ಹೀಗೊಂದು ರಾತ್ರಿ:ಪ್ರಶಸ್ತಿ ಅಂಕಣದಲ್ಲಿ ಸಣ್ಣಕಥೆ

ಹೀಗೇ ಒಂದು ರಾತ್ರಿ. ಬೆಂಕಿಪಟ್ಟಣದಂತಹ ಬಾಡಿಗೆ ರೂಮಿನಲ್ಲೂ ಸುಖನಿದ್ರೆಯಲ್ಲಿದ್ದ ಬ್ಯಾಚುಲರ್ ಗುಂಡನಿಗೆ ಯಾರೋ ಬಾಗಿಲು ಕೆರೆದಂತಾಗಿ ದಡಕ್ಕನೆ ಎಚ್ಚರವಾಯಿತು. ಪಕ್ಕನೆ ಪಕ್ಕಕ್ಕಿದ್ದ ಲೈಟು ಹಾಕಿದರೂ ಅದು ಹತ್ತಲಿಲ್ಲ.  ಎಷ್ಟೆಷ್ಟೊತ್ತಿಗೋ ಕರೆಂಟು ತೆಗಿಯೋ ಕೆಯಿಬಿಯವರಿಗೆ ಬಯ್ಯುತ್ತಾ ಯಾರು ಅಂದ. ಶಬ್ದವಿಲ್ಲ. ಯಾರಿರಬಹುದು ಈ ನಡು ರಾತ್ರಿಯಲ್ಲಿ ಅಂದುಕೊಂಡ. ನಡುರಾತ್ರಿಯೇ ? ಗೊತ್ತಿಲ್ಲ. ಕಾಲೇಜಿಂದ ಸಂಜೆ ಸುಸ್ತಾಗಿ ಬಂದವನಿಗೆ ಹಾಗೇ ಜೊಂಪು ಹತ್ತಿತ್ತು. ಮೈಮರೆತು ಹಾಗೆಯೇ ಎಷ್ಟೊತ್ತು ಮಲಗಿದ್ದನೋ ಗೊತ್ತಿಲ್ಲ. ಈ ಬಾಗಿಲು ಕೆರೆಯೋ ಶಬ್ದದಿಂದಲೇ ದಡಕ್ಕನೆ ಎಚ್ಚರವಾಗಿ ಒಮ್ಮೆ … Read more

ಸಾಮಾಜಿಕ ಸ್ಪಂದನೆ:ಪ್ರಶಸ್ತಿ ಅಂಕಣ

ನಾಳೆಯಿಂದ ಪೆಟ್ರೋಲ್ ದರ  ಮತ್ತೆ ತುಟ್ಟಿ.ಪಾಕಿಸ್ತಾನದಲ್ಲಿ ಅಷ್ಟಿದೆ, ಇನ್ನೆಲ್ಲೋ ಮತ್ತೆಷ್ಟೋ ಇದೆ. ಇಲ್ಲಿ ಮಾತ್ರ ಹೆಚ್ಚೆಂಬ ಮಾತು ಎಲ್ಲರ ಬಾಯಲ್ಲೂ. ಪೆಟ್ರೋಲ್ ದರ ಹೆಚ್ಚಳ, ಪದವೀಧರರಿಗೆ ಹೆಚ್ಚುತ್ತಿರೋ ನಿರೂದ್ಯೋಗ ಸಮಸ್ಯೆ,  ಹೆಚ್ಚುತ್ತಿರೋ ತಲೆಗಂದಾಯ, ಕೆಟ್ಟಿರೋ ರಸ್ತೆ  ಹೀಗೆ ಹುಡುಕ್ತಾ ಹೋದ್ರೆ ನೂರೆಂಟು ಅವ್ಯವಸ್ಥೆಗಳು ಇಲ್ಲಿ. ಭ್ರಷ್ಟ ಅಧಿಕಾರಿಗಳಿಂದ ಹಿಡಿದು ಬೇಜವಬ್ದಾರಿ ಸಹೋದ್ಯೋಗಿಯ ತನಕ , ಅಭಿವೃದ್ಧಿ ಸಹಿಸದ ನೆರೆಯವರಿಂದ ಹೆಜ್ಜೆಹೆಜ್ಜೆಗೂ ಮೂಗು ತಿವಿಯೋ ಜನರ ತನಕ  ಈ ಸಮಾಜದ ಬಗ್ಗೆ ಬಯ್ತಾ ಹೋದ್ರೆ ಅದು ಮುಗಿಯದ ಪಟ್ಟಿ. … Read more

ಪುಸ್ತಕಗಳ ಲೋಕದಲ್ಲಿ:ಪ್ರಶಸ್ತಿ ಅಂಕಣ

ಮಹಾತ್ಮ ಗಾಂಧಿಯವರ ಮಾತೊಂದು ನೆನಪಾಗ್ತಿದೆ."ಪುಸ್ತಕ ಓದೋ ಹವ್ಯಾಸವುಳ್ಳವನು ಎಲ್ಲಿ ಹೋದರೂ ಖುಷಿಯಾಗಿರಬಲ್ಲ" ಎಂದು. ಚಿಕ್ಕವನಿದ್ದಾಗಿಂದ್ಲೂ ಪುಸ್ತಕ ಒಂದಿದ್ರೆ ಸಾಕು. ಎಲ್ಲಿಗೆ ಬೇಕಾದ್ರೂ ಬರ್ತಾನೆ ಈ ಮಾಣಿ ಅಂತ ನಮ್ಮ ನೆಂಟರೆಲ್ಲಾ ತಮಾಷೆ ಮಾಡೋವಷ್ಟು ಪುಸ್ತಕಗಳ ಪ್ರೀತಿ ನನಗೆ. ನನ್ನ ಅಪ್ಪ, ದೊಡ್ಡಪ್ಪಂದಿರಲ್ಲದೇ, ಅಜ್ಜ, ಮಾವಂದಿರಲ್ಲೂ ಇದ್ದ ಸಾಮಾನ್ಯ ಹವ್ಯಾಸ ಪುಸ್ತಕಪ್ರೀತಿ. ಈ ವಾತಾವರಣದ ಪ್ರಭಾವವೇ ನನ್ನ ಮೇಲೆ ಬಿದ್ದಿರಲೂ ಸಾಕು. ನನ್ನ ಮಾವ ಅಂದಾಕ್ಷಣ ಒಂದು ಮಜೆಯ ಪ್ರಸಂಗ ನೆನಪಾಗುತ್ತೆ. ಅವರ ಬಾಲ್ಯದ ಕಾಲ. ಹಳ್ಳಿಯಲ್ಲಿದ್ದ  ನಮ್ಮಜ್ಜಿ … Read more

ಬದುಕು: ಪ್ರಶಸ್ತಿ ಅಂಕಣ

ಮಳೆಯೆಂದ್ರೆ ಘೋರ ಮಳೆ. ಮಾರಿಕೊಪ್ಪೆಗೆ ತನ್ನ ಮೋರೆ ತೋರಿಸಲೂ ಬೇಸರಿಸಿದ ರವಿ ಮನೆಯೊಳಗೆ ಬೆಚ್ಚಗೆ ಮಲಗಿದ್ದಾನಾ ಎಂಬ ಭ್ರಮೆ ಮೂಡಿಸುವಂತಹ ವಾತಾವರಣ. ಊರ ಮುಂದೊಂದು ಮಾರಿಗುಡಿಯಿಂದ ಹಳ್ಳಿಗೆ ಮಾರಿಕೊಪ್ಪ ಎಂಬ ಹೆಸರು ಬಂತೇ ಅಥವಾ ಮುಳುಗಡೆಯ ವೇಳೆ ಆ ಊರ ಜನರೆಲ್ಲಾ ತಮ್ಮ ಪಿರ್ತಾರ್ಜಿತ ಜಮೀನನ್ನು ಮಾರಿ ಇಲ್ಲಿಗೆ ಗುಳೆ ಬಂದಿದ್ದರಿಂದ ಇಂತಾ ಹೆಸರೇ ಎಂದು ಅಲ್ಲಿನ ಈಗಿನ ತಲೆಮಾರಿನವರಿಗೆ ತಿಳಿದಿಲ್ಲ. ಅದೇ ಮಾರಿಗುಡಿಯ ಮುಂದೆ ಒಂದೈದು ಅಡಿ ದೂರದಲ್ಲೊಬ್ಬ ಬೋರಲು ಬಿದ್ದಿದ್ದಾನೆ. ಮಾರಿಗುಡಿಯ ಎದುರಿಗೆ ಹುಗಿದಿದ್ದ … Read more

ಪಯಣ : ಪ್ರಶಸ್ತಿ ಅಂಕಣ

ರೈಲು ಸುರಂಗದಲ್ಲಿ ಸಾಗ್ತಾ ಇತ್ತು. ಕತ್ತಲೆಯ ತೀರ್ವತೆ ತಿಳಿಯಲೆಂದೇ ಎಲ್ಲಾ ಲೈಟುಗಳನ್ನೂ ಆಫ್ ಮಾಡಿದ್ದರು. ರೈಲು ಸುರಂಗದಲ್ಲಿ ಸಾಗ್ತಿರೋ ಸದ್ದು ಬಿಟ್ಟರೆ ಬೇರೇನೂ ಇಲ್ಲ. ಎಷ್ಟುದ್ದದ ಸುರಂಗವೋ ತಿಳಿಯದು. ಜೀವನವೇ ಮರಳದ ಕತ್ತಲೆಯ ಕೂಪಕ್ಕೆ ಧುಮುಕಿದಂತೆ ಎಲ್ಲೆಡೆ ಗಾಢಾಂಧಕಾರ. ಕಣ್ಣು ತೆರೆದರೂ , ಮುಚ್ಚಿದರೂ ಒಂದೇ ಎನಿಸುವಂತಹ ಕತ್ತಲು. ಕೆಲ ಕ್ಷಣಗಳ ಮೌನದ ನಂತರ ಎಲ್ಲಾ ಕಿರಿಚತೊಡಗಿದರು. ಕತ್ತಲೆಯನ್ನು ಎಂದೂ ಕಾಣದಂತೆ ಕಂಡ ಖುಷಿಗೋ ಅಥವಾ ಪಕ್ಕದವರು ಕಿರಿಚುತ್ತಿದ್ದಾರೆಂದೋ ತಿಳಿಯದು. ಎಲ್ಲೆಡೆ ಹೋ  ಎಂಬ ಕೂಗು. ಈ … Read more

ಆರ್ಕೆಸ್ಟ್ರಾಗಳೂ ಎಕ್ಸಾಮುಗಳೂ: ಪ್ರಶಸ್ತಿ ಅಂಕಣ

ಮೊನ್ನೆ ಬೆಳಗ್ಗೆ ಟೀವಿ ಹಾಕ್ತಿದ್ದ ಹಾಗೇ ಯಾವ್ದೋ ಕಾರ್ಯಕ್ರಮ. ನಿಮ್ಮ ಆರ್ಮ್ ನ ರೈಟ್ಗೆ ೪೫ ಡಿಗ್ರಿ ರೊಟೇಟ್ ಮಾಡಿ. ಆಮೇಲೆ ಲೆಗ್ಸ ನ ಹಾಗೇ ಪುಷ್ ಮಾಡಿ. ಹಾಗೇ ೨೦ ರೌಂಡ್ಸ್ ರಿಪೀಟ್ ಮಾಡಿ… ಯಪ್ಪಾ, ಇದ್ಯಾವ ಭಾಷೆಯೋ ಶಿವನೇ. ಬೆಂಗ್ಳೂರ ಕನ್ನಡ ಇಷ್ಟು ಕರಾಬ್ ಆಯ್ತಾ ಅಂತ ಬೇಜಾರಾಗಿ ಟೀವೀನೆ ಆಫ್ ಮಾಡ್ತೆ. ಸಂಜೆ ಮನೆಗೆ ವಾಫಾಸ್ ಬಂದ್ರೂ ಮತ್ತೆ ಟೀವಿ ಹಾಕೋ ಮಸಸ್ಸಾಗಿರ್ಲಿಲ್ಲ. ಮುಖಹೊತ್ತಿಗೆ(FB 🙂 ) ತೆಗಿತಾ ಇದ್ದೆ. ಅದೇ ಸಮಯಕ್ಕೆ … Read more

ಗಡ್ಡ: ಪ್ರಶಸ್ತಿ ಅಂಕಣ

ಹಾಡ್ತಾ ಹಾಡ್ತಾ ರಾಗ, ನರಳತಾ ನರಳಾತಾ ರೋಗ ಅಂದಗೇನೇ ನೆನಿತಾ ನೆನಿತಾ ನೆನಪು ಅಂತನೂ ಹೇಳ್ಬೋದೇನೋ. ಸುಮ್ನೆ ಎಲ್ಲೋ ಹೊಳೆದ ಎಳೆಯೊಂದು ಕತೆಯಾಗಿಯೋ, ಕವಿತೆಯಾಗಿಯೋ ರೂಪುಗೊಳ್ಳಬಹುದು. ಕೆಲವೊಂದು ಎಳೆಗಳು ನೆನಪಿನಾಳಕ್ಕಿಳಿದು ನೋವ ಅಲೆಗಳನ್ನ ಕೆದಕಬಹುದು. ತನ್ನನ್ನೇ ಹಾಸ್ಯವಾಗಿಸಿ ನಗುವ ಕಡಲಲ್ಲಿ ತೇಲಿಸಲೂಬಹುದು. ಆ ಕ್ಷಣಕ್ಕೆ ಅದೇ ದೊಡ್ಡ ಹಾಸ್ಯ. ಮಿಸ್ಸಾದರೆ ಏನೂ ಇಲ್ಲ.  ತೆರೆಗಳು ಸರಿದಾಗ ಮರಳ ತಡಿಯಲ್ಲಿ ಮೂಡೋ ಚಿತ್ರಗಳಂತೆ.. ಮತ್ತೊಂದು ಅಲೆ ಬಂದು ಅದನ್ನು ತೊಳೆದು ಹಾಕೋ ತನಕ.. ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ … Read more

ಪೀಜಿ ಪುರಾಣ: ಪ್ರಶಸ್ತಿ ಅಂಕಣ

  ಅ: ಹಾಯ್, ನೀವೆಲ್ಲಿರೋದು ? ಬ: ಬೆಂಗ್ಳೂರು ಅ: ಓ. ಹೌದಾ.. ಬೆಂಗ್ಳೂರಲ್ಲೇನ್ ಮಾಡ್ಕೊಂಡಿದೀರಿ ? ಬ:ಪೀಜಿ ಅ:ಪೀಜಿ ಅಂದ್ರೆ ಪೋಸ್ಟ್ ಗ್ರಾಜುಯೇಷನ್ನಾ ? ಬ:ಅಲ್ಲ ಮಾರ್ರೆ.ಪೇಯಿಂಗ್ ಗೆಸ್ಟು !:-) ಈ ಬೆಂದಕಾಳೂರಿಗೆ ಬಂದು ಬಾಳ ಬೇಳೆ ಬೇಯಿಸ್ಕೊಳೋಕೆ ಶುರು ಮಾಡಿದಾಗಿನಿಂದ ಮೇಲಿನ ಪೀಜಿ PJ ಬೇಜಾರ್ ಬರೋವಷ್ಟು ಕಾಮನ್ನಾಗಿ ಹೋಗಿದೆ 🙁 ಅಲ್ಲ, ಈ ಕಾಲ ಅನ್ನೋದು ನಮ್ಮ ಕಲ್ಪನೆ, ನಂಬಿಕೆಗಳನ್ನೆಲ್ಲಾ ಎಷ್ಟು ಬದಲಾಯಿಸತ್ತೆ ಅಲ್ವಾ ? ಕೆಲವೊಂದು ಸಲ ನಂಬಿಕೆಗಳನ್ನ  ಬುಡಮೇಲೇ ಮಾಡ್ಬಿಡುತ್ತೆ. ನಾವು ಎಷ್ಟೇ ಅಂದ್ಕೊಂಡ್ರೂ … Read more

ಸಾರಿ ರೀ.. ಥ್ಯಾಂಕ್ಯೂ: ಪ್ರಶಸ್ತಿ ಅಂಕಣ

ತಪ್ಪು ಮಾಡದೋರು ಯಾರವ್ರೇ, ತಪ್ಪೇ ಮಾಡದವ್ರು ಯಾರವ್ರೇ ಅಂತ ನಮ್ಮ ಜಗ್ಗೇಶ್ ಮಠ ಫಿಲ್ಮಲ್ಲಿ ಕುಣಿದಿದ್ದು ಎಲ್ರಿಗೂ ಗೊತ್ತಿದ್ದೆ. ತಿಳಿದೋ, ತಿಳೀದೆನೋ ಏನಾರೂ ತಪ್ಪು ಮಾಡ್ತಾನೆ ಇರ್ತೀವಿ. ನಮಗೆ ಸರಿಯೆನಿಸಿದ್ದು ಯಾರಿಗೋ ತಪ್ಪೆನಿಸಿ ಅವರ ಮನ ನೋಯಿಸಿರ್ತೀವಿ. ಸುಮ್ಮನೇ ತಪ್ಪೆಣಿಸಿ ಮುಗ್ದ ಮನವನ್ನ ನೋಯಿಸಿರ್ತೀವಿ. ಯಾರೋ ತಪ್ಪು ತಿಳೀಬೋದೆಂದು ತಪ್ಪಾಗಿ ಭಾವಿಸಿ ಹೇಳಬೇಕಾದ ಮಾತು, ಮಾಡಬೇಕಾದ ಕೆಲಸ ಮಾಡದೇ ತಪ್ಪೆಸಗಿರ್ತೀವಿ. ಹೀಗೇ ಹೆಜ್ಜೆ ಹೆಜ್ಜೆಗೆ ತಪ್ಪು, ಕೂತಿದ್ದು-ನಿಂತಿದ್ದು ತಪ್ಪೆಂದು ಕಾಡಿ ಎಷ್ಟೋ ಜೀವಗಳ ಕಣ್ಣೀರಿಳಿಸಿರ್ತೀವಿ. ಕೆಲವೊಮ್ಮೆಯಂತೂ ನಾವು … Read more

ಓ ಮನಸೇ, ಸ್ವಲ್ಪ ರಿಲ್ಯಾಕ್ಸ್ ಪ್ಲೀಸ್:ಪ್ರಶಸ್ತಿ ಅಂಕಣ

ಇವತ್ತಿನ ಯಶಸ್ಸನ್ನು ನಾಳೆಯ ಗುರಿಗಳೆದುರು ನಿಲ್ಲಿಸಿ ಕಡೆಗಣಿಸೋ ಮುನ್ನ.. ಜೀವನದೋಟದಲಿ ಎಲ್ಲರಿಗಿಂತ ಮುಂದಿರೋ ಬಯಕೆಯಲಿ ದಾಟಿದ ಎಷ್ಟೋ ಮೈಲುಗಳ ಮರೆಯೋ ಮುನ್ನ.. ಜತೆಗಿದ್ದವರ ನೋವಲ್ಲಿ ದನಿಯಾಗಿ, ನಲಿವಲ್ಲಿ ಅನಾಥನಾಗೋ ಮುನ್ನ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್.. ಯಶವೆಂಬುದು ಗುರಿಯಲ್ಲ, ಅನುದಿನದ ದಾರಿ.. ಓ ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ 🙂 ಬಾಳು, ಗೋಳು, ನೋವು, ನಲಿವು .. ಉಫ್ ಏನಪ್ಪಾ ಇದು ವೇದಾಂತ ಅಂದ್ಕೊಂಡ್ರಾ ? ಹಾಗೇನಿಲ್ಲ. ಪ್ರತೀ ವಾರದಂತೆಯೇ.. ಆದರೆ ಸ್ವಲ್ಪ ಭಿನ್ನವಾಗಿ. ಸ್ವಗತದ ಮಾತುಗಳನ್ನು ಪದಗಳಿಗಿಳಿಸೋ … Read more

ಬೆಂಗಳೂರಿನ ದಾಖಲೆ ಮಳೆ: ಪ್ರಶಸ್ತಿ ಅಂಕಣ

  ಟ್ರಾಫಿಕ್ ಜಾಂಗೂ ಬೆಂಗ್ಳೂರಿಗೂ ಖಾಸಾ ಖಾಸಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯನೇ..ಆದರೆ ಬೆಂಗ್ಳೂರಲ್ಲಿ ದಾಖಲೆ ಮಳೆಯೆಂಬ ದಾಖಲೆಯಲ್ಲಿ ದಾಖಲಾಗಿದ್ದು, ಮುಕ್ಕಾಲು ಘಂಟೆಯ ಪಯಣ ಮಳೆರಾಯನಿಂದ ಮೂರು ಘಂಟೆಯಷ್ಟಾಗಿದ್ದು  ಮಾತ್ರ ಮರೆಯಲಾರದ ನೆನಪುಗಳು..   ಮೊನ್ನೆ ಎಂದಿನಂತೆ ಶುಭ ಶುಕ್ರವಾರ. ಅಕ್ಷರಶ: ಸೆಕೆಯಲ್ಲಿ ಬೇಯ್ತಿರೋ ಬೆಂಗಳೂರಿಂದ ದೂರ ನನ್ನ ಹುಟ್ಟೂರೆಡೆಗೆ ತೆರಳೋ ಖುಷಿಯಿಂದ ಸಹಜವಾಗೇ ಶುಕ್ರವಾರ ಶುಭದ್ದೆನಿಸಿತ್ತು. ಆದರೆ ಸಂಜೆ ಆರು ಘಂಟೆಯಾಗುತ್ತಿದ್ದಂತೆಯೇ ಎಲ್ಲಿಂದಲೋ ಕವಿದ ಮೋಡಗಳು ಅದ್ಯಾವ ಮಾಯೆಯಲ್ಲಿ ಮಳೆ ಸುರಿಸತೊಡಗಿದವೋ ತಿಳಿಯಲೇ ಇಲ್ಲ…ಯಾರೋ  ಬಾಗಿಲು … Read more

ಐಸ್ ಕ್ರೀಂ ನೆನಪುಗಳಲ್ಲಿ..:ಪ್ರಶಸ್ತಿ

ಸಣ್ಣವನಿದ್ದಾಗ ಬೆಂಗಳೂರು ಎಂದರೆ ಉದ್ಯಾನನಗರಿ ಎಂಬ ಹೆಮ್ಮೆಯಿತ್ತು. ಎರಡು ಬಾರಿ ಬಂದಾಗಲೂ ಇಲ್ಲಿದ್ದ ತಣ್ಣನೆಯ ಹವೆ ಖುಷಿ ನೀಡಿತ್ತು. ಆದರೆ ಈಗ.. ಬೆಂಗಳೂರು ಅಕ್ಷರಶ: ಬೇಯುತ್ತಿದೆ. ಸುಡ್ತಿರೋ ಬಿಸಿಲಲ್ಲಿ, ಆಗಾಗ ಬಂದು ಫೂಲ್ ಮಾಡೋ ಮಳೆಯಿದ್ರೂ ಯಾಕೋ ಕಾಡೋ ಐಸ್ ಕ್ರೀಂ ನೆನಪುಗಳು.. ನೆನಪಾದಾಗೆಲ್ಲಾ ನಗಿಸೋ ಬಿಸಿ ಐಸ್ ಕ್ರೀಂ :-).. ಹೀಗೆ ಸುಡ್ತಿರೋ ಸೆಖೆಗೊಂಚೂರು ತಣ್ಣನೆ ನೆನಪುಗಳು ..    ಬಾಲ್ಯಕ್ಕೂ ಐಸಿಗೂ ಸಖತ್ ನಂಟಿದೆ 🙂 ಐಸ್ ಕ್ರೀಂ ಗಿಂತಲೂ ಮುಂಚೆ ನೆನಪಾಗೋದು ಐಸ್ … Read more

10k ಓಟ: ಪ್ರಶಸ್ತಿ ಅಂಕಣ

  ಹಿಂದಿನ ವರ್ಷ ಇದೇ ಸಮಯ. ಬೆಂಗಳೂರಿಗೆ ಕಾಲಿಟ್ಟ ಹೊಸತು. ಗೆಳೆಯರ ಬಾಯಲ್ಲಿ  10k 10k 10k.. ಎಂಬ ಝೇಂಕಾರ.. ಯಾರಾದ್ರೂ ಓಡ್ರಪ್ಪ, ಇದು ನನ್ನಿಂದೆಂತೂ ಆಗದ ಕೆಲಸ ಅಂತ ನನ್ನ ಭಾವನೆ. ಹಾಗಾಗಿ ಯಾರೇ ಈ ಬಗ್ಗೆ ಮಾತಾಡಕ್ಕೆ ಬಂದ್ರೂ ನಾನು ಇದ್ದ ಬುದ್ದಿಯನ್ನೆಲ್ಲಾ ಉಪಯೋಗಿಸಬೇಕಾಗಿ ಬಂದ್ರೂ ಉಪಯೋಗಿಸಿ ಅಲ್ಲಿಂದ ಎಸ್ಕೇಪ್ 🙂 ದಿನಾ ಬೆಳಬೆಳಗ್ಗೆ ಎದ್ದು ಓಡೋದಂದ್ರೆ ಏನು ಹುಡುಗಾಟನ ? ಬೆಂಗ್ಳೂರಿಗೆ ಬಂದ ಮೇಲೆ ಆಲಸ್ಯವೇ ನಾನು ಅಂತಾಗಿದ್ದೋನು ಮತ್ತೆ ಎದ್ದು ಓಡೋ … Read more

ಸಾಹಸ-ಸಾವುಗಳ ನಡುವಣ ಚಾರಣ..: ಪ್ರಶಸ್ತಿ ಅಂಕಣ

  ನೀರಿದ್ದಲ್ಲೆಲ್ಲಾ ಹೋಗದಾದ್ರೆ ಹೋಗ್ಲೇಬೇಡ ಅನ್ನೋ ಅಮ್ಮ, ಹುಡುಗ್ರು.. ಏನೋ ಆಸೆ ಪಟ್ತಿದಾರೆ ಸೇಫಾಗಿ ಹೋಗ್ಬರ್ಲಿ ಬಿಡು ಅನ್ನೋ ಅಪ್ಪ, ಹುಚ್ಚುಕೋಡಿ ಮನಸು.. ಇದು ಹದಿನಾರರ ವಯಸು ಎಂಬೋ ಕವಿವಾಣಿಯ ತರಹದ ಹುಚ್ಚು ಮನಸಿನ ಸ್ವಲ್ಪ ಹೆಚ್ಚೇ ಧೈರ್ಯದ , ರೋಚಕ ಕನಸುಗಳ ಹುಡುಗರು… ಯಾವುದೇ ಚಾರಣ ಅಂದಾಗ ಈ ಮೂರು ಚಿತ್ರಗಳು ಮನಸ್ಸಿಗೆ ಬಂದೇ ಬರುತ್ತೆ. ಚಾರಣದಲ್ಲಿ ಸಾಹಸ ಮತ್ತು ಸಾವುಗಳ ನಡುವೆ ಕೂದಲೆಳೆಯ, ಕೆಲವಕ್ಷರಗಳ ವ್ಯತ್ಯಾಸವಷ್ಟೇ. ಕುಮಾರಪರ್ವತದಿಂದ ಕೊಡಚಾದ್ರಿಯವರೆಗಿನ ಚಾರಣಗಳಲ್ಲಿ, ಜಲಪಾತದ ಜಾರುಗಳಲ್ಲಿ, ನೀರ … Read more

ಪ್ರಶಸ್ತಿ ಬರೆವ ಅಂಕಣ: ಪತ್ರಿಕಾ ಸಾಹಿತ್ಯ ಮತ್ತು ನಾವು

  ಹಿಂಗೇ ಸುಮ್ನೆ ಬರ್ಯೋ ಹವ್ಯಾಸದ ಒಬ್ಬ. ಬರಹಗಾರ, ಸಾಹಿತಿ ಅಂತ ಖ್ಯಾತಿ ಪಡೋದೊದ್ರೂ ಚನಾಗ್ ಬರಿತೀಯ ಕಣಲೇ ಅಂತ ತನ್ನ ಗೆಳೆಯರತ್ರ ಅನೇಕ ಸಲ ಶಬಾಷ್ಗಿರಿ ಪಡೆದವ. ಪೇಪರಲ್ಲಿ ಬರೋ ಬಣ್ಣಬಣ್ಣದ ಲೇಖನಗಳ್ನ ದಿನಾ ಓದೋ ಆ ಹುಡುಗನಿಗೆ  ತಾನೂ ಯಾಕೆ ಒಮ್ಮೆ ಪತ್ರಿಕೆಗೆ ಕಳಿಸ್ಬಾರ್ದು ಅನ್ನೋ ಭಾವ. ಪಕ್ಕದ್ಮನೆ ಹುಡ್ಗ ಯಾವಾಗ್ಲೂ ಹೊಡ್ಯೋ ಸೈಕಲ್ ನೋಡಿ ತಾನೂ ಒಮ್ಮೆ ಸೈಕಲ್ ಹೊಡಿಬೇಕು ಅಂತ ಮೂಡೋ ಭಾವದ ತರ.  ಸರಿ, ಲೇಖನದ ಕೆಳಗೆ ನಿಮ್ಮ ಲೇಖನಗಳನ್ನು … Read more

ಪ್ರಶಸ್ತಿ ಬರೆವ ಅಂಕಣ: ‘ಪೇಪರ್ ಪೇಪರ್’

ಸಣ್ಣವನಿದ್ದಾಗ ದೂರದರ್ಶನದಲ್ಲಿ ಬೆಳಗ್ಗೆ ಹತ್ತರಿಂದ ಹನ್ನೊಂದರವರೆಗೆ ಬರುತ್ತಿದ್ದ "ಗ್ಯಾನ್ ದರ್ಶನ್" ರಜಾವೇಳೆಯ ಅಚ್ಚುಮೆಚ್ಚಿನ ಕಾರ್ಯಕ್ರಮ ಆಗಿತ್ತು. ಅದರಲ್ಲಿ ಒಮ್ಮೆ ನೋಡಿದ್ದ ರದ್ದಿ ಪೇಪರ್ ಅಂತ ಎಸೆಯೋ ಬದಲು ನಾವು ಮನೆಯಲ್ಲೇ ಅದ್ನ ಹೇಗೆ ಪುನರ್ಬಳಕೆ ಮಾಡ್ಬೋದು, ರದ್ದಿ ಪೇಪರ್ಗಳನ್ನ ಹೇಗೆ ರೀಸೈಕಲ್ ಮಾಡ್ತಾರೆ ಅಂತ ತೋರ್ಸಿದ್ದರು. ವಿಜ್ಞಾನ, ಮುಂದುವರಿದ ಜನ ನಾವು ಅಂತ ರೀಚಾರ್ಚ್ ಕಾರ್ಡಿಂದ ಹಿಡ್ದು ಎಟಿಎಮ್ನಲ್ಲಿ ತೆಗ್ದ ಪ್ರತೀ ನೂರಕ್ಕೂ ಪಡ್ದ ಹರ್ದೆಸೆದ ಪೇಪರ್ನಿಂದ ಎಟಿಎಮ್ನಲ್ಲಿ ದಿನಾ ಬೀಳೋ ಕಸದ ರಾಶಿ, ಫ್ಯಾಷನ್ನಾಗಿರೋ ಪೇಪರ್ … Read more

ನಂ ಸಾಗರ ಜಾತ್ರೆ:ಪ್ರಶಸ್ತಿ ಬರೆವ ಅಂಕಣ

  ನಮ್ಮುರು ಸಾಗರ. ಇಲ್ಲಿ ಪ್ರತೀ ವರ್ಷ ನಡೆಯೋ ಗಣಪತಿ ಜಾತ್ರೆ ಇಲ್ಲಿನ ವಿಶೇಷ. "ಶ್ರೀ ಮಹಾಗಣಪತಿ ಮಹಾಸ್ಯಂದನ ರಥೋತ್ಸವ" ಅಂತ ಅದರ ಪೂರ್ಣ ಹೆಸರು. ಹೆಸರಲ್ಲಿ ಮಾತ್ರ "ಮಹಾ" ಇದೆ, ಇದೇನ್ ಮಹಾ ಅಂತಂದ್ಕೊಳ್ಬೇಡಿ. ಒಂದು ವಾರಕ್ಕಿಂತಲೂ ಹೆಚ್ಚು ನಡೆಯುವ ಈ ಜಾತ್ರೆ ಸಾಗರಿಗರ ಪಾಲಿಗೆ ಒಂದು ದೊಡ್ಡ ಹಬ್ಬದಂತೆಯೇ . ಯುಗಾದಿಯಾಗಿ ನಾಲ್ಕು ದಿನಕ್ಕೆ ಶುರುವಾಗೋ ಈ ಜಾತ್ರೆಗೆ ಯುಗಾದಿಗೆ ಮನೆಗೆ ಬಂದ ಮಕ್ಕಳು, ಅದಾದ ನಂತರ ಬರೋ ಶನಿವಾರವೋ, ಭಾನುವಾರವೋ ಸೇರೋ ದೂರದೂರಿನ … Read more

ಸಂಬಂಧ ಸಂದೇಶಗಳ ಸಂಬಂಧ: ಪ್ರಶಸ್ತಿ ಪಿ.

    ಕಾಳಿದಾಸನ ಮೇಘಸಂದೇಶದಿಂದ ಹಿಡಿದು ಮಾಡರ್ನ್ ಚಾಟಿಂಗಿನಿಂದ ಶುರುವಾದ ಸ್ನೇಹ,ಪ್ರೇಮಗಳವರೆಗೆ ಬಂಧಗಳ ಬೆಸುಗೆಯಲ್ಲಿ ಸಂದೇಶಗಳದ್ದೊಂದು ಪಾತ್ರ ಇದ್ದೇ ಇದೆ. ಎದುರಿಗೆಷ್ಟೇ ಕಿತ್ತಾಡಿದರೂ, ಹೇಳಲಾಗದಿದ್ದರೂ , ಮಾತೇ ಬಿಟ್ಟಿದ್ದರೂ ಯಾವಾಗಲೋ ಕಳಿಸಿದ ಫಾರ್ವರ್ಡ್ ಮೆಸೇಜು ಮತ್ತೆ ಮುರಿದ ಸಂಬಂಧಗಳ ಬೆಸೆದಿದ್ದಿದೆ. ವರ್ಷಗಳವರೆಗೂ ಕಾಡದಿದ್ದವರು ಟ್ರಂಕು ಖಾಲಿ ಮಾಡುವಾಗ ಸಿಕ್ಕ ಮಾಸಿದ ಪತ್ರದಿಂದ ನೆನಪಾಗಿದ್ದಿದೆ. ವರ್ಷಗಳ ಸಾಥಿ ಬೇರ್ಪಡುವಾಗ ಕಳುಹಿಸಿದ "ಮಿಸ್ ಯೂ" ಎಂಬ ಎರಡೇ ಪದದ ಸಂದೇಶ ಎಷ್ಟೋ ಸಮಯ ಕಾಡಿ , ಅಳಿಸಿದ್ದಿದೆ. ಹಲಕಾರಣಗಳಿಂದ ಹಳಸುತ್ತಿರುವ … Read more

ಇಕ್ಕೇರಿಯಲೊಂದು ಸುತ್ತು: ಪ್ರಶಸ್ತಿ ಪಿ.

'ಪಂಜು' ಬಳಗದವರು ಒಂದಂಕಣ ಬರೀತೀರಾ ಅಂದಾಗ ಒಂಥರಾ ಆಶ್ಚರ್ಯ!  ನಾನೂ ಅಂಕಣ ಬರೀಬೋದಾ ಅಂತ. ಪ್ರಯತ್ನ ಮಾಡಿ ನೋಡಿ ಅಂತ ಮತ್ತೆ ಕಾಲ್ ಮಾಡಿದ್ರು. ಸರಿ ನೋಡೋಣ ಅಂದರೂ ಮತ್ತೆ ಬಂದ ಯೋಚನೆ ಒಂದೇ, ಏನು ಬರ್ಯೋದು ?! ಮುಂಚೆಯಿಂದಲೂ ನಮ್ಮ ಗೆಳೆಯರ ಗುಂಪಿಗೆ 'ಕಾಲಿಗೆ ಚಕ್ರ ಕಟ್ಕೊಂಡೋರಾ ನೀವು' ಅಂತನೇ ತಮಾಷೆ ಮಾಡ್ತಿದ್ರು ಉಳ್ದವ್ರು. ಹಾಗಾಗಿ ಅದ್ನೇ ಯಾಕೆ ಬರೀಬಾದ್ರು ಅನುಸ್ತು. ಇನ್ನು ಹೆಚ್ಗೆ ಮಾತಾಡೋ ಬದ್ಲು ನನ್ನ ಕಾಲಿನ ಚಕ್ರ ನಿಮ್ಗೇ ಕೊಡ್ತೀನಿ. ಬನ್ನಿ, … Read more

ಸಂಜಯಂತಿಯಲ್ಲೊಂದು ಸುತ್ತು:ಪ್ರಶಸ್ತಿ ಪಿ

  ಹಿಂಗೇ ಹಿಂದಿನ ಶುಕ್ರವಾರ ಶಿರಸಿಯಲ್ಲೊಂದು ಮದುವೆ. ಆ ಮದುವೆಯ ದಿನ ಶಿರಸಿ ಮಾರಿಕಾಂಬೆಯ ದರ್ಶನ ಪಡೆದು ಹೊರಬಂದಾಗ ಎದುರಿಗೆ ಕಂಡಿದ್ದು ಪ್ರವಾಸೋದ್ಯಮ ಇಲಾಖೆಯ ಬೋರ್‍ಡು. ಹಾಗೇ ಕಣ್ಣಾಡಿಸುತ್ತಿದ್ದಾಗ ಕಂಡಿದ್ದು ಸೋಂದಾ-೨೩ ಕಿ.ಮೀ, ಬನವಾಸಿ-೨೨ ಕಿ.ಮೀ ಅಂತ. ಅರೆ! ಬನವಾಸಿ ಇಷ್ಟು ಹತ್ರವಾ.. ಹಾಗಾದ್ರೆ ಇವತ್ತು ಅಲ್ಲಿಗೆ ಹೋಗೇ ಊರಿಗೆ ಮರಳ್ಬೇಕು ಅಂದ್ಕೊಂಡೆ. ಆದ್ರೆ  ಮದುವೆ ಊಟ ಮುಗಿಸಿದ ಮೇಲೆ ಸೀದಾ ಸಾಗರದ ಬಸ್ಸು ಹತ್ತಿದ್ದಾಯ್ತು, ಬನವಾಸಿ ಮಿಸ್ಸಾಯ್ತು. ಆದರೆ ಸಿಗಬೇಕೆಂದಿದ್ದದ್ದು ಸಿಕ್ಕೇ ಸಿಗುತ್ತೆ ಅಂತಾರೆ ಹಲವರು. … Read more

ಹೀಗೊಂದು ಕಥೆ : ಪ್ರಶಸ್ತಿ ಪಿ.

ಗುಂಡಣ್ಣಂಗೆ ಕಥೆ ಬರೀಬೇಕು ಅನ್ನೋದೊಂದು ಕನಸು. ಮಾಲಳ್ಳಿ ಮಾಲಜ್ಜಿ ಮತ್ತು ಮಾಳ ಬೆಕ್ಕು, ಕುಂದಾಪ್ರುದ ಕಥೆ, ಮೂರಳ್ಳಿ ಕೋಟೆಯಲ್ಲೊಂದು ರಾತ್ರಿ, ನೀರ ರಾಣಿ ಮತ್ತು ನಂಜುಳ್ಳೆ.. ಹೀಗೆ ಹಲವಾರು ಶೀರ್ಷಿಕೆಗಳು, ಅರ್ಧಂಬರ್ದ ಐಡಿಯಾಗಳು ಹೊಳೆದರೂ ಅದ್ಯಾವ್ದೂ ಕಥೆಯ ಮೂರ್ತ ರೂಪ ತಾಳ್ತಿರಲಿಲ್ಲ. ನಾಳೆ ಕಥೆ ಬರ್ದೇ ಬರೀತೀನಿ ಅಂತ ಪ್ರತೀದಿನ ರಾತ್ರೆ ಮಲಗೋವಾಗ ನಿರ್ಧಾರ ಮಾಡಿದರೂ ಮಾರ್ನೇ ದಿನ ಬೆಳಗಾಗಿ, ಮಧ್ಯಾಹ್ನ ಆಗಿ ಮತ್ತೆ ರಾತ್ರೆ ಆಗೇ ಬಿಡ್ತಿತ್ತು ! ಹೀಗೆ ದಿನಗಳು, ತಿಂಗಳುಗಳು ಉರುಳುತ್ತಿರಲು ಅವನ … Read more