Facebook

Archive for 2017

“ಎಲ್ಲರಂಥವನಲ್ಲ ನನ್ನಪ್ಪ” ಪುಸ್ತಕ ಬಿಡುಗಡೆ

ಆತ್ಮೀಯರೇ, ಪಂಜುವಿನ ಲೇಖಕರು ಮತ್ತು ಅಂಕಣಕಾರರಾದ ಗುರುಪ್ರಸಾದ ಕುರ್ತಕೋಟಿಯವರ ಸಂಪಾದಕತ್ವದಲ್ಲಿ ಮೈತ್ರಿ ಪ್ರಕಾಶನ "ಎಲ್ಲರಂಥವನಲ್ಲ ನನ್ನಪ್ಪ" ಎಂಬ ಪುಸ್ತಕ ಹೊರತರುತ್ತಿದೆ.  ಈ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಕೆಳಗಿನ ಚಿತ್ರದಲ್ಲಿದೆ.  ಆಸಕ್ತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿನಂತಿ.. ಹಾಗೆಯೇ ಈ ಪುಸ್ತಕದ ಪ್ರತಿಯನ್ನು ಈ ಕೆಳಗಿನ ಲಿಂಕ್ ಒತ್ತಿ ಫಾರಂ ಅನ್ನು ಭರ್ತಿ ಮಾಡಿ ರಿಯಾಯಿತಿ ದರದಲ್ಲಿ ಮುಂಗಡವಾಗಿ ಕಾದಿರಿಸಬಹುದಾಗಿದೆ. https://goo.gl/forms/r7kCj5KlGV86XoBi2 ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪಂಜು ಬಳಗದ ಪರವಾಗಿ ಶುಭಾಶಯಗಳು ಹಾಗು ಗುರುಪ್ರಸಾದ್ ಕುರ್ತಕೋಟಿ ಮತ್ತು ಪುಸ್ತಕದ […]

ಪಂಜು ಕಾವ್ಯಧಾರೆ

ದಯಾಮಯಿ ಎಂದು ಬರೆಯಲೆ,  ಸುಂದರಿ ಎಂದು ಬರೆಯಲೆ, ಪ್ರಿಯತಮೆ ಎಂದು ಬರೆಯಲೆ, ನಾನು ಕಂಗೆಟ್ಟಿ ಬಿಟ್ಟಿದ್ದೇನೆ  ನಿಮಗೆ ಈ ಪತ್ರದಲ್ಲಿ ಏನು ಬರೆಯಲು ಎಂದು ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು; ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ; ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ ,  ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ; ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ,  ಆದರೆ ಇದರಲ್ಲಿ ಕಪ್ಪು ಛಾಯೆ […]

ಅನುವಾದಕ್ಕೊಂದು ತಂತ್ರಜ್ಞಾನ:  ಉದಯ ಶಂಕರ ಪುರಾಣಿಕ

ಬೇರೆ ರಾಜ್ಯ ಅಥವಾ ಬೇರೆ ದೇಶಗಳಲ್ಲಿ ಪ್ರವಾಸ ಮಾಡುವಾಗ, ಸಾಮಾನ್ಯವಾಗಿ ಭಾಷೆಯ ಸಮಸ್ಯೆಯನ್ನು ಎದುರಿಸುತ್ತೇವೆ. ನಮಗೆ ಗೊತ್ತಿರುವ ಭಾಷೆಯಲ್ಲಿ ಮತ್ತೊಬ್ಬರ ಜೊತೆ ಸಂಭಾಷಣೆ ನೆಡೆಸುವುದು ವಿಫಲವಾದಾಗ, ಕೈ, ಬಾಯಿ ಸನ್ನೆಗಳು ಮತ್ತು ನಮ್ಮ ಹಾವ ಭಾವಗಳ ಮೂಲಕ ಸಂಭಾಷಣೆ ನೆಡೆಸುವ ಪ್ರಯತ್ನ ಮಾಡುತ್ತೇವೆ. ಕೆಲವೊಮ್ಮೆ ಇದೂ ವಿಫಲವಾಗುವುದುಂಟು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ, ಆದರೆ ಭಾಷೆಯ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲವೇಕೆ ಎನ್ನುವ ಪ್ರಶ್ನೆ ಆಗ ನಮಗೆ ಎದುರಾಗುವುದುಂಟು. ಜಪಾನಿನ ಲಾಗ್‍ಬಾರ್ ಹೆಸರಿನ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ […]

ಮಂಗಳನ ಅಂಗಳದಲ್ಲಿ! (ಭಾಗ 1): ಎಸ್.ಜಿ.ಶಿವಶಂಕರ್

ಇಡೀ ಮನೆ ಅಲುಗಾಡಿದಂತ ಅನುಭವವಾಯಿತು ಸೃಜನನಿಗೆ. ಇದೊಂದು ಹೊಸ ಅನುಭವ. ಹಿಂದೆಂದೂ ಹೀಗಾಗಿರಲಿಲ್ಲ! ಭೂಕಂಪನವಾಗುತ್ತಿದೆ ಎನಿಸುವಂತ ಅನುಭವ! ಕೆಲವು ನಿಮಿಷಗಳ ನಂತರ ಆ ಕಂಪನ ನಿಂತಿಂತೆ ಅನಿಸಿತು. ಎಲ್ಲ ಸ್ಥಬ್ದವಾಯಿತು; ನೆಮ್ಮದಿ! ಸ್ವಲ್ಪ ಎಚ್ಚರವಾಗಿತ್ತು-ಅಲುಗಾಟಕ್ಕೆ. ಸ್ಥಬ್ದವಾದನಂತರ ಮತ್ತೆ ಜೋಂಪು. ಮತ್ತೆ ಅಲುಗಾಟ, ಕುಲುಕಾಟ! ಮನೆಯೇ ಅತ್ತಿತ್ತ ವಾಲಿದಂತೆ, ಮತ್ತೆ ಅದೇ ಸಾವರಿಸಿಕೊಂಡು ನೆಟ್ಟಗೆ ನಿಂತಂತೆ! ಛೆ..ಇದೆಂತಾದ್ದು..? ನಿಜಕ್ಕೂ ಏನಾಗುತ್ತಿದೆ..? ಈ ಸಾರಿ ಬಹಳ ಹೊತ್ತು ಸ್ಥಬ್ದತೆ ಇದ್ದಂತೆ ಭಾವನೆ. ಈ ಕಂಪನ, ಸ್ಥಬ್ದತೆಗಳ ನಡುವೆ ಎಂತದೋ ಕಿರಿಕಿರಿ! […]

ಅನುಬಂಧವಾಗಲಿ ಅತ್ತೆ-ಸೊಸೆ ಸಂಬಂಧ: ನಾಗರೇಖಾ ಗಾಂವಕರ

ಅನಾದಿಕಾಲದಿಂದಲೂ ಸಾಮಾಜಿಕ ರೂಪರೇಷೆಗಳು ನಿರಂತರ ಪೃಕ್ರಿಯೆಗೆ ಒಳಗಾಗುತ್ತಲೇ ಬರುತ್ತಿವೆ. ಭಾರತೀಯ ಕೌಟಂಬಿಕ ಮೌಲ್ಯಗಳು ವಿಶ್ವಕ್ಕೆ ಮಾದರಿ. ಕೌಟಂಬಿಕ ಹಿನ್ನೆಲೆಯಲ್ಲಿ  ಅವಿಭಕ್ತ ಕುಟುಂಬ, ವಿಭಕ್ತ ಕುಟುಂಬ, ಅಣು ಕುಟುಂಬ ಸಂಬಂಧಗಳು ಎಲ್ಲವೂ ಕಾಲಕಾಲಕ್ಕೆ ಆದ ಬದಲಾವಣೆಯಲ್ಲಿ  ವಿಸ್ತøತವಾಗುತ್ತಲೋ ಇಲ್ಲ ಸಂಕೀರ್ಣವಾಗುತ್ತಲೋ ಇವೆ. ಈ ಕೌಟಂಬಿಕ ನೆಲೆಗಟ್ಟಿನಲ್ಲಿ ಹಲವಾರು ಸಂಬಂಧಗಳು ಬೆಸೆದುಕೊಂಡಿವೆ. ಗಂಡ-ಹೆಂಡತಿ,ತಂದೆ-ತಾಯಿ,ಮಗ -ಸೊಸೆ,ಅಳಿಯ-ಮಾವ, ಅತ್ತೆ-ಸೊಸೆ ಹೀಗೆ ಆಲದ ಮರದ ಬೀಳಲುಗಳಂತೆ ಭಾರತೀಯ ಸಂಬಂಧಗಳು ಹಲವಾರು. ಅದರಲ್ಲಿ ಅತ್ತೆ-ಸೊಸೆ ಸಂಬಂಧ  ಸಮಾಜದ ಮೂಲ ಘಟಕವಾದ ಕುಟುಂಬದ ಬಲಬೇರು.                          ಅತ್ತೆ […]

“ಮಾಡರ್ನ್ ಲೋಕದ ಮಿನಿಕಥೆಗಳು”: ಪ್ರಸಾದ್ ಕೆ.

  ಅವಳಿಗೆ ಮುಂಜಾನೆಯ ಏಳಕ್ಕೆ ಸರಿಯಾಗಿ ಎಚ್ಚರವಾಯಿತು. ಕಣ್ಣುಜ್ಜಿ ಅತ್ತಿತ್ತ ನೋಡಿದರೆ ಅವನಿನ್ನೂ ವಿವಸ್ತ್ರನಾಗಿಯೇ ಬಿದ್ದುಕೊಂಡಿದ್ದ. ಲಗುಬಗೆಯಲ್ಲೇ ಕಾಲನ್ನು ನೀಲಿ ಜೀನ್ಸ್ ಪ್ಯಾಂಟಿನೊಳಗೆ ತೂರಿಸಿ, ಟೀಶರ್ಟೊಂದನ್ನು ಧರಿಸಿ ತನ್ನ ಪುಟ್ಟ ಬ್ಯಾಗಿನೊಂದಿಗೆ ಅವಳು ಹೊರಟುಹೋದಳು. ಹತ್ತರ ಸುಮಾರಿಗೆ ಅವನಿಗೆ ಎಚ್ಚರವಾಯಿತು. ಹೋಟೇಲ್ ರೂಮಿನಲ್ಲಿ ಅವಳ ಪತ್ತೆಯಿರಲಿಲ್ಲ. ಅವಳ ಮೈಬೆವರಿನ, ಉನ್ಮಾದಗಳ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದ. ಛೇ, ನಿನ್ನೆ ರಾತ್ರಿ ಅವಳ ನಂಬರನ್ನಾದರೂ ಕೇಳಬಹುದಿತ್ತು ಎಂದು ಪರಿತಪಿಸಿದ ಆತ. ಹಾಸಿಗೆಯಿಂದೆದ್ದು ಒಳಉಡುಪನ್ನು ಧರಿಸಿ ನೀರಿನ ಬಾಟಲಿಗೆಂದು ಫ್ರಿಡ್ಜ್ ಕಡೆಗೆ […]

ಹಿಮಾಲಯವೆಂಬ ಸ್ವರ್ಗ (ಭಾಗ 3): ವೃಂದಾ ಸಂಗಮ್

ಇದುವರೆಗೂ ಶಿವನೇ ನಮಗೆ ಕಣ್ಮಾಯ ಮಾಡಿದ್ದನೋ ತಿಳಿಯದು. ಅಲ್ಲಿಯೇ ಸೈಕಲ್ ರಿಕ್ಷಾದಲ್ಲಿ ನಮ್ಮಿಂದ ತಪ್ಪಿಸಿಕೊಂಡ ಅವರೆಲ್ಲರೂ ಕೂಡ ಇದೇ ರೀತಿ ಕಾಯ್ದು ಹುಡುಕಿ, ಇದಿಷ್ಟೂ ಪೂಜೆ ಮುಗಿಸಿಕೊಂಡ ನಿಂತಿದ್ದಾರೆ. ಸರಿ ಎಲ್ಲರೂ ಒಂದಾಗಿ ಕೃಷ್ಣ ಮಠಕ್ಕೆ ಹಿಂದಿರುಗಿದೆವು. ಅಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವವ ಚಿಕ್ಕ ವಯಸ್ಸಿನ ಹುಡುಗ. ವೇದವ್ಯಾಸ, ಅನಂತಪುರ ಜಿಲ್ಲೆಯವನಂತೆ. ನೋಡಲು ಉಡುಪಿ ಮಠದವರಂತೆಯೇ ಇದ್ದ. ತಮಾಷೆಯಾಗಿ ಮಾತಾಡುತ್ತಿದ್ದ. ತೆಲಗು ಕನ್ನಡ ಎರಡೂ ಗೊತ್ತಿತ್ತು. ಅವನು ಬನಾರಸ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಕೊಳಲು ವಿದ್ವತ್ ಕಲಿಯುತ್ತಿದ್ದಾನಂತೆ. […]

ನೆನಪಿನ ಪಯಣ – ಭಾಗ 4: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು. ನಾನು ಆಗಿನ್ನು ಪಿಯುಸಿ ಮುಗಿಸಿದ್ದೆ, ಯಾವುದು ಸರಿಯೋ ಯಾವುದು ತಪ್ಪೋ ಯಾರು ಒಳ್ಳೆಯವರು ಕೆಡುಕರು ಅನ್ನುವುದು ಸದ್ಯ ತಿಳಿಯದ ಸ್ಥಿತಿ. ನಾನಾಗ ರಜೆಯಲ್ಲಿ ಟೈಪಿಂಗ್ ಕೋರ್ಸ್ ಸೇರಿದ್ದೆ. ಅಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದ. ನನಗಿಂತ ಮೂರು  ವರ್ಷ ದೊಡ್ಡವನಿರಬಹುದೇನೊ, ನಾಗೇಶ ಎಂದು ಹೆಸರು. ಅಲ್ಲಿ ಹೋದ ಒಂದು ತಿಂಗಳಿಗೆಲ್ಲ ಎಷ್ಟು ಆತ್ಮೀಯನಾಗಿದ್ದ ಎಂದರೆ ಅವನ ಮಾತುಗಳಿಗೆ ನಾನು ಮರುಳಾಗಿದ್ದೆ. ಅವನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಹೇಳುವ ದೈರ್ಯವಿಲ್ಲ. ಹೇಳಿದರೆ, […]

ಲೇಡಿ ವಿತ್ ದ ಲ್ಯಾಂಪ್: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

  ಮೇ ೧೨ ಪ್ಲಾರೆನ್ಸ್ ನೈಟಿಂಗೆಲ್ ಜನ್ಮದಿನ. ಅವಳ ಜನ್ಮದಿನದ ನೆನಪಿಗಾಗಿ ಮೇ ೬ ರಿಂದ ೧೨ ರ ವರೆಗ ನರ್ಸ್ ಗಳ ಅಂತರಾಷ್ಟ್ರೀಯ ದಿನ ಆಚರಿಸುತ್ತಾರೆ. ಇಂತಹ ಗೌರವಕ್ಕೆ ಅವಳು ಭಾಜನವಾಗಬೇಕೆಂದರೆ ಅವಳು ಯಾರು ? ಅವಳು ಮಾಡಿದ ಸಾಧನೆಯಾದರೂ, ಮಹತ್ಕಾರ್ಯವಾದರೂ ಏನೆಂದು ತಿಳಿಯುವುದು ಸೂಕ್ತ. ಸೇವೆಗೆ ಮತ್ತೊಂದು ಹೆಸರೇ ಪ್ಲಾರೆನ್ಸ್ ನೈಟಿಂಗೇಲ್! ' ಲೇಡಿ ವಿತ್ ದ ಲ್ಯಾಂಪ್ ' ಎಂದು ಪ್ರಸಿದ್ಧರಾದವರು. ಇವಳು ಶ್ರೀಮಂತ ಕುಟುಂಬದ ಹಿನ್ನೆಲೆಯವಳು. ೧೮೨೦ ಮೇ ೧೨ ರಂದು […]

” ಸೂಫಿ, ಪ್ರೇಮ ಮತ್ತು ಗಜಲ್ “: ಕೃಷ್ಣ ಶ್ರೀಕಾಂತ ದೇವಾಂಗಮಠ

    ಉರ್ದು, ಅರೇಬಿಕ್ ಹಾಗೂ ಪರ್ಷಿಯನ್  ಗಜಲ್ ಕಾವ್ಯ ಮತ್ತು ಹಲವು ಪ್ರಕಾರದ ಸೂಫಿ ಕಾವ್ಯಗಳು ಮೂಲದಲ್ಲಿ ಪ್ರೇಮ ಕಾವ್ಯಗಳೇ. ಅನೇಕ ಸೂಫಿಗಳು ಬರೆದಿರುವುದು ಗಜಲ್ ಪ್ರಕಾರದಲ್ಲೇ. ಕೆಲವು ಸೂಫಿಗಳು ' ಮಸನವಿ ' ಅಂದರೆ ದ್ವಿಪದಿಯಂಥ ರಚನೆಗಳನ್ನು ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಸೂಫಿಯನ್ನು ಪ್ರೇಮ ಕಾವ್ಯ ಎಂದು ಅರ್ಥೈಸುವಲ್ಲಿ ಅವರ ಪ್ರೇಮದ ತೀವ್ರ ಒಡನಾಟವಿರುವುದು ಬೇರಾರ ಮೇಲು ಅಲ್ಲಾ ಅದು ಸ್ವತಃ ಅವರ ಆರಾಧ್ಯ ದೈವ ಅಲ್ಲಾಹನ ಮೇಲೆಯೇ . ಹೀಗೆ ಸೂಫಿಯಲ್ಲಿ ಅಲ್ಲಾಹನ […]