ಅವಳಿಗೆ ಹೇಳಬೇಕೆಂದು ಪೋಣಿಸಿಟ್ಟಿದ್ದ ಒಂದಷ್ಟು ಮಾತುಗಳು ಹೇಳದೆ ಉಳಿದವು. ಅವಳು ಮತ್ತೊಬ್ಬನ ಹೃದಯದ ಮಾತುಗಳನ್ನ ಆಲಿಸಿದಳೆಂದು ತಿಳಿದಾಗ. ತನ್ನದೇ ಚೌಕಟ್ಟು ಎಂದು ನಿರ್ಮಿಸಿಕೊಂಡ ಗೋಡೆಯನ್ನು ತಾನೆ ಕೆಡವಿದಳು ಆಚೆಯಿಂದ ಕೂಗಿದ ಅವನ ಪ್ರೀತಿಯ ದನಿಗೆ. ತಾನು ಪ್ರೀತಿಸಿದವಳು ಗೋರಿ ಸೇರಿದಳೆಂದು ತಿಳಿದಾಕ್ಷಣ ಅವನ ಮನದಲ್ಲಿನ ಅವಳ ಪ್ರೀತಿ ಮತ್ತು ನೆನಪುಗಳು ಉಸಿರಾಡಿದವು. ರಕ್ತದಲ್ಲಿ ಬರೆದುಕೊಟ್ಟ ಪ್ರೇಮ ಪತ್ರಕ್ಕೆ ಬೈದವಳು. ಅವನೇ ರಕ್ತವಾಗಿ ಹರಿದಾಗ ಮೌನ ತಾಳಿದಳು. ನಿನ್ನ ನೆನಪು ನನ್ನಲ್ಲಿ ಸತ್ತುಹೋಗಿದೆ ಎಂದು ಹೇಳ ಹೊರಟವನಿಗೆ ಅವಳ […]
ಚುಟುಕ
ಇಬ್ಬರ ಚುಟುಕಗಳು
ನಿಸ್ವಾರ್ಥ.. ಒಕ್ಕಲಿಗ ನೆಟ್ಟ ಗಿಡ ಇಂದು ದೊಡ್ಡ ಮರವಾಗಿ ನೆರಳಾಗಿ ನಿಂತಿದೆ ದಣಿದ ದೇಹಕೆ ಯಾವ ಭೇದವನ್ನು ತೋರದೆ ಫಲ! ಭೂ ತಾಯಿ ಕೊಟ್ಟ ನೀರಿಂದ ರೈತ ಸುರಿಸಿದ ಬೆವರಿಂದ ಫಲಸಿಕ್ಕಿತು! ಹೊಟ್ಟೆಗೆ ಅನ್ನ ಜೊತೆಗೆ ಮುಚ್ಚಿಕೊಳ್ಳಲು ಮಾನ!! -ಮಂಜು ವರಗಾ ಕಣ್ಣೀರು ಅತ್ತುಬಿಡು ಎಂದಾಗ, ಬರದ ಹನಿ, ಅಳಬೇಡ ತಡೆಯೆಂದಾಗ, ಉಕ್ಕಿ ಹರಿವ ಧಾರೆ!! ಹೃದಯ ಇದ್ದಾಗ, ಕೊಂಚವೂ ಗೋಚರಿಸದ , ತನ್ನನ್ನೇ ಕೊಟ್ಟು ಬರಿದಾದ ಮೇಲೆ, ಭಾರ ತೋರುವ, ಏಕೈಕ ವೈಚಿತ್ರ್ಯ!! […]
ಹಂಬಲ
ಹಂಬಲ ಈ ದಾರಿಯ ತಿರುವಲ್ಲಿ ಒಂದು ಗುಡಿಸಲಿರಲಿ.. ಒಳಗೆ ಮಣ್ಣ ನೆಲದ ಮೇಲೆ ಚಿತ್ತಾರ ಅರಳಿರಲಿ… ಒಳಗಿನ ತಮ ಹೋಗಿಸುವಷ್ಟು ಬೆಳಕಿರಲಿ.. ಅನ್ನಪಾತ್ರೆ ಖಾಲಿಯಾದರೂ ಚಿಂತೆ ಇಲ್ಲ… ಒಡಕಲು ಮಡಿಕೆಯ ಕೆಳಗೆ ನಾಲ್ಕು ಹನಿ ಮಧು ಇರಲಿ.. ಸಖಿ ಅಲ್ಲಿ ನಿನ್ನ ನೆರಳಿರಲಿ… -ಉಮೇಶ್ ದೇಸಾಯಿ