ಕೊರೋನಾ ವಾರಿಯರ್ಸಗೊಂದು ನಮನ : ತೇಜಾವತಿ ಹೆಚ್. ಡಿ.(ಖುಷಿ)

ಮಾನವೀಯತೆಯ ದೀಪದಲ್ಲಿ ಕರುಣೆಯ ಬತ್ತಿ ಹಚ್ಚಿ ಜ್ಯೋತಿಯಾದೆ ನೀನುಅಂತಃಕರಣದ ಮಿಡಿತದಿಂದ ಆತ್ಮವಿಶ್ವಾಸದ ಕಿರಣಬೀರಿ ಬೆಳಕಾದೆ ನೀನು ಶುಭ್ರ ಶ್ವೇತ ವಸನವನ್ನುಟ್ಟು ಸ್ವಚ್ಛ ಮನವ ತೊಟ್ಟು ರೋಗಿಗಳ ಆರೈಕೆ ಮಾಡಿ ಮರಣದ ಕದ ತಟ್ಟಿದವರಿಗೆ ಹೆಗಲಾಗಿ ಸಾಂತ್ವನ ನೀಡುವ ದಿಟ್ಟೆಯಾದೆ ನೀನು ಅಬ್ಬಬ್ಬಾ…… ಮಹಿಳೆಯರ ಒಳಹೊರಗಿನ ಮಾನಸಿಕ ಸ್ಥಿತಿಗತಿಗಳು ಅವರಿಗಷ್ಟೇ ಗೊತ್ತು. ತಮ್ಮ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನೂ ಮೀರಿ ದಿಟ್ಟ ಹೆಜ್ಜೆಯನ್ನಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾಮಣಿಗಳು ಅವರಿಗೆ ಅವರೇ ಸಾಟಿ ಎನ್ನುವುದನ್ನು ತಾವು … Read more

“ತೆರೆಮರೆಯ ಕಲೆಗಾರ ಅಪ್ಪ”: ಕವಿತಾ ಜಿ. ಸಾರಂಗಮಠ

‘ಬದುಕಿನ ಪುಟಗಳಲ್ಲಿ ಭರವಸೆಯ ಹಾದಿಯಲ್ಲಿ ನೂರು ಕನಸ ಹೊತ್ತು ಸಾಗಿಹನು. . ತಾ ಲಾಲಿಸಿದ ಮಕ್ಕಳಿಗೆ. . ‘ ಅಪ್ಪ ಎಂದರೆ ಭಯ, ಆತಂಕ, ಗೊಂದಲ, ಕೋಪ, ಪಕ್ಷಪಾತಿ ಎಂಬಿತ್ಯಾದಿ ಭಾವನೆಗಳ ಚಿತ್ರ ಎಲ್ಲ ಮಕ್ಕಳ ಮನದಲ್ಲಿ ಮೂಡಿರುತ್ತದೆ. ಆದರೆ ವಾಸ್ತವವೇ ಬೇರೆ. “ಅಪ್ಪ ಎಂದರೆ ಮಕ್ಕಳ ಪಾಲಿನ ಅದ್ಭುತ ಶಕ್ತಿ. ಉತ್ತಮ ಸ್ಥಾನ, ಮಾನ, ನಾಗರೀಕತೆಯ ಹಿರಿಮೆಯನ್ನು ಸಮಾಜದಲ್ಲಿ ಮಕ್ಕಳಿಗೆ ತಂದುಕೊಡುವ ದಿವ್ಯ ಚೇತನ” ನಾವೆಲ್ಲ ಅಮ್ಮನ ಬಗ್ಗೆ ಚಿಂತಿಸುತ್ತೇವೆ. ಅವಳ ತ್ಯಾಗ, ಹೋರಾಟ, ಹಿರಿಮೆ … Read more

ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು: ಅಶ್ಫಾಕ್ ಪೀರಜಾದೆ

ಸಾಹಿತಿ ಪತ್ರಕರ್ತ ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ನಮ್ಮನ್ನು ಅಗಲಿ ಇದೇ ಜೂನ ೨೧ಕ್ಕೆ ಒಂದು ವರ್ಷವಾಯಿತು. ಈ ಪ್ರಯುಕ್ತ ಒಂದು ಲೇಖನ. ಪ್ರಿಯ ಈಶ್ವರ…..ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು. ಹೀಗಂತಾ ನೆನಪಿಸಿದವನು ನಿನ್ನ ಮಗ ರಾಜಶೇಖರ. ಅಪ್ಪನ ಪುಣ್ಯಸ್ಮರಣೆ ಲೇಖನ ಬರೆಯಿರಿ ಅಂಕಲ್ ಅಂತಾ ಮೆಸೇಜ ಮಾಡಿದ್ದ. ನೀನು ಹೋಗಿ ಇಷ್ಟು ಬೇಗ ಒಂದು ವರ್ಷವಾಯಿತೇ? ನಂಬಲಾಗುತ್ತಿಲ್ಲ. ನೀನು ಅಲ್ಲಿ-ಇಲ್ಲಿ, ಹಿಂದೆ-ಮುಂದೆ ಸದಾ ನಮ್ಮೊಂದಿಗೆ ಇರುವಂತೆ ಭಾಸವಾಗುತ್ತದೆ. ಆದರೂ ನಿನ್ನ ನೆನಪುಗಳೆಂದರೆ ಕೊನೆಯಿಲ್ಲದ ಒರತೆ. ಈ … Read more

ಸಾಹಿತ್ಯಲೋಕದ ಧ್ರುವತಾರೆ, ಖ್ಯಾತ ಸಂಶೋಧಕ ಡಾ. ಬಿ.ವ್ಹಿ.ಶಿರೂರ: ವೈ.ಬಿ.ಕಡಕೋಳ

ನಮ್ಮ ಬದುಕಿನಲ್ಲಿ ನಮಗೆ ಅನೇಕ ಹಿರಿಯರು ಅವರ ವ್ಯಕ್ತಿತ್ವದ ಮೂಲಕ ಮಹನೀಯರಾಗಿ ಮನದಲ್ಲಿ ಉಳಿಯುತ್ತಾರೆ. ಅವರ ಆದರ್ಶದ ಬದುಕು ನಮಗೆ ದಾರಿದೀಪವಾಗುತ್ತದೆ. ಗಾಂಧಿವಾದಿ ಶಿರೂರ ವೀರಭದ್ರಪ್ಪನವರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಆಡೂರಿನವರು. ಇವರು ಸ್ವಾತಂತ್ಯ ಹೋರಾಟಗಾರರು ಮತ್ತು ಕರ್ನಾಟಕ ಏಕೀಕರಣ ಹೋರಾಟಗಾರರು, ಮಾಜಿ ಶಾಸಕರು. ವಿಧಾನಸಭೆಯ ವಿರೋಧಪಕ್ಷದ ಉಪನಾಯಕರಾಗಿ, ಹೈದ್ರಾಬಾದ್ ಕರ್ನಾಟಕ ವಿಮೋಚನ ಹೋರಾಟಗಾರರಾಗಿ ಬದುಕಿ ಬಾಳಿದವರು. ಇವರು ಹರ್ಡೇಕರ್ ಮಂಜಪ್ಪನವರ ಜೀವನಚರಿತ್ರೆ, ಬಸರೀಗಿಡದ ವೀರಪ್ಪನವರ ಅಭಿನಂದನ ಗ್ರಂಥ ಹೊರತಂದವರು. ಅಷ್ಟೇ ಅಲ್ಲ 1932 ರಲ್ಲಿ … Read more

‘ಸಿರ್ಫ್ ಪ್ರೀತಿ’: ಬೀರೇಶ್ ಎನ್ ಗುಂಡೂರ್

ನನ್ನ ಕೂದಲಿನಲ್ಲಿ ಸದಾ ಹುದುಗಿ ಮರೆಯಾಗುವ ಆ ಮೂರು ಬೆರಳಿನ ಹಣೆಯಲ್ಲಿ ಯಾರೋ ಟಿಪ್ಪಣಿ ಬರೆದಿದ್ದಾರಂತೆ. ಜೀವನದಲ್ಲಿ ಎಲ್ಲಾ ಘಟಿಸುವುದು ಅಲ್ಲಿಯ ಪೂರ್ವ ನಿರ್ಧಾರಿತವಂತೆ. ಯಾವುದೂ ಇಲ್ಲಿ ನಮ್ಮ ಕೈಯಲ್ಲಿಲ್ಲ, ಶಾಶ್ವತವಲ್ಲವೆಂಬುದು ಸದಾ ಕೇಳುವ ಮಾತು. ಎಲ್ಲವೂ ಅದಾಗಲೇ ನಿಶ್ಚಿತವಾಗಿದೆಯಂತೆ. ನಾವು ನೆಪ ಮಾತ್ರವಂತೆ. ಜೀವದ ಉಸಿರಾಗಿರುವ ಗೆಳತಿಯ ಸಮ್ಮತಿಗಿಂತ…ಈ ಹಣೆಯಲ್ಲಿ ಅವಳ ಹೆಸರು ಬರೆದಿರಬೇಕಂತೆ. ವಾಸ್ತವದಲ್ಲಿ, ಇಂತಹ ಎಷ್ಟೋ ಇಲ್ಲ್ಯೂಷನ್ ಗಳಿಗೆ ನನ್ನದು ಯಾವಾಗಲೂ ತಕರಾರು. ನಮ್ಮ ಅಸಮರ್ಥತೆಯನ್ನು ಒಪ್ಪದೇ..ಹುಡುಕಿಕೊಂಡ ಕತೆಗಳಿವು ಅನಿಸುತ್ತದೆ. ಸದಾ ಸೋತು … Read more

ಸ್ನೇಹಲೋಕವೋ!! ಭ್ರಮಾಲೋಕವೋ?: ಚೈತ್ರಭೂಲಕ್ಷ್ಮೀ

ಸ್ನೇಹವೆಂಬುದು ನಂಬಿಕೆ, ಪ್ರೋತ್ಸಾಹ, ಸಂವಹನ, ಪ್ರಾಮಾಣಿಕತೆ, ತಿಳುವಳಿಕೆ, ಕರುಣೆಯನ್ನು ಒಳಗೊಂಡಿರುವಂತಹ ಅತ್ಯಂತ ದೃಢ ಸಂಬಂಧವೇ ಸ್ನೇಹ. ಯಾವಾಗ ನಾವು ಚೌಕಟ್ಟುಗಳನ್ನು ಮೀರಿ ಮತ್ತೊಬ್ಬ ವ್ಯಕ್ತಿಯನ್ನು ತನ್ನಂತೆ ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅಲ್ಲಿ ಸ್ನೇಹಬೀಜ ಮೊಳೆಯುತ್ತದೆ. ಕಾಲಚಕ್ರ ಉರುಳಿದಂತೆ, ಎಳೆವಯಸ್ಸಿನ ಬೆಸ್ಟೆಸ್ಟ್‌ ಆಗಿದ್ದವರು ಅಪರಿಚಿತರಾಗಿ ಹೋಗಬಹುದು. ಅಷ್ಟೇನೂ ಒಡನಾಟವಿಲ್ಲದವರ ಜತೆಗೆ ಗಾಢ ಬಾಂಧವ್ಯ ಬೆಸೆದು ಹೋಗಬಹುದು ಅಥವಾ ಹೊಸ ಪರಿಚಯವಾಗಿ ಅವರು ನಮ್ಮದೇ ಛಾಪೆನ್ನುವಷ್ಟು ಒಂದಾಗಿ ಬಿಡಬಹುದು. ಸ್ನೇಹವಿಲ್ಲದ ಜಗತ್ತನ್ನು, ಬದುಕನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಎಲ್ಲ ವಯಸ್ಸಿನಲ್ಲೂ ಎಲ್ಲರಿಗೂ ತಮ್ಮದೇ … Read more

ನನ್ನ ಮುದ್ದು ಅಪ್ಪ: ಸುನಿತಾ. ಎಸ್. ಪಾಟೀಲ

ಅಪ್ಪ ಎಂಬ ಎರಡಕ್ಷರದ ಈ ಪದ ಸ್ವಲ್ಪ ಭಾರ,  ಮಕ್ಕಳಿಗೆ ಮುಜುಗರ ಉಂಟುಮಾಡುವಂತದ್ದು. ಅಪ್ಪ ಎಂಬ ಸಂಬಂಧಕ್ಕೆ ಬಹುಶಃ ಯಾರು ಅಷ್ಟೊಂದು ಪ್ರಾಶಸ್ತ್ಯ  ಕೊಡೋದಿಲ್ಲ. ಹಾಗಂತ ಪ್ರೀತಿ ಇಲ್ಲ ಅಂತಲ್ಲ. ಅಪ್ಪನಿಗೆ ಕಂಡರೆ ಅದೇನೋ ಮುಜುಗರ, ಗೌರವ, ಭಯ. ಏಕೆಂದರೆ ಅಮ್ಮನ ಜೊತೆ ಇರುವ ನಮ್ಮ ಸೆಂಟಿಮೆಂಟ್,  ಅಟ್ಯಾಚ್ಮೆಂಟ್, ಅಪ್ಪನ ಜೊತೆ ಸ್ವಲ್ಪ ಕಡಿಮೆನೇ ಅಲ್ವಾ? ಆದರೆ ಎಲ್ಲರಿಗೂ ಗೊತ್ತು ಅಪ್ಪ ಅಂದ್ರೆ ಸ್ಫೂರ್ತಿ,  ಅಪ್ಪ ಅಂದ್ರೆ ತ್ಯಾಗ,  ಅಪ್ಪ ಅಂದ್ರೆ ಆಕಾಶ,  ಅವರ ಪರಿಶ್ರಮಕ್ಕೆ ಬೆಲೆ … Read more

ಸ್ನೇಹದ ಕಡಲಲ್ಲಿ: ಸುಧಾ ಹುಚ್ಚಣ್ಣವರ

ಮನುಷ್ಯ ಇತರ ಎಲ್ಲ ಜೀವಿಗಳಿಗಿಂತ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ, ಹಾಗೆಯೇ ಸಂಘಜೀವಿ. ಸಮಾಜವನ್ನು ಬಿಟ್ಟು ಬದುಕಲಾರ ತನ್ನ ಎಲ್ಲ ಬೇಕು ಬೇಡಿಕೆಗಳನ್ನು ಸಮಾಜದ ಸಂಘ ಜೀವನದಲ್ಲಿ ಈಡೇರಿಸಿಕೊಳ್ಳುತ್ತಾನೆ. ತನ್ನ ಕುಟುಂಬದ ಸದಸ್ಯರ ಜೊತೆ ನೆರೆಹೊರೆಯವರ ಜೊತೆ ಪ್ರೀತಿ ಸ್ನೇಹ ಸಹಕಾರ ಕೊಟ್ಟು ತೆಗೆದುಕೊಳ್ಳುವ ಭಾವನೆಯಿಂದ ಬೆಳೆಯುತ್ತಾ ಸಾಗುತ್ತಾನೆ. ಹೀಗೆ ಒಂದು ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ “ಜೀವನದ ಮೌಲ್ಯಗಳು” ಎಂಬ ವಿಷಯದ ಕುರಿತು ಪಾಠ ಮಾಡುತ್ತಿರುವಾಗ ವಿದ್ಯಾರ್ಥಿಗಳಿಗೆ ಹೇಳುತ್ತಾರೆ, ಮಕ್ಕಳೇ ಜೀವನದಲ್ಲಿ “ಪ್ರೀತಿ ಸ್ನೇಹ “ಎಲ್ಲವೂ ಬಹಳಷ್ಟು ಮುಖ್ಯ. ಮನುಷ್ಯ … Read more

ಹೇ ಮಾನವ ನಮ್ಮನ್ನೂ ಬದುಕಲು ಬಿಡಿ: ಮಂಜುಳಾ ಶೆಟ್ಟಿಗಾರ್

ಮುಂಜಾನೆ ಬೇಗನೆ ಎದ್ದೆ  ಕಾರಣ ಬಯಕೆಯ ಹಸಿವು. ಗರ್ಬಿಣಿಯಾಗಿದ್ದರಿಂದ ತುಂಬಾ ಆಯಾಸ ಹಾಗಾಗಿ ಹಿಂದಿನ ದಿನ ರಾತ್ರಿಯಾಗುವುದರೊಳಗೆ ಸಿಕ್ಕಿದ್ದನ್ನು ತಿಂದು ಬೇಗನೆ ಮಲಗಿದ್ದೆ. ಅದೇ ಕಾರಣ ಇಂದು ಸೂರ್ಯನ ರಶ್ಮಿ ಸೊಕುವುದಕ್ಕಿಂತ ಮೊದಲೇ ಹಸಿವು ನನ್ನ ಬಡಿದೆಬ್ಬಿಸಿತು.  ಸರಿ ಏನಾದರೂ ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು, ನನಗಲ್ಲದಿದ್ದರು ನನ್ನ  ಉದರದಲಿ ಬೆಳೆಯುತ್ತಿರುವ ನನ್ನ ಕನಸಿನ ಕೂಸಿಗೆ ಎಂದು ದೌಡಾಯಿಸಿ ಎದ್ದೆ. ಗರ್ಭಿಣಿಯ ಆಯಾಸ ಕಾಡುತಿತ್ತು. ಆಯಾಸ ಎಂದು ಕೂತವಳಿಗೆ ಮತ್ತೇ ಹಸಿವು ಹೊಟ್ಟೆಯಲ್ಲಿ ಚುರ್ ಎಂದು ಎಚ್ಚರಿಸಿತು.  ತಡಮಾಡದೆ ಎದ್ದು … Read more

ಅಂಜದೆ ಮುನ್ನುಗ್ಗುತ್ತಿರು: ಪ್ರೊ ಸುಧಾ ಹುಚ್ಚಣ್ಣವರ

ಪ್ರತಿಯೊಬ್ಬ ಮನುಷ್ಯ ತನ್ನ ಬಾಳ ಹಾದಿಯಲ್ಲಿ ಹಲವಾರು ರೀತಿಯ ಏಳು ಬೀಳುಗಳನ್ನು ಕಾಣುತ್ತಾ ಸಾಗುತ್ತಾನೆ, ಕಷ್ಟ ಸುಖ ನೋವು ನಲಿವು ಹೀಗೆ ಹಲವಾರು ರೀತಿಯ ವೈಪರೀತ್ಯಗಳನ್ನು ಜೀವನದ ವಿಭಿನ್ನ ಸನ್ನಿವೇಶಗಳಲ್ಲಿ ಎದುರಿಸುತ್ತಾ ಸಾಗುವ ಮನುಷ್ಯ ಕೆಲವೊಮ್ಮೆ ಜೀವನದ ಕಹಿ ಘಟನೆಗಳಿಂದ ವಿಚಲಿತನಾಗಿ ಬಿಡುತ್ತಾನೆ. ಮುಂದೇನು ಮಾಡಬೇಕು ಎಂಬ  ವಿಚಾರವೇ ತೋಚದಂತಾಗಿ ಗೊಂದಲಕ್ಕೀಡಾಗುತ್ತಾನೆ. ಆದರೆ ವಾಸ್ತವದಲ್ಲಿ ಯಾವುದೇ ಒಂದು ಸಮಸ್ಯೆಗೆ ಚಿಂತೆ ಮಾಡುವುದು ಪರಿಹಾರವಲ್ಲ ಬದಲಾಗಿ ಆ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುತ್ತಾ ಸಾಗುವುದೇ ಮನುಷ್ಯ ಧರ್ಮವಾಗಬೇಕು ಕಾರಣ … Read more

ಸಂತೆಗಳೆಲ್ಲ ಮತ್ತೆ ತುಂಬಿ ಕಂಗೊಳಿಸುವುದೇ: ವಿಜೇತ ಮಳಲಗದ್ದೆ

ಲಾಕ್ ಡೌನ್, ಸೀಲ್ ಡೌನ್, ಕ್ವಾರಂಟೈನ್, ಕಂಟೈ ನ್ಮೆಂಟ್ ಝೋನ್, ರೆಡ್, ಗ್ರೀನ್, ಆರೇಂಜ್ ಝೋನ್ ಇವೆಲ್ಲ ಈ ಎರಡೂವರೆ ತಿಂಗಳಿಂದ ಪ್ರತಿದಿನ ಕೇಳಿ ಬರುತ್ತಿರುವ ಪದಗಳು. ಬಹುಶಃ ಹಿಂದೆಂದೂ ಕಂಡಿರದಂತಹ ನಿಗೂಢತೆ ಬೆಚ್ಚಿಬೀಳಿಸುವ ಭಯ ಜನರಲ್ಲಿ ಆವರಿಸಿದೆ. ಇಡೀ ವಿಶ್ವಕ್ಕೆ ವಿಶ್ವವೇ ಕೊರೋನಾ ಮಾರಿಯಿಂದ ತತ್ತರಿಸಿದೆ. ಒಂದು ಕಡೆ ಜನರ ಜೀವದ ಪ್ರಶ್ನೆಯಾದರೆ ಮತ್ತೊಂದು ಕಡೆ ಜೀವನದ ಪ್ರಶ್ನೆ. ನಮಗೆ ಎರಡೂ ಮುಖ್ಯವಾದುದೆ. ಜೀವ ಜೀವನದ ಮಧ್ಯೆ ತೂಗುಗತ್ತಿಯ ಮೇಲೆ ನೇತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಜೀವವನ್ನು … Read more

ಮುಂದಿನ ಪೀಳಿಗೆಯ ಭವಿಷ್ಯವನ್ನು ಕಿತ್ತುಕೊಳ್ಳದಿರೋಣ !: ನಿಂಗಪ್ಪ ಹುತಗಣ್ಣವರ

ನಿಸರ್ಗವು ನಮ್ಮ ಆಸೆಗಳನ್ನು ಪೂರೈಸುತ್ತದೆ, ನಮ್ಮ ದುರಾಸೆಗಳನ್ನಲ್ಲ ! ಗಾಂಧೀಜಿಯವರ ಈ ಮಾತನ್ನು ನಾವು ಅರ್ಥೈಸಿಕೊಳ್ಳದೆ ಹೋದರೆ ಇಡೀ ಭೂಮಿಯನ್ನು ನಾವು ಅಂತ್ಯದೆಡೆಗೆ ಕೊಂಡುಯ್ಯುತ್ತೇವೆ. ಇದು ನನ್ನ ಗೆಳತಿ ಭೂಮಿಯ ಮಾತು. ಹೌದು ನಿಜಕ್ಕೂ ಗಂಭೀರವಾಗಿ ಯೋಚಿಸಬೇಕಾದ ಸಂಗತಿಯಿದು. ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಏರುತ್ತಿದೆ ಆದರೂ ಕಾರ್ಖಾನೆಗಳು ಹೊಗೆಯುಗುಳುತ್ತಿವೆ, ವಾಹನಗಳು ಇಂಧನವನ್ನು ಸುಡುತ್ತಲಿವೆ. ಬದುಕಲು ಆಮ್ಲಜನಕ ಅವಶ್ಯಕವೆಂದು ತಿಳಿದಿದ್ದರೂ ಒಂದು ಸಸಿಗೆ ನೀರುಣಿಸಲಾಗದಷ್ಟು ಅವಿಶ್ರಾಂತರಾಗಿ ದುಡಿಯುವವರ ಹಾಗೆ ನಡೆದುಕೊಳ್ಳಿತ್ತಿದ್ದೇವೆ. ಮತ್ತೊಂದು ಪರಿಸರ ದಿನವನ್ನು ನಾವು ಆಚರಿಸಿ … Read more

“ಬದುಕಿಗೊಂದು ಹೊಸ ಆಯಾಮವಿರಲಿ”: ಸುಧಾ ಹುಚ್ಚಣ್ಣವರ

ಬದುಕು ಆ ದೇವರು ಕರುಣಿಸಿದ ಅತ್ಯಮೂಲ್ಯ ಕಾಣಿಕೆ ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಮಾನವ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ ಹಾಗೆಯೇ ಅವನ ಬದುಕಿನ ಶೈಲಿ ಇತರ ಪ್ರಾಣಿ ಪಕ್ಷಿಗಳಿಗಿಂತ ಸುಧಾರಿಸಿದೆ. ಪ್ರಕೃತಿಯ ಆಗುಹೋಗುಗಳ ಜೊತೆಗೆ ಕಾಲಕ್ಕೆ ತಕ್ಕಂತೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಎಲ್ಲ ರೀತಿಯ ಬದಲಾವಣೆಯ ಜೊತೆಗೆ ಮನುಷ್ಯನ ಜೀವನ ಸಾಗುತ್ತಾ ಬಂದಿದೆ. ಅನಾದಿ ಕಾಲದಿಂದ ಇಂದಿನವರೆಗೆ ಹಲವಾರು ಆಯಾಮಗಳಲ್ಲಿ ವ್ಯತ್ಯಾಸಗಳನ್ನು, ವೈಪರೀತ್ಯಗಳನ್ನು, ಬದಲಾವಣೆಗಳನ್ನು, ಸುಧಾರಣೆಗಳನ್ನು ಕಾಣುತ್ತಾ ಬಂದಿದ್ದಾನೆ. “ಬೆದಕಾಟ ಬದುಕೆಲ್ಲ ಚಣಚಣವು ಹೊಸಹಸಿವು ಅದಕ್ಕಾಗಿ ಇದಕ್ಕಾಗಿ ಮತ್ತೊಂದು … Read more

ಜೀವ ಉಳಿದರೆ ಜೀವನಕ್ಕೆ ನೂರಾರು ದಾರಿಗಳಿವೆ: ಹೊ.ರಾ.ಪರಮೇಶ್ ಹೊಡೇನೂರು

“ಸಾಹೇಬ್ರೇ ನಮಸ್ಕಾರ್ರೀ…. ಹೆಂಗಾರ ಮಾಡಿ ನಮಗೊಂದೀಟು ಕುಡಿಯಾಕೆ ಅನುಕೂಲ ಮಾಡಿಕೊಡ್ರೀ….ಇಲ್ಲಾಂದ್ರ ಇದೇ ಕೊರಗಲ್ಲಿ ನಿದ್ರಿ, ಊಟ ಏನೂ ಸೇರದೆ ಸತ್ತೇ ಹೋಗಂಗಾಗದ್ರೀ… ನಮ್ಮ ನೋವು ಏಟಾಗಿದಿ ಅಂದ್ರಾ ಕರೋನ ಬಂದು ಸತ್ರೂ ಚಿಂತಿಲ್ಲ, ಏನೋ ಚಟ ಅಂಟಿಸ್ಕೊಂಬಿಟ್ಟೀವಿ, ಎಣ್ಣೀ ಕುಡ್ಕೊಂಡಾರೂ ಜೀವ ಬಿಡ್ತೀವ್ರಿ… ನಮಗೊಂದೀಟು ಉಪಕಾರ ಮಾಡ್ರೀ ಯಪ್ಪಾ…” ಟಿವಿ ಸುದ್ದಿ ವಾಹಿನಿಯ ವರದಿಗಾರರೊಬ್ಬರನ್ನು ಕುಡುಕ ಮಹಾಶಯನೊಬ್ಬ ಎಣ್ಣೆ ಅಂಗಡಿ ಬಾಗಿಲು ತೆಗೆಸಿ ಅಂತ ತನ್ನ ಬೇಡಿಕೆಯನ್ನು ಆಸೆಗಣ್ಣಿನಿಂದ ಮುಂದಿಟ್ಟ ರೀತಿ ಇದು.  “ಎಂತೆಂಥ ವೈರಸ್ ಬಂದಾವೂ … Read more

ರವಿಯು ಮಳೆಮೋಡವನು ಚುಂಬಿಸಿ ಆಗಸದಲಿ ರಂಗಿನ ರುಜು ಹಾಕಿದ: ಭಾರ್ಗವ್‌ ಹೆಚ್.‌ ಕೆ.

ಸಂಜೆ 4 ಗಂಟೆ. . ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳ ಸಂದಣಿ. 8ನೆಯ ತರಗತಿಯಲ್ಲಿ ಕಾಮನಬಿಲ್ಲಿನ ಬಗ್ಗೆ ಪೌರಾಣಿಕ ಕಥೆಯು ಅನುರಣಿಸುತ್ತಿತ್ತು. ಕಥಾಪ್ರಸ್ತುತಗಾರ ನಿಂಗಪ್ಪ ಮಾಸ್ಟರ್, ಲೇ. . ಆಟದ ಹೊತ್ತು ಆಯಿತು. . ಯಾವನಾದ್ರು ಹೋಗಿ ಗಂಟೆ ಹೊಡೀರಿ. ಇಷ್ಟು ಅಂದಿದ್ದೆ ತಡ. . . ಎಲ್ಲರೂ ಕೇ ಹೊ. . ಅಂತ ಮೈದಾನಕ್ಕೆ ತೆರಳಿದರು. ಮಾಳಿಂಗರಾಯನು ಮಾತ್ರ ಕದಲಲಿಲ್ಲ. ಸರ್. . ನಾವು ಏನು ಬೇಕಾದ್ರೂ ಕೇಳ್ತೀವಿ ಅಂತ ಕಾಮನಬಿಲ್ಲು ಬಗ್ಗೆ ಪೌರಾಣಿಕ ಕಥೆ ಹೇಳುತ್ತೀರಿ. ಶೃತಿ … Read more

ರವಿವಾರದ ಸಂತೆ: ವೆಂಕಟೇಶ ಚಾಗಿ

ಇತ್ತೀಚಿನ ವರ್ಷಗಳಲ್ಲಿ ಸಂತೆಗೆ ಹೋಗುವುದೇ ತೀರ ಕಡಿಮೆ ಆಗಿದೆ. ದಿನಬೆಳಗಾದರೆ ತಾಜಾ ತಾಜಾ ತರಕಾರಿಗಳನ್ನು ತರಕಾರಿ ತಮ್ಮಣ್ಣ ತನ್ನ ತಳ್ಳುವ ಗಾಡಿಯಲ್ಲಿ ಮನೆ ಮುಂದೆ ತಂದು ನಿಲ್ಲಿಸ್ತಾನೆ. ಇನ್ನು ಕಿರಾಣಿ ಸಾಮಾನು ಬೇಕಾದ್ರೆ ರಸ್ತೆಯ ಕೊನೆಯಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ಬೇಕಾದಾಗ ತಂದು ಬಿಡುತ್ತೇವೆ. ಡ್ಯೂಟಿಗೆ ಹೋದಾಗ ಹೆಂಡತಿ ಪೋನ್ ಮಾಡಿ “ರೀ , ವಾಟ್ಸ್ಯಾಪ್ ಲಿ ಲಿಸ್ಟ್ ಹಾಕಿದೀನಿ. ಕೆಲಸ ಮುಗಿಸಿ ಬರುವಾಗ ಅದರಲ್ಲಿನ ಸಾಮಾನೆಲ್ಲಾ ತಂದು ಬಿಡಿ.” ಎಂದು ಆದೇಶ ಮಾಡಿಬಿಡುತ್ತಾಳೆ. ಮನೆ ಯಜಮಾನಿ … Read more

ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ . . ?: ಜಯಶ್ರೀ.ಜೆ. ಅಬ್ಬಿಗೇರಿ

ಬಾಳ ದಾರಿಯಲ್ಲಿ ಕೈ ಹಿಡಿದು ನಡೆಸುವ ಬಂಧಗಳ ಶಕ್ತಿ ಅಪರಮಿತವಾದದ್ದು. ಮಗ್ಗಲು ಮುಳ್ಳುಗಳಂತೆ ಚುಚ್ಚುವ ಸಮಸ್ಯೆಗಳು ಹಣಿಯುತ್ತಿರುವಾಗಲಂತೂ ಇವುಗಳು ಸಲುಹುವ ರೀತಿ ಪದಗಳಲ್ಲಿ ಹಿಡಿದಿಡಲಾಗದು. ಇತ್ತಿತ್ತಲಾಗಿ ಸಂಬಂಧಗಳೇ ಮಾಯವಾಗುತ್ತಿವೆ. ಅನ್ನುವ ಮಟ್ಟಿಗೆ ಬದುಕಿನ ಸವಾರಿ ನಡೆಸುತ್ತಿದ್ದೇವೆ. ದೂರ ದೂರ ಸರಿದು ನಿಂತು ಒಂದೊಂದು ಗೂಡಿನಲ್ಲಿ ಜೀವಿಸುತ್ತಿದ್ದೇವೆ. ಸಂಬಂಧಗಳ ಸವಿರುಚಿಯನ್ನು ಸವಿಯುವುದು ಕ್ವಚ್ಚಿತ್ತಾಗಿ ಬಿಟ್ಟಿದೆ. ಈ ಹಿಂದೆ ಸಂಬಂಧಗಳು ನಮ್ಮನ್ನು ಕೂಡು ಕುಟುಂಬದಲ್ಲಿ ಹತ್ತು ಹಲವು ರೀತಿಯಲ್ಲಿ ಆವರಿಸುತ್ತಿದ್ದವು. ಇನ್ನಿಲ್ಲದಂತೆ ಪೋಷಿಸುತ್ತಿದ್ದವು. ಅಜ್ಜ ಅಜ್ಜಿಯರಿಂದ ನೀತಿ ಕಥೆಗಳು ಹೇಳಲ್ಪಡುತ್ತಿದ್ದವು. … Read more

ಮೈ ಫಿರ್ ಭೀ ತುಮ್ ಕೋ ಚಾಹುಂಗಾ…: ಬೀರೇಶ್ ಎನ್ ಗುಂಡೂರ್

ಕಗ್ಗತ್ತಲ ರಾತ್ರಿಗೂ ಒಂದು ಕೊನೆಯುಂಟು. ಅಲ್ಲಿ ಹೊಸ ಬೆಳಕಿನ ಹೊಸ ಚಿಗುರಿನ ಆಶಯ ಉಂಟು. ಕಪ್ಪುಗಟ್ಟಿ ಆರ್ಭಟಿಸಿ ಸುರಿಯುವ ಮಳೆಯು ಕೂಡ ಒಂದರೆ ಕ್ಷಣ ಯೋಚಿಸಿ ರಂಗುರಂಗಿನ ಕಾಮನಬಿಲ್ಲಿನ ಅಂದವನಿಕ್ಕುತ್ತದೆ. ಆದರೆ ಆ ನಿನ್ನ ಓರೆನೋಟದ ಬಿಸುಪು ಮಾತ್ರ ಇನ್ನೂ ಕರುಣೆ ತೋರುತ್ತಿಲ್ಲ ನೋಡು. ದಿನವೂ ಖಾಲಿ ಮಾಡಿಕೊಳ್ಳುವ ಚಂದಿರನ ಕಾಂತಿಗೂ ಹೊಟ್ಟೆ ಕಿಚ್ಚುಪಡುವಷ್ಟು ಕಾಂತಿಯನ್ನು ಕಣ್ಣಲ್ಲೇ ಕಾಪಿಟ್ಟುಕೊಂಡಿದ್ದೀಯಾ. ನನ್ನ ಕೆಣಕಲೆಂದೆ ಆ ನೀಳ ಹುಬ್ಬುಗಳ ಸಂಗ ಬೆಳೆಸಿದ್ದೀಯ. ಮುಂಗುರುಳ ಸರಿಸಿ ಸರಿಸಿ ಆ ಮೂಗುತಿಗೆ ಅಷ್ಟು … Read more

ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ: ನಾಗೇಶ್ ಪ್ರಸನ್ನ.ಎಸ್.

ಓದಿಕೊಂಡಿದ್ದನ್ನೆಲ್ಲಾ ಬರೆಯಲಾಗುವುದಿಲ್ಲ, ಅರಿತುಕೊಂಡಿದ್ದನ್ನಷ್ಟೇ ಬರೆಯಲಾಗುವುದು. ಅದಲ್ಲದೇ, ಅರಿತುಕೊಂಡ ಎಷ್ಟೋ ವಿಷಯಗಳಲ್ಲಿ ಕೆಲವು ಮರೆತು ಹೋಗುವುದೂ ಉಂಟು. ಮರೆತ ವಿಷಯಗಳನ್ನು ಜ್ಞಾಪಿಸಿಕೊಂಡು ಬರೆಯುವುದು ಮಾತ್ರ ಕೆಲವೇ ಕೆಲವು. ಅಂತಹ ಕೆಲವು ವಿಷಯಗಳನ್ನು ಬರೆಯಲೆತ್ನಿಸಿದಾಗಲೇ ತಿಳಿದುಕೊಂಡಿರುವುದು ಎಷ್ಟೆಂದು ತಿಳಿಯುವುದು. ಈ ಒಂದೆರಡು ವಿಷಯಗಳನ್ನು ತಿಳಿದ ಮೇಲೂ #ಏನು ಬರೆಯಬೇಕೆಂಬುದೇ ಗೊತ್ತಾಗುತ್ತಿಲ್ಲ# ನಾವು ಮೊದಲೇ ಸಿದ್ಧರಿರುತ್ತೇವೆ. ಯಾವ ವಿಷಯದ ಬಗ್ಗೆ ಬರೆಯಬೇಕು, ಯಾವ ಅಂಶಗಳನ್ನು ಬರೆಯಬೇಕು, ಯಾವ ಅಳತೆಯಲ್ಲಿ ಬರೆಯಬೇಕು ಮತ್ತು ಇತ್ಯಾದಿ. ಬರವಣೆಗಯಲ್ಲಿ ಶುದ್ಧತೆಯ ಜೊತೆಗೆ ಪಕ್ವತೆ ಇರಬೇಕು. ಬರೆಯುತ್ತಿರುವ … Read more

ಪ್ರೀತಿಯ ದೇವತೆಗಾಗಿ……: ಜಹಾನ್ ಆರಾ

ನನ್ನ ಮುದ್ದು ಮಮ್ಮಿ ಜಾನ್‍ಗೆ ನನ್ನ ಮನದಾಳದಿಂದ ಪ್ರೀತಿ ತುಂಬಿದ ಒಂದು ಸಲಾಮ್. ಅಮ್ಮೀಜಾನ್ ತುಂಬಾ ನೆನಪಾಗ್ತಿದ್ದೀರಾ ನಿಮ್ಮ ಮಡಿಲಿಗೆ ಹಾಗೆ ಓಡಿ ಬಂದು ಮಗುವಾಗಿ ನೆಮ್ಮದಿಯ ತುಸು ಗಳಿಗೆ ಕಳಿಬೇಕು ಅಂತಾ ಅನಿಸ್ತಿದೆ ಆದರೆ ಏನ್ಮಾಡಲಿ ನಿಮ್ಮಿಂದ ನನ್ನನ್ನು ಬಹಳ ದೂರಕ್ಕೆ ಕಳಿಸಿದ್ದೀರಾ. ಮಮ್ಮೀಜಾನ್ ನೆನ್ನೆ ಒಂದು ಪದ್ಯ ಓದ್ದೆ ಸುಭದ್ರಕುಮಾರಿ ಚೌಹಾನ್ ‘ಮೈ ಬಚ್‍ಪನ್ ಕೊ ಭೂಲ್ ರಹಿತಿ ಬೋಲ್ ಉಲಿ ಬಿಟಿಯಾ ಮೇರಿ’ ‘ನಂದನ ವನಸಿ ಖಿಲ್ ಉಟ್ಟಿ ಯಹ ಛೋಟಿಸಿ ಕುಟಿಯಾ … Read more

“ಮಾನಸ ಗುರುವಿಗೆ ನನ್ನ ನಮನ”: ಶ್ರೀ ಕೊಯಾ

” ಮನೋರಮಾ ಮನೋರಮಾ ಮಲಗೋಬದ ಘಮ ಘಮ ” ನಾನು ಅದುವರೆವಿಗೂ ಹೈಸ್ಕೂಲು ದಿನಗಳಲ್ಲಿ ಕೇಳಿ, ಕಲಿತ ಪದ್ಯಗಳಿಗಿಂತಲೂ ಭಿನ್ನವಾಗಿದ್ದ ಪದ್ಯ ಇದಾಗಿತ್ತು. ಕಾಲೇಜಿನ ಮೆಟ್ಟಿಲು ಏರಿದ್ದ ದಿನಗಳವು : ಇಸವಿ ೧೯೭೬ , ದ್ವಿತೀಯ ಪಿಯುಸಿ. ನನಗೆ ನಿಸಾರ್ ಅಹಮದ್ ರವರಂತಹ ಕವಿಯ ಪರಿಚಯ ಮಾಡಿಸಿದ್ದು ಅಂದಿನ ಕನ್ನಡ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಬಸವರಾದ್ಯರು. ಅಂದಿನ ದಿನಗಳಲ್ಲಿ ತಾಲೂಕ್ ಆಗಿದ್ದ ಚಾಮರಾಜನಗರದ ಕಾಲೇಜಿನಲ್ಲಿ ಕೇವಲ ಮೂವತ್ತು ವಿದ್ಯಾರ್ಥಿಗಳ ವೃಂದಕ್ಕೆ ; ಪಂಪ , ರನ್ನ , ಕುವೆಂಪು … Read more

ನಿತ್ಯೋತ್ಸವ ಮತ್ತು ನಾನು : ಉಷಾ ನರಸಿಂಹನ್

ಬದುಕಿನಲ್ಲಿ ಎಲ್ಲದಕ್ಕು ಮೊದಲೆಂಬುದಿರುತ್ತದೆ. ಭಾವಗೀತೆ ಕೇಳುವುದಕ್ಕು… ಸಾವಿರದೊಂಬೈನೂರ ಎಂಬತ್ತನೆ ಇಸವಿ. ನಮ್ಮ ಮನೆಗೆ ನಿತ್ಯೋತ್ಸವ ಕ್ಯಾಸೆಟ್ ತಂದರು. ಎಲ್ಲರ ಸಮಕ್ಷಮ ಟೇಪ್ ರೆಕಾರ್ಡರ್ ನಲ್ಲಿ ಹಾಕಿದರು. ನಾನು ಭಾವಗೀತೆಗಳನ್ನು ಕೇಳಿದ ಮೊದಲ ಬಾರಿಯದು. ಕವಿಯೇ ಕಾವ್ಯಸಾರಾಂಶ ಹೇಳಿದ ಪರಿ ಅನನ್ಯ. ಮನೋಜ್ಞ ಸಾಹಿತ್ಯ, ಸಂತುಲಿತ ರಾಗಸಂಯೋಜನೆ, ರತ್ನಮಾಲಾಪ್ರಕಾಶ್ ಅವರ ಮಧುಸಿಂಚಿತ ನುಣ್ದನಿ, ಮೈಸೂರು ಅನಂತಸ್ವಾಮಿ ಅವರ ಭಾವಪೂರ್ಣಗಾಯನ… ನಾನು ಹಾಡಿಗೆ ಪರವಶವಾದ ಮೊದಲ ಸಲವದು. ಬದುಕಿನಲ್ಲಿ ವಸಂತ ಅಡಿಯಿಡುತ್ತಿದ್ದ ರಮ್ಯಕಾಲದಲ್ಲಿದ್ದೆ! ನವಿರು, ಪುಳಕ, ತವಕಗಳಿಗೆ ಹಾತೊರೆಯುತ್ತಿದ್ದ ಮೈ … Read more

ಕಾರ್ಮಿಕರ ಅಳಲು: ಸುನಿತಾ. ಎಸ್. ಪಾಟೀಲ

ಎಲ್ಲರೂ ಮಾಡುವುದು ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಪದವನ್ನು ನಾವೆಲ್ಲರೂ ಕೇಳಿದ್ದೇವೆ. ಕೇಳಿ ತಲೆದೂಗಿದ್ದೇವೆ. ನಾವೆಲ್ಲಾ ಒಂದಲ್ಲಾ ಒಂದು ಉದ್ಯೋಗ ಮಾಡುತ್ತೇವೆ ಹಣಗಳಿಸುತ್ತೇವೆ. ಹೊಟ್ಟೆ ಮತ್ತು ಬಟ್ಟೆಗಾಗಿ ಸಂಪಾದನೆ ಮಾಡುತ್ತೇವೆ ಹಾಗಾದರೆ ನಮ್ಮ ಉದ್ಯೋಗದ ಉದ್ದೇಶ ಇಷ್ಟೇನಾ? ಹೊಟ್ಟೆ ತುಂಬಲು ದುಡಿಯುವುದು ಕಣ್ತುಂಬಾ ನಿದ್ದೆ ಮಾಡುವುದು, ಕೆಲಸಗಳು ಪ್ರಾರಂಭಿಸುವಾಗ ಬಹು ಕಷ್ಟವೆನಿಸುತ್ತದೆ ನಿಜ, ಆದರೆ ಒಂದು ಕಡೆ ಸಿದ್ದಯ್ಯ ಪುರಾಣಿಕರು ಹೇಳುವಂತೆ ‘ಸುಲಭವಾದದ್ದೆಲ್ಲಾ ಶುಭಕರವಲ್ಲ; ಕಷ್ಟವಾದದೆಲ್ಲ ಕಷ್ಟಪರವಲ್ಲ, ಎಂದು ಭಾವಿಸಿ, ಪ್ರಾರಂಭದಲ್ಲಿ ಕಷ್ಟವೆನಿಸಿದರೂ ಪರಿಣಾಮದಲ್ಲಿ ಫಲಪ್ರದವಾಗಿರುತ್ತದೆ ಎಂಬ … Read more

ಅಂತರ್ಜಾಲ ಬಳಸಿ ಪಾಠಬೋಧನೆ: ವೈ. ಬಿ. ಕಡಕೋಳ

ಕೊರೋನಾ ಬಂದಿದ್ದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಪರಿವರ್ತನೆಗೆ ನಾಂದಿಯಾಗಿದೆ. ಅದು ಅಂತರ್ಜಾಲ ಬಳಸಿ ಮನೆಯಿಂದಲೇ ಪಾಠವನ್ನು ಬೋಧನೆ ಮಾಡುವ ಮೂಲಕ ಎಲ್ಲರೂ ಈಗ ಅಂತರ್ಜಾಲ ಬಳಸುವ ಅನಿವಾರ್ಯತೆ ಎದುರಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಟೆಲಿ ಎಜುಕೇಶನ್ ಈಗಾಗಲೇ ಸೀಮಿತ ಶಾಲೆಗಳಿಗೆ ಬಂದಿತ್ತು. ಅಲ್ಲಿ ಕಂಪ್ಯೂಟರ ಮತ್ತು ಅಂತರ್ಜಾಲ ಸೌಕರ್ಯ ಬ್ಯಾಟರಿ ಇತ್ಯಾದಿ ಪರಿಕರಗಳನ್ನು ನೀಡಲಾಗಿತ್ತು. ಆ ರೀತಿ ವೇಳಾಪಟ್ಟಿಯ ಮೂಲಕ ಪಾಠಬೋಧನೆ ಕೂಡ ಸಾಗಿತ್ತು. ಹಾಗೆಯೇ ಹಲವಾರು ಸಭೆಗಳು ತರಭೇತಿಗಳು ಕೂಡ ಅಂತರ್ಜಾಲ ಬಳಸಿ ಸೆಟ್ ಲೈಟ್ … Read more

ಬಂಧಗಳು, ಸಂಬಂಧಗಳು. ಸತ್ಯ… ಆದರೆ ಶಾಶ್ವತ ಅಲ್ಲ… : ಭಾರ್ಗವಿ ಜೋಶಿ

ಬದುಕಿನ ದೋಣಿಯ ಪಯಣದಲ್ಲಿ ಹಲವಾರು ರೀತಿಯ ಬಂಧಗಳು, ಸಂಬಂಧಗಳು ಬೆಸೆದಿರುತ್ತವೆ. ಕೆಲವು ಗಟ್ಟಿಯಾಗಿ ಬೇರೂರಿರುತ್ತವೆ ನಮ್ಮ ಮನಸಲ್ಲಿ ಮತ್ತು ಜೀವನದಲ್ಲಿ. ಕೆಲವು ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ಹುಟ್ಟಿದಾಗ ಜೊತೆಯಲ್ಲಿ ಬಂದ ಸಂಬಂಧಗಳನ್ನು ರಕ್ತ ಸಂಬಂಧಗಳು ಎನ್ನುತ್ತೇವೆ. ಅವು ಎಂದಿಗೂ ಮಾಸದವು. ಬೇಕಾಗಲಿ, ಬೇಡವಾಗಲಿ ಮುಗಿಯದ ಅನುಬಂಧ ಅದು. ಯಾವುದೊ ಕೋಪ, ಬೇಜಾರು ಏನೇ ಬಂದ್ರು ಮತ್ತೆ ಸ್ವಲ್ಪ ಸಮಯಕ್ಕೆ ತಾನಾಗೇ ಎಲ್ಲ ಮರೆತು ಬೆಸೆವಂತೆ ಮಾಡುತ್ತದೆ. ಕೆಲವು ಸಂಬಂಧಗಳು ಎಂದೂ ಬೆಸೆಯದ ಹಾಗೆ ದ್ವೇಷ … Read more

ಕೈಯಲ್ಲಿ ಏಳು ಡಾಲರ್ ಹಿಡಿದು ಸ್ವಾಮೀಜಿ ಹೊರಟೇ ಬಿಟ್ಟರು : ಅಭಿಜಿತ್. ಎಮ್

ಇಸ್ಕಾನ್(ISKCON). ಈ ಸಂಸ್ಥೆಯ ಹೆಸರು ನೀವೆಲ್ಲರೂ ಕೇಳಿರಬಹುದು. ಇಂದು ಹೊರದೇಶಗಳಲ್ಲಿಯೂ ಹಿಂದೂ ಮಂದಿರಗಳಿವೆ ಎಂದರೆ, ಅದಕ್ಕೆ ಇಸ್ಕಾನ್ ಸಂಸ್ಥೆಯ ಕೊಡುಗೆ ಅಪಾರ. ಆದರೆ ಈ ಸಂಸ್ಥೆಯ ಸ್ಥಾಪಕರ ಬಗ್ಗೆ ಭಾರತದಲ್ಲಿಯೇ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗಲೋ ಅಥವಾ ಜಾತ್ರೆಗಳಲ್ಲಿಯೋ ಅಥವಾ ಪುಸ್ತಕ ಮೇಳಗಳಲ್ಲಿಯೋ ಖಾದಿ ತೊಟ್ಟು, ತಲೆ ಹಿಂದೆ ಜುಟ್ಟು ಇರಿಸಿ, ಹಣೆ ಮೇಲೆ ಗಂಧದ ತಿಲಕವನ್ನು ಇಟ್ಟುಕೊಂಡು ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ಮಾರಾಟ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಇವರ ಎಲ್ಲಾ … Read more

ಉರಿಯುವ ಒಲೆಯೂ ಮತ್ತು ಹೊಳೆಯುವ ನಕ್ಷತ್ರವೂ ! : ಈರಮ್ಮ ಹಾವರಗಿ

ಈ ಬದುಕು ಕೇವಲ ಅನಿಶ್ಚಿತತೆಗಳ ನಡುವೆಯೇ ಕಳೆದು ಹೋಗಿ ಬಿಡುತ್ತದೆನೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಏನನ್ನು ಸಾಧಿಸಲಾಗದೆ, ಅಂದುಕೊಂಡಂತೆ ಬದುಕಲಾಗದೆ ಜೀವನ ವ್ಯರ್ಥವಾದರೆ ಹೇಗೆ ? ಎಂಬ ನನ್ನ ಮನದ ದುಗುಡವನ್ನು ಹೇಳುವುದಕ್ಕೂ ಆಗದ ಪರಿಸ್ಥಿತಿ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ, ಜೊತೆಗೆ ಮದುವೆ,ಮಕ್ಕಳು, ಸಂಸಾರವೆಂಬ ಸಮಾಜದ ಕಟ್ಟು ಪಾಡುಗಳಿಗೆ ಹೆದರಿದ್ದೇನೆ. ಹಾಗಂತ ನಾನು ಅದನ್ನೆಲ್ಲ ವಿರೋಧಿಸುತ್ತಿಲ್ಲ. ನಮ್ಮ ಕನಸುಗಳಿಗೆ ಬೆಲೆ ಕೊಡದೆ ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡಲಾಗುತ್ತಿದೆ, ಚಿಕ್ಕ ವಯಸ್ಸಿನಲ್ಲಿಯೆ ಮದುವೆ ಮಾಡಲಾಗುತ್ತಿದೆ. ನಮ್ಮ … Read more

ನೈಸರ್ಗಿಕ ಸಂಪನ್ಮೂಲಗಳ ಬಳಕೆ: ಎಂ.ಎಚ್.ಮೊಕಾಶಿ

ಭೂಮಿಯು ಸೌರವ್ಯೂಹದ ನವಗ್ರಹಗಳಲ್ಲಿ ಒಂದು ವಿಶಿಷ್ಟ ಗ್ರಹವಾಗಿದೆ. ಇದರಲ್ಲಿ ಗಾಳಿ, ನೀರು, ಬೆಳಕು, ಮಣ್ಣು, ತೇವಾಂಶ ಮೊದಲಾದವುಗಳು ಜೀವಿಗಳು ವಾಸಿಸಲು ಅನುಕೂಲವಾದ ವಾತಾವರಣದ ಆವಾಸವನ್ನು ಸೃಷ್ಟಿಸಿವೆ. ಇದುವರೆಗಿನ ಸಂಶೋಧನೆಯಿಂದ ಸೌರವ್ಯೂಹದಲ್ಲಿ ಏಕಕೋಶ ಸೂಕ್ಷ್ಮ ಜೀವಿಯಾದ ಅಮೀಬಾದಿಂದ ಹಿಡಿದು ಜೀವವಿಕಾಸದ ಶೃಂಗದಲ್ಲಿರುವ ಮಾನವನವರೆಗಿನ ಜೀವಿಗಳಿರುವ ಏಕೈಕ ಗ್ರಹವೆಂದರೆ ಭೂಮಿಯೊಂದೇ ಆಗಿದೆ. ಭೂಮಿಯು ಅನೇಕ ನೈಸರ್ಗಿಕ ಸಂಪನ್ಮೂಲಗಳ ಆಗರ. ಸಾಮಾನ್ಯವಾಗಿ ಮಾನವನ ಅಭಿವೃದ್ಧಿಗಾಗಿ ಮಾನವರ ಉತ್ಪಾದನಾ ಕ್ರಿಯೆಗಳಲ್ಲಿ ಬಳಕೆಯಾಗುವ ನೈಸರ್ಗಿಕ ಪದಾರ್ಥಗಳನ್ನೆಲ್ಲಾ ನೈಸರ್ಗಿಕ ಸಂಪನ್ಮೂಲಗಳೆನ್ನುವರು. ಗಾಳಿ, ನೀರು, ಸೂರ್ಯನರಶ್ಮಿ, ಅರಣ್ಯ, … Read more

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ: ವೈ. ಬಿ. ಕಡಕೋಳ

ನಾವೆಲ್ಲ ಬಸವಜಯಂತಿ ಬಂದಾಗ ಬಸವಣ್ಣನವರ ಬದುಕಿನ ವ್ಯಕ್ತಿತ್ವ ಕುರಿತು ಮಾತನಾಡುತ್ತೇವೆ. ಹಾಗಾದರೆ ಈ ಬಸವ ಜಯಂತಿ ಆಚರಣೆ ಮೊದಲು ಮಾಡಿದವರ ನೆನಪನ್ನು ಈ ಸಂದರ್ಭದಲ್ಲಿ ನೆನೆಯುವುದು ಸೂಕ್ತವಲ್ಲವೇ. ? ಹರ್ಡೆಕರ ಮಂಜಪ್ಪನವರು ದಾವಣಗೇರೆಯಲ್ಲಿದ್ದಾಗ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳ ಒಡನಾಟ ಅಲ್ಲಿನ ಮಠದಲ್ಲಿ ಭಜನಾಸಂಘ ಮಾಡಿ ಪ್ರತಿ ಸೋಮವಾರ ಭಜನೆ ಮಾಡುವುದನ್ನು 26-6-1911 ರಲ್ಲಿ ಆರಂಭಿಸುತ್ತಾರೆ. ಹಾಗೆಯೇ ಶ್ರಾವಣ ಮಾಸೋಪನ್ಯಾಸಮಾಲಾ ಕಾರ್ಯಕ್ರಮ ಕೂಡ ಮಾಡುತ್ತಾರೆ. ನಂತರ 1913 ರಲ್ಲಿ ವೈಶಾಖ ಶುದ್ಧ ರೋಹಿಣಿ … Read more

ಗೃಹ ಬಂಧನದ ಸದ್ಬಳಕೆ: ಸೂರಿ ಹಾರ್ದಳ್ಳಿ

ಕೊರೋನಾ ಮಾರಿಯಿಂದಾಗಿ ಭಾರತದಲ್ಲಿ ಲಾಕ್‍ಡೌನ್ ಅನುಭವಿಸಬೇಕಾಗಿ ಬಂದಿದೆ. ನಾಲ್ಕು ಗೋಡೆಗಳ ನಡುವೆ ಬಂಧಿಯಾಗಿರಬೇಕಾಧ ಇಂತಹ ಸಂದರ್ಭಗಳಲ್ಲಿಯೂ ನಮ್ಮ ಸಮಯವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದಕ್ಕೆ ಕೆಲ ಟಿಪ್ಸ್‍ಗಳು ಇಲ್ಲಿವೆ. ನಿಮ್ಮ ಸಂಬಂಧಿಕರ, ಗೆಳೆಯರ, ಶತ್ರುಗಳ ಹೆಸರಿನ ಪಟ್ಟಿ ಮಾಡಿ. ಅವರ ವಿಳಾಸಗಳು, ದೂರವಾಣಿ ಸಂಖ್ಯೆಗಳು, ಇ-ಮೈಲ್ ಐಡಿಗಳು, ಇವನ್ನೆಲ್ಲಾ ಸಂಗ್ರಹಿಸಿ ನಿಮ್ಮ ಕಂಪ್ಯೂಟರಿನಲ್ಲಿ ಅಥವಾ ಪುಸ್ತಕಗಳಲ್ಲಿ ಬರೆದಿಡಿ. ಅರೆರೆ, ಇವರ ಸಂಖ್ಯೆ ಇಷ್ಟೊಂದಿದೆಯೇ ಎಂಬ ಅಚ್ಚರಿ ನಿಮಗಾಗಿಯೇ ಆಗುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಅವಶ್ಯಕ ಕೆಲಸಗಳಿಗೆ ಬೇಕಾದವರ ಹೆಸರನ್ನು … Read more