ಫಟಾಫಟ್ ಅಡಿಗೆ!!: ಎಸ್. ಜಿ. ಶಿವಶಂಕರ್

ಐದು ದಿನಗಳಿಂದ ಫ್ಯಾಕ್ಟ್ರಿಗೆ ಲೇಟಾಗುತ್ತಿತ್ತು. ಇಂದು ಏನಾದರೂ ಸರಿ, ಸರಿಯಾದ ಸಮಯಕ್ಕೆ ಫ್ಯಾಕ್ಟ್ರಿ ತಲುಪಲೇಬೇಕೆಂದು ಹಠದಿಂದ ಹೊರಟಿದ್ದೆ. ಸೈರನ್ನಿಗೆ ಐದು ನಿಮಿಷ ಮುಂಚೆಯೇ ಹಾಜರಿ ಬೆರಳಚ್ಚು ಒತ್ತಿ ಡಿಪಾರ್ಟುಮೆಂಟು ಸೇರಿದೆ. ಇನ್ನೂ ಚುಮುಚುಮು ಕತ್ತಲು! ಮಹಡಿಯಲ್ಲಿದ್ದ ನನ್ನ ಚೇಂಬರಿನಲ್ಲಿ ವಿಸಿಟರ್ಸ್ ಕುರ್ಚಿಯಲ್ಲಿ ಯಾರೋ ಕೂತಿದ್ದರು!! ಇನ್ನೂ ಆಗಷ್ಟೇ ಷಾಪಿಗೆ ಜನ ಬರುತ್ತಿದ್ದರು. ಅಷ್ಟು ಬೆಳಿಗ್ಗೆ ನನ್ನ ಚೇಂಬರಿಗೆ ಯಾವ ವಿಸಿಟರ್ಸೂ ಬರಲು ಸಾಧ್ಯವಿರಲಿಲ್ಲ! ಅಂದರೆ ಅಲ್ಲಿ ವಕ್ಕರಿಸಿರುವವರು ಯಾರು ಎಂದು ಅಚ್ಚರಿಯಾಯಿತು. ಹಾರರ್ ಸಿನಿಮಾಗಳು ನೆನಪಾದವು! ಕಳೆದ … Read more

ನಾವು ಮತ್ತು ನಮ್ಮ ಸ್ವಭಾವಗಳು: ಅನಿತಾ ನರೇಶ್ ಮಂಚಿ

             ನಮ್ಮ ಹಟ್ಟಿಯಲ್ಲೆರಡು ಎಮ್ಮೆಗಳಿದ್ದವು.  ಮೇವು ಹಾಕುವಾಗ ಹುಲ್ಲಿನ ಕಂತೆಯನ್ನು ಎರಡು ಪಾಲು ಮಾಡಿ ಸಮಾನವಾಗಿ ಹಂಚಿ ಹಾಕಲಾಗುತ್ತಿತ್ತು. ಆ ಎಮ್ಮೆಗಳು ತಮ್ಮ ಪಾಲಿನ  ಕಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಬದಲಿಗೆ ತಮ್ಮದಲ್ಲದ ಮೇವಿನ ರಾಶಿಯಿಂದ ಎಷ್ಟು ಎಟಕುತ್ತದೋ ಅಷ್ಟನ್ನು ಮೊದಲು ತಿನ್ನಲು ತೊಡಗುತ್ತಿದ್ದವು.  ಆಗಾಗ ಸಿಟ್ಟಿನಲ್ಲಿ ಕೊಂಬಿನಿಂದ ತಿವಿದುಕೊಳ್ಳುವುದು, ಹೊಳ್ಳೆಯರಳಿಸಿ ಉಸಿರು ಬಿಡುವುದು ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದವು. ಒಂದು ಹುಲ್ಲಿನ ಚೂರೂ ಉಳಿಯದಂತೆ ತಿಂದರೂ ತಮಗೇನೋ ಕಮ್ಮಿ … Read more

” ರಾಮನಾಥಪುರ ಜಾತ್ರಾ ವೈಭವ”: ಹೊರಾ.ಪರಮೇಶ್ ಹೊಡೇನೂರು(ರುದ್ರಪಟ್ಟಣ)

  (ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರಿ ಮತ್ತು ಈ ಕಲಿಯುಗದಲ್ಲಿ ರಾಮನಾಥಪುರವೆಂದು ಜನಪ್ರಿಯವಾಗಿರುವ ಅರಕಲಗೂಡು ತಾಲ್ಲೂಕಿನ ಪ್ರಸಿದ್ಧ ಸುಕ್ಷೇತ್ರ "ರಾಮನಾಥ ಪುರ"ದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಡಿಸೆಂಬರ್ 17 ರಂದು ರಧೋತ್ಸವವು ಜರುಗಿದ್ದು ಮುಂದಿನ ತಿಂಗಳ(ಜನವರಿ) 16ರವರೆಗೂ ನಡೆಯುವ ಜಾತ್ರೆಗೆ ಮುನ್ನುಡಿಯಾಗಿದೆ. ಈ ನಿಮಿತ್ಯ ಜಾತ್ರಾ ವೈಭವ ಮತ್ತು ಬದಲಾಗುತ್ತಿರುವ ಸ್ವರೂಪ ಕುರಿತ ಲೇಖನವಿದು) ಪುರಾಣ ಕಾಲದಲ್ಲಿ ಸೀತೆಯನ್ನು ಅಪಹರಿಸಿದ ರಾವಣೇಶ್ವರನನ್ನು ಸಂಹರಿಸಿದ ಶ್ರೀರಾಮನು ತನಗೆ ಬ್ರಹ್ಮ ಹತ್ಯೆ ದೋಷ ಕಾಡದಿರಲೆಂದು ವಾಸವಾಪುರಿಯ … Read more

ಬಡವರ ನಿರ್ಮೂಲನೆಯೋ, ಬಡತನದ ನಿರ್ಮೂಲನೆಯೋ !?: ಆಶಿಕ್ ಮುಲ್ಕಿ

(ಬಡವರು ಬಡವರಾಗಿಯೇ ಇರೋವುದು ಯಾರತಪ್ಪು ? ಬಡವರನ್ನು ಬಡವರೆಂದು ಕರೆದು ತುಳಿತಕ್ಕೊಳಪಡಿಸಿರೋವುದು ಸರ್ಕಾರವೇ ಎಂದರೆ ತಪ್ಪಾಗಲಾರದು. ಬಡತನಕ್ಕೆ ಕೇವಲ ಸರ್ಕಾರವಷ್ಟೆ ಹೊಣೆಯಲ್ಲ. ದಿನದಿಂದ ದಿನಕ್ಕೆ ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತಿರುವ ಎಂ.ಎನ್.ಸಿ ಕಂಪೆನಿಗಳೂ ಕೂಡ ಇದಕ್ಕೆ ಕುಮ್ಮಕ್ಕು ನೀಡಿತ್ತಿವೆ.)  ಹೌದು! ಇತ್ತೀಚಿನ ಪರಿಸ್ಥಿತಿ ನೋಡುವಾಗ ಇಂತಹಾ ಒಂದು ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ದಿನ ನಿತ್ಯ ಒಂದೊತ್ತು ಊಟ ಇಲ್ಲದೆ ಕಣ್ಣೀರಿಟ್ಟು ಜೀವನ ‘ಕಳೆಯುವ’ ಅದೆಷ್ಟೋ ಜನರು ನಮ್ಮ ಮುಂದೆ ಇದ್ದಾರೆ. ಆದರೆ ಅದು ನಮ್ಮ ಗಮನಕ್ಕೆ ಬರುವುದಿಲ್ಲಾ. … Read more

ಅರಣ್ಯ ಹಕ್ಕು ಮಾನ್ಯತೆ ಕಾಯಿದೆ ಮತ್ತು ಹವಾಮಾನ ಬದಲಾವಣೆ (ಭಾಗ 1): ಅಖಿಲೇಶ್ ಚಿಪ್ಪಳಿ

(ವಾಸ್ತವಿಕ ನೆಲೆಗಟ್ಟಿನ ನೋಟ) ಈ ಜಗತ್ತು ಎದುರಿಸುತ್ತಿರುವ ಅತಿದೊಡ್ಡ ಹಾಗೂ ನಿರ್ಲಕ್ಷಿತ ಸಮಸ್ಯೆಯೆಂದರೆ ವಾತಾವರಣ ಬದಲಾವಣೆ ಅಥವಾ ಹವಾಮಾನ ವೈಪರೀತ್ಯ. 18ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಎಣೆಯಿಲ್ಲದ ಅರಣ್ಯ ನಾಶ ಇದಕ್ಕೆ ಮೂಲ ಕಾರಣ. ಇದಕ್ಕೆ ಮನುಷ್ಯನೇ ನೇರ ಕಾರಣವಾಗಿದ್ದಾನೆ ಎನ್ನುವುದು ಅಂಗೈ ಮೇಲಿನ ಹುಣ್ಣಿನಷ್ಟೇ ಸತ್ಯ. ಪ್ರಪಂಚದ ಬಹುಪಾಲು ಜನ “ಹವಾಮಾನ ವೈಪರೀತ್ಯ”ದ ಹಾಗೂ ಅದರ ಫಲಿತಾಂಶದ ಕುರಿತು ಅವಜ್ಞೆ ಹೊಂದಿದ್ದಾರೆ. ಸಾಮೂಹಿಕವಾಗಿ ನಿರ್ಮಿಸಿದ ಈ ಸಮಸ್ಯೆಯನ್ನು ಒಬ್ಬರಿಂದ … Read more

ನನ್ನ ಪ್ಯಾರಂಡ್ ಲೌಲಿ…: ಮಂಜುಳ ಎಸ್.

                 ಘಮ್ಮೆನ್ನುವ ಹಸಿ ಮೈಯ್ಯ ವಾಸನೆಯಿಂದ ಆಗ ತಾನೆ ಮಿಂದು ಎದ್ದಿದ್ದೆ, ಮಣ್ಣಿನ ಗೋಡೆಗೆ ಮೆತ್ತಿಸಿದ್ದ ಕನ್ನಡಿ ಮುಂದೆ ನಿಂತು, ಮುಖವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ, ಕೀವುಗಟ್ಟಿದ ಮೊಡವೆಗಳೊಂದಿಗೆ ಮಾತಾಡುತ್ತಿದ್ದೆ. ಕಪ್ಪು ಚರ್ಮವನ್ನು ಬಿಳಿಯಾಗಿಸುವ ಕನಸು ಕಾಣುತ್ತಿದ್ದೆ. ಆಗಾಗ ಮಡಕೆತಳ ಎಂದು ಛೇಡಿಸುವ ಗೆಳತಿಯರ ಮಾತು, ಒಮೊಮ್ಮೆ ನಾನೇ ನಿಂಗೆ ಗತಿ ಕಣೇ ಎಂದು ರೇಗಿಸುವ ಮುವತ್ತೆರಡರ ಸೋದರ ಮಾವನ ಮಾತು, ನನ್ನ ಕನಸನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿತ್ತು. ಶಾಲೆಯಲ್ಲಿ … Read more

ಪಂಜು ಕಾವ್ಯ: ಸಿದ್ರಾಮ ತಳವಾರ, ಉಕುಮನಾಳ ಶಿವಾನಂದ ರುದ್ರಪ್ಪ

ಮೌಢ್ಯತೆ,,, ಯಾವುದೋ ದಶಕಗಳಾಚೆ ಜುಟ್ಟು  ಜನಿವಾರಗಳ ಧರಿಸಿ ಅರೆಬೆತ್ತಲೆಯಲಿ ಕಾಯಕವಿರದೇ ಮಂತ್ರ ಜಪಿಸುತಿದ್ದವರೆಲ್ಲ ಇಂದು ಮೆತ್ತಗಾಗಿರಬಹುದು,,             ಆದರೆ, ಅವರು ಕಲಿಸಿದ ಹೀನ ಪಾಠ ಮಾತ್ರ             ಹೊತ್ತಿ ಉರಿಯುತಿದೆ ಇಂದಿಗೂ;             ಉಳ್ಳವರು ಬಿಟ್ಟರೂ ಮಾನಸಿಕ ಕಾಯಿಲೆಯಂತೆ             ಜಾತೀಯತೆಯ ವಿಷ ಇವರಿಂದ ಹೊರಹೋಗುತ್ತಲೇ ಇಲ್ಲ,, ದೊಡ್ಡವರೆಂದೆನಿಸಿಕೊಂಡವರೆಲ್ಲ ಹೀಗೆ ಒಂದಿನ ಗೊತ್ತಿಲ್ಲದೇಯೇ ನನ್ನ ಒಳ ಕರೆದರು ಆತ್ಮೀಯತೆಯಲೇ ಮುಗುಳ್ನಕ್ಕು ಪ್ರಶ್ನಿಸಿಯೇ ಬಿಟ್ಟರು ನೀವು ಯಾವ … Read more

ನೀರೆಂಬ ಟಾನಿಕ್: ಪ್ರಶಸ್ತಿ

ಇವತ್ತಿನ ದಿನಪತ್ರಿಕೆಯಲ್ಲಿ ಜನಪ್ರಿಯ ನಟಿ ಪ್ರಿಯಾಮಣಿ ಅವರ ಸಂದರ್ಶನ ಓದುತ್ತಿದ್ದೆ. ನೀರೇ ನನ್ನ ಫಿಟ್ನೆಸ್ ಮೂಲ.ಚೆನ್ನಾಗಿ ನೀರು ಕುಡಿಯೋದ್ರಿಂದ ಫ್ಯಾಟ್ ಬರ್ನ್ ಆಗುತ್ತೆ. ಆರೋಗ್ಯವೂ ಚೆನ್ನಾಗಿರುತ್ತೆ ಎಂದು ಅವರು ಹೇಳ್ತಾ ಇದ್ದಿದ್ದನ್ನು ಓದುತ್ತಿದ್ದ ನನ್ನ ಮನಸ್ಸು "ನೀರಿನಿಂದ ಫ್ಯಾಟ್ ಬರ್ನ್" ಅನ್ನೋ ವಾಕ್ಯದಲ್ಲಿ ನಿಂತೇ ಹೋಯ್ತು. ಹೆಚ್ಚು ನೀರು ಕುಡಿಯೋದ್ರಿಂದ ದೇಹದ ಕಷ್ಮಲಗಳ ಹೊರಹಾಕೋ ಪ್ರಕ್ರಿಯೆಗೆ ಸಹಾಯವಾಗಿ ದೇಹ ಆರೋಗ್ಯಕರವಾಗುತ್ತೆ ಅಂತ ಬೇರೆಡೆಯೂ ಓದಿದ್ದರೂ ಈ ಫ್ಯಾಟ್ ಬರ್ನಿನ ಸತ್ಯಾಸತ್ಯತೆ ಪರೀಕ್ಷಿಸಲೇ ಬೇಕು ಮತ್ತು ಹೆಚ್ಚು ನೀರು … Read more

ಹೋ … ಎನು….? ಪುಸ್ತಕ ಪರಿಚಯ: ಹೆಚ್. ಎಸ್. ಅರುಣ್ ಕುಮಾರ್

"ಅನಿತಾ ನರೇಶ್ ಮಂಚಿ"  ಉದಯೋನ್ಮುಖ ಲೇಖಕಿಯ ಹೋ ….. ಎನು…? ಲಘು ಬರಹಗಳ ಸಂಕಲನ ಓದಿದೆ. ರಂಗಕರ್ಮಿ "ನಟರತ್ನಾಕರ ಡಾ . ಮಾಸ್ಟರ್ ಹಿರಣ್ಣಯ್ಯ " ಅವರ ಮುನ್ನುಡಿ "ರಾಮ್ ನರೇಶ ಮಂಚಿ " ರ ಮುಖಪುಟದ ಛಾಯಾಚಿತ್ರ ಅದ್ಬುತವಾಗಿದೆ.  ಒಟ್ಟು ೪೪ ಲಘು ಹಾಸ್ಯ ಲೇಖನಗಳನ್ನು ಹೊತ್ತ ಸುಂದರ ಮುದ್ರಣದ ಪುಸ್ತಕ. "ಅನಿತಾ ನರೇಶ್ ಮಂಚಿ"  ಯವರು ದಿನ ನಿತ್ಯದ ಅನುಭವಗಳಲ್ಲಿ ಹಾಸ್ಯ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ತುಂಬಾ ಸ್ವಾರಸ್ಯವಾಗಿ ಹೇಳುತ್ತಾರೆ . ಅವರ … Read more

ಮಾದಕ ವ್ಯಸನಿಗಳನ್ನು ನಿರ್ವಹಿಸುವಲ್ಲಿ ಪಾಲಕರ ಪಾತ್ರ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಜೀವಿಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮವನ್ನುಂಟು ಮಾಡುವ ಯಾವುದೇ ಸಂಯುಕ್ತ ಅಥವಾ ರಾಸಾಯನಿಕ ಪದಾರ್ಥವೇ ಮಾದಕವಸ್ತು. ಮಾದಕ ವಸ್ತುವು ನೇರವಾಗಿ ಮೆದುಳಿನ ಮೇಲೆ ಅಥವಾ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದ ಮೇಲೆ, ಗ್ರಹಿಕೆಯ ಮೇಲೆ, ಪ್ರಜ್ಞಾವಸ್ಥೆಯ ಮೇಲೆ, ಭಾವನಾಸ್ಥಿತಿಯ ಮೇಲೆ ಪರಿಣಾಮವನ್ನು ಬೀರುವಂತಹುದು.ಅದನ್ನು ದುರ್ಬಳಕೆ ಮಾಡುವ ಸಾಧ್ಯತೆಗಳಿದ್ದು ಅದು ವ್ಯಸನಿಗೆ ಮತ್ತು ಸಮಾಜಕ್ಕೆ ಕೆಟ್ಟದ್ದನ್ನು ಉಂಟುಮಾಡುವ ಸಾಮಥ್ರ್ಯ ಪಡೆದಿದೆ. ಮಧ್ಯಸಾರ, ಕೆಫಿನ್, ಬಾರ್ಬಿಚುರೇಟ್ಸ್, ಟ್ರಾಂಕ್ವಿಲೈಸರ್ಸ, ಕೊಕೇನ್, ಮಾರ್ಫಿನ್, ಹೆರಾಯಿನ್, ಕೋಡೇನ್, ಅಫೀಮು, ಪಿತೆಡೈನ್, ಗಾಂಜಾ, ಚರಸ್, … Read more

ನಜರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಸಮಸ್ಯೆಗೆ ಹೋಜ ಸೂಚಿಸಿದ ಪರಿಹಾರ ಒಂದು ದಿನ ಹೋಜ ತನ್ನ ಪರಿಚಯದವನೊಬ್ಬನನ್ನು ರಸ್ತೆಯಲ್ಲಿ ಸಂಧಿಸಿದ. ಆ ಮನುಷ್ಯ ಚಿಂತಾಕ್ರಾಂತನಾಗಿದ್ದಂತೆ ಗೋಚರಿಸುತ್ತಿದ್ದದ್ದರಿಂದ ಹೋಜ ಅವನನ್ನು ಕಾರಣ ವಿಚಾರಿಸಿದ. “ನನಗೊಂದು ಭಯಾನಕ ಕನಸು ಬೀಳುತ್ತಿದೆ,” ವಿವರಿಸಿದ ಆತ, “ನನ್ನ ಮಂಚದ ಕೆಳಗೆ ಒಂದು ಪೆಡಂಭೂತವೊಂದು ಅಡಗಿ ಕುಳಿತಿರುವಂತೆ ಪ್ರತೀ ದಿನ ರಾತ್ರಿ ಕನಸು ಬೀಳುತ್ತಿದೆ. ಎದ್ದು ನೋಡಿದರೆ ಅಲ್ಲೇನೂ ಇರುವುದಿಲ್ಲ. ಎಂದೇ ನಾನೀಗ ವೈದ್ಯರ ಹತ್ತಿರ ಹೋಗುತ್ತಿದ್ದೇನೆ. ೧೦೦ ದಿನಾರ್‌ ಶುಲ್ಕ ಕೊಟ್ಟರೆ ಇದಕ್ಕೆ ಚಿಕಿತ್ಸೆ ನೀಡುವುದಾಗಿ ಹೇಳಿದ್ದಾರೆ.” … Read more

ಸಾಮಾನ್ಯ ಜ್ಞಾನ (ವಾರ 85): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:- 1.    1966ರಲ್ಲಿ ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಕರ್ನಾಟಕದ ಸಂಗೀತ ವಿದೂಷಿ ಯಾರು? 2.    ಐ.ಎಫ್.ಸಿ.ಐ ನ ವಿಸ್ತೃತ ರೂಪವೇನು? 3.    ರಸಿಕ ಪುತ್ತಿಗೆ ಇದು ಯಾರ ಕಾವ್ಯನಾಮವಾಗಿದೆ? 4.    ಪಚ್‍ಮರ್ಹಿ ಗಿರಿಧಾಮ ಯಾವ ರಾಜ್ಯದಲ್ಲಿದೆ? 5.    1971ರಲ್ಲಿ ಶ್ರೀರಂಗ ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ? 6.    ಯಾವ ವರ್ಷವನ್ನು ಅಂತರಾಷ್ಟ್ರೀಯ ಮಹಿಳೆಯರ ವರ್ಷವನ್ನಾಗಿ ಆಚರಿಸಲಾಯಿತು? 7.    ವಾಟ್ಸನ್ ಮ್ಯೂಸಿಯಂ ಎಲ್ಲಿದೆ? 8.    ಕದಂಬ ಮನೆತನದ ಸ್ಥಾಪನೆಯ ಬಗ್ಗೆ ತಿಳಿಸುವ … Read more