ಸಮಾನತೆಯ ಸಂಧಿಕಾಲದಲ್ಲಿ

ನಂಬಿಕೆ ದ್ರೋಹ ಮತ್ತು ದ್ವೇಷದ ಕಥಾನಕ- ಹ್ಯಾಮ್ಲೆಟ್: ನಾಗರೇಖ ಗಾಂವಕರ

ಆತ ಪ್ರಿನ್ಸ್ ಹ್ಯಾಮ್ಲೆಟ್ ಕಪ್ಪು ಬಟ್ಟೆ ಧರಿಸಿದ ಆತ ಮಾನಸಿಕವಾಗಿ ದ್ವಂದ್ವ ಸ್ಥಿತಿಯಲ್ಲಿದ್ದಾನೆ. ಅಷ್ಟೇ ಅಲ್ಲ ರೊಚ್ಚಿಗೆದ್ದಿದ್ದಾನೆ. ಕಾರಣ ತಂದೆ ಡೆನ್ಮಾರ್ಕನ ರಾಜ ಹ್ಯಾಮ್ಲೆಟ್ ಸಾವನ್ನಪ್ಪಿದ್ದಾರೆ. ತಾಯಿ ರಾಣಿ ನಾಚಿಕೆಯಿಲ್ಲದೇ ನಿಷ್ಠೆ ಇಲ್ಲದೇ ಮರುವಿವಾಹವಾಗಿದ್ದಾಳೆ. ಅದು ರಾಜಕುಮಾರನಿಗೆ ಇಷ್ಟವಿಲ್ಲ. ಆಕೆ ಹಾಗೆ ಮಾಡಿದ್ದು ತನ್ನ ತಂದೆಗೆ ಮಾಡಿದ ದ್ರೋಹವೆಂದೆನ್ನಿತ್ತದೆ.ಹಾಗಾಗಿ ಆತನ ಒಳಗುದಿ ಕುದಿಯುತ್ತಿರುವುದು ಬರಿಯ ತಂದೆಯ ಸಾವಿನಿಂದಲ್ಲ. ಬದಲಿಗೆ ತಾಯಿಯ ಮರುವಿವಾಹ ಅದೂ ತನ್ನ ಚಿಕ್ಕಪ್ಪ ಕ್ಲಾಡಿಯಸ್ ನೊಂದಿಗೆ ಹಾಗೂ ಆತ ರಾಣಿ ಗೆರ್ಟ್ರೂಡ್ ಳನ್ನು ಮದುವೆಯಾಗಿ […]

ಸಮಾನತೆಯ ಸಂಧಿಕಾಲದಲ್ಲಿ

ಕೀರ್ತನ ಸಾಹಿತ್ಯದಲ್ಲಿ ಸಾಮಾಜಿಕ ವಿಡಂಬನೆ: ನಾಗರೇಖಾ ಗಾಂವಕರ

ಸಾಹಿತ್ಯ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಕನಸು ಮೂಡಿಸುವ ಶಕ್ತತೆಯುಳ್ಳದ್ದು, ಹಾಗೇ ಅಪ್ರಜ್ಞಾಪೂರ್ವಕ ನೆಲೆಯಲ್ಲೂ ಮೂಡಿ ಬೆರಗು ಹುಟ್ಟಿಸುವಂತಹುದು. ಕಾವ್ಯ ಹುಟ್ಟುವ ಇಲ್ಲ ಕಟ್ಟುವ ಸಮಯದಲ್ಲಿ ಅದು ಒಳ್ಳಗೊಳ್ಳಬೇಕಾದ ಸಂಗತಿಗಳನ್ನು ಪರಿಕರಗಳನ್ನು ಕುರಿತು ವಿಶ್ಲೇಷಿಸಿದರೆ ಅದು ಕಾವ್ಯ ಮೀಮಾಂಸೆ, ಹಾಗೇ ಪ್ರಾಚೀನ ಕಾಲದ ಸಾಹಿತ್ಯದ ರೂಪುರೇಷೆಗಳ ಕುರಿತು ಇಲ್ಲ ಆ ಕಾಲದ ಕಾವ್ಯದ ಮುಖೇನ ಆ ಯುಗದ ಸಾಮಾಜಿಕ , ರಾಜಕೀಯ ಧಾರ್ಮಿಕ ಸಂಗತಿಗಳನ್ನು ಜೀವನ ರೀತಿನೀತಿಗಳನ್ನು ಮೌಲ್ಯಗಳನ್ನು ಕುರಿತು ವಿಶ್ಲೇಷಿಸುವುದು ಸಂಶೋಧನೆ. ದಾಸ ಪರಂಪರೆಯಲ್ಲಿ ಕೀರ್ತನೆಗಳ ಮುಖೇನ ವಿಡಂಬನಾತ್ಮಕ […]

ಸಮಾನತೆಯ ಸಂಧಿಕಾಲದಲ್ಲಿ

“ಮುದವಲ್ಲವೇ ಮೌನದಾಲಿಂಗನ”: ನಾಗರೇಖಾ ಗಾಂವಕರ, ದಾಂಡೇಲಿ

“ಸಾಯ್‍ಲೆನ್ಸ  ಇಜ್ ದ್ ಬೆಷ್ಟ್ ಆನ್ಸರ್ ಫಾರ್ ಆಲ್ ಸ್ಟುಪಿಡ್ ಕ್ವೆಶ್ಚನ್ಸ್, ಸ್ಮಾಯ್ಲಿಂಗ ಇಜ್ ದ್ ಬೆಷ್ಟ್ ರಿಯಾಕ್ಷನ್ ಇನ್ ಅಲ್ ಕ್ರಿಟಿಕಲ್ ಸಿಚ್ಯುಯೇಶನ್”. ಎಷ್ಟು ಸುಂದರವಾಗಿ ಹೇಳಿದ್ದಾರೆ ಅಲ್ವೆ? ಮೌನ ಮತ್ತು ಮುಗುಳು ನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ ಮುಗುಳುನಗೆಯ ಮುಖಾರವಿಂದದಲಿ ಮೌನದ ರಿಂಗಣ ಮನಮೋಹಕ. ಬಹಳ ಸಂದರ್ಭಗಳಲ್ಲಿ ಕೆಲವು ಮೂರ್ಖ ಪ್ರಶ್ನೆಗಳಿಗೆ ಮೌನವೇ ಸರಿಯಾದ ಉತ್ತರ. ಹಾಗೆ ಮುಗುಳುನಗೆ ಒಂದು ಉದ್ದಿಪನ ಮಾತ್ರೆಯಂತೆ. ಅತಿ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಷಗಳಲ್ಲಿ […]

ಸಮಾನತೆಯ ಸಂಧಿಕಾಲದಲ್ಲಿ

ಪ್ರಬುದ್ಧ ಸಾಹಿತಿ –ಡಾ.ಸರಜೂ ಕಾಟ್ಕರ್: ನಾಗರೇಖಾ ಗಾಂವಕರ

ಪತ್ರಕರ್ತನೊಬ್ಬನ ವೃತ್ತಿ ಬದುಕಿನ ಹಾದಿ ಸಂಘರ್ಷಗಳ ಕಲ್ಲುಚಪ್ಪಡಿ ಎಂಬುದನ್ನು ಯಾರೂ ಅಲ್ಲಗಳಿಯುವಂತಿಲ್ಲ. ಎಡತಾಕುವ ವಿಘ್ನಗಳು ಹತ್ತು ಹಲವು. ಬೆದರಿಕೆಗಳ ಹೊದಿಕೆಯೊಳಗೆ ಜೀವವನ್ನು ಕೈಲಿಟ್ಟುಕೊಂಡೇ ಲೋಕದ ಡೊಂಕನ್ನು ಜಗತ್ತಿನ ಕಣ್ಣುಗಳಿಗೆ ರವಾನಿಸಬೇಕಾದ ಅದರಲ್ಲೂ ಸತ್ಯದ ಸೂಡಿ ಹಿಡಿದೇ ನಡೆಯಬೇಕಾದ ಅನಿವಾರ್ಯತೆ ಆತನದು. ಆತನ ವೃತ್ತಿಕ್ಷಮತೆ ಪ್ರಾಮಾಣಿಕವಾಗಿದ್ದಷ್ಟೂ ಆತನ ವೃತ್ತಿ ಶತ್ರುಗಳು, ಹಿತ ಶತ್ರುಗಳು ಹುಟ್ಟಿಕೊಳ್ಳುತ್ತಲೇ ಇರುವರು. ಅಂತಹ ಸಂದಿಗ್ಧ ಜಗತ್ತಿನಲ್ಲಿ ದಿಟ್ಟತನಕ್ಕೆ ಹೆಸರಾದ, ಆಮಿಷಗಳಿಗೆ ಬಲಿಯಾಗದೇ, ಬೆದರಿಕೆಗಳಿಗೆ ಅಂಜದೇ ಕಾರ್ಯನಿರ್ವಹಿಸಿದ ಪತ್ರಕರ್ತ ಡಾ. ಸರಜೂ ಕಾಟ್ಕರ್. ಒಬ್ಬ ಪತ್ರಕರ್ತನಲ್ಲಿ […]

ಸಮಾನತೆಯ ಸಂಧಿಕಾಲದಲ್ಲಿ

ಅಧೀನ ನೆಲೆಯಲ್ಲಿ ಹೆಣ್ತನ: ನಾಗರೇಖಾ ಗಾಂವಕರ

ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ ಬಹಳ ಸಲ ಬಿಡಿಗಾಸನ್ನು ಮನೆಗೆ ಕೊಡದೆ ಮನೆಯಲ್ಲಿ ಉಂಡು ಮಲಗುವ ದಂಡಪಿಂಡ. ಆಕೆ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾಳೆ. ದಿನವೂ ಐದಾರು ಮನೆಗಳ ಕಸ ಮುಸುರೆ ತಿಕ್ಕಿ ತಿಂಗಳೊಂದಕ್ಕೆ ಐದಾರು ಸಾವಿರ ಗಳಿಸುವ ಆಕೆಯ ಕುಟುಂಬಕ್ಕೆ ಸಿಗುವ ಪಡಿತರ ಅಕ್ಕಿ ಕಾಳುಗಳು ಹೇಗೋ ಜೀವನ […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀಯರ -ಸಿದ್ಧ ಮಾದರಿಯ ಸಂವೇದನೆಗಳು: ನಾಗರೇಖಾ ಗಾಂವಕರ

“ನಾನೇ ಮಾಡ್ತೀನಿ, ನೀ ಮಾಡೋದೇನೂ ಬೇಡ,ಎಂದು ಎಷ್ಟು ಹೇಳಿದರೂ ಕೇಳದೇ ದಿನಕ್ಕಾಗುವಷ್ಟು ಅಡುಗೆ ಮಾಡಿಟ್ಟೇ ಹೋಗಿದ್ದಾಳೆ, ಪಾಪ.ಕೆಲವು ವಿಷಯಗಳಲ್ಲಿ ಹೆಣ್ಮಕ್ಕಳು ತೀರಾ ಪೋಸೆಸಿವ್ ಅಲ್ವಾ?”ಎರಡು ದಿನಗಳ ಮಟ್ಟಿಗೆ ತೌರಿಗೆ ಹೊರಟ ಹೆಂಡತಿ ಪತಿಗಾಗಿ ಮುತುವರ್ಜಿಯಿಂದ ಅಲ್ಲಿ ಇಲ್ಲಿ ತಿಂದು ಹೊಟ್ಟೆ ಕೆಡಿಸಿಕೊಳ್ಳಬಾರದೆಂಬ ಕಾರಣದಿಂದ ತೌರಿಗೆ ಹೋಗುವಾಗಲೂ ಒಂದಿಟ್ಟು ಬೇಯಿಸಿಟ್ಟು ಹೋದ ಬಗ್ಗೆ ಪತಿ ಮಹಾಶಯನೊಬ್ಬನ ಅಂಬೋಣ ಇದು. ನನಗಾಶ್ಚರ್ಯ. ತನಗಾಗಿ ಕಾಳಜಿಯಿಂದ ಅಡುಗೆ ಮಾಡಿಟ್ಟು ಹೋದ ಹೆಂಡತಿಗೆ ಪೊಸೆಸಿವ್ ಎಂಬ ಬಿರುದುಕೊಟ್ಟ ಗಂಡಿನ ಬಗ್ಗೆ.ಇದಕ್ಕೆ ಕಾರಣ ಆತನಲ್ಲ. […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀ ದೇಹ –ಅದರ ಅಧಿಪತ್ಯ: ನಾಗರೇಖಾ ಗಾಂವಕರ

ಕೆಲವು ತಿಂಗಳುಗಳ ಹಿಂದೆ ಲಾಹೋರಿನ 16 ವರ್ಷದ ಬಾಲಕಿಯ ಮೇಲೆ ಆಕೆಯ ಕುಟುಂಬಸ್ಥರ ಎದುರೇ ಅತ್ಯಾಚಾರ ನಡೆಸಲಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ ಆ ಬಾಲಕಿಯ ಅಣ್ಣ ಉಮರ್ ವಡ್ಡಾ ಎಂಬಾತ ಅಶ್ಪಾಕ್ ಎಂಬ ಯುವಕನ ತಂಗಿಯ ಮೇಲೆ ಅತ್ಯಚಾರ ಎಸಗಿದ. ಇದನ್ನು ಸೇಡಿಗೆ ತೆಗೆದುಕೊಂಡ ಆ ಯುವಕ ಆತನ ತಂಗಿಯನ್ನು ಆಕೆಯ ಕುಟುಂಬ ಎಲ್ಲರೆದುರೇ ಅತ್ಯಾಚಾರ ಮಾಡಿದ್ದ. ಹೀಗೆ ಮಾಡುವಂತೆ ಅಲ್ಲಿಯ ಗ್ರಾಮ ಮಂಡಳಿಯೇ ತೀರ್ಮಾನ ತೆಗೆದುಕೊಂಡು ಆತನಿಗೆ ಆದೇಶಿಸಿತ್ತು. ಹಾಗೆ ಮಾಡಿದಾಗ ಮಾತ್ರ ಆ ಮತ್ತೊಬ್ಬ […]

ಸಮಾನತೆಯ ಸಂಧಿಕಾಲದಲ್ಲಿ

ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ: ನಾಗರೇಖಾ ಗಾಂವಕರ

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂಕ್ಷೆಯನ್ನು ಹೊತ್ತ ಕಾಲ. ಅದು ಹೆಣ್ಣಿನ ಸಹಜ ಬಯಕೆ. ಅದರಂತೆ ಮನೆವಾಳ್ತೆ ಮುಗಿಸಿ ಆಕೆ ದಿನವೂ ಹೊರದುಡಿಮೆಯಲ್ಲಿ ಬಸವಳಿದು ಬರುವ ಗಂಡನಿಗಾಗಿ ರುಚಿಯಾದ ಅಡುಗೆ ತಿಂಡಿ ಮಾಡಿ ಕಾಯುತ್ತಾಳೆ. ಆತ ಬರುವ ಮುನ್ನ ಪತಿಯ ಆಗಮನ ಇಂದಿಗೆ ತನ್ನ ದಿನವನ್ನು ಹೇಗೆಲ್ಲಾ ಬದಲಾಯಿಸಬಹುದೆಂದು ಕನಸುತ್ತಾಳೆ. ಆ […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀ ಸ್ವತಂತ್ರ ಅಸ್ಥಿತ್ವದ ಅಗತ್ಯತೆ: ನಾಗರೇಖಾ ಗಾಂವಕರ

ಆಧುನಿಕ ಮಹಿಳಾ ಜಗತ್ತು ತನ್ನದೇ ಸ್ವಯಂಕೃತ ಸಾಧನೆಯ ಸರಣಿಯಲ್ಲಿ ಸಾಗಲು ಅತೀ ಜರೂರತ್ತು ಇರುವುದು ಆಕೆಗೆ ಶಿಕ್ಷಣದ ಅಗತ್ಯತೆ. ಶೈಕ್ಷಣಿಕ ಕ್ಷಮತೆಯಲ್ಲಿ ಆಕೆಯ ಹೆಜ್ಜೆಗಳು ದಿಟ್ಟ ದಾಪುಗಾಲು ಹಾಕಬೇಕಿದೆ. ಶೈಕ್ಷಣಿಕ ಅಗತ್ಯತೆತೆ ಅರಿವು ಇನ್ನೂ ಹಲವು ಹಳ್ಳಿಗಳಲ್ಲಿ ಮೂಡಿಲ್ಲ. ಅರ್ಧಕ್ಕೆ ಶಿಕ್ಷಣದಿಂದ ವಂಚಿತರಾಗುವ ಅದೆಷ್ಟೋ ಹುಡುಗಿಯರಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ಅತಿ ಚಿಕ್ಕ ವಯಸ್ಸಿನಲ್ಲಿ ವಿವಾಹಮಾಡಿಕೊಡುವ ಸಂಪ್ರದಾಯಗಳು ನಿಂತಿಲ್ಲ. ಹೆಣ್ಣು ಕಲಿತು ಉದ್ಧಾರ ಮಾಡುವುದು ಅಷ್ಟೇ ಇದೆ. ಮುಸರೆ ತೊಳೆಯುವುದೇನೂ ತಪ್ಪೋಲ್ಲ ಅನ್ನೋ ಮನಸ್ಥಿತಿ ಇಂದಿಗೂ ಜೀವಂತ. ಹಿಂದೆಲ್ಲಾ […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀ ವ್ಯಕ್ತಿತ್ವ ವಿಕಸನದ ಅಡೆತಡೆಗಳು ವಸ್ತ್ರ ಸಂಹಿತೆ- ಗೋಷಾ ಪದ್ಧತಿ: ನಾಗರೇಖಾ ಗಾಂವಕರ

ಬದಲಾವಣೆಯ ಕಾಲಘಟ್ಟದಲ್ಲಿ ಹೆಣ್ಣು ಮತ್ತಾಕೆಯ ಸ್ಥಿತಿಗತಿಗಳ ಬಗ್ಗೆ ಸಮಾನತೆಯ ಬಗ್ಗೆ ಚರ್ಚಿಸುವ ಅದಕ್ಕಾಗಿ ಹೋರಾಟ ನಡೆಸುತ್ತಿರುವ ಉಚ್ಚ್ರಾಯ ಕಾಲವಿದು. ಆದರೆ ಅದರೊಂದಿಗೆ ಆಕೆಯ ಮೇಲಾಗುತ್ತಿರುವ ದೌರ್ಜನ್ಯಗಳ ಪ್ರಮಾಣಗಳೂ ಅಧಿಕವಾಗುತ್ತಿರುವ ಸಂದರ್ಭದಲ್ಲಿ ಧರ್ಮ ಕಾಲ ದೇಶಗಳ ವೈತ್ಯಾಸವಿರದೇ ಇಡೀ ಜಗತ್ತಿನಾದ್ಯಂತ ಈ ಶೋಷಣೆಗಳು ನಡೆಯುತ್ತಲೇ ಇರುವುದು ಕೂಡಾ ದಿನನಿತ್ಯದ ಸಂಗತಿ. ಸ್ತ್ರೀ ಶೋಷಣೆ ಎಂಬ ವಿಚಾರ ಬರಿಯ ಭಾರತದ ಮತ್ತು ಕೇವಲ ಹಿಂದೂ ಧರ್ಮದ ಆಚರಣೆಗಳಲ್ಲಿ ಮಾತ್ರ ಸೀಮಿತವಾಗಿರದೇ ಅದು ವಿಶ್ವವ್ಯಾಪಿಯಾದ ವಿಚಾರ. ಮಹಿಳಾ ಸ್ವಾತಂತ್ರ್ಯಕ್ಕೆ ಆಕೆಯ ಸರ್ವತೋಮುಖ […]

ಸಮಾನತೆಯ ಸಂಧಿಕಾಲದಲ್ಲಿ

ಸ್ಥಾನಮಾನ ಮತ್ತು ಸ್ತ್ರೀ ಸಾಮರ್ಥ್ಯ: ನಾಗರೇಖಾ ಗಾಂವಕರ

ಶ್ರೇಷ್ಟ ತತ್ವಜ್ಞಾನಿ ಕಾರ್ಲಮಾರ್ಕ್ಸ್ ಹೇಳುತ್ತಾನೆ “ಸ್ತ್ರೀಯರ ವಿಮೋಚನೆ ಹಾಗೂ ಎಲ್ಲಿಯರವರೆಗೆ ಸಮಾಜದಲ್ಲಿ ಮಹಿಳೆ ಕ್ರ್ರಿಯಾತ್ಮಕ ಮತ್ತು ಆರ್ಥಿಕ ಮೌಲ್ಯಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಪಡೆಯದೇ, ಅವರ ಚಟುವಟಿಕೆಗಳು ಬರೀಯ ಮನೆಗೆಲಸಗಳಿಗೆ ಸೀಮಿತವಾಗಿ ಉಳಿಯುತ್ತವೆಯೋ, ಅಲ್ಲಿಯವರೆಗೆ ಮಹಿಳೆಯರ ಉದ್ದಾರ ಸಾಧ್ಯವಿಲ್ಲ. ಆಕೆ ಪುರುಷನಿಗೆ ಸಮಾನ ಅವಕಾಶ ಸ್ಥಾನಮಾನಗಳನ್ನು ಪಡೆಯುವುದು ದುಸ್ಸಾಧ್ಯ. ”  ಎನ್ನುತ್ತಾರೆ.  ದ್ವಿತೀಯ ಲಿಂಗಿಯಾಗಿಯೇ ಪರಿಗಣಿಸಲ್ಪಡುವ ಸ್ತ್ರೀಗೆ ಪುರುಷನಿಗೆ ಇರುವ ಸ್ಥಾನಮಾನ ಇಲ್ಲದಿರುವುದಕ್ಕೆ ಕಾರಣ ತಾರತಮ್ಯ ನೀತಿ. ಆಕೆಯ ಸಾಮರ್ಥ್ಯದ ಬಗ್ಗೆ  ಸೃಷ್ಟಿಸಿದ ತಪ್ಪು […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀ ಸಾಮರ್ಥ್ಯ ಮತ್ತು ಅವಕಾಶಗಳು: ನಾಗರೇಖಾ ಗಾಂವಕರ

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಈ ತಿಂಗಳ ಮೊದಲ ವಾರವಷ್ಟೇ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ  ಜವಾಬ್ದಾರಿ ಯಾವುದು ಇಲ್ಲ ಎಂಬುದಕ್ಕೆ  ಸಾಕ್ಷಿಯಾಗುತ್ತಿದ್ದಾರೆ. ಸ್ತ್ರೀ ಜಾಗತಿಕ ರಂಗದಲ್ಲಿ ಪುರುಷನಿಗೆ ಸಮಾನವಾಗಿ ಮಿಂಚುವ ಯಾವ ಸಾಮಥ್ರ್ಯದಲ್ಲೂ ಕಡಿಮೆಯಿಲ್ಲ. ಹಾಗಾಗಿ ಮಹಿಳೆ ಮತ್ತು ಮಹಿಳಾ ಜಗತ್ತು ಇಂದು ವ್ಯಾಪಕ ಅರ್ಥ ಹಾಗೂ ವಿಸ್ತಾರವನ್ನು ಪಡೆದುಕೊಳ್ಳುತ್ತಿದೆ. ಜಾಗತಿಕ ಸಮೀಕ್ಷೆಯ ಪ್ರಕಾರ […]

ಸಮಾನತೆಯ ಸಂಧಿಕಾಲದಲ್ಲಿ

ಲಿಂಗ ಸಾಮರಸ್ಯತೆ  ಮತ್ತು ಸ್ತ್ರೀ ಸಂವೇದನೆ: ನಾಗರೇಖಾ ಗಾಂವಕರ

ನನ್ನೊಳಗಿನ ತುಡಿತಗಳು ಅವನಿಗೆ ಅರ್ಥವಾಗುವುದಿಲ್ಲ. ಅವನದೇನಿದ್ದರೂ ತನ್ನ ಮೇಲುಗಾರಿಕೆಯ ನೆಲೆಯಲ್ಲಿಯೇ ನನ್ನನ್ನು ಉದ್ದರಿಸುವ ನಿಲುವು. ಇದು ಧೀಮಂತ ವ್ಯಕ್ತಿತ್ವ ಎನ್ನಿಸಿಕೊಳ್ಳುವ ಪ್ರತಿಯೊಬ್ಬ ಸಜ್ಜನ ಪುರುಷನ ಲಕ್ಷಣ. ಹೆಣ್ಣು ದುರ್ಬಲೆ ಎಂಬ ಧೋರಣೆಯ ಅಂಚಿನಿಂದ ಆತನಿನ್ನೂ ಹೊರಬಂದಿಲ್ಲ. ಅವಳ ಮಾನಸಿಕ ಸಾಮಥ್ರ್ಯ ತನಗೆ ಮಿಕ್ಕಿದ್ದರೂ ಒಪ್ಪಲಾರ. ಅದು ಅವರಿಬ್ಬರ ಜಗತ್ತಿಗೆ ಅನ್ವಯಿಸಿ ಹೇಳುವಾಗ ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎಂದು ಉದ್ಘರಿಸುವ ಹಲವು ಮುಖಗಳು ಸದಾ ನಮ್ಮ ಸುತ್ತಮುತ್ತ ಸಂಚರಿಸುತ್ತಿರುತ್ತವೆ. ಅದಕ್ಕಾಗೆ ಪ್ರತ್ಯೇಕ ಸ್ತ್ರೀ ಪ್ರಜ್ಞೆಯ ಸ್ತ್ರೀ ಸಂವೇದನೆಯ […]

ಸಮಾನತೆಯ ಸಂಧಿಕಾಲದಲ್ಲಿ

ಗರತಿ ಹಾಡುಗಳಲ್ಲಿ ಒಡಮೂಡಿದ ಸ್ತ್ರೀ ವೇದನೆಯ ಮುಖಗಳು: ನಾಗರೇಖಾ ಗಾಂವಕರ

  “ಹೆಣ್ಣಾಗಿ ಹುಟ್ಟೊಕ್ಕಿಂತ ಮಣ್ಣಾಗಿ ಹುಟ್ಟಿದರೆ ಮಣ್ಣಿನ್ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯವಂತರಿಗೆ ನೆರಳಾಗಿ.” ಇದು ನಮ್ಮ ಜಾನಪದ ಗೀತೆಗಳಲ್ಲಿ ಬರುವ ಗರತಿಯ ಹಾಡಿನ ಒಂದು ತುಣುಕು.ಆಕೆ ಹೆಣ್ಣು.ಆಕೆಗೆ ಅದ್ಯಾಕೋ ಬದುಕು ಸಾಕಾಗಿದೆ. ಈ ಹೆಣ್ಣಿನ ಬದುಕಿನಲ್ಲಿ ಪುರುಷನ ಆತನ ಸಾಮಾಜಿಕ ನಿಲುವಿನ ಆಘಾತ ಚೇತರಿಸಿಕೊಳ್ಳಲಾಗದಂತಹ ನೋವು ನೀಡಿದೆ.ಅದಕ್ಕಾಗೆ ಆಕೆ ಮಣ್ಣಾಗಿ ಇಲ್ಲವೇ ಮರವಾಗಿ ಹುಟ್ಟಿದ್ದರೆ ಪುಣ್ಯವಂತರಿಗೆ ಆಸರೆಯಾಗಿ ನೆರಳಾಗಿ ಬದುಕಬಹುದಿತ್ತು.ಸ್ವಾರ್ಥ ರಹಿತಳಾದ ಆಕೆ ಇತರರಿಗೆ ನೆರಳಾಗಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತಾಳೆ.ಆದರೆ ಈ ಹೆಣ್ಣು ಜನ್ಮ ಎಷ್ಟು […]

ಸಮಾನತೆಯ ಸಂಧಿಕಾಲದಲ್ಲಿ

ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ: ನಾಗರೇಖಾ ಗಾಂವಕರ

ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/  ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ  ಗೋಲದ ಮೇಲೆ/  ಬಾತ್ ರೂಮು ಕ್ಲೀನಾಗಿ ನಳನಳಿಸುತ್ತಿರಬೇಕು……….. ಆಗ ಮಾತ್ರ ನಾನು/ ಹೊಚ್ಚಗೆ ಮಿಂದು ಬಂದು/ ರುಚಿ ಅಡುಗೆಯ ಮಾಡಿ/ತಿನ್ನಿಸಬಲ್ಲೇ ನಿನಗೆ ಮುದ್ದು ಮಾಡುತ್ತ. ಎನ್ನುತ್ತಾರೆ  ಯುವ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ತಮ್ಮ “ಜೀನ್ಸ್ ತೊಟ್ಟ ದೇವರು” ಎಂಬ ಕವನ ಸಂಕಲನದ ಒಂದು ಕವನ. ಆಧುನಿಕತೆಯಲ್ಲಿ […]

ಸಮಾನತೆಯ ಸಂಧಿಕಾಲದಲ್ಲಿ

ಸುಸಂಸ್ಕೃತ ಭಾರತ ಮತ್ತು ಹೆಣ್ಣು ಭ್ರೂಣ ಹತ್ಯೆ: ನಾಗರೇಖಾ ಗಾಂವಕರ

“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ  ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇಳವ್ವ ಕಂಡಿಲ್ಲ ನಾನಿನ್ನೂ ಬದುಕಿನಾಗಸದ ನೀಲ ಪಚ್ಚೆಯಂಥ ನೆಲ, ಗಾಳಿಯ ಮೃದು ಸ್ಪರ್ಶ ನಾ ಬರಿ ಭ್ರೂಣವಲ್ಲ. ” ಇದು ಹೆಣ್ಣು ಭ್ರೂಣವೊಂದು ತನ್ನ ಒಡಲಲ್ಲಿ ಹೊತ್ತ ತಾಯಿಯೊಂದಿಗೆ ನಡೆಸುವ ಸಂವಾದ. ಖ್ಯಾತ ಕವಯತ್ರಿ ಮಾಲತಿ ಪಟ್ಟಣ ಶೆಟ್ಟಿಯವರ “ಅವ್ವಾ […]

ಸಮಾನತೆಯ ಸಂಧಿಕಾಲದಲ್ಲಿ

ಪೌರಾಣಿಕ ಸ್ತ್ರೀ ಪಾತ್ರಗಳಲ್ಲಿ ಸ್ತ್ರಿ ಶೋಷಣೆಯ ವಿರುದ್ಧ ಕಹಳೆ: ನಾಗರೇಖಾ ಗಾಂವಕರ

ಜಗತ್ತು ಬದಲಾಗುತ್ತಿದೆ. ಬದಲಾಗುತ್ತಿರುವ ವೈವಸ್ಥೆಯಲ್ಲಿ  ಕಾಲಚಕ್ರದ ಒಂದು ಸುತ್ತು ಈಗಾಗಲೇ ಸುತ್ತಿಬಂದಂತಾಗಿದೆ. ಆಧುನಿಕ ಮೂರನೇ ಜಗತ್ತಿನ ಸ್ತ್ರೀಯರು ಪುರಾಣ ಪಾತ್ರಗಳ ಆದರ್ಶ ಪ್ರತಿರೂಪಗಳ ಧರಿಸಬಯಸುವುದಿಲ್ಲ. ಹಾಗಿದ್ದು ಇಂದಿನ ಪುರುಷ ವಿರಚಿತ ಸಾಹಿತ್ಯದಲ್ಲಿಯೂ ಸ್ತ್ರೀ ಪಾತ್ರಗಳು ಉನ್ನತ ಮೌಲ್ಯಗಳ ಪ್ರತಿಬಿಂಬಿಸುವ ಪಾತ್ರಗಳಾಗಿ ತನ್ನ ತ್ಯಾಗದಿಂದ ಇತರರ ಉದ್ದರಿಸುವ ಅಪರೂಪದ ದೇವತಾ ಸ್ವರೂಪದ ಪ್ರತಿಮೆಗಳಾಗಿ ಮೂಡಿಬರುತ್ತಲೇ ಇವೆ. ಪ್ರಾಚೀನ ಪರಂಪರೆಯಲ್ಲಿ  ಹೆಣ್ಣನ್ನು ದೇವತೆಯಾಗಿಸಿ, ಶಕ್ತಿಯ ಪ್ರತೀಕವಾಗಿಸಿ ಚಿತ್ರಿಸಿದ ಹತ್ತು ಹಲವು ಪಾತ್ರಗಳೂ ಇವೆ. ತನ್ನ ಸಹನೆಗೆ, ಹೆಸರಾದ ಹೆಣ್ಣು  ಆತ್ಮಾಭಿಮಾನಕ್ಕೆ […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀ ಸಾಮಥ್ರ್ಯಹರಣ-ಲಿಂಗತ್ವ ರಾಜಕಾರಣ: ನಾಗರೇಖಾ ಗಾಂವಕರ

“I am the commodity you traded in, my chastity, my motherhood, my loyalty now it is time for me to flower free The woman on that poster, half naked, selling socks and shoes- No.no I am not that woman” ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯ ಘನವ್ಯಕ್ತಿತ್ವ ನಲುಗುವ ಪರಿ ಕಣ್ಣಿಗೆ ಕಟ್ಟುವಂತೆ ಪಾಕಿಸ್ತಾನಿ ಕವಯತ್ರಿ ಕೀಶ್ವರ ನಯೀದ ಬಣ್ಣಿಸಿದ ಪರಿ ಅನುಪಮ.ಆಕೆಯನ್ನು […]

ಸಮಾನತೆಯ ಸಂಧಿಕಾಲದಲ್ಲಿ

ಬೋನ್ಸಾಯಿ ಗಿಡದಂತೆ ಅರಳುವ ನರಳುವ ಸ್ತ್ರೀ ಬದುಕು: ನಾಗರೇಖಾ ಗಾಂವಕರ

ತೆಲಗಿನ ಪ್ರಸಿದ್ಧ ಲೇಖಕಿ ಅಬ್ಬೂರಿ ಛಾಯಾದೇವಿಯ ಒಂದು ಸಣ್ಣಕಥೆ “ಬೊನ್ಸಾಯಿ ಬ್ರತುಕು” ಅಂದರೆ ಬೋನ್ಸಾಯಿ ಬದುಕು. ಬೊನ್ಸಾಯಿ ಕಲೆಯನ್ನೆ ಆಧಾರವಾಗಿಟ್ಟುಕೊಂಡು ಸ್ತ್ರೀ ಬದುಕಿನ ಸುತ್ತ ಅದರ ಸೂಕ್ಷ್ಮ ಎಳೆಗಳ ಇತಿಮಿತಿಗಳ ಜಾಲಾಡಿದ ಸುಂದರ ಕಥಾನಕ. ಬೋನ್ಸಾಯಿ ಒಂದು ಜಪಾನೀ ಕಲೆ. ಅಗಾಧ ಬೆಳೆಯುವ ಮರಗಳನ್ನು ಕುಂಡಗಳಲ್ಲಿ ಮನೆಯೊಳಗಡೆ ಕೂಡ ಬೆಳೆಸುವಂತಹ ವಿಶಿಷ್ಟ ವಿಧಾನ. ಗಿಡದ ಬೆಳವಣಿಗೆಯನ್ನು ಕುಂಠಿತಗೊಳಿಸುವ, ಅದರ ವಿಸ್ತಾರಕ್ಕೆ ವೈಶಾಲ್ಯಕ್ಕೆ ಇತಿಮಿತಿಗಳ ಹೇರಿ, ಸಂಕುಚಿತಗೊಳಿಸುವ ಸುಂದರ ಕುತಂತ್ರದ ಕಲಾತ್ಮಕ ವಿಧಾನ. ಮರದ ಅಪಾರ ಸಾಮಥ್ರ್ಯ, ವಿಶಾಲತೆಗಳೆಲ್ಲ ಮೊಟಕುಗೊಂಡು […]

ಸಮಾನತೆಯ ಸಂಧಿಕಾಲದಲ್ಲಿ

ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ: ನಾಗರೇಖಾ ಗಾಂವಕರ

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ  ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕಾಲಕ್ಕೆ ಆದ ಬದಲಾವಣೆಯಲ್ಲಿ  ವಿಸ್ತøತವಾಗುತ್ತಲೋ ಇಲ್ಲ ಸಂಕೀರ್ಣವಾಗುತ್ತಲೋ ಇವೆ. ಈ ಕೌಟಂಬಿಕ ನೆಲೆಗಟ್ಟಿನಲ್ಲಿ ಹಲವಾರು ಸಂಬಂಧಗಳು ಬೆಸೆದುಕೊಂಡಿವೆ. ಗಂಡ-ಹೆಂಡತಿ,ತಂದೆ-ತಾಯಿ,ಮಗ -ಸೊಸೆ,ಅಳಿಯ-ಮಾವ, ಅತ್ತೆ-ಸೊಸೆ ಹೀಗೆ ಆಲದ ಮರದ ಬೀಳಲುಗಳಂತೆ ಭಾರತೀಯ ಸಂಬಂಧಗಳು ಹಲವಾರು. ಅದರಲ್ಲಿ ಅತ್ತೆ-ಸೊಸೆ ಸಂಬಂಧ  ಸಮಾಜದ ಮೂಲ ಘಟಕವಾದ ಕುಟುಂಬದ ಬಲಬೇರು.                          ಅತ್ತೆ […]

ಸಮಾನತೆಯ ಸಂಧಿಕಾಲದಲ್ಲಿ

ಗಂಡು ಹೆಣ್ಣಿನ ಪ್ರೀತಿ- ರೀತಿ: ನಾಗರೇಖಾಗಾಂವಕರ

ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ wuthering heights ನಲ್ಲಿವೆ. ಕಾದಂಬರಿಯ  ನಾಯಕಿಕ್ಯಾಥರಿನ್ ಹಾಗೂ  ನಾಯಕ ಹೇತ್ಕ್ಲಿಫ್. ಪ್ರೀತಿ ಮೂಲಬೂತವಾದ ಬಯಕೆ. ವಿಶ್ವಸನೀಯವಾದ ಪ್ರೀತಿ ಶ್ರೇಷ್ಟವಾದರೆ, ಪ್ರೀತಿಯಲ್ಲಿ ದ್ರೋಹ ಪಾಪವಾಗುತ್ತದೆ. ಅಲ್ಲಿ ಹುಟ್ಟಿದ ದ್ವೇಷಕ್ಕೆ ಪಾಪದ ಬಣ್ಣ ಕೊಡದೆ ಮಾನವಮೂರ್ತ ಪ್ರೀತಿಯೆಂದು ಚಿತ್ರಿಸಿ ಅದರ ಸೂಕ್ಷ್ಮ ತುಡಿತಗಳನ್ನು ಎಳೆಎಳೆಯಾಗಿ ಬಿತ್ತರಿಸಿದ್ದಾಳೆ ಎಮಿಲಿ. ಪರಿಪೂರ್ಣತೆ […]

ಸಮಾನತೆಯ ಸಂಧಿಕಾಲದಲ್ಲಿ

ಸ್ತ್ರೀತ್ವದ ನೆಲೆ ಬೆಲೆ: ನಾಗರೇಖಾ ಗಾಂವಕರ

ಗಂಡು ವಿಸ್ತಾರವನ್ನು ಆಪೇಕ್ಷಿಸಿದರೆ ಹೆಣ್ಣು ಆಳವನ್ನು ಬಯಸುತ್ತಾಳೆ ಎಂಬ ಮಾತಿದೆ. ಹೌದಲ್ಲ. ಗಂಡು ಎಷ್ಟು ಸಲೀಸಾಗಿ ತನ್ನ ಸ್ವಗತವನ್ನು ತೋಡಿಕೊಂಡು ಬಿಡುತ್ತಾನೆ. ವಿಸ್ತಾರದ ಆಕಾಂಕ್ಷೆಯಲ್ಲಿ ಅತೃಪ್ತನಾಗುತ್ತ ಹೋಗುವುದು ಆತನ ಜಾಯಮಾನವೇ?ಅದು ಆತನ ದೈಹಿಕ ಬಯಕೆ ಮಾತ್ರವೇ ಅಥವಾ ಮಾನಸಿಕ ಬೌದ್ಧಿಕ ಚಿಂತನೆಗಳಿಗೂ ಅನ್ವಯಿಸುತ್ತದೆಯೇ ಎಂದೆಲ್ಲಾ ಚಿಂತಿಸಿದರೆ ಮೂಡುವ ಉತ್ತರ ಸ್ಪಷ್ಟ. ಹೆಣ್ಣಿನ ಸಂವೇದನೆಗಳು ತಳಮೂಲದಲ್ಲಿ ಪಲ್ಲವಿಸುತ್ತವೆ. ಆಕೆ ವಿಸ್ತಾರಕ್ಕಿಂತ ವಿಶಾಲಕ್ಕಿಂತ ತನ್ನ ನೆಲೆಯಲ್ಲಿ ನೆಲದಲ್ಲಿ  ಆಳಕ್ಕಿಳಿದು ಬೇರೂರಲು ಬಯಸುತ್ತಾಳೆ. ಗಂಡಿನ ವಿಶಾಲ ಪ್ರಪಂಚದೆದುರು ಆಕೆ ಸಂಕುಚಿತವೆನಿಸಿದರೂ ಸ್ತ್ರೀ […]

ಸಮಾನತೆಯ ಸಂಧಿಕಾಲದಲ್ಲಿ

ತಾಯ್ತನ ಮತ್ತು ಹೆಣ್ಣು: ನಾಗರೇಖಾ ಗಾಂವಕರ

ಅದುರವಿವಾರ. ಹಾಗಾಗಿ ಸಂತೆ ದಿನ. ಸಂತೆಯಲ್ಲಿ ತರಕಾರಿ ಕೊಳ್ಳುವ ಸಲುವಾಗಿ ಹೊರಟಾಗ ತರಕಾರಿ ಮಂಡಿಯ ಹೊರ ಪ್ರವೇಶ ದ್ವಾರದಲ್ಲೇ ಆ ಇಬ್ಬರು ದಂಪತಿಗಳು ಹುಣಸೇ ಹಣ್ಣುಇಟ್ಟು ಮಾರುತ್ತಿದ್ದರು.ತಾಯಿಯ ತೊಡೆಯೇರಿದ ಕಂದನನ್ನು ಸಂಭಾಳಿಸುತ್ತಾ ಆ ಮಹಾತಾಯಿ ಹುಣಸೇ ಹಣ್ಣು ತೂಗಿಕೊಡುತ್ತಿದ್ದರೆ ತಂದೆ ಗಿರಾಕಿಗಳ ಕಡೆಗಮನವಿಟ್ಟು  ಹಣಪಡೆದು ಜೇಬಿಗಿಳಿಸುತ್ತಿದ್ದ. ಮಗುವಿನ ಕಡೆ ತೂಕದ ಕಡೆ ಸಮ ಪ್ರಮಾಣದ ಗಮನದೊಂದಿಗೆ ಎರಡನ್ನು ನಿಭಾಯಿಸುತ್ತಿದ್ದ ಆಕೆ  ನನಗಾಗ ಆತನಿಗಿಂತ ಸಮರ್ಥಳಾಗಿ ಕಂಡಿದ್ದಳು. ಹೌದು. ಏಕಕಾಲಕ್ಕೆ ಅಪಕರ್ಷಣೆಗೆ ಒಳಗಾಗದೇ ದ್ವಿಮುಖ ಕಾರ್ಯಗಳನ್ನು ಪುರುಷನಿಗಿಂತ ಸ್ತ್ರೀ […]

ಸಮಾನತೆಯ ಸಂಧಿಕಾಲದಲ್ಲಿ

ಸಹನೆಯೇ ಸ್ತ್ರಿ ಅರಿವು: ನಾಗರೇಖಾ ಗಾಂವಕರ

“ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲೆ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ ಆದರೆ ಸಾಧ್ಯವಾಗದೇ ಕಾಗೆಗಳಿಗೆ ಆಹಾರ ವಾಗುತ್ತದೆ. ”ಈ ಸ್ಥಿತಿಯೇ ಸೀತಾಳ ಮನಸ್ಥಿತಿ ಕೂಡ. ಅನಿತಾ ದೇಸಾಯಿಯ shall we go this summer? ಕಾದಂಬರಿಯ ಕೇಂದ್ರ ಪಾತ್ರ ಸೀತಾ. ಒತ್ತಡದ ದಬ್ಬಾಳಿಕೆಯ ಬದುಕಿನಿಂದ ಆಕೆ ಪಲಾಯನ ಮಾಡ ಬಯಸುತ್ತಾಳೆ ಹದ್ದಿನಂತೆ. ಆದರೆ ಸಂಸಾರದ ಬಂಧನದಲ್ಲಿ […]

ಸಮಾನತೆಯ ಸಂಧಿಕಾಲದಲ್ಲಿ

ಗಂಡಿನ ಪರಧಿಯೊಳು ಹೆಣ್ಣು – ಬಿಡುಗಡೆಯ ಹಂಬಲ: ನಾಗರೇಖಾ ಗಾಂವಕರ

“ಆಕಾಶದ ನೀಲಿಯಲ್ಲಿ  ಚಂದ್ರತಾರೆ ತೊಟ್ಟಿಲಲ್ಲಿ  ಬೆಳಕನ್ನಿಟ್ಟು ತೂಗಿದಾಕೆ  ನಿನಗೆ ಬೇರೆ ಹೆಸರು ಬೇಕೆ?  ಸ್ತ್ರೀ ಎಂದರಷ್ಟೇ ಸಾಕೆ?’ ರಾಷ್ಟಕವಿ ಡಾ. ಜಿ. ಎಸ್ ಶಿವರುದ್ರಪ್ಪನವರ ಕವನವೊಂದರ ಸಾಲುಗಳಿವು. ಸ್ರ್ತೀಯ ಅಗಾಧ ವ್ಯಕ್ತಿತ್ವ, ಆಳ ಅಗಲಗಳ ಕಲಾತ್ಮಕವಾಗಿ ಬಿಂಬಿಸಿದ ಅಪೂರ್ವ ಸಾಲುಗಳು. ಕೇಳಿದೊಡನೆ ತಾಯಿಯ ರೂಪವೇ ಎದುರು ನಿಂತಂತೆ. ಕವಿ ಸ್ತ್ರೀಯನ್ನು ಗೌರವಿಸಿದ ಅನುಪಮ ಭಾವಲಹರಿ, ಸಹೃದಯನ ಸಂವೇದನೆ ಏಕಕಾಲಕ್ಕೆ ತಾಧ್ಯಾತ್ಮತೆಯಲ್ಲಿ ಮುಳುಗಿ ಹೋಗುವುದು.  ಆದರೆ ನಿಜಕ್ಕೂ ಭಾರತೀಯ ಸಮಾಜದಲ್ಲಿ ಈ  ಗೌರವ ಸ್ಥಾನಮಾನ ಆಕೆ ಅನುಭವಿಸುತ್ತಿದ್ದಾಳೆಯೇ ಎಂಬ […]

ಸಮಾನತೆಯ ಸಂಧಿಕಾಲದಲ್ಲಿ

ಪರಿವರ್ತನೆಗೆ ದಾರಿ ಯಾವುದಾದರೇನು?: ನಾಗರೇಖಾ ಪಿ. ಗಾಂವಕರ

                  ಹೊಸ ಸುತ್ತೋಲೆಯಂತೆ ಪದವಿ-ಪೂರ್ವ ಹಂತಕ್ಕೂ ಪ್ರಾರ್ಥನೆಯನ್ನು ಕಡ್ಡಾಯಗೊಳಿಸಿ ಇಲಾಖೆ ಆದೇಶ ಹೊರಡಿಸಿದ್ದು ಪಡ್ಡೆ ಹುಡುಗರಿಗೆ ಕೊಂಚವೂ ಇಷ್ಟವಿಲ್ಲ. ಆಗಾಗ ಆ ಬಗ್ಗೆ ತಕರಾರು ಮಾಡುವ ಗುಂಪು ಇದ್ದೆ ಇತ್ತು. ಆದರೂ ಪ್ರಾಚಾರ್ಯರು ಅದಕ್ಕೆಲ್ಲ ಅವಕಾಶ ಕೊಡದೆ ಕಡ್ಡಾಯ ಎಂದು ನೋಟೀಸು ತೆಗೆದು ಒತ್ತಡ ಹೇರಿದ್ದರು. ಹಾಗಾಗಿ  ವಿದ್ಯಾರ್ಥಿಗಳು ಪ್ರಾರ್ಥನೆಗೆ ಹಾಜರಾಗುವುದು ಅನಿವಾರ್ಯವಾಗಿತ್ತು. ವಾಣಿಜ್ಯ ವಿಭಾಗದ ಆ ತರಗತಿಯಲ್ಲಿ ಇರುವುದು ಬರೀಯ ಇಪ್ಪತೆಂಟು ವಿದ್ಯಾರ್ಥಿಗಳು ಮಾತ್ರ. […]