ಟ್ಯೂನು, ಲೈನು ಮತ್ತು ನಾನು: ಹೃದಯಶಿವ

ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಪರಮೇಶ್ವರ ಹೆಗಡೆಯವರು ಸಂಗೀತ ನೀಡುತ್ತಿರುವ ಆಲ್ಬಮ್ ನಲ್ಲಿ ನಾಲ್ಕು ಹಾಡು ಬರೆಯುತ್ತಿದ್ದೇನೆ ಅಂತ ಹಿಂದೊಮ್ಮೆ ಹೇಳಿದ್ದೆ. ಪರಮೇಶ್ವರ ಹೆಗಡೆಯವರ ಮಾತಿನಂತೆ ಮೊದಲೇ ಸಾಹಿತ್ಯ ಬರೆದುಕೊಡುವಂತೆ, ಆಮೇಲೆ ಆ ಸಾಹಿತ್ಯಕ್ಕೆ ಅವರು ಟ್ಯೂನ್ಸ್ ಹಾಕುವುದಾಗಿ ಹೇಳಿದ್ದರು. ಅದರಂತೆ ನನ್ನ ಆರು ಭಾವಗೀತೆಗಳನ್ನು ಅವರಿಗೆ ಕಳುಹಿಸಿಕೊಟ್ಟೆ. ಆ ಆರರ ಪೈಕಿ ನಿಮಗೆ ಬೇಕಾದ ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ ಅಂತಲೂ ಹೇಳಿದೆ. ಅವರು ಆಯ್ತು ಅಂದು ಅದರಂತೆ ಆ ಆರರ ಪೈಕಿ ಒಂದಕ್ಕೆ ಟ್ಯೂನ್ ಕೂಡ … Read more

ಬದುಕು ಬಣ್ಣದ ಸಂತೆ: ಹೃದಯಶಿವ

ಹೋಳಿ ಹಬ್ಬದ ಸಂಭ್ರಮ, ಖುಷಿಗಳನ್ನು ನೀವೂ ಅನುಭವಿಸಿರುತ್ತೀರಿ.  ಹೋಳಿಹಬ್ಬ ಕೂಡ ದೀಪಾವಳಿಯಂತೆಯೇ ಭಾರತೀಯರ ಮನಸ್ಸಿನಲ್ಲಿ ವರ್ಣಮಯವಾಗಿ, ಮನರಂಜನಾತ್ಮಕವಾಗಿ ಆವರಿಸಿರುತ್ತದೆ. ವರ್ಷವೆಲ್ಲಾ ಅಪ್ಪಟ ಗಂಭೀರ ವ್ಯಕ್ತಿಗಳಂತೆ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡು ಆಫೀಸಿಗೆ ಹೋಗಿ ಬರುವ ಸೀರಿಯಸ್ ಮನುಷ್ಯರೂ ಹೋಳಿ ಹೋಳಿಹಬ್ಬದಂದು ಮಕ್ಕಳಾಗಿಬಿಡುತ್ತಾರೆ. ಬಣ್ಣ ಎಚ್ಹರಿ ಖುಷಿ ಪಡುತ್ತಾರೆ. ಮುಖದಲ್ಲಿ ಗಂಭೀರ ಗೆರೆಗಳು ಮಾಯವಾಗಿ ಉಲ್ಲಾಸ ಮಡುಗಟ್ಟುತ್ತದೆ.  ಹೋಳಿಯ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದ ಒಂದೆರಡು ಅಂಶಗಳನ್ನು ಹೇಳುತ್ತೇನೆ… ಮನುಷ್ಯನ ಮನಸ್ಸು ರಂಗುಮಯವಾದದ್ದು. ಬಹುತೇಕ ಜನ ಪರಸ್ಪರ ಬಣ್ಣ … Read more

ಒಬ್ಬ ನಟನ ಸುತ್ತ: ಹೃದಯಶಿವ

  ಟಾಮ್ ಹಾಂಕ್ಸ್ ಕ್ಯಾಲಿಫೋರ್ನಿಯಾದ ಪ್ರತಿಭಾವಂತ. ಈತ ಜನಿಸಿದ್ದು 1956ರಲ್ಲಿ. ಆವರೆಗೆ ಹಾಲಿವುಡ್ ಕಂಡರಿಯದ ವಿಶಿಷ್ಟ ನಟ ಎನಿಸಿಕೊಂಡ. ಅದನ್ನು ಬಿಡಿಸಿ ಹೇಳಬೇಕಿಲ್ಲ. ಆತನ ಬದುಕು ನಿಜಕ್ಕೂ ರೋಮಾಂಚಕ. ಟಾಮ್ ಹಾಂಕ್ಸ್ ಅಡುಗೆಭಟ್ಟನೊಬ್ಬನ ಮಗ; ಜೊತೆಗೆ ರೆಸ್ಟೋರೆಂಟ್ ಮ್ಯಾನೇಜರಾಗಿಯೂ ಕೆಲಸ ಮಾಡುತ್ತಿದ್ದಾತ. ಬರಹಗಾರನಾಗಬಯಸಿದ್ದ ಟಾಮ್ ತಂದೆ ಅಡುಗೆಭಟ್ಟನಾಗಿ ಬದುಕು ಸವೆಸಿದರೂ ಸಾಯುವ ಮುನ್ನ ತನ್ನ ಅಪ್ರಕಟಿತ ಆತ್ಮಚರಿತ್ರೆ ಬರೆದಿದ್ದ. ಟಾಮ್ ನ ತಾಯಿ ಆಸ್ಪತ್ರೆಯೊಂದಲ್ಲಿ ಕೆಲಸಕ್ಕಿದ್ದವಳು.  ಹೀಗಿರಲು ಟಾಮ್ ಹಾಂಕ್ಸ್ ಗೆ ಅಚ್ಚರಿ ಕಾದಿತ್ತು. ಬೆಸೆದ ಹಸ್ತಗಳಂತಿದ್ದ … Read more

ಒಂದು ಫ್ರೆಂಡ್ ರಿಕ್ವೆಸ್ಟ್: ಹೃದಯಶಿವ

ಫೇಸ್ ಬುಕ್ಕಿನಲ್ಲಿ ಅವಳು ಕಳಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಕಂಡೊಡನೆ ಇವನೊಳಗೆ ಅಚ್ಚರಿ ಹಾಗೂ ಆತಂಕದ ಭಾವನೆಗಳು ಒಟ್ಟೊಟ್ಟಿಗೇ ಉದ್ಭವಿಸಿದವು. ಮೂರು ವರ್ಷಗಳ ಸುದೀರ್ಘ ಅಂತರದ ಬಳಿಕ ಆಕೆ ಮತ್ತೆ ಹತ್ತಿರವಾಗುತ್ತಿದ್ದಾಳೆ. ಕನ್ಫ಼ರ್ಮ್ ಬಟನ್ ಒತ್ತಿಬಿಡ್ಲಾ? ಹಲವು ಜಿಜ್ಞಾಸೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಸಂಭವ ಎದುರಾಗಬಹುದು. ತಾನಿಲ್ಲದ ಜಗತ್ತಿನಾಚೆ ಬರೋಬ್ಬರಿ ಮೂರು ವರ್ಷ ಬದುಕಿ, ಮುನಿಸು, ಕೋಪ, ಹಠ ಇತ್ಯಾದಿಗಳನ್ನು ಮರೆತು ಬರುತ್ತಿದ್ದಾಳೆ. ಆಕೆಯನ್ನು ಹೇಗೆ ಸ್ವೀಕರಿಸಲಿ? ಗೊಂದಲದಿಂದಲೇ ಕನ್ಫ಼ರ್ಮ್ ಬಟನ್ ಒತ್ತಿದ. ಒಂದು ತಣ್ಣನೆ ಸಂಜೆ ಆನ್ ಲೈನಿನಲ್ಲಿದ್ದಾಗ ವಿಸ್ಮಯವೆಂಬಂತೆ … Read more

ಕಾಲದ ಬೆನ್ನು: ಹೃದಯಶಿವ

ಹೆಂಡತಿಯು ಹದ ಮಾಡಿಕೊಟ್ಟ ತಾಂಬೂಲ ಜಗಿಯುತ್ತಲೇ ಅವರು ರಾಜಾಜಿನಗರದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ತನ್ನ ಮೊದಲ ಹೆಂಡತಿಯ ಬಗ್ಗೆ ಆಲೋಚಿಸುತ್ತಿದ್ದರು. ನಲವತ್ತು ವರ್ಷಗಳ ಹಿಂದೆ ಯಾರ ಜೊತೆಯಲ್ಲೋ ಸರಸವಾಡಿದ್ದಳೆಂಬ ಶಂಕೆಯಿಂದ ಹತ್ತಾರು ಜನ ಸೇರಿಸಿ ಪಂಚಾಯ್ತಿ ಮಾಡಿ ಆಕೆಯನ್ನು ಶಾಶ್ವತವಾಗಿ ಮನೆಯಿಂದ ಹೊರಹಾಕಿದ್ದ ದೃಶ್ಯ ಅವರ ಮನಸ್ಸಿನಲ್ಲಿ ಮೂಡಿಬಂತು. ನೀಳಕೇಶದ, ತಾವರೆ ಕಣ್ಣುಗಳ ಚೆಲುವೆಯಾದ ತಮ್ಮ ಪ್ರಥಮಪತ್ನಿ! ಈಗ, ತನ್ನನ್ನು ಗಂಡನೆಂದು ಆಕೆಯೇನೂ ಭಾವಿಸುವ ಅಗತ್ಯವೇನೂ ಇಲ್ಲ. ಬದುಕು ಬೇಡವೆನಿಸಿದಾಗ ಆತ್ಮದ ಅಳಲಿಗೆ ಕಿವಿಯಾದರೆ ಸಾಕು. ಬೇಕಾದರೆ … Read more

ಮನಸು ಜಿಜ್ಞಾಸೆಗಳ ಹುತ್ತ: ಹೃದಯಶಿವ

'ಈ ಹಾಡನ್ನು ಬೇರೆ ಯಾರಿಂದಲಾದರೂ ಬರೆಸಿಬಿಡಿ ಪ್ಲೀಸ್, ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದು ಶ್ರೀನಗರ ಕಿಟ್ಟಿ ಅಭಿನಯಿಸುತ್ತಿರುವ ಚಿತ್ರವೊಂದರ ಸಂಗೀತ ನಿರ್ದೇಶಕರೊಬ್ಬರಿಗೆ ನಾನು ತಿಳಿಸಿದಾಗ ನಿನ್ನೆ ಸಂಜೆಯ ಗಡಿ ದಾಟಿ ರಾತ್ರಿ ಆವರಿಸಿತ್ತು. ಇಷ್ಟಕ್ಕೂ ಇತ್ತೀಚಿಗೆ ನನ್ನ ಆರೋಗ್ಯ ಆಗಾಗ ಕೈ ಕೊಡುತ್ತಿರುತ್ತದೆ. ನಾನು ಲವಲವಿಕೆಯಿಂದಿರಲು ಎಷ್ಟೇ ಪ್ರಯತ್ನಿಸಿದರೂ ಜ್ವರ, ಶೀತ, ಕೆಮ್ಮು, ಮೈ ನೋವು ಅಡ್ಡಿಯುಂಟುಮಾಡುತ್ತವೆ. ಅಲ್ಲದೆ ಕಳೆದ ವಾರ ಪೂರ್ತಿ ಬಿಡುವಿಲ್ಲದೆ ಬರೆದಿದ್ದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ವಿಶ್ರಾಂತಿ ಇರಲಿಲ್ಲ. ಅದು ನೆಪವಾದರೂ ಸದಾ … Read more

ಬುಂಡೆದಾಸನೆಂಬ ಹುಚ್ಚಯ್ಯ: ಹೃದಯಶಿವ

  ನಾನು ಹದಿನಾರನೇ ವಯಸ್ಸಿಗೆ ಹಳ್ಳಿಗಳನ್ನು ಬಿಟ್ಟಿದ್ದರೂ ಹಳೆಯ ಪರಿಚಿತರು ಮದುವೆ, ಗೃಹಪ್ರವೇಶ, ನಾಮಕರಣ, ಶಾಲಾಕಾಲೇಜುಗಳ ಸಮಾರಂಭ ಅಥವಾ ಯಾರಾದರು ಸತ್ತರೆ ಕರೆಯುತ್ತಾರೆ; ನನ್ನ ಬೇರುಗಳು ಎಂದಿಗೂ ಹಳ್ಳಿಗಳಲ್ಲಿಯೇ ಇರುವುದರಿಂದ ಇದೆಲ್ಲಾ ಸರ್ವೇ ಸಾಮಾನ್ಯ. ನನಗೆ ಸಾವಿನ ಮನೆಗಳ ಬಗ್ಗೆ ಬೇಜಾರು. ಏಕೆಂದರೆ ನನಗದು ನಾಟಕದ ವಾತಾವರಣದ ನೆನಪು ತರುತ್ತದೆ. ಜೀವಂತವಾಗಿದ್ದಾಗ ಎಷ್ಟೋ ಸಲ ಮಕ್ಕಳ, ಸೊಸೆಯಂದಿರ ಕಾಲು ಕಸವಾಗಿ ಬದುಕಿದ ವೃದ್ಧರ ಹೆಣದ ಮುಂದೆ ಅವರ ಬಂಧುಗಳೆನಿಸಿಕೊಂಡವರೆಲ್ಲಾ ಕೂತು ಗೊಳೋ ಅಂತ ಅಳುವ ಪ್ರೊಫೆಶನಲ್ ಪಾತ್ರಧಾರಿಗಂತೆ … Read more

ದೆವ್ವಗಳ ಸುತ್ತ: ಹೃದಯಶಿವ ಅಂಕಣ

ದೆವ್ವಗಳ ಬಗ್ಗೆ ಚರ್ಚಿಸುವುದೇ ವೇಳೆ ಹಾಳುಮಾಡಿಕೊಳ್ಳುವ ಕೆಲಸ. ಆ ವಿಷಯದ ಬಗ್ಗೆ ಚರ್ಚಿಸುವವರು ಅಪಾರ ಅನುಭವಿಗಳಂತೆಯೂ, ಅದ್ಭುತವಾಗಿ ಕಥೆ ಕಟ್ಟುವವರಂತೆಯೂ, ಅಪ್ಪಟ ಮೂಢರಂತೆಯೂ ಕಾಣುತ್ತಾರೆ. ದೆವ್ವಗಳ ಅಸ್ತಿತ್ವ ಕುರಿತು ವಾದಿಸುವುದಕಿಂತಲೂ ಅವುಗಳ ಇಲ್ಲದಿರುವಿಕೆಯನ್ನೇ ಪ್ರಬಲವಾಗಿ ವಾದಿಸಬಹುದು; ದೆವ್ವಗಳಿವೆ ಎಂದು ನಂಬಿರುವವರು ಈ ಪ್ರಪಂಚದಲ್ಲಿರುವ ಅಥವಾ ಎಂದೋ ಸವೆದುಹೋದ ಕಟ್ಟುಕತೆ, ಕಪೋಲಕಲ್ಪಿತ ಘಟನೆಗಳನ್ನು, ಅವನ್ನು ನಂಬಿದ್ದವರನ್ನು ಚರ್ಚೆಯ ಮಧ್ಯೆ ಎಳೆದು ತಂದು ತಾವೇ ಮತ್ತೊಮ್ಮೆ ಬೆಚ್ಚಿ, ಬೆವರು ಒರೆಸಿಕೊಳ್ಳಬಹುದು. ಅದೆಲ್ಲವನ್ನು ನೋಡಿ ಸುಮ್ಮನಾಗಬೇಕಷ್ಟೇ. ನಮ್ಮ ನಡುವೆಯೇ ಇರುವ ಕೆಲವರನ್ನು … Read more

ಯು.ಆರ್.ಅನಂತಮೂರ್ತಿ; ಮತ್ತೆಂದೂ ಮರಳದ ಚೇತನ: ಹೃದಯಶಿವ

ಅನಂತಮೂರ್ತಿಯವರ ಕುರಿತು ಒಂದಿಷ್ಟು ಧ್ಯಾನಿಸುವ ಸಮಯವಿದು. ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ. ಬರೋಬ್ಬರಿ ಎಂಭತ್ತೊಂದು ವರ್ಷ ಬಾಳಿದ ತುಂಬುಜೀವನ ಅವರದು; ನಮಗೆಲ್ಲ ಗುರುವಿನಂತಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಯಾವುದಾದರು ಸಮಸ್ಯೆ ಎದುರಾದಾಗ ಅನಂತಮೂರ್ತಿ ಏನು ಹೇಳುತ್ತಾರೆ ಎಂದು ಕಾತರಿಸುತ್ತಿದ್ದೆವು. ಅವರನ್ನು ನೋಡುವುದು, ಅವರೊಂದಿಗೆ ಮಾತಾಡುವುದು ಇನ್ನು ಸಾಧ್ಯವಿಲ್ಲ. ಅವರು ಅನಾರೋಗ್ಯಕ್ಕೆ ತುತ್ತಾದಾಗಲೆಲ್ಲ ನಾವು ಆತಂಕಗೊಳಗಾಗುತ್ತಿದ್ದೆವು. ಅವರಿಲ್ಲದ ಈ ಶೂನ್ಯವನ್ನು ತುಂಬಿಕೊಳ್ಳಲು ಈಗ ಸ್ವಲ್ಪ ಕಷ್ಟವಾಗುವುದಂತೂ ನಿಜ. ಅವರ ಮುಪ್ಪು, ವಿವಾದಗಳಿಂದ ಜರ್ಜರಿತವಾದ ಕವಿಮನಸು, ಟೀಕಾಕಾರರ ಮಾತುಗಳಿಂದ ನೊಂದುಹೋದ ಮುದಿಜೀವ- … Read more

ಒಂದು ತಲ್ಲಣದ ಸಂಜೆ: ಹೃದಯಶಿವ

ಅದೊಂದು ಮಾಮೂಲಿ ದಿನ… ಆ ಸಂಜೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಎಂದೋ ಹಾಡು ಬರೆದು ಮರೆತು ಹೋಗಿದ್ದ ಸಿನಿಮಾವೊಂದರ ಆಡಿಯೋ ಸಿಡಿ ಬಿಡುಗಡೆ ಸಮಾರಂಭಕ್ಕಾಗಿ ಮೂರ್ನಾಲ್ಕು ದಿನದ ಹಿಂದೆಯಷ್ಟೇ ಆ ಚಿತ್ರದ ನಿರ್ದೇಶಕರು ಫೋನ್ ಮಾಡಿ ಆಹ್ವಾನಿಸಿದ್ದರು; ಪತ್ರಕರ್ತರ, ಟಿವಿ ಮಾಧ್ಯಮದವರ ಮುಂದೆ ನಿಂತು ಆ ಚಿತ್ರಕ್ಕಾಗಿ ನಾನು ಬರೆದಿದ್ದ ಹಾಡುಗಳ ಬಗ್ಗೆ ಒಂದೆರಡು ಮಾತಾಡಿ ವೇದಿಕೆ ಮೇಲೆ ಇರಬಹುದಾದವರ ಜೊತೆ ಸಿಡಿ ಹಿಡಿದುಕೊಂಡು ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಕೆಲಸ. ಇಷ್ಟಕ್ಕೂ ನಾನು ನೆಟ್ಟಗೆ ಸಿನಿಮಾ ಹಾಡು … Read more

ನವದಂಪತಿಗಳನ್ನು ಉದ್ದೇಶಿಸಿ: ಹೃದಯಶಿವ ಅಂಕಣ

ನೀವು ಈ ಜಗತ್ತಿನ ರಮ್ಯಜೀವಿಗಳು, ನೂತನ ಜಗತ್ತಿಗೆ ಮೈಮನಸುಗಳನ್ನು ತೆರೆದುಕೊಳ್ಳುತ್ತಿರುವ ಆಸೆಗಣ್ಣುಗಳ ಕೋಮಲ ಹೃದಯವಂತರು… ನಿಮ್ಮೊಟ್ಟಿಗೆ ಒಂದಿಷ್ಟು ಮಾತುಗಳನ್ನು ಹಂಚಿಕೊಳ್ಳುವ ತುಡಿತ ನನ್ನದು . ನೀವು ಅಂದರೆ, ಇನ್ನಷ್ಟೇ ದಾಂಪತ್ಯ ಬದುಕಿಗೆ ಪ್ರವೇಶ ಪಡೆಯುತ್ತಿರುವ, ಆದರೆ ಹುಡುಗುತನದ ಗಡಿಯನ್ನು ಮೀರಿದ, ಕುಂಟೋಬಿಲ್ಲೆ, ಮರಕೋತಿ ಆಟಗಳನ್ನು ಬಿಟ್ಟು ಈಗಷ್ಟೇ ಮದುವೆಯಾಗಿರುವ ತರುಣ ಅಥಾ ತರುಣಿ. ನೀವು ಜನ ತುಂಬಿದ ಎಲ್ಲಾ ಊರುಗಳಲ್ಲಿ, ಚಿತ್ರಮಂದಿರಗಳಲ್ಲಿ, ದೇವಸ್ಥಾನಗಳಲ್ಲಿ ಕಣ್ಣಿಗೆ ಬೀಳುತ್ತೀರಿ. ಮುಂಬಯಿಯ ಇಂಡಿಯಾ ಗೇಟಿನ ಬಳಿ, ಊಟಿಯ ಚಳಿಯ ನಡುವೆ, ಕೇರಳದ … Read more

ತಾತನ ಗೋರಿ ಮತ್ತು ನೆನಪುಗಳು: ಹೃದಯಶಿವ ಅಂಕಣ

ದಟ್ಟ ಮೌನ ಕವಿದಿದೆ. ತಾತನ ಗೋರಿಯ ಪಕ್ಕದಲ್ಲಿ ಕುಳಿತು ಸುತ್ತಲೂ ದಿಟ್ಟಿಸಿದರೆ ಹಸಿರು ಹೊಲಗಳು, ಬೆಟ್ಟದ ನೆತ್ತಿಗೆ ಮುತ್ತುಗರೆವ ಕೆಂಪುಮೋಡಗಳು, ಸುತ್ತಣ ಮರಗಳ ಗೂಡುಗಳಲ್ಲಿನ ಹಕ್ಕಿಮರಿಗಳು ಚಿಲಿಪಿಲಿಗುಟ್ಟುತ್ತಿವೆ, ತಣ್ಣನೆ ಸಂಜೆಯ ಹೊತ್ತು. ಸೂರ್ಯ ನನಗೆ ಟಾಟಾ ಹೇಳುತ್ತಿದ್ದಾನೆ ಅನ್ನಿಸುತ್ತಿದೆ. ಆಕಾಶದಗಲ ಹಕ್ಕಿಗಳು ಚಿತ್ರ ಬಿಡಿಸಿದಂತೆ ಹಾರುತ್ತಿವೆ. ಪಡುವಣ ಕೆಂಪಾಗುತ್ತಿದೆ. ತಲೆಯ ಮೇಲೆ ಹುಲ್ಲುಹೊರೆ ಹೊತ್ತ ವ್ಯಕ್ತಿ ಒಂದು ಜೊತೆ ಎತ್ತಿನೊಂದಿಗೆ ಊರ ಕಡೆ ಹೊರಟಿದ್ದಾನೆ. ಒಂದು ಜಿಂಕೆಯೋ, ಸಾರಂಗವೋ ಕಣ್ಣೆದುರೇ ಛಂಗನೆ ಹಾರಿದಂತೆ ಭಾಸ, ತುಸು ದೂರದಲ್ಲೇ … Read more

ಕಗ್ಗಲಿಪುರದಲ್ಲೊಂದು ಕನ್ನಡ ಸೇನೆ: ಹೃದಯಶಿವ ಅಂಕಣ

ಕಗ್ಗಲಿಪುರದಲ್ಲಿ 'ಕರುನಾಡ ಗಜಕೇಸರಿ ಸೇನೆ'ಯ ಉದ್ಘಾಟನೆ ಇವತ್ತಷ್ಟೇ (ಜುಲೈ 27) ನಡೆಯಿತು. ನನಗೆ ಅಲ್ಲಲ್ಲಿ ಆಗಾಗ ಕಂಡಂಥ ಕೆಲವು ಮುಖಗಳು ಅಲ್ಲಿ ಎದುರಾದವು. ನನಗೆ ಇದ್ದಕ್ಕಿದ್ದಂತೆಯೇ ಒಂದಿಷ್ಟು ನೆನಪುಗಳು ಆವರಿಸಿದವು. ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಅವ್ವನ ಅವ್ವ ಹಾಗೂ ಅವ್ವನ ಅಣ್ಣನೊಂದಿಗೆ ಮೊದಲಬಾರಿ ಬೆಂಗಳೂರಿಗೆ ಬರುವಾಗ ಕಗ್ಗಲಿಪುರದ ಮಾರ್ಗವಾಗಿಯೇ ಹಾದುಬಂದಿದ್ದೆ; ಗವಿಪುರದಲ್ಲಿ ನಡೆದ ಸಂಬಂಧಿಕರೆನ್ನಿಸಿಕೊಳ್ಳುವ ಯಾರದೋ ಮದುವೆಗೆ; ಈಗ ಅದೆಲ್ಲ ಅದೇಕೋ ನೆನಪಾಯಿತು. ಅಲ್ಲೇ ಇದ್ದ ಇಬ್ಬರು ಹಳ್ಳಿ ಯುವಕರಲ್ಲಿ ಒಬ್ಬ, "ಪಂಪ್ ಸನ್ಗ್ ಬಂದ್ರಾ ಸಾ?" … Read more

ನಾನ್ಯಾವ ಜಾತಿ?: ಹೃದಯಶಿವ

ಅದೇಕೋ ನೆನಪಾಗುತ್ತಿದೆ. ಐದಾರು ವರ್ಷಗಳ ಹಿಂದೆ ನಾನು ಕಂಡ ಆ ನಾಲ್ವರು ಯುವಕರ ತಂಡ. ನನ್ನನ್ನು ಭೇಟಿ ಮಾಡಲು ಬಂದಿದ್ದರು. ಎಲ್ಲರೂ ಹೆಚ್ಚು ಕಮ್ಮಿ ಇಪ್ಪತ್ತು-ಇಪ್ಪತ್ತೆರಡರ ವಯೋಮಾನದವರು. ಅವರಿವರ ಕೈ ಕಾಲು ಹಿಡಿದು ನಾಲ್ಕು ಕಾಸು ಎತ್ತಿ ಬೆಂಗಳೂರಿನಲ್ಲಿ ತಮ್ಮ ಜಾತಿ ಹೆಸರಿನಲ್ಲಿ ಪುಟ್ಟದೊಂದು ಕಚೇರಿ ಆರಂಭಿಸಿದ್ದವರು. ಚಿಗುರುಮೀಸೆ, ಪ್ರಶಾಂತ ಕಣ್ಣು, ಚೇತೋಹಾರಿ ಮುಖದ ಉತ್ಸಾಹಿ ಹುಡುಗರು. ಕನಕಪುರ, ಮಳವಳ್ಳಿ, ಬನ್ನೂರು ಕಡೆ ಇಂಥವರು ಸಿಗುತ್ತಾರೆ. ಯಾರಿಗೂ ಪುಸ್ತಕಗಳ ನಂಟು ಇದ್ದಂತ್ತಿಲ್ಲ. ನನ್ನನ್ನು ಕಾಣಲೆಂದು ಬಂದರು. "ಈ … Read more

ಮೆಜೆಸ್ಟಿಕ್ಕಿನಲ್ಲೊಂದು ರಾತ್ರಿ: ಹೃದಯಶಿವ

  ಮೆಜೆಸ್ಟಿಕ್ ಬಸ್ ಸ್ಟಾಂಡಿನ ನಿದ್ರಾಹೀನ ರಾತ್ರಿ. ಶ್ರೀಮಂತ ಬೆಂಗಳೂರಿನಲ್ಲೇ ಇಷ್ಟು ಚಳಿ ಇರಬೇಕಾದರೆ ನನ್ನ ಹಳ್ಳಿ ಬೆಚ್ಚಗಿರುತ್ತದೆ. ಹೌದು, ಬೆಚ್ಚಗಿರುತ್ತದೆ: ನನ್ನ ಹಳ್ಳಿ ಈ ಹೊತ್ತಿನಲ್ಲಿ ಕಂಬಳಿಯೊಳಗೆ ಮುದುಡಿರುತ್ತದೆ. ತೊಟ್ಟಿಲ ಮಕ್ಕಳ ತಲೆಗೆ ಕುಲಾವಿ ಇದ್ದರೆ, ಮುದುಕರು ಕಿವಿಗೆ ಬಿಗಿಯಾಗಿ ವಲ್ಲಿಬಟ್ಟೆಯನ್ನೋ, ಮಫ್ಲರನ್ನೋ ಸುತ್ತಿಕೊಂಡು ಗೊರಕೆ ಹೊಡೆಯುತ್ತಿರುತ್ತಾರೆ. ತನಗೆ ಮತ್ತಷ್ಟು ಕಾವು ಕೊಟ್ಟುಕೊಳ್ಳಲು ಬಯಸುವ ರಸಿಕ ದಿಂಬು ಹಂಚಿಕೊಂಡು ಮಲಗಿದ್ದ ತನ್ನಾಕೆಯ ಕಿವಿಯಲ್ಲಿ ಮೆಲ್ಲಗೆ ಉಸುರುತ್ತಾನೆ : "ಲೇ ಇವಳೇ, ನಿನ್ನ ಕೆನ್ನೆಗೆ ಕೆನ್ನೆಯೊತ್ತಿ ಗಟ್ಟಿಯಾಗಿ … Read more

ಮಕ್ಕಳ ಪದ್ಯಗಳು: ಹೃದಯಶಿವ

೧)ಶುಭೋದಯ  __________________ ದಿನಾ ನಾನು ಶಾಲೆಗೆ  ಹೋಗುವಂಥ ವೇಳೆಗೆ  ಹಾದಿಬದಿಯ ಬೇಲಿಯು  ಮುಡಿದು ನಿಂತ ಹೂವಿಗೆ  ಹೇಳುವೆ ಶುಭೋದಯ ಹೊಳೆದಂಡೆಯ ಬಂಡೆಗೆ  ಒರಗಿನಿಂಥ ಜೊಂಡಿಗೆ  ರೆಕ್ಕೆಗೆದರಿ ಹಾರುವ  ಹಚ್ಚಹಸಿರು ಮಿಡತೆಗೆ  ಹೇಳುವೆ ಶುಭೋದಯ ಎತ್ತರೆದೆಳನೀರಿಗೆ  ಹತ್ತುವಂಥ ಅಳಿಲಿಗೆ  ಪುಟ್ಟ ಮೂರುಗೆರೆಗಳ   ಅದರ ಮುದ್ದುಬೆನ್ನಿಗೆ ಹೇಳುವೆ ಶುಭೋದಯ ಹಾಲ್ದುಂಬಿದ ತೆನೆಗೆ ಕೊಕ್ಕಿಡುವಾ ಹಕ್ಕಿಗೆ  ತೊಟ್ಟಿಲಾಗಿ ತೂಗುವ  ತಾಯಿಯಂಥ ಪೈರಿಗೆ  ಹೇಳುವೆ ಶುಭೋದಯ  ಬೆಳ್ಳಿಯಂಥ ಬೆಳಗಿಗೆ  ಚಿನ್ನದಂಥ ಕಿರಣಕೆ  ಬದುಕಿರುವ ತನಕವೂ  ಬದುಕುಳಿಯುವ ಚಿತ್ರಕೆ  ಹೇಳುವೆ ಶುಭೋದಯ ೨)ಗುಂಡನ … Read more

ಧರೆಗೆ ದೊಡ್ಡವರು: ಹೃದಯಶಿವ

ಮಹಾಕಾವ್ಯಗಳೆಂದರೆ ಕೇವಲ ರಾಮಾಯಣ, ಮಹಾಭಾರತಗಳಷ್ಟೇ ಅಲ್ಲ. ಭಾರತದ ಮಟ್ಟಿಗೆ ನೋಡುವುದಾದರೆ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸಂಸ್ಕೃತಿ ಇದೆ. ತನ್ನದೇ ಆದ ನೆಲದ ಗುಣವಿದೆ. ಹಾಗೆಯೇ, ತನ್ನ ಪರಂಪರೆಯಿಂದ ರೂಪುತಳೆದದೈವ ಪುರುಷರ, ಸಾಂಸ್ಕೃತಿಕ ನಾಯಕರ ಕುರಿತಾದ ಮೌಖಿಕ ಕಾವ್ಯಗಳಿವೆ. ಅಂಥವುಗಳಲ್ಲಿ 'ಮಂಟೇಸ್ವಾಮಿ ಕಾವ್ಯ'ವೂ ಪ್ರಮುಖವಾದುದು. ಕರ್ನಾಟಕದ ದಕ್ಷಿಣ ಭಾಗದ ಸೋಲಿಗರು, ಕುರುಬರು, ಬೇಡರು, ಪರಿವಾರದವರು, ಉಪ್ಪಾರರು ಹಾಗೂ ಆದಿ ಕರ್ನಾಟಕ ಆದಿ ದ್ರಾವಿಡರೂ ಆದ ಹೊಲೆಯರು, ಮಾದಿಗರು ಈ ಕಥನವನ್ನು ಹಾಡುವವರಾಗಿದ್ದಾರೆ. ಇವರನ್ನೇ ನೀಲಗಾರರೆಂದು ಕರೆಯಲ್ಪಡುವುದು. ನೀಲಗಾರರೆಂದರೆ … Read more

ಮಠ: ಹೃದಯಶಿವ

  ಜವರಯ್ಯ ದಡಾರನೆ ಎದ್ದು ಕುಳಿತ. ತನ್ನ ಪುಟ್ಟ ಮೊಮ್ಮಗ ಬೆನ್ನ ಮೇಲೆ ಕುಣಿಯುತ್ತಿರುವಂತೆ ಕನಸು ಕಂಡು ಒಮ್ಮೆಲೇ ಎಚ್ಚರಗೊಂಡಿದ್ದ. ಆದರೆ ಅಲ್ಲಿ ಯಾವ ಮೊಮ್ಮಗನೂ ಇಲ್ಲ. ಮಠದ ದೀಪಗಳ ಬೆಳಕು ಇರುಳನ್ನು ಹಗಲಾಗಿಸಿತ್ತು. ತನ್ನ ಪಕ್ಕದಲ್ಲೇ ಹರಿದ ಚಾಪೆಯ ಮೇಲೆ ಒಂದಿಷ್ಟು ಸಾಧುಗಳು ಮಲಗಿದ್ದರು. ಅವರು ಎಲ್ಲೆಲ್ಲಿಂದಲೋ ಬಂದು ಸದ್ಯಕ್ಕೆ ಇಲ್ಲಿ ನೆಲೆಸಿದ್ದರು. "ಈ ಜಲ್ಮ ಇರೋಗಂಟ ಈ ಹಟ್ಟಿ ಕಡೆ ತಲೆ ಹಾಕುದ್ರೆ ಕೇಳಮ್ಮಿ" ಜವರಯ್ಯ ಹೆಂಡತಿಗೆ ಸವಾಲು ಹಾಕಿ ಬಂದಿದ್ದ, "ಈ ಹಟ್ಟೀಲಿ … Read more

ಮತ್ತೆ ಮಳೆ ಹೊಯ್ಯುತ್ತಿದೆ: ಹೃದಯ ಶಿವ

ಒಂದು ಮಳೆಗಾಲದ ಬೆಳಗ್ಗೆ ಸಕಲೇಶಪುರದ 'ಅಶ್ರಿತಾ' ಲಾಡ್ಜಿನ ಬಾತ್ ರೂಮಿನಲ್ಲಿ ಯೋಗರಾಜಭಟ್ಟರು ಬಾಗಿಲು ಹಾಕಿಕೊಂಡು ಸ್ನಾನ ಮಾಡುತಿದ್ದರು.ನಾನು ಹೊರಗೆ ನಿಂತು 'ಇವನು ಗೆಳೆಯನಲ್ಲ'ವಾಗಬೇಕಿದ್ದ ಕೆಲವು ಅಸ್ಪಷ್ಟ ಸಾಲುಗಳನ್ನು ಹೇಳುತಿದ್ದೆ. ಅವರು ಸ್ನಾನ ಮಾಡುತ್ತಲೇ ಸಾಲುಗಳನ್ನು ಕೇಳಿಸಿಕೊಂಡು ಒಳಗಿನಿಂದಲೇ ಕರೆಕ್ಷನ್ಸ್ ಸೂಚಿಸುತಿದ್ದರು. ನಾನು ಗುರುತು ಹಾಕಿಕೊಳ್ಳುತ್ತಿದ್ದೆ. ಸ್ನಾನ ಮುಗಿಸಿ ಹೊರಬಂದ ಭಟ್ಟರು ಬಟ್ಟೆ ಹಾಕಿಕೊಂಡು ನನ್ನನ್ನೂ ದಡದಡನೆ ಎಳೆದುಕೊಂಡು ಹೋಟೆಲಿನ ಹೊರಕ್ಕೆ ಬಂದಾಗ ನಟ ಗಣೇಶ್,ಕ್ಯಾಮೆರಾಮ್ಯಾನ್ ಕೃಷ್ಣ, ಮ್ಯಾನೇಜರ್ ಪ್ರತಾಪ್ ರಾವ್ ಮತ್ತಿತರರು ಚಳಿಗೆ ನಡುಗುತ್ತ ಕಾರಿನಲ್ಲಿ ಕುಳಿತಿದ್ದರು. … Read more

‘ಮೌನ’, ಮಾತಾಡಲೇಬೇಕಾದ ನಾಟಕ: ಹೃದಯಶಿವ

  ನಾಗರಾಜ ಸೋಮಯಾಜಿಯವರು ಸಣ್ಣ ಪ್ರಾಯದಲ್ಲಿಯೇ ರಂಗಭೂಮಿಯ ಒಡನಾಟ ಇಟ್ಟುಕೊಂಡವರು. 'ವ್ಯಾನಿಟಿ ಬ್ಯಾಗ್', 'ನರಿಗಳಿಗೇಕೆ ಕೋಡಿಲ್ಲ', 'ಹೀಗೆರಡು ಕಥೆಗಳು' ಸೇರಿದಂತೆ ಒಂದಿಷ್ಟು ನಾಟಕಗಳಲ್ಲಿ ನಟಿಸಿದವರು. ಕಳೆದ ನಾಲ್ಕು ವರ್ಷಗಳಿಂದ ರಂಗಚಟುವಟಿಕೆಗಳನ್ನು ಬೆರಗಿನಿಂದ ನೋಡುತ್ತಾ ಬಂದವರು. ಬಿ.ವಿ.ಕಾರಂತರ ಶಿಷ್ಯೆ ಎನ್.ಮಂಗಳ ಅವರ ಜೊತೆಗಿದ್ದು ಸಾಕಷ್ಟು ರಂಗಾಸಕ್ತಿ ಬೆಳೆಸಿಕೊಂಡವರು. ಇವರು ಈಗ 'ಮೌನ' ನಾಟಕವನ್ನು ನಿರ್ದೇಶಿಸುವಾಗ ಒಂದಿಷ್ಟು ಕುತೂಹಲ ಮೂಡುವುದು ಸಹಜ. 'ಮೌನ' ನಾಟಕ ಇವತ್ತಿನ ದಿನಮಾನಕ್ಕೆ ಅಲ್ಲಲ್ಲಿ ಹತ್ತಿರವೆನಿಸಿದರೂ, ಸ್ವಲ್ಪಮಟ್ಟಿಗೆ ನವ್ಯಕಾಲಘಟ್ಟದ ಕಥನಮಿಡಿತಗಳನ್ನು ಮತ್ತೆ ಮತ್ತೆ ನೆನಪಿಸುವ ವಸ್ತುವನ್ನು … Read more