ಕಿಟ್ಟುಮಾಮಾನ ದೀಪಾವಳಿ: ಸುಮನ್ ದೇಸಾಯಿ ಅಂಕಣ
ಚುಮುಚುಮು ಛಳಿಗಾಲದಾಗ ಬರೊ ದೀಪದ ಹಬ್ಬ ದೀಪಾವಳಿ ನೆನಿಸಿಕೊಂಡ್ರನ ಎನೊ ಒಂಥರಾ ಖುಷಿ ಆಗತದ. ನರಕಚತುರ್ದಶಿ ಹಿಂದಿನ ದಿನದಿಂದನ ದೀಪಾವಳಿ ಹಬ್ಬದ ಸಂಭ್ರಮ ಸುರು ಆಗತದ. ಅಂದ್ರ ನಮ್ಮ ಉತ್ತರ ಕರ್ನಾಟಕದ ಕಡೆ ನರಕಚತುರ್ದಶಿ ಹಿಂದಿನ ದಿನಾ ನೀರು ತುಂಬೊ ಹಬ್ಬ ಅಂತ ಮಾಡತೇವಿ. ಅವತ್ತ ಸಂಜಿಮುಂದ ಎಲ್ಲಾರು ಅಂಗಳಾ ಸಾರಿಸಿ ಥಳಿ ಹೋಡದು ಛಂದನ ದೊಡ್ಡ ದೊಡ್ಡ ರಂಗೋಲಿ ಹಾಕಿ,ಮನಿಮುಂದ ಬಣ್ಣ ಬಣ್ಣದ ಆಕಾಶಬುಟ್ಟಿ ಕಟ್ಟಿರತಾರ. ಮನ್ಯಾಗಿನ ಹಿತ್ತಾಳಿ ತಾಮ್ರದ ಹಂಡೆ ಮತ್ತ ಕೊಡಗೊಳನ … Read more