ಕೌದಿ ಕಥೆಗಳು: ಗಂಗಮ್ಮ ಮಂಡಿಗೇರಿ

ರಾಕೇಶ್ ಎಂಬ ಬಾಲಕಿ ತನ್ನ ತಂದೆ ತಾಯಿ ಜೊತೆ ಬಡ ಜೀವನವನ್ನು ನಡೆಸುತ್ತಿದ್ದ. ತಂದೆ ಹೆಸರು ಸುರೇಶ ಮತ್ತು ತಾಯಿ ಸುಮಾ. ಚಿಕ್ಕವನಿದ್ದಾಗ ತಂದೆ-ತಾಯಿ ಎಲ್ಲಾ ಕೊಟ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಆರೋಗ್ಯವಂತನಾಗಿ ಬೆಳೆದ ಆದರೆ ಅವನಲ್ಲಿ ಯಾವುದೇ ಕೌಶಲ ವಾಗಲಿ ಕಲೆಯಾಗಲಿ ಬರಲಿಲ್ಲ ರಾಕೇಶ ಸೋಮಾರಿಯಾಗಿ ಬೆಳೆಯುವುದನ್ನು ಕಂಡು ತಂದೆ ತಾಯಿಯು ಮನೆಯಲ್ಲೇ ಉಳಿಸಿಕೊಂಡರು. ದಿನಕಳೆದಂತೆ ರಾಕೇಶನಿಗೆ ಬಡತನದ ಬೆಂಕಿ ತಗುಲಿತ್ತು. ಅವನಿಗೆ ಹೊಟ್ಟೆಬಟ್ಟೆಯ ಚಿಂತೆ ಶುರುವಾಯಿತು ಆದರೂ ಅವನು ಊರಿನಲ್ಲಿ ಸೋಮಾರಿಯಾಗಿ ಓಡಾಡುತ್ತಾ ತಿರುಗಾಡುತ್ತಾ ಸಮಯವನ್ನು … Read more

ಶಿಶು ಗೀತೆ: ನಾಗರಾಜನಾಯಕ ಡಿ.ಡೊಳ್ಳಿನ, ಪರಮೇಶ್ವರಪ್ಪ ಕುದರಿ

ಕತ್ರಿ ಪತ್ರಿ ಛತ್ರಿ ಪುಟ್ಟ ದಿನಾಲು ಓದುವುದು ಖಾತ್ರಿಪೂಜಿಸುವನು ದೇವರಿಗೆ ಎರಿಸಿ ಪತ್ರಿಮಳೆ ಬಂದಾಗ ತರುವನು ಛತ್ರಿ ಪರೀಕ್ಷೆ ಅಂಕಗಳಿಗೆ ಬಿದ್ದರೆ ಕತ್ರಿಅಪ್ಪ ಬಯ್ಯುವುದು ಖಾತ್ರಿಅವ್ವನು ಸಿಟ್ಟಾಗ್ತಾಳೇ ಗೊತ್ರಿ ಅಂದಿನದ ಅಂದಿಗೆ ಓದುವನು ರಾತ್ರಿಅಂಕಗಳು ಹೆಚ್ಚುವುದು ಖಾತ್ರಿಬಾಯಿಗೆ ಹಾಕ್ತಾರೆ ಮೈಸೂರ ಪಾಕ್ ರೀ .. -ನಾಗರಾಜನಾಯಕ ಡಿ.ಡೊಳ್ಳಿನ ಇಷ್ಟ – ಕಷ್ಟ ಸ್ನಾನವ ಮಾಡಲುಬಲು ಇಷ್ಟಬಿಸಿ – ಬಿಸಿ ನೀರಾದರೆಬಲು ಕಷ್ಟ! ಪಾಠವ ಓದಲುಬಲು ಇಷ್ಟಲೆಕ್ಕವ ಮಾಡಲುಬಲು ಕಷ್ಟ! ಮೊಬೈಲ್ ಗೇಮುಬಲು ಇಷ್ಟಕಬಡ್ಡಿ ಖೊ – ಖೋಬಲು … Read more

ಶಿಶುಗೀತೆ

ಉಪ್ಪಿಟ್ಟು ಅಮ್ಮನು ಮಾಡಿದ ಉಪ್ಪಿಟ್ಟುಸವಿಯಲು ನಾಲಿಗೆ ಕಾದಿತ್ತುತಟ್ಟೆಯು ಮುಂದಕೆ ಬಂದಿತ್ತುಜೊತೆಯಲಿ ತುಪ್ಪವು ಬೆರೆತಿತ್ತು ಅಮ್ಮನು ನೀಡಿದ ಕೈತುತ್ತುದೇಹಕೆ ಬಂದಿತು ತಾಕತ್ತುನಾಲಿಗೆ ರುಚಿಯನು ನೋಡಿತ್ತುಚಪ್ಪರಿಸುತಲಿ ನಲಿದಿತ್ತು ಗಂಟಲು ಸಂತಸ ತೋರಿತ್ತುಹೊಟ್ಟೆಯು ಆಗ ತುಂಬಿತ್ತುಮನಸಿಗು ಮೆಚ್ಚುಗೆ ಆಗಿತ್ತುಅಮ್ಮನ ರುಚಿಯನು ಹೊಗಳಿತ್ತು ದೇಸು ಆಲೂರು ಇರುವೆ…ಇರುವೆ ಇರುವೆ.. ಇರುವೆಇರುವೆ ನೀ ಎಲ್ಲೆಲ್ಲೂಇರುವೆ ! ಸಕ್ಕರೆ ಡಬ್ಬಿಲೂನೀ ಇರುವೆಬೆಲ್ಲದ ಅಚ್ಚಲೂನೀ ಮೆಲ್ಲಗೆಮೆಲ್ಲುತ ಇರುವೆ ! ದಾರೀಲಿ ಸಾಗುತಲಿರೆಸಾಲು ಸಾಲಾಗಿ ನೀಶಿಸ್ತು ತೋರುತಗಂಭೀರ ನಡೆಯಲಿ ನೀಸಾಗುತ ಇರುವೆ! ಗಾತ್ರದಲಿ ನೀಚಿಕ್ಕವನಾದರೂಕಚ್ಚಿದರೆ ಚುರು – ಚುರುಇರುವೆ … Read more

ಮಕ್ಕಳು ಕತೆಗಳು: ಸಿಂಧು ಭಾರ್ಗವ್

ಅದೃಷ್ಟದ ಪಾರಿವಾಳ ಮಹದೇವಪುರ ಎಂಬ ಒಂದು ಸುಂದರವಾದ ಹಳ್ಳಿ. ದಟ್ಟ ಅರಣ್ಯದಿಂದ ಕೂಡಿದ ಹಳ್ಳಿಯದು. ಎಲ್ಲರೂ ಕೃಷಿಕರು, ರೈತರಾಗಿದ್ದರು. ಸುಂದರ ಮತ್ತು ರಮೇಶ ಇಬ್ಬರು ಅಣ್ಣತಮ್ಮಂದಿರು. ಅಣ್ಣ ಶ್ರಮಜೀವಿ. ಹೊಲದಲ್ಲಿ ಪ್ರತಿದಿನ ಕೆಲಸ‌ ಮಾಡುತ್ತಿದ್ದನು. ಅವನಿಗೆ ಹೆಂಡತಿ ಮಾಲಾ ಕೂಡ ಸಹಾಯ ಮಾಡುತ್ತಿದ್ದಳು. ದವಸಧಾನ್ಯಗಳನ್ನು ಮಾರಿ ಬಂದ ಹಣದಿಂದ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದರು. ಅವನಿಗೆ ಹಣಕಾಸಿಗೆ ಏನೂ ಸಮಸ್ಯೆ ಇರಲಿಲ್ಲ. ಊರಿಗೆ ಶ್ರೀಮಂತ ರೈತನಾಗಿದ್ದ. ಆದರೆ ತಮ್ಮ ರಮೇಶ ಆಲಸ್ಯದ ಮನುಷ್ಯ ‌. ಅಣ್ಣನ ದುಡಿಮೆಯಲ್ಲಿಯೇ ಬದುಕುತ್ತಿದ್ದ. … Read more

ಮಕ್ಕಳ ಕವಿತೆ

ಅಲ್ಲಿದ್ದವರೆಲ್ಲರೂ ರೈಲಿಗಾಗಿ ಕಾಯುತ್ತಿದ್ದವರೇ, ಆದರೆ ಅವರಲ್ಲಿ ಯಾರಿಗೂ ಕಛೇರಿಗೆ ತಡವಾಗುತ್ತೆ ಅನ್ನುವವರಿರಲಿಲ್ಲ, ಊರಿಗೆ ಹೋಗಲು ಸಮಯವಾಗುತ್ತೆ ಅನ್ನುವ ಛಾಯೆಯೂ ಅವರ ಮುಖದಮೇಲೆ ಕಾಣಲಿಲ್ಲ, ಆದರೂ ಅದು ರೈಲ್ವೆ ನಿಲ್ದಾಣ, ಅಲ್ಲಿದ್ದ ಪ್ರಯಾಣಿಕರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಚುಕು ಬುಕು ಚುಕು ಬುಕು ಅಂತ ಕೂಗುತ್ತಾ ಬಂದಿದ್ದು ಮಕ್ಕಳ ನೆಚ್ಚಿನ ಪುಟಾಣಿ ಎಕ್ಸಪ್ರೆಸ್ ಇದೆಲ್ಲಾ ಕಂಡು ಬಂದದ್ದು ಬೆಂಗಳೂರಿ ಕಬ್ಬನ್ ಪಾರ್ಕ ನಲ್ಲಿರುವ ಬಾಲಭವನದಲ್ಲಿ. ಇದು ಕೊರೊನಾಗಿಂತ ಮುಂಚೆ ಇದೀಗ ಬಾಲಭವನದಲ್ಲಿನ ಪುಟಾಣಿ ಎಕ್ಸಪ್ರೆಸ್ ಮಕ್ಕಳನ್ನು ಹೊತ್ತು ತಿರುಗಲು … Read more

ಮಕ್ಕಳ ಕಥೆ: ಸುಳ್ಳು ಕಹಿಯಾಗಿರುವುದು: ಸಿಂಧು ಭಾರ್ಗವ್

ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ‌. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ‌ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. … Read more

ಇಬ್ಬರು ಗೆಳೆಯರು: ಆಶಾರಾಣಿ

ಮನೆಯ ಹೊರಗಿನ ಹೂದೋಟದಲ್ಲಿ ಒಂದು ಹೆಗ್ಗಣ ಮತ್ತು ಇಲಿ ವಾಸವಾಗಿದ್ದವು. ದಿನವೂ ಮನೆಯ ಯಜಮಾನಿ ಹೊರಗೆ ಚೆಲ್ಲುವ ಮುಸುರೆಯಲ್ಲಡಗಿರುವ ಅನ್ನ, ಕಾಳು, ತರಕಾರಿಗಳನ್ನು ಆಯ್ದಾಯ್ದು ತಿಂದುಂಡು ಸಂತೋಷದಿಂದ ದಿನಗಳನ್ನು ದೂಡುತ್ತಿದ್ದವು. ಹೀಗಿರಬೇಕಾದರೆ ಒಂದು ದಿನ ಹೆಗ್ಗಣಕ್ಕೊಂದು ಕೆಟ್ಟ ಆಲೋಚನೆ ಹೊಳೆಯಿತು. ಅದು ತನ್ನ ಗೆಳೆಯನಿಗೆ, “ಏಯ್, ಗೆಳೆಯಾ. . ಎಷ್ಟು ದಿನವೆಂದು ಈ ಮುಸುರೆಯನ್ನವನ್ನು ತಿಂದುಂಡು ಜೀವಿಸುವುದು!?ಹೊಟ್ಟೆಬಿರಿಯುವ ಹಾಗೆ ತಿನ್ನಲು ಏನಾದರೂ ಹೊಸ ಉಪಾಯ ಹುಡುಕೋಣ” ಎಂದಿತು. ಇಲಿಗೆ ಆಶ್ಚರ್ಯದೊಂದಿಗೆ ಸಂದೇಹವುಂಟಾಯಿತು “ಅಲ್ಲಾ ಗೆಳೆಯ, ಹೇಗೊ ಸಿಕ್ಕಿದ್ದನ್ನು … Read more

ಕಾಗೆಯ ಕೊಳಲು: ರೇಣುಕಾ ಕೋಡಗುಂಟಿ

ಅದೊಂದು ದಟ್ಟ ಅರಣ್ಯ. ಆ ಅರಣ್ಯದ ಒಂದು ಭಾಗವು ಗುಂಪು ಗುಂಪಾದ ಹಚ್ಚ ಹಸಿರಿನಿಂದ ಕೂಡಿತ್ತು. ಅಲ್ಲಿ ಎಲ್ಲಾ ಬಗೆಯ ಮರಗಳು ಬೆಳೆದು ನಿಂತು ತಂಪು ಸೂಸುತ್ತಾ, ಹೂವುಗಳ ಪರಿಮಳ ಬೀರುತ್ತಾ ಕಣ್ಣಿಗೆ ಮುದ ನೀಡುವಂತಿದ್ದವು. ಆ ಗಿಡಗಳ ಕಾಲ ಅಡಿಯಲ್ಲಿ ನೀರಿನ ಸಣ್ಣ ಹಳ್ಳ ಜುಳು ಜುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಇದರೊಂದಿಗೆ ಹಕ್ಕಿಗಳ ಕಲರವವೂ ಜೊತೆಗೂಡಿ ಸಂಗೀತ ಹೊಮ್ಮಿದಂತಿತ್ತು. ಅರಣ್ಯದ ಈ ಒಂದು ಭಾಗವು ಹಕ್ಕಿಗಳಿಗೆ ಮೀಸಲಾಗಿತ್ತು. ಎಲ್ಲಾ ಬಗೆಯ ಹಕ್ಕಿಗಳು ಅಲ್ಲಿ ನೆಲೆಸಿದ್ದವು. … Read more

ನಮ್ಮ ಪುಟ್ಟಿ: ವೆಂಕಟೇಶ ಚಾಗಿ

ನಮ್ಮ ಪುಟ್ಟಿ (ಮಕ್ಕಳ ಕವನ) ನಮ್ಮ ಪುಟ್ಟಿಯ ಚಂದದ ಆಟ ನೋಡಲು ಎಷ್ಟು ಸುಂದರ ಪುಟ್ಟಿ ಜೊತೆಗೆ ಆಟವನಾಡಲು ಬರುವನು ಬಾನಿಗೆ ಚಂದಿರ..!! ಪುಟ್ಟಿಯ ಕೈಯಲಿ ಗೊಂಬೆ ಇದ್ದರೆ ಆಡಿಸಿ ನಗುತ ನಲಿಯುವಳು ಗೊಂಬೆಗೆ ಬಣ್ಣದ ಅಂಗಿಯ ಹಾಕಿ ಲಾಲಿಸಿ ಅಳುವ ಮರೆಯುವಳು !! ಪುಟ್ಟ ಪುಟ್ಟ ಹೆಜ್ಜೆಗಳಿಡುತ ಓಟದ ಆಟವ ಆಡುವಳು ಓಡುವ ಅವಳ ಹಿಡಿದು ಬಿಟ್ಟರೆ ಖುಷಿಯಲಿ ಕೇಕೆ ಹಾಕುವಳು || ಪಾಠ ಓದಲು ಕುಳಿತರೆ ನಾನು ತನಗೂ ಪುಸ್ತಕ ಕೇಳುವಳು ಚಿತ್ರವ ನೋಡಿ … Read more

ರಾಯರ ಕುದುರೆ ಕತ್ತೆ ಆಯ್ತು..!!?: ವೆಂಕಟೇಶ ಚಾಗಿ

ಅನಂತಪುರ ಎಂಬ ಊರಿನಲ್ಲಿ ಹಬ್ಬಿದ ನಾಥ ಎಂಬ ಶ್ರೀಮಂತ ವ್ಯಕ್ತಿ ವಾಸವಾಗಿದ್ದನು ಅವನು ತನ್ನ ಸುಂದರವಾದ ಸಂಸಾರದೊಂದಿಗೆ ಉತ್ತಮ ಜೀವನ ನಡೆಸುತ್ತಾ ಸಂತೋಷದಿಂದ ಬದುಕುತ್ತಿದ್ದರೂ ತನ್ನ ಸ್ನೇಹಿತರಿಗೆ ಹಾಗೂ ನಂಬಿಕಸ್ಥ ರಿಗೆ ಕಾಳು-ಕಡಿ ಅಥವಾ ಹಣವನ್ನು ನೀಡಿ ಅವರ ದುಡಿಮೆಗೆ ನೆರವಾಗುತ್ತಿದ್ದರು ಸಾಲ ಪಡೆದವರು ಕಾಲಕ್ಕೆ ಸರಿಯಾಗಿ ತಾವು ಪಡೆದ ವಸ್ತುಗಳನ್ನು ಅಥವಾ ಹಣವನ್ನು ತಿರುಗಿಸುತ್ತಿದ್ದರು . ಅಲ್ಪ ಪ್ರಮಾಣದ ಬಡ್ಡಿಯನ್ನು ಪಡೆಯುತ್ತಿದ್ದಾನೆ ಯಾರಿಗೂ ನೋಯಿಸದೆ ವ್ಯವಹಾರವನ್ನು ನಡೆಸುತ್ತಿದ್ದನು. ಅದ್ಭುತ ನಾಥನಿಗೆ ಸಾಲವನ್ನು ಮರಳಿ ಕೇಳಲು ಊರಿಂದ … Read more

ಸಾಧನೆಯ ಹಾದಿ: ವೆಂಕಟೇಶ್‌ ಚಾಗಿ

ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು … Read more

ಗಿಳಿ ಕಲಿಸಿದ ಪಾಠ: ವರದೇಂದ್ರ ಕೆ.

ಒಂದು ಕಾಡು ಇತ್ತು. ಆ ಕಾಡಿಗೆ ಬೆಂಕಿ ಬಿದ್ದು ಎಲ್ಲ ಗಿಡ ಮರಗಳೂ ಸುಟ್ಟು ಕರಕಲಾಗಿದ್ದವು. ಹೇಗೋ ತಪ್ಪಿಸಿಕೊಂಡ ಪ್ರಾಣಿ ಪಕ್ಷಿಗಳು ದಿಕ್ಕಾಪಾಲಾಗಿ ಹೋದವು. ಅದರಲ್ಲಿ ಒಂದು ಮರಿ ಗಿಳಿ ತಾಯಿ, ತಂದೆಯಿಂದ ಬೇರ್ಪಟ್ಟು ದೂರವಾಯಿತು. ಎಲ್ಲ ಕಡೆ ಸುತ್ತಿ ಸುತ್ತಿ ದಣಿವಾಯಿತು. ಹೊಟ್ಟೆ ಹಸಿದರೂ ತಿನ್ನಲು ಯಾವ ಹಣ್ಣು ಸಿಗದೆ ಬಳಲಿತು. ಆಹಾರ ಮತ್ತು ವಾಸಕ್ಕಾಗಿ ಅಲೆಯತೊಡಗಿತು. ಎಷ್ಟು ದೂರ ಸಾಗಿದರೂ ಏನು ಸಿಗದೆ ಸತ್ತೇ ಹೋಗುತ್ತೇನೋ ಎನ್ನುವಷ್ಟು ನಿರಾಸೆಯಿಂದ ಚಿಂತಿಸತೊಡಗಿತು. ಅಷ್ಟರಲ್ಲಿ ದೂರದಲ್ಲಿ ಒಂದು … Read more

ಮಕ್ಕಳ ಕವನ: ವರದೇಂದ್ರ ಕೆ

ಪ್ರಾರ್ಥನೆ ನಾವೆಲ್ಲ ಮಕ್ಕಳು ನಿನ್ನ ಚರಣ ಪುಷ್ಪಗಳು| ಜ್ಞಾನ ಅರಸಿ ಬಂದಿಹೆವು ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ|| ನಾವೆಲ್ಲ ಮಕ್ಕಳೂ…. ವಿದ್ಯಾದಾಯಿನಿ ವೀಣಾಪಾಣಿ| ರಾಗ ತಾಳ ಎಲ್ಲ ನಾವೆ ಜ್ಞಾನ ವೀಣೆ ನುಡಿಸು ತಾಯೆ|೧| ನಾವೆಲ್ಲ ಮಕ್ಕಳೂ… ನಿತ್ಯವೂ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ| ಕರುಣೆ ತೋರಿ ಒಲಿಯಮ್ಮ ಸತ್ಯವನ್ನೆ ನುಡಿಸು ತಾಯೆ|೨| ನಾವೆಲ್ಲ ಮಕ್ಕಳೂ…. ಜ್ಞಾನ ದೀಪ ಹಚ್ಚುವೆವು ನಿನ್ನ ಚರಣ ಕಮಲಕ್ಕೆ| ಜ್ಯೋತಿ ಆಗಿ ಬಾರಮ್ಮ ನಮ್ಮ ಬಾಳ ಬೆಳಗು ತಾಯೆ|೩| … Read more

ಕನ್ನಡ ಕಲಿಸಿದ ಮಕ್ಕಳು: ವೆಂಕಟೇಶ ಚಾಗಿ

ಆಸಂಗಿಪುರದ ಮಕ್ಕಳು ಎಂದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬಾ ಪ್ರಸಿದ್ಧಿ. ಯಾವುದೇ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಓದಿನಲ್ಲಿ ಆಸಂಗಿಪುರದ ಮಕ್ಕಳು ಸದಾ ಮುಂದು. ಪ್ರತಿ ಸಾರಿಯೂ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡೇ ಊರಿಗೆ ಬರುತ್ತಿದ್ದರು. ಆಸಂಗಿಪುರವು ಆ ಊರಿನ ಮಕ್ಕಳಿಂದಲೇ ಪ್ರಸಿದ್ಧಿ ಪಡೆದಿತ್ತು. ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಗಳಿಸಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಆ ಊರಿನ ಶಾಲೆಯ ಗುರುಗಳು. ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಛಲದಿಂದ ಯಾವುದೇ ಕಾರ್ಯವನ್ನಾಗಲೀ ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು. ಬೇಸಿಗೆ ರಜೆ ಹತ್ತಿರ ಬರುತ್ತಿದ್ದ ಕಾಲ … Read more

ಮಕ್ಕಳ ಕಥೆ : ಅರಮನೆಯ ಅರಗಿಣಿ: -ಸಿಂಧು ಭಾರ್ಗವ್

ಒಂದು ಅರಮನೆಯಲ್ಲಿ ರಾಜ, ರಾಣಿ ತಮ್ಮ ಮಕ್ಕಳ ಜೊತೆಗೆ ಸುಖವಾಗಿದ್ದರು. ಐದು ಜನ ಮಕ್ಕಳಲ್ಲಿ ಕೊನೆಯವಳೇ ಹೆಣ್ಣುಮಗಳು. ಒಬ್ಬಳೆ ಹಾಗೂ ಕೊನೆಯ ಮಗಳಾದ ಕಾರಣ ಮುದ್ದಿನಿಂದ ಸಾಕಿ ಬೆಳೆಸುತ್ತಿದ್ದರು. ಹೆಸರು ಕನಕಕಲ್ಯಾಣಿ. ಊಟ-ನಿದಿರೆ ಎಲ್ಲವೂ ಅವಳ ಅಂತಃಪುರದೊಳಗೇ ನಡೆಯುತ್ತಿತ್ತು. ನೆಲದಲ್ಲಿ ಕಾಲಿಡಲೂ ಬಿಡುತ್ತಿರಲಿಲ್ಲ. ಪ್ರತಿಯೊಂದಕ್ಕೂ ಒಬ್ಬ ಕೆಲಸದಾಕೆ ಇದ್ದಳು. ಯುವರಾಣಿಯ ಯೋಗಕ್ಷೇಮ ನೋಡಿಕೊಳ್ಳುತ್ತಾ ಹೊರಗಿನ ಆಗುಹೋಗುಗಳನ್ನು ತಿಳಿಸಲು ತಂತಿಯಾಗಿದ್ದಳು. ಅವಳ ಕೋಣೆಯೊಳಗೆ ಕೇಳಿದ್ದೆಲ್ಲವೂ ಬರುತ್ತಿತ್ತು. ಹಾಗಾಗಿ ಯುವರಾಣಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಎಲ್ಲವನ್ನೂ ಕೇಳಿ ತಿಳಿದುಕೊಂಡಿದ್ದಳೇ … Read more

ಶಿಶು ಗೀತೆ: ದೇವರಾಜ್ ನಿಸರ್ಗತನಯ, ನಾಗರಾಜನಾಯಕ ಡಿ.ಡೊಳ್ಳಿನ

ರಜೆಯ ಮಜ… ಬೇಸಿಗೆ ರಜೆಯಲು ಪಾಠವಂತೆ ಯಾರಿಗೆ ಬೇಕಮ್ಮಾ ? ಅಜ್ಜಿಯ ಮನೆಯಲಿ ಆಡಿ ನಲಿವೆ ಊರಿಗೆ ಕಳಿಸಮ್ಮಾ..!! ಹತ್ತು ತಿಂಗಳು ಶಾಲೆಯ ಕಾಟ ಸಾಲದು ಏನಮ್ಮಾ ? ಎರಡು ತಿಂಗಳು ನಮ್ಮಯ ಆಟ ಆಡಲು ಬಿಡಿರಮ್ಮಾ..!! ಗೆಳೆಯರ ಜೊತೆಗೆ ಜೋಕಾಲಿಯಾಟ ಆಡುವೆ ಕಾಣಮ್ಮಾ ! ಹೊಂಗೆಯ ನೆರಳಲಿ ದುಂಬಿಯ ನಾನು ನೋಡಿ ನಲಿವೆನಮ್ಮಾ..!! ದನಕರುಗಳಾ ಜೊತೆ ಕಾಡು ಮೇಡನು ಅಲೆದು ಬರುವೆನಮ್ಮಾ ! ಹಳ್ಳಿಯ ಸೊಭಗ ಪ್ರಕೃತಿ ಸವಿಯ ಸವಿದು ಬರುವೆನಮ್ಮಾ..!! ಅಜ್ಜಿಯ ಜೊತೆಗೆ ಪ್ಯಾಟೆಯ … Read more

ಮಕ್ಕಳ ಕವಿತೆ

*ಹಕ್ಕಿಯ ಮನೆ* ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ಧರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ತಂಪಾದ ಗಾಳಿ ಮನೆಯ ತೂಗಿ ಹಸಿರಾದ ಗರಿಕೆ ತುಸು ಬೆಚ್ಚಗಿರಿಸಿ ಗುಟುಕುಗಳೇ ಆಸ್ತಿ ಉಳಿದೆಲ್ಲ ನಾಸ್ತಿ ಜೋಕಾಲಿ ಜೀಕಲಿ ಜೋಗುಳದ ದೋಸ್ತಿ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಹೊಸ ಬೆಳಕಿನ ಹೊಸ ಹುಟ್ಟಿಗೆ ಜೊತೆಗಿದೆ ಭೂಮಾತೆಯ … Read more

ಮಕ್ಕಳ ಕವನಗಳು: ಡಾ.ಶಿವಕುಮಾರ ಎಸ್‌.ಮಾದಗುಂಡಿ, ವೆಂಕಟೇಶ ಚಾಗಿ, ಸಿಂಗಾರಿಪುರ ಆದಿತ್ಯಾ

ಗುಬ್ಬಿ ಮರಿ!! ಗುಬ್ಬಿ ಗುಬ್ಬಿ ಚೀಂವ್ ಚೀಂವ್ ಎನ್ನುವ ನಿನ್ನಯ ಸಪ್ತಸ್ವರ ರಾಗ ಕೇಳುತ್ತಿಲ್ಲ! ನಮ್ಮ ಬಳಿಯೇ ಸುಳಿಯ ಬಯಸುವ ಚೀಂವ್ ಚೀಂವ್ ಗುಬ್ಬಿ ನಿನ್ನ ದ್ವನಿ ಕೇಳುತ್ತಿಲ್ಲ! ಕಾಳನು ಹಾಕುತಾ ಹಿಡಿಯಲು ಬರುವೇ ನೀನೆಲ್ಲಿ ಹೋದೆ ಗುಬ್ಬಚ್ಚಿ ನಿಮ್ಮಯ ಕಲರವ ಕಾಣುತ್ತಿಲ್ಲ! ನಮ್ಮ ಮನೆಯ ಅಂಗಳದೊಳಗೆ ನಿಮ್ಮ ಸ್ನೇಹ ಬಳಗದ ಸದ್ದು ಈಗ ನಾ ನೋಡಿಲ್ಲಾ! ನಿಮ್ಮಗಳಿಗಾಗಿ ಇಂದು ಹುಡುಕಾಡುವ ಸ್ಥಿತಿ ನಮಗೆ ಬಂದಿದೆ ನಿವೆಲ್ಲಿ ಹೋದಿರಾ ಗುಬ್ಬಿಚ್ಚಿ…!! ಡಾ.ಶಿವಕುಮಾರ ಎಸ್‌.ಮಾದಗುಂಡಿ       … Read more

ಮಕ್ಕಳ ಕವನ: ವೃಂದಾ ಸಂಗಮ, ವಿಭಾ ಶ್ರೀನಿವಾಸ್

ಪುಟ್ಟನ ರೈಲು ಪುಟ್ಟಗೆಂದು ಅಪ್ಪ ತಂದ ಚಿಕ್ಕದೊಂದು ರೈಲನು ನೋಡಿ ಈಗ ಪುಟ್ಟನೊಮ್ಮೆ ರೈಲು ಬಿಡುವ ಸ್ಟೈಲನು || ರೈಲು ಈಗ ಓಡುತಿಹುದು ಮನೆಯ ಮೂಲೆ ಮೂಲೆಗೆ ಆಗ ಈಗ ಹಾರುತದೆ ಹಿತ್ತಲಾಚೆ ಬೇಲಿಗೆ ಹೋಗುತಿಹುದು ರೈಲು ನಿಮಗೆ ಎಲ್ಲಿ ಬೇಕೊ ಅಲ್ಲಿಗೆ ನಿಲ್ಲುತದೆ ಚಿಂತೆಯಿಲ್ಲ ನೀವೆ ಕೇಳಿದಲ್ಲಿಗೆ || ಹಳಿಯ ಮೇಲೆ ಓಡ ಬೇಕು ಎಂಬ ನಿಯಮವಿಲ್ಲ ಗೋಡೆ ಮೇಲೆ ಕಿಡಕಿಯೊಳಗೆ ತೂರಿ ನಡೆವುದಲ್ಲ ಚಿಕ್ಕದೇನು ದೊಡ್ಡದೇನು ಅಡ್ಡ ಬಂದ್ರೆ ಎಲ್ಲ ಹಾರಿಕೊಂಡು ಹೋಗುತದೆ ಅದಕೆ … Read more

ಡಾಬಿಲಿಡೂಬ ಮತ್ತು ಟುಸ್ಕಿಲಿ ಪುಸ್ಕಿಲಿ: ಹರಿಪ್ರಸಾದ್ ಕೆ.ಆರ್.

     ಒಂದಾನೊಂದು ಕಾಡು. ಆ ಕಾಡಿನಲ್ಲಿ ಒಂದು ಸಿಂಹ ವಾಸವಾಗಿತ್ತು. ಆ ಸಿಂಹದ ಹೆಸರು ಡಾಬಿಲಿಡೂಬ. ಒಂದುದಿನ ಡಾಬಿಲಿಡೂಬಾಗೆ ತುಂಬಾ ಹಸಿವೆಯಾಯಿತು. ಅದು ಆಹಾರ ಹುಡುಕಿಕೊಂಡು ಹೊರಟಿತು. ಎಷ್ಟೇ ಅಲೆದರೂ ಅದಕ್ಕೆ ಆಹಾರ ಸಿಗಲಿಲ್ಲ. ಹುಡುಕಿ ಹುಡುಕಿ ಅದಕ್ಕೆ ಸುಸ್ತಾಗತೊಡಗಿತು. ಸುಸ್ತಿನಿಂದ ಅದಕ್ಕೆ ಸಿಟ್ಟು ಬರತೊಡಗಿತು.   ಅದೇ ಸಮಯಕ್ಕೆ ಕಿಚಕಿಚ ಅಂತ ಶಬ್ದ ಕೇಳಿತು. ಶಬ್ದ ಕೇಳಿ ಸಿಂಹ ತಿರುಗಿ ನೋಡಿತು. ನೋಡಿದರೆ ಒಂದು ಪುಟ್ಟ ಇಲಿ. ಸಿಂಹಕ್ಕೆ ಇಲಿ ನೋಡಿ ಸಂತೋಷವಾಯಿತು. ಗಬಕ್ಕನೆ … Read more

ಕಿರು ಲೇಖನಗಳು: ಕುಮಾರಿ ವರ್ಷಾ

ಪರಿವರ್ತನೆ ಒಂದು ಊರಲ್ಲಿ ಪುಟ್ಟ ಎಂಬ ಹುಡುಗ ಇದ್ದ.ಇವನು ಆ ಊರಿನ ಕಿಲಾಡಿ ಕಿಟ್ಟ ಮುಂಜಾನೆಯಿಂದ ಸಂಜೆಯವರೆಗೆ ಆಟ ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಇವನ ತಂದೆ ತಾಯಿಯೂ ರೈತಾಪಿ ಜನರು.ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವ ಮೊದಲೇ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಮತ್ತೇ ರಾತ್ರಿನೇ ಮನೆಗೆ ಬರುತ್ತಿದ್ದರು. ಹೀಗಾಗಿ ಅವರಿಗೆ ಮಗ ಏನು ಮಾಡುತ್ತಿದ್ದಾನೆ ಎನ್ನುವುದು ಗೊತ್ತಾಗುತ್ತಿದ್ದಿಲ್ಲ. ಪಾಲಕರು ಯಾವಾಗಲೂ ತಮ್ಮ ಮಕ್ಕಳು ಆದರ್ಶ ವ್ಯಕ್ತಿಗಳಾಗಬೇಕೆಂದು ನಿರೀಕ್ಷಿಸುತ್ತಾರೆ. ಹಾಗೆಯೇ ಪುಟ್ಟನ ತಂದೆ ತಾಯಿಯೂ ಸಹ, ತಮ್ಮ … Read more

ಮಗುವಿನ ಆರೈಕೆ: ಮಹಿಮಾ ಸಂಜೀವ್

ನಾನು ನಾಲ್ಕು ವರ್ಷದ ಮಗುವಿನ ತಾಯಿ..ಅಂದರೆ ನನಗು ನಾಲ್ಕೇ ವರ್ಷ!! ಹೌದು ಒಂದು ಮಗುವಿನೊಂದಿಗೆ ತಾಯಿಯೂ ಹುಟ್ಟುತ್ತಾಳೆ .. ನನ್ನ ತಾಯ್ತನದ ಜನನವು ಹಾಗೆ ಆದದ್ದು .. ಮಗು ಬೆಳೆಸುವದೇನು  ಸಹಜದ ಕಲೆಯಲ್ಲ…ಆದರೆ ಅದರ ತಯಾರಿಯನ್ನ ಬಹಳ ಮುಂಚಿನಿಂದ  ಮಾಡಬೇಕಾಗುತ್ತೆ ..ಒಂದು ಮಾನಸಿಕ ತಯಾರಿಯದ್ದು ಮತ್ತೊಂದು ದೈಹಿಕ ತಯಾರಿಯದ್ದು  ಮಾನಸಿಕವಾಗಿ ಹೆಣ್ಣು ತಾಯ್ತನಕ್ಕೆ ಬಹಳ ಬೇಗ ಸಜ್ಜುಗೊಳ್ಳುತ್ತಾಳೆ  ಅನ್ನೋ ನಂಬಿಕೆ ಇದೆ..ನಾನು ಹೇಳುತ್ತೇನೆ ಅದು ಸುಳ್ಳು, ಆಕೆಗೂ ಸಮಯ ಬೇಕು..ಅಲ್ಪ ಸಲ್ಪದ ತರಬೇತಿಯು ಬೇಕು..ಮನೆಯಲ್ಲಿ ಹಿರಿಯರಿದ್ದಾರೆ ಸರಿ, … Read more

ಚಳಿಗಾಲ…ಆರೋಗ್ಯ ಜೋಪಾನ: ಗಣೇಶ್.ಹೆಚ್.ಪಿ.

ಮೊನ್ನೆ ಆಕಸ್ಮಿಕವಾಗಿ ಗೆಳೆಯನೊಬ್ಬನನ್ನು ಭೇಟಿಯಾದೆ. ಹೇಗಿದೆ ಶಾಲೆ ? ಕ್ಲಾಸಸ್ ಎಲ್ಲಾ ಚೆನ್ನಾಗಿ ನಡೀತಿದೆಯೋ ಎಂದು ವಿಚಾರಿಸಿದೆ. ಅವನು ಸಪ್ಪೆ ಮುಖದಿಂದ ಇಲ್ಲಾ ಕಣೋ ಎರಡು ದಿನದಿಂದ ಜ್ವರ, ಶೀತ ಆಗಿ ಶಾಲೆಗೆ ಹೋಗಿಲ್ಲ ಎಂದು ಹೇಳಿದ. ನಾನು ಅವನಿಗೆ ಆರೋಗ್ಯದ ಮೇಲೆ ನಿಗಾ ಇಡು, ಹಾಗೇ ಶಾಲೆಯನ್ನು ತಪ್ಪಿಸಬೇಡ ಎಂದು ಬುದ್ಧಿ ಹೇಳಿದೆ. ಮೈ ಕೊರೆಯುವ ಚಳಿ :  ಈ ಕಾಲದಲ್ಲಂತೂ ಕಳೆಗುಂದಿದ ವಾತಾವರಣ, ಹೊರಗೆ ಕಾಲಿಟ್ಟರೆ ಸಾಕು ಮೈ ಕೊರೆಯುವ ಚಳಿ, ಬೆಳಿಗ್ಗೆ ಹಾಸಿಗೆ … Read more

ಡುಮ್ಮಾ-ಡುಮ್ಮಿ (ಆಡಿಯೋ ಕತೆ): ಸುಮನ್ ದೇಸಾಯಿ

ಈ ಪುಟ್ಟ ಕತೆಯನ್ನು ಸುಮನ್ ದೇಸಾಯಿಯವರು ಮಕ್ಕಳಿಗಾಗಿ ಬರೆದು ಮತ್ತು ಆ ಕತೆಯನ್ನು ರೆಕಾರ್ಡ್ ಮಾಡಿ ಕಳಿಸಿದ್ದಾರೆ.  ಈ ಕತೆಯನ್ನು ಅವರ ಧ್ವನಿಯಲ್ಲಿ ಕೇಳಲು ಈ ಕೆಳಗಿನ ಕೊಂಡಿ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ರೈಟ್ ಕ್ಲಿಕ್ ಮಾಡಿ ನಂತರ save as ಆಪ್ಷನ್ ನಿಂದ ನಿಮ್ಮ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… Suman Desai- Dumma Dummi ಹಿಂಗೊಂದ ಊರಾಗ ಡುಮ್ಮಾ-ಡುಮ್ಮಿ ಇದ್ರಂತ. ಡುಮ್ಮಗ ಒಂದಿನಾ ದ್ವಾಸಿ ತಿನಬೆಕನಿಸ್ತಂತ. ಆವಾಗ ಆಂವಾ … Read more

ಬೆಳೆಯುವ ಸಿರಿ ಮೊಳಕೆಯಲ್ಲಿ: ಡಾ. ವಾಣಿ ಸುಂದೀಪ್

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಮಕ್ಕಳ ಒಲವು ಯಾವ ಕಡೆ ಎಂಬುದು ಪೋಷಕರಿಗೆ ಮಕ್ಕಳು ಚಿಕ್ಕವರಿರುವಾಗಲೇ ಅರ್ಥವಾಗಬೇಕು.  ಮಕ್ಕಳನ್ನು ಬೆಳೆಸುವುದು, ಪಾಲಿಸುವುದು ಸುಲಭದ ಕೆಲಸವಲ್ಲ. ಮಕ್ಕಳ ಆಟ, ಹಟ, ನಗು, ಬಾಲ್ಯತನ ಎಲ್ಲವೂ ಹಿತ ನೀಡುತ್ತವೆ. ಆದರೆ ಮಕ್ಕಳ ಜವಾಬ್ದಾರಿಯ ವಿಚಾರ ಬಂದಾಗ ಎಲ್ಲ ತಂದೆ-ತಾಯಿಯರೂ ಜಾಗೃತರಾಗಬೇಕು. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಿ, ಅದರ ಜೊತೆಗೆ ಹೊರ ಜಗತ್ತಿನ ಅನುಭವವನ್ನು ಮಾಡಿಸಬೇಕು. ಮಕ್ಕಳ ಆಸೆಗಳನ್ನೂ ಪೂರೈಸಬೇಕು.   ಮಗು ಹಠ ಮಾಡುತ್ತಿದೆ ಎಂದು ಕೈಲಾಗದ ವಸ್ತುಗಳನ್ನು ತರಲು ಸಾಧ್ಯವಿಲ್ಲ. ಮೊದಲನೆಯದಾಗಿ … Read more

ಅಮ್ಮಾ –ಕಂದ: ನಳಿನ ಡಿ.

ಅಮ್ಮಾ ನಿನೊಡನಿರುವೆ ಮನೆಯಲ್ಲಿ, ಕುಣಿಯುವೆ ನಿನ್ನಯ ತೋಳಲ್ಲಿ, ಪಾಠವು ನನಗೆ ಬೇಡಮ್ಮ, ಕೈತುತ್ತನು ಮೆಲ್ಲಗೆ ತಾರಮ್ಮ, ಮಲಗಲು ಮಡಿಲು ನೀಡಮ್ಮ, ಆಡವಾಡಿಸು ಬಾ ಗುಮ್ಮಾ ಬಂತು ಗುಮ್ಮಾ ಪುಟ್ಟ ಕಂದನೇ ಏನಾಯ್ತು? ಪಾಠವೇತಕೆ ಬೇಡಾಯ್ತು?   ಮೇಷ್ಟು ಮಂಕುತಿಮ್ಮ ಅಂದರು, ಮಗ್ಗಿ ತಪ್ಪಿಸಿದ್ದಕ್ಕೆ ಬೈದರು, ಕೋಲನು ಕಂಡು ಕಾಗುಣಿತ ಬಾರದು, ಎಬಿಸಿಡಿ ಕಲಿಯಲು ನನ್ನಿಂದಾಗದು,   ಕಂದಾ, ವಿದ್ಯೆಯು ಬೇಕು ಬಾಳಿಗೆ, ನನ್ನನ್ನು ಸಾಕಲು ನಾಳೆಗೆ, ಅದೇ ದಾರಿ ತೋರುವ ದೀವಿಗೆ, ವಿದ್ಯೆ ಇಲ್ಲದೆ ಅಸಾಧ್ಯವೋ ಏಳಿಗೆ. … Read more

ಶಿಶು ಗೀತೆ ಮತ್ತು ಚಿತ್ರ

  ನಿಖಿಲ್ ೩ ನೇ ತರಗತಿ ಜಿ ಪಿ ಎಚ್ ಎಸ್ ನಂಜೈಗರಹಳ್ಳಿ     ಕಿಟ್ಟು ಪುಟ್ಟು   ಕಿಟ್ಟು ಪುಟ್ಟು ಇಬ್ಬರು ತುಂಬಾ ಒಳ್ಳೆ ಗೆಳೆಯರು ಅಕ್ಕ-ಪಕ್ಕದ ಮನೆಯ ಹುಡುಗರು   ಒಂದೇ ಊರು ಒಂದೇ ಶಾಲೆ ಅಣ್ಣ-ತಮ್ಮನಂತೆ ಇವರು ತುಂಬಾ ಒಳ್ಳೇ ಹುಡುಗರು   ಕಿಟ್ಟು ಅಮ್ಮ ತಿಂಡಿ ಕೊಡಲು ಪುಟ್ಟು ಜೊತೆಗೆ ಹಂಚಿ ತಿನುವ ಪುಟ್ಟು ಕೂಡ ಅಪ್ಪ ತರುವ ಪೇಟೆ ತಿಂಡಿ ಹಂಚಿ ತಿನುವ ಕಿಟ್ಟು ಜೊತೆಯಲೇ..   ಜೊತೆಗೆ … Read more

ಪುಟ್ಟ ಮತ್ತು ನಾಯಿ ಮರಿ: ವೆಂಕಟೇಶ್ ಮಡಿವಾಳ ಬೆಂಗಳೂರು.

ನಾಯಿ -ಮರಿಯನೊಂದ ಹಾಕಿತು ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು   ದೂರದಲ್ಲಿ ಯಾರೋ ಎಸೆದ ರೊಟ್ಟಿ ಬಂದು ಬಿದ್ದಿತು ರೊಟ್ಟಿ ತಿನ್ನಲೆಂದು ನಾಯಿ ಜಿಗಿಯಿತು ಆಗ ಅಡ್ಡ ಬಂದ ಬಸ್ಸು ಅದರ ಮೇಲೆ ನುಗ್ಗಿತು ಆಗ ತಾನೇ ಜನ್ಮವಿತ್ತ ನಾಯಿ ಮರಣ ಹೊಂದಿತು ಅದೇ ತಾನೇ ಭುವಿಗಿಳಿದ ಮರಿ ಅನಾಥವಾಯಿತು   ನಮ್ಮ ಪುಟ್ಟ ಆ ದೃಶ್ಯ ನೋಡಿದ ಮರಿಯ ತಂದು … Read more

ಚುಕ್ಕಿ-ಚಂದ್ರಮ: ನವೀನ್ ಮಧುಗಿರಿ

ಕನಸಿನಲ್ಲಿ ನಾನು ತುಂಬಾ  ಉದ್ದ ಬೆಳೆದೆನು! ಚುಕ್ಕಿ ಚಂದ್ರರೆಲ್ಲ ನನ್ನ  ಕೈಯ್ಯ ಹತ್ತಿರ!   ಚಂದಮಾಮ ಕೆನ್ನೆ ಸವರಿ  ಮುತ್ತು ಕೊಟ್ಟನು  ಚುಕ್ಕಿ ತಾರೆ ನನ್ನ ಜೊತೆ  ಒಳ್ಳೆ ಗೆಳೆಯರಾದರು    ಅರ್ಧ ಚಂದ್ರನ ಮೇಲೆ ನಾನು  ಜಾರುಬಂಡಿ ಆಡಿದೆ  ಚುಕ್ಕಿ ತಾರೆಗಳ ಜೊತೆ  ತುಂಬಾ ಮಾತನಾಡಿದೆ    ಅಲ್ಲೂ ಒಂದು ಊರು ಇತ್ತು  ಅಲ್ಲಿ ಜಾತ್ರೆ ನಡೀತಿತ್ತು  ಚಂದಮಾಮ ಕೈಯ್ಯ ಹಿಡಿದ  ನಾನು ಊರು ಸುತ್ತಿದೆ    ಕಡಲೆ ಮಿಟಾಯಿ ಕೊಬ್ಬರಿ ಮಿಟಾಯಿ  ಬೆಂಡು ಬತ್ತಾಸು … Read more