ಕಿರಿ ಕಿರಿ ಕೆಟ್ಟು: ಪ್ರಶಸ್ತಿ ಪಿ.

ಓದುಗ ಮಿತ್ರರಿಗೆಲ್ಲಾ ಯುಗಾದಿ ಶುಭಾಶಯಗಳು ಎನ್ನುತ್ತಾ ಮನ್ಮಥನಾಮ ಸಂವತ್ಸರದಲ್ಲಿ ಹೊಸದೇನು ಬರೆಯೋದು ಅಂತ ಯೋಚಸ್ತಿರುವಾಗ್ಲೇ ಹೋ ಅಂತ ಪಕ್ಕದ ಪೀಜಿ ಹುಡುಗ್ರೆಲ್ಲಾ ಕೂಗಿದ ಸದ್ದು. ಓ ಇನ್ನೊಂದು ವಿಕೆಟ್ ಬಿತ್ತು ಅನ್ಸತ್ತೆ ಅಂತ ಹಾಸಿಗೆಯಿಂದ ತಟ್ಟನೆದ್ದ ರೂಂಮೇಟು ಟೀವಿ ರಿಮೇಟ್ ಹುಡುಕಹತ್ತಿದ್ದ. ನಿನ್ನೆಯಷ್ಟೇ ಒರಿಜಿನಲ್ ಆಧಾರ್ ಕಾರ್ಡ್ ಹೊಂದಿರುವವರು ಮತ್ತು ಡೂಪ್ಲಿಕೇಟ್ ಆಧಾರ್ ಕಾರ್ಡ್ ಹೊಂದಿರೋರ ನಡುವಿನ ಕದನ ಅಂತಲೇ ಬಿಂಬಿತವಾಗಿದ್ದ ಚೆಂಡುದಾಂಡಿನಾಟದಲ್ಲಿ ಮುಳುಗಿದ್ದ ನನಗೆ ಇವತ್ತು ಮತ್ತೊಂದು ಪಂದ್ಯವಿದೆಯೆನ್ನೋದೇ ಮರೆತು ಹೋಗಿತ್ತು. ಟೀವಿ ಹಾಕುತ್ತಲೇ ಮತ್ತೆ … Read more

ಕೆಲಸಕೆ ಚಕ್ಕರ್… ಊಟಕೆ ಹಾಜರ್!: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ… ನಿಶಾ ಳ ಸಂಗಡ ಹೋಗುತ್ತಿರುವಂತೆ, ಆಫೀಸಿನಲ್ಲಿ ಎಲ್ಲರ ಕಣ್ಣುಗಳು ಇವರನ್ನೇ ನೋಡುತ್ತಿದ್ದರೆ ಸುಜಯ್ ಗೆ ಒಳಗೊಳಗೇ  ಖುಷಿ. ಅದರೂ ಅದು ಹೇಗೋ ಅವನ ಮುಖದ ಮೇಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅದನ್ನು ಗಮನಿಸಿದ ಅವಳ ಮುಖದಲ್ಲೊಂದು ತುಂಟ ಮುಗುಳ್ನಗು ಸುಳಿಯಿತು. ಇಬ್ಬರೂ ರಿಸೆಪ್ಶನ್ ದಾಟಿಕೊಂಡು ಹೋಗುತ್ತಿದ್ದಂತೆ, “ಸುಜಯ್… ಹೇ ಸುಜಯ್…” ಅಂತ ಕೂಗುತ್ತಿದ್ದ ಕೋಮಲ ದನಿಯೊಂದು ಇವರಿಬ್ಬರಿಗೂ ನಿಲ್ಲುವಂತೆ ಮಾಡಿತು. ಯಾರು ಅಂತ ಹಿಂತಿರುಗಿ ನೋಡಿದರೆ ಆ ಕೋಮಲ ದನಿ ಬೇರೆ ಯಾರದೂ ಅಲ್ಲ, ಪೃಥ್ವಿ ಅನ್ನುವ … Read more

ಮೂವರ ಕವನಗಳು: ನವೀನ್ ಮಧುಗಿರಿ, ಶ್ರೀಮಂತ್ ಎಮ್. ಯನಗುಂಟಿ, ಯದುನಂದನ್ ಗೌಡ ಎ.ಟಿ

ನಾವು ಪ್ರೀತಿಯೆಂದರೆ ನಂಬಿಕೆ ನೀನು ನನ್ನೆಷ್ಟು ನಂಬುವೆ? ನಿನ್ನಷ್ಟೇ ನಾನೇಕೆ ನಿನಗಿಷ್ಟವಾದೆ? ಗೊತ್ತಿಲ್ಲ. ಪ್ಲೀಸ್ ನಿಜ ಹೇಳು ಕಾರಣ ಹುಡುಕುವುದು ಕಷ್ಟ ನಾನು ನಿನ್ನೆಷ್ಟು ಪ್ರೀತಿಸಲಿ? ಅದು ನಿನ್ನಿಷ್ಟ ನಿಲ್ಲು ಏನು? ಪದೇ ಪದೇ ನೀನು ನಾನು ಅನ್ನುವುದು ನಿಲ್ಲಿಸು ಮತ್ತೇನನ್ನಲಿ? ನಾವು ಅಂತನ್ನುವುದು ಒಳ್ಳೆಯದು ಯಾಕೆ? ನೀನೆಂದರೆ ನಾನು ನಾನೆಂದರೆ ನೀನು ~•~ ಬೆವರು ನಮ್ಮಪ್ಪ ಕವಿತೆಗಳ ಬರೆಯಲಿಲ್ಲ ಭತ್ತ, ರಾಗಿ, ಜೋಳ ಬೆಳೆದ ಅಕ್ಷರಗಳ ಸ್ಖಲಿಸಿಕೊಂಡ ಕವಿಗೆ ಹಸಿವಾಯ್ತು ಅಪ್ಪನ ಬೆವರು ತಿಂದ ~•~ … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಅಂಟಿಕೊಳ್ಳದಿರುವಿಕೆ (Non-attachment) ಐಹೈ ದೇವಾಲಯದ ಅಧಿಪತಿ ಕಿಟಾನೋ ಗೆಂಪೊ ೧೯೩೩ ರಲ್ಲಿ ವಿಧಿವಶನಾದಾಗ ೯೨ ವರ್ಷ ವಯಸ್ಸು ಆಗಿತ್ತು. ಯಾವುದಕ್ಕೂ ಅಂಟಿಕೊಳ್ಳದಿರಲು ತನ್ನ ಜೀವನದುದ್ದಕ್ಕೂ ಆತ ಪ್ರಯತ್ನಿಸಿದ್ದ. ೨೦ ವರ್ಷ ವಯಸ್ಸಿನ ಅಲೆಮಾರಿ ಬೈರಾಗಿಯಾಗಿದ್ದಾಗ ತಂಬಾಕಿನ ಧೂಮಪಾನ ಮಾಡುತ್ತಿದ್ದ ಯಾತ್ರಿಕನೊಬ್ಬನನ್ನು ಸಂಧಿಸಿದ್ದ. ಒಂದು ಪರ್ವತಮಾರ್ಗದಲ್ಲಿ ಅವರೀರ್ವರೂ ಜೊತೆಯಾಗಿ ಕೆಳಕ್ಕೆ ಇಳಿಯುತ್ತಿದ್ದಾಗ ವಿಶ್ರಾಂತಿ ತೆಗೆದುಕೊಳ್ಳಲೋಸುಗ ಒಂದು ಮರದ ಕೆಳಗೆ ಕುಳಿತರು. ಯಾತ್ರಿಕ ಧೂಮಪಾನ ಮಢಲೋಸುಗ ತಂಬಾಕನ್ನು ಕಿಟಾನೋಗೆ ನೀಡಿದ. ಆ ಸಮಯದಲ್ಲಿ ತುಂಬಾ ಹಸಿದಿದ್ದ ಕಿಟಾನೋ ಅದನ್ನು … Read more

ಹೆಗ್ಣಾಮೆಷಿನ್!: ಎಸ್.ಜಿ.ಶಿವಶಂಕರ್

    ವಿಚಿತ್ರವೆನ್ನಿಸಬಹುದು! ವಾಷಿಂಗ್ ಮೆಷಿನ್, ಸ್ಯೂಯಿಂಗ್ ಮೆಷಿನ್, ಗ್ರೈಡಿಂಗ್ ಮೆಷಿನ್ ಎಲ್ಲಾ ಕೇಳಿರ್ತೀರಿ. ಆದರೆ ’ಹೆಗ್ಣಾಮೆಷಿನ್’ ? ಅಂದ್ರೆ…ಇದೆಂತಾ ಹೆಸರು..? ಇದೆಂತಾ ಮೆಷಿನ್ನು? ಇದು ಹೇಗೆ ಕೆಲಸ ಮಾಡುತ್ತೆ? ಏನು ಕೆಲಸ ಮಾಡುತ್ತೆ?  ಹೆಗ್ಗಣ ಹಿಡಿಯುವ  ಇಲ್ಲಾ ಹೆಗ್ಗಣ ಸಾಯಿಸುವ ಮೆಷಿನ್ ಇರಬಹುದೆ..? ಇಲ್ಲಾ…ಈ ಲೇಖಕ ಇಲಿಬೋನನ್ನೇ ಹೆಗ್ಣಾಮೆಷಿನ್ ಎಂದು ಹೇಳಿ ಲೇವಡಿ ಮಾಡುತ್ತಿರಬಹುದೆ..? ಈ ಪ್ರಶ್ನೆಗಳು ಈಗಾಗಲೇ ನಿಮ್ಮ ತಲೆಯಲ್ಲಿ ತುಂಬಿರಲು ಸಾಧ್ಯ!     ‘ದೊಡ್ಡಪ್ಪ, ನಾವು ಹೆಗ್ಣಾಮೆಷಿನ್ನಿಗೆ ಯಾವಾಗ ಹೋಗೋದು..?’     ‘ಮಿಲಿ’ ಎಂಬ … Read more

ವಿಶ್ವ ಕವಿತಾ ದಿನದ ವಿಶೇಷ ಕಾವ್ಯಧಾರೆ

ಕನ್ನಡಿಯಲ್ಲಿ ಕಂಡದ್ದು ಕಾಲ ತದೇಕ ಚಿತ್ತದಿ ಕನ್ನಡಿಯನ್ನೆ ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ ಕಂಡೊಂದು ನೆರಿಗೆಗೆ ಪಿಚ್ಚೆನಿಸಿತು ಬುನಾದಿ!  ನಾನು ಸುಳ್ಳೋ ಕನ್ನಡಿ ಸುಳ್ಳೋ ಕಾಯದ ಕಾಲಕ್ಕೆ ಒಡಂಬಡಿಕೆ ಪತ್ರ ಬಿಂಬಿಸುವೆ … ಅರ್ಧ ತೆರೆದ ಬಾಗಿಲ ಸಂಧಿಯಲಿ ಇಣುಕಿ ನಕ್ಕ ಬಾಲ್ಯ ಈಗ ತಾಳೆ ಹಾಕಿ ಗುಣಿಸಿದರೂ, ಗುನುಗಿದರೂ ಉತ್ತರವಿಲ್ಲದ ಲೆಕ್ಕಾಚಾರಕ್ಕೆ ನನ್ನ ನೋಡಿ ನಗುತ್ತದೆ ಕಂದ ಸವೆಸಿದ ಮಜಲುಗಳ ಮುಖದಲಿ ಬಿದ್ದರೆ ಮಾತ್ರನೇ ಚೂರಾಗುವ ಕನ್ನಡಿಯಲಿ ಕಾಣುವ ನೂರಾರು ಮುಖಗಳು! ಕಂಡ ಒಂದೇ ಒಂದು … Read more

ಕಾ೦ಗರುಗಳ ನಾಡಲ್ಲೊ೦ದು ಕಾ೦ಗರೂ ಐಲ್ಯಾ೦ಡ್: ಅರ್ಪಿತ ಮೇಗರವಳ್ಳಿ.

ಮೆಲ್ಬೋರ್ನ್‍ನಲ್ಲಿ ಪ್ರತಿವರ್ಷ  ನವೆ೦ಬರ್ ತಿ೦ಗಳ ಮೊದಲ ಮ೦ಗಳವಾರ ’ಮೆಲ್ಬೋರ್ನ್ ಕಪ್ ಡೆ’ ಇರುತ್ತದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಕುದುರೆ ರೇಸ್ ನೆಡೆಯುವ ಈ ದಿನದ೦ದು ಮೆಲ್ಬೋರ್ನ್‍ನಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಸೋಮವಾರ ರಜೆ ತೆಗೆದುಕೊ೦ಡು ನಾಲ್ಕು ದಿನ ದಕ್ಷಿಣ  ಆಸ್ಟ್ರೇಲಿಯಾದ ಕಡೆ ಪ್ರವಾಸ ಹೋಗಿಬರಲು ಯೋಜನೆ ರೂಪಿಸಿದೆವು. ಮೆಲ್ಬೋರ್ನ್‍ನಿ೦ದ ಸುಮಾರು ೭೨೫ ಕಿ.ಮಿ. ದೂರವಿರುವ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ ಆಡಿಲೇಡಿಗೆ ಆರು ಜನ ಕನ್ನಡಿಗರ ತ೦ಡದೊ೦ದಿಗೆ ಡ್ರೈವ್ ಮಾಡಿಕೊ೦ಡು ಹೊರಟೆವು. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಇರುವ ನಾಲ್ಕು ದಿನದಲ್ಲಿ … Read more

ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು: ಷಡಕ್ಷರಿ ತರಬೇನಹಳ್ಳಿ

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ  ಪ್ರಶ್ನೆಗಳಿಗೆ ಉತ್ತರಿಸಿದ್ದಳು. ಅವಳು ನಮ್ಮ ಮನೆಗೆ ಬಂದ ಮೊದಲ ದಿನಗಳ ನೆನಪು ಇನ್ನೂ ಹಸಿರಾಗಿದೆ. ಇವಳ ಅಕ್ಕ ನನ್ನವಳ ತವರೂರಿನಿಂದ ಬಂದ ಶ್ವೇತ ನಮ್ಮ ತೋಟದಲ್ಲಿ ಅಂಡಲೆದು ಹಸಿರುಕ್ಕುವ ಸೊಪ್ಪು … Read more

ಯಾರಪ್ಪನ ಮನೆ ಗಂಟು ಏನ್ ಹೋಗ್ಬೇಕಾಗೈತಿ: ಅಮರ್ ದೀಪ್ ಪಿ.ಎಸ್.

  ಹೈಸ್ಕೂಲ್ ದಿನಗಳಲ್ಲಿ ನಮ್ಮ ಮೇಷ್ಟ್ರು ಒಬ್ಬರಿದ್ದರು. ಬಿಡಿ, ಒಬ್ಬರಲ್ಲ ಬಹಳ ಮಂದಿ ಗುರುಗಳಿದ್ದಾರೆ. ಅವರಲ್ಲಿ ಒಬ್ಬರು ಸಂಕಪ್ಪ ಅಂತಿದ್ದರು. ಈಗ ನಿವೃತ್ತಿಯಾಗಿ ನಮ್ಮೂರಲ್ಲೇ ಇದ್ದಾರೋ ಅವರ ಸ್ವಗ್ರಾಮ ಹಡಗಲಿ ತಾಲೂಕಿನ ಉತ್ತಂಗಿಯಲ್ಲಿದ್ದಾರೋ ಗೊತ್ತಿಲ್ಲ. ಅವರು ನಮ್ಗೆ ಗಣಿತ ವಿಷಯ ತಗಳ್ಳೋರು.  ಆದರೆ ಅವರ ಇಂಗ್ಲೀಷು ಚೆನ್ನಾಗಿತ್ತು.  ಎತ್ತರದ, ಸ್ಥೂಲ ದೇಹವನ್ನು ಹೊತ್ತು ಕ್ಲಾಸ್ ರೂಮಿಗೆ  "ಎ ಸ್ಕ್ವೇರ್ ಪ್ಲಸ್ ಬಿ ಸ್ಕ್ವೇರ್ ಇಸ್ ಇಕ್ವಲ್  ಟು ………. " ಹೇಳುತ್ತಲೇ ಎಂಟ್ರಿ ಕೊಡುತ್ತಿದ್ರು. ಸುಮ್ನೆ ಕುಳಿತೆವೋ … Read more

ಸೀರೆಯ ಪರಿ: ಪದ್ಮಾ ಭಟ್॒

                                 ಅರೆ! ನಾನು ಸೀರೆಯನ್ನು ಉಟ್ಟುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟೆನಾ?  ಹೀಗಂತ ಮೊನ್ನೆ ಕಾಲೇಜಿನಲ್ಲಿ ನಡೆದ ನ್ಯಾಶನಲ್ ಸೆಮಿನರ್ ಗೆ ಎಲ್ಲರೂ ಕಂಪಲ್ಸರಿ ಸೀರೆಯನ್ನು ಉಡಲೇಬೇಕೆಂಬ ವಿಚಾರಕ್ಕೆ ಅನಿಸಿತ್ತು.. ಛೇ ನಾ ಸೀರೆ ಉಡಲ್ಲ ನಂಗೆ ಚನ್ನಾಗಿ ಕಾಣೋಲ್ಲ ಅಂತ ಎಷ್ಟೋ ಬಾರಿ sಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದೇನಾದ್ದರೂ ಫಲ ಕಂಡಿರಲಿಲ್ಲ. ಆದರೂ ಮನಸ್ಸಿನಲ್ಲಿ ಒಂದು ರೀತಿಯ ಸಂಭ್ರಮ ನನಗಂತ … Read more

ಹಳ್ಳಿಮೇಷ್ಟ್ರು: ಪತ್ರೇಶ್. ಹಿರೇಮಠ್

ಹಳ್ಳಿಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೇ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಪ್ರೀತಿಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು.   ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆ ಹೊರಡುವುದು, ಪ್ರಾರ್ಥನೆ,ಪಾಠ, ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು. ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ … Read more

ಐ!!! ಇರುವೆ: ಅಖಿಲೇಶ್ ಚಿಪ್ಪಳಿ

ಎಲ್ಲಾ ಕಾಲದಲ್ಲೂ ಇರುವೆಗಳು ಮನುಷ್ಯನಿಗೆ ಉಪದ್ರವಕಾರಿಗಳೇ ಸೈ ಎಂದು ಸಾಮಾನ್ಯ ತಿಳುವಳಿಕೆ. ಸಂಜೆ ದೇವರ ಮುಂದೆ ಹಚ್ಚಿರುವ ದೀಪದ ಹಣತೆ (ಹಿತ್ತಾಳೆಯದ್ದು) ಬೆಳಿಗ್ಗೆ ನೋಡಿದರೆ ಬಣ್ಣ ಬದಲಾಯಿಸಿ ಕಪ್ಪಾಗಿದೆ, ದೀಪ ನಂದಿಹೋಗಿದೆ. ಹಣತೆಯ ಮೇಲೆ ಅಗಣಿತ ಸಂಖೈಯ ಇರುವೆಗಳು. ಬೆಳಿಗ್ಗೆ ಮತ್ತೆ ದೀಪ ಹಚ್ಚುವ ಮುಂಚೆ ಇರುವೆಗಳನ್ನೆಲ್ಲಾ ದೂರ ಓಡಿಸಬೇಕು. ಹಣತೆಯ ಒಳಗೆ ಎಣ್ಣೆಯಲ್ಲಿ ಬಿದ್ದು ಸತ್ತ ಮತ್ತಷ್ಟು ಅಸಂಖ್ಯ ಇರುವೆಗಳು. ಕೈ-ಕಾಲಿಗೆ ಕಚ್ಚುವ ಜೀವಂತ ಇರುವೆಗಳು ಇಷ್ಟಕ್ಕೇ ಮುಗಿಯಲಿಲ್ಲ, ಅಕ್ಕಿ ಡಬ್ಬದ ಬಾಯಿ ತೆಗೆದರೆ ಅಕ್ಕಿಯಲ್ಲೂ … Read more

ಮನೆಯೆ ಮೊದಲ ಪಾಠಶಾಲೆ: ಸುಮನ್ ದೇಸಾಯಿ

ಮೊನ್ನೆ ಗದಗ ಜಿಲ್ಲೆಯ ೬ನೇ ಸಾಹಿತ್ಯ ಸಮ್ಮೆಳನಕ್ಕ ಹೋಗಿದ್ದೆ. ಅಲ್ಲೆ ಮಕ್ಕಳ ಕಾವ್ಯವಿಹಾರ ಅನ್ನೊ ಒಂದು ಮಕ್ಕಳ ಕವಿಗೊಷ್ಠಿ ಎರ್ಪಡಿಸಿದ್ರು. ಮಕ್ಕಳು ಏನ ಕವಿತೆ ಬರಿಬಹುದು ಅಂತ ಕೂತುಹಲದಿಂದ ನೋಡ್ಲಿಕತ್ತಿದ್ದೆ. ವೇದಿಕೆ ಮ್ಯಾಲೆ ಒಂದ ಹತ್ತು ಮಕ್ಕಳಿದ್ರು. ಕವಿಗೊಷ್ಠಿ ಶುರುವಾದ ಮ್ಯಾಲೆ ಅ ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯ ಅನಿಸ್ತು. ಒಬ್ಬರಕಿಂತಾ ಒಬ್ಬರು ಸುಂದರವಾದ ಕವನಗಳನ್ನ ರಚಿಸಿದ್ರು. ಆ ಕವನಗಳಳೊಗ ಬೆರಗು, ಸೊಗಸು, ಮತ್ತ ಪ್ರಸ್ತುತ ಸಮಾಜದಲ್ಲಿಯ ಸಮಸ್ಯೆಗಳ ನೆರಳಿತ್ತು. ಮಕ್ಕಳ ಈ ಸೂಷ್ಮ ಗ್ರಹಣ ಶಕ್ತಿ … Read more

ಹೆಸರಿಡದ ಕಥೆಯೊಂದು (ಭಾಗ 2): ಪ್ರಶಸ್ತಿ ಪಿ.

ಇಲ್ಲಿಯವರೆಗೆ ಕೈಯಲ್ಲಿದ್ದ ಕರಗಿದ ಐಸ್ ಕ್ಯಾಂಡಿ ಪಟ್ಟಣಕ್ಕೆ ಬಂದು ಕಳೆದೇ ಹೋಗುತ್ತಿರುವ ಕಾಲದ ಬಗ್ಗೆ, ಇನ್ನೂ ದೊರಕದ ಭದ್ರ ಕೆಲಸದ ನೆನಪ ಹೊತ್ತು ತಂತು. ಬಂದೊಂದು ತಿಂಗಳಿನಲ್ಲೇ ಒಂದು ದಿನವೂ ಬಿಡದೆ ಇಂಟರ್ವ್ಯೂಗಳಿಗೆಂದು ಅಲೆದಿದ್ದರೆ ಏನಾದ್ರೂ ಕೆಲಸ ದಕ್ಕುತ್ತಿತ್ತೇನೋ. ಆದ್ರೆ ದಿನಾ ಅಲೆಯಲು ದುಡ್ಡೆಲ್ಲಿ ? ಕೆಲಸ ಹುಡುಕ್ತಿದಾನೆ ಬೇಕಾಗತ್ತೆ ಅಂತ ಅಪ್ಪ ತಿಳಿದು ಕೊಟ್ಟರೆ ತಾನೆ ಇವನಿಗೆ ದುಡ್ಡು ? ಸ್ನೇಹಿತರತ್ರ ಎಷ್ಟಂತ ಕೇಳೋದು ? ಕಂಡರೆ ಸಾಲ ಕೇಳ್ಬೋದು ಅಂತ ಇವನ ಕಾಲೇಜು ಗೆಳೆಯರೆಲ್ಲಾ … Read more

ಸಾಮಾನ್ಯ ಜ್ಞಾನ (ವಾರ 20): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ೦೩.೦೨.೨೦೧೩ರಂದು ಬಿಡುಗಡೆಯಾದ ಖುಷ್ವಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು? ೨.    ವಾರಣಾಸಿ ಯಾವ ನದಿ ದಡದ ಮೇಲಿದೆ? ೩.    ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? ೪.    ಟೆನ್ನಿಸ್‌ನಲ್ಲಿ ಗ್ರಾಂಡ್ ಸ್ಲ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? ೫.    ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? ೬.    ೭೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? ೭.    ೨೦೧೨ ಡಿಸೆಂಬರ್ … Read more

ಓಯಸಿಸ್: ನಿನಾದ (ಭಾಗ 4)

ಇಲ್ಲಿಯವರೆಗೆ ಇತ್ತ ಟೀಂ ಲೀಡರ್ ಹಂಜ್ಹಾ.. ನಿಗೆ ಮೈ ಪರಚಿ ಕೊಳ್ಳುವಂತೆ ಆಯಿತು. ಒಂದು ದಿನ ಸಮಯ ನೋಡಿ ಹೇಳಿ ಬಿಟ್ಟೆ. ನೋಡು ನಾನು  ಎಲ್ಲಿಯೂ ಸಲ್ಲುವೆ. ಹೀಗಾಗಿ ಮಾತ್ರ ನನ್ನ ಇಲ್ಲಿ ವಾಪಸು ಕರೆದರು. ನಿನಗೆ ನೀನ್ ಹೇಳಿದ್ದು  ನೆನಪಿದೆಯ??? ನೀ ಮಾತ್ರ ಇಲ್ಲೇ ಇರು… ಅಂದಾಗ ಅವನ ಮುಖ ನೋಡಬೇಕಿತ್ತು. ಆಗ ನಿನಾದ ೪ ವರ್ಷದ ಕೆಳಗಿನ ಒಂದು ದಿನದ ಕಹಿ ಘಟನೆ ಹೇಳಿದಳು. ಒಂದು ದಿನ ಶುಕ್ರವಾರ, ಮದ್ಯನ್ನ ಸರಿ ಸುಮಾರು ೨ … Read more

ಹರಟೆ ಕಟ್ಟೆಯ ಪದ್ಮಜಾ: ನಾಗರತ್ನಾ ಗೋವಿಂದನ್ನವರ

ಸುಮಾ : ಏನ್ರಿ ಆಶಾ ಇಷ್ಟೊತ್ತಾಯಿತು ಇನ್ನು ಪದ್ಮಜಾರ ಸುದ್ದಿನೇ ಇಲ್ಲಾ.   ಆಶಾ : ಹೌದು ಯಾಕೊ ಏನೋ ಇಷ್ಟೊತ್ತಾಯಿತು ಇನ್ನು ಬಂದಿಲ್ಲ ಅವರಿಲ್ಲ ಅಂದ್ರ ನಮ್ಮ ಹರಟೆ ಕಟ್ಟೆಗೆ ಕಳಾನ ಇರುದುಲ್ಲ ನೋಡ್ರಿ. ಸುಮಾ : ನೀವು ಹೇಳುವುದು ಖರೇ ಅದ ಏನರ ಹೊಸ ಸುದ್ದಿ ಚರ್ಚಾ ಮಾಡಾಕ ಸಿಗ್ತದ ಅಂದ್ರ ಅದು ಅವರಿಂದಾನ ಸಿಗೋದು ಅದಕ ಮತ್ತ ನಾವೆಲ್ಲ ಅವರನ್ನ ಹರಟೆ ಕಟ್ಟೆ ಪದ್ಮಜಾ ಅಂತ ಕರೆಯುದು…. ಹಾ ಹಾ ಹಾ!  ಅಲ್ಲಿ … Read more

ಪಂಜು ಚುಟುಕ ಸ್ಪರ್ಧೆ ಫಲಿತಾಂಶ

  ಪಂಜು ಚುಟುಕ ಸ್ಪರ್ಧೆಯ 2013 ಫಲಿತಾಂಶ….   ಮೊದಲ ಬಹುಮಾನ:  ಸುಷ್ಮಾ ಮೂಡುಬಿದರೆ ಎರಡನೇ ಬಹುಮಾನ:  ಮಂಜುನಾಥ್ ಪಿ. ಮೂರನೇ ಬಹುಮಾನ:  ಕೃಷ್ಣಮೂರ್ತಿ ಎನ್.   ಸಮಾಧಾನಕರ ಬಹುಮಾನಗಳು: ಶರತ್ ಚಕ್ರವರ್ತಿ, ಈಶ್ವರ ಕಿರಣ ಭಟ್, ಮಾಲಿನಿ ವಿ. ಭಟ್ಟ, ರಾಘವೇಂದ್ರ ಭಟ್ಟ, ಡಂಕಿನ್ ಝಳಕಿ..   ಒಟ್ಟು 42 ಜನ ಕವಿಗಳು ನಾಡಿನ ಮೂಲೆಮೂಲೆಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.    ಖ್ಯಾತ ಕವಿಗಳಾದ ಪ್ರೊ. ಎಲ್.ಎನ್. ಮುಕುಂದರಾಜ್ ಈ ಚುಟುಕ ಸ್ಪರ್ಧೆಯ ತೀರ್ಪುಗಾರರಾಗಿದ್ದರು.   ಬಹುಮಾನಿತ … Read more

ಪುಸ್ತಕ ಬಿಡುಗಡೆ ಸಮಾರಂಭ

  ಪುಸ್ತಕ ಬಿಡುಗಡೆ 'ಪಂಜು ಅಂತರ್ಜಾಲ ಪತ್ರಿಕೆ' ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ ಈಶಾನ್ಯ ಭಾರತೀಯ ನೃತ್ಯಗಳ ಕಿರುಚಿತ್ರ ಪ್ರದರ್ಶನ     ಡಾ. ಎಸ್.ಎಂ.ನಟರಾಜು ಅವರ 'ವಂಡರ್ ಲ್ಯಾಂಡಿನ ಪುಟ್ಟ ರಾಜಕುಮಾರನೂ… ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ…' ಹಾಗೂ 'ಎಲೆಮರೆಕಾಯಿ' ಕೃತಿಗಳ ಬಿಡುಗಡೆ ಗೋಪಾಲ ವಾಜಪೇಯಿ ಅವರಿಂದ 'ಪಂಜು' ಅಂತರ್ಜಾಲ ತಾಣ ಬಿಡುಗಡೆ: ಡಾ. ಬಾನಂದೂರು ಕೆಂಪಯ್ಯ, ಗಾಯಕರು, ಅಧ್ಯಕ್ಷರು, ಜಾನಪದ ಅಕಾಡೆಮಿ ಚುಟುಕ ಸ್ಪರ್ಧೆಯ ಬಹುಮಾನ ವಿತರಣೆ:  ಜರಗನಹಳ್ಳಿ ಶಿವಶಂಕರ್, ಕವಿಗಳು ಅಧ್ಯಕ್ಷತೆ: … Read more

ಕೋಡುವಳ್ಳಿಯ ಕರೆ:ಪಾರ್ಥಸಾರಥಿ ಎನ್

  ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೇ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ ಬಸ್ಸಿಗೆ ಕಾಯುತ್ತಿದ್ದರು. ಎಲ್ಲರದ್ದೂ ಹೆಚ್ಚು-ಕಡಿಮೆ ಒಂದೇ ವಯಸ್ಸು. ಹತ್ತೊಂಬತ್ತು ಇಪ್ಪತ್ತರ ಉತ್ಸಾಹದ ಚಿಲುಮೆಗಳು. ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋನಲ್ಲಿ ಇಂಜಿನೀಯರಿಂಗ್ ಕಾಲೇಜಿನ ಐ.ಎಸ್ ವಿಭಾಗದ ಮೂರನೆ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ಎಲ್ಲರೂ, ರಜೆ ಇರುವ ಕಾರಣ ಒಂದು ವಾರ ಸಮಯ ಕಳೆಯಲು ಪ್ರಕೃತಿಯ ಮಡಿಲು ಚಿಕ್ಕಮಗಳೂರಿಗೆ ಹೊರಟಿರುವರು.   … Read more

ಚೇತನ: ದಿವ್ಯ ಆಂಜನಪ್ಪ

"ಜಗತ್ಚೇತನದೆದುರು, ನಾನು ನನ್ನದು ಎಂಬ ಅಹಂ ಭಾವಕ್ಕಿಂತ, ನೀನು ನಿನ್ನದು ನಿನ್ನದೇ ಎಂಬ ಸಮರ್ಪಣಾ ಮನೋಭಾವ ಮಿಗಿಲು. ಸಕಲ ಜೀವ-ಸಂಕುಲಗಳನ್ನು ನಿಯಮಬದ್ದವಾಗಿ, ನಿಖರವಾಗಿ, ಆಯಾಯ ಪಾತ್ರಗಳನ್ನು ಸಮರ್ಪಕವಾಗಿ ನಿರ್ವವಹಿಸುವಂತೆ ಮಾಡುವ ವ್ಯವಸ್ಥಾಪಕ-ಕಾಣದ ಕೈಯೊಂದು ಇರಲೇಬೇಕು" ಎಂದು ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲರ ಮನಸ್ಸಿಗೆ ಅನ್ನಿಸಿರುತ್ತದೆ. ಆ ಕಾಣದ ಕೈ ಕೆಲವೊಮ್ಮೆ ವರಕೊಡುವ ಕೈಯಾಗಿಯೂ, ಬುದ್ಧಿ ಕಲಿಸುವ ಕೈಯಾಗಿಯೂ, ದಾರಿ ತೋರುವ ಕೈಯಾಗಿಯೂ ನಮ್ಮ ಅನುಭವಕ್ಕೆ ಬಂದಿರುವುದು. ಜೀವಸಂಕುಲದಲ್ಲಿನ ಬುದ್ಧಿ ಜೀವಿ ಮಾನವಕುಲವೊಂದು ತನ್ನ ಉಪಕುಲಗಳು-ಧರ್ಮಗಳ ನೆಲೆಗಳಲ್ಲಿ ಆ ಕೈಯನ್ನು 'ದೇವ'ನೆಂದು:ಕೃಷ್ಣ, ಏಸು, ಬುದ್ಧ, ಜಿನ, ಅಲ್ಲಾ ಎಂದು ಅವರವರಂತೆ ಕರೆದಿರುವುದುಂಟು. … Read more

ಇಳಿ ಸಂಜೆಯ ಮೌನ… ಮಂಜುಗಣ್ಣಿನ ಮಾತು:ಶ್ರೀವತ್ಸ ಕಂಚೀಮನೆ

  ಏಳು ದಶಕಗಳ ಹಣ್ ಹಣ್ಣು ಬದುಕು…ಹೆಸರು ಆನಂದರಾವ್… ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ… ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ "ಎಷ್ಟುಕಾಲ ಬದುಕಿದ್ದೊಡೇನು – ಜೀವಿಸಲಾಗದಿದ್ದೊಡೆ ನನ್ನಂತೆ ನಾನು…" ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ…ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ… ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ…ಸೊಗಸಾದದ್ದು, ಆಹ್ಲಾದವನೀಯುವಂಥದ್ದು…ಪುಟ್ಟ ಪುಟ್ಟದು…ಆಸ್ವಾದಿಸಿದರೆ … Read more

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ: ರುಕ್ಮಿಣಿ ಎನ್.

ಹುಟ್ಟಿದಾಗಿನಿಂದ ಇವತ್ತಿನವರ್ಗು ನಾ ಮದ್ವಿ ಮುಂಜಿ, ಜಾತ್ರೀ ಅಂತ್ ಹೇಳಿ ಊರೂರ್ ತಿರಿಗಿದ್ ಭಾಳ ಕಡಿಮಿ ರೀ. ಮದ್ವಿಅಂದ್ರ್ ಸಿನಿಮಾದಾಗ್ ನೋಡು ಸೀನ್ ಅಷ್ಟ್ ಗೊತ್ತಿತ್ರ್ ನಂಗ್. ಅದರೀ.. ಹುಡುಗನ ಕಡೆಯಿಂದ ಅವನ್ ಗೆಳ್ಯಾರು, ಹುಡುಗಿ ಕಡೆಯಿಂದ ಅಕಿ ಗೆಳತ್ಯಾರು, ಮದ್ವಿ ಒಂದ್ ವಾರ್ ಇರುತ್ಲೇನ್ ಬರಾತಾರು. ಏನೇನರ ಕೆಂತಿ ಮಾಡ್ತಾರು, ಯಾರಗೋ ಯಾರದೋ ಮ್ಯಾಲ್ ಲವ್ವ್ ಅಕ್ಕೈತಿ… ಮದ್ವಿ ದಿನ, ಊಟ ಮದಲ್ ಇರ್ತೈತಿ. ಆಮ್ಯಾಕ್ ಅಕ್ಕಿಕಾಳ್ ಒಗಿತಾರು. ಮದ್ವಿ ಆತ್ ಆತ್ ಅನುಗುಡ್ದ, ಹುಡುಗಿ … Read more

ನನ್ನ ಪುಟ್ಟ ಕನಸು:ವೀರ್ ಸಂತೋಷ್

  ನನ್ನ ಪುಟ್ಟ ಕನಸಿನ ಹೆಸರು, “ಪೂರ್ವಿ”. ಅವಳು ನನ್ನ ಜೀವನಕ್ಕೆ ಬಂದು ಇವತ್ತಿಗೆ ಸರಿಯಾಗಿ ಒಂದು  ವರ್ಷವಾಯ್ತು. ಒಂದು ವರ್ಷದ ಹಿಂದೆ ಇದ್ದ ಸಂತೋಷ ಇವತ್ತಿಗೂ ಹಾಗೇ ಇದೆ. ದಿನದಿಂದ ದಿನಕ್ಕೆ ಅವಳ ಮೇಲಿನ ಪ್ರೀತಿ ಜಾಸ್ತಿಯಾಗ್ತಾ ಇದೆ. ಅವಳನ್ನು ನೋಡಿದ ಮೊದಲನೇ ದಿನ ಇನ್ನೂ ನನ್ನ ಕಣ್ಣಲ್ಲಿ ಹಸಿರಾಗಿದೆ. ಅವಳನ್ನು ನೋಡಿದ ಮರುಕ್ಷಣವೇ ನನ್ನ ಜೀವನ ಪರಿಪೂರ್ಣವಾಯಿತು. ಅವಳ ನೋಟದ ಶಕ್ತಿಯೇ ಅಂತಹದ್ದು.  ಅವಳ ಪುಟ್ಟ ಕೈ ಬೆರಳುಗಳು ನನ್ನ ಕನಸಿನ ಲೋಕವನ್ನು ಚಿತ್ರಿಸಲು … Read more

ಮೂವರ ಕವನಗಳು:ಈಶ್ವರ ಭಟ್,ಎಂ.ಎಸ್.ಕೃಷ್ಣಮೂರ್ತಿ,ಅಶೋಕ್ ಕುಮಾರ್ ವಳದೂರು

  ಆವರ್ತಿತ ಮಂಜುಹನಿಗಳು ಹೀಗೆ ಆವಿಯಾಗುವ ಮೊದಲು ಕಿರಣಗಳು ಹೊಳಪಿಸಿದ ಬಣ್ಣಗಳನು ನೋಡಿ ನಾ ಮರುಗುವೆನು ಬಣ್ಣ ಶಾಶ್ವತವೇನು? ಇಂತ ಸ್ಥಿತ್ಯಂತರಕೆ ಸಾಕ್ಷಿ ನಾನು.  ಇದು ಕೆಂಪು ನಾಲಗೆಯು ಹೊರಳಿ ಕೇಸರಿಯಾಗಿ ಮೂಡಿ ಕಾಮನಬಿಲ್ಲು ಹನಿಗಳೊಳಗೆ ಮತ್ತೇನನೋ ತಂದು ತನ್ನ ವ್ಯಾಪ್ತಿಯ ಪರಿಧಿ ಮೀರಿ ಸಾಗುವ ಮನಕೆ ಎಷ್ಟು ಘಳಿಗೆ? ಸತ್ಯಕ್ಕೆ ಬಿಳಿಮುಖವೆ? ರವಿಯಕಿರಣವು ನೆಪವೆ? ಆರಿಹೋಗುವುದೇನು ಖಚಿತ ಸಾವೆ? ಮಂಜು ಹುಟ್ಟುವುದೆಂತು ಹನಿಯ ಹಡೆಯುವುದೆಂತು ರಾತ್ರಿ ಬೆಳಗಿನ ವರೆಗೆ ಸುಖದ ನಾವೆ ನಾಳೆ ನಾ ಕಾಯುವೆನು … Read more

ನನ್ನ ಜೀವನವನ್ನು ಬದಲಿಸಿದ ಆ ಚಿತ್ರ:ವಾಸುಕಿ ರಾಘವನ್

  ಬಹುಶಃ 1998ರ ಆಗಸ್ಟ್ ಇರಬೇಕು. ಸೆಮಿಸ್ಟರ್ ಕೊನೆಯ ದಿನ ಕಾಲೇಜಿನಿಂದ ಹಾಲ್ ಟಿಕೆಟ್ ಇಸ್ಕೊಂಡು ಬರಕ್ಕೆ ಹೋಗಿದ್ದೆ. ವಾಪಸ್ಸು ಮನೆಗೆ ಬಾರೋವಾಗ ನನಗೇ ಗೊತ್ತಿಲ್ಲದಂತೆ ವುಡ್-ಲ್ಯಾಂಡ್ಸ್ ಥೀಯೇಟರ್ ಕಡೆಗೆ ನನ್ನ ಗಾಡಿ ತಿರುಗಿಸಿದ್ದೆ. ಆ ಚಿತ್ರದ ಬಗ್ಗೆ ಒಳ್ಳೆ ವಿಮರ್ಶೆ ಓದಿದ್ದೆನಾ ಅಥವಾ ಪರೀಕ್ಷೆ ಶುರು ಆಗೋದರ ಒಳಗೆ ಒಂದು ಸಿನಿಮಾ ನೋಡಿಬಿಡಬೇಕು ಅನ್ನೋ ಚಡಪಡಿಕೆ ಇತ್ತಾ ನೆನಪಿಗೆ ಬರ್ತಾ ಇಲ್ಲ. ನನಗೆ ಆಗ ಆ ಚಿತ್ರದ ನಿರ್ದೇಶಕನಾಗಲೀ, ನಟರಾಗಲೀ ಯಾರೂ ಗೊತ್ತಿರಲಿಲ್ಲ. ಆದರೆ ಚಿತ್ರಮಂದಿರದಲ್ಲಿ … Read more

ಭ್ರಮೆ:ಪ್ರವೀಣ್ ಕೆ

  ಗುರು ಕಾಡು ದಾಟಿ ಹೊಳೆಯ ದಂಡೆಗೆ ಬಂದು ಹಸಿಮಣ್ಣು ಕಂಡರೂ ಅದರ ಮೇಲೆ ಕುಳಿತುಕೊಂಡ.  ಕಾಡಿನ ಗವ್ವೆನ್ನುವ ಧ್ವನಿ, ನದಿಯ ಜುಳುಜುಳು ನಾದ, ಹಕ್ಕಿಗಳ ಕಲರವ ಯಾವುದೂ ಅವನ ಕಿವಿ ಸೇರುತ್ತಿರಲಿಲ್ಲ.  ತಾನು ಇಷ್ಟು ದಿನ ನಂಬಿಕೊಂಡು ಬಂದಿದ್ದ ಬದುಕು ಹೀಗೆ ತನ್ನನ್ನೇ ತಿನ್ನುವ ರಾಕ್ಷಸವಾಗುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ.   ನದಿ ತನ್ನ ಪಾಡಿಗೆ ತಾನು ಹರಿಯುತ್ತಿತ್ತು.  ಅದರ ಗುರಿ ಸಮುದ್ರ ಸೇರುವುದು ಎಂದು ಯಾರೋ ಹೇಳಿದ್ದನ್ನು ಕೇಳಿ ಗಹಗಹಿಸಿ ನಕ್ಕಿದ್ದ.  ಅದಕ್ಕೇನ್ ತಲಿ … Read more