ವಿಜ್ಞಾನ-ಪರಿಸರ

ಚಿಟ್ಟು ಕುಟುರದ ಮರಿಗಳ ಕತೆ: ಅಖಿಲೇಶ್ ಚಿಪ್ಪಳಿ ಅಂಕಣ

ಮಲೆನಾಡು ಈಗ ಅಕ್ಷರಶಃ: ಮಳೆನಾಡು. ಹಾಗೆಯೇ ಪ್ರಕೃತಿಯ ಅಚ್ಚರಿಗಳ ಗೂಡು. ಲಕ್ಷಗಟ್ಟಲೆ-ಕೋಟಿಗಟ್ಟಲೆ ಖರ್ಚು ಮಾಡಿ, ಪರಿಸರದಿಂದ ಬಗೆದು ತಂದ ಕಲ್ಲು-ಮರಳು-ಕಬ್ಬಿಣದ ಮಾನವ ನಿರ್ಮಿತ ತಾರಸಿ ಮನೆಗಳು ಧಾರಾಳವಾಗಿ ಸೋರುತ್ತಿವೆ. ಮನೆಯೆಲ್ಲಾ ಥಂಡಿ-ಥಂಡಿ. ಇಂತಹ ಮಳೆಗಾಲದಲ್ಲೂ ಹಕ್ಕಿಗಳು ಒಣ ಎಲೆಯನ್ನು, ಹುಲ್ಲನ್ನು ಎಲ್ಲಿಂದ ಸಂಪಾದಿಸಿ ತರುತ್ತವೆ ಎಂಬುದು ಚಿದಂಬರ ರಹಸ್ಯವೇ ಸೈ. ಸಾಗರ ತಾಲ್ಲೂಕಿನ ಹೊಸೂರಿನಲ್ಲಿ ಒಬ್ಬರ ಮನೆಯ ಹಿತ್ತಲಲ್ಲಿ 3 ಇಂಚು ಅಗಲದ ಪಿ.ವಿ.ಸಿ ಪೈಪೊಂದನ್ನು ಹಿತ್ತಿಲಿನ ಧರೆಗೆ ಆನಿಸಿ ನಿಲ್ಲಿಸಿದ್ದರು. ಅದನ್ನು ಉಪಯೋಗಿಸದೇ ವರ್ಷಗಳೇ ಆಗಿತ್ತು. ಚಿಕ್ಕ […]

ವಿಜ್ಞಾನ-ಪರಿಸರ

ಜೀವವಿರೋಧಿ ಕೀಟನಾಶಕಗಳು:ಅಖಿಲೇಶ್ ಚಿಪ್ಪಳಿ ಅಂಕಣ

ಭದ್ರಾವತಿ ಹುಡುಗಿ ಸಾಗರದ ಜ್ಯೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದಳು. ಪರೀಕ್ಷೆ ಬರೆದು ಫಲಿತಾಂಶ ಬಂದಾಗ ಫೇಲ್ ಆಗಿದ್ದಳು. ಸೀದಾ ಕೀಟನಾಶಕಗಳನ್ನು ಮಾರುವ ಅಂಗಡಿಗೆ ಹೋಗಿ ಫಾಲಿಡಾಲ್ ಬಾಟಲಿ ಕೊಡಿ ಎಂದಳು. ಅಂಗಡಿಯವ ಏನು ಎತ್ತ ವಿಚಾರಿಸದೆ ದುಡ್ಡು ಇಸಿದುಕೊಂಡು ಫಾಲಿಡಾಲ್ ಬಾಟಲಿಯನ್ನು ಕೊಟ್ಟ. ನೆಹರು ಮೈದಾನಕ್ಕೆ ಬಂದವಳು ಯಾರಿಗೂ ಕಾಣಬಾರದೆಂದು ಕೊಡೆ ಬಿಡಿಸಿಕೊಂಡು, ಬಾಟಲಿಯ ಮುಚ್ಚಳವನ್ನು ತೆಗೆದು ಗಟ-ಗಟ ಕುಡಿದೇ ಬಿಟ್ಟಳು. ೫ ನಿಮಿಷದಲ್ಲಿ ಮೈದಾನದಲ್ಲಿ ಬಿದ್ದು ಹೊರಳಾಡುತ್ತಿದ್ದಳು. ಆಟೋದವನು ನೋಡಿದವನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಲಿಲ್ಲ. […]

ವಿಜ್ಞಾನ-ಪರಿಸರ

ಕಾನು ಕುರಿಮರಿ: ಅಖಿಲೇಶ್ ಚಿಪ್ಪಳಿ

ಫೋಟೊದಲ್ಲಿರುವ ಊರ್ಧ್ವಮುಖಿ ಯಾರೆಂದು ನಿಮಗೆ ಸುಲಭವಾಗಿ ಅರ್ಥವಾಗಿರಬಹುದು. ಅದೇ ಲೇಖನ ಬರೆಯುವ ಮನುಷ್ಯ – ಅಖಿಲೇಶ್ ಚಿಪ್ಪಳಿ. ಆದರೆ, ಎತ್ತಿಕೊಂಡಿರುವ ಆ ಚಿಕ್ಕ, ಸುಂದರ ಪ್ರಾಣಿ ಯಾವುದೆಂದು ಗೊತ್ತಾ? ಇದರ ಹಿಂದಿನ ಕತೆಯೇ ಈ ವಾರದ ಸರಕು. ವನ್ಯಜೀವಿ ಹತ್ಯೆ ಅಂದರೆ ಪ್ರತಿಷ್ಟಿತ ಬೇಟೆ ಎಂಬ ಅಮಾನವೀಯ ಕಾರ್ಯ ಜನಪ್ರಿಯವಾದ ಕಾಲವೊಂದಿತ್ತು. ರಾಜ-ಮಹಾರಾಜರು ತಮ್ಮ ತಿಕ್ಕಲು ತೆವಲಿಗೋಸ್ಕರ ಕಾಡಿನ ಪ್ರಾಣಿಗಳನ್ನು ಹತ್ಯೆ ಮಾಡುತ್ತಿದ್ದರು. ರಾಮಾಯಣದಂತಹ ಪುರಾಣ ಗ್ರಂಥಗಳಲ್ಲೂ ಬೇಟೆಯ ಬಗ್ಗೆ ಉಲ್ಲೇಖಗಳಿವೆ. ಸೀತೆ ಬಂಗಾರದ ಜಿಂಕೆ ಬೇಕು […]

ವಿಜ್ಞಾನ-ಪರಿಸರ

ಮಳೆ-ಮಳೆ: ಅಖಿಲೇಶ್ ಚಿಪ್ಪಳಿ

ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದೆ. ಭಾರಿ ಮಳೆಯನ್ನು ನೋಡದಿರುವ ಈಗಿನ ಯುವಕರು ಇದೇನು ಮಳೆ ಎಂದು ಒಂಥರಾ ತಾತ್ಸಾರ ಮಾಡುತ್ತಾರೆ. ಕಳೆದ ಬಿರುಬೇಸಿಗೆಯಲ್ಲಿ ನೀರಿಗಾಗಿ ಅನುಭವಿಸಿದ ಎಲ್ಲಾ ಕಷ್ಟಗಳನ್ನು ಆರಿದ್ರಾ ಮತ್ತು ಪುನರ್ವಸು ಮಳೆಗಳು ಮರೆಸಿವೆ. ಹೂಳು ತುಂಬಿದ ಡ್ಯಾಂಗಳು ತುಂಬಿದರೆ ನಮಗೆ ಬೊನಸ್ಸು ಸಿಗುತ್ತದೆ ಎಂದು ಕೆ.ಪಿ.ಸಿಯವರು ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದಾರೆ. ಹೈಸ್ಕೂಲು ಓದಲು 80ರ ದಶಕದಲ್ಲಿ ನಮ್ಮ ಊರಿನಿಂದ ಸಾಗರಕ್ಕೆ ಬರಬೇಕಾಗಿತ್ತು. ಗ್ರಾಮಾಂತರ ಬಸ್ಸುಗಳು ಇರದಿದ್ದ ಆ ಕಾಲದಲ್ಲಿ, ಸೈಕಲ್ಲಿನ ಭಾಗ್ಯವಿಲ್ಲದ ನಾವು ನಡದೇ […]

ವಿಜ್ಞಾನ-ಪರಿಸರ

ಕಾಯುವವ-ಕೊಲ್ಲುವವ: ಅಖಿಲೇಶ್ ಚಿಪ್ಪಳಿ

ಕೊಲ್ಲುವುದು ಸುಲಭ. ಕಾಯುವುದು ಕಷ್ಟ. ಒಂದು ಗಿಡವನ್ನು ನೆಟ್ಟು, ಪೋಷಿಸಿ, ರಕ್ಷಿಸಿ ಮರವಾಗುವತನಕ ನೋಡಿಕೊಳ್ಳುವುದು ತಪಸ್ಸಿನಂತೆ. ಕೊಲ್ಲುವುದಕ್ಕೆ ಒಂದು ಕತ್ತಿಯೇಟು ಸಾಕು. ಹಾಗೆ ಕೆಲಬಾರಿ ಪ್ರಕೃತಿಯಲ್ಲಿ ರಕ್ಷಿಸುವ ಪ್ರಯತ್ನವೂ ವಿಫಲಗೊಳ್ಳುವುದಕ್ಕೆ ಪ್ರತ್ಯಕ್ಷವಾಗಿ ನಾವೇ ಕಾರಣವಾಗುವುದು ಇದೆ. ಕಾಯುವ ಪ್ರಯತ್ನದಲ್ಲಿ ಸಫಲಗೊಂಡು ಸಂತೋಷದಿಂದ ಬೀಗಿದ ಘಟನೆಯ ಜೊತೆಗೆ ವಿಫಲಗೊಂಡು ದು:ಖ ಅನುಭವಿಸಿದ ಕತೆಯೂ ಇಲ್ಲಿದೆ. ನಾನು ಕೆಲಸ ಮಾಡುವ ಜಾಗದಲ್ಲಿ ಜನರ ತಿರುಗಾಟ ಹೆಚ್ಚು. ಜೋಡಿ ಪಿಕಳಾರಗಳಿಗೆ ಗೂಡು ಕಟ್ಟಲು ಜಾಗವೊಂದು ಬೇಕು, ಕಾಂಕ್ರೀಟ್ ಕಾಡಿನಲ್ಲಿ ಅವಕ್ಕೆ ಪ್ರಶಸ್ತ […]

ವಿಜ್ಞಾನ-ಪರಿಸರ

ಸುಸ್ಥಿರ ಅಭಿವೃದ್ಧಿ-ಕೃಷ್ಣಾ ನದಿ: ಅಖಿಲೇಶ್ ಚಿಪ್ಪಳಿ

ಭರತ ಖಂಡ ಎಂದು ಕರೆಸಿಕೊಂಡ ಸಮಗ್ರ ಭಾರತ ಹಲವಾರು ಸಾರಿ ಛಿದ್ರವಾಯಿತು. ಚೀನಾ ಅತಿಕ್ರಮಿಸಿದರೆ, ಪಾಕಿಸ್ತಾನವನ್ನು ನಾವೇ ಕೊಟ್ಟೆವು. ಇಷ್ಟಾಗ್ಯೂ ನೂರಾರು ನದಿಗಳ ಭವ್ಯ ಪರ್ವತಗಳ, ಗಿರಿ ಶಿಖರಗಳ ನಾಡು. ಹೇರಳ ನೈಸರ್ಗಿಕ ಸಂಪತ್ತಿನ ಬೀಡು ಭಾರತ. ಪ್ರಪಂಚದ ಎಲ್ಲಾ ಖಂಡಗಳಲ್ಲೂ ನಾಗರೀಕತೆ ಅರಳಿದ್ದು, ನದಿಗಳ ದಂಡೆಗಳ ಮೇಲೆ. ಪವಿತ್ರ ಗಂಗಾನದಿ ಅದೆಷ್ಟು ಜನರಿಗೆ ಆಧಾರವಾಗಿದೆ. ಅದೆಷ್ಟು ಆಹಾರ ಧಾನ್ಯವನ್ನು ಇದೇ ನದಿಯ ನೀರನ್ನುಪಯೋಗಿಸಿ ಬೆಳೆಯಲಾಗುತ್ತಿದೆ. ಜನಸಂಖ್ಯೆ ಮತ್ತು ಅಭಿವೃದ್ಧಿಯೆಂಬೆರೆಡು ಗಂಗಾನದಿಗೆ ಕಂಟಕವಾಗಿ ಪರಿಣಮಿಸಿದ್ದೊಂತು ದುರಂತವೇ ಸೈ. […]