
ಕನ್ನಡದ ಹೊಸ ಪೀಳಿಗೆಯ ಆಲೋಚನೆ ಮತ್ತು ಬರವಣಿಗೆಯನ್ನು ಉದ್ದೀಪಿಸುವ ಉದ್ದೇಶದಿಂದ ಬೆಂಗಳೂರಿನ ಸಮಾಜಮುಖಿ ಪ್ರಕಾಶನ 16 ರಿಂದ 32 ವಯಸ್ಸಿನ ಯುವಕ-ಯುವತಿಯರಿಗಾಗಿ ‘ಯುವ ಪ್ರಬಂಧ ಸ್ಪರ್ಧೆ’ ಏರ್ಪಡಿಸಿದೆ.
ಆಯ್ಕೆಯಾದ ಐದು ಪ್ರಬಂಧಗಳಿಗೆ ತಲಾ ರೂ.5,000 ಬಹುಮಾನ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. 10 ಉತ್ತಮ ಪ್ರಬಂಧಗಳು ಸಮಾಜಮುಖಿ ಪತ್ರಿಕೆಯ ನವೆಂಬರ್ 2023ರ ಸಂಚಿಕೆಯಲ್ಲಿ ಪ್ರಕಟವಾಗಲಿವೆ.
ಕರ್ನಾಟಕದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಭಾಷಿಕ, ರಾಜಕೀಯ ಕ್ಷೇತ್ರದಲ್ಲಿನ ಬದಲಾವಣೆ ಗುರುತಿಸುವ ಅಥವಾ ಬದಲಾವಣೆ ಬಯಸುವ ಪ್ರಬಂಧವಾಗಿರಬೇಕು. ಪ್ರಬಂಧ 1,600 ಪದಗಳಿಗೆ ಕಡಿಮೆ ಹಾಗೂ 2,000 ಪದಗಳಿಗಿಂತ ಹೆಚ್ಚು ಇರಬಾರದು.
ಲೇಖಕರು ಪ್ರಬಂಧದ ಜೊತೆಗೆ ತಮ್ಮ ಹುಟ್ಟಿದ ದಿನಾಂಕದ ಯಾವುದಾದರೂ ದಾಖಲೆಯ ಪ್ರತಿ, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಭಾವಚಿತ್ರ ಕಳುಹಿಸಬೇಕು.
ನುಡಿ/ಯುನಿಕೋಡ್ ಲಿಪಿಯಲ್ಲಿರುವ ಪ್ರಬಂಧವನ್ನು ವರ್ಡ್ ಕಡತದಲ್ಲಿ 15 ಆಗಸ್ಟ್ 2023ರೊಳಗೆ ಕಳುಹಿಸಬೇಕಾದ ಇಮೇಲ್ ವಿಳಾಸ:
samajamukhi2017@gmail.com