(ಇಲ್ಲಿಯವರೆಗೆ) ಸುಧಾ ಎಚ್ಚರವಾಗಿದುದ್ದನ್ನು ನೋಡಿದ ರಾಜೇಶ ಅವಳ ಹತ್ತಿರ ಒಂದು ಮಂಚದ ಬದಿಗೆ ಕುರ್ಚಿಯಲ್ಲಿ ಕುಳಿತಿದ್ದ ಕಾವೇರಮ್ಮ ಅವನಿಗೆ ಜಾಗ ಬಿಟ್ಟು ಎದ್ದಳು. ಆಗ ರಾಜೇಶ ಆ ಕುರ್ಚಿಯಲ್ಲಿ ಕೂಡುತ್ತ ಸುಧಾ ಎಂದು ಅವಳ ಕೈಯನ್ನು ಹಿಡಿದ ಆಗ ಸುಧಾಳ ಕಣ್ಣಲ್ಲಿ ನೀರು ಹರಿಯಲಾರಂಭಿಸಿತು. ದಯವಿಟ್ಟು ನನ್ನ ಕ್ಷಮಿಸು ಸುಧಾ. ನಾನು ನನ್ನ ಕೆಲಸದ ಒತ್ತಡದಲ್ಲಿ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುತ್ತಾ ಅವಳ ಕಣ್ಣೀರು ಒರೆಸಿದ. ಇನ್ನು ಮೇಲೆ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ನನ್ನನ್ನು ನಂಬು ಎಂದ. […]
Tag: ನಾಗರತ್ನಾ ಗೋವಿಂದನ್ನವರ
ಸ್ನೇಹ ಭಾಂದವ್ಯ (ಭಾಗ 8): ನಾಗರತ್ನಾ ಗೋವಿಂದನ್ನವರ
ಇಲ್ಲಿಯವರೆಗೆ ನಿನ್ನ ಹಾಗೆ ಅವಳು ಒಂದು ಮಗುವಿನ ತಾಯಿಯಾಗುವವಳು. ಅಲ್ವೆನಮ್ಮ ಅವಳಿಗೂ ತನ್ನ ಮಗುವಿನ ಬಗ್ಗೆ ನೂರಾರು ಆಸೆ ಕನಸುಗಳು ಇರುತ್ತದೆಯಲ್ಲಮ್ಮ, ಆದರೆ ನೀನು ಅವಳಿಗೆ ತಾಯಿಯಾಗಲಿಲ್ಲ. ಅವಳ ಭಾವನೆಗಳನ್ನು ಅರ್ಥಮಾಡಿಕೊಳ್ಳಲಿಲ್ಲ ಎಂದು ದುಃಖಿಸುತ್ತಾ ಹೊರಗೋಡಿ ಬಂದ, ರಮಾನಂದರು ವಾಕಿಂಗ್ ಮುಗಿಸಿ ಬರುತ್ತಿದ್ದವರು ಮಗನನ್ನು ನೋಡಿ ಏನಾಯಿತು ಯಾಕೋ ಹೀಗಿದ್ದೀಯಾ ಎಂದು ಕೇಳಿದರು. ರಾಜೇಶ ನಡೆದುದೆಲ್ಲವನ್ನು ವಿವರಿಸಿದ. ಅವನಿಗೆ ಹೆಂಡತಿಯ ಮೇಲೆ ವಿಪರೀತ ಕೋಪ ಬಂದಿತು. ನೀನು ಆಸ್ಪತ್ರೆಗೆ ನಡಿ ರಾಜೇಶ ತಡಮಾಡಬೇಡ. ನಾನು ಆಮೇಲೆ ಬರುತ್ತೇನೆ […]
ಸ್ನೇಹ ಭಾಂದವ್ಯ (ಭಾಗ 6): ನಾಗರತ್ನಾ ಗೋವಿಂದನ್ನವರ
ಇಲ್ಲಿಯವರೆಗೆ ಇತ್ತ ರೇಖಾಳ ಮನೆಯಲ್ಲಿ ರಾಧಮ್ಮ ನೋಡ್ರಿ ನಾವು ನಮ್ಮ ರೇಖಾಳಿಗೆ ಮದುವೆ ಮಾಡಬೇಕೂರಿ ಎಂದು ಗಂಡನಿಗೆ ಹೇಳಿದಳು. ಅದಕ್ಕೆ ಶಿವಾನಂದ ಮಾಡೋಣ ಬಿಡು ಈಗ ಅವಳಿಗೇನು ವಯಸ್ಸಾಗಿರೋದು ಎಂದು ಮಾತು ತೇಲಿಸಿದನು. ರೇಖಾಳಿಗೆ ವಾರ್ಷಿಕ ಪರೀಕ್ಷೆಯು ಹತ್ತಿರ ಬಂದಿದ್ದರಿಂದ ಓದುವುದು ಹೆಚ್ಚಾಗಿ ಊರಿಗೆ ಬರಲು ಸಾಧ್ಯವಾಗಲಿಲ್ಲ. ಅವಳು ಸುಧಾಳಿಗೆ ಪರೀಕ್ಷೆಗೆ ಹಾಜರಾಗಲು ಪತ್ರ ಬರೆದಳು. ಅದನ್ನೊದಿದ ಸುಧಾಳಿಗೆ ಗೆಳತಿಗೆ ತನ್ನ ಬಗ್ಗೆ ಇರುವ ಕಾಳಜಿಯನ್ನು ಕಂಡು ರೇಖಾಳ ಬಗ್ಗೆ ಅಭಿಮಾನ ಮೂಡಿತು. ಒಂದು ದಿನ ಅವಳು […]