೧. ಪ್ರೀತಿ ಕುರುಡು. ನಿಜವಾಗಿಯೂ ಪ್ರೀತಿಕುರುಡು ಹಾಗಾಗಿಯೇ ನಾನದರಕಣ್ಣಿಗೆ ಕಾಣಿಸಿಕೊಳ್ಳಲಿಲ್ಲ ಬಿಡು..! ೨. ಮುತ್ತು ಹವಳ. ಕೈಯ ಹಿಡಿದಾಕ್ಷಣ ನಾನವಳಸಿಕ್ಕಂತಾಯಿತಂಥವಳಿಗೆ ಮುತ್ತು ಹವಳಇದ್ದರೂ ಇರಬಹುದೇನೋ ನನ್ನಂಥಹುಡುಗರು ತುಂಬಾ ವಿರಳ..! ೩. ಪ್ರೀತಿ & ಮೋಸ ನಾ ಒರಗುವ ದಿಂಬಿಗೂಕರಗುವ ಕಣ್ಣ್ ಕಂಬನಿಗೂಮಾತ್ರ ಗೊತ್ತು ಗೆಳತಿ ನಾನು ನಿನ್ನಪ್ರೀತಿ ಮಾಡಿದ್ದು. ನನ್ನ್ ಕಣ್ಣಿಗೆ ಚುಚ್ಚಿದ ಸೂಜಿಯಿಂದಹಿಡಿದು ನಮ್ಮಿಬ್ಬರನ್ನು ರಾಜಿ ಮಾಡಲುಬಂದವರಿಗೆಲ್ಲ ಗೊತ್ತು ಗೆಳತಿ ನೀನು ನನಗೆಮೋಸ ಮಾಡಿದ್ದು..! ೪. Block.. ರೆಕ್ಕೆಗಳಿರದಿದ್ದರು ಹಾರಿ ಬಂದು ಸಾರಿಸಾರಿ ಹೇಳುತ್ತಿದ್ದವು ನನ್ನ […]
ಚುಟುಕ
ಚುಟುಕಗಳು: ಮಾಂತೇಶ್ ಗೂಳಪ್ಪ ಅಕ್ಕೂರ
೧. ನವ ಪ್ರೇಮಿಗಳ ಪಜೀತಿ ಪ್ರಶ್ನೆ: ಉತ್ತರ ಗೊತ್ತಿದ್ದರು ಇಬ್ಬರೂ ಹೇಳ್ಲಿಲ್ಲಉತ್ತರ: ಪ್ರಶ್ನೆಯನ್ನು ಒಬ್ಬರಿಗೊಬ್ಬರು ಕೇಳಿ ಕೊಳ್ಳಲೆ ಇಲ್ಲಾ .. ೨. ಬದುಕಿನ ಹಾದಿ ಯೌವನದ ಹಾದಿ ಒಂದು ಪಾಚಿ ರಸ್ತೆಹಿಡಿತ ತಪ್ಪಿ ಜಾರಿ ಬಿದ್ದ ಜೋಡಿಗಳೆಷ್ಟೋಗೃಹಸ್ಥನ ಹಾದಿ ಒಂದು ಸುವ್ಯವಸ್ಥೆಹಿಡಿದ ಕೈ ತಪ್ಪದ ಹಾಗೆ ನೋಡಿಕೊಳ್ಳಬೇಕು ಆದಷ್ಟು… ೩. ಲೇಬಲಿಂಗ್ (ಹಣೆಬರಹಕ್ಕೆ ಹೊಣೆ ಯಾರು) ಲೈಫ ಬಾಯ್, ಬರಿ ಕೈ ತೊಳೆದರೆಲಕ್ಸ್ , ಕತ್ರಿನಾಳಿಗೆ ಸ್ಟಾರ್ ಪಟ್ಟ ತಂದು ಕೊಟ್ಟಿತುಕರ್ಮ ಚರ್ಮ ಬೇರೆ ಬೇರೆ ಯಾದರೂಅವೆರಡು […]
ಚುಟುಕಗಳು: ಮಂಜು ಎಂ. ದೊಡ್ಡಮನಿ
1 ಒಲವಿನ ನೋಟಿಗೆ ಕನಸುಗಳ ಚಿಲ್ಲರೆ ಕೊಟ್ಟ ಹುಡುಗಿ.. ನನ್ನ ಹೃದಯವನೆಂದು ಕ್ರಯಕ್ಕೆ ಪಡೆಯುತ್ತಿಯ..? 2 ನಿನ್ನೆದುರು ನಾ ಹಾಕುವ ಕಣ್ಣಿರಿಗೆ ಬೆಲೆ ಸಿಗದಿದ್ದರೂ ಚಿಂತೆಯಿಲ್ಲ ಆ ಕಣ್ಣುಗಳ ಕಣ್ಣಿರಿಗೆ ನೀನೆಂದು ಕಾರಣಳಾಗಬೇಡ..! 3 ನನ್ನೆದೆಗೆ ಗುಂಡಿಡುವ ಮೊದಲು ಗುರಿಯನ್ನೊಮ್ಮೆ ಸರಿಯಾಗಿ ನೋಡು ಗುಂಡುಗಳು ನಿನ್ನೆದೆಯ ಹೊಕ್ಕಾವು..! 4 ಸಾಧನೆಗಳ ಸಾಧಕರ ಜೀವನವ ಓದುವಾಗ ಬೆನ್ನುಡಿಯಲ್ಲಿ ಸಿಕ್ಕಿದ್ದು ; ಬರೀ ನೋವು ಸಂಕಟ ಬಡತನ ಮತ್ತು ಅವಮಾನಗಳ ಬೃಹತ್ ಗಂಟು..! 5 ನನ್ನ ಹೃದಯದ ಗೋಡೆಗಳಿಗೆ ನೀನೆ […]
ಚುಟುಕಗಳು: ವಾಸುಕಿ ರಾಘವನ್
1 ರಾಯಲ್ ಫ್ಯಾಮಿಲಿಯಲ್ಲಿ ಹುಟ್ಟಿತು ಕಂದಮ್ಮ ಇಟ್ಟರು ಮುದ್ದಾದ ಹೆಸರು ಸೀಮಾ ಅಂತ ನೆಲೆಸಿದ್ದರೇನಂತೆ ತೆಲಂಗಾಣದಲ್ಲಿ ಪ್ರಸಿದ್ಧಿಯಾಗಿದ್ದಾಳೆ ಇಂದು ರಾಯಲ್-ಸೀಮಾ ಅಂತ! 2 ಗಂಡ ಹೆಂಡತಿ ಇಬ್ಬರೇ ಖುಷಿಯಾಗಿದ್ರೆ ನಮ್ಮ ಸಮಾಜಕ್ಕೇನು ಯೂಸು? ಅದಿಕ್ಕೆ ಮೂಗು ತೂರಿಸ್ಕೊಂಡ್ ಬರ್ತಾರೆ ಯಾವಾಗ ಹ್ಯಾಪಿ ನ್ಯೂಸು? 3 ಅದೆಷ್ಟು ತಾರತಮ್ಯ ಹೆಂಗಸರೆಡೆಗೆ ನಮ್ಮ ಈ ಸಮಾಜದಲ್ಲಿ ಅಡುಗೆಯವರೆಲ್ಲ ಕೂಗುತ್ತಿದ್ದರು "ಸಾರ್ ಗೆ ಅನ್ನ? ಸಾರ್ ಗೆ ಅನ್ನ?" ಕೇಳುವುದಕೆ ಒಬ್ಬನೂ ಇರಲಿಲ್ಲ ನಿಮಗೇನು ಬಡಿಸಲಿ ಮೇಡಮ್ ಅಂತ! 4 ನಾನು […]
ಚುಟುಕಗಳು: ಹರ್ಷವರ್ಧನ್
೧. ವಿಪರ್ಯಾಸ ಕೋಟಿ ಕೋಟಿ ಕೊಂಡೊಯ್ಯುವರು ಹುಂಡೀಲಿ ಕಟ್ಟಲು.. ಕಾಣದೇ ಇವರಿಗೆ ಹಸಿದ ಜನರ ಖಾಲಿ ಬಟ್ಟಲು! *** ೨. ಕಿಚ್ಚು ಒಂದೊಂದು ಬಲ್ಬುಗಳ ಉರಿಸಲು ಬೇಕು ಒಂದೊಂದು ಸ್ವಿಚ್ಚು, ಆದರೆ ನೂರಾರು ಹಣತೆಗಳ ಉರಿಸಲು ಸಾಕು ಒಂದೇ ಕಿಚ್ಚು! *** ೩. ಮನೆ ಎನ್ನೆದೆ, ಶಿಥಿಲಗೊಂಡಿಹ ಗೂಡು ಎಂದೋ ಹಾರಿದ ಹಕ್ಕಿಯದು.. ಈಗ ನನ್ನ ಮನೆ!! *** ೪. ಬಡವ ನಾನು ಬಡವ, ಪ್ರೀತಿಸುವ ಜೀವ ಸಿಗದ ಹೊರತು ಯಾರೂ ಶ್ರೀಮಂತರಲ್ಲ.. ಎಲ್ಲ ಬಡವರೇ!! […]
ಚುಟುಕಗಳು: ಹರ್ಷ ಮೂರ್ತಿ
೧. ವಿರಹ ನೋಡಲು ನಿನ್ನನೆ ಪುನಃ ಕಾಡಿದೆ ಮನಸು ವಿನಃ ಬರಲು ನಾ ನಿನ್ನ ಸನಿಹ ತಡೆದಿದೆ ಈ ವಿರಹ ೨. ಬೇಸ್ತು ಅದು ಕೂಡ blade ಕಂಪನಿ ಎಂದು ತಿಳಿದು ಬಂದಾಗ ಹಣ ಕಳೆದುಕೊಂಡ ಸ್ನೇಹಿತರ ಕಂಡು ಬಿದ್ದು ಬಿದ್ದು ನಕ್ಕಿದ್ದ ಗುಂಡ ದೊಡ್ಡದಾಗಿ.. ನಂತರ ಬಾಯಿ ಬಡಿದುಕೊಳ್ಳತೊಡಗಿದನು ತಾನೂ ಅಲ್ಲೇ ಹಣ ಇಟ್ಟಿದ್ದು ನೆನಪಾಗಿ! ೩. ಶುದ್ಧ-ಅಶುದ್ಧ ಶುದ್ಧವಾಗಿದ್ದರೆ holy.. ಕೆಟ್ಟು ಹೋಗಿದ್ದರೆ ಪೋಲಿ! ೪. ತರಲೆ ಪಕ್ಕದ್ಮನೆ ಹುಡುಗಿ […]
ಚುಟುಕಗಳು: ಗುರುಪ್ರಸಾದ ಹೆಗಡೆ
೧) ಪಾರು ಕೈ- ಕೊಟ್ಟಳು ಹುಡುಗಿ ಕಂಗೆಟ್ಟ ಹುಡುಗ, ಅಯ್ಯೋ ಎಲ್ಲ ಮುಗಿದೇ ಹೋಯಿತೆಂದರು ಜನ. – ಹುಡುಗ ಬಚಾವಾಗಿದ್ದ! ೨) ಜೀವ ಅಕ್ವೆರಿಯಮ್ಮಿನಿಂದ ಚಿಮ್ಮಿದ ಮೀನು – ಹೊರಗೆ ಏನು ಇಲ್ಲವೆಂಬ ಸತ್ಯವ ಅರಿತು ಮತ್ತೆ ನೀರಿಗೆ ಹಾರಿತು. ೩) ಸೌಂದರ್ಯ ಪ್ರಜ್ಞೆ ಬ್ಯೂಟಿ – ಪಾರ್ಲರಿನಿಂದ ಬಂದ ಬೆಡಗಿಯ ಕೈಯ ಹಿಡಿದು ಮೊಮ್ಮಗ ಮನೆಗೆ ಕರೆದೊಯ್ದ. ೪) ಗಡಿಯಾರ ವರ್ಷಗಟ್ಟಲೆ ತಿರುಗಿತು ಗಡಿಯಾರದ ಮುಳ್ಳು, ಎಷ್ಟು ಸುತ್ತಿದರೂ ತಲುಪಿದ್ದು […]
ಕೆಲವು ಚಿಕ್ಕ ಪದ್ಯಗಳು: ಉರ್ಬಾನ್ ಡಿ’ಸೋಜ, ಮೇಗರವಳ್ಳಿ ರಮೇಶ್
ಚುಟುಕ -೧ ಪ್ರೇಮಿಕಾ ನಿನ್ನೆಯವರೆಗೆ ಸಿಹಿ ಮಾತುಗಳನ್ನಾಡದ ನನ್ನ ನಲ್ಲೆ ಇ೦ದಿನಿ೦ದ ಅದನ್ನೇ ಮಾತಾನಾಡುತ್ತಿದ್ದಾಳೆ… ನಿನ್ನೆ ನಮ್ಮ ಮೊದಲ ರಾತ್ರಿ ಅವಳು ಜೇನು ಕುಡಿದಿದ್ದಾಳೆ. ಚುಟುಕ:೨ – ಬುದ್ದಿ ಅವರು ಇವರು ಜಾರಿ ಬಿದ್ದಾಗ ನಕ್ಕವಳು ತಾನು ಬಿದ್ದಾಗ ಅವರು ಇವರು ನಕ್ಕಾಗ ಸಿಡಿಮಿಡಿಗೊ೦ಡಳು. ಚುಟುಕ:೩ – ನಗು ಮಗಳು ನಕ್ಕಾಗ […]
ಚುಟುಕಗಳು: ಗುರುನಾಥ್ ಬೋರಗಿ
೧ ನಾನು ನಿನಗೆ ಪ್ರೀತಿಸುವುದು ಹೇಗೆಂದು ಹೇಳಿ ಕೊಟ್ಟೆ. ನೀನದನು ಇನ್ನೊಬ್ಬನಲಿ ಪ್ರಯೋಗಿಸಿ ಬಿಟ್ಟೆ ೨ ಚುಚ್ಚಿ ಗಾಯಗೊಳಿಸುವ ದರ್ಜಿಯ ಸೂಜಿಗೆ, ಎರಡನೊಂದಾಗಿಸುವ ಹಿರಿಗುಣವೂ ಇದೆ. ೩ ಬಿಳಿ ಕಾಗದ ಮೇಲೆ ದುಂಡಾಗದೆಯೇ ಸತಾಯಿಸಿದ ನನ್ನ ಅಕ್ಷರಗಳು, ನಿನ್ನ ಕೆನ್ನೆ, ತುಟಿ ಮೇಲೆ ಬರೆದಾಕ್ಷಣವೇ ಸಾಲು ಮುತ್ತಾದವು ೪ ಹರಯದ ಅವಸರಕ್ಕೆ ಮೊಳೆತ ಭ್ರೂಣಕೆ, ದವಾಖಾನೆ ದಾದಿಯರ ಕೈಗವುಸುಗಳದ್ದೇ ಭಯ ೫ ಗೆಳತೀ.. ನನ್ನ ಪಾಲಿಗೆ ; ನಿನ್ನ ನೆನಪುಗಳೇ […]
ಪ್ರೀತೀಶನ ಚುಟುಕಗಳು
೧. ಸಾಧ್ಯ ಮರಳುಗಾಡಿನಲೂ ಹೂದೋಟ ಬೆಳೆಯಬಲ್ಲೆ ನಾನು, ಭಾವಗಳು ಹುಟ್ಟಬೇಕಷ್ಟೇ. ೨. ಪರಿಹಾರ ಹೃದಯಕೊಂದು ಒಡೆದ ಗಾಜು ನೆಟ್ಟಿದೆ, ಕಿತ್ತೊಗೆಯಲೊಂದು ಹೂವು ಬೇಕಿದೆ. ೩. ಅರಿವು ಕೊಳಕು ಮೆತ್ತಿದ್ದು ಬಟ್ಟೆಗೆ ತಿಳಿಯಬೇಕಿಲ್ಲ ಕೊಳೆಗೆ ಗೊತ್ತಾಗಬೇಕು ಇಲ್ಲ ಸಾಬೂನು ಅರಿಯಬೇಕು. ೪. ತಪ್ಪು ಮಡದಿ ಸಿಟ್ಟಾದರೆ ತಪ್ಪು ಯಾರದ್ದೇ ಆಗಿರಬಹುದು ಮಗ ಕೋಪಿಸಿಕೊಂಡರೆ ಮಾತ್ರ ತಪ್ಪು ನನ್ನದೇ. ೫. ಗುರಿ ನದಿ ಹುಟ್ಟಿದಾರಭ್ಯ ಸಮುದ್ರ ಹುಡುಕಿ ಹೊರಡುವುದಿಲ್ಲ; ಹರಿಯುತ್ತ ಹೋಗುವುದು ಅನಿವಾರ್ಯ ಕರ್ಮವದಕೆ. […]
ಚಿಕ್ಕ ಪುಟ್ಟ ಪದ್ಯಗಳು: ಅಶೋಕ ಶೆಟ್ಟರ್
೧. ಚರಿತ್ರೆಯ ತತ್ವವ ತಿಳಿಯ ಹೊರಟು ಜಗದ ಜಟಿಲ ದ್ವಂದ್ವಗಳ ಗೋಜಲಿನಲ್ಲಿ ಸಿಗೆಬಿದ್ದ ತತ್ವಜ್ಞಾನಿ ಹಾಲುಗಲ್ಲದ ಮೊಮ್ಮಗಳ ನಗೆಯ ಮಡುವಿನಲ್ಲಿ ಸುಳಿತಿರುಗಿ ಮುಗುಳ್ನಕ್ಕ ೨. ಇಂದಿನ ನಡುಹಗಲ ಕಾಡಿನ ಮೌನ ಮನುಕುಲದ ಶೈಶವದ ಸಕಲ ತೊಳಲಾಟ ಕಳವಳ ದಿಗ್ಭ್ರಮೆ ನಲಿವು ಹಸಿ ಹಸಿ ಕಾಮ ಎಲ್ಲ ಮೇಳೈಸಿದ ಆದಿಮ ಸಂಗೀತ ೩. ಶಬ್ದಗಳ ಭಾಷೆ, ಹೆಜ್ಜೆ – ಗೆಜ್ಜೆಗಳ ಭಾಷೆ ಲಯಗಳ, ರೇಖೆ ಬಣ್ಣಗಳ ಭಾಷೆ ಎಲ್ಲದರ ಹಂಗ ಹರಕೊಂಡು ಎರಡು ಜೋಡಿ […]
ವೈ.ಬಿ.ಹಾಲಬಾವಿ ಅವರ ಚುಟುಕಗಳು
1 ಸಫಲತೆ ಬಂದು ನಿಂತಿದೆ ಬಾಗಿಲಿಗೆ ಅದೆಷ್ಟೋ ವಿಫಲತೆಗಳು ಬಂದೊದಗಿದ ಮೇಲೆ ನೋವಿನಲ್ಲೇ ಬದುಕು ಅರಳಿ ನಿಂತಿದೆ ಅದೆಷ್ಟೋ ಪ್ರಯತ್ನಗಳು ಫಲಿಸಿದ ಮೇಲೆ…! 2 ಮೌನದಲ್ಲಿ ಅದೆಷ್ಟು ಮಾತುಗಳಿವೆ ಬೀಜದಲ್ಲಿನ ವೄಕ್ಷದಂತೆ ಅನಂತತೆಯಲ್ಲಿ ಅದೆಷ್ಟು ನಕ್ಷತ್ರಗಳಿವೆ ಅಣುವಿನಲ್ಲಿ ಅಣುವಾದಂತೆ…! 3 ದಾರಿ ಈಗ ಸ್ಪಷ್ಟವಾಗಿದೆ ಅದೆಷ್ಟೋ ಹೆಜ್ಜೆ ನಡೆದ ಮೇಲೆ ಬಾಳ ಗುರಿ ಈಗ ನಿಚ್ಚಳವಾಗಿದೆ ಅದೆಷ್ಟೋ ಭ್ರಾಂತಿ ಅಳಿದ ಮೇಲೆ…! 4 ಎಲ್ಲ ಎಲ್ಲೆಗಳ ಮೀರಿ ಬೆಸವ ಅಹಿಂಸೆಗೆಲ್ಲಿದೆ ಭಾಷೆ…? ಜೀವ […]
ವಿಜಯ್ ಹೆರಗು ಅವರ ಚುಟುಕಗಳು
ಕಲೆಗಾರ ಬದುಕುವುದೇ ಒಂದು ಕಲೆ- ನೀನೇ ಕಲೆಗಾರ ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ ಸ್ನೇಹ,ಪ್ರೀತಿ ಗಳಿಸಿದರೆ ನೀನೇ ಸಾಹುಕಾರ ಆಸೆ ಇದ್ದರೇ ಬದುಕು ಸಹಜ-ಸುಂದರ ಕಿವುಡು ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ? ದೇವರೂ ಕುಳಿತಿಹನು ಜಾಣ ಕಿವುಡನ ಹಾಗೆ ಕತ್ತಲ ಜಗತ್ತು ನಮ್ಮನಾಳುವ ನಾಯಕರೇ ಎಲ್ಲಿಹುದು ನಿಮ್ಮ ಚಿತ್ತ ಸ್ವಲ್ಪ ಗಮನಹರಿಸಿ ನೀವಿತ್ತ ದುಡ್ಡು ಮಾಡಿದ್ದು,ಸುಳ್ಳು ಹೇಳಿದ್ದು ಸಾಕುಮಾಡಿ ಬಡಜನರ ಬದುಕಿಗೆ ಬುಡ್ಡಿ ದೀಪದಷ್ಟಾದರೂ ಬೆಳಕು ನೀಡಿ ದಂ"ಪತಿ" ಮನೆಗೆ ಲೇಟಾಗಿ ಬಂದಾಗ ಹೆಂಡತಿ ಹಾಕುವಳು ಛೀಮಾರಿ […]
ಪಂಜು ಚುಟುಕ ಸ್ಪರ್ಧೆ: ಸ್ಫೂರ್ತಿ ಗೌಡ ಅವರ ಚುಟುಕಗಳು
1.ನಿರ್ಲಿಪ್ತತೆ ನಿನ್ನ ನೆನಪಿಲ್ಲ ಗಾಳಿ ಗಂಧವಿಲ್ಲ ನಿದ್ದೆಯಲಿ ಕರಗಿಸುವ ಮೋಹವಿಲ್ಲ ನಿರ್ಲಿಪ್ತತೆ!! ಯಾರೋ ಕೂಗಿದರು ಕಲ್ಲು ಹೃದಯ =========================== 2. ವ್ರತ ಗೆದ್ದ ಸ್ವಯಂವರದಲ್ಲಿ ಹಂಚಿದ ಅಣ್ಣತಮ್ಮಂಗೆ ಸಮಕಾಣವ್ವ ಐದು ಬೆರಳು ನಿನ್ನವೇ ಕುಂತಿಯ ಉಸಿರು ಇದೇ ಗರತಿಯ ವ್ರತವೇ? =========================== 3. ಉಪವಾಸ ಏಕಾದಶಿ ಉಪವಾಸ ದ್ವಾದಶಿ ಉಪವಾಸ ಸಿಕ್ಕಿತೋ ಪುಣ್ಯಫಲ? ಹರಕು ಬಟ್ಟೆ ಮುರುಕು ತಟ್ಟೆ ಪ್ರತ್ಯಹಂ ಉಪವಾಸ ಯಾರಾದರು ಇವನಿಗೆ ಕೊಡಿಸಿ ಆ ನಿಮ್ಮ ಪುಣ್ಯ ಫಲ! =========================== 4. ಉಳುಮೆಯಿಲ್ಲ ಒಲವಿನ […]
ಪಂಜು ಚುಟುಕ ಸ್ಪರ್ಧೆ: ರಘು ನಿಡುವಳ್ಳಿ ಅವರ ಚುಟುಕಗಳು
1 ಸಮಾನತೆ ಭೋರ್ಗರೆವ ಶರಧಿ ಅದರ ಸೆರಗಲ್ಲೆ ಮಹಾಮೌನಿ 'ಹಿನ್ನೀರು' ದಿಗ್ಗನೆ ಬೆಳಗುವ ದೀಪ ಅದರ ಬದಿಯಲ್ಲೆ ದಿವ್ಯಧ್ಯಾನಿ 'ಕತ್ತಲು ಸೃಷ್ಟಿಗಿಲ್ಲ ಅದರ ದೃಷ್ಟಿಗಿಲ್ಲ ಭೇಧ ಬಿನ್ನ ಪಕ್ಷಪಾತ ಹುಟ್ಟು ಸಾವು ನೋವು ನಲಿವು ಎಲ್ಲ ನಮ್ಮ ನಿಮ್ಮ ವರಾತ! 2 ಚೋದ್ಯ ಕತ್ತಲೆಗೆ ಗೊತ್ತಿರುವ.. ಗುಟ್ಟು.. ಬೆಳಕಿನ ಪಾಲಿಗೆ ಅಪರಿಚಿತ ಹಣತೆ ಕಂಡಿರೋ ಸತ್ಯ.. ಕತ್ತಲಪಾಲಿಗೆ ಅದೃಶ್ಯ .. ಇದು ಸೃಷ್ಟಿಯ..ಚೋದ್ಯ 3 ಅಪೂರ್ಣ ಒರಟು ವಜ್ರಕ್ಕೆ..ಹೊಳಪು ಕೊಟ್ಟ.. ಸುವಾಸನೆ ಕೊಡಲಿಲ್ಲ.. ಮೃದುಲ..ಮಲ್ಲಿಗೆಯಲಿ.. […]
ತೊಟ್ಟಿಕ್ಕೋ ಕಾವ್ಯದ ಹನಿಗಳು!: ಸಂತೆಬೆನ್ನೂರು ಫೈಜ್ನಟ್ರಾಜ್
1.ವೈಶಾಲ್ಯ ಮನೆ ಸುತ್ತಾ ಕಾಂಪೌಂಡ್ ಹಾಕಿಕೊಳ್ಳುವ ನಾವು ಮನದ ಅದಮ್ಯ ಬಯಕೆಗಳಿಗೆ ಯಾವ ಬೇಲಿಯೂ ಹಾಕದ ವಿಶಾಲಿಗಳು ! 2.ಸಡಗರ ಬೀಳೋ ಮಳೆಗೆ ಭೂಮಿ ಸೇರೋ ತವಕ ಭೂಮಿಗೋ ಒಡಲ ತುಂಬಿಕೊಳ್ವ ತವಕ ! 3.ಒಲವೇ ನಿನ್ನೊಲವೇ ನನ್ನ ಕಾಯುವುದು ಕಣ್ಮುಚ್ಚಿ ತೆರೆದರೆ ಬರಿ ನಿನ್ನ ನೆನಪೇ ಕಾಡುವುದು ! 4.ವಿಪರ್ಯಾಸ ಕತ್ತಲ ವಾಸಕ್ಕಂಜಿ ಬೆಳಕ ಹಂಚುತ್ತಾ ಹೊರಟ ಹಣತೆ ಕೊನೆಗೆ ಅದೇ ಕತ್ತಲಲ್ಲಿ ಕಣ್ಮುಚ್ಚಿತು! 5.ಹೂ-ಚುಕ್ಕಿ ನಕ್ಕ ಹೂ ನೋಡಿ […]
ಪಂಜು ಚುಟುಕ ಸ್ಪರ್ಧೆ: ಅನುಪಮಾ ಎಸ್. ಗೌಡ ಅವರ ಚುಟುಕಗಳು
1) ರಾಮ-ಶಾಮ ಕೃಷ್ಣನನ್ನೇ ಪೂಜಿಸೋ ಎನ್ನ ಮಡದಿಗೆ ನಾನೆಂದೂ "ರಾಮ" ಕೈತಪ್ಪಿ ಹೋದ ನನ್ನ ನನ್ನೊಲವ ರಾಧೆ ಹೇಳುತಿದ್ದಳು ನಿನ್ನೊಳಗಿಹನೊಬ್ಬ "ತುಂಟ ಶಾಮ" …………………… 2) ಹಾಫ್ ಶರ್ಟ್ ಹಾಫ್ ಶರ್ಟ್ ಮೇಲೆ ರಾರಜಿಸುತಿದ್ದ ಹಾರ್ಟ್ ಕಂಡು ಮೌನವಾಗಿ ಕೇಳಿದಳು ಅರ್ಧಾಂಗಿ ಯಾರು ಕೊಟ್ಟ ಗಿಪ್ಟು ಈ ಅಂಗಿ? ………………… 3) ಬಯಕೆ ಸಿಕ್ಕರೆ ರಾಮನಂಥ ಗಂಡ ಸಿಗಬೇಕೆಂದು ದೇವರಲ್ಲಿ ಕೋರುವ ಬಯಕೆ..! ಮೆಲ್ಲೆಗೆ ಪಿಸುಗುಟ್ಟಿತು ಮನ ಮಾಡ್ಯನು ಶಂಕೆ ಕಾಡಿಗೆ ಅಟ್ಯಾನು […]
ಪಂಜು ಚುಟುಕ ಸ್ಪರ್ಧೆ: ಹುಸೇನ್ ಎನ್. ಅವರ ಚುಟುಕಗಳು
೧.ಒಳಗೊಳಗೇ ಅತ್ತು ಸತ್ತು ಹೋದ ನನ್ನ ಕನಸುಗಳ ಗೋರಿಗೆ ನಿನ್ನ ಹೆಸರಿಟ್ಟಿದ್ದೇನೆ..! —- ೨.ನಿನ್ನೆದುರು ದನಿಯಾಗಲು ಸೋತ ಮಾತುಗಳು ಕಮ್ಮನೆ ಕುಳಿತಿವೆ.. ಮಡುಗಟ್ಟಿದ ಕಣ್ಣೀರಿಗೆ ಜೊತೆಯಾಗಿ..! —- ೩.ನನಗಸೂಯೆ..! ಅವಳನ್ನು ಸೋಕಿ ಹೋಗುವ ತಂಗಾಳಿ ಮೇಲೆ ಅವಳ ಮೈ ಮೇಲೆರಗುವ ಬಿಸಿಲ ಮೇಲೆ ನನಗೊಂದಿಷ್ಟು ಜಾಗ ನೀಡದ ಅವಳ ಮನಸಿನ ಮೇಲೆ ..! —- ೪. ನಿನ್ನ ಮಾತಿಗಿಂತ ಮೌನವೇ ಎನಗಿಷ್ಟ.. ಮೌನದೊಳು ನೀನಾಡದ ಅದೆಷ್ಟು ಮಾತುಗಳು…!! —– ೫. ಶಶಿಯಾಗಮನದಿ ಜಿಲ್ಲೆಂದು ಪುಳಕಗೊಂಡಿದೆ […]
ಪಂಜು ಚುಟುಕ ಸ್ಪರ್ಧೆ: ಡಾ. ಆಜಾದ್ ಐ ಎಸ್ ಅವರ ಚುಟುಕಗಳು
1. ನಿನ್ನೆ ಮಳೆ ಹನಿ ಅಂಗೈಲಿದೆ ಇನ್ನೂ ನಿನ್ನೇ ನೆನೆದು ಕುಳಿತಿರುವೆ ಇನ್ನೂ ನಿನ್ನೀ ತಪನದ ಬೇಗೆಯಲಿ ಬರಿದೇ ನನ್ನೇ ಮರೆತಿರುವೆ ವರ್ಷಾ ನೀ ಮತ್ತೆ ……………..ಬರದೇ…………….. 2. ಮಿಂಚು-ಹೊಳಪು ಹುಟ್ಟಿದಾಗ ಮಗ ಮಮತೆ ಮಡಿಲಲಿ ಆಡುತಿರುವಾಗ ತುಂಬಿ ಆತಂಕ-ಕಂಬನಿ ಗೆಲುವಿಲ್ಲದಾಗ ಬೆಳೆದು ಹೆಮ್ಮರ ನಾನು, ಏನೆನ್ನಲಿ ? ಆ ಮಮತಾ ಮಯಿಯ ಕಣ್ಣ ಕನ್ನಡಿ ಬರೆದಂತೆ ಕಂಡಿಲ್ಲ ನನ್ನ ವಯಸಿಗೂ ……………ಮುನ್ನುಡಿ …………… 3. ನೀ ನನ್ನ ಮನದನ್ನೆ […]
ಪಂಜು ಚುಟುಕ ಸ್ಪರ್ಧೆ:ಶಿವು.ಕೆ ಅವರ ಚುಟುಕಗಳು
೧. ಜೀನ್ ಜಿನುಗದೆ ಕವಿ ಹೃದಯದ ಜೀನ್ ಜಿನುಗದೆ ದಿನವೂ ತೊಳಲಾಡುತ್ತಿದ್ದೇನೆ ನಾ ಕವನ ಬರೆಯಲಾಗದೆ ಕಣ್ಣ ಕದ ತೆರೆದು ಓದುತ್ತೀಯಾ ನನ್ನೊಳಗಿನ ಕವಿತೆಗಳನ್ನು ೨. ಬೇರಿನೊಳಗೆ ಅಡಗಿ ಕುಳಿತ ಆಕಾಶದಗಲದ ದೊಡ್ಡಮರದಂತೆ ನನ್ನ ಪುಟ್ಟ ಹೃದಯದೊಳಗೆ ಬಚ್ಚಿಟ್ಟಿರುವ ಸಾಗರದಗಲದ ಒಲವು ನಿನಗೆ ಗೊತ್ತಾ? ೩. ಹಸಿರು-ಉಸಿರು ಆವಿಯಾದ ಸಾಗರದನಿಗಳು ಆಕಾಶಕ್ಕೇರಿ ಪರಸ್ಪರ ಡಿಕ್ಕಿಸಿದಾಗ ಮಳೆಸುರಿದು ನೆಲವೆಲ್ಲಾ ಹಸಿರು ದೈನಂದಿನ ಚಿತ್ರಗಳು ನನ್ನೆದೆಯಲ್ಲಿ ಭಾವಗಳಾಗ ಪರಸ್ಪರ ಡಿಕ್ಕಿಸಿದಾಗ ಪದ ಸುರಿದು ಕಾಗದದಲ್ಲಿ ಕವನದ ಉಸಿರು. ೪. ಬದುಕು […]