‘ರಾಗವಿಲ್ಲದಿದ್ದರೂ ಸರಿ’ ನಾಲಿಗೆ ಮೇಲೆ ನುಲಿಯುತಿರಲಿ: ಜಹಾನ್ ಆರಾ ಕೋಳೂರು

ಗಜಲ್ ಕಾವ್ಯ ನಿಜಕ್ಕೂ ಬಹಳ ನಿಯಮಬದ್ಧವಾದ ಸಾಹಿತ್ಯಪ್ರಕಾರ ಎಂದು ಹೇಳಬಹುದು ಇದು ಸಾಮಾನ್ಯವಾಗಿ ಒಂದೆರಡು ಪ್ರಯತ್ನಗಳಲ್ಲಿ ಒಲಿಯುವಂಥದ್ದಲ್ಲ ಉಮರ್ ರವರ ಕಠಿಣ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದಾಗಿ ಇದು ಅವರಿಗೆ ಒಲಿಯಲು ಸಾಧ್ಯವಾಗಿರಬಹುದು. ” ರಾಗವಿಲ್ಲದಿದ್ದರೂ ಸರಿ” ಎಂದು ಹೇಳಿ ಭಾವ ತೀವ್ರವಾದ ಹೃದಯಸ್ಪರ್ಶಿಯಾದ ಪ್ರಾಮಾಣಿಕವಾದ ರಾಗಗಳನ್ನು ಕವಿ ನಮ್ಮ ಕೈಗೆ ಇಟ್ಟಿದ್ದಾರೆ. ಸೂಫಿ ಮಾದರಿಯ ಮುಖಪುಟ ದೊಂದಿಗೆ ಮಾನವೀಯತೆಯ ಗಜಲ್ ಗಳ ಅನಾವರಣಗೊಂಡಿವೆ. ಈ ಕೃತಿಗೆ ವಿಶಿಷ್ಟವಾದ ಶೈಲಿಯಲ್ಲಿ ಮುನ್ನುಡಿಯನ್ನು ಬರೆದಿರುವಂತಹ ಶ್ರೀಮತಿ ಮೆಹಬೂಬ್ ಬಿ ಶೇಕ್ … Read more

ನೀನು ಅಣ್ಣನಲ್ವಾ…: ಸಿಂಧು ಭಾರ್ಗವ್ ಬೆಂಗಳೂರು

ಮಧ್ಯಾಹ್ನ ಸುಮಾರು ಮೂರು ಗಂಟೆಯಾಗಿರಬಹುದು. ಶ್ಯಾಮರಾಯರು ಮನೆಯಿಂದ ಹೊರಬಂದು, ಕಮಲಿಯಲ್ಲಿ ಮಾತಿಗಿಳಿದರು… “ಅಲ್ಲಾ…‌ನಾವೆಲ್ಲ ವಯಸ್ಸಾದವರು. ಊಟ‌ ಮಾಡಿ ಮಲಗೋ ಸಮಯ.. ನಿಮ್ಮ ಮಕ್ಕಳಿಗೆ ಶಾಲೆ ಇಲ್ಲ‌ ನಿಜ… ಆದರೆ ಗಲಾಟೆ ಮಾಡಬಾರದು ಅಂತ‌ ಒಂದು ಮಾತು ಹೇಳಬಾರದಾ?? ನನಗಂತೂ ಈ ಬಿಪಿ ,ಶುಗರ್ ನ ಮಾತ್ರೆ ತಿನ್ನೊದ್ರಿಂದ ಮಲಗಿದ್ರೆ ನಿದ್ದೇನೆ ಬರೋದಿಲ್ಲ… ಈ ಮಕ್ಕಳ ಗಲಾಟೆ ಸದ್ದು ಮಲಗೋಕೂ ಬಿಡೋದಿಲ್ಲ… ಯಾವಾಗಲೋ ಕರೆದು ಹೇಳಬೇಕು ಅಂತ ಎನಿಸಿದ್ದೆ….ಇಂದು ನೀನೇ ಸಿಕ್ಕಿದೆ ನೋಡು….” ಎಂದರು.. ಕಮಲಿಗೆ ಸಿಟ್ಟು ನೆತ್ತಿಗೇರಿತು. … Read more

ರಾಷ್ಟ್ರೀಯ ವಿಜ್ಞಾನ ದಿನ: ಡಾ.ಅವರೆಕಾಡು ವಿಜಯ ಕುಮಾರ್

1986 ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ ಕಮ್ಯುನಿಕೇಶನ್(ಎನ್. ಸಿ. ಎಸ್. ಟಿ. ಸಿ.) ಭಾರತ ಸರ್ಕಾರಕ್ಕೆ ಫೆಬ್ರವರಿ 28 ರಂದು ‘ ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲು ಮನವಿಯನ್ನು ಸಲ್ಲಿಸಿತ್ತು.ಈ ಮನವಿಯನ್ನು ಒಪ್ಪಿದ ಅಂದಿನ ಸರ್ಕಾರ ಪ್ರತಿ ವರ್ಷ ಫೆಬ್ರವರಿ 28 ನೇ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ದೇಶದಾದ್ಯಂತ ಆಚರಿಸುವಂತೆ ಘೋಷಿಸಿತು.ಮೊದಲ ಬಾರಿಗೆ ಈ ರಾಷ್ಟ್ರೀಯ ವಿಜ್ಞಾನ ದಿನವನ್ನು 28 ಫೆಬ್ರುವರಿ 1987 ರಂದು ಆಚರಣೆಗೆ ತರಲಾಯಿತು.ವಿಜ್ಞಾನ ಮತ್ತು ನಮ್ಮ ಜೀವನದಲ್ಲಿ … Read more

ವಿಷಾದ ನೋವು ಘರ್ಷಣೆ ಸಂಘರ್ಷ ತೊಳಲಾಟ ತಾಕಲಾಟದ ಒಳಗುದಿ ಹೇಳುವ ಕಥೆಗಳು: ಎಂ.ಜವರಾಜ್

“ನಿರುದ್ಯೋಗಕ್ಕೆ ಹೆಣವಾದ ಅಪ್ಪ” ಇದು ಆನಂದ್‌ ಎಸ್. ಗೊಬ್ಬಿ ಅವರ ಚೊಚ್ಚಲ ಕಥಾ ಸಂಕಲನ. “ನನ್ನೊಳಗಿನ ಒಬ್ಬ ಕಥೆಗಾರ ಹೊರಗೆ ಬರಲು ತುಂಬ ತಡಕಾಡಿದ. ಅಲ್ಲಿಂದ ಒಂದು ಘಳಿಗೆಗಾಗಿ ರಮಿಸಿಕೊಂಡು ಬಂದೆ. ಬೆಳಿತಾ ಬೆಳಿತಾ ನನಗೆ ನನ್ನ ಊರಿನ ಪರಿಸರ ಹೇಗಿದೆ, ನನ್ನ ಸ್ನೇಹಿತರು ಹೇಗಿದ್ದಾರೆ ಎಂಬುದು ಸ್ಪಷ್ಟವಾಗಿ ಅರಿವಿಗೆ ಬಂತು. “ನೊಂದವರ ನೋವು ನೊಂದವರೇ ಬರೆದರೆ ಗಟ್ಟಿಯಾಗಿರುತ್ತದೆ” ಎಂಬ ದೊಡ್ಡವರ ಮಾತನ್ನು ಕೇಳಿದ್ದೆ ಮತ್ತು ಅನುಭವಿಸಿದ್ದೆ” ಎಂದು ಲೇಖಕ ಆನಂದ್ ಎಸ್. ಗೊಬ್ಬಿ ತಮ್ಮ ಕಥಾಲೋಕ … Read more

ತಾಳ್ಮೆ: ಶರಧಿನಿ

ತಾಳ್ಮೆ, ಆದ್ದರಿಂದ ತಾಳ್ಮೆಯ ಬಗ್ಗೆ ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳುವ ಮೊದಲ ವಿಷಯವೆಂದರೆ ಫಲಿತಾಂಶಕ್ಕಾಗಿ ಅಸಹಾಯಕತೆಯಿಂದ ಕಾಯುವುದು. ಆದರೆ ತಾಳ್ಮೆ ಎನ್ನುವುದು ನಾವು ಕೊನೆಯಲ್ಲಿ ನಿರೀಕ್ಷಿಸಿದ ಫಲಿತಾಂಶದ ಮೇಲೆ ಕೆಲಸ ಮಾಡುವ ಒಂದು ಕಲೆ ಎಂದು ಹೇಳಲು ಬಯಸುತ್ತೇನೆ. ನಾವು ಯಾವುದೇ ಹೊಸ ಸವಾಲನ್ನು ಕೈಗೆತ್ತಿಕೊಂಡಾಗ, ಹೆಚ್ಚಿನ ಬಾರಿ ನಾವು ನಮ್ಮ ಕೆಲಸವನ್ನು ಇತರರೊಂದಿಗೆ ಹೋಲಿಸಲು ಪ್ರಾರಂಭಿಸುತ್ತೇವೆ ಮತ್ತು ಇತರರಂತೆಯೇ ಕೆಲಸವನ್ನು ಪೂರೈಸಲು ಮತ್ತು ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕೊನೆಗೊಳ್ಳಲು ನಮ್ಮೊಳಗೆ ಒತ್ತಡದ ವಾತಾವರಣವನ್ನು ಸ್ಥಾಪಿಸುತ್ತೇವೆ. ಇಲ್ಲಿ ನಾವು … Read more

ಅಶ್ಫಾಕರ ” ನನ್ನೊಳಗಿನ ಕವಿತೆ ” ಕವನ ಸಂಕಲನ ಕುರಿತ ಎರಡು ಅಭಿಪ್ರಾಯಗಳು

“ಪ್ರತಿಮೆಯೊಳಗೇ ಕರಗಿಹೋಗುವ ಕಲ್ಲಿನ ಗುಣ ಅಶ್ಫಾಕರ ” ನನ್ನೊಳಗಿನ ಕವಿತೆ ” ಯ ಮೂಲದ್ರವ್ಯ ನೆರಳಿನ ಹಾದಿಯ ಬಿಸಿಲಿನ ಮಂಟಪವೂ ಹೌದು. ಕಲ್ಪನೆಯ ಕನಸುಗಳಲ್ಲಿ ನೆನಪಿನ ಹೆಜ್ಜೆಗಳನ್ನು ಮೂಡಿಸುವ ಪದಪಾದಪಯಣವೂ ಹೌದು. ವಿಶೇಷ ಆಸ್ವಾದನೆಗೆ ಹದಗೊಂಡು ಮುದವೀವ ಪದಪಂಕ್ತಿಯ ಭೋಜನಾಲಯವೂ ಹೌದು. ಕಣ್ಣಿಗೆ ಕಾಣುವ ಅಕ್ಷರಗಳಿಗೆ ಧ್ವನಿನೀಡಿ ಭಾವಸ್ಪರ್ಶಕ್ಕೆ ಮನಸನ್ನು ತೆರೆದಿಡುವಲ್ಲಿ “ನನ್ನೊಳಗಿನ ಕವಿತೆ” ಗಳು ಸಾರ್ಥಕ್ಯವನ್ನು ಕಂಡಿವೆ. ಕಾವ್ಯದೊಳಗಿನ ಕನಸು; ಕನಸಿನೊಳಗಿನ ಕಾವ್ಯ; ಮೌನದೊಳಗಿನ ಮನಸು; ಮನಸಿನೊಳಗಿನ ಮೌನ, ವಾಸ್ತವದ ನೆರಳಿನಲೆಯೊಳಗೆ ಜೀವಂತಿಕೆಯನ್ನು ಪಡೆದುಕೊಳ್ಳುತ್ತವೆ. ಮಹತ್ವಪೂರ್ಣ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 65 & 66): ಎಂ. ಜವರಾಜ್

-೬೫-ಆ ಆಳು ಬೀದಿಗುಂಟದಾಪಗಾಲಾಕಿ ಓಡ್ಬತ್ತಿರಗಆ ಆಳ್ನೆಡ್ತಿ ತನ್ಸೀರನ ತೊಡ್ಗಂಟ ಗೋರ್ಕಂಡುಆ ಗೋರ್ಕಂಡಿರ ತೊಡಮ್ಯಾಲ ಮಲ್ಗಿರೋಈ ಅಯ್ನೋರ್ ತಲನ ಹಿಡ್ಕಂಡುಬತ್ತ ಇರ ಈ ಅಯ್ನೋರಾಳನ್ನೊ ಗಂಡನ್ನವಾರ್ಗಣ್ಲಿ ನೋಡ್ತಾಈ ಅಯ್ನೋರ್ ತಲನಆ ತೊಡಮ್ಯಾಲಿಂದಮೆಲ್ಮೆಲ್ಗ ಉಸಾರಾಗಿ ಕೆಳಕ ಸರ್ಸಿಆ ಮೋರಿ ಸಂಗ್ಡಿರೊಆ ಭೂಮ್ತಾಯಿ ಮ್ಯಾಲ ಮಲುಗ್ಸಿಈ ಅಯ್ನೋರಾಳನ್ನೊತನ್ನ ಗಂಡುನ್ಗ ತೋರುಸ್ತ ಕಣ್ಣೀರಾಕ್ತ..ಆಗ ಆ ಆಳು ಮಂಡಿ ಊರಿ‘ಅಯ್ನೋರಾ.. ಅಯ್ನೋರಾ..ಇದ್ಯಾಕ.. ಏನಾಯ್ತು..’ ಅನ್ತಗೊಳಗೊಳನೆ ಅಳ್ತ ನಿಂತಿರದಆ ಭೂಮ್ತಾಯಿ ಸಂಗ್ಡ ಇರ ಮೋರಿ ಸಯಿತಕಿಲಕಿಲ ನಗ್ತ ನೋಡ್ತಾ ಗಬ್ಬುನಾತ ಬೀರ್ತಿತ್ತಲ್ಲಾ.. ಆಗ ಈ ಅಯ್ನೋರುಆ … Read more

ಬದುಕು ಬಯಲಿಗೆ: ಆನಂದ ಎಸ್ ಗೊಬ್ಬಿ.

ದುಡಕಂದು ತಿನ್ನಾಕ ಅಂತ ಬೆಂಗ್ಳೂರಿಗೆ ಹೋಗಿದ್ದ ಶಂಕ್ರನ ಚಡ್ಡಿ ದೊಸ್ತ ಹಣಮಪ್ಪ ಪೋನ್ ಮಾಡಿ “ಬರ್ತೈಯಿದೀನಿ ಲೇ ಮಗ, ಕೆಲಸ ಇಲ್ಲ ಗಿಲಸ ಇಲ್ಲ. ಬಾಳ ತಿಪ್ಲ ಆಗ್ಯಾದಾ , ಹೋರಗ ಹ್ವಾದ್ರ ಸಾಕು ಪೋಲಿಸ್ರೂ ಕುಂಡಿ ಮ್ಯಾಗ ಬಾರಸದೇ ಬಾರಸಾಕ ಹತ್ಯಾರ ಲೇ ಅವರೌನ್. ನಮಗ ಸುಮ್ನೆ ಕುಂದ್ರದು ಆಗವಲ್ಲದು, ಸುಮ್ನೇ ಕುಂದ್ರು ಅಂದ್ರೇ ಎಷ್ಟು ದಿನ ಅಂತ ಕುಡ್ತಿ , ತಿಂಗ್ಳ‌ ಆಗಕ ಬಂತು, ಕೆಲಸ ಇಲ್ಲದೆ ಬಗಸಿ ಇಲ್ಲದೆ, ಹೊಟ್ಟಿ ನಡಿಬೇಕಲ್ಲಪ್ಪಾ ಮಾರಾಯ.” … Read more

ಸಾವಿತ್ರಿ: ಸುರೇಶ್ ಮಲ್ಲಿಗೆ ಮನೆ

ಆವತ್ತು ಸೋಮಾರ ರಾತ್ರಿ ನಾನು ಒಬ್ಬಾಕೆ ಕತ್ತಲಾಗ ಹುಲಿಕಲ್ಲು ಕಾಡಾಗ ಒಣಗಿದ ಮರನಾ ಕಡೀತಿದ್ನ, ಆ ಬೆವರ್ಸಿ ಹುಲಿ ಗಿಡದ ಮಟ್ಟಿಂದ ಬಂದು ನನ್ನ ನೋಡಿ… ಘರ್… ಅಂತ ಘರ್ಜಿಸ್ತು…!!.. ಹಂಗೆ ಕತ್ತೀನ ಕೈಯಿಂದ ಹಿಡಿದು ಮೇಲಕ್ಕೆತ್ತಿ, ದೊಡ್ಡ ಕಣ್ಣುಬಿಡುತ್ತಾ, ಅಡ್ಡಿಡಿಡಿ……. ಅಡ್ಡಿಡಿಡಿ…… ಅಡ್ಡಿಡಿಡಿ…. ಅಂದೇ ನೋಡು……!!!ಅಹ್..ಹ್….ಹ್…ಹ್..ಹ್…ಹ…. ಇಲಿ ಮರಿತರ ಹೆದರಿ ಹಂದಿ ತರ ಬಿದ್ದು, ಕಾಡೊಳಗೆ ಓಡೋಯಿತು ನೋಡು…….ಅಹ್..ಹ್…ಹ್….ಹ್….ಹ್…ಹ….. ಅಂತ ನಗ್ತಾ,…… ಹುಲಿ ಮುಂದೆ ತಾನು ಒಬ್ಬಂಟಿಯಾಗಿ ತೋರಿದ ಪೌರುಷಾನ ಮುಂಜಾನೆ ತನ್ನ ಅಂಗೈ ಅಗಲದ … Read more

ಮನಸ್ಸುಗಳು ಅನಾಥವಾಗದಿರಲಿ: ಪೂಜಾ ಗುಜರನ್. ಮಂಗಳೂರು.

ಈ ಭೂಮಿ ಮೇಲೆ ಬದುಕುವುದಕ್ಕೆ ಬೇಕಾಗಿರುವುದು ಏನೂ? ಯಾರೋ ಹೇಳಿದರೂ ಗಾಳಿ, ಬೇಕು ನೀರು, ಬೇಕು ಆಹಾರ, ಬೇಕು.. ಸರಿ ಇದೆಲ್ಲ ಈ ಭೂಮಿ ಮೇಲೆ ಸಿಗುತ್ತದೆ. ಉಸಿರಾಡುವುದಕ್ಕೆ ಗಾಳಿ, ಈ ಪ್ರಕೃತಿಯ ಮಡಿಲಿನಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಅದಕ್ಕಾಗಿ ಯಾರ ಅಪ್ಪಣೆಯು ಬೇಕಾಗಿಲ್ಲ. ಆದರೆ ನೀರು ಆಹಾರ.? ಇದು ಅಪ್ಪಣೆಯಿಲ್ಲದೆ ದೊರೆಯುವುದೇ? ಹರಿದು ಹೋಗುವ ನೀರಿಗೂ ಬೇಲಿ ಹಾಕುವವರು ಇರುವಾಗ ಇದು ಕಷ್ಟವೇ. ಇರಲಿ ಇದು ದೊರೆಯುತ್ತದೆ ಅಂತಿಟ್ಟುಕೊಳ್ಳೋಣ.. ಇನ್ನು ಏನಾದರೂ ಬೇಕಿದೆಯಾ.? ಹೌದು ನೆಮ್ಮದಿ ಬೇಕು … Read more

ವರ್ತಮಾನದ ಗಾಯಗಳಿಗೆ ಮುಲಾಮು ನೀಡುವ ಸಂಕಲನ -ಬಯಲೊಳಗೆ ಬಯಲಾಗಿ: ಡಾ ವೈ. ಎಂ. ಯಾಕೊಳ್ಳಿ, ಸವದತ್ತಿ

ಇಂದು ಕನ್ನಡದಲ್ಲಿ ತುಂಬ ಸದ್ದು ಮಾಡುತ್ತಿರುವ ಕಾವ್ಯ ಪ್ರಕಾರ ಗಜಲ್. ಕೆಲವಾರು ದಶಕಗಳ ಹಿಂದೆ ರಾಯಚೂರು ನಾಡಿನ ಕವಿ ಶ್ರೀ ಶಾಂತರಸ ರಂಥವರಿಂದ ಕನ್ನಡಕ್ಕೆ ಬಂದ ಈ ಕಾವ್ಯ ಪ್ರಕಾರ ಇಂದು ತನ್ನ ಸಮಸ್ತ ಬಾಹುಗಳನ್ನು ಚಾಚಿ ಘಮ ಘಮಿಸುತ್ತಿದೆ. ಗಜಲ್ ರಚನೆಯ ಹೃದಯವನ್ನು ಅರಿತವರು, ಅರಿಯದವರು ಗಜಲ್ ಗಳನ್ನು ಬರೆಯುತ್ತಿದ್ದಾರೆ. ಅವರದೇ “ಮುಷಾಯಿರಿ ಗಳು ನಡೆಯುತ್ತಿದ್ದು ಹಲವಾರು ಗಜಲ್ ಗ್ರೂಪ್ ಗಳೇ ನಿರ್ಮಾಣವಾಗಿವೆ. ಗಜಲ್ ಕುರಿತ ವಿಚಾರ ಗೋಷ್ಠಿ ಗಳು ಅಲ್ಲಲ್ಲಿ ನಡೆಯುತ್ತಿದ್ದು ಕೆಲವೇ ದಿನಗಳಲ್ಲಿ … Read more

ಸಿದ್ಧಾಂತಗಳು ಮರಿಚೀಕೆಯಾದಾಗ…: ಡಾ. ಮಲ್ಲಿನಾಥ ಎಸ್. ತಳವಾರ

‘ಅಕ್ಷರಗಳಿಂದ ಏನೂ ಆಗುವುದಿಲ್ಲ’ ಎಂಬ ಸಿನಿಕತನದ ಜೊತೆಗೆ ‘ಅಕ್ಷರಗಳಿಂದ ಏನೆಲ್ಲಾ ಆಗಬಹುದು’ ಎಂಬ ಸಕರಾತ್ಮಕ ಚಿಂತನೆಯು ವಾಗ್ದೇವಿಯ ಮಡಿಲಲ್ಲಿ ಹಚ್ಚ ಹಸಿರಾಗಿದೆ. ಇದು ನಿತ್ಯ ಹರಿದ್ವರ್ಣವಾಗಬೇಕಾದರೆ ಸಾಹಿತ್ಯವು ಮನುಷ್ಯನ ಅಂತರಂಗಕ್ಕೆ, ಅವನ ಅಂತರ್ಲೋಕಕ್ಕೆ ಸಂಬಂಧಪಟ್ಪಿರಬೇಕಾಗುತ್ತದೆ. ಇದು ಕೇವಲ ಉದರ ನಿಮಿತ್ತವಾಗಿ ಮಾಡುವ ಕೆಲಸವಂತೂ ಅಲ್ಲವೇ ಅಲ್ಲ. ಈ ಕಾರಣಕ್ಕಾಗಿಯೇ ‘ಸಾಹಿತ್ಯ ಅನಂತಕಾಲಕ್ಕೆ ಸಂಬಂಧಪಟ್ಟಿದ್ದು, ತತ್ಕಾಲಕಲ್ಲ’ ಎನ್ನಲಾಗುತ್ತದೆ. ಇದಕ್ಕೆ ಬೇಕಾಗಿರುವುದು ಮನುಷ್ಯತ್ವ. ಮನುಷ್ಯತ್ವವೇ ಈ ಜಗತ್ತಿನ ಅತ್ಯುತ್ತಮವಾದ ತಾತ್ವಿಕ ತಿರುಳು. ಇಲ್ಲಿ ತತ್ ಕ್ಷಣ ಫಲದ ಪ್ರಲೋಭನೆ ಸರಿಯಲ್ಲ. … Read more

ಮನದ ಗೋಡೆಗೆ ಒಲವ ಸಿಂಚನ- ಪನ್ನೀರು: ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ಕೃತಿ- ಪನ್ನೀರು( ಹನಿಗವನ ಸಂಕಲನ)ಕವಿ- ಪರಮೇಶ್ವರಪ್ಪ ಕುದರಿಪ್ರಕಾಶನ- ಹರಿ ಪ್ರಕಾಶನಮುದ್ರಣ- ಸ್ವ್ಯಾನ್ ಪ್ರಿಂಟರ್ಸ್ಬೆಲೆ- ಒಂದು ನೂರು ರೂಗಳು ಎಲ್ಲ ನಲಿವಿಗೂಪ್ರೀತಿಯೇ ಪ್ರೇರಣೆಎಲ್ಲಾ ನೋವಿಗೂಪ್ರೀತಿಯೇ ಔಷಧಿ!ಮತ್ತೇಕೆ ಜಿಪುಣತನಕೈ ತುಂಬಾ ಹಂಚಿಎದೆ ತುಂಬಾ ಹರಡಿ( ಪ್ರೀತಿಯೇ ಔಷಧಿ) ಮಾನವೀಯ ಅಂತಃಕರಣ ಹೊಂದಿದ ಪ್ರತಿ ಮನುಷ್ಯ ನೂ ಕವಿಯೇ! ಹೀಗಿರುವಾಗ ಕವಿ ಮನದಿ ಇಂತಹ ದೇದಿಪ್ಯಮಾನದ ಹೊಳಹಿನ ಸಾಲೊಂದು ಹೊಳೆದರೆ ಅದು ಸ್ವಸ್ಥ ಸಮಾಜದ ಕುರುಹು.ಪರಮೇಶ್ವರಪ್ಪ ಕುದರಿ ಪ್ರೌಢಶಾಲಾ ಅಧ್ಯಾಪಕರಾಗಿ,ಗಾಯಕ ರಾಗಿ, ಮಿಮಿಕ್ರಿ ಕಲಾವಿದರು ಆಗಿ ನಾಡಿನಾದ್ಯಂತ ಪರಿಚಿತರಾಗಿದ್ದಾರೆ. ಬಹುಮುಖ ಪ್ರತಿಭೆಯಾದರೂ … Read more

ಕೆಂಡದ ಬೆಳುದಿಂಗಳು – ಸುಡುವ ಕೆಂಡದಲಿ ಅದ್ದಿ ತೆಗೆದ ಒಂದು ಅಪೂರ್ವ ಕಲಾಕೃತಿ: ಎಂ.ಜವರಾಜ್

“ವಿಮರ್ಶೆಯು ಒಂದು ಬೌದ್ಧಿಕ ಕ್ರಿಯೆ. ಯಾವುದೇ ಕೃತಿಯನ್ನು ತೂಗಿನೋಡಿ ಮೌಲ್ಯ ನಿರ್ಧರಿಸುವ ಸಾಮಥ್ರ್ಯ ಅಥವಾ ಕಲೆ – ಕ್ರಿಟಿಸಿಸಮ್. ಈ ಪದ ಗ್ರೀಕ್ ಮೂಲದ ಕ್ರಿನೈನ್‍ದಿಂದ ಬಂದದ್ದು. ಅಂದರೆ ಬೇರ್ಪಡಿಸು, ವಿವೇಚಿಸು, ವಿಶ್ಲೇಷಿಸು ಎಂದರ್ಥ. ಕ್ರಿಯಾಶೀಲ ಬರೆಹಗಾರರು, ಪ್ರಾರಂಭಿಕ ಬರೆಹಗಾರರು, ವೃತ್ತಿಶೀಲ ವಿಮರ್ಶಕರು ಎಲ್ಲರ ವಿಶ್ಲೇಷಣೆಯನ್ನು ವಿಮರ್ಶೆಯೆಂದೇ ಕರೆಯಲಾಗುತ್ತದೆ. ಇಂದು ಬಳಸುತ್ತಿರುವ ವಿಮರ್ಶೆ ಎಂಬ ಪದ ಇಂಗ್ಲಿಷ್‍ನ ಕ್ರಿಟಿಸಿಸಂ ಪದಕ್ಕೆ ಸಂವಾದಿ” ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ವಿಮರ್ಶಾ ಬರಹಗಳಲ್ಲಿ ವಿಶೇಷವಾಗಿ ಸಣ್ಣ ಅತಿಸಣ್ಣ ಕಥೆಗಳ … Read more

ನೀನೆಂಬ ವಿಸ್ಮಯ: ಶ್ರುತಿ ಬಿ.ಆರ್.

ಓಯ್ ತಿಂಡಿ ಪೋತಿ, ನಿನ್ನ ಬಗ್ಗೆ ಯೋಚಿಸಿದಾಗಲೆಲ್ಲೆ, ನೆನಪಾದಾಗಲೆಲ್ಲ ನನ್ನ ಮುಖದ ಮೇಲೆ ಹಾದು ಹೋಗುವ ಸಣ್ಣ ನಗು, ನಿನ್ನತ್ತಲೇ ಎಳೆಯುವ ಹುಚ್ಚು ಮನಸ್ಸು, ನಿನಗೆ ಹೇಳಬೇಕಾಗಿರೋದನ್ನು ಹೇಳಲು ಸಹಕರಿಸದ ಹೇಡಿ ಮಾತುಗಳು, ಆದರೆ ಇನ್ನೂ ನಾನು ತಡಮಾಡಬಾರದೆಂದು ಎಚ್ಚರಿಸುತ್ತಿರುವ ಬುದ್ಧಿ, ಇದೆಲ್ಲವೂ ಸೇರಿ ಪತ್ರವೇ ಸರಿಯಾದ ಮಾರ್ಗ ಅಂತ ಅನ್ನಿಸಿದೆ ಕಣೆ. ಚೆನ್ನಾಗಿ ತಿಂದು ಬಂದಿರುವುದಕ್ಕೆ ಸಾಕ್ಷಿಯಾಗಿ ಇರುವ ಯಾವಾಗಲೂ ಲವಲವಿಕೆಯಿಂದ ಕೂಡಿದ ನಿನ್ನ ನಗುಮುಖ, ಲಾಡುವಿನಂತೆ ಕೆನ್ನೆ, ಲಾಡುವಿನ ಮೇಲಿನ ದ್ರಾಕ್ಷಿಯಂತೆ ಕೆನ್ನೆಯ ಮೇಲಿನ … Read more

ಪ್ರೇಮದ ಕಾಲ್ಪನಿಕ ಕೊಳದಲ್ಲಿ: ಮಸಿಯಣ್ಣ ಆರನಕಟ್ಟೆ

ಒಲವಿನ ಆತ್ಮದೊಡತಿಗೆ, ನನ್ನುಸಿರ ಅರ್ಪಣೆಯು, ನನ್ನಾತ್ಮದ ನುಡಿಗೆ ಅರ್ಥವೇನೊಂದಿಲ್ಲ; ಅದರಿಂದ ನೀನು ಅರ್ಥ ಮಾಡಿಕೊಳ್ಳುವುದುದೇನೊಂದು ಇಲ್ಲ. ಆದರೂ, ನೀನು ಕಿವಿಗೊಟ್ಟು ಕೇಳುವೆ, ಅರ್ಥವಾಗದಿದ್ದರೂ, ಅರ್ಥವಾದಂತೆ ಕಿರುನಗೆ ಬೀರುವೆ ಎಂಬುದೇ ನನ್ನ ಭಾವ. ಕಾರಣ, ನೀನು ನನ್ನದೇ ಮನಸ್ಸಿನ ಭಾಗ. ಕಾಲಾನುಗತಿಯಲ್ಲಿ ನಿನ್ನನ್ನೊಗಳುವೆ; ಕ್ಷಣಾರ್ದದಲ್ಲೇ ತೆಗಳುವೆ; ಪ್ರೇಮದ ಕಾವ್ಯಕಲ್ಪನೆಯಲ್ಲಿರಬಹುದು ಅಥವಾ ಮೋಹದ ಮಾಯೆಯಲ್ಲಿರಬಹುದು. ನಾನಾಗಲೇ ನಿನಗೇಳಿದಂತೆ, ಇಲ್ಲಿ ಅರ್ಥಮಾಡಿಕೊಳ್ಳಲು ಏನುಯಿಲ್ಲ ಎಂಬ ಮುಗ್ಧಭಾವ ಆವರಿಸಿದೆ. ಹಾಗಾಗಿ ನುಡಿಯುವೆ, ಒಮ್ಮೆ ಬೆತ್ತಲಾದ ಆಕಾಶವನ್ನು ನೋಡುತ್ತಾ ಕೂತಿದ್ದೆ, ಎರಡು ಗಿಳಿಗಳು ಹಾರಾಡುತ್ತಾ … Read more

ನನ್ನೀ ಆತ್ಮದಲ್ಲಿ ಬೆರೆತವರು ತಾವು: ಅಂಬಿಕಾ ಪ್ರಸಾದ್

ಶೃಂಗಬೀಡು ಸಂಸ್ಥಾನದ ಘನತೆವೆತ್ತ ದೊರೆಯಾದ ಶ್ರೀ ಶ್ರೀ ಶ್ರೀ ಹಯವದನ ನಾಯಕರಲ್ಲಿ ಒಂದು ಗೌಪ್ಯವಾದ ವಿಷಯವನ್ನು ಹಲವು ಬಾರಿ ಯೋಚಿಸಿ ತಿಳಿಸಲು ಇಚ್ಛಿಸುತ್ತಿದ್ದೇನೆ. ಮೊನ್ನೆ ಸೂರ್ಯಾಸ್ತದ ಸಮಯದಲ್ಲಿ ತಂದೆಯವರ ಬಳಿ ನನ್ನ ಹೃದಯದಲ್ಲಿ ನೀವು ಹಿತವಾಗಿ ಬಂದು, ಬಲವಾಗಿ ಅಪ್ಪಿ ಕುಳಿತಿರುವುದರ ಬಗ್ಗೆ ತಿಳಿಸಬೇಕೆಂದು ಬಹಳ ಆತಂಕದಿಂದ, ಸಂಕೋಚದಿಂದ ಒಂದೊಂದೇ ಮೆಟ್ಟಿಲುಗಳನ್ನು ಇಳಿದುಕೊಂಡು ಬರುತ್ತಿರಬೇಕಾದರೆ, ನನ್ನ ನೂಪುರದ ಘಲ್ ಘಲ್ ಎಂಬ ನಿನಾದವೇ ಭಯ ಬೀಳಿಸುವಂತೆ ನಿಶ್ಶಬ್ದವಾದ ರಂಗೇರಿದ ಅರಮನೆಯಲ್ಲೆಲ್ಲಾ ಮಾರ್ದನಿಸುತ್ತಿತ್ತು. ಅಂದು ತಾವು ನನಗೆ ಪ್ರೀತಿಯಿಂದ … Read more

ನೀ ಮೀಟಿದ ನೆನಪೆಲ್ಲವೂ ಎದೆ ತುಂಬಿ ಹಾಡಾಗಿದೆ: ಶ್ರೀಲಕ್ಷ್ಮೀ ಅದ್ಯಪಾಡಿ

ಒಲವೇ,ಎಷ್ಷೊಂದು ಇಷ್ಟ ಪಡುವೆ ಹೀಗೆ ಕರೆದರೇ. ಬಹಳ ದಿನಗಳಾದವಲ್ಲವೇ ನಿನಗೊಂದು ಪತ್ರ ಬರೆಯದೇ. ಒಲವಿನ ಅನುಭೂತಿಗಳನ್ನು ಅಕ್ಷರಗಳಲ್ಲಿ ಮೂಡಿಸುವುದೇ ಸೊಗಸು. ಇಂದೇಕೋ ಹೊತ್ತಲ್ಲದ ಹೊತ್ತಿನಲ್ಲಿ ನಿನ್ನ ನೆನಪು ಸತಾಯಿಸುತ್ತಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಾಡುವ ನೆನಪುಗಳಿಗೇನು ಗೊತ್ತು ನಿನ್ನ ನನ್ನ ನಡುವೆ ಹಗಲು ರಾತ್ರಿಯ ಅಂತರವಿದೆ ಎಂದು. ಕನಸುಗಳಿಗೇಕೋ ವಾಸ್ತವದ ಜೊತೆ ಕ್ರೂರ ಶತ್ರುತ್ವ. ಅರೆಬರೆ ನಿದ್ದೆಯ ಮಗ್ಗುಲಲ್ಲಿ ನಿನ್ನದೇ ನೆನಪುಗಳ ಸದ್ದಿಲ್ಲದ ರಾಜ್ಯಭಾರ. ಪ್ರೀತಿಯೆಂದರೆ. ಇದೇ ಏನೋ. ನಿತ್ಯ ಬೇಸರವಿಲ್ಲದ ಕಾಯುವಿಕೆ. ಪ್ರತಿದಿನ ಕಣ್ಣು ತೆರೆಯುತ್ತಲೇ ಯಾರು … Read more

ಆ ಗುಲಾಬಿ ಹೂವಿನಮ್ಯಾಲಿನ ಹನಿಯಂಥಾಕಿ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ

ಪ್ರೀತಿಯ ಸಖಿ ಚಿಮಣಾ… ಅಂದು ಸಂಜೆ ತಂಗಾಳಿಯೊಂದಿಗೆ ಮಾತಿಗಿಳಿದು ಮೆಲ್ಲನೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದಾಗ ದಾರಿಯಲಿ ಉದುರಿಬಿದ್ದ ಎರಡು ಹಳದಿ ಹೂಗಳನ್ನು ಎತ್ತಿ ನನ್ನ ಕೈಗಿಟ್ಟು ಬಿಡಿಸಿಕೊಂಡು ಬಿದ್ದಿವೆ ಬೀದಿಗೆ ಸಾಧ್ಯವಾದರೆ ಬದುಕಿಸಿಕೊ ಎಂದು ಹೇಳಿದೆಯಲ್ಲ ನಾನಾಗಾ ಸಖತ್ ಸೀರಿಯಸ್ಸಾಗಿ ನಿನ್ನನ್ನು ಪ್ರೀತಿಸಲು ಶುರುಮಾಡಿದ್ದು ನಿಜ. ಮುಂಜಾನೆ ಸೂರ್ಯನ ಕಿರಣಗಳು ಮುಗುಳುನಗುತ್ತ ಮನೆಯಂಗಳಕೆ ಬೆಳಕಿನ ರಂಗೋಲಿ ಇಡುತ್ತಿದ್ದಾಗ ನೀ ಹಾದು ಹೋಗುವ ದಾರಿ ತಿರುತಿರುಗಿ ನನ್ನೆ ದುರುಗುಟ್ಟುತ್ತಿತ್ತು. “ಹೇ ಹಿಂಗೆಲ್ಲ ಕಾದಂಬರಿಯೊಳಗ ಕವನ ಬರದಾಂಗ ಬರದ್ರ ಹೆಂಗ … Read more

ನೀ.. ಈ ಬಿಕ್ಕುಗಳ ಹಕ್ಕುದಾರ: ನಳಿನಿ. ಟಿ. ಭೀಮಪ್ಪ

ಪ್ರೀತಿಸುವ ದಿನ ಹತ್ತಿರ ಬರುತ್ತಿದೆ ಅಂತಾದರೂ ಗೊತ್ತಾ ನಿನಗೆ?…ನನ್ನ ಕರ್ಮ, ಅದನ್ನೂ ನಾನೇ ನೆನಪು ಮಾಡಬೇಕು. ಅನುಕ್ಷಣ, ಅನುದಿನ ನನ್ನನ್ನೇ ಆರಾಧಿಸುತ್ತ, ಪ್ರೀತಿಸುವ ನಿನಗೆ ವರ್ಷಕ್ಕೊಮ್ಮೆ ಆಚರಿಸುವ ಈ ಪ್ರೀತಿಯ ದಿನದ ಬಗ್ಗೆ ನಂಬಿಕೆ ಇಲ್ಲವೆಂದು ಗೊತ್ತು. ಆದರೆ ನನಗೆ ಆ ದಿನ ತುಂಬಾ ಅಮೂಲ್ಯವಾದುದು ಗೊತ್ತಾ? ಪ್ರೀತಿ ಎನ್ನುವ ಪದವೊಂದು ಜೀವನದಲ್ಲಿ ನಿನ್ನ ಮೂಲಕ ಅಂಕುರಿಸಿದ ಘಳಿಗೆಯೊಂದು ಚಿರಸ್ಮರಣೀಯವಾಗಿ, ಚಿರಸ್ಥಾಯಿಯಾಗಿ ಉಳಿಯಬೇಕೆಂಬ ಅಭಿಲಾಷೆ ನನ್ನದು. ಅಂದು ನೀ ಕೊಡುವ ಕೆಂಪು ಗುಲಾಬಿಯ ಕಾಣಿಕೆಯನ್ನು, ಕೆಂಪೇರಿದ ಮೊಗದೊಡನೆ … Read more

ಒಲವಿಗೊಂದು ಓಲೆ: ಪೂಜಾ.ಎಲ್.ಕೆ

ಹೇ ಗೆಳೆಯ ಅದೇನ್ ನಿನ್ನ ಕಣ್ಣ ಹೊಳಪು, ಅದೇನ್ ನಿನ್ನ ಕಾಳಜಿ, ಅದೇನ್ ನಿನ್ನ ಭರವಸೆ, ಅದೇನ್ ನಿನ್ ನಂಬ್ಕೆ ಇದೆಲ್ಲದ್ರ ಅರ್ಥ ಖಂಡಿತವಾಗಿಯೂ ಒಲವಲ್ಲವೇ? ಇನಿಯ. ಇಣುಕಿ ಇಣುಕಿ ಹೃದಯದ ಕಿಟಕಿ ತೆಗೆದೆಬಿಟ್ಟೆ ಕೊನೆಗೂ ನೀನು ಸುಳಿವಿಲ್ಲದ ತಂಗಾಳಿಯ ಹಾಗೆ , ಕತ್ಲೇನೆ ಕಂಡಿರದ ದೀಪದ ಹಾಗೆ,ಹೇ ಜಾದುಗಾರ ಅದೇನ್ ಮೋಡಿ ಮಾಡ್ಬಿಟ್ಟೆ ಈ ಬಡಪಾಯಿ ಹೃದಯಕ್ಕೆ, ಪ್ರತಿ ಬಡಿತಕ್ಕೂ ನಿನ್ ಹೆಸರನ್ನೇ ಮಿಡಿಯುತ್ತೆ. ಅಷ್ಟೇ ಅಲ್ಲ ಈ ಹಾಳಾದ್ ಮನಸ್ ಕೂಡ ನಿನ್ನನ್ನೇ ಸದಾ … Read more

ನಿನ್ನವನಲ್ಲದ ಪಾಪಿ ಪ್ರೇಮಿ: ಸಾವಿತ್ರಿ ಹಟ್ಟಿ

ಪ್ರೀತಿಯ ಇವ್ಳೇ, ಕಾಲ ಅನ್ನೂದೇನಾರ ನಮ್ ಕೈಯ್ಯಾಗಿದ್ದಿದ್ರ ಎಳ್ಕೊಂಬಂದು ನಮ್ಮನಿ ಪಡಸಾಲಿ ನಡುಗಂಬಕ್ಕ ಕಟ್ಟಿ ಹಾಕ್ತಿದ್ದೆ ನೋಡು ಹುಡುಗಿ. ಆಗ ಬಹುಶಃ ನಾನು ನೀನು ಸಣ್ಣ ಹುಡುಗ ಹುಡುಗಿ ಆಗೇ ಇರತಿದ್ವಿ. ಶ್ರಾವಣ ಮಾಸ, ಪಂಚಮಿ ದಿನಗೊಳಂದ್ರ ನಿನಗ ಪ್ರಾಣ ಅಲಾ! ನಿನ್ನ ಉದ್ದನ ಜಡಿಗಿ ಬಾಬಿ ರಿಬ್ಬನ್ ಗೊಂಡೆ ಹೆಣಕೊಂಡು, ಚಿತ್ತಾರದ ನಿರಿಗಿ ಲಂಗ ಉಟ್ಕೊಂಡು, ಗಗ್ರಿ ತೋಳಿನ ಪೋಲ್ಕಾ ಹಾಕೊಂಡು, ಆಬಾಲಿ, ಮಲ್ಲಿಗಿ ಕ್ಯಾದಗಿ ಹೂವು ಮುಡ್ಕೊಂಡು ಜೋಕಾಲಿ ಆಡುವಾಗ ನನಗ ಯಾಡ್ ಕಣ್ಣು … Read more

ನೀ ಎದುರಿಗೆ ಬಂದ್ರೆ ಏನೋ ಓಂಥರಾ ಖುಷಿ ಆಕ್ಕೇತಿ!: ಕಾವ್ಯ. ಎನ್

ಲೋ ಹುಡ್ಗ,ಪ್ರೀತಿ ಪ್ರೇಮ ಎಲ್ಲ ನನ್ನಂತ ಹಳ್ಳಿ ಹುಡ್ಗಿಗೆ ಸರಿ ಬರೋದಲ್ಲ, ನನ್ನ ಕೆಲಸ್ ಏನಂದ್ರ ಓದೋದು ಅಷ್ಟೇ ಅಂತಾ ನಿರ್ಧಾರ ಮಾಡಿದ್ ನನ್ಗೆ, ಆ ವಿಸ್ಯಾನೇ ಮರೆಯಂಗೇ ಮಾಡಿದವ ನೀನು? ಅದ್ಯಾಗೆ ನಾನು ನಿನ್ನ ಪ್ರೀತಿಲಿ ಬಿದ್ನೊ ಒಂದು ತಿಳಿತಿಲ್ಲ. ವತ್ತು ಹುಟ್ಟಾದಗ್ನಿಂದ, ವತ್ತು ಬೀಳಾವರೆಗೂ ನಿಂದೆ ಜಪ. ನೀ ಎದುರಿಗೆ ಬಂದ್ರ ಏನೋ ಓಂಥರಾ ಕುಸಿ. ಒಂದು ನಿಮಿಷಕ್ಕೆ 72 ಸಾರಿ ಬಡ್ಕೊಳೋ ಹೃದಯ ನಿನ್ನ ಮೊಗ ಕಂಡಿದ್ ತಕ್ಷಣ ನೂರ್ಸಾರಿ ಬಡಿತೈತೆ. ಆಗ … Read more

ನೀ ಬರುವ ದಾರಿಯಲಿ ಕಂಗಳ ಹಾಸಿ: ಜಯಶ್ರೀ ಭಂಡಾರಿ.

ನಮ್ಮ ಭೇಟ್ಟಿ ಎಷ್ಟು ಅನಿರೀಕ್ಷಿತವಾಗಿ ಆಯಿತು. ಆದರೆ ಪ್ರೀತಿ ತುಂಬಾ ವಿಚಿತ್ರ. ನಿನಗೆ ನೆನಪಿದೆಯಾ ನನ್ನ ಸುಂದರ ಫೋಟೋ ಅದೆಲ್ಲಿ ನೋಡಿದೆಯೋ… ನೀ. ನಿನ್ನಿಂದ ನನ್ನ ಮೇಲಗೆ ಮೆಸ್ಸೇಜ ಬಂತು. ಪ್ಲೀಜ ಮೊಬೈಲ ನಂಬರ ಕಳಿಸಿ ನಿಮಗೆ ಅರ್ಜೆಂಟ ಮಾತಾಡೋದು ಇದೆ ಅಂತ. ನೀನ್ಯಾರೋ ತಿಳಿಯದ ನಾನು ನಿರ್ಲಕ್ಷ್ಯ ಮಾಡಿದೆ. ಮತ್ತೆ ಮತ್ತೆ ನೀ ರಿಪೀಟ ಮಾಡಿದೆ. ಕೂತೂಹಲದಿಂದ ಅಂದು ನನ್ನ ನಂಬರ ಕಳಿಸಿದೆ. ನೀ ಸಣ್ಣಗೆ ನನ್ನೊಳಗೆ ನುಗ್ಗಿದೆ. ಮನಸಲಿ ನೆಲೆ ನಿಂತೆ. ಜೊತೆಯಿಲ್ಲದ ಒಂಟಿ … Read more

ಚೈನ್ ಲಿಂಕ್ ಚತುರರು: ವಿನಾಯಕ ಅರಳಸುರಳಿ

ನೀವು ಬೆಂಗಳೂರಿಗೆ ಕೆಲವೇ ದಿನಗಳ ಕೆಳಗೆ ಹೊಸದಾಗಿ ಬಂದು ಸೇರಿಕೊಂಡಿದ್ದೀರ. ಈಗಷ್ಟೇ ಒಂದು ಕೆಲಸ ಸಿಕ್ಕಿದೆ. ಅಲ್ಲಿ ಯಾವುದೋ ರೋಡಿನ ಎಷ್ಟನೆಯದೋ ಕ್ರಾಸಿನಲ್ಲಿರುವ ನಿಮ್ಮ ರೂಮಿನಿಂದ ಆಫೀಸಿಗೆ ದಿನಾ ಬಸ್ಸಿನಲ್ಲಿ ಓಡಾಡುತ್ತಿದ್ದೀರ‌. ಭಾರತದ ಜ್ವಲಂತ ಸಮಸ್ಯೆಯಾದ ಜನಸಂಖ್ಯಾ ಸ್ಪೋಟದ ನೇರ ಪರಿಣಾಮದಿಂದ ಹಿಗ್ಗಮಗ್ಗಾ ರಶ್ ಆಗಿರುವ ಬಸ್ಸಿನಲ್ಲಿ ಸೊಂಟ ಬಳುಕಿದ ತೆಂಗಿನ ಮರದಂತೆ ನಿಂತು ದಿನವೂ ಪ್ರಯಾಣಿಸುತ್ತಿದ್ದ ನಿಮಗೆ ಈ ದಿನ ಇದ್ದಕ್ಕಿದ್ದಂತೆ ಸೀಟೊಂದು ಸಿಕ್ಕಿದೆ. ಬಸ್ಸಿನಲ್ಲಿ ನಿಂತಿರುವ ಉಳಿದ ಅಸಂಖ್ಯಾತ ಪ್ರಯಾಣಿಕರ ನಡುವೆ ನಿಮಗೆ ಮಾತ್ರ … Read more

ಸುಶೀಲೆ: ವರದೇಂದ್ರ ಕೆ.

ಜಮೀನ್ದಾರರ ಒಬ್ಬನೇ ಮಗ, ಕಣ್ಣಲ್ಲಿ ಸನ್ನೆ ಮಾಡಿದರೆ ಸಾಕು ತಟಕ್ಕನೆ ಕೆಲಸವಾಗಿಬಿಡುತ್ತದೆ. ಮಾತು ಆಡಿದರಂತೂ ಊರಿನ ಯಾವ ಧನಿಕನೂ ಎದುರಾಡುವಂತಿಲ್ಲ. ಅಷ್ಟೇ ಸಹಜ ನಡೆಯುಳ್ಳ ಪ್ರಾಮಾಣಿಕ ಜೀವ. ಗಾಂಭೀರ್ಯತೆಯೊಂದಿಗೆ ಕನಿಕರವೂ ತುಂಬಿಕೊಂಡ ಮುಖ. ಚಿರ ಯುವಕ, ಓದಿನಲ್ಲೂ ಚತುರನಾಗಿ ವೈದ್ಯಲೋಕಕ್ಕೆ ಕಾಲಿಟ್ಟ ಉತ್ತಮ ಕೈಗುಣವಿದೆ ಎಂಬ ಪ್ರಶಂಸೆಗೆ ಪಾತ್ರನಾದ ಸ್ಫುರದ್ರೂಪಿ ತರುಣಸುರೇಶ್ ಗೌಡನಿಗೆ ತಮ್ಮ ಮಗಳನ್ನೇ ಧಾರೆಯೆರೆಯಲು ದುಂಬಾಲುಬಿದ್ದ ಅದೆಷ್ಟೋ ಸಂಬಂಧಿಕರು ಹಿರಿಗೌಡರನ್ನು ಕೇಳಿ ಕೇಳಿ ಬಂದ ದಾರಿಗೆ ಸುಂಕವಿಲ್ಲವೆಂದು ಸೋತಮುಖದೊಂದಿಗೆ ಮರಳಿದ್ದಾರೆ. ಹಿರಿ ಧರ್ಮಗೌಡರು ತನ್ನ … Read more

ಪಂಜು ಪ್ರೇಮ ಪತ್ರ ಸ್ಪರ್ಧೆ 2021

ಪಂಜು ಅಂತರ್ಜಾಲ ವಾರಪತ್ರಿಕೆ ವತಿಯಿಂದ 2021 ರ ಪ್ರೇಮ ಪತ್ರ ಸ್ಪರ್ಧೆಗೆ ನಿಮ್ಮ ಪ್ರೇಮ ಪತ್ರಗಳನ್ನು ಆಹ್ವಾನಿಸಲಾಗಿದೆ. ನಿಯಮಗಳು: ಪ್ರೇಮ ಪತ್ರ ನಿಮ್ಮ ಸ್ವಂತ ಬರಹವಾಗಿರಬೇಕು ಕನಿಷ್ಟ 500 ಪದಗಳ ಬರಹವಾಗಿರಬೇಕು ಫೇಸ್ ಬುಕ್ ಮತ್ತು‌ ಬ್ಲಾಗ್ ಸೇರಿದಂತೆ ಬೇರೆಲ್ಲೂ ಪ್ರಕಟವಾಗಿರಬಾರದು. ನಿಮ್ಮ ಬರಹವನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಪ್ರೇಮ ಪತ್ರ ಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ನಿಮ್ಮ ಕಿರು ಪರಿಚಯ … Read more

ಪಂಜು ಕಾವ್ಯಧಾರೆ

ಮೊದಲ ಮುಟ್ಟು ಅಂಗಳದಲ್ಲಿ ಮೂಡಿದಕೆಂಪು ರಂಗೋಲಿಭಯ ಹುಟ್ಟಿಸುತ್ತದೆಶಾಲಾ ಶೌಚಾಲಯದಗೋಡೆ ಮೇಲೆಲ್ಲಾಗಾಭರಿಯ ಗೀಟುಗಳು ಎದೆಯ ಹೊಸ್ತಿಲಲ್ಲಿಅಡ್ಡಲಾಗಿ ಬಿದ್ದಭಯದ ಪೆಡಂಭೂತತಲೆಯ ಹಗ್ಗದ ಮೇಲೆಹಿಂಜರಿಕೆಯ ದೊಂಬರಾಟ ಕಿಬ್ಬೊಟ್ಟೆಯಲ್ಲೊಂದು ನೋವುಗಂಟು ಕಟ್ಟಿಕೊಂಡರೆಮನದೊಳಗೆ ಮುಜುಗರದಬ್ರಹ್ಮಗಂಟುಗಿಡಕ್ಕೆ ಕಚ್ಚಿದ್ದ ಮೊಗ್ಗುಭಯದಲ್ಲೇ ಅರಳುತ್ತದೆ ಕೇರಿ ಕೇರಿಯಲು ಸದ್ದುಮಾಡಿದ್ದ ಗೆಜ್ಜೆಯದುಲಜ್ಜೆ ಹಿಡಿದುಕೋಣೆ ಸೇರುತ್ತದೆರೆಂಬೆ ಕೊಂಬೆ ಹತ್ತಿದ್ದಕಾಲ್ಗಳಿಗೆ ಸರಪಳಿಯಸತ್ಕಾರ ಪ್ರಕೃತಿಯ ಕೊಡುಗೆಗೆನೂರೆಂಟು ಗೊಡವೆದೇವತೆಯನ್ನೂ ಬಿಡಲಿಲ್ಲಮಡಿವಂತಿಕೆ ಸರಿಯೇ ಮಡಿಲ ಕೂಸ ಸೆರಗಲ್ಲಿಬಚ್ಚಿಡುವ ಆಟಗಂಡು ನೆರಳು ಸೋಕದಂತೆಬಿಗಿ ಬಂದೂಬಸ್ತ್ಅವಳನ್ನು ಅವಳೊಳಗೇಬಚ್ಚಿಡುವ ಕಣ್ಣಾಮುಚ್ಚಾಲೆ ಆಟ ಏರಿದವರ್ಯಾರೋಈ ಕಟ್ಟುಪಾಡುಸ್ವಾಭಾವಿಕ ಕ್ರಿಯೆಗೆಸಂಕೋಚದ ಸೊಂಟದ ಪಟ್ಟಿಕಟ್ಟಿ ನಡುರಸ್ತೆಗೆ ಬಿಡುವರೀತಿ ನೋಡು … Read more

ರಾಷ್ಟ್ರೀಯ ‘ ಹುತಾತ್ಮರ ದಿನ ‘: ಡಾ.ಅವರೆಕಾಡು ವಿಜಯ ಕುಮಾರ್

ಜನವರಿ 30 ಈ ವಿಶೇಷ ದಿನವನ್ನು ದೇಶದ ಸ್ವಾತಂತ್ರ್ಯಕ್ಕಾಗಿ, ದೇಶದ ಭವಿಷ್ಯಕ್ಕಾಗಿ, ದೇಶದ ಬೆಳವಣಿಗೆಗಾಗಿ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು, ಹೋರಾಡಿ ಮಡಿದ ರಾಷ್ಟ್ರೀಯ ವೀರ ನಾಯಕರುಗಳನ್ನು ನೆನೆಯುವ ದಿನ. ಭಾರತವು ಸೇರಿದಂತೆ ಜಗತ್ತಿನ 15ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ರಾಷ್ಟ್ರೀಯ ದಿನವನ್ನು’ ಹುತಾತ್ಮರ ದಿನ’ ಅಥವಾ ‘ಸರ್ವೋದಯ ದಿನ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ.ಭಾರತ ಸರ್ಕಾರದ ಆದೇಶದನ್ವಯ ದೇಶದಾದ್ಯಂತ ದೇಶದ ರಕ್ಷಣೆಯಲ್ಲಿ ಪ್ರಾಣತೆತ್ತ ಹುತಾತ್ಮರನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಾಗಿ ಪ್ರಾಣತೆತ್ತವರ ತ್ಯಾಗಕ್ಕೆ ಎಂದೆಂದಿಗೂ … Read more