ಹೆಸರಿಡದ ಕಥೆಯೊಂದು (ಭಾಗ 1): ಪ್ರಶಸ್ತಿ ಪಿ.
ಹೇ ಹೋಳಿಗೊಂದಿನ ರಜಾ ಹಾಕಕ್ಕೆ ಹೇಳೇ ಆ ಸೋಮು ಮತ್ತವನ ಗ್ಯಾಂಗಿಗೆ. ಅವ್ರನ್ನೆಲ್ಲಾ ನೋಡಿ ಸಿಕ್ಕಾಪಟ್ಟೆ ಸಮಯ ಆಯ್ತು. ಸಿಗೋಣಂತೆ ಬಣ್ಣದ ಹಬ್ಬದಲ್ಲಿ…ತಮ್ಮೆಂದಿನ ಪಾನಿ ಪುರಿ ಅಡ್ಡಾದಲ್ಲಿ ಫುಲ್ ಜೋಷಲ್ಲಿ ಮಾತಾಡ್ತಾ ಇದ್ಲು ಶ್ವೇತ ತನ್ನ ಗೆಳತಿ ಶಾರ್ವರಿಯೊಂದಿಗೆ. ಬೇರೆಯವ್ರು ರಜಾ ಹಾಕಿದ್ರು ಹಾಕ್ಬೋದೇನೋ ಆದ್ರೆ ಆ ಶ್ಯಾಮಂದೇ ಡೌಟು ಕಣೇ ಅಂದ್ಲು ಶಾರ್ವರಿ.ಡೌಟಾ ? ಯಾಕೆ ಅಂತ ಕಣ್ಣರಳಿಸಿದ್ಲು ಶ್ವೇತ ಹೋಳಿಗಾ ? ಒಂದಿಡೀ ದಿನಾನಾ ಅಂತಾನೆ . ಒಂದಿನ ಕೆಲಸಕ್ಕೆ ಹೋಗ್ಬೇಡ ಅಂದ್ರೆ ಲಬೊ … Read more