ಚುಟುಕಗಳು: ಹರ್ಷವರ್ಧನ್



 

೧. ವಿಪರ್ಯಾಸ
ಕೋಟಿ ಕೋಟಿ ಕೊಂಡೊಯ್ಯುವರು
ಹುಂಡೀಲಿ ಕಟ್ಟಲು..
ಕಾಣದೇ ಇವರಿಗೆ ಹಸಿದ ಜನರ
ಖಾಲಿ ಬಟ್ಟಲು!
***
೨. ಕಿಚ್ಚು
ಒಂದೊಂದು ಬಲ್ಬುಗಳ
ಉರಿಸಲು ಬೇಕು
ಒಂದೊಂದು ಸ್ವಿಚ್ಚು,
ಆದರೆ ನೂರಾರು ಹಣತೆಗಳ
ಉರಿಸಲು ಸಾಕು
ಒಂದೇ ಕಿಚ್ಚು!
***
೩. ಮನೆ
ಎನ್ನೆದೆ,
ಶಿಥಿಲಗೊಂಡಿಹ ಗೂಡು
ಎಂದೋ ಹಾರಿದ ಹಕ್ಕಿಯದು..
ಈಗ ನನ್ನ ಮನೆ!!
***
೪. ಬಡವ
ನಾನು ಬಡವ,
ಪ್ರೀತಿಸುವ ಜೀವ ಸಿಗದ ಹೊರತು
ಯಾರೂ ಶ್ರೀಮಂತರಲ್ಲ..
ಎಲ್ಲ ಬಡವರೇ!!
***
೫. ನಲ್ಲ
ಸನಿಹ ನೀನಿಲ್ಲದೆ
ನಾ ಕನಸುಗಾರನು..
ನೀ ಸನಿಹವಿದ್ದರೆ
ಸರಸಗಾರನು!
***
೬. ನಶೆ
ಮೂಗಿನ ಮಟ್ಟಕ್ಕೇರಿತ್ತು
ರಮ್ಮು, ಬೀರು..
ಗೋಲ್ ಕೀಪರ್ ಬಾಲ್ ಹಿಡಿದಿದ್ದ ಕಂಡು
ಬೊಬ್ಬಿಟ್ಟನು ಗುಂಡ
’ಕ್ಯಾಚ್ ಔಟ್ ಆಗೇ ಬಿಟ್ಟನೇ
ನಮ್ ಗಂಭೀರು?!’
***
೭. ಪ್ರಶ್ನೆ
ಪ್ರೀತಿ ಯಾಕೆ ಮಾಡುತ್ತಾರೆ
ಎಂಬುದು ಲೌಕಿಕ ಪ್ರಶ್ನೆ..
ಉತ್ತರ ಪ್ರಶ್ನೆಯಲ್ಲೇ ಇದೆಯಲ್ಲ
love ’ಕಿಕ್’ ಪ್ರಶ್ನೆ!
***
೮. ಸಹನೆ
ಮಾಡಿದರೆ
ಸಹನಾಶಕ್ತಿಯಲಿ
ತುಲನೆ
ಖಂಡಿತ ಗೆಲ್ಲುವಳು
ಲಲನೆ!
***
೯. ಇಂತಿ ನಿನ್ನ..
ಒಂಟಿಯಾದಾಗ,
ಅಳು ಬಂದಾಗ
ನಾನು ಮಳೆಯಲಿ ನೆನೆಯುತ್ತಾ
ನಡೆಯುತ್ತೇನೆ..
ಏಕೆಂದರೆ ನಾನು ಮರೆಗುಳಿ,
ಚತ್ರಿ ತರೋದನ್ನ ಯಾವತ್ತೂ
ಮರೆಯುತ್ತೇನೆ!
***
೧೦. ಈ ಪ್ರೀತಿ..
ನಾ ಹೇಳದ ಪದಗಳ,
ಬಳಿಯಿದ್ದೂ
ಇಲ್ಲದಂತಿದ್ದ ಕ್ಷಣಗಳ,
ಹಿಡಿದಿಡಲಾಗದ
ಕಣ್ಣ ಹನಿಗಳ
ಕೊಳ..
ನಾ ಮೀನು!!
***
೧೧. ಪಾಡು
ಕಮ್ಮಿ ದರದಲ್ಲೀಗ
ವಿಮಾನ ಪ್ರಯಾಣದ
ಏರ್ಪಾಡು..
ಪ್ರಯಾಣಿಕರಿಗೇ ಗೊತ್ತು
ಅದರಲ್ಲಿನ airಪಾಡು!!
***
೧೨. ತ’ಗಾದೆ
ಪಾಲಿಗೆ ಬಂದದ್ದು
ಪಂಚಾಮೃತ,
ಪೋಲಿಗೆ ಬಂದದ್ದು
punch ಅಮೃತ!
***
೧೩. ವಾದ
ಮದುವೆಗೆ ಮುಂಚೆ
ಮಕ್ಕಳಾದರೆ
ಅಪವಾದ..
ಮದುವೆ ನಂತರ ಆದರೆ
ಅಪ್ಪವಾದ!!
*****
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Santhoshkumar LM
Santhoshkumar LM
10 years ago

🙂 good

ಶ್ರೀವಲ್ಲಭ ಕುಲಕರ್ಣಿ
ಶ್ರೀವಲ್ಲಭ ಕುಲಕರ್ಣಿ
10 years ago

ಎಲ್ಲಾ ಚೆನ್ನಾಗಿವೆ ಗೆಳೆಯಾ

amardeep.p.s.
amardeep.p.s.
10 years ago

chennagive….

Arathi ghatikar
Arathi ghatikar
10 years ago

Very nice 🙂

ಶಿದ್ರಾಮ
ಶಿದ್ರಾಮ
10 years ago

ಎಲ್ಲವೂ ಚೆನ್ನಾಗಿವೆ ಇಷ್ಟ ಆದ್ವು

5
0
Would love your thoughts, please comment.x
()
x