ಪಂಚ್ ಕಜ್ಜಾಯ

ಹಗಲು ದರೋಡೆಕೋರರು…: ಗುರುಪ್ರಸಾದ ಕುರ್ತಕೋಟಿ

ನಾನು ಮದ್ಯಾಹ್ನ ಮಲಗೋದೇ ಅಪರೂಪ. ಆದರೂ ಅವಕಾಶ ಸಿಕ್ಕಾಗ ಬಿಡೋಲ್ಲ. ನಾನು ಹಾಗೆ ಮಲಗಿದಾಗ ನನ್ನ ಫೋನಿಗೆ ನನ್ನ ಮೇಲೆ ತುಂಬಾ ಅಸೂಯೆ! ಅವತ್ತೂ ಬೊಬ್ಬೆ ಹೊಡೆದು ನನ್ನ ಬಡಿದೆಬ್ಬಿಸಿತ್ತು. ನಮ್ಮ “ಬೆಳೆಸಿರಿ”ಯಲ್ಲಿ ಕೆಲಸ ಮಾಡುತ್ತಿದ್ದವ ಮಾಡಿದ ಫೋನ ಅದು. ಕಟ್ ಮಾಡಿದರೂ ಮತ್ತೆ ಮತ್ತೆ ಮಾಡತೊಡಗಿದ. ಒಂದಿಷ್ಟು ತರಕಾರಿಗಳ ಡೆಲಿವರಿ ಮಾಡಲು ನನ್ನ ಸ್ಕೂಟರ್ ನಲ್ಲಿ ಯೆಲಹಂಕಾದ ಬಳಿಯ ಒಂದು ಅಪಾರ್ಟ್ಮೆಂಟ್ ಗೆ ಹೋಗಿದ್ದ. ಆಗ ತಾನೇ ಜೋಂಪು ಹತ್ತಿದ್ದ ಬ್ರಾಹ್ಮಣನ ನಿದ್ದೆ ಭಂಗ ಮಾಡುವುದು […]

ಪಂಚ್ ಕಜ್ಜಾಯ

ದೊಡ್ಡೂರು ಮತ್ತು ಅವಲಕ್ಕಿ: ಗುರುಪ್ರಸಾದ ಕುರ್ತಕೋಟಿ

ನಾನು ಬೆಳೆದ ಲಕ್ಷ್ಮೇಶ್ವರ (ಈಗಿನ ಗದಗ ಜಿಲ್ಲೆ) ನಾನಾ ಕಾರಣಗಳಿಂದ ನನಗೆ ಇಷ್ಟ. ಅದೊಂದು ಐತಿಹಾಸಿಕ ಮಹತ್ವವುಳ್ಳ ಊರು. ಅದರ ಸುತ್ತಲೂ ತುಂಬಾ ಹಳ್ಳಿಗಳು ಇವೆ. ಅದರಲ್ಲೇ ಕಳಶಪ್ರಾಯವಾದ ಹಳ್ಳಿಯ ಹೆಸರು ದೊಡ್ಡೂರು. ಅದೊಂದು ಚಿಕ್ಕ ಹಳ್ಳಿ ಆದರೂ ಹೆಸರು ಮಾತ್ರ ದೊಡ್ಡೂರು. ಒಂದು ಕಾಲದಲ್ಲಿ ಆ ಪ್ರದೇಶದಲ್ಲಿ ಅದೇ ದೊಡ್ಡ ಊರಾಗಿತ್ತೋ ಏನೋ. ಒಟ್ಟಿನಲ್ಲಿ ನನ್ನ ತಲೆಯಲ್ಲಿ ಹಳ್ಳಿಗಳ ಬಗ್ಗೆ ಒಂದು ವಿಶಿಷ್ಟ ಗೌರವ ಹುಟ್ಟಿಸಿ, ಕೃಷಿ ಬಗ್ಗೆ ನನ್ನ ತಲೆಯಲ್ಲಿ ಆಳವಾಗಿ ಬೀಜ ಬಿತ್ತಿದ […]

ಪಂಚ್ ಕಜ್ಜಾಯ

ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವಾ…: ಗುರುಪ್ರಸಾದ ಕುರ್ತಕೋಟಿ

ಅವತ್ತಿನ ಒಂದೊಂದು ಕ್ಷಣಗಳು ನನಗೆ ಒಂದು ಚಲನಚಿತ್ರದ ಫ್ರೆಮುಗಳಂತೆ ನೆನಪಿವೆ, ಅದೂ ಕಲರ್ ಸಿನಿಮಾ! ಹುಬ್ಬಳ್ಳಿಯ ಸುಧಾ ಚಿತ್ರಮಂದಿರದಲ್ಲಿ ರಾಮಾಚಾರಿ ಚಿತ್ರವನ್ನು ಅಮ್ಮನ ಜೊತೆ ಕುಳಿತುಕೊಂಡು ನೋಡಿದ ಮಧುರ ಕ್ಷಣಗಳವು. ಅದು ನನ್ನಮ್ಮನ ಜೊತೆ ನೋಡಿದ ಕೊನೆಯ ಸಿನೆಮಾ. ಹತ್ತು ಹಲವಾರು ಅರೋಗ್ಯ ಸಮಸ್ಯೆಗಳು ಅವಳನ್ನು ತುಂಬಾ ಬಸವಳಿಯುವಂತೆ ಮಾಡಿದ್ದವು. ದಿನ ದಿನಕ್ಕೂ ಅವಳಲ್ಲಿ ಜೀವಿಸುವ ಹಂಬಲ ಕಡಿಮೆಯಾಗುತ್ತಿದ್ದ ಸಮಯವದು. ಆದರೆ ತುಂಬಾ ಜೀವನೋತ್ಸಾಹಿಯಾಗಿದ್ದ ಅವಳು ಇಂತಹ ಸಂಧರ್ಬದಲ್ಲೂ ‘ರಾಮಾಚಾರಿ’ ಯನ್ನು ನೋಡಲು ಬಯಸಿದ್ದಳು. ಸಿನೆಮಾದ ಕೆಲವೊಂದು […]

ಪಂಚ್ ಕಜ್ಜಾಯ

ಕಬಡೀ… ಕಬಡೀ… whatever!: ಗುರುಪ್ರಸಾದ ಕುರ್ತಕೋಟಿ

ಮಕ್ಕಳು ಎಲ್ಲಿದ್ದರೂ ಮಕ್ಕಳೇ. ಅದರೂ NRI ಮಕ್ಕಳು ವಿಭಿನ್ನ ಅಂತ ನನಗೆ ಅನಿಸುತ್ತಿದ್ದುದು ಅವರ ಮಾತಾಡುವ ಶೈಲಿಯಲ್ಲಿ. ಅದೊಂಥರ ಅರಗಿಸಿಕೊಳ್ಳಲಾಗದ ವಿಷಯ ನನಗೆ. ವಿಶೇಷವಾಗಿ ಅವರು ಮಾತಾಡುವ american accent ನನ್ನಲ್ಲಿ ಆ ಭಾವನೆ ಹುಟ್ಟಿಸುತ್ತಿತ್ತು. ಮಕ್ಕಳು ಎಲ್ಲಿ ಬೆಳೆಯುತ್ತಾರೋ ಅಲ್ಲಿನ ಭಾಷೆ ಸಂಸ್ಕೃತಿಗಳಿಗೆ ಒಗ್ಗಿಕೊಳ್ಳುತ್ತಾರೆ. ಅದು ಅವರ ತಪ್ಪಲ್ಲ. ಹೊಸದಾಗಿ ಅಮೆರಿಕೆಯಲ್ಲಿ ಹೋಗಿ ಅಲ್ಲಿದ್ದ ಮಕ್ಕಳ ಕುರಿತು ಹಾಗೆ ಯೋಚಿಸಿದ್ದು ನನ್ನ ತಪ್ಪು. ಕ್ರಮೇಣ ಅವರ ಮಾತುಗಳು ನನಗೆ ಒಂತರಹದ ಮಜಾ ಕೊಡುತ್ತಿದ್ದವು. ನನ್ನ ಮಗಳೂ […]

ಪಂಚ್ ಕಜ್ಜಾಯ ಪಂಜು-ವಿಶೇಷ

ನಾವು… ನಮ್ಮದು: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ನಮ್ಮ ಜೀವನದ ಗತಿಯನ್ನು, ನಮ್ಮ ಯೋಚನಾ ಲಹರಿಯನ್ನು ಬದಲಿಸಬಲ್ಲ ತಾಕತ್ತು ಇರುವುದು ಪುಸ್ತಕಗಳಲ್ಲಿ ಮಾತ್ರ ಎಂದು ಬಲವಾಗಿ ನಂಬಿರುವವನು ನಾನು. ನಮ್ಮ ಮನೆಯಲ್ಲಿದ್ದ ಪುಸ್ತಕಗಳು, ವಾರಕ್ಕೊಮ್ಮೆ ಬರುತ್ತಿದ್ದ ತರಂಗ, ಸುಧಾ ಗಳಂತಹ ಪತ್ರಿಕೆಗಳು ನಮ್ಮ ಓದಿನ ಹುಚ್ಚು ಹೆಚ್ಚಿಸಿದ್ದಲ್ಲದೆ ನಮ್ಮ ಯೋಚನಾ ಕ್ರಮವನ್ನೇ ಬದಲಿಸಿದ್ದವು. ಅವುಗಳು ಈಗಿನ ಗೂಗಲ್ ಗಿಂತ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಿದ್ದವು. ಈಗಿನ ಅಂತರ್ಜಾಲ ಒಂದು ಸಾಗರ. ಅದರಲ್ಲಿ ನಮಗೆ ಬೇಕಾದ ನಿಖರ ಮಾಹಿತಿ ತೊಗೊಳ್ಳೋದು ಅಂದರೆ ಒಳ್ಳೆಯ ಬಲೆಯಲ್ಲಿ ಮೀನು ಹಿಡಿದಂತೆ. […]

ಪಂಚ್ ಕಜ್ಜಾಯ

ಎಲ್ಲರೂ ಮಲಗಿದ್ದಾಗ…: ಗುರುಪ್ರಸಾದ ಕುರ್ತಕೋಟಿ

ಚಿಕ್ಕಂದಿನಲ್ಲಿ ನನಗೆ ನಿದ್ದೆಯಲ್ಲಿ ನಡೆದಾಡುವ (Sleep walking) ಖಾಯಿಲೆ ಇತ್ತು. ಹಾಗೆ ರಾತ್ರಿ ಅಡ್ಡಾಡಿದ್ದು ಬೆಳಿಗ್ಗೆ ಎದ್ದಾಗ ನನಗೆ ನೆನಪೇ ಇರುತ್ತಿರಲಿಲ್ಲ. ಆ ನನ್ನ ಖಾಯಿಲೆಯಿಂದ ತುಂಬಾ ಕಷ್ಟ ಅನುಭವಿಸಿದವಳು ನನ್ನಮ್ಮ. ಮಗ ಹೀಗೆ ಒಂದು ರಾತ್ರಿ ಎದ್ದು ಹೊರಗೆ ಹೋಗಿಬಿಟ್ಟರೆ ಎನು ಗತಿ ಅಂತ ಮನೆಯ ತಲಬಾಗಿಲಿಗೆ ಹಾಗು ಹಿತ್ತಲ ಬಾಗಿಲಿಗೆ ಒಳಗಿನಿಂದ ಕೀಲಿ ಹಾಕಿ ಮಲಗುತ್ತಿದ್ದಳು. ನಾನು ಎದ್ದು ಅಡ್ಡಾಡುತ್ತಿದ್ದೆನೆ ವಿನಃ ಕೀಲಿ ತೆಗೆದು ಹೊರಗೆ ಹೋಗುತ್ತಿರಲಿಲ್ಲ, ಅದೊಂದು ವಿನಾಯತಿ ನೀಡಿತ್ತು ಆ ಖಾಯಿಲೆ! […]

ಪಂಚ್ ಕಜ್ಜಾಯ

ದಿಗಂಬರ ಸತ್ಯ (ಭಾಗ ೨): ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಚಳಿಗಾಲ ಬಂದರೆ ಹೇಗೆ ಟೈಮ್ ಪಾಸು ಮಾಡೋದು ಅನ್ನುವ ಪ್ರಶ್ನೆಗೆ ಅಲ್ಲಿನ ಎನ್ನಾರೈ ಹೈಕ್ಳು ಕೆಲವು ವಿಧಾನಗಳನ್ನು ಹೇಳಿಕೊಟ್ಟರು. ಅವುಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಅಂದರೆ “spiritual” ದಾರಿ. ಅಯ್ಯೋ ಆಧ್ಯಾತ್ಮ, ದೇವರು, ಭಜನೆ ಅಲ್ಲಾ ರೀ… ನಾ ಹೇಳಿದ ‘ಸ್ಪಿರಿಟ್’ ಬೇರೆಯದು! ಭಾರತದಲ್ಲಿ ‘ಚಾ ಮಾಡ್ಲಾ’ ಅಂತ ಕೇಳಿದಂಗೆ ಅಲ್ಲಿನ ಗೆಳೆಯರ ಮನೆಗೆ ಹೋದಾಗ ‘ನಿಮಗೆ ಯಾವುದು ಅಡ್ಡಿ ಇಲ್ಲ? ಅಂತ ಸ್ಪಿರಿಟ್ ಗಳ ಹಲವಾರು ಬಗೆಗಳನ್ನು ತೋರಿಸಿ ಬಾಯಲ್ಲಿ ನೀರು ಹರಿಸಿ ದೇಹಕ್ಕೆ […]

ಪಂಚ್ ಕಜ್ಜಾಯ

ದಿಗಂಬರ ಸತ್ಯ! (ಭಾಗ ೧): ಗುರುಪ್ರಸಾದ ಕುರ್ತಕೋಟಿ

ನನಗೆ ತುಂಬಾ ಚೆನ್ನಾಗಿ ನೆನಪಿದೆ. ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಅಲ್ಲಿನ ಗೆಳೆಯರೊಬ್ಬರು ಕರೆದುಕೊಂಡು ಹೋಗಿದ್ದರು. ಅದೇ ಮೊದಲ ಸಲ ತುಂಬಾ ಜನ ಕನ್ನಡಿಗರು ಒಟ್ಟಿಗೆ ಸೇರಿದ್ದು ನೋಡಿ ಸಹಜವಾಗಿ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಅದೂ ಅಲ್ಲದೆ ನಮ್ಮ ಕನ್ನಡಿಗರು ಅಲ್ಲಿ ಕನ್ನಡ ಮಾತಾಡುತ್ತಿದ್ದರು! ಅದು ಮತ್ತೊಂದು ದೊಡ್ಡ ಅದ್ಭುತವಾಗಿತ್ತು. ಕನ್ನಡಿಗರು ಒಂದಾಗಬೇಕು ಹಾಗೂ ಕನ್ನಡ ಮಾತಾಡಬೇಕು ಅಂದರೆ ಅವರು ವಿದೇಶದಲ್ಲಿ ನೆಲಸಿರಬೇಕು ಅನ್ನೋದು ನನಗೆ ಆಗ ಮನದಟ್ಟಾಯಿತು. ಕನ್ನಡ ಸಂಘದಲ್ಲಿ ಪ್ರತಿ ಹಬ್ಬಕ್ಕೆ ಅಂತ ಒಂದು ಕಾರ್ಯಕ್ರಮ […]

ಪಂಚ್ ಕಜ್ಜಾಯ

NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ 3): ಗುರುಪ್ರಸಾದ ಕುರ್ತಕೋಟಿ

ಇಲ್ಲಿಯವರೆಗೆ ಮಿಸ್ಟರ್. ಬೆಂಕಿಯ ಜೊತೆ ಜೊತೆಗೆ ನನಗೆ ಇನ್ನೊಬ್ಬ ಗೆಳೆಯನ ಪರಿಚಯವಾಗಿದ್ದು ಅಲ್ಲಿನ ಹೊಸ ವರ್ಷದ ಸಂಭ್ರಮದ ಸಮಯದಲ್ಲಿ. ಅವನ ಹೆಸರು ಕೋಮಾ (ದಯವಿಟ್ಟು ಗಮನಿಸಿ: ಇಲ್ಲಿನ ಪಾತ್ರಗಳೆಲ್ಲವೂ ನೈಜ, ಆದರೆ ಹೆಸರುಗಳು ಅಡ್ಡ ಅಥವಾ ಕಾಲ್ಪನಿಕ!). ಅವನಿಗೆ ಕೊಮಾ ಎಂಬಾ ಹೆಸರು ಯಾಕೆ ಅಂದರೆ ಅವನು ತುಂಬಾ ವಿಷಯಗಳಲ್ಲಿ ಬಹು ಬೇಗನೆ ಬೇಜಾರಾಗುತ್ತಿದ್ದ. ಆ ಹೆಸರನ್ನು ಅವನಿಗೆ ಕೊಟ್ಟವನು ಅಪ್ಪು ಗೌಡಾ (ಇದು ಕೂಡ ನೈಜ ಹೆಸರಲ್ಲ. ಈ ಸಂಗತಿಯನ್ನು ನಿಮಗೆ ಪದೆ ಪದೆ ಹೇಳಿದ್ದಕ್ಕೆ […]

ಪಂಚ್ ಕಜ್ಜಾಯ

NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ ೨): ಗುರುಪ್ರಸಾದ ಕುರ್ತಕೋಟಿ

ಇಲ್ಲಿಯವರೆಗೆ ಪರದೇಶದಲ್ಲಿ ತಳ ಊರಲು ಹೆಣಗಾಡುವ ಮೊದಲ ದಿನಗಳಲ್ಲಿ ತುಂಬಾ ಖುಷಿ ಕೊಡುವ ಕೆಲವೇ ಕೆಲವು ಸ್ಥಳಗಳಲ್ಲಿ ಒಂದು Indian grocery stores! ತರತರಹದ ಮಸಾಲೆ ಪದಾರ್ಥಗಳು, ಕಾಳುಗಳು, ಚುರುಮುರಿ, ಅವಲಕ್ಕಿ, ಇಡ್ಲಿ ಮಿಕ್ಸ್ ಇನ್ನೂ ಏನೇನೋ… ಸಿಗುವ ಏಕೈಕ ಸ್ಥಳ ಜೊತೆಗೆ ಭಾರತೀಯರ ಸಮ್ಮಿಲನದ ಒಂದು ಕೇಂದ್ರವೂ ಹೌದು. ಅಂಥದರಲ್ಲಿ ಅದು ಕನ್ನಡಿಗರದೇ ಇದ್ದರಂತೂ ಮುಗಿದೇ ಹೋಯಿತು. ಕನ್ನಡಿಗರೇ ನಡೆಸುತ್ತಿರುವ ಅಂತಹ ಒಂದು ಅಂಗಡಿ ಒಮಾಹಾದಲ್ಲಿದೆ. ಅದರ ಹೆಸರು ತುಳಸಿ! ಅಲ್ಲಿ ಹೋದಾಗಲೊಮ್ಮೆ, ನಾವು ಸಣ್ಣವರಿದ್ದಾಗ […]

ಪಂಚ್ ಕಜ್ಜಾಯ

NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ ೧): ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ : https://panjumagazine.com/?p=16864) ಒಂದು ಮಟ್ಟಕ್ಕೆ ಜೀವನದಲ್ಲಿ ಸೆಟ್ಲ್ ಆಗಿದ್ದೆ. ಸ್ವಂತಕ್ಕೆ ಅಂತ ಒಂದು ಮನೆಯಿತ್ತು (ಹೆಸರಿಗೆ ನನ್ನದು, ಆದರೆ ಅಧಿಕೃತವಾಗಿ ಅದರ ಮಾಲಿಕರು ಬ್ಯಾಂಕ್ ನವರೇ ಆಗಿದ್ದರು, ಆ ಮಾತು ಬೇರೆ! ನಾವು ಅವರ ಬಳಿ ತೆಗೆದುಕೊಂಡ ಸಾಲ ತೀರುವವರೆಗೆ ಅವರೇ ಯಜಮಾನರು). ರಿಟೈರ್ ಆದ ಮೇಲೆ ಇರಲಿ ಅಂತ ಊರಲ್ಲಿ ತೆಗೆದುಕೊಂಡ ಒಂದಿಷ್ಟು ಜಾಗವೂ ಇತ್ತು. ನನಗಾಗಲೇ ಆಫೀಸಿನಲ್ಲಿ ಒಂದು ಸ್ಥಾನಮಾನ ಸಿಕ್ಕಿತ್ತು. ಇಷ್ಟೆಲ್ಲಾ ಕಂಫರ್ಟ್ ಝೋನಿನಲ್ಲಿ (ಬೋನಿನಲ್ಲಿ?) ಇದ್ದ ನಾನು ಒಮ್ಮೆಲೇ ಎಲ್ಲವನ್ನೂ […]

ಪಂಚ್ ಕಜ್ಜಾಯ

ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೩): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ಬೆಳಗಾಗುವುದೇ ಕಾಯುತ್ತಿದ್ದೆ. ಅಯೋವಾದ ಕುರಿ ಸಾಕಾಣಿಕಾ ಕೇಂದ್ರಕ್ಕೆ ಹೋಗುವ ಯೋಜನೆ ಆಗಲೇ ಸಿದ್ಧವಾಗಿತ್ತು. ಅಮೇರಿಕಾದಲ್ಲಿ ಪರಿಚಯವಾಗಿ ಚಡ್ಡಿ ದೊಸ್ತನಾಗಿದ್ದ ಮಂಜು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಲ್ಲಿ ದೂರ ಪ್ರವಾಸ ಹೋಗಬೇಕೆಂದರೆ ನಮ್ಮದೇ ಕಾರ್ ಒಯ್ಯಬೇಕೆಂದಿಲ್ಲ. ಬಾಡಿಗೆಗೆ ತರ ತರಹದ ಕಾರುಗಳು, ವ್ಯಾನುಗಳು ಅಲ್ಲಿ ದೊರಕುತ್ತವೆ. ಎಷ್ಟು ಸೀಟಿನ ವಾಹನ ಬೇಕು ಅಂತ ನಿರ್ಧರಿಸಿ, ಗ್ಯಾಸ್ ಹಾಕಿಸಿಕೊಂಡು ಹೊರಟರೆ ಆಯ್ತು. ಹೌದು ಅಲ್ಲಿ ಪೆಟ್ರೋಲ್ ಗೆ ಗ್ಯಾಸು ಅಂತಾರೆ. ಅವರು ಹಂಗೆ… ನಾವೇ ಬೇರೆ ನಮ್ಮ ಸ್ಟೈಲೇ […]

ಪಂಚ್ ಕಜ್ಜಾಯ ಪಂಜು-ವಿಶೇಷ

ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೨): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ನಾವು ಅಮೆರಿಕೆಯ, ನೆಬ್ರಾಸ್ಕಾ ರಾಜ್ಯದ ಒಮಾಹಾದಲ್ಲಿ ಧರೆಗೆ ಬಂದು ಇಳಿದಿದ್ದು ಸೆಪ್ಟೆಂಬರದಲ್ಲಿ. ಆಗ ಅಲ್ಲಿ ಜಿಟಿ ಜಿಟಿ ಮಳೆ ಶುರು ಆಗಿತ್ತು. ಆದರೆ ಕಿಚಿ ಪಿಚಿ ಕೆಸರು ಇರಲಿಲ್ಲ! ಮಹಾ ನಿರ್ದಯಿ ಚಳಿಗಾಲಕ್ಕಿಂತ ಸ್ವಲ್ಪ ಮೊದಲು. ಹೀಗಾಗಿ ಮಳೆಯ ಜೊತೆಗೆ ಸ್ವಲ್ಪ ಚುಮು ಚುಮು ಚಳಿಯೂ ಇತ್ತು. ನಾವು ಹೋದ ಆ ಸಮಯ ಮುಂಬರುವ ಚಳಿಯ ಪರಿಚಯ ಮಾಡಿಕೊಳ್ಳಲು ತುಂಬಾ ಸಹಾಯ ಮಾಡಿತು. ಒಂದು ವೇಳೆ ಚಳಿಗಾಲದ ಹೊತ್ತಿನಲ್ಲಿ ಅಲ್ಲಿಗೆ ಹೋಗಿದ್ದರೆ ಹೊಂದಿಕೊಳ್ಳಲು ತುಂಬಾ ಕಷ್ಟ ಪಡುತ್ತಿದ್ದೆವೇನೋ ಅನಿಸಿತು. ಆದರೆ […]

ಪಂಚ್ ಕಜ್ಜಾಯ

ಕುರಿಯ ಹಾಲಿನ ಐಸಕ್ರೀಮು (ಭಾಗ ೧): ಗುರುಪ್ರಸಾದ ಕುರ್ತಕೋಟಿ

ಅಮೇರಿಕೆಗೆ ಹೋಗುವುದು ಖಚಿತವಾಗಿ, ವೀಸಾ ಸಂಭ್ರಮಗಳೆಲ್ಲ ಮುಗಿದಾಗ ನಮ್ಮ ಕಂಪನಿಯಲ್ಲಿ ನನಗೆ ಕರೆಗಳು ಬರಲು ಶುರುವಾಗಿದ್ದವು. ಅಮೆರಿಕೆಯ ವೀಸಾ ಸೀಲು ಬಿದ್ದವರು ಅಂದರೆ ಮದುವೆಗೆ ತಯಾರಾದ ಕನ್ಯೆಯರು ಇದ್ದಂತೆ. ಹುಡುಗಿಗೆ ವಯಸ್ಸಾದಂತೆ ತಂದೆತಾಯಿಯರಿಗೆ ಎಷ್ಟು ಆತಂಕ ಇರುತ್ತದೋ (ನಮ್ಮ ಕಾಲದಲ್ಲಿ ಹಾಗಿತ್ತು, ಈಗ ಹುಡುಗನ ತಂದೆತಾಯಿಗೆ ಅಂತ ಓದಿಕೊಳ್ಳಿ!) ಅದಕ್ಕಿಂತ ಹೆಚ್ಚು ಆತಂಕ ಆಯಾ ವಿಸಾಧಾರಿಗಳ ಮ್ಯಾನೇಜರ್ ಗಳಿಗೆ. ನಾವು ಒಂಥರಹದ ಬಿಸಿ ತುಪ್ಪ ಅವರಿಗೆ. ಅದಕ್ಕೆ ಕಾರಣವೂ ಇದೆ. ವೀಸಾಕ್ಕೆ ಅಂತ ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. […]

ಪಂಚ್ ಕಜ್ಜಾಯ

ಹೇಳುವುದಕ್ಕೆ ಕೇಳುವುದಕ್ಕೆ ಇವರಿಗೆ ಹಕ್ಕಿದೆಯೇ?: ಗುರುಪ್ರಸಾದ ಕುರ್ತಕೋಟಿ, ಬೆಂಗಳೂರು

ಕೆಲವು ದಿನಗಳ ಹಿಂದೆ ಒಂದು ಪತ್ರಿಕೆಯಲ್ಲಿ ನಮ್ಮ ಭಾರತದ ಸಮಸ್ಯೆಗಳ ಕುರಿತು, ಎಷ್ಟೋ ವರ್ಷಗಳಿಂದ ಅಮೆರಿಕೆಯಲ್ಲಿ ನೆಲೆಸಿರುವ ಒಬ್ಬರು ಬರೆದ “ಹೇಳುವವರು ಕೇಳುವವರು ಇಲ್ಲದ ದೇಶ” ಎಂಬ ಲೇಖನ ಓದಿದೆ. ಭಾರತದ ಬಗೆಗಿನ ಅವರ ಹೊರನೋಟ ಅದಾಗಿತ್ತು. ಅವರು ಇಲ್ಲಿಗೆ ಕೆಲ ದಿನಗಳ ಮಟ್ಟಿಗೆ ಬಂದಾಗ ಆದ ಕಟು ಅನುಭವಗಳ ಕುರಿತು ಪ್ರಸ್ತಾಪಿಸಿದ್ದರು. ಟ್ಯಾಕ್ಸಿಯ ಡ್ಯಾಶ್ ಬೋರ್ಡ್ ಅಲ್ಲಿ ಇಲಿ ಬಂತಂತೆ… ಯಾವ್ದೂ ಸಿಸ್ಟಮ್ ಕೆಲಸ ಮಾಡಲ್ವಂತೆ… ಇಲ್ಲಿನ ಜನ ಏನು ಮಾಡಿದರೂ ಸುಮ್ಮನಿರುತ್ತಾರಂತೆ… ಹಾಗೆ ಹೀಗೆ, […]

ಪಂಚ್ ಕಜ್ಜಾಯ

ಆ ಲಾಜಿನ ಸುತ್ತಮುತ್ತ!: ಗುರುಪ್ರಸಾದ ಕುರ್ತಕೋಟಿ

ಎರಡು ದಶಕಗಳ ಹಿಂದಿನ ಮಾತು… ಆಗ ಇಂಜಿನಿಯರಿಂಗ್ ಮಾಡಿದರೇನೇ ಏನೋ ಸಾಧನೆ ಮಾಡಿದಂಗೆ ಅಂದುಕೊಂಡು ಬಾಗಲಕೋಟೆಯ ಕಾಲೇಜಿನಲ್ಲಿ ಸೀಟನ್ನು ಬಗಲಲ್ಲಿರಿಕೊಂಡು, ಆ ಊರಿನಲ್ಲಿ ನನ್ನ ಮೊದಲನೆಯ ವರ್ಷದ ವ್ಯಾಸಂಗಕ್ಕೆ ವಾಸ್ತವ್ಯ ಹೂಡಿದ್ದ  ದಿನಗಳವು. ಆಗಿನ್ನೂ ಹಳೆಯ ಬಾಗಲಕೋಟೆಯು ಮುಳುಗಡೆಯಾಗಿರಲಿಲ್ಲ. ನನ್ನ ವಿದ್ಯಾಭ್ಯಾಸ ಮುಗಿದಮೇಲೆ ಮುಳುಗಿತು! ಅಪ್ಪನಿಗೆ ಪರಿಚಯದವರ ಸಂಬಂಧಿಕರ ಮನೆಯೊಂದು ಅಲ್ಲಿತ್ತು, ಅವರ ಮನೆಯ ಆವರಣದಲ್ಲಿನ್ನೊಂದು ಒಂಟಿ ಮನೆಯೂ ಇದ್ದು, ನನ್ನ ಅದೃಷ್ಟಕ್ಕೊ ದುರದೃಷ್ಟಕ್ಕೋ ಅದು ಲಭ್ಯ ಇತ್ತಾದ್ದರಿಂದ ನನಗೆ ಅಲ್ಲಿ ವಾಸಿಸಲು ಅವರು ಅವಕಾಶ ನೀಡಿದ್ದರು. […]

ಪಂಚ್ ಕಜ್ಜಾಯ

‘ಕೊರಿಯೋ’ಗ್ರಾಫರ್: ಗುರುಪ್ರಸಾದ ಕುರ್ತಕೋಟಿ

’ಸುರದು ಊಟ ಮಾಡಬೇಕು ಗೊರದು ನಿದ್ದೆ ಮಾಡಬೇಕು’ ಅಂತ  ಹಳ್ಳಿ ಕಡೆ ಹೇಳತಾರೆ. ಅದರರ್ಥ ’ಸೊರ ಸೊರ’ ಅಂತ ಸದ್ದು ಮಾಡುತ್ತ, ಅದು ಹುಳಿಯೋ, ಸಾರೋ ಅದೇನೇ ಇದ್ದರೂ ಅದನ್ನು ಸೊರ ಸೊರನೆ ಸವಿದು ಊಟ ಮಾಡಬೇಕು. ಹಾಗೂ ಗೊರಕೆ ಹೊಡೆಯುತ್ತ ನಿದ್ದೆ ಮಾಡಬೇಕು, ಅದೇ ಗಡದ್ದಾದ ನಿದ್ದೆ ಅನ್ನೋದು ಈ ಹೇಳಿಕೆಯ ಹಿಂದಿರುವ ಅರ್ಥ. ಸುರದು ಹೊಟ್ಟೆ ಬಿರಿಯುವಂತೆ ಊಟ ಮಾಡಿದ ಮೇಲೆ ಗೊರಕೆ ಹೊಡೆಯುವಂತಹ ನಿದ್ದೆ ಬರದೇ ಇನ್ನೇನು? ಆದರೆ ಆ ಎರಡೂ ಕ್ರಿಯೆಗಳಿಂದ […]

ಪಂಚ್ ಕಜ್ಜಾಯ

ಹಲ್ಲು ಕೆಟ್ಟ ಕಥೆ!: ಗುರುಪ್ರಸಾದ್ ಕುರ್ತಕೋಟಿ

ಎಲ್ಲ ತೊಂದರೆಗಳು ಶುರುವಾಗುವುದು ರಾತ್ರಿನೇ! ಅಥವಾ ಹಾಗೆ ರಾತ್ರಿ ಶುರುವಾದ ತೊಂದರೆಗಳು ಮಾತ್ರ ನೆನಪಿನಲ್ಲಿ ಉಳಿಯುವುದಕ್ಕೆ ಹಾಗೆ ಅನ್ನಿಸುತ್ತದೆಯೋ? ಎಂದು ಪುಟ್ಯಾ ತಲೆಕೆರೆಯುತ್ತ ಯೋಚಿಸುತ್ತಿದ್ದ. ಅವನ ಮಕ್ಕಳ ಜ್ವರವೇ ಇರಲಿ, ತನ್ನ ಹೊಟ್ಟೆ ನೋವಿರಲಿ ಅಥವಾ ತಲೀನ ಇಲ್ಲ ನೋಡ್ ಲೇ ನಿನಗ ಅಂತ ಬೈಸಿಕೊಳ್ಳುವ ಅವನ ಹೆಂಡತಿ ಪಾರಿಯ ತಲೆ ನೋವಿರಲಿ… ಇವೆಲ್ಲ ಉದ್ಭವಿಸುವುದು ರಾತ್ರಿಯೇ. ಇನ್ನೇನು ಮಲಕೊಬೇಕು ಅನ್ನುತ್ತಿರುವಾಗಲೇ ಇಂಥದ್ದೇನೋ ಬಂದು ನಿದ್ದೆ ಕೆಡಿಸಿ ಕಂಗಾಲು ಮಾಡುತ್ತದೆ.  ಇಂತಹದೇ ಒಂದು ಕರಾಳ ರಾತ್ರಿ ಇವನ […]

ಪಂಚ್ ಕಜ್ಜಾಯ

ಒತ್ತಡ ರ(ಸ!)ಹಿತ ಶಿಕ್ಷಣ: ಗುರುಪ್ರಸಾದ್ ಕುರ್ತಕೋಟಿ

"ರೀ ನಿಮ್ಮ ಮಗಳು ಹೋಂ ವರ್ಕ್ ಮಾಡಿಲ್ಲ" ಮಗಳ ಅಮ್ಮ ಕೂಗುತ್ತಿದ್ದಳು! ಆ ದನಿ ನನಗೆ ಅಂತರಿಕ್ಷ ವಾಣಿ ಥರ ಕೇಳುತ್ತಿತ್ತು. ಯಾಕಂದ್ರೆ, ನಮ್ಮ ಕಂಪನಿಯವರು ಇವನು ಸಮಧಾನದಿಂದಿರಲೇ ಕೂಡದು ಅಂತ ನಿರ್ಧರಿಸಿ, ದಯಪಾಲಿಸಿದ್ದ ಬ್ಲ್ಯಾಕ್ ಬೆರ್ರಿ (ವರ್ರಿ ಅಂತಿದ್ರೆ ಇನ್ನೂ ಚೆನ್ನಾಗಿರುತ್ತಿತ್ತೇನೋ) ಎಂಬ ಮೊಬೈಲ್ ನಲ್ಲಿ ಇಮೇಲ್ ಗಳ ಮಧ್ಯೆ ನಾನು ಹುದುಗಿ ಹೋಗಿದ್ದೆ.  ಮೊದಲೆಲ್ಲಾ ನಮ್ಮ ಹಿರಿಯರು ಬೆಳಿಗ್ಗೆ ಎದ್ದ ಕೂಡಲೇ ಅಂಗೈ ನೋಡಿಕೊಂಡು "ಕರಾಗ್ರೆ ವಸತೇ ಲಕ್ಷ್ಮಿ…" ಹೇಳುತ್ತಿದ್ದರೆ ಕಲಿಯುಗದಲ್ಲಿ ನಾವು ಅಂಗೈಯಲ್ಲಿ […]

ಪಂಚ್ ಕಜ್ಜಾಯ

ಜಲ್ದಿ ಪ್ಯಾಕ್ ಮಾಡು: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಭಾರತದ ಪ್ರವಾಸದಲ್ಲಿದ್ದ ಜಾನ್ ನಿಂದ ಬಂದ ಸಂದೇಶ ವೆಂಕಟ್ ಗೆ ಗರಬಡಿಸಿತ್ತು. ಅಮೆರಿಕಾದ ಪ್ರವಾಸವನ್ನು ಮೊಟಕುಗೊಳಿಸಿ ಕೂಡಲೇ ವಾಪಸ್ಸು ಬರುವಂತೆ ಒಂದೇ ಸಾಲಿನ ಆದೇಶ ಹೊರಡಿಸಿದ್ದ ಅ ಪತ್ರ ಗತಕಾಲದಲ್ಲಿ ಚಾಲ್ತಿಯಿದ್ದ ಟೆಲಿಗ್ರಾಂ ನಂತೆ ಅವನಿಗೆ ಹೈ ವೋಲ್ಟೇಜ್ ಶಾಕ್ ಕೊಟ್ಟಿತ್ತು! ಅವನಿಗೆ ಆಶ್ಚರ್ಯವಾಗಿದ್ದೆಂದರೆ ಆ ಇಮೇಲ್ ಇವನ ಬಾಸ್ ಸುಧೀರ್ ನಿಂದ ಬರದೆ ಜಾನ್ ಕಡೆಯಿಂದ ಬಂದಿದ್ದು. ಸುಧೀರ್ ಗೆ ಕರೆ ಮಾಡಿ ಕೇಳಲು ಅವನು ತನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ವಿಷಯ ಗೊತ್ತಾಯಿತು. […]

ಪಂಚ್ ಕಜ್ಜಾಯ

ಹಿಮಪಾತ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಇವತ್ಯಾಕೆ ಇಷ್ಟೊಂದು ಬೇಗ ಎಚ್ಚರ ಆಯ್ತು ಅಂತ ಗೊತ್ತಾಗಲಿಲ್ಲ ವೆಂಕಟ್ ಗೆ. ಬೇಗ ಎದ್ದು ಏನು ಮಾಡುವುದೆಂದು ಒಂದು ಕ್ಷಣ ಅವನಿಗೆ ಹೊಳೆಯಲಿಲ್ಲ. ಬೆಂಗಳೂರಿನಲ್ಲಾಗಿದ್ದರೆ ಎದ್ದ ಕೂಡಲೇ ಬಾಗಿಲಿಗೆ ಸಿಗಿಸಿರುತ್ತಿದ್ದ ಪೇಪರ್ ಎತ್ತಿಕೊಂಡು ಓದಬಹುದಿತ್ತು.  ಈ ಪರದೇಶದಲ್ಲಿ ಹಾಗಿಲ್ಲವಲ್ಲ. ಸುದ್ದಿ ತಿಳಿಯಬೇಕೆಂದರೆ  ಒಂದೋ ಟೀವಿ, ಸ್ಮಾರ್ಟ್ ಫೋನ್, ಇಲ್ಲವೇ ಟಚಿಠಿಣoಠಿ ನಲ್ಲೆ ನೋಡಿ ತಿಳಿಯಬೇಕು. ಅವನಿಗೆ ಅಲ್ಲಿಯ ಸ್ಥಳೀಯ ಸುದ್ದಿಯ ತಿಳಿದುಕೊಳ್ಳುವ ಬಗ್ಗೆ ಉತ್ಸಾಹವೇನಿರಲಿಲ್ಲ. ಇಲ್ಲಿನ ಸುದ್ದಿಗಳೂ ಸುದ್ದಿಗಳೇ? ಒಂದು ಸಣ್ಣ ಬಿರುಗಾಳಿ ಬಂದರೇನೇ ಇಡೀ […]

ಪಂಚ್ ಕಜ್ಜಾಯ

ಬಹುಪರಾಕ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಬೆಳಿಗ್ಗೆ ಕೆಲಸಕ್ಕೆ ಹೊತ್ತಾಗಿದ್ದರೂ ಅಂತಹ ಗಡಿಬಿಡಿಯೇನೂ ತೋರಿಸದೆ, ತಾನು ಬೇಗ ಹೋಗಿಯಾದರೂ ಏನು ಮಾಡುವುದು ಅನ್ನುವ ಮನಸ್ಥಿತಿಯಲ್ಲಿ ಆರಾಮವಾಗಿ ಬಂದ ಪ್ರದೀಪ್ ಗೆ ಸ್ವಾಗತಿಸಿದ್ದು ಎಂದಿಗಿಂತಲೂ ಚೊಕ್ಕದಾದ ಆಫೀಸಿನ ಪ್ರಾಂಗಣ. ಅವನಿಗೆ ಆಶ್ಚರ್ಯವಾಗಿತ್ತು. ಅಲ್ಲೇ ನಿಂತು ಅತ್ತಿತ್ತ ಕಣ್ಣಾಡಿಸಿದ. ರಿಸೆಪ್ಶನ್ ನಲ್ಲಿ ಹೂವಿನ ಅಲಂಕಾರ, ಆ ಕಡೆ ಈ ಕಡೆಗೊಂದು ಹೂ ಕುಂಡಲ. ಇದ್ದುದರಲ್ಲೇ ಸುಂದರಿಯರು ಅನಿಸಿಕೊಂಡ ನಾಲ್ಕು ಲಲನೆಯರು, ತಮಗೆ ಪರಿಚಿತವೇ ಅಲ್ಲದ ಸ್ಯಾರಿ ಎಂಬ ದೇಸಿ ಉಡುಗೆಯಲ್ಲಿ ನಿಂತಿದ್ದರು. ಆಗಾಗ ತಮ್ಮ ಸ್ಯಾರಿ […]

ಪಂಚ್ ಕಜ್ಜಾಯ

ಜಾನ್ ಎಂಬ ಬಿರುಗಾಳಿಯ ಮುನ್ಸೂಚನೆ…: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಜಾನ್ ಆಯೋಜಿಸಿದ್ದ ಪಾರ್ಟಿ ಮುಗಿಸಿ ಮನೆಗೆ ಬಂದ ವೆಂಕಣ್ಣನ ಮುಖ ತುಂಬಾ ಚಿಂತೆಯಲ್ಲಿದ್ದಂತೆ ಕಂಡು ಬಂದದ್ದರಿಂದ ಜಾನು ಗೆ ಕಳವಳವಾಯಿತು.  “ಯಾಕ್ರೀ ಪಾರ್ಟಿಯೊಳಗ ಯಾರರೆ ಏನರೆ ಅಂದರೋ ಏನು?” ಅಂತ ಹತ್ತಿರಕ್ಕೆ ಹೋಗಿ ವಿಚಾರಿಸಿದಳು. ಹಾಗೆ ಹತ್ತಿರ ಹೋಗಿದ್ದಕ್ಕೆ ಇನ್ನೊಂದು ಕಾರಣವೂ ಇತ್ತು. ಗಂಡ ವಿದೇಶಕ್ಕೆ ಬಂದು ಅವರ ತರಹವೇ ಪಾರ್ಟಿಲಿ ಗುಂಡು ಹಾಕೋಕೂ ಶುರು ಹಚ್ಚಿಕೊಂಡನೋ ಹೇಗೆ ಎಂಬ ಪರೀಕ್ಷೆ ಅದಾಗಿತ್ತು. “ಯಾರೇನ್ ಅಂದ್ರೂ ನಾ ತಲಿ ಕೆಡಿಸ್ಕೊಳೋದಿಲ್ಲ ಬಿಡು. ಆದ್ರ ಆ ಜೇ.ಸಿ.ಬಿ […]

ಪಂಚ್ ಕಜ್ಜಾಯ

ಕಾರ್-ಬಾರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ವೆಂಕಟ್ ಗೆ ಬಾಡಿಗೆ ಕಾರು ತೆಗೆದುಕೊಳ್ಳೋದು ಹೆಚ್ಚು ಕಡಿಮೆ ಅನಿವಾರ್ಯವಾಗಿತ್ತು. ಇವನು ಇನ್ನೂ ಮೂರು ವಾರಗಳಾದರೂ ಅಮೆರಿಕಾದಲ್ಲಿ ಇರುವುದು ಬಾಕಿ ಇತ್ತು. ದಿನಾಲೂ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದ ಇವನ ಸಹೋದ್ಯೋಗಿ ರಜೆಯ ಮೇಲೆ ಭಾರತಕ್ಕೆ ಹೋಗಿದ್ದನಾದ್ದರಿಂದ ಇವನಿಗೆ ದಿನಾಲೂ ಆಫಿಸಿಗೆ ಹೋಗುವುದೇ ಕಷ್ಟವಾಗಿತ್ತು. ಅದೂ ಅಲ್ಲದೆ, ಅಲ್ಲಿ ಕಾರಿಲ್ಲವೆಂದರೆ ಕಾಲೇ ಕಳೆದುಕೊಂಡಂತೆ. ತನ್ನ ಅಪ್ಪ ಕಾರು ತರಲು ಹೋಗುತ್ತಿದ್ದಾನೆ ಎನ್ನುವುದೇ ಖುಷಿ ಗೆ ಕೌತುಕದ ಸಂಗತಿಯಾಗಿತ್ತು. ಜಾನುನೂ  ಅಲ್ಲಿ ಇಲ್ಲಿ ಅಡ್ಡಾಡಲು ಅನುಕೂಲವಾಗುತ್ತದೆಂದು ಖುಷಿಯಲ್ಲಿದ್ದಳು.  … […]

ಪಂಚ್ ಕಜ್ಜಾಯ

ಜೇ.ಸಿ.ಬಿ!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಬೆಳ್ಳಂ ಬೆಳಿಗ್ಗೆ ಅಮೇರಿಕದಿಂದ ವೆಂಕಟ್ ಕಳಿಸಿದ್ದ ಒಂದು ಇಮೇಲ್ ಭಾರತದಲ್ಲಿದ್ದ ಅವನ ಬಾಸ್ ಸುಧೀರನನ್ನು ಅಧೀರನನ್ನಾಗಿಸಿತ್ತು! ಅದು ಅಲ್ಲಿನ ಒಂದು ಬಹು ಮುಖ್ಯ ಸುದ್ದಿಯನ್ನು ಭಿತ್ತರಿಸಿದ ಸಂದೇಶವಾಗಿತ್ತು. ಇವರ ಕಂಪನಿಯ ಅಮೆರಿಕಾದ ಮೂಲ ಶಾಖೆಯ ಉಪಾಧ್ಯಕ್ಷ ನಾಗಿದ್ದ ರೋಜರ್ ನನ್ನು ಅಲ್ಲಿನ ಆಡಳಿತ ಮಂಡಳಿ ಕಿತ್ತೊಗೆದಿತ್ತು. ಖಾಲಿಯಾದ ಅವನ ಸ್ಥಾನದಲ್ಲಿ ಮೂವತ್ತು ವರ್ಷದಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಿ. ಬೇಕರ್ ನನ್ನು ಕುಳ್ಳಿರಿಸಿದ್ದರು.  …ಅಮೆರಿಕಾದಲ್ಲಿ ಇದೆಲ್ಲ ಈಗ ಮಾಮೂಲಿ. ಅದು ಕಂಪನಿಯ ವೆಚ್ಚಗಳ […]

ಪಂಚ್ ಕಜ್ಜಾಯ

ನಾನು ಮತ್ತು ನನ್ನ ನಾಯಿ ಇಬ್ಬರೂ ನಿರ್ಗತಿಕರು!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ.. ಅಮೆರಿಕಾಕ್ಕೆ ಬಂದು ಇವತ್ತಿಗೆ ಆಗ್ಲೇ ಒಂದು ವಾರವಾಯ್ತೆ ಅಂತ ವೆಂಕಣ್ಣ ತಲೆ ಕೆರೆಯುತ್ತಾ ಯೋಚಿಸುತ್ತಿದ್ದಾಗಲೇ ಮಗಳು ಖುಷಿ ಇವನ ಭುಜ ಹಿಡಿದು ಅಲುಗಾಡಿಸುತ್ತಿದ್ದಳು.   “ಅಪ್ಪ ಅಮೇರಿಕಾ ಬೋರಿಂಗ್ ಅದ” ಅಂದಳು.  ಶಾಲೆಗೆ ಹೋಗುವ ರಗಳೆ ಇಲ್ಲ ಅಂತ ಬಂದ ಹೊಸತು ಅವಳಿಗೆ ಖುಷಿಯಾಗಿತ್ತಾದರೂ, ಈಗ ಅವಳಿಗೆ ಬೇಜಾರು ಶುರು ಆಗಿತ್ತು. ಹೊಸ ಜಾಗ, ಅದೂ ಅಲ್ಲದೆ  ಅವಳ ಜೊತೆಗೆ ಆಡಲು ಅಲ್ಲಿ ಯಾರೂ ಇರಲಿಲ್ಲ. ಆದರೆ  ಇವತ್ತು ಶನಿವಾರ, ವೆಂಕಣ್ಣನ ಆಫೀಸಿಗೆ ರಜೆ. ಅದಕ್ಕೆ […]

ಪಂಚ್ ಕಜ್ಜಾಯ

ಕೆಲಸಕೆ ಚಕ್ಕರ್… ಊಟಕೆ ಹಾಜರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ… ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ […]

ಪಂಚ್ ಕಜ್ಜಾಯ

ಕಾಯಕವೇ ಕೈಲಾಸ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ..  ಅವತ್ತು ಸಂಜೆ ಬೇಗನೆ ಮನೆಗೆ ತಲುಪಿದ ವೆಂಕಣ್ಣನ ಕಿವಿಯಲ್ಲಿ ಜೇಮ್ಸ್ ನ ಮಾತುಗಳು ಗುಂಯ್ ಗುಡುತ್ತಿತ್ತು. ಹೌದೆ? ನಾವೆಲ್ಲ ಅಮೆರಿಕಾಕ್ಕೆ ಬಂದು ಇವರ ಕೆಲಸಗಳನ್ನು ಕಸಿಯುತ್ತಿದ್ದೇವೆಯೇ? ಅನ್ನುವ ಪ್ರಶ್ನೆ ಇವನ ಕಾಡತೊಡಗಿತ್ತು. ಜಾನು ಮತ್ತು ಖುಷಿ ಇನ್ನೂ ಅಮೆರಿಕಾದ ದಿನಗಳಿಗೆ ಹೊಂದಿಕೊಳ್ಳದೆ ದಿನವಿಡಿ ನಿದ್ದೆಯಲ್ಲೇ ಕಳೆದಿದ್ದರು. ಇವನಿಗೂ ನಿದ್ದೆ ಎಳೆಯುತ್ತಿದ್ದರೂ ಬಲವಂತವಾಗಿ ಅದನ್ನು ತಡೆಯುತ್ತಿದ್ದ. ಆಗ ತಾನೇ ಎದ್ದು ಕುಳಿತಿದ್ದ ಖುಷಿಗೆ ಬೇರೆ ಏನೂ ಮಾಡಲು ತೋಚದೆ ಅಲ್ಲಿನ ಟೀವಿಯಲ್ಲಿ ಬರುತ್ತಿದ್ದ ಕಾರ್ಟೂನು ನೋಡುತ್ತಿದ್ದಳು.  ಜಾನು […]

ಪಂಚ್ ಕಜ್ಜಾಯ

ಅವನ ಹೆಸರೇ ಜೇಮ್ಸ್…: ಗುರುಪ್ರಸಾದ್ ಕುರ್ತಕೋಟಿ

(ಇಲ್ಲಿಯವರೆಗೆ) ಅಂತೂ ಅಮೆರಿಕಾದಲ್ಲಿ ಬೆಳಗಾಗಿತ್ತು! ಜಾನು ಆ ಸುಸಜ್ಜಿತವಾದ ಫ್ಲಾಟ್ ನ ಒಂದು ಸುತ್ತು ತಿರುಗಿ ಎಲ್ಲವನ್ನೂ  ಪರೀಕ್ಷಿಸುತ್ತಿದ್ದಳು. ಬಟ್ಟೆ ಒಗೆದು, ಒಣಗಿಸುವ ಯಂತ್ರವಿದ್ದದ್ದು  ಅಷ್ಟು ವಿಶೇಷವೆನಿಸದಿದ್ದರೂ  ಪಾತ್ರೆ ತೊಳೆಯುವ ಯಂತ್ರ ಗಮನ ಸೆಳೆಯಿತು. ಸಧ್ಯ ಕೆಲಸದವಳನ್ನು ಕಾಯುವ, ಓಲೈಸುವ ಚಿಂತೆಯಿಲ್ಲವೆನ್ನುವ ಸಮಾಧಾನ ಅವಳಿಗೆ. ಅಡಿಗೆ ಮನೆಯಲ್ಲಿ ಓವನ್, ಹೀಟರ್, ಇಂಡಕ್ಶನ್ ಓಲೆಗಳ ಜೊತೆಗೆ ಸೌಟು, ಪಾತ್ರೆ ಪಗಡಗಳೆಲ್ಲವೂ  ಇದ್ದದ್ದು ಖುಷಿಯಾಯ್ತಾದರೂ ಅಲ್ಲೆಲ್ಲೂ ಲಟ್ಟಣಿಗೆ ಕಾಣದೇ ಅವಳು ಚಿಂತೆಗೊಳಗಾದಳು. ಆಗಲೇ ಸ್ನಾನ ಮುಗಿಸಿ ಬಂದಿದ್ದ ವೆಂಕಣ್ಣ ಇವಳ […]

ಪಂಚ್ ಕಜ್ಜಾಯ

ಹಗಲು ರಾತ್ರಿಗಳ ಗೊಂದಲದಲ್ಲಿ…: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ವೆಂಕಣ್ಣ ಯಾರೋ ಒದ್ದೆಬ್ಬಿಸಿದಂತೆ ನಿದ್ದೆಯಿಂದ ಎದ್ದು ಕೂತಿದ್ದ. ಅವನ ನಿದ್ರಾ ಭಂಗಕ್ಕೆ ಕಾರಣವಾಗಿದ್ದು ಗಾಳಿಕುಳಿ ಗೆ ಸಿಕ್ಕು ನಡುಗುತ್ತಿದ್ದ ವಿಮಾನವೋ ಅಥವಾ ಅದರ ಪರಿಣಾಮ ಬಿದ್ದ ಕನಸಿನಿಂದಲೋ ಅವನಿಗೆ ಅರ್ಥವಾಗದಾಯ್ತು. ಆದರೂ ಅವನು  ಕಂಡ ಆ ಕನಸು ಭಲೆ ವಿಚಿತ್ರವಾಗಿತ್ತು. ಅದರಲ್ಲಿ, ಅ ದೊಡ್ಡ ವಿಮಾನದ ತುಂಬಾ ಇವನು ಹಾಗೂ ಜರ್ಮನ್ ವಿಮಾನ ಸಖಿ ಇಬ್ಬರೇ ಇದ್ದರು. ಇವನಿಗೆ ಖುಷಿಯಾಯ್ತಾದರೂ ಆಕಾಶದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ತಮ್ಮಿಬ್ಬರ ಬಿಟ್ಟು ಉಳಿದವರೆಲ್ಲಿ ಎಂಬ ಆತಂಕದಲ್ಲಿ, ಎಲ್ರೂ ಎಲ್ಲಿಗೆ ಹೋದ್ರು? […]