ಪ್ರೀತಿ ಪ್ರೇಮ
ನೀನಿಲ್ಲದೇ ಇನ್ನೇನಿದೆ….: ಪೂಜಾ ಗುಜರನ್ ಮಂಗಳೂರು.
ಅದೆಷ್ಟು ದಿನಗಳು ಉರುಳಿದವುನಿನ್ನ ನೋಡದೆ ಮಾತು ಆಡದೆ.ಆದರೂ ನೀನೆಂಬ ಗುಂಗು..ಎದೆಯಲಿ ಮೂಡಿಸಿದ ರಂಗು..ಇವತ್ತಿಗೂ ಅಚ್ಚಳಿಯದೆ ಉಳಿದಿದೆ.ಇರಬೇಕು ಜೊತೆಯಲಿಒಂದಷ್ಟು ಮನಸ್ಸಿನ ಭಾರಗಳನ್ನುಇಳಿಸಿ ಅಳಿಸಲು.ಅದಿಲ್ಲದೆ ಹೋದಾಗಲೇ ಈಮನಸ್ಸುಗಳು ಭಾರವಾಗಿಬದುಕು ನಿರ್ಜೀವವಾಗುತ್ತದೆ.ತಡೆದಿರುವ ಮಾತುಗಳನ್ನು ನಿನ್ನವರೆಗೂ ತಲುಪಿಸಲು ಆಗದೆ ಒದ್ದಾಡಿದ ಕ್ಷಣಗಳು ಬಲು ಭೀಕರವಾಗಿತ್ತು. ಸಂಬಂಧಗಳನ್ನು ಜೋಡಿಸುವುದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವುದೇ ಬದುಕಿನ ಬಹುದೊಡ್ಡ ಸವಾಲು. ಇದೆಲ್ಲವನ್ನು ಅರ್ಥ ಮಾಡಿಕೊಳ್ಳಲು ನಿನ್ನ ಅನುಪಸ್ಥಿತಿಯೇ ಬರಬೇಕಾಯಿತು. ನನಗೆ ಗೊತ್ತಿಲ್ಲ. ಈ ಸಂಬಂಧಗಳು ಯಾಕೆ ಹುಟ್ಟುತ್ತವೆ ಎಂದು. ನೀನು ನನ್ನ ಬದುಕಲ್ಲಿ ಯಾಕೆ … Read more
“ಓ ಇವ್ಳೆ”: ಮಧುಕರ್ ಬಳ್ಕೂರ್
ಓ ಇವ್ಳೆ , ಬಟ್ಲ್ ಕಣ್ಣೊಳೆ, ಕಣ್ಣಾಗ್ ಕಣ್ಣಿಟ್ಟ್ ಪ್ರೀತಿ ಹೊಳ್ಯಾಗ್ ಈಜೂಕ್ ಕಲ್ಸ್ ದೊಳೆ, ಸಾಕ್ ಮಾಡ್ ಮಾರಾಯ್ತಿ… ನನ್ ರಟ್ಟಿ ಸೋಲ್ತಾ ಇತ್… ಇನ್ ನನ್ ಕೈಯಾಗ್ ಆತಿಲಾ ಕಾಣ್, ಇದೊಂದ್ ಸಾತಿ ಪೂರ್ತಿ ಮುಳುಗಿ ಹೊತೆ ಅತ್ಲಾಗೆ… ಹೆಂಗೂ ನೀನ್ ನನ್ ಬದ್ಸ್ಕಂತೆ ಅಂದೇಳಿ ಗೊತಿತ್ ಹೆಣೆ.. ಎಷ್ಟಾರೂ ನೀನ್ನ್ ಕಣ್ಣಿಗ್ ನಾನ್ ಪಾಪದ್ ಗಂಡ್ ಅಲ್ದಾ…. ಓ ಹೆಣೆ, ಇದೆ ಆಸಾಡಿ ಮಳೆ ಬಪ್ಪೊತಿಗ್ ಅಲ್ದಾ.. ಕುಂದ್ರಾಪ ಶಾಸ್ತ್ರಿ ಸರ್ಕಲ್ ನಾಗ್ … Read more
ಇದೇ ‘ರಮ್ಯ’ ಚೈತ್ರ ಕಾಲ: ಬೀರೇಶ್ ಎನ್. ಗುಂಡೂರ್
ಇಲ್ಲಿ ಎಲ್ಲದಕ್ಕೂ ಉತ್ತರವಿಲ್ಲ. ಪ್ರಶ್ನೆಗಳೇ ಎಲ್ಲ. ನಿನ್ನ ಒಪ್ಪಿಸುವ ಭರದಲ್ಲಿ ನಾನೆಲ್ಲೋ ಸೋತು ನಿಸ್ಸಾಯಕನಾಗಿ ನಿಂತುಬಿಟ್ಟೆ ಅನಿಸುತ್ತದೆ. ಅದೇನೋ, ಬೇರೆಯವರಲ್ಲಿ ನಿನ್ನನ್ನು ಹುಡುಕಿಕೊಳ್ಳುವುದು..ನೀರಿಲ್ಲದೆ ಮೀನು ತನ್ನ ಅಸ್ತಿತ್ವ ಹುಡುಕಿಕೊಂಡಂತೆ ಅನಿಸುತ್ತದೆ. ಈ ಜಗತ್ತಿನ ಸೊಬಗಿಗೆ, ನಾಳೆಗಳ ಆಕಾಂಕ್ಷೆಗಳಿಗೆ, ಎಲ್ಲವನ್ನು ಮೀರಿ ಬದುಕಿಬಿಡುತ್ತೇನೆ, ಗೆದ್ದುಬಿಡುತ್ತೇನೆ ಎನ್ನುವ ಈ ಮಂದಿಯ ಅದಮ್ಯ ಚೇತನಕ್ಕೆ ಅದೊಂದೇ, ‘ಪ್ರೀತಿ’ಯೇ ಕಾರಣ ಅಂತ ಅಷ್ಟು ಬಾರಿ ಓದಿಕೊಂಡಿದ್ದೇನೆ. ಅದೊಂದು ತಪಸ್ಸು. ಆರಾಧನೆ. ಎಲ್ಲವನ್ನೂ ಸಾದ್ಯವಾಗಿಸುವ, ಎಲ್ಲವನ್ನೂ ಮರೆಸುವ, ಮೆರೆಸುವ, ಇನ್ನೆಲ್ಲವನ್ನೂ ತೆಕ್ಕೆಗೆ ಬಾಚಿಕೊಳ್ಳುವ, ಎಲ್ಲವನ್ನೂ … Read more
ಒಂದು ಆತ್ಮೀಯ ಆರೈಕೆ ಮರೆಯಾದಾಗ..: ವೃಶ್ಚಿಕ ಮುನಿ
ನೀನು ಮರೆಯಾದ ಹಾದಿಗುಂಟ.. ಸಾಲು ಮರದ ಹಾದಿಗುಂಟ ಮಳೆ ಬಿದ್ದ ನೆಲ, ಗಾಳಿಗೆ ಉದುರಿ ಬಿದ್ದ ಹಳದಿ ಹೂ, ಎಲೆ ಬಳುಕುಸುತ್ತಾ ಬಿಸುವ ತಂಪು ತಂಗಾಳಿ ಮೇಲೆ ಕವಿದ ಮೋಡ, ತೋಯ್ದ ಟಾರು ರಸ್ತೆಯ ಮೇಲೆ ಚೆಲ್ಲಿದ ಹಣ್ಣಲೆ ತೊಟ್ಟಿಕ್ಕುವ ಸಣ್ಣ ಹನಿಯ ಸಿಂಚನ. ದೂರದಲಿ ರವಿಯ ಹಳದಿ ಕಿರಣ, ಆ ಸಮಯಕ್ಕೆ ಒಂದು ರಮ್ಯತೆ ಇರಲು ಆತ್ಮೀಯ ಜೀವ ಜೊತೆಯಿರಲು ನಡಿಗೆ ದೀರ್ಘವಾಗಿರಲು ಇಟ್ಟ ಅಡಿಯ ಲೆಕ್ಕವಿಲ್ಲ ಒಂದು.. ಎರಡು.. ಮೂರು.. ಹೀಗೆ ಉಸಿರಿರೋವರೆಗೂ, ಸವಿದಷ್ಟು … Read more
ಪ್ರೀತಿಯು ಪ್ರೀತಿಯಾಗಬೇಕೇ ವಿನಃ ಹಿಂಸೆಯಾಗಬಾರದು: ನಾಗೇಶ್ ಪ್ರಸನ್ನ.ಎಸ್.
ಬಯಸಿದ್ದೆಲ್ಲಾ ಸಿಕ್ಕಿಬಿಡಬೇಕು – ಹುಟ್ಟಿದ ದಿವಸದಿಂದಲೂ ಇದು ಮನುಷ್ಯನಿಗೆ ಅಂಟಿಕೊಂಡಿರುವ ಒಂದು ತೆರನಾದ ವಿಚಿತ್ರ ಖಾಯಿಲೆ. ಈ ಖಾಯಿಲೆಯಿಂದ ಯಾರು ಹೊರಬರುತ್ತಾರೋ ಅವರೇ ಸುಖಜೀವಿಗಳು. ಇಲ್ಲದಿದ್ದರೆ, ಅವರಷ್ಟು ವಿಚಿತ್ರವಾಗಿ ನಡೆದುಕೊಳ್ಳುವವರೇ ಸಿಗುವುದಿಲ್ಲ. ಇದಕ್ಕೆ ಬುದ್ಧ ಹೇಳಿದ “ಆಸೆಯೇ ದುಃಖಕ್ಕೆ ಮೂಲ” ಎಂಬ ಮಾತು ಒಂದು ಉದಾಹರಣೆ. ಬದುಕಿನಲ್ಲಿ ಆಸೆಯನ್ನು ತ್ಯಜಿಸಿದವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಪ್ರೀತಿಯಲ್ಲಿ ಆಸೆ ತ್ಯಜಿಸುವವರು ಅಥವಾ ಪ್ರೀತಿಯೆಂಬ ಆಸೆಯನ್ನೇ ತ್ಯಜಿಸುವವರು ಕೇವಲ ಬೆರಳೆಣಿಕೆಯ ಹೃದಯಗಳಷ್ಟೇ. ಈಗ ನಾನು ಆ ದಾರಿಯಲ್ಲಿ ಹೆಜ್ಜೆ … Read more
ಕದಡುವ ನೆನಪುಗಳ ನಡುವೆಯೂ ಕಾಡುವ ಖಾಲಿತನ: ನಂದಾದೀಪ, ಮಂಡ್ಯ
ಕಿಟಕಯಿಂದಾಚೆ ಹೆಪ್ಪುಗಟ್ಟಿದ ಭಾನು, ಗೂಡು ಸೇರಿದ ಹಕ್ಕಿ, ಅಲ್ಲೊಂದು ಇಲ್ಲೊಂದು ಬೀಳುವ ಹನಿಗಳ ಕಂಡು ಖಾಲಿಯಾದ ಸಂತೆ, ನೀರವ ರಸ್ತೆ, ಇದೆಲ್ಲದರ ಜೊತೆಗೆ ಸಾವಿರ ನೆನಪುಗಳ ರಾಶಿ ಹಾಕಿಕೊಂಡು ಕೂತಿದ್ದರೂ ಮನದೊಳಗೆ ಆವರಿಸಿದ ಮೌನ, ಸಾವಿರ ಮಾತಿದ್ದರೂ ಮೌನದೊಂದಿಗೆ ಹೊಂದಿಕೊಂಡ ಖಾಲಿತನದ ಬದುಕು.. ಬದುಕು ಖಾಲಿತನ ಎನಿಸುವುದು ಒಂದು ಇಷ್ಟವಾದ ಬಾಂಧವ್ಯವೊಂದು ನಿರಾಶೆ ಮಾಡಿದಾಗ, ರಪರಪನೆ ಬಿದ್ದ ಮಳೆಗೆ ಎಲೆಗಳು ಉದುರಿದಂತೆ ಕನಸುಗಳು ಕಂಬನಿಯಲ್ಲಿ ಜಾರಿಹೋದಾಗ, ಆದರೆ ಹೇಳಿಕೊಳ್ಳಲು ಪದಗಳು ಇರುವುದಿಲ್ಲ.. ಅನುಭವಿಸಲು ಅಸಾಧ್ಯವೆನ್ನುವ ನೋವೊಂದು ಕಾಡುವಾಗ, … Read more
ಪ್ರೀತಿಯೆ ದೇವರು: ನಂದಾದೀಪ
ಗೆಳೆಯಾ.. ಭೂಮಿಯಲ್ಲಿ ದೇವರು ಎಲ್ಲಾ ಕಡೆ ಇರೋಕಾಗಲ್ಲಾ ಅಂತ ಪ್ರೀತಿನ ಸೃಷ್ಠಿ ಮಾಡಿದನಂತೆ.. ಯಾಕೆಂದರೆ ನಿಜವಾದ ದೇವರು ನಮ್ಮ ಮುಂದೆ ಪ್ಯತ್ಯಕ್ಷ ಆದ್ರೆ ಅದನ್ನ ತಡೆದುಕೊಳ್ಳೋ ಶಕ್ತಿ ನಮಗಿರೋದಿಲ್ಲ ಅಂತ.. ಈ ಪ್ರೀತಿನ ದೇವರಿಗೆ ಯಾಕೆ ಹೋಲಿಸ್ತಾ ಇದೀನಿ ಅಂದ್ರೆ ನಿಜವಾದ ಪ್ರೀತಿನ ಪಡೆದುಕೊಳ್ಳೋಕು, ಅದರ ತೀವ್ರತೆಯನ್ನು ತಡೆದುಕೊಳ್ಳೋಕು, ಅದನ್ನ ಮತ್ತೆ ಮರಳಿ ನಿಡೋದಕ್ಕೂಅಂತಹದ್ದೊಂದು ಗಟ್ಠಿಯಾದ ಮನಸು ಇರಬೇಕಂತೆ..! ಇಲ್ಲವಾದಲ್ಲಿ ಆ ಪ್ರೀತಿಯೆಂಬ ದೇವರನ್ನ ಉಳಿಸಿಕೊಳ್ಳೋಕ್ಕೆ ಆಗೋದಿಲ್ಲ ನೋಡು..! ಅಂಹದೊಂದು ಮನ ನಿನ್ನಲ್ಲಿ ನಾ ಕಾಣಲೂ ಇಲ್ಲ..! … Read more
ಪ್ರೀತಿಯಲ್ಲಿ ನಾ ಎಡವಿದೆ ಆದರೇ….. ನೀ…!: ಪಿ ಎಸ್ ಜೀವನ್ ಕುಮಾರ್ ಕಲ್ಲೇಗ
ಪ್ರೀತಿ ಎಂಬುವುದು ಯಾರ ಅನುಮತಿ ಕೇಳಿ ಹುಟ್ಟುವುದಿಲ್ಲ. ಪ್ರೇಮದ ಬಲೆಯಲ್ಲಿ ಸಿಲುಕಿ ಅದರಿಂದ ಹೊರಬರುವ ತಾಳ್ಮೆ ಒಂದಿದ್ದರೆ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೆ ಅದು ಕಷ್ಟ ಎಂದು ಅನಿಸುವುದಿಲ್ಲ. ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು ನನ್ನ ಹತ್ತಿರ ಬಂದು ಬ್ರೇಕ್ ಅಪ್ ಎಂದು ಹೇಳಿದಾಗ ಏನೂ ಅರ್ಥವಾಗುವುದಿಲ್ಲ. ಬದಲಿಗೆ ವಿಪರೀತವಾದ ಕೋಪ, ತಡೆಯಲಾರದಷ್ಟು ದುಃಖ, ಸಹಿಸಲಾರದಷ್ಟು ನೋವು ಶುರುವಾಗುತ್ತದೆ. ಆ ಕ್ಷಣ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಆ ಕ್ಷಣ ಪ್ರಪಂಚದಲ್ಲಿ ಎಷ್ಟೋಜನ ಇದ್ದರೂ ಯಾರು … Read more
ನೀನಿಲ್ಲದೆ…..!!: ವೆಂಕಟೇಶ ಚಾಗಿ
ಅಂತೂ ಈ ವರ್ಷದ ಫೆಬ್ರುವರಿ ೧೪ ಮರೆಯಾಯ್ತು. ಪ್ರತಿ ವರ್ಷದ ಹಾಗೆ ನನ್ನ ನಿರೀಕ್ಷೆ ಹುಸಿಯಾಯ್ತು. ಅದೆಷ್ಟೋ ದಿನಗಳಾದವು ನಿನ್ನ ದ್ವನಿ ಕೇಳಿ. ಈ ದಿನ ಬಂದಿತೆಂದರೆ ಸಾಕು ಅದೆಷ್ಟು ಸಂತಸ ನಿನಗೆ. ಆ ಮಾತುಗಳನ್ನು ನುಡಿಯದಿದ್ದರೆ ನಿನಗೆ ಸಮಾಧಾನವಾಗುತ್ತಿರಲಿಲ್ಲ. ಮತ್ತೆ ಮತ್ತೆ ಆ ನಿನ್ನ ಮಾತುಗಳು ನನ್ನ ಕಿವಿಯಲ್ಲಿ ಈಗಲೂ ರಿಂಗಣಿಸುತ್ತಿವೆ. ನಾನೋ ಹುಡುಗಿಯರೆಂದರೆ ಮಾರುದ್ದ ದೂರ ಸರಿಯುವ ಆಸಾಮಿ. ಅದೇಗೋ ನನ್ನ ನಿನ್ನ ನಡುವೆ ಸ್ನೇಹ ಬೆಳೆಯಿತು. ಸ್ನೇಹ ವೆಂದೂ ಪ್ರೇಮಕ್ಕೆ ತಿರುಗಬಾರದೆಂದು ಲಕ್ಷ್ಮಣ … Read more
ದೇವರೆ ಇಲ್ಲ ಎಂದವನ ಬದುಕಿನಲ್ಲಿ ದೇವತೆಯಾಗಿ ಬಂದೆ ನೀ…!: ಸಿದ್ದುಯಾದವ್ ಚಿರಿಬಿ…,
ಪ್ರೀತಿಯ ಪ್ರಿಯಲತೆಯೇ ಯಾಕೋ ಏನೂ ಬರೆಯಲಾಗಿರಲಿಲ್ಲ ತುಂಬಾ ದಿನ. ಇವತ್ತು ಮನಸ್ಸು ಯಾಕೋ ತಂತಾನೆ ಪ್ರಪುಲ್ಲ. ಮಂಜು ಬಿದ್ದ ಗೂಡಿನಲ್ಲಿ ಮುದುರಿ ಮಲಗಿದ ಗುಬ್ಬಿ ಮರಿಯನ್ನು ಸೂರ್ಯ ತಾಕಿ ಎಚ್ಚರಿಸಿದಂತೆ ನನ್ನ ಮುಂಗೈ ಮೇಲೆ ನಿನ್ನ ಬಿಸಿಯುಸಿರು. ನಿನ್ನ ನೆನಪುಗಳನ್ನು ಎದೆಯಂತರಾಳದಿಂದ ಎಕ್ಕಿ ಮನದ ಪುಟದ ಮೇಲೆ ತಂದು ತೋರಿಸುತ್ತಲೆ ಇತ್ತು. ಎರಡು ವಿರಹದ ಕವಿತೆಗಳನ್ನು ಬರೆದರು ಸಮಧಾನವೆನ್ನಿಸಲಿಲ್ಲ. ಈ ಸಂಜೆಯ ಶ್ರಾವಣದ ಝಡಿ ಮಳೆಯು ನಿನ್ನ ನೆನಪುಗಳ ತಂದು ಮನೆಯಂಗಳದಲ್ಲಿ ಎಡೆಬಿಡದೆ ಸುರಿಯುತ್ತಿದೆ. ಯಾಕೊ ಬೇಸರ … Read more
ಬುಟ್ಟಿಗೊಂದು ಬುತ್ತಿ ಬಿದ್ದಾಗ…: ಮಂಗಳ ರವಿಕುಮಾರ್
ಬೆಂಗಳೂರಿನಲ್ಲಿ ಬದುಕುವುದು ಕಲಿತು ನಾಲ್ಕೈದು ವರ್ಷ ಆಗಿರಬಹುದು. ಆದರೆ ನನ್ನನ್ನು ನಾನು ಇಷ್ಟೊಂದು ಕಳೆದುಕೊಂಡಿದ್ದು ಇದೇ ಮೊದಲು. ಹಾಡು, ಕುಣಿತ, ಎಲ್ಲರನ್ನೂ ಆಕರ್ಷಿಸುತ್ತಿದ್ದ ನನ್ನ ತಮಟೆ ಸದ್ದು.. ಅವ್ಯಾವೂ ಈಗಿಲ್ಲ. ನಾನು, ನನ್ನ ಅಸ್ಮಿತೆ ಬೇರೆಬೇರೆಯಂತೆ ಅನಿಸುತ್ತಿದೆ. ನೋಡಿ, ಆಗ ಜೊತೆಗಿದ್ದ ಗೆಳೆಯ-ಗೆಳತಿಯರು ಈಗ ದೊಡ್ಡ ಸಾಧಕರಂತೆ, ಪತ್ರಕರ್ತರಂತೆ, ಅಥವಾ ತುಂಬಾ ಸುಖೀ ಜೀವಿಗಳಂತೆ ಕಾಣುತ್ತಾರೆ. ನಾನೂ ಅವರನ್ನೆಲ್ಲಾ ಸಂಪರ್ಕಿಸುವುದೇ ಕಡಿಮೆ. ಬಹುಶಃ ನಾನೀನ ಅವರಿಗೆ ತುಂಬಾ ದೂರದ ಗೆಳತಿಯಾಗಿದ್ದಿರಬಹುದು. ಅಥವಾ ನನಗೇ ನಾನೇ ಹಾಗಂದುಕೊಂಡಿರಬಹುದು! ಒಂದಿಷ್ಟು … Read more
ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..: ಸಿದ್ದುಯಾದವ್ ಚಿರಿಬಿ.
ನೆಲದ ಮಣ್ಣು ಒಲುಮೆ ಕಣ್ಣು ತೆರಯಬಹುದು ಪ್ರೇಮದ ಹೆಣ್ಣು ಕನಸು ಮನಸುಗಳ ಬೆಸಗೆಯಲ್ಲಿ ನಮ್ಮಿಬ್ಬರ ಹೃದಯ ಮಿಲನದ ನವಿಲ ನರ್ತನವು ಪ್ರೇಮ ಕಾಶಿಯಲಿ…., ಜಗತ್ತಿನಲ್ಲಿ ಪ್ರೇಮವೇ ಧರ್ಮವೆಂದು ನಂಬಿಕೊಂಡು ಬಂದವರಲ್ಲಿ ಪ್ರೀತಿಯ ಜಲಪಾತ ಹೃದಯಂತರಾಳದಲ್ಲಿ ಧುಮ್ಮಿಕ್ಕುತ್ತದೆ. ನಿನ್ನೊಲವಿನ ಅಮಲಿನಲ್ಲೂ ಪ್ರೇಮ ನಳನಳಿಸುತ್ತದೆ ಸ್ವೀಟಿ. ಬಿರು ಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವಾಗುವಂತೆ ನಿನ್ನ ಒಲವಿನ ಮುಂಗಾರಿನ ಮಳೆ ನನ್ನೆದೆಯ ನೆಲದ ಮೇಲೆ ಸುರಿಯುತ್ತಿದೆ ಸಖಿ. ಕಾಡುವ ಕನಸಾಗಿ, ಪ್ರೀತಿಗೆ ಒಲವಾಗಿ, ಬದುಕಿಗೆ ಛಲವಾಗಿ ನನ್ನ ಜೀವನದ ಜ್ಯೋತಿ ನೀನಾಗಿ, ನನ್ನೊಂದಿಗೆ … Read more
ಹೃದಯಗಳ ಮಿಲನಮಹೋತ್ಸವವೆಂಬುದು: ಸಿದ್ದುಯಾದವ್ ಚಿರಿಬಿ
ಮೈ ಡಿಯರ್ ಸ್ವೀಟ್ ಸವಿ…, ಈ ನವಿರು ಮುಂಜಾವಿಗೆ ನಿನ್ನ ನೆನಪುಗಳಿಂದಲೆ ನೇಯ್ದ ಪ್ರೇಮದ ಬೆಡ್ ಶೀಟ್ ಹೊದ್ದು ಮಲಗಿದ್ದೇನೆ ಸಖಿ. ಸಿಹಿ ಕನಸುಗಳು ನೆನಪಿನ ಪುಟಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಆ ನೆನಪಿನ ಪುಟಗಳ ಸಾಲು ಸಾಲು ಅಕ್ಷರಗಳ ಬೀದಿಯಲಿ ಅಲೆದಂತೆ ಅಲ್ಲೆಲ್ಲೊ ನಿನ್ನ ನಗುವಿನ ವೀಣಾ ಲಹರಿ ತೇಲಿದರೆ, ಮತ್ತೆಲ್ಲೋ ನಿನ್ನ ನುಣುಪು ಪಾದಗಳ ಕಾಲ್ಗೆಜ್ಜೆಯ ಝೇಂಕಾರ ಧುಮ್ಮಿಕ್ಕುವುದು, ಕಿವಿಯ ಬಳಿ ಬಂದು ಪ್ರಿಯ ಎಂದು ನೀ ಉಸುರಿದಂತೆ, ಕೈ ಬಳೆಗಳ ಸರಿಗಮ ಚೆಲ್ಲಿದಂತೆ, ಮತ್ತೆಲ್ಲೊ … Read more
“ಮಲ್ಲಿಗೆ ಮುಡಿದು ಸುಖದಿಂದುರು ಗೆಳತಿ”: ಸಿದ್ದುಯಾದವ್ ಚಿರಿಬಿ
ನಿನ್ನೊಲವಿನ ಹಸಿ ಮಳೆಗೆ, ನೆನಪುಗಳ ಅಭ್ಯುಂಜನಕೆ ಈಗ ಕೇದಿಗೆಯ ಘಮ ನಲ್ಲೆ. ಮುಂಗಾರಿನ ಮೊದಲ ಮಳೆಯ ಹನಿ ಸಿಂಚನದಿ ಇಳೆಯು ಮೆದುವಾದಂತೆ ಈ ಹೃದಯ ನಿನ್ನ ಒಲವಿ ಝಡಿ ಮಳೆಗೆ ಮೆದುವಾಗಿ ಘಮ್ಮೆನ್ನುತಿದೆ. ಪ್ರೀತಿಯ ಸಿಂಚನದ ಮಂಪರಿನಲಿ ಮನಸು ತೂಗುಯ್ಯಾಲೆಯಾಡುತಿದೆ. ಈ ಪ್ರೀತಿ ಎಲ್ಲಿ, ಯಾವಾಗ, ಹೇಗೆ ಉದ್ಬವಿಸಿಬಿಡುತ್ತದೋ ತಿಳಿಯದು. ನಯನಗಳ ಮಹಲಿನಲಿ ಹೊಕ್ಕು ಗೆಜ್ಜೆಕಟ್ಟಿ ಭರತ ನಾಟ್ಯವಾಡಿಬಿಡುತ್ತದೆ. ಅದೇಷ್ಟೋ ಮೋಹಕ ನಿನ್ನಾ ನಗೆ ಮೊಗ, ಗಲ್ಲದ ಮೇಲಿನ ಆ ಹೂ ದಳ, ಪದಗಳೆ ಇಲ್ಲದೆ ಪಾದಗಳು … Read more
ಕೆಂಡಸಂಪಿಗೆಯಂಥವಳ ನೆನಪಿನಲ್ಲಿ… : ಶಿವಕುಮಾರ ಓಲೇಕಾರ
ಅಬ್ಬಾ ! ಆ ದಿನಗಳು ನನ್ನಲ್ಲಿ ಅದೆಷ್ಟು ಸಂತೋಷ, ಅದೆಷ್ಟು ಉಲ್ಲಾಸದಿಂದ ಕೂಡಿದ್ದವು ಎಂದು ಹೇಳೋದಕ್ಕೆ ಈಗ ಮನಸ್ಸು ಭಾರವಾಗುತ್ತದೆ. ಈ ಜಗತ್ತಿನಲ್ಲಿ ಕಾಣದ ಸುಂದರ ವಸ್ತು ಕಂಡು ನನ್ನದೆಂದು ಭಾವಿಸಿ ಅದನ್ನು ಅತಿಯಾಗಿ ಹಚ್ಚಿಕೊಂಡಿದ್ದೆ ನಂದೆ ತಪ್ಪು. ಈ ಹರಿದ ಜೀವನದಲ್ಲಿ ಯಾರು ನೆನಪಿಲ್ಲ ಎಂಬ ಭಾವನೆಯ ಮುಖಾಂತರ ನನ್ನಿಂದ ನಾನೆ ದೂರಾಗಿದ್ದು, ಭಾವದ್ವೇಗಕ್ಕೆ ಒಳಗಾಗಿದ ದಿನಗಳು ಅದೆಷ್ಟೋ ಇವೆ ಎಂಬದನ್ನು ಎಣಿಸಲು ನೆನಪು ಉಳಿಯದೆ ಹೋಗಿದೆ. ಆ … Read more
ಮೌನದೊಳಗೊಂದು ಜೀವಂತ ಪ್ರೀತಿ: ಸಿದ್ದುಯಾದವ್ ಚಿರಿಬಿ
ಅವಳು ಮತ್ತು ನಾನು ಕವಿತೆಗಳಲಿ ಬಳಸುವ ಪದ ಒಂದಿದೆ, ಯಾವ ಕವಿತೆಯೇ ಹಾಗಲಿ ಆ ಪದವಿಲ್ಲದೆ ಆರಂಭವಾಗುವುದಿಲ್ಲ, ಆ ಪದವಿಲ್ಲದೆ ಅಂತ್ಯಯಾಗುವುದಿಲ್ಲ. ನನಗರಿವಿಲ್ಲದೆ ಉದ್ಭವಿಸಿಬಿಡುವ ಆ ಒಂದೆ ಮಾತು ನಮ್ಮಿಬ್ಬರ ಮಧ್ಯೆ ಅದೇನೋ ಸಂಬಂಧಗಳನ್ನು ಸೃಷ್ಟಿಸಿದೆ. ನಮ್ಮಿಬ್ಬರಲ್ಲಿ ಮುಗಿಯಲಾಗದ ಸಂಭಾಷಣೆಯನ್ನು ಸೃಷ್ಟಿಮಾಡುತ್ತದೆ. ಒಲುಮೆ, ಪ್ರೀತಿ, ಮನಸು, ಕನಸು, ಭಾವನೆ, ಬದುಕು, ಉಸಿರು, ಇಂತಹ ಪದಗಳಿಗಿಂದ ಮೋದಲು ಮನಸಿನಲ್ಲಿ ಬಂದು ನಿಲ್ಲುವ ಆ ಒಂದು ಪದ ನಿಶ್ಶಬ್ದವಾದ ಹೃದಯ ಬಡಿತವನ್ನು ಶರವೇಗದಲ್ಲಿ ಭಾವನೆಗಳನ್ನು ಜಾಗೃತವಾಗಿಸಿಬಿಡುತ್ತದೆ. ನಮ್ಮಿಬ್ಬರ ಮಧ್ಯೆ ನೇರ … Read more
ಪ್ರೇಮದ Confession: ಚಂದನ್ ಶರ್ಮ
ತಂದೆ-ತಾಯಿ, ಬಂದು-ಬಳಗದ ಪ್ರೀತಿ, ವಾತ್ಸಲ್ಯ, ಅಕ್ಕರೆ, ಮಮಕಾರ ಬಿಟ್ಟರೆ ಉಳಿಯೋದು ‘ಗಂಡು-ಹೆಣ್ಣಿನ’ ಪ್ರೇಮ; ಅದೇ ವಿಶ್ವದ ಹಲವಾರು ಕಾದಂಬರಿಗಳ, ನಾಟಕಗಳ, ಚಲನಚಿತ್ರಗಳಲ್ಲಿ ಕಂಡುಬರುವ ಪ್ರೀತಿ; ಇಲ್ಲ ಅದನ್ನ ಹಾಗೆ ಹೇಳಬಾರದು ಪ್ರೀತಿ ತುಂಬಾ ವಿಸ್ತಾರಾವಾದ ವಿಷಯ ಅದು ಮಾನವನ ಮೂಲ. ಈ ಪ್ರೀತಿ ಬಯಕೆಗಳ ಮೂಲ; ಒಂದು ಜೀವದ ಸುತ್ತ ಲಕ್ಷ ಆಕಾರಗಳನ್ನು ಪಡೆದು ಸುತ್ತುತ್ತಲೇ ಇರುತ್ತದೆ ಜೀವ ಹೋಗುವ ತನಕ. ಲಕ್ಷ … Read more
ನನ್ನೊಲವಿನ ಗೆಳತಿಗೆ…: ರಮೇಶ್ ನೆಲ್ಲಿಸರ
ನನ್ನೊಲವಿನ ಗೆಳತಿಗೆ… ಹೌದು ನಿನಗೆ ಬರಿತಿರೋದು ಮಾರಾಯ್ತಿ ಇನ್ನು ಎಷ್ಟು ದಿನ ಅಂತಾ ಈ ಮೋಬೈಲ್ನಲ್ಲಿ ಮೆಸೇಜ್ ಟೈಪ್ ಮಾಡದು, ಅದ್ ನೋಡಿದ್ರೆ 135 ಕ್ಕಿಂತ ಜಾಸ್ತಿ ಲೆಟರ್ಸ್ ತಗೊಳಲ್ಲ 2-3 ಮೆಸೇಜ್ ಒಟ್ಟಿಗೆ ಕಳ್ಸಣ ಅಂದ್ರೆ ನಿಮ್ ಡಬ್ಬ ಊರಲ್ ನೆಟ್ವರ್ಕಾದ್ರೂ ಸಿಗ್ತದಾ? ಅದೂ ಇಲ್ಲ,ಹೋಗ್ಲಿ ಸಿಗೇ ಮಾರಾಯ್ತಿ ಸ್ವಲ್ಪ ಮಾತಾಡನಾ ಅಂದ್ರೆ ನೀನು ಅದ್ಕೂ ನಮ್ಮನೇಲ್ ಸ್ಟ್ರಿಕ್ಟು ಹಾಗೇ ಹೀಗೆ ಅಂತೀಯಾ,ಮೂರ್ -ನಾಲ್ಕ್ ಸತಿ ಸಿಕ್ಕಿದ್ರು ಅರ್ಧ ಗಂಟೆ ಮಾತಾಡ್ಸ್ ಓಡ್ತಿಯಾ,ವರ್ಷ ಆತಲೆ ಅದ್ರು … Read more
ದಶಕದ ನೆನೆಪಿಗೆ ಗೆಳೆಯನಿಗೊಂದು ಪ್ರೇಮ ಪತ್ರ: ಸುಮಲತಾ ನಾಯ್ಕ
ಗೆಳೆಯ..ಗೆಳೆಯ.. ಏ.. ಮರಿ .. ಮರಿ ನಂಗೆ ತುಂಬ ಖುಷಿ ಆಗ್ತಾ ಇದೆ. ನಂಗೆ ನಂಬೋಕೆ ಆಗ್ತಾ ಇಲ್ಲ. ನಂಗೆ ನಗು ಬರ್ತಾ ಇದೆ. ಮತ್ತದೇ ನಾಚಿಕೆ ನನ್ನಲ್ಲಿ ಮೂಡುತ್ತಿದೆ. ಯಾಕೆ ಗೊತ್ತಾ ನಮ್ಮ ಪ್ರೇಮಕ್ಕೆ 10 ವರ್ಷವಂv!!!É. ನಿಮಗೆ ನಂಬೋಕೆ ಆಗ್ತಾ ಇದ್ಯಾ. ನೀವ್ ಬಿಡಿ ನನಗಿಂತ ತುಂಬಾ ಹುಷಾರು . ಎಲ್ಲವನ್ನು ನೆನೆಪಿಡುವ ಮಹಾ ರಸಿಕ. ನೋಡಿ ಒಮ್ಮೆ ಹಿಂದೆ ಹೋಗಿ ಬರ್ಲಾ. ನಮ್ಮ ಪ್ರೇಮಕ್ಕೆ 10ವರ್ಷದ ಹೊಸ್ತಿಲು. ನೆನೆದಷ್ಟು ಮೊಗೆದಷ್ಟು, ಬೆರೆತಷ್ಟು, ಕಲೆತಷ್ಟು … Read more
ಅವನ ಪತ್ರ: ಪ್ರಾಣ್
ಹೇಗೆ ಕರೆಯಲಿ ಎಂದು ತಿಳಿಯದೆ ಹಾಗೆ ಶುರು ಮಾಡ್ತಾ ಇದ್ದೀನಿ. ಎಂದಿನಂತೆ 'ಮುದ್ದು' ಎಂದು ಕರೆಯೋಣ ಅಂದ್ಕೊಂಡೆ, ಅದ್ಯಾಕೋ ಹಾಗೆ ಕರೆಯಬೇಕು ಅನಿಸಲಿಲ್ಲ. ಹೊರಡುವಿಕೆಯ ಹೊಸ್ತಿಲ ಬಳಿ ನಿಂತು ಹಿಂತಿರುಗಿ ನಿನ್ನ ನೋಡಿ, ಹೇಳಲು ನಿಂತರೆ ಮತ್ತೆ ಹೋಗಬೇಕು ಅನಿಸೋದಿಲ್ಲ ! ಅದಕ್ಕೆ ಹಿಂದಕ್ಕೆ ತಿರುಗಿ ನೋಡದೆ ಹೊರಟಿದ್ದೀನಿ . ಆದರು ಹೊರಡುವ ಮುನ್ನ ನಿನಗೆ ಹೇಳದೆ ಹೋಗಬೇಕು ಅಂತ ಕೂಡ ಅನಿಸಲಿಲ್ಲ. ಬಹುಶಃ ಒಂದ್ಹತ್ತು ವರುಷವಾಗಿದೆಯಲ್ಲವೇ ನಮ್ಮಿಬ್ಬರ ಪರಿಚಯವಾಗಿ !? ಪರಿಚಯ ಗೆಳೆತನವಾಗಿ, ಗೆಳೆತನ ಅಭಿಮಾನವಾಗಿ, … Read more
Breakup ಆದಮೇಲೆ ಹುಡುಗರು: ಪ್ರಮೋದ ಶೇಖರ
ಹುಡುಗರು ಪ್ರೀತಿಯಲ್ಲಿ ಹುಚ್ಚರಂತೆ Behave ಮಾಡ್ತಾರೆ. ತುಂಬಾ ಜಾಸ್ತಿ ಪ್ರೀತಿಯಲ್ಲಿ ಮುಳುಗಿರುವ ಹುಡುಗರದಂತೂ ಬೇರೆನೇ ಲೋಕ. ಅವರ ನಡೆನುಡಿ ಅದರಲ್ಲೇನೂ ಮಜಾ ಇರುತ್ತದೆ. ಮುಖದಲ್ಲಿ ಸುಮ್ಮನೆ ನಗು ಮುಡುವುದು, ಚಿಕ್ಕ ವಿಷಯಗಳಿಗೇಲ್ಲ ಸಿಟ್ಟು ಮಾಡಿಕೊಳ್ಳೋದು, ಗಾಳಿಯಲ್ಲಿ ಚಿತ್ತಾರ ಬಿಡಿಸುವುದು ಅದರ ದೈನಂದಿನ ಕಾರ್ಯವಾಗಿರುತ್ತದೆ. ಕೆಲವರಿಗೆ ಒಳ್ಳೆಯ ಗುಣಗಳುಳ್ಳ ಹುಡುಗಿಯರು ಸಿಗುತ್ತಾರೆ, ಕೆಲವರಿಗೆ ಮುಗ್ಧ ಮನಸ್ಸಿನ ಹುಡುಗಿಯರು ಸಿಗುತ್ತಾರೆ, ಮತ್ತೆ ಕೆಲ ಹುಡುಗರಿಗೆ ಹಠ ಸಾಧಿಸುವ ಹುಡುಗಿಯರು ಗಂಟ್ಟು ಬೀಳುತ್ತಾರೆ. ಬೇರೆಬೇರೆ ಹುಡುಗಿರ ವಿಚಾರಗಳು Different ಆಗಿರುತ್ತವೆ, ಅವರು … Read more
ಹೇ ನನ್ನ ಕನಸಿನ ಕೂಸೆ…: ಮಂಜುನಾಥ ಗುಡ್ಡದವರ
ಹೇ ಕನಸಿನ ಕೂಸೆ… ಕುಶಲವೇ..? ಕ್ಷೇಮವೇ..? ಸೌಖ್ಯವೇ..? ಎಲ್ಲಿರುವೇ..? ಹೇಗಿರುವೇ..? ಇನ್ನೂ ಏನೇನೊ ಸಾವಿರ ಮಾಮೂಲಿ ಪ್ರಶ್ನೆಗಳು. ಆದರೆ ನಿನ್ನ ಕುಶಲೋಪರಿಯ ವರದಿ ತಿಳಿಯಲು ನಿನ್ನಿಂದ ಒಂದು ಪತ್ರವು ಇಲ್ಲ, ನಾ ಮೌನಿಯಾದಾಗ ರಚ್ಚೆ ಹಿಡಿದು ಕೆನ್ನೆ ಹಿಂಡಿ, ಕಣ್ಣ ಮಿಟುಕಿಸಿ ಯಾಕೋ ಕೂಸೆ.. ಏನಾಯ್ತು..? ಎನ್ನುವ ಆ ನಿನ್ನ ಸಿಹಿ ಸಾಂತ್ವಾನವು ಇಲ್ಲ. ಯಾಕಾಯ್ತು ಕೂಸೆ ಹೀಗೆ..? ಎಲ್ಲದಕ್ಕೂ ದೇವರಿದ್ದಾನೆ, ಆಗುವುದೆಲ್ಲಾ ಒಳ್ಳೆಯದಕ್ಕೆ ಕಣೋ ಅಂತ ನನ್ನ ಅನುಮಾನಗಳಿಗೆ ನಂಬಿಕೆಯ ನೀರೆರೆದು, ನೀನೇಕೆ ಬತ್ತಿ … Read more
ಕದಡಿಹೋದ ಮನವ ಹಿಡಿದು: ಲಹರಿ
ಸಂದು ಹೋದವಲ್ಲೇ ಗೆಳತೀ.. ಬದುಕಲ್ಲಿಷ್ಟು ದಿನಗಳು! ಸದ್ದು-ಗದ್ದಲವ ಮಾಡದಂತೆ.. 'ನೀ ಮಾತು ಮರೆತು ಮೌನಕ್ಕೆ ಜಾರಿದಾಗೆಲ್ಲಾ ಹುಡುಕಲು ಹೊರಡುತ್ತೇನೆ ನಾ ನಿನ್ನೊಳಗಿನ ಆ ನನ್ನ ವ್ಯಕ್ತಿತ್ವದ ಛಾಯೆಯನ್ನು' ಎಂದು ಬರೆದಿದ್ದೆ ನಾ ಅಂದು, ನಕ್ಕು ಸುಮ್ಮನಾಗಿದ್ದೆ ನೀ! ನನ್ನ ಈ ವ್ಯಕ್ತಿತ್ವ ನಿನ್ನೊಳಗೆ ಇಳಿದಿದ್ದೇ ಸುಳ್ಳಾ ಎಂದೆನಿಸಲಾರಂಭಿಸಿದೆ ಇಂದು. ತಿಂಗಳಾಯ್ತಲ್ಲೆ ಹುಡುಗಿ ನಾವಿಬ್ಬರೂ ಮಾತು ಮರೆತು , ನಮ್ಮಿಬ್ಬರ ಮನಸು ಮುರಿದು.. 'ದೃಷ್ಟಿಯಾಗತ್ತೆ ಕಣೇ ನಿಮ್ಮಿಬ್ಬರ ಗೆಳೆತನಕ್ಕೆ' ಎನ್ನುತ್ತಿದ್ದ ಗೆಳತಿಯೂ ನೀವ್ಯಾಕೆ ದೂರ ಸರಿಯುತ್ತಿದ್ದೀರ ಎಂದು ಬಿಕ್ಕಲಾರಂಭಿಸಿದ್ದಾಳೆ … Read more
ಆತ್ಮೀಯ ಎಂದರೆ soulmate ಅಂತ: ಲಾವಣ್ಯ ಆರ್.
ಹಾಯ್ ಆತ್ಮೀಯ, ತಪ್ಪು ತಿಳಿಯಬೇಡ ನಾನಂದದ್ದು ಆತ್ಮೀಯ ಎಂದು ಪ್ರೇಮಿಯೆಂದಲ್ಲ, ನೀನೆಂದು ನನ್ನ ಪ್ರೇಮಿಯಾಗಿರಲಿಲ್ಲ. ಆತ್ಮೀಯ ಎಂದರೆ soulmate ಅಂತ. ಇದೇನು ಇದ್ದಕಿದ್ದ ಹಾಗೆ ನೀನು ಅನ್ನುತ್ತಿದ್ದಾಳೆ ಅಂತ ಹುಬ್ಬು ಗಂಟಿಕ್ಕಬೇಡ ಇದು ಮನಸಿನ ಮಾತು ಇಲ್ಲಿ ಏಕವಚನ ಬಹುವಚನದ ಲೇಪನ ಅನವಶ್ಯಕ. ಅದು ಎಲ್ಲಿದ್ದೊ ತಿಳಿಯದು, ದಿಢೀರನೆ ಪ್ರತ್ಯಕ್ಷವಾದೆ ನನ್ನಲ್ಲಿ ನೂರಾರು ಬದಾಲಾವಣೆ ತಂದೆ, ಯಾರನ್ನು ಕುಡಿ ನೋಟದಲ್ಲು ನೋಡದವಳು ನಿನ್ನ ಕಿರುಗಣ್ಣಿನ ಕೊನೆಯಲ್ಲಿ ನೋಡುವ ಹಾಗೆ ಮಾಡಿದೆ, ಮಾತಿಗಿಂತ ಮೌನವನ್ನೆ ಆಶ್ರಯಿಸುವವಳಲ್ಲಿ ಆಡಿದರು ಮುಗಿಯದಷ್ಟು … Read more
ಪ್ರೀತಿಯ ಯಾನಕ್ಕೆ: ವಸಂತ ಬಿ ಈಶ್ವರಗೆರೆ
ಪ್ರೀತಿಯ ಯಾನಕ್ಕೆ ಏರಿಳಿತಗಳ ಓಟ, ನನ್ನವಳು ಜೊತೆಗಿದ್ದರೇ ಅದ ಮರೆವ ಆಟ ನನ್ನ(ಅ)ವಳ ಪ್ರೀತಿಗೆ ಇಂದು 8 ವರ್ಷಗಳ ‘ವಸಂತ’. ಎಂದೂ, ಯಾವತ್ತೂ ದೂರಾಗಿದ್ದಿಲ್ಲ. ಭಾವನೆಗಳ ತೋಯ್ದಾಟದಲ್ಲಿ ನಾವಿಬ್ಬರೂ ಎಂದು ಒಂದೆಂಬ ಭಾವನೆ. ಕಲ್ಪನೆಯ ಗೂಡಲ್ಲಿ ಜೋತೆಯಾಗಿ ಹುಟ್ಟಿದ ಹಕ್ಕಿಗಳೆಂಬ ಭಾವನೆ ನಮ್ಮೊಳಗೆ. ಅದೇಕೋ ಮುನಿಸು ನಮ್ಮಲ್ಲಿಲ್ಲ, ಪ್ರೀತಿಯೇ ನಮ್ಮೊಳಗೆಲ್ಲ. ನೋಡಿದ ಎಲ್ಲರೂ ಕಲಿಯುಗದ ಅಮರ ಪ್ರೇಮಿಗಳು ಎಂಬ ಭಾವನೆಯಿಂದಲೇ ನಮ್ಮನ್ನ ಕಂಡವರು. ಎಲ್ಲರ ಹಾಗೇ ನಾವು ಸುತ್ತಾಟ, ತಿರುಗಾಟ ಮಾಡಿದ್ದು ಅಲ್ಪವೇ, ಅದರೇ ಮನಸ್ಸೆಂಬ ಭಾವನೆಯ … Read more
ನಾನು ಮತ್ತು ಅವನು……: ಚೈತ್ರಾ ಎಸ್.ಪಿ.
ಬದುಕಿನಲ್ಲಿ ಎಲ್ಲವನ್ನು ಸೀರಿಯಸ್ ಆಗಿ ತಗೋಳೋ ನಾನು ಕೆಲವೊಂದು ಸೀರಿಯಸ್ ವಿಚಾರಗಳನ್ನ ತಮಾಷೆಯಾಗಿ ತಗೊಂಡು ನನ್ನನ್ನ ಅದ್ಯಾವುದೋ ಲೋಕಕ್ಕೆ ಲಾಕ್ ಮಾಡ್ಕೊಂಡಿದ್ದೀನಿ ಅನ್ನಿಸ್ತಾ ಇದೆ. ಬೇಡವೆಂದರೂ ಮತ್ತೆ ಹಚ್ಚಿಕೊಂಡೆ. ಪ್ರೀತಿಯೆಂಬ ಮಾಯೆಯೊ, ಸಂತೋಷವೋ ಅಲ್ಲ ಕೊರಗೋ !! ಯಾವುದೋ ಒಂದು ಭಾವಕ್ಕೆ ಮಣಿದೆ. ಪ್ರೀತಿಸಿದೆ, ಮುದ್ದಿಸಿದೆ, ಗೋಳಾಡಿದೆ, ಕಣ್ಣೀರಾದೆ. ನನ್ನೆಲ್ಲ ಹುಚ್ಚಾಟಗಳನ್ನು ತಿದ್ದಿ ಬುದ್ದಿ ಹೇಳಿ ಒಂದು ರೂಪ ಕೊಟ್ಟು, ಪ್ರೀತಿಯ ಧಾರೆಯೆರೆದು ನನ್ನನ್ನು ಧಾರೆಯೆರೆಸಿಕೊಳ್ಳಲಾರೆನೆಂಬ ದುಃಖದ ಕೂಪಕ್ಕೆ ತನ್ನನ್ನು ತಾನೇ ತಳ್ಳಿಕೊಂಡ ಆ ಜೀವಕ್ಕೆ ನಾ … Read more
ಈ ಮನವೆಂಬ ದುಂಬಿಯ ಕರೆದೊಯ್ದು: ಅಜಿತ್ ಭಟ್
ನೀ ಮುಗಿಲಾಗು ನಾ ಕಡಲಾಗುವೆ ಜೊತೆ ಇರದಿದ್ದರೇನಂತೆ ರೆಪ್ಪೆ ತೆರೆದರೆ ನನಗೆ ನೀನು, ನಿನಗೆ ನಾನು.. ಎಲ್ಲಿರುವೆ? ಹೇಗಿರುವೆ? ಎಲ್ಲೋ ಸಾಗಬೇಕಿದ್ದ ಈ ನನ್ನ ಬದುಕನ್ನು ಇನ್ನೆಲ್ಲಿಗೆ ತಂದು ನಿಲ್ಲಿಸಿರುವೆ. ಎಲ್ಲಿಗೆ? ಯಾತಕೆ? ಏನೂ ಕೇಳದೆ ಕಣ್ಮುಚ್ಚಿ ನಿನ್ನ ಹಿಂಬಾಲಿಸಿ ಬಂದೆ ಕಣ್ತೆರೆದು ನೋಡಿದಾಗ ಕವಲು ದಾರಿಯಲ್ಲಿ ನಾ ಒಂಟಿ ಪಯಣಿಗ. ನೀನು ಇನ್ನಾರದೋ ಬದುಕಿನ ಸಾರಥ್ಯವ ಹಿಡಿದಿರುವೆಯ? ಆದರೆ ನನ್ನ ಪರಿಸ್ಥಿತಿ ಗೂಡನ್ನು ತಪ್ಪಿಸಿಕೊಂಡ ಜೇನು ಹುಳುವಿನಂತೆ ಎತ್ತ ಸಾಗಿದರು ಅದು ನನ್ನದಲ್ಲದ ದಾರಿ. ನನ್ನ … Read more
ರುಕ್ಮಿಣಿಯಾಗದಿದ್ದರೂ ಭಾಮೆಯಾದರೂ ಆಗುತ್ತಿದ್ದೆನೇನೋ: ಲಹರಿ
ಇಂಥದೇ ಒಂದು ಅರೆಬರೆ ಬೆಳಕಿರುವ ಸಂಜೆಯಲ್ಲಲ್ಲವಾ ನೀ ಸಿಕ್ಕಿದ್ದು ನಂಗೆ? ಇನ್ನೂ ಹೆಚ್ಚು ಕೆಂಪಗಿದ್ದ ಸೂರ್ಯ ಮುಳುಗುವ ಹೊತ್ತಲ್ಲೇ ನನ್ನ ಮನಸ್ಸಿನೊಳಗೆ ನಡೆದು ಬಂದಿದ್ದು ನೀನು.. ನಂತರದ್ದೆಲ್ಲಾ ಪ್ರೀತಿಯದ್ದೇ ಪ್ರವಾಹ! ನನ್ನ ಕನಸುಗಳ ಪ್ರಪಂಚದಲ್ಲಿ ನೀ ಕೃಷ್ಣನಾದರೆ , ನಿನ್ನ ನವಿಲುಗರಿಯ ಬದುಕಿನಲ್ಲಿ ರಾಧೆಯಾಗಿದ್ದೆ ನಾ! ರಾಧಾ-ಕೃಷ್ಣರು ಎಂದೂ ಸೇರುವುದಿಲ್ಲವೆಂಬ ಸತ್ಯ ತಿಳಿದಿದ್ದರೆ ಅಂದೇ ರುಕ್ಮಿಣಿಯಾಗುತ್ತಿದ್ದೆನೇನೋ… ಪ್ರೀತಿಸುವುದೊಂದೇ ಗೊತ್ತಿತ್ತು ಈ ಹೃದಯಕ್ಕೆ. ಕಡುನೀಲಿ ಬಣ್ಣದ ಶರ್ಟ್ ತೊಟ್ಟು ಕೈಯಲ್ಲೊಂದು ಸಿಗರೇಟ್ ಹಿಡಿದವನ ನೋಡಿದಾಗ ನನ್ನೊಳಗೊಂದು ಹೂಕಂಪನ ಮೂಡಿತ್ತು.೧೯೯೬ರ … Read more
ಅವಳು ಮತ್ತು ಅಂಗಡಿ: ಅಕ್ಷಯ ಕಾಂತಬೈಲು
ಮೊಬೈಲಿನ ಕರೆನ್ಸಿ ಖಾಲಿಯಾದರೆ, ರೀಚಾರ್ಚ್ ಮಾಡುವ ಅಂಗಡಿ ಎಷ್ಟು ದೂರವಿದ್ದರೂ ಅಲ್ಲಿಗೆ ದಾಪುಗಾಲಿಡುತ್ತೇವೆ. ದೇವಸ್ಥಾನದಲ್ಲಿ ಮಂಗಳಾರತಿಯ ಹೊತ್ತು ತಪ್ಪಬಾರದೆಂದು ತುರಾತುರಿಯಿಂದ ಹೊರಡುತ್ತೇವೆ. ಇನ್ನೇನು ಕೆಲವೇ ನಿಮಿಷದಲ್ಲಿ ಬಸ್ಸು ಹೊರಡುತ್ತದೆಂದು ಓಡೋಡಿ ಹೋಗುತ್ತೇವೆ. ಹಾಗೆಯೇ ನಾನಿಲ್ಲಿ ಅವಳನ್ನು ನೋಡಲು, ಉನ್ಮತ್ತನಾಗಿ ಬೆಳಗ್ಗೇ ತಪ್ಪದೆ ಅವಳು ಹೊರಡುವ ಹೊತ್ತ ಗೊತ್ತು ಮಾಡಿ ಹೋಗುತ್ತಿರುವೆ. ನಾನು ಹೋಗುವುದಕ್ಕೆ ಪವಿತ್ರ ಉದ್ದೇಶವಿದೆ ಮತ್ತು ಭಾರಿ ತೃಪ್ತಿಯಿದೆ. ಅವಳೇನು ನೋಡಲು ಚಿತ್ರ ಸುಂದರಿಯರಾದ ಕತ್ರೀನಾ ಅಲ್ಲ, ಐಶ್ವರ್ಯ ರೈನೂ ಅಲ್ಲ. ಒಬ್ಬಳು; … Read more