ಸಾಮಾನ್ಯ ಜ್ಞಾನ (ವಾರ 85): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:-
1.    1966ರಲ್ಲಿ ವಿಶ್ವಸಂಸ್ಥೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಕರ್ನಾಟಕದ ಸಂಗೀತ ವಿದೂಷಿ ಯಾರು?
2.    ಐ.ಎಫ್.ಸಿ.ಐ ನ ವಿಸ್ತೃತ ರೂಪವೇನು?
3.    ರಸಿಕ ಪುತ್ತಿಗೆ ಇದು ಯಾರ ಕಾವ್ಯನಾಮವಾಗಿದೆ?
4.    ಪಚ್‍ಮರ್ಹಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
5.    1971ರಲ್ಲಿ ಶ್ರೀರಂಗ ರವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಕಿದೆ?
6.    ಯಾವ ವರ್ಷವನ್ನು ಅಂತರಾಷ್ಟ್ರೀಯ ಮಹಿಳೆಯರ ವರ್ಷವನ್ನಾಗಿ ಆಚರಿಸಲಾಯಿತು?
7.    ವಾಟ್ಸನ್ ಮ್ಯೂಸಿಯಂ ಎಲ್ಲಿದೆ?
8.    ಕದಂಬ ಮನೆತನದ ಸ್ಥಾಪನೆಯ ಬಗ್ಗೆ ತಿಳಿಸುವ ಶಾಸನ ಯಾವುದು?
9.    ಮೊದಲ ಬಾರಿಗೆ ಮಾನವನ ಶರೀರದ ಯಾವ ಅಂಗವನ್ನು ಕಸಿ ಮಾಡಲಾಯಿತು?
10.    ಮೂಲಂಗಿಯ ವೈಜ್ಞಾನಿಕ ಹೆಸರೇನು?
11.    ಸಂವಿಧಾನದ ಯಾವ ಕಲಮು ಅಸ್ಪøಶ್ಯಯನ್ನು ನಿಷೇಧಿಸುತ್ತದೆ?
12.    ಬ್ರಿಟೀಷರ ವಿರುದ್ಧದ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿದ್ದ ನರಗುಂದ ಸಂಸ್ಥಾನದ ಪ್ರಭು ಯಾರು?
13.    ಕಾಲದ ಅಳತೆಯ ಮಾನ ಯಾವುದು?
14.    ತುಂಗಾನದಿಯ ಉಗಮ ಸ್ಥಳ ಯವುದು?
15.    ದೇವನಹಳ್ಳಿ ಚಕ್ಕೊತ್ತಕ್ಕೆ ಪ್ರಸಿದ್ಧವಾದರೆ ಮಧುಗಿರಿ ಯಾವುದಕ್ಕೆ ಪ್ರಸಿದ್ಧವಾಗಿದೆ?
16.    ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಧಿಕವಾಗಿದ್ದಲ್ಲಿ ಬರುವ ಖಾಯಿಲೆ ಯಾವುದು?
17.    ಭಾರತೀಯ ಮಿಲಿಟರಿ ಮಯನ್ಮಾರ್ ಸರ್ಕಾರದ ಸಹಾಯದಿಂದ ಮಣಿಪುರದಲ್ಲಿ ತೀವ್ರವಾದಿಗಳ ದಮನಕ್ಕೆ ಕೈಹಾಕಿದ ಕಾರ್ಯಾಚರಣೆಯ ಹೆಸರೇನು?
18.    ಖೋ-ಖೋ ಆಟ ಪ್ರಾರಂಭವಾಗಿದ್ದು ಮೂಲತಃ ಯಾವ ರಾಜ್ಯದಲ್ಲಿ?
19.    ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಯೋಜನೆಗಳಿಗೆ ತಳಪಾಯ ಹಾಕಿದ ದೇಶ ಯಾವುದು?
20.    ಧರ್ಮಸ್ಥಳದ ಮಂಜುನಾಥೇಶ್ವರನನ್ನು ಪ್ರತಿಸ್ಥಾಪಿಸಿದ ಯತಿ ಯಾರು?
21.    ತಲೆ ಬರುಡೆಯಲ್ಲಿರುವ ಮೂಳೆಗಳ ಸಂಖ್ಯೆ ಎಷ್ಟು?
22.    ಭಾರತೀಯ ಸೈನ್ಯದಲ್ಲಿ ಅತಿ ಹೆಚ್ಚಿನ ಪರಾಕ್ರಮ & ತ್ಯಾಗಕ್ಕಾಗಿ ಕೊಡುವ ಪ್ರಶಸ್ತಿ ಯಾವುದು?
23.    ಪೇಶ್ವೆಗಳ ರಾಜವಂಶವನ್ನು ಸ್ಥಾಪಿಸಿದವರು ಯಾರು?
24.    ಕನಾಟಕದ ಮೊದಲ ಶಿಕ್ಷಣ ಪತ್ರಿಕೆ ಯಾವುದು?
25.    ಕನ್ನಡದ ಶಕ್ತಿಕವಿ ಎಂದು ಯಾರನ್ನು ಕರೆಯುತ್ತಾರೆ?
26.    ಬಂಗಾಳದ ಪ್ರಥಮ ಬ್ರಿಟಿಷ್ ಗವರ್ನರ್ ಯಾರು?
27.    ಬೆಂಗಳೂರಿನಲ್ಲಿರುವ ಈಗಿನ ಹೈಕೋರ್ಟನ್ನು ಮೊದಲು ಏನೆಂದು ಕರೆಯುತ್ತಿದ್ದರು?
28.    ರಿಬ್ಬನ್ ಜಲಪಾತ ಯಾವ ದೇಶದಲ್ಲಿದೆ?
29.    ಅಥೇನ್ಸ್ ಒಲಂಪಿಕ್ಸ್‍ಗೆ ರೆಫ್ರಿಯಾಗಿ ಆಯ್ಕೆಯಾದ ಮೊದಲ ಭಾರತೀಯ ಯಾರು?
30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.


ಉತ್ತರಗಳು:-
1.    ಡಾ|| ಎಮ್.ಎಸ್.ಸುಬ್ಬಲಕ್ಷ್ಮಿ
2.    ಇಂಡಸ್ಟ್ರಿಯಲ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ
3.    ಪುತ್ತಿಗೆ ಸುಬ್ರಮಣ್ಯ ಆಚಾರ್ಯ
4.    ಮಧ್ಯಪ್ರದೇಶ
5.    ಕಾಳಿದಾಸ
6.    1975
7.    ರಾಜಕೋಟ್
8.    ತಾಳಗುಂದ ಶಾಸನ
9.    ಮೂತ್ರಪಿಂಡ
10.    ರೆಫಾನಸ್ ಸಟೈನಸ್
11.    17 ನೇ ಕಲಾಮು
12.    ಬಾಬಾ ಸಾಹೇಬ್
13.    ಸೆಕೆಂಡ್
14.    ಚಿಕ್ಕಮಗಳೂರಿನ ಸಂಸೆ
15.    ದಾಳಿಂಬೆ
16.    ಪ್ಲೋರೋಸಿಸ್
17.    ಆಪರೇಷನ್ ಆಲ್ ಕ್ಲೀಯರ್
18.    ಗುಜರಾತ್
19.    ರಷ್ಯಾ
20.    ವಾದಿರಾಜರು
21.    22
22.    ಪರಮವೀರಚಕ್ರ
23.    ಬಾಲಾಜಿ ವಿಶ್ವನಾಥ
24.    ಕನ್ನಡ ಜ್ಞಾನ ಬೋಧಿನಿ
25.    ರನ್ನ
26.    ರಾಬಟ್ ಕ್ಲೈವ್
27.    ಅಠಾರಾ ಕಛೇರಿ
28.    ಅಮೇರಿಕಾ
29.    ಎಸ್. ಚಂದ್ರಶೇಖರ
30.    ರಾಜ ರವಿವರ್ಮ (ಪ್ರಸಿದ್ಧ ಚಿತ್ರ ಕಲಾವಿದರು)


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x