ಆ ಹಸಿದ ಕಣ್ಣುಗಳಲ್ಲಿ ಉರಿದ ಬೆಂಕಿ: ರೇಷ್ಮಾ ಎ.ಎಸ್.
ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ ಕುಳಿತಿದ್ದೆ. ಆಗೀಗ ಅತ್ತಿತ್ತ ದೃಷ್ಟಿ ಹರಿಯುತ್ತಿತ್ತು. ಒಂದಷ್ಟು ದೂರದಲ್ಲಿ ಒಂದು ಅಲೆಮಾರಿ ಸಂಸಾರ. ಮೈದಾನದ ಒಂದು ಪಕ್ಕಕ್ಕೆ ಇದ್ದ ರಂಗಮಂಟಪವೇ ಅವರ ತತ್ಕಾಲದ ಬಿಡದಿ. ಎಣ್ಣೆ ಕಾಣದ ಕೆದರಿದ ಕೂದಲ, ಪಳಪಳನೆ ಮಿನುಗುವ ಕಂಗಳ, ಹರಕಲು ಬಟ್ಟೆಯಲ್ಲೂ ಗುಂಡುಗುಂಡಾಗಿ ಕಾಣುವ ಮೂವರು ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ … Read more