳಿ-ಮುಳ್ಳುಕಂಟಿಗಳನ್ನು ಕಡಿಯಬಾರದು. ಈ ಯಾವುದೇ ಷರತ್ತುಗಳನ್ನು ಉಲ್ಲಂಘನೆ ಮಾಡಿದರೂ ಮತ್ತೆ ಕೆಲಸಕ್ಕೆ ಬರುವುದು […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-3: ಅಖಿಲೇಶ್ ಚಿಪ್ಪಳಿ

2013-14ರ ಸಾಲಿನಲ್ಲಿ ನೆಟ್ಟ ಗಿಡಗಳನ್ನು ದನಗಳು ಮೇಯ್ದುಕೊಂಡು ಹೋಗಿದ್ದವು ಎಂದು ಈ ಮೊದಲೇ ವಿವರಿಸಿಲಾಗಿದೆ. 2014-15ರ ಸಾಲಿಗೆ ಒಂದಿಷ್ಟು ಗಿಡಗಳನ್ನು ನೆಟ್ಟು ರಕ್ಷಿಸಲೇ ಬೇಕೆಂಬ ಪಣತೊಟ್ಟು ಕೆಲಸ ಶುರು ಮಾಡಿದೆವು. ತಂಪಿನ ಚಾವಣೆಯಿಲ್ಲದ ಖುಷ್ಕಿ ರೂಪದ ಆ ಪ್ರದೇಶದಲ್ಲಿ ಯುಪಟೋರಿಯಂ ಕಳೆಗಳು ಹೇರಳವಾಗಿ ಬೆಳೆದುಕೊಂಡಿದ್ದವು. ಮರಗಳ ಮೇಲ್ಚಾವಣಿ ದಟ್ಟವಾಗಿದ್ದಲ್ಲಿ ಯುಪಟೋರಿಯಂ ಹಾವಳಿ ಕಡಿಮೆ. ಬಿಸಿಲು ಬೀಳುವ ಜಾಗದಲ್ಲಿ ಹೇರಳವಾಗಿ ಬೆಳೆಯುತ್ತವೆ. ಈ ರಾಕ್ಷಸ ಕಳೆಗಳು ಬೆಳೆಯಲು ನೀರು-ಗೊಬ್ಬರಗಳ ಅಗತ್ಯವಿಲ್ಲ. ಅಷ್ಟೇನು ಗಟ್ಟಿಯಲ್ಲದ ಈ ಕಳೆಗಿಡವನ್ನು ಸಮರ್ಪಕವಾಗಿ ನಿರ್ವಹಣೆ […]

ವಿಜ್ಞಾನ-ಪರಿಸರ

ಕಾಡು(ವ) ಕಟ್ಟುವ ಕತೆ!! ಭಾಗ-೧: ಅಖಿಲೇಶ್ ಚಿಪ್ಪಳಿ

ಲೋಕೋಬಿನ್ನರುಚಿ: ಎನ್ನುವ ಮಾತು ಸಾರ್ವಕಾಲಿಕ ಸತ್ಯವಾದದು. ಒಬ್ಬೊಬ್ಬರದೂ ಒಂದೊಂದು ತರಹದ ವಿವೇಕ, ವಿವೇಚನೆ, ಹವ್ಯಾಸ, ಅಭ್ಯಾಸ ಹೀಗೆ ಏನೇ ಹೇಳಿ ಒಬ್ಬರಿಂದೊಬ್ಬರು ಬಿನ್ನ. ಕೆಲವರಿಗೆ ಚೆನ್ನಾಗಿ ಓದಬೇಕು, ದೊಡ್ಡ ಕೆಲಸ ಹಿಡಿಯಬೇಕು, ಕೈತುಂಬಾ ಸಂಬಳ, ಇರಲೊಂದು ಐಷಾರಾಮಿ ಮನೆ, ದೊಡ್ಡದೊಂದು ಕಾರು, ಮುದ್ದಿನ ಮಡದಿ, ಮಡದಿಗೆ ಮೈತುಂಬಾ ಬಂಗಾರ, ಮನೆಯಲ್ಲಿ ಎಲ್ಲಾ ತರಹದ ಆಧುನಿಕ ತಂತ್ರಜ್ಞಾನದ ಸಲಕರಣೆಗಳು, ಜೊತೆಗೆರೆಡು ಮಕ್ಕಳು, ಅವು ಅಸಾಧಾರಣ ಬುದ್ಧಿವಂತರಾಗಿರಬೇಕು, ದೊಡ್ಡವರಾಗುತ್ತಿದ್ದ ಹಾಗೆಯೇ ಎಲ್ಲರ ಮಕ್ಕಳಿಗಿಂತ ವಿದ್ಯಾವಂತರಾಗಬೇಕು, ಕ್ಲಾಸಿಗೆ, ಶಾಲೆಗೆ, ರಾಜ್ಯಕ್ಕೆ ಮೊದಲಿಗರಾಗಬೇಕು […]

ವಿಜ್ಞಾನ-ಪರಿಸರ

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಕೊನೆಯ ಭಾಗ): ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಈ ಮಟ್ಟದ ಹಾಗೂ ಈ ಮೊತ್ತದ ಕಾಡು ನಾಶ ಈ ಹಿಂದೆಯೂ ಆಗಿತ್ತು. ಬಗರ್ ಹುಕುಂ ಕಾಯ್ದೆ 1989-90ರಲ್ಲಿ ಜಾರಿಯಾದ ಸಂದರ್ಭದಲ್ಲಿ ಲಕ್ಷಾಂತರ ಸಂಖ್ಯೆಯ ಮಿಣಿಸುತ್ತಿನ ಮರಗಳ ಮಾರಣ ಹೋಮವಾಗಿತ್ತು. ಮರಗಳ ಬುಡಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಆ ಕಾರಣಕ್ಕಾಗಿಯೇ ಕಳೆದ 10 ವರ್ಷಗಳಲ್ಲಿ ತಾಲ್ಲೂಕಿನಲ್ಲಿ 40% ಮಳೆ ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ದೂರದೃಷ್ಟಿಯ ಕೊರತೆ, ಅತಿಯಾಸೆ, ರೈತರಲ್ಲಿ ಪರಸ್ಪರ ಪೈಪೋಟಿ ಮನೋಭಾವ (ಸರ್ಕಾರಿ ಕೃಪಾಪೋಷಿತ ಇಲಾಖೆಗಳೇ ಹಸಿರು ಕ್ರಾಂತಿಯ ನೆಪದಲ್ಲಿ ಕ್ಷೇತ್ರೋತ್ಸವ ಎಂಬ ಸಂಭ್ರಮಾಚರಣೆ […]

ವಿಜ್ಞಾನ-ಪರಿಸರ

ಭೂ ಕೊಳಕರ ವಶೀಲಿಬಾಜಿ!!!: ಅಖಿಲೇಶ್ ಚಿಪ್ಪಳಿ

(ಕಳೆದ 20 ಜಾಗತಿಕ ಹವಾಗುಣ ಶೃಂಗಗಳನ್ನು ವಿಫಲಗೊಳಿಸಿದ ಅಂತಾರಾಷ್ಟ್ರೀಯ ಕಂಪನಿಗಳ ಹುನ್ನಾರ ಜಗತ್ತಿನ ಹೆಚ್ಚಿನ ಜನರ ಅರಿವಿಗೆ ಬರಲಿಲ್ಲ. ಅತೀ ನಿರೀಕ್ಷಿತ 21ನೇ ಶೃಂಗ ಸಭೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಹುನ್ನಾರವನ್ನು ನಡೆಸಿರುವ ಜಗತ್ತಿನ ಅತೀ ಪ್ರತಿಷ್ಟಿತ ಕಂಪನಿಗಳ ಕಾರ್ಯಯೋಜನೆಗಳೇನು? ಎಂಬುದನ್ನು ಬಿಂಬಿಸುವ ಲೇಖನವಿದು. ವಿಶ್ವನಾಯಕರು ಹೇಳಿದ್ದಷ್ಟನ್ನೇ ಸುದ್ಧಿ ಮಾಡುವ ಮಾಧ್ಯಮಗಳು, ಈ ಅಂತಾರಾಷ್ಟ್ರೀಯ ಬಂಡವಾಳಶಾಹಿಗಳ ಗುಪ್ತ ಕಾರ್ಯಸೂಚಿಗಳನ್ನು ಬಯಲು ಮಾಡುವುದರಲ್ಲಿ ವಿಫಲವಾಗುತ್ತಿವೆ ಎಂಬ ಸಂಗತಿ ಅತ್ಯಂತ ಖೇದಕರವಾದದು). ಈ ಪ್ರಪಂಚದ ಪರಿಸರದ, ಜೀವಜಾಲದ, ವಾತಾವರಣದ […]

ವಿಜ್ಞಾನ-ಪರಿಸರ

ನೂರನೇ ಕೋತಿ: ಅಖಿಲೇಶ್ ಚಿಪ್ಪಳಿ

ಅತ್ತ ಪ್ಯಾರಿಸ್ ನಲ್ಲಿ ಹವಾಮಾನ ಬದಲಾವಣೆ ಕುರಿತು ಜಾಗತಿಕ ಶೃಂಗ ಸಭೆ ನಡೆಯುತ್ತಿದ್ದಾಗಲೇ ಇತ್ತ ಚೆನೈ ಪಟ್ಟಣ ನೀರಿನಲ್ಲಿ ಮುಳುಗಿ ಹೋಗಿತ್ತು. ಅಧಿಕೃತ ಲೆಕ್ಕಾಚಾರದಂತೆ ಸುಮಾರು 200 ಜನ ಅತಿವೃಷ್ಟಿಯ ಕಾರಣಕ್ಕೆ ಸತ್ತಿದ್ದಾರೆ ಎಂದು ಪತ್ರಿಕಾ ವರದಿಗಳು ಹೇಳುತ್ತಿದ್ದವು. ಸಹಿಷ್ಣು-ಅಸಹಿಷ್ಣು ಚರ್ಚೆಗಳು ನಡೆಯುತ್ತಲೇ ಇದ್ದವು. ಮಲೆನಾಡಿನಲ್ಲಿ ಮಳೆಯ ಕೊರತೆಯಿಂದಾಗಿ ಬತ್ತದ ಗದ್ದೆಗಳು ಒಣಗಿಹೋಗುತ್ತಿದ್ದವು. ತೀರಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯಿಲ್ಲದಿದ್ದರೂ, ರೈತರಿಗೆ ಆತಂಕದ ಪರಿಸ್ಥಿತಿ ಏರ್ಪಟ್ಟಿರುವುದು ಬೀಸಾಗಿಯೇ ತೋರುತ್ತಿದೆ. ಈ ಮಧ್ಯೆ ಕಾರ್ಯಕ್ರಮ ನಿಮಿತ್ತ ನಮ್ಮಲ್ಲಿಗೆ ಬಂದಿದ್ದ ಶ್ರೀ […]

ವಿಜ್ಞಾನ-ಪರಿಸರ

ಜಾಗತಿಕ ಹವಾಗುಣ ಬದಲಾವಣೆ ಜಾಥಾ ಹಾಗೂ ವಿಚಾರ ಸಂಕಿರಣದ ಸಂಕ್ಷಿಪ್ತ ವರದಿ: ಅಖಿಲೇಶ್ ಚಿಪ್ಪಳಿ

ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ಮಾಡದೇ ಹತ್ತಿರ-ಹತ್ತಿರ ವರ್ಷವಾಗಿತ್ತು. ಜಾಗತಿಕ ಹವಾಮಾನ ಬದಲಾವಣೆ ಜಾಥಾವನ್ನು ಹಠಕ್ಕೆ ಬಿದ್ದು ಆಯೋಜಿಸಿದ್ದೆ, ಯಾವುದೇ ಕಾರ್ಯಕ್ರಮ ಮಾಡುವುದಾದರೂ ಮುಖ್ಯವಾಗಿ ಹಣದ ಅವಶ್ಯಕತೆ ಇರುತ್ತದೆ. ಹಣ ಹೊಂದಿಸುವುದು ಸಮಸ್ಯೆಯೇ ಸರಿ. ಜಗದ ಉಳಿವಿಗೆ, ನಾಳಿನ ಮಕ್ಕಳ ಭವಿಷ್ಯಕ್ಕೆ ಏನಾದರೂ ಮಾಡಲೇಬೇಕೆಂದು ಶುರು ಹಚ್ಚಿಕೊಂಡ ಕಾರ್ಯಕ್ರಮಕ್ಕೆ ಹದಿನೈದು ದಿನಗಳಿಂದ ತಯಾರಿ ಮಾಡಲಾಗಿತ್ತು. ಸಾಗರದಂತಹ ಸ್ಥಳದಲ್ಲಿ ಭಾನುವಾರ ಒಂದು ತರಹ ಕಪ್ರ್ಯೂ ಹಾಕಿದ ಹಾಗೆ ಇರುತ್ತದೆ. ಎಲ್ಲಾ ಅಂಗಡಿ ಮುಗ್ಗಟ್ಟುಗಳಿಗೂ ರಜೆ. ಪ್ಯಾರಿಸ್‍ನಲ್ಲಿ ನಡೆಯಲಿರುವ ಜಾಗತಿಕ ಹವಾಮಾನ ಶೃಂಗ […]

ವಿಜ್ಞಾನ-ಪರಿಸರ

ಜಾಗತಿಕ ಹವಾಗುಣ ಜಾಥಾ: ಅಖಿಲೇಶ್ ಚಿಪ್ಪಳಿ

ನವಂಬರ್ 30 2015ರಿಂದ ಡಿಸೆಂಬರ್ 11 2015ರ ವರೆಗಿನ ಜಾಗತಿಕ ಹವಾಗುಣ ಶೃಂಗಸಭೆ ಪ್ಯಾರಿಸ್‍ನಲ್ಲಿ ನಡೆಯಲಿದೆ. 190 ವಿಶ್ವನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ, ಜೊತೆಗೆ ವಿಜ್ಞಾನಿಗಳು, ಹೂಡಿಕೆದಾರರು, ವಿವಿಧ ಕ್ಷೇತ್ರಗಳ ತಜ್ಞರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭೂಮಿಯ ಮೇಲಿನ ಚರಾಚರಗಳ ಭವಿಷ್ಯದ ದೃಷ್ಟಿಯಿಂದ ಈ ಸಭೆ ಅತ್ಯಂತ ಮಹತ್ವ್ತದ ಸಭೆಯಾಗಲಿದೆ ಎಂದು ತರ್ಕಿಸಲಾಗಿದೆ. ಈ ಸಭೆಯಲ್ಲಿ ಕೈಗೊಳ್ಳುವ ಜಾಗತಿಕ ನಿರ್ಣಯಗಳು ಭೂಮಿಯ ಆರೋಗ್ಯದ ಸೂಚ್ಯಂಕವನ್ನು ಬದಲಿಸಲಿವೆ ಎಂದು ಭಾವಿಸಲಾಗಿದೆ. ಈ ಹಿಂದೆ ಇದೇ ತರಹದ 20 ಶೃಂಗಸಭೆಗಳು […]

ವಿಜ್ಞಾನ-ಪರಿಸರ

ಗಾಳಿಪಟದ ಘಟಕೆಷ್ಟು ನೆತ್ತರ ಅಭಿಷೇಕ!!!: ಅಖಿಲೇಶ್ ಚಿಪ್ಪಳಿ

[ಪ್ರತಿವರ್ಷದ ಆರಂಭದಲ್ಲಿ ಮಕರ ಸಂಕ್ರಾತಿಯ ಸಂದರ್ಭದಲ್ಲಿ ಗುಜರಾತಿನಲ್ಲಿ ನಡೆಯುವ ಗಾಳಿಪಟದ ಹಬ್ಬದಲ್ಲಿ ನಡೆಯುವ ಹಿಂಸೆಯ ಕುರಿತಾದ ಲೇಖನವಿದು. ಮಾನವ ತನ್ನ ಮನರಂಜನೆಗಾಗಿ ಏನೆಲ್ಲಾ ಅವಘಡಗಳನ್ನು ಮಾಡುತ್ತಾನೆ ಎಂಬುದರ ಕುರಿತು ಬೆಳಕು ಚೆಲ್ಲುವ ಪ್ರಯತ್ನ] ಈಗೊಂದು 25 ವರ್ಷಗಳ ಹಿಂದೆ ಗಾಳಿಪಟ ಹೆಸರು ಕೇಳಿದೊಡನೆ ಆಗಿನ ಮಕ್ಕಳ ಮುಖ ಮೊರದಗಲವಾಗುತ್ತಿತ್ತು. ಮನೆಯ ಹಿರಿಯರಿಗೆ ಬೆಳಗಿನಿಂದ ಕಾಡಿ-ಬೇಡಿ ಮಾಡಿದರೆ ಸಂಜೆ 4ರ ಹೊತ್ತಿಗೆ ಗಾಳಿಪಟ ತಯಾರಾಗುತ್ತಿತ್ತು. ಗಾಳಿ ಬಂದಂತೆಲ್ಲಾ ಮೇಲೇರುವ ಗಾಳಿಪಟವನ್ನು ಆಕಾಶದೆತ್ತರಕ್ಕೇರಿಸಲು ವಿಶಾಲವಾದ ಖಾಲಿ ಜಾಗದ ಅಗತ್ಯವಿತ್ತು. ಮಲೆನಾಡಿನಲ್ಲಿ […]

ವಿಜ್ಞಾನ-ಪರಿಸರ

ಅರಿಶಿಣ ಬುರುಡೆ ಹಕ್ಕಿ: ಹರೀಶ್ ಕುಮಾರ್, ಪ. ನಾ. ಹಳ್ಳಿ.

ಅರಿಶಿಣ ಬುರುಡೆ ಹಕ್ಕಿ ಹಳದಿ ದೇಹ, ಕಪ್ಪು ರೆಕ್ಕೆಯ ಆಕರ್ಷಕ ವರ್ಣ ಸಂಯೋಜನೆ ಹೊಂದಿರುವ ಅರಿಶಿಣ ಬುರುಡೆ ಹಕ್ಕಿಯು ಸದಾ ಕಾಲ ಶುಭ್ರವಾಗಿದ್ದು, ಚಟುವಟಿಕೆಯಿಂದ ಕೂಡಿರುತ್ತದೆ, ಸಂಘ ಜೀವನ ಬಯಸುವ ಈ ಹಕ್ಕಿಯು ಚಿಕ್ಕ-ಚೊಕ್ಕ ಸಂಸಾರವನ್ನು ಬಹಳ ಪ್ರೀತಿಸುವ ಪ್ರವೃತ್ತಿ ಹೊಂದಿದೆ.ಈ ಹಕ್ಕಿಗೆ ಸುವರ್ಣ ಹಕ್ಕಿ, ಮಂಜಲಕ್ಕಿ, ಹೊನ್ನಕ್ಕಿ, ಪಿಪೀಲಾಯ ಮುಂತಾದ ಹೆಸರುಗಳೂ ಇವೆ. ತನ್ನದೇ ಆದ ಒನಪು, ವಯ್ಯಾರ ಹಾಗೂ ಗಾಂಭೀರ್ಯ ಹೊಂದಿರುವ ಈ ಹಕ್ಕಿಗೆ ಮದುವಣಗಿತ್ತಿ ಎಂಬ ಹೆಸರಿನಿಂದಲೂ ಕರೆಯುವುದುಂಟು. ಅರಿಶಿಣ ಬುರುಡೆಯು ಒರಿಯಲ್ […]

ವಿಜ್ಞಾನ-ಪರಿಸರ

ಜನ ಸೇರಿ ಕೊಂದ ಗಜಪುತ್ರಿಯ ಕಥೆ!: ಅಖಿಲೇಶ್ ಚಿಪ್ಪಳಿ

[ಶಿರಸಿ-ಹಾನಗಲ್-ಸೊರಬ ಗಡಿಭಾಗದಲ್ಲಿ ಮಾನವ ಚಟುವಟಿಕೆಗಳಿಂದಾಗಿ ದಿಕ್ಕುತಪ್ಪಿದ ಆನೆಮರಿ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ತನಿಖಾ ಮಾದರಿಯಲ್ಲಿ ಸತ್ಯವನ್ನು ಕಂಡು ಹಿಡಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ದಿನಾಂಕ:27/10/2015ರಿಂದ 31/10/2015ರ ವರೆಗೆ ಮಾಮೂಲಿ ದಿನಪತ್ರಿಕೆಗಳಲ್ಲಿ ಅರಣ್ಯ ಇಲಾಖೆ ಹೇಳಿದ ವಿಷಯಗಳನ್ನು ಮಾತ್ರ ಸತ್ಯವೆಂದು ಪರಿಗಣಿಸಿ ವರದಿ ತಯಾರಿಸಿ ಎಲ್ಲಾ ಪತ್ರಿಕೆಗಳು ಪ್ರಕಟಿಸಿದ್ದವು. ಇಲಾಖೆಯ ವೈಫಲ್ಯವನ್ನಾಗಲೀ ಅಥವಾ ಸ್ಥಳೀಯರ ಮೌಢ್ಯದಿಂದಾದ ಅವಘಡವನ್ನಾಗಲಿ ಯಾವುದೇ ಪತ್ರಿಕೆ ವರದಿ ಮಾಡಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ]. ಗಾಂಧಿಜಯಂತಿಯನ್ನು ಆಚರಿಸಿ, ದೇಶಕ್ಕೆಲ್ಲಾ ಅಹಿಂಸೆಯ ಪಾಠ […]